caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Muddaththir المدثر

56 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 4

بِسْمِ ٱللَّهِ ٱلرَّحْمَٰنِ ٱلرَّحِيمِ يَٰٓأَيُّهَا ٱلْمُدَّثِّرُ

Kannada Translation - Hamza Buturಓ ಹೊದಿಕೆಯನ್ನು ಹೊದ್ದುಕೊಂಡವರೇ![1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُمْ فَأَنذِرْ

Kannada Translation - Hamza Buturಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَرَبَّكَ فَكَبِّرْ

Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَثِيَابَكَ فَطَهِّرْ

Kannada Translation - Hamza Buturನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلرُّجْزَ فَٱهْجُرْ

Kannada Translation - Hamza Buturಅಶುದ್ಧವನ್ನು ವರ್ಜಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا تَمْنُن تَسْتَكْثِرُ

Kannada Translation - Hamza Buturಉಪಕಾರ ಮಾಡಿ ಹೆಚ್ಚು ಗಳಿಸುವ ವ್ಯಾಮೋಹ ಬಿಟ್ಟುಬಿಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلِرَبِّكَ فَٱصْبِرْ

Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗದಲ್ಲಿ ತಾಳ್ಮೆಯಿಂದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا نُقِرَ فِى ٱلنَّاقُورِ

Kannada Translation - Hamza Buturಕಹಳೆಯಲ್ಲಿ ಊದಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَٰلِكَ يَوْمَئِذٍ يَوْمٌ عَسِيرٌ

Kannada Translation - Hamza Buturಆ ದಿನವು ಅತ್ಯಂತ ಕಠಿಣ ದಿನವಾಗಿರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَى ٱلْكَٰفِرِينَ غَيْرُ يَسِيرٍ

Kannada Translation - Hamza Buturಅದು ಸತ್ಯನಿಷೇಧಿಗಳಿಗೆ ಸುಗಮವಾಗಿರುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَرْنِى وَمَنْ خَلَقْتُ وَحِيدًا

Kannada Translation - Hamza Buturನನ್ನನ್ನು ಹಾಗೂ ನಾನು ಏಕಾಂಗಿಯಾಗಿ ಸೃಷ್ಟಿದವನನ್ನು ಬಿಟ್ಟುಬಿಡಿ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْتُ لَهُۥ مَالًا مَّمْدُودًا

Kannada Translation - Hamza Buturನಾನು ಅವನಿಗೆ ಹೇರಳ ಐಶ್ವರ್ಯವನ್ನು ನೀಡಿದೆನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَبَنِينَ شُهُودًا

Kannada Translation - Hamza Buturಸನ್ನದ್ಧರಾಗಿರುವ ಗಂಡು ಮಕ್ಕಳನ್ನು ನೀಡಿದೆನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَهَّدتُّ لَهُۥ تَمْهِيدًا

Kannada Translation - Hamza Buturನಾನು ಅವನಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟೆನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ يَطْمَعُ أَنْ أَزِيدَ

Kannada Translation - Hamza Buturಆದರೂ ನಾನು ಅವನಿಗೆ ಇನ್ನೂ ಹೆಚ್ಚು ನೀಡಬೇಕೆಂದು ಅವನು ಹಾತೊರೆಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّهُۥ كَانَ لِـَٔايَٰتِنَا عَنِيدًا

Kannada Translation - Hamza Buturಖಂಡಿತ ಇಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَأُرْهِقُهُۥ صَعُودًا

Kannada Translation - Hamza Buturಸದ್ಯವೇ ನಾನು ಅವನನ್ನು ಒಂದು ಪ್ರಯಾಸಕರ ಏರುವಿಕೆಯನ್ನು ಏರುವಂತೆ ಮಾಡುವೆನು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُۥ فَكَّرَ وَقَدَّرَ

Kannada Translation - Hamza Buturಅವನು ಯೋಚಿಸಿದನು ಮತ್ತು ನಿರ್ಣಯಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقُتِلَ كَيْفَ قَدَّرَ

Kannada Translation - Hamza Buturಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ قُتِلَ كَيْفَ قَدَّرَ

Kannada Translation - Hamza Buturಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ نَظَرَ

Kannada Translation - Hamza Buturನಂತರ ಅವನು ನೋಡಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ عَبَسَ وَبَسَرَ

Kannada Translation - Hamza Buturನಂತರ ಅವನು ಹುಬ್ಬುಗಂಟಿಕ್ಕಿದನು ಮತ್ತು ಮುಖವನ್ನು ಸಿಂಡರಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَدْبَرَ وَٱسْتَكْبَرَ

Kannada Translation - Hamza Buturನಂತರ ಅವನು ಹಿಂದಡಿಯಿಟ್ಟನು ಮತ್ತು ಅಹಂಕಾರ ತೋರಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَالَ إِنْ هَٰذَآ إِلَّا سِحْرٌ يُؤْثَرُ

Kannada Translation - Hamza Buturನಂತರ ಅವನು ಹೇಳಿದನು: “ಇದು (ಕುರ್‌ಆನ್) ನಕಲು ಮಾಡಲಾದ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنْ هَٰذَآ إِلَّا قَوْلُ ٱلْبَشَرِ

Kannada Translation - Hamza Buturಇದು ಕೇವಲ ಒಬ್ಬ ಮನುಷ್ಯನ ಮಾತಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَأُصْلِيهِ سَقَرَ

Kannada Translation - Hamza Buturನಾನು ಸದ್ಯವೇ ಅವನನ್ನು ಸಖರ್‌ಗೆ (ನರಕಕ್ಕೆ) ಹಾಕುವೆನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَدْرَىٰكَ مَا سَقَرُ

Kannada Translation - Hamza Buturಸಖರ್ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا تُبْقِى وَلَا تَذَرُ

Kannada Translation - Hamza Buturಅದು ಏನನ್ನೂ ಉಳಿಸುವುದಿಲ್ಲ ಮತ್ತು ಬಿಟ್ಟುಬಿಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَوَّاحَةٌ لِّلْبَشَرِ

Kannada Translation - Hamza Buturಅದು ಚರ್ಮವನ್ನು ಸುಟ್ಟು ಕರಕಲಾಗಿಸುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَيْهَا تِسْعَةَ عَشَرَ

Kannada Translation - Hamza Buturಅದರ ಮೇಲೆ ಹತ್ತೊಂಬತ್ತು (ದೇವದೂತರುಗಳು) ಇದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا جَعَلْنَآ أَصْحَٰبَ ٱلنَّارِ إِلَّا مَلَٰٓئِكَةً وَمَا جَعَلْنَا عِدَّتَهُمْ إِلَّا فِتْنَةً لِّلَّذِينَ كَفَرُوا۟ لِيَسْتَيْقِنَ ٱلَّذِينَ أُوتُوا۟ ٱلْكِتَٰبَ وَيَزْدَادَ ٱلَّذِينَ ءَامَنُوٓا۟ إِيمَٰنًا وَلَا يَرْتَابَ ٱلَّذِينَ أُوتُوا۟ ٱلْكِتَٰبَ وَٱلْمُؤْمِنُونَ وَلِيَقُولَ ٱلَّذِينَ فِى قُلُوبِهِم مَّرَضٌ وَٱلْكَٰفِرُونَ مَاذَآ أَرَادَ ٱللَّهُ بِهَٰذَا مَثَلًا كَذَٰلِكَ يُضِلُّ ٱللَّهُ مَن يَشَآءُ وَيَهْدِى مَن يَشَآءُ وَمَا يَعْلَمُ جُنُودَ رَبِّكَ إِلَّا هُوَ وَمَا هِىَ إِلَّا ذِكْرَىٰ لِلْبَشَرِ

Kannada Translation - Hamza Buturನಾವು ನರಕದ ಕಾವಲುಗಾರರಾಗಿ ಕೇವಲ ದೇವದೂತರುಗಳನ್ನು ಮಾತ್ರ ನಿಶ್ಚಯಿಸಿದ್ದೇವೆ. ನಾವು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳಿಗೆ ಒಂದು ಪರೀಕ್ಷೆಯಾಗಿ ಮಾಡಿದ್ದೇವೆ.[1] ಇದೇಕೆಂದರೆ, ಗ್ರಂಥ ನೀಡಲಾದವರಿಗೆ ದೃಢವಿಶ್ವಾಸ ಉಂಟಾಗಲೆಂದು[2] ಮತ್ತು ಸತ್ಯವಿಶ್ವಾಸಿಗಳ ವಿಶ್ವಾಸವು ಇನ್ನಷ್ಟು ಹೆಚ್ಚಾಗಲೆಂದು. ಅದೇ ರೀತಿ ಗ್ರಂಥ ನೀಡಲಾದವರು ಹಾಗೂ ಸತ್ಯವಿಶ್ವಾಸಿಗಳು ಸಂಶಯ ಪಡದಿರಲೆಂದು ಮತ್ತು ಹೃದಯದಲ್ಲಿ ರೋಗವಿರುವವರು ಹಾಗೂ ಸತ್ಯನಿಷೇಧಿಗಳು, “ಈ ವಿವರಣೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಎಂದು ಕೇಳಲೆಂದು. ಈ ರೀತಿ ಅಲ್ಲಾಹು ಅವನು ಇಚ್ಛಿಸಿದವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸಿದವರಿಗೆ ಸನ್ಮಾರ್ಗ ತೋರಿಸುತ್ತಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸೈನ್ಯವನ್ನು ಅವನ ಹೊರತು ಯಾರೂ ತಿಳಿದಿಲ್ಲ. ಅದು (ನರಕ) ಮನುಷ್ಯರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا وَٱلْقَمَرِ

Kannada Translation - Hamza Buturಇಲ್ಲ; ಚಂದ್ರನ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّيْلِ إِذْ أَدْبَرَ

Kannada Translation - Hamza Buturರಾತ್ರಿಯ ಮೇಲಾಣೆ! ಅದು ಹಿಂದಕ್ಕೆ ಸರಿಯುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلصُّبْحِ إِذَآ أَسْفَرَ

Kannada Translation - Hamza Buturಬೆಳಗ್ಗಿನ ಮೇಲಾಣೆ! ಅದು ಬೆಳಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهَا لَإِحْدَى ٱلْكُبَرِ

Kannada Translation - Hamza Buturನಿಶ್ಚಯವಾಗಿಯೂ ಅದು (ನರಕ) ಮಹಾ ವಿಷಯಗಳಲ್ಲಿ ಒಂದಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نَذِيرًا لِّلْبَشَرِ

Kannada Translation - Hamza Buturಮನುಷ್ಯರಿಗೆ ಒಂದು ಮುನ್ನೆಚ್ಚರಿಕೆಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِمَن شَآءَ مِنكُمْ أَن يَتَقَدَّمَ أَوْ يَتَأَخَّرَ

Kannada Translation - Hamza Buturಅಂದರೆ ನಿಮ್ಮಲ್ಲಿ ಮುಂದಕ್ಕೆ ಬರಲು ಅಥವಾ ಹಿಂದೆಯೇ ಉಳಿಯಲು ಇಚ್ಛಿಸುವವರಿಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كُلُّ نَفْسٍۭ بِمَا كَسَبَتْ رَهِينَةٌ

Kannada Translation - Hamza Buturಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳಿಗೆ ಅಡಮಾನವಾಗಿದ್ದಾನೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّآ أَصْحَٰبَ ٱلْيَمِينِ

Kannada Translation - Hamza Buturಬಲಭಾಗದ ಜನರ ಹೊರತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِى جَنَّٰتٍ يَتَسَآءَلُونَ

Kannada Translation - Hamza Buturಅವರು ಸ್ವರ್ಗೋದ್ಯಾನಗಳಲ್ಲಿ (ಕುಳಿತು) ಪರಸ್ಪರ ವಿಚಾರಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَنِ ٱلْمُجْرِمِينَ

Kannada Translation - Hamza Buturಅಪರಾಧಿಗಳ ಕುರಿತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا سَلَكَكُمْ فِى سَقَرَ

Kannada Translation - Hamza Buturನಿಮ್ಮನ್ನು ನರಕದಲ್ಲಿ ಬೀಳಿಸಿದ್ದೇನು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ لَمْ نَكُ مِنَ ٱلْمُصَلِّينَ

Kannada Translation - Hamza Buturಅವರು ಹೇಳುವರು: “ನಾವು ನಮಾಝ್ ಮಾಡುವವರಾಗಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَمْ نَكُ نُطْعِمُ ٱلْمِسْكِينَ

Kannada Translation - Hamza Buturನಾವು ಬಡವರಿಗೆ ಆಹಾರ ನೀಡುತ್ತಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكُنَّا نَخُوضُ مَعَ ٱلْخَآئِضِينَ

Kannada Translation - Hamza Buturನಾವು ಅನಗತ್ಯ ಮಾತುಕತೆ ನಡೆಸುವವರ (ಸತ್ಯನಿಷೇಧಿಗಳ) ಜೊತೆಗೆ ಅನಗತ್ಯ ಮಾತುಗಳಲ್ಲಿ ತಲ್ಲೀನರಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكُنَّا نُكَذِّبُ بِيَوْمِ ٱلدِّينِ

Kannada Translation - Hamza Buturನಾವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ أَتَىٰنَا ٱلْيَقِينُ

Kannada Translation - Hamza Buturಎಲ್ಲಿಯವರೆಗೆಂದರೆ ನಮಗೆ ಸಾವು ಬರುವ ತನಕ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَا تَنفَعُهُمْ شَفَٰعَةُ ٱلشَّٰفِعِينَ

Kannada Translation - Hamza Buturಅವರಿಗೆ ಶಿಫಾರಸುಗಾರರ ಶಿಫಾರಸು ಪ್ರಯೋಜನಪಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَا لَهُمْ عَنِ ٱلتَّذْكِرَةِ مُعْرِضِينَ

Kannada Translation - Hamza Buturಅವರಿಗೇನಾಗಿದೆ? ಅವರೇಕೆ ಉಪದೇಶದಿಂದ ವಿಮುಖರಾಗುತ್ತಿದ್ದಾರೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَأَنَّهُمْ حُمُرٌ مُّسْتَنفِرَةٌ

Kannada Translation - Hamza Buturಅವರು ಗಾಬರಿಗೊಂಡ ಕತ್ತೆಗಳೋ ಎಂಬಂತೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَرَّتْ مِن قَسْوَرَةٍۭ

Kannada Translation - Hamza Buturಸಿಂಹವನ್ನು ಕಂಡು ಪಲಾಯನ ಮಾಡಿದ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ يُرِيدُ كُلُّ ٱمْرِئٍ مِّنْهُمْ أَن يُؤْتَىٰ صُحُفًا مُّنَشَّرَةً

Kannada Translation - Hamza Buturಅಲ್ಲ, ವಾಸ್ತವವಾಗಿ ಅವರಲ್ಲಿ ಪ್ರತಿಯೊಬ್ಬನೂ ತನಗೆ ತೆರೆದಿಟ್ಟ ಧರ್ಮಗ್ರಂಥಗಳು ಸಿಗಬೇಕೆಂದು ಬಯಸುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا بَل لَّا يَخَافُونَ ٱلْـَٔاخِرَةَ

Kannada Translation - Hamza Buturಇಲ್ಲ; ವಾಸ್ತವವಾಗಿ ಅವರು ಪರಲೋಕವನ್ನು ಭಯಪಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّهُۥ تَذْكِرَةٌ

Kannada Translation - Hamza Buturಖಂಡಿತ ಇಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಉಪದೇಶವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَن شَآءَ ذَكَرَهُۥ

Kannada Translation - Hamza Buturಇಷ್ಟವಿರುವವರು ಅದರಿಂದ ಉಪದೇಶವನ್ನು ಪಡೆದುಕೊಳ್ಳಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يَذْكُرُونَ إِلَّآ أَن يَشَآءَ ٱللَّهُ هُوَ أَهْلُ ٱلتَّقْوَىٰ وَأَهْلُ ٱلْمَغْفِرَةِ

Kannada Translation - Hamza Buturಆದರೆ ಅಲ್ಲಾಹು ಇಚ್ಛಿಸಿದ ಹೊರತು ಅವರು ಅದರಿಂದ ಉಪದೇಶ ಪಡೆಯುವುದಿಲ್ಲ. ಅವನು ಭಯಪಡಲು ಅರ್ಹನಾಗಿದ್ದಾನೆ ಮತ್ತು ಕ್ಷಮಿಸಲು ಅರ್ಹನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70