caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Qiyaama القيامة

40 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 31

بِسْمِ ٱللَّهِ ٱلرَّحْمَٰنِ ٱلرَّحِيمِ لَآ أُقْسِمُ بِيَوْمِ ٱلْقِيَٰمَةِ

Kannada Translation - Hamza Buturನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَآ أُقْسِمُ بِٱلنَّفْسِ ٱللَّوَّامَةِ

Kannada Translation - Hamza Buturನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَيَحْسَبُ ٱلْإِنسَٰنُ أَلَّن نَّجْمَعَ عِظَامَهُۥ

Kannada Translation - Hamza Buturಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلَىٰ قَٰدِرِينَ عَلَىٰٓ أَن نُّسَوِّىَ بَنَانَهُۥ

Kannada Translation - Hamza Buturಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ يُرِيدُ ٱلْإِنسَٰنُ لِيَفْجُرَ أَمَامَهُۥ

Kannada Translation - Hamza Buturಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَسْـَٔلُ أَيَّانَ يَوْمُ ٱلْقِيَٰمَةِ

Kannada Translation - Hamza Buturಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا بَرِقَ ٱلْبَصَرُ

Kannada Translation - Hamza Buturದೃಷ್ಟಿಯು ಕೋರೈಸುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَخَسَفَ ٱلْقَمَرُ

Kannada Translation - Hamza Buturಚಂದ್ರ ಪ್ರಕಾಶ ರಹಿತವಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجُمِعَ ٱلشَّمْسُ وَٱلْقَمَرُ

Kannada Translation - Hamza Buturಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَقُولُ ٱلْإِنسَٰنُ يَوْمَئِذٍ أَيْنَ ٱلْمَفَرُّ

Kannada Translation - Hamza Buturಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا لَا وَزَرَ

Kannada Translation - Hamza Buturಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ رَبِّكَ يَوْمَئِذٍ ٱلْمُسْتَقَرُّ

Kannada Translation - Hamza Buturಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُنَبَّؤُا۟ ٱلْإِنسَٰنُ يَوْمَئِذٍۭ بِمَا قَدَّمَ وَأَخَّرَ

Kannada Translation - Hamza Buturಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلِ ٱلْإِنسَٰنُ عَلَىٰ نَفْسِهِۦ بَصِيرَةٌ

Kannada Translation - Hamza Buturಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ أَلْقَىٰ مَعَاذِيرَهُۥ

Kannada Translation - Hamza Buturಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا تُحَرِّكْ بِهِۦ لِسَانَكَ لِتَعْجَلَ بِهِۦٓ

Kannada Translation - Hamza Butur(ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ عَلَيْنَا جَمْعَهُۥ وَقُرْءَانَهُۥ

Kannada Translation - Hamza Buturನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا قَرَأْنَٰهُ فَٱتَّبِعْ قُرْءَانَهُۥ

Kannada Translation - Hamza Buturನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِنَّ عَلَيْنَا بَيَانَهُۥ

Kannada Translation - Hamza Buturನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا بَلْ تُحِبُّونَ ٱلْعَاجِلَةَ

Kannada Translation - Hamza Buturಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَذَرُونَ ٱلْـَٔاخِرَةَ

Kannada Translation - Hamza Buturಪರಲೋಕವನ್ನು ತೊರೆಯುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وُجُوهٌ يَوْمَئِذٍ نَّاضِرَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ رَبِّهَا نَاظِرَةٌ

Kannada Translation - Hamza Buturಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَوُجُوهٌ يَوْمَئِذٍۭ بَاسِرَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَظُنُّ أَن يُفْعَلَ بِهَا فَاقِرَةٌ

Kannada Translation - Hamza Buturಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِذَا بَلَغَتِ ٱلتَّرَاقِىَ

Kannada Translation - Hamza Buturಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقِيلَ مَنْ رَاقٍ

Kannada Translation - Hamza Butur“ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَظَنَّ أَنَّهُ ٱلْفِرَاقُ

Kannada Translation - Hamza Buturಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْتَفَّتِ ٱلسَّاقُ بِٱلسَّاقِ

Kannada Translation - Hamza Buturಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ رَبِّكَ يَوْمَئِذٍ ٱلْمَسَاقُ

Kannada Translation - Hamza Buturಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَا صَدَّقَ وَلَا صَلَّىٰ

Kannada Translation - Hamza Buturಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَٰكِن كَذَّبَ وَتَوَلَّىٰ

Kannada Translation - Hamza Buturಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ ذَهَبَ إِلَىٰٓ أَهْلِهِۦ يَتَمَطَّىٰٓ

Kannada Translation - Hamza Buturನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوْلَىٰ لَكَ فَأَوْلَىٰ

Kannada Translation - Hamza Buturನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَوْلَىٰ لَكَ فَأَوْلَىٰٓ

Kannada Translation - Hamza Buturಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَيَحْسَبُ ٱلْإِنسَٰنُ أَن يُتْرَكَ سُدًى

Kannada Translation - Hamza Buturಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ يَكُ نُطْفَةً مِّن مَّنِىٍّ يُمْنَىٰ

Kannada Translation - Hamza Buturಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ كَانَ عَلَقَةً فَخَلَقَ فَسَوَّىٰ

Kannada Translation - Hamza Buturನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَجَعَلَ مِنْهُ ٱلزَّوْجَيْنِ ٱلذَّكَرَ وَٱلْأُنثَىٰٓ

Kannada Translation - Hamza Buturನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَيْسَ ذَٰلِكَ بِقَٰدِرٍ عَلَىٰٓ أَن يُحْـِۧىَ ٱلْمَوْتَىٰ

Kannada Translation - Hamza Buturಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70