ಮುಖಪುಟ › ಸೂರಗಳು › ಸೂರ Al-Muzzammil
ಸೂರ Al-Muzzammil المزمل
20 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 3
بِسْمِ ٱللَّهِ ٱلرَّحْمَٰنِ ٱلرَّحِيمِ يَٰٓأَيُّهَا ٱلْمُزَّمِّلُ
Kannada Translation - Hamza Butur ಓ ಬಟ್ಟೆಯನ್ನು ಹೊದ್ದುಕೊಂಡವರೇ![1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُمِ ٱلَّيْلَ إِلَّا قَلِيلًا
Kannada Translation - Hamza Butur ರಾತ್ರಿಯಲ್ಲಿ ನಮಾಝ್ ನಿರ್ವಹಿಸಿರಿ. ಆದರೆ ಸ್ವಲ್ಪ ಭಾಗದ ಹೊರತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نِّصْفَهُۥٓ أَوِ ٱنقُصْ مِنْهُ قَلِيلًا
Kannada Translation - Hamza Butur ರಾತ್ರಿಯ ಅರ್ಧ ಭಾಗ. ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوْ زِدْ عَلَيْهِ وَرَتِّلِ ٱلْقُرْءَانَ تَرْتِيلًا
Kannada Translation - Hamza Butur ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.[1] ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا سَنُلْقِى عَلَيْكَ قَوْلًا ثَقِيلًا
Kannada Translation - Hamza Butur ನಿಶ್ಚಯವಾಗಿಯೂ ನಾವು ಸದ್ಯವೇ ನಿಮ್ಮ ಮೇಲೆ ಭಾರವಾದ ವಚನವನ್ನು ಅವತೀರ್ಣಗೊಳಿಸುವೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ نَاشِئَةَ ٱلَّيْلِ هِىَ أَشَدُّ وَطْـًٔا وَأَقْوَمُ قِيلًا
Kannada Translation - Hamza Butur ನಿಶ್ಚಯವಾಗಿಯೂ ರಾತ್ರಿಯಲ್ಲಿ ಎದ್ದೇಳುವುದು ಮನೋದಾರ್ಢ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಾತನ್ನು ಅತ್ಯಂತ ಸರಿಯಾಗಿಸುತ್ತದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ لَكَ فِى ٱلنَّهَارِ سَبْحًا طَوِيلًا
Kannada Translation - Hamza Butur ನಿಶ್ಚಯವಾಗಿಯೂ ನಿಮಗೆ ಹಗಲಿನಲ್ಲಿ ದೀರ್ಘ ಕೆಲಸವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱذْكُرِ ٱسْمَ رَبِّكَ وَتَبَتَّلْ إِلَيْهِ تَبْتِيلًا
Kannada Translation - Hamza Butur ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ. (ಇತರ ಎಲ್ಲಾ ವಿಷಯಗಳಿಂದ ದೂರವಾಗಿ) ನಿಮ್ಮನ್ನು ಸಂಪೂರ್ಣವಾಗಿ ಅವನಿಗೆ ಅರ್ಪಿಸಿಕೊಳ್ಳಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَّبُّ ٱلْمَشْرِقِ وَٱلْمَغْرِبِ لَآ إِلَٰهَ إِلَّا هُوَ فَٱتَّخِذْهُ وَكِيلًا
Kannada Translation - Hamza Butur ಅವನು ಪೂರ್ವ ಮತ್ತು ಪಶ್ಚಿಮದ ಪರಿಪಾಲಕನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನನ್ನು ನಿಮ್ಮ ಕಾರ್ಯನಿರ್ವಾಹಕನಾಗಿ ಮಾಡಿಕೊಳ್ಳಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱصْبِرْ عَلَىٰ مَا يَقُولُونَ وَٱهْجُرْهُمْ هَجْرًا جَمِيلًا
Kannada Translation - Hamza Butur ಅವರು ಹೇಳುತ್ತಿರುವುದನ್ನು ತಾಳ್ಮೆಯಿಂದ ಸಹಿಸಿರಿ ಮತ್ತು ಅತ್ಯಂತ ಮನೋಹರವಾಗಿ ಅವರಿಂದ ದೂರವಾಗಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَذَرْنِى وَٱلْمُكَذِّبِينَ أُو۟لِى ٱلنَّعْمَةِ وَمَهِّلْهُمْ قَلِيلًا
Kannada Translation - Hamza Butur ನನ್ನನ್ನು ಮತ್ತು ಸುಖಾಡಂಬರಗಳ ಜನರಾದ ಆ ನಿಷೇಧಿಗಳನ್ನು ಬಿಟ್ಟು ಬಿಡಿ.[1] ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ لَدَيْنَآ أَنكَالًا وَجَحِيمًا
Kannada Translation - Hamza Butur ನಿಶ್ಚಯವಾಗಿಯೂ ನಮ್ಮ ಬಳಿ ಬಲಿಷ್ಠ ಬೇಡಿಗಳು ಮತ್ತು ಜ್ವಲಿಸುವ ಅಗ್ನಿಯಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَطَعَامًا ذَا غُصَّةٍ وَعَذَابًا أَلِيمًا
Kannada Translation - Hamza Butur ಉಸಿರುಗಟ್ಟಿಸುವ ಆಹಾರ ಮತ್ತು ಯಾತನಾಮಯ ಶಿಕ್ಷೆಯಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَوْمَ تَرْجُفُ ٱلْأَرْضُ وَٱلْجِبَالُ وَكَانَتِ ٱلْجِبَالُ كَثِيبًا مَّهِيلًا
Kannada Translation - Hamza Butur ಭೂಮಿ ಮತ್ತು ಪರ್ವತಗಳು ರಭಸದಿಂದ ಅಲುಗಾಡುವ ದಿನ. ಪರ್ವತಗಳು ಹರಿಯುವ ಮರಳ ರಾಶಿಯಂತಾಗುವ ದಿನ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّآ أَرْسَلْنَآ إِلَيْكُمْ رَسُولًا شَٰهِدًا عَلَيْكُمْ كَمَآ أَرْسَلْنَآ إِلَىٰ فِرْعَوْنَ رَسُولًا
Kannada Translation - Hamza Butur ನಿಶ್ಚಯವಾಗಿಯೂ ನಾವು ನಿಮ್ಮ ಮೇಲೆ ಸಾಕ್ಷಿಯಾಗಿ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಫರೋಹನ ಬಳಿಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَعَصَىٰ فِرْعَوْنُ ٱلرَّسُولَ فَأَخَذْنَٰهُ أَخْذًا وَبِيلًا
Kannada Translation - Hamza Butur ಆದರೆ ಫರೋಹನು ಆ ಸಂದೇಶವಾಹಕರನ್ನು ಅನುಸರಿಸಲಿಲ್ಲ. ಆದ್ದರಿಂದ ನಾವು ಅವನನ್ನು ಬಲಿಷ್ಠ ಹಿಡಿತದೊಂದಿಗೆ ಹಿಡಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكَيْفَ تَتَّقُونَ إِن كَفَرْتُمْ يَوْمًا يَجْعَلُ ٱلْوِلْدَٰنَ شِيبًا
Kannada Translation - Hamza Butur ನೀವು ನಿಷೇಧಿಸುವುದಾದರೆ ಮಕ್ಕಳನ್ನು ನೆರೆತ ಕೂದಲಿನವರಾಗಿ ಮಾಡುವ[1] ಆ ದಿನ ನೀವು ಹೇಗೆ ತಾನೇ ರಕ್ಷಣೆ ಪಡೆಯುವಿರಿ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱلسَّمَآءُ مُنفَطِرٌۢ بِهِۦ كَانَ وَعْدُهُۥ مَفْعُولًا
Kannada Translation - Hamza Butur ಆ ದಿನ ಆಕಾಶವು ಒಡೆಯುವುದು. ಅಲ್ಲಾಹನ ವಾಗ್ದಾನವು ನೆರವೇರಿಯೇ ತೀರುತ್ತದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذِهِۦ تَذْكِرَةٌ فَمَن شَآءَ ٱتَّخَذَ إِلَىٰ رَبِّهِۦ سَبِيلًا
Kannada Translation - Hamza Butur ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಷ್ಟವಿರುವವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಮಾರ್ಗವನ್ನು ಸ್ವೀಕರಿಸಿಕೊಳ್ಳಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ رَبَّكَ يَعْلَمُ أَنَّكَ تَقُومُ أَدْنَىٰ مِن ثُلُثَىِ ٱلَّيْلِ وَنِصْفَهُۥ وَثُلُثَهُۥ وَطَآئِفَةٌ مِّنَ ٱلَّذِينَ مَعَكَ وَٱللَّهُ يُقَدِّرُ ٱلَّيْلَ وَٱلنَّهَارَ عَلِمَ أَن لَّن تُحْصُوهُ فَتَابَ عَلَيْكُمْ فَٱقْرَءُوا۟ مَا تَيَسَّرَ مِنَ ٱلْقُرْءَانِ عَلِمَ أَن سَيَكُونُ مِنكُم مَّرْضَىٰ وَءَاخَرُونَ يَضْرِبُونَ فِى ٱلْأَرْضِ يَبْتَغُونَ مِن فَضْلِ ٱللَّهِ وَءَاخَرُونَ يُقَٰتِلُونَ فِى سَبِيلِ ٱللَّهِ فَٱقْرَءُوا۟ مَا تَيَسَّرَ مِنْهُ وَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَأَقْرِضُوا۟ ٱللَّهَ قَرْضًا حَسَنًا وَمَا تُقَدِّمُوا۟ لِأَنفُسِكُم مِّنْ خَيْرٍ تَجِدُوهُ عِندَ ٱللَّهِ هُوَ خَيْرًا وَأَعْظَمَ أَجْرًا وَٱسْتَغْفِرُوا۟ ٱللَّهَ إِنَّ ٱللَّهَ غَفُورٌ رَّحِيمٌۢ
Kannada Translation - Hamza Butur ನಿಶ್ತಯವಾಗಿಯೂ ನೀವು ಮತ್ತು ನಿಮ್ಮ ಜೊತೆಯಲ್ಲಿರುವ ಒಂದು ಗುಂಪು ಜನರು ಕೆಲವೊಮ್ಮೆ ರಾತ್ರಿಯ ಮೂರನೇ ಎರಡು ಭಾಗ, ಕೆಲವೊಮ್ಮೆ ರಾತ್ರಿಯ ಅರ್ಧ ಭಾಗ ಮತ್ತು ಕೆಲವೊಮ್ಮೆ ರಾತ್ರಿಯ ಮೂರನೇ ಒಂದು ಭಾಗದವರೆಗೆ ನಿಂತು ನಮಾಝ್ ಮಾಡುತ್ತೀರಿ ಎಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಅಲ್ಲಾಹನೇ ರಾತ್ರಿ-ಹಗಲುಗಳ (ದೀರ್ಘವನ್ನು) ನಿರ್ಣಯಿಸುವವನು. ಅದನ್ನು ಪೂರ್ಣವಾಗಿ ನೆರವೇರಿಸಲು ನಿಮಗೆ ಸಾಧ್ಯವಿಲ್ಲವೆಂದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಅನುಕಂಪ ತೋರಿದ್ದಾನೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಿಮ್ಮಲ್ಲಿ ರೋಗಿಗಳಿದ್ದಾರೆ, ಅಲ್ಲಾಹನ ಔದಾರ್ಯವನ್ನು ಹುಡುಕುತ್ತಾ (ಉಪಜೀವನಕ್ಕಾಗಿ) ಭೂಮಿಯಲ್ಲಿ ಸಂಚರಿಸುವವರಿದ್ದಾರೆ ಮತ್ತು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ. ಅಲ್ಲಾಹನಿಗೆ ಅತ್ಯುತ್ತಮವಾದ ಸಾಲವನ್ನು ನೀಡಿರಿ. ನೀವು ನಿಮಗಾಗಿ ಏನೆಲ್ಲಾ ಒಳಿತುಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮವಾಗಿ ಮತ್ತು ಅತಿದೊಡ್ಡ ಪ್ರತಿಫಲವಿರುವುದಾಗಿ ಕಾಣುವಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Jinn
ಸೂರ Al-Muddaththir →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.