ಮುಖಪುಟ › ಸೂರಗಳು › ಸೂರ Al-Qalam
ಸೂರ Al-Qalam القلم
52 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 2
بِسْمِ ٱللَّهِ ٱلرَّحْمَٰنِ ٱلرَّحِيمِ نٓ وَٱلْقَلَمِ وَمَا يَسْطُرُونَ
Kannada Translation - Hamza Butur ನೂನ್. ಲೇಖನಿ ಮತ್ತು ಅವರು (ದೇವದೂತರುಗಳು) ಬರೆಯುವುದರ ಮೇಲಾಣೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَآ أَنتَ بِنِعْمَةِ رَبِّكَ بِمَجْنُونٍ
Kannada Translation - Hamza Butur ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹದಿಂದಾಗಿ ನೀವು ಮಾನಸಿಕ ಅಸ್ವಸ್ಥರಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ لَكَ لَأَجْرًا غَيْرَ مَمْنُونٍ
Kannada Translation - Hamza Butur ನಿಶ್ಚಯವಾಗಿಯೂ ನಿಮಗೆ ಎಂದೂ ಮುಗಿಯದ ಪ್ರತಿಫಲವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّكَ لَعَلَىٰ خُلُقٍ عَظِيمٍ
Kannada Translation - Hamza Butur ನಿಶ್ಚಯವಾಗಿಯೂ ನೀವು ಶ್ರೇಷ್ಠ ಗುಣ ನಡವಳಿಕೆಯಲ್ಲಿದ್ದೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَتُبْصِرُ وَيُبْصِرُونَ
Kannada Translation - Hamza Butur ಆದ್ದರಿಂದ ನೀವು ನೋಡುವಿರಿ ಮತ್ತು ಅವರು ಕೂಡ ನೋಡುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بِأَييِّكُمُ ٱلْمَفْتُونُ
Kannada Translation - Hamza Butur ನಿಮ್ಮಲ್ಲಿ ಕ್ಷೋಭೆಗೆ ಬಲಿಯಾದವರು ಯಾರೆಂದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِٱلْمُهْتَدِينَ
Kannada Translation - Hamza Butur ನಿಶ್ಚಯವಾಗಿಯೂ ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَا تُطِعِ ٱلْمُكَذِّبِينَ
Kannada Translation - Hamza Butur ಆದ್ದರಿಂದ ನೀವು ಸತ್ಯನಿಷೇಧಿಗಳ ಮಾತನ್ನು ಕೇಳಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَدُّوا۟ لَوْ تُدْهِنُ فَيُدْهِنُونَ
Kannada Translation - Hamza Butur ನೀವು ಸ್ವಲ್ಪ ಮೃದುವಾದರೆ ಅವರು ಕೂಡ ಮೃದುವಾಗುತ್ತಾರೆ ಎಂದು ಅವರು ಬಯಸುತ್ತಾರೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا تُطِعْ كُلَّ حَلَّافٍ مَّهِينٍ
Kannada Translation - Hamza Butur ನೀವು ಎಲ್ಲಾ ಪದೇ ಪದೇ ಆಣೆ ಮಾಡುವ ನೀಚರ ಮಾತನ್ನು ಕೇಳಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَمَّازٍ مَّشَّآءٍۭ بِنَمِيمٍ
Kannada Translation - Hamza Butur (ಅಂದರೆ) ಚುಚ್ಚಿ ಮಾತನಾಡುವವನು ಮತ್ತು ಚಾಡಿಯೊಂದಿಗೆ ನಡೆಯುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَّنَّاعٍ لِّلْخَيْرِ مُعْتَدٍ أَثِيمٍ
Kannada Translation - Hamza Butur ಒಳಿತಿಗೆ ಅಡ್ಡಿಪಡಿಸುವವನು, ಎಲ್ಲೆ ಮೀರಿದವನು ಮತ್ತು ಕಡುಪಾಪಿಯಾಗಿರುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عُتُلٍّۭ بَعْدَ ذَٰلِكَ زَنِيمٍ
Kannada Translation - Hamza Butur ಒರಟನು, ಮಾತ್ರವಲ್ಲದೆ ಕುಲಕ್ಕೆ ಸೇರದವನು.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَن كَانَ ذَا مَالٍ وَبَنِينَ
Kannada Translation - Hamza Butur ಅವನಿಗೆ ಆಸ್ತಿ ಮತ್ತು ಗಂಡು ಮಕ್ಕಳಿರುವುದೇ ಅವನ (ಈ ದುರ್ನಡತೆಗೆ) ಕಾರಣವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذَا تُتْلَىٰ عَلَيْهِ ءَايَٰتُنَا قَالَ أَسَٰطِيرُ ٱلْأَوَّلِينَ
Kannada Translation - Hamza Butur ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ, ಅದನ್ನು ಪ್ರಾಚೀನ ಕಾಲದವರ ಪುರಾಣಗಳು ಎಂದು ಹೇಳುತ್ತಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
سَنَسِمُهُۥ عَلَى ٱلْخُرْطُومِ
Kannada Translation - Hamza Butur ನಾವು ಅವನ ಮೂಗಿನ ಮೇಲೆ ಬರೆ ಹಾಕುವೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا بَلَوْنَٰهُمْ كَمَا بَلَوْنَآ أَصْحَٰبَ ٱلْجَنَّةِ إِذْ أَقْسَمُوا۟ لَيَصْرِمُنَّهَا مُصْبِحِينَ
Kannada Translation - Hamza Butur ನಿಶ್ಚಯವಾಗಿಯೂ ಆ ತೋಟದ ಜನರನ್ನು ಪರೀಕ್ಷಿಸಿದಂತೆ ನಾವು ಅವರನ್ನೂ ಪರೀಕ್ಷಿಸಿದೆವು. ಬೆಳಗಾಗುತ್ತಿದ್ದಂತೆ ತೋಟದ ಹಣ್ಣುಗಳನ್ನು ನಾವು ಖಂಡಿತ ಕೊಯ್ಯುವೆವು ಎಂದು ಅವರು ಆಣೆ ಮಾಡಿ ಹೇಳಿದ ಸಂದರ್ಭ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا يَسْتَثْنُونَ
Kannada Translation - Hamza Butur ಆದರೆ ಅವರು ಇನ್‌ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَطَافَ عَلَيْهَا طَآئِفٌ مِّن رَّبِّكَ وَهُمْ نَآئِمُونَ
Kannada Translation - Hamza Butur ಆದ್ದರಿಂದ, ಅವರು ನಿದ್ದೆಯಲ್ಲಿದ್ದಾಗಲೇ (ರಾತ್ರೋರಾತ್ರಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಶಿಕ್ಷೆಯು ಆ ತೋಟವನ್ನು ನಾಲ್ಕೂ ಕಡೆಯಿಂದ ಸುತ್ತಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَصْبَحَتْ كَٱلصَّرِيمِ
Kannada Translation - Hamza Butur ಆಗ ಆ ತೋಟವು ಕಟಾವು ಮಾಡಿದ ಹೊಲದಂತಾಯಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَتَنَادَوْا۟ مُصْبِحِينَ
Kannada Translation - Hamza Butur ಬೆಳಗಾಗುತ್ತಿದ್ದಂತೆ ಅವರು ಒಬ್ಬರನ್ನೊಬ್ಬರು ಕೂಗಿ ಕರೆದು ಹೇಳಿದರು:
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَنِ ٱغْدُوا۟ عَلَىٰ حَرْثِكُمْ إِن كُنتُمْ صَٰرِمِينَ
Kannada Translation - Hamza Butur “ನಿಮಗೆ ಹಣ್ಣು ಕೊಯ್ಯಬೇಕೆಂದಿದ್ದರೆ ಬೆಳಿಗ್ಗೆಯೇ ನಿಮ್ಮ ತೋಟಕ್ಕೆ ಹೊರಡಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱنطَلَقُوا۟ وَهُمْ يَتَخَٰفَتُونَ
Kannada Translation - Hamza Butur ನಂತರ ಅವರು ಪರಸ್ಪರ ಗುಟ್ಟಾಗಿ ಈ ಮಾತುಗಳನ್ನು ಹೇಳುತ್ತಾ ಹೊರಟರು:
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَن لَّا يَدْخُلَنَّهَا ٱلْيَوْمَ عَلَيْكُم مِّسْكِينٌ
Kannada Translation - Hamza Butur “ಇಂದು ನಿಮ್ಮ ಬಳಿಗೆ ಯಾವುದೇ ಬಡವ ಬರುವಂತಾಗಬಾರದು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَغَدَوْا۟ عَلَىٰ حَرْدٍ قَٰدِرِينَ
Kannada Translation - Hamza Butur ಅವರು ಒಂದು ನಿರ್ಧಾರದೊಂದಿಗೆ (ಅದನ್ನು ಜಾರಿಗೊಳಿಸುವ) ಪೂರ್ಣ ಸಾಮರ್ಥ್ಯವಿದೆಯೆಂದು ಪರಿಗಣಿಸಿ ಬೆಳಗ್ಗೆಯೇ ಹೊರಟರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَمَّا رَأَوْهَا قَالُوٓا۟ إِنَّا لَضَآلُّونَ
Kannada Translation - Hamza Butur ಆದರೆ ಅವರು ಆ ತೋಟವನ್ನು ನೋಡಿದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ನಮಗೆ ದಾರಿ ತಪ್ಪಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بَلْ نَحْنُ مَحْرُومُونَ
Kannada Translation - Hamza Butur ಅಲ್ಲ, ನಮಗೆ ಅದೃಷ್ಟ ಕೈಕೊಟ್ಟಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ أَوْسَطُهُمْ أَلَمْ أَقُل لَّكُمْ لَوْلَا تُسَبِّحُونَ
Kannada Translation - Hamza Butur ಅವರಲ್ಲಿದ್ದ ಉತ್ತಮ ವ್ಯಕ್ತಿ ಹೇಳಿದನು: “ನೀವೇಕೆ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವುದಿಲ್ಲ ಎಂದು ನಾನು ನಿಮ್ಮೊಡನೆ ಕೇಳಲಿಲ್ಲವೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ سُبْحَٰنَ رَبِّنَآ إِنَّا كُنَّا ظَٰلِمِينَ
Kannada Translation - Hamza Butur ಅವರು ಹೇಳಿದರು: “ನಮ್ಮ ಪರಿಪಾಲಕನ (ಅಲ್ಲಾಹನ) ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನಿಶ್ಚಯವಾಗಿಯೂ ನಾವು ಅಕ್ರಮಿಗಳಾಗಿದ್ದೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَقْبَلَ بَعْضُهُمْ عَلَىٰ بَعْضٍ يَتَلَٰوَمُونَ
Kannada Translation - Hamza Butur ನಂತರ ಅವರು ಒಬ್ಬರಿಗೊಬ್ಬರು ಮುಖ ಮಾಡಿ ಪರಸ್ಪರ ಆರೋಪ ಹೊರಿಸತೊಡಗಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ يَٰوَيْلَنَآ إِنَّا كُنَّا طَٰغِينَ
Kannada Translation - Hamza Butur ಅವರು ಹೇಳಿದರು: “ಓ ನಮ್ಮ ದುರ್ಗತಿಯೇ! ನಿಶ್ಚಯವಾಗಿಯೂ ನಾವು ಅತಿರೇಕಿಗಳಾಗಿದ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَسَىٰ رَبُّنَآ أَن يُبْدِلَنَا خَيْرًا مِّنْهَآ إِنَّآ إِلَىٰ رَبِّنَا رَٰغِبُونَ
Kannada Translation - Hamza Butur ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ಇದಕ್ಕಿಂತಲೂ ಉತ್ತಮವಾದುದನ್ನು ಬದಲಿಯಾಗಿ ನೀಡಬಹುದು. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಗ್ಗೆ ಆಶಾವಾದಿಗಳಾಗಿದ್ದೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَٰلِكَ ٱلْعَذَابُ وَلَعَذَابُ ٱلْـَٔاخِرَةِ أَكْبَرُ لَوْ كَانُوا۟ يَعْلَمُونَ
Kannada Translation - Hamza Butur ಶಿಕ್ಷೆಯು ಹೀಗೆಯೇ ಆಗಿದೆ. ಪರಲೋಕದ ಶಿಕ್ಷೆಯು ಅತಿದೊಡ್ಡದಾಗಿದೆ. ಅವರು ಅದನ್ನು ತಿಳಿಯುತ್ತಿದ್ದರೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ لِلْمُتَّقِينَ عِندَ رَبِّهِمْ جَنَّٰتِ ٱلنَّعِيمِ
Kannada Translation - Hamza Butur ನಿಶ್ಚಯವಾಗಿಯೂ, ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಸುಖಾಡಂಬರಗಳಿಂದ ಕೂಡಿದ ಸ್ವರ್ಗೋದ್ಯಾನಗಳಿವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَنَجْعَلُ ٱلْمُسْلِمِينَ كَٱلْمُجْرِمِينَ
Kannada Translation - Hamza Butur ಹಾಗಾದರೆ ನಾವು ಮುಸ್ಲಿಮರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವೆವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا لَكُمْ كَيْفَ تَحْكُمُونَ
Kannada Translation - Hamza Butur ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لَكُمْ كِتَٰبٌ فِيهِ تَدْرُسُونَ
Kannada Translation - Hamza Butur ನಿಮ್ಮಲ್ಲಿ ಒಂದು ಗ್ರಂಥವಿದ್ದು ನೀವು ಅದರಿಂದ ಓದುತ್ತಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ لَكُمْ فِيهِ لَمَا تَخَيَّرُونَ
Kannada Translation - Hamza Butur ಅದರಲ್ಲಿ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ವಿಷಯಗಳಿವೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لَكُمْ أَيْمَٰنٌ عَلَيْنَا بَٰلِغَةٌ إِلَىٰ يَوْمِ ٱلْقِيَٰمَةِ إِنَّ لَكُمْ لَمَا تَحْكُمُونَ
Kannada Translation - Hamza Butur ಅಥವಾ, ನೀವು ಸ್ವಯಂ ನಿಶ್ಚಯಿಸುವುದೆಲ್ಲವೂ ನಿಮಗಿದೆಯೆಂದು ಪುನರುತ್ಥಾನ ದಿನದ ತನಕ ತಲುಪುವ ಯಾವುದಾದರೂ ಪ್ರತಿಜ್ಞೆಗಳನ್ನು ನೀವು ನಮ್ಮಿಂದ ಪಡೆದಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
سَلْهُمْ أَيُّهُم بِذَٰلِكَ زَعِيمٌ
Kannada Translation - Hamza Butur ಅವರಲ್ಲಿ ಯಾರು ಇದರ ಹೊಣೆಯನ್ನು ವಹಿಸಿಕೊಳ್ಳುತ್ತಾರೆಂದು ಅವರೊಡನೆ ಕೇಳಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لَهُمْ شُرَكَآءُ فَلْيَأْتُوا۟ بِشُرَكَآئِهِمْ إِن كَانُوا۟ صَٰدِقِينَ
Kannada Translation - Hamza Butur ಅವರಿಗೆ ಯಾರಾದರೂ ಸಹಭಾಗಿಗಳು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಅವರ ಸಹಭಾಗಿಗಳನ್ನು ಕರೆದುಕೊಂಡು ಬರಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَوْمَ يُكْشَفُ عَن سَاقٍ وَيُدْعَوْنَ إِلَى ٱلسُّجُودِ فَلَا يَسْتَطِيعُونَ
Kannada Translation - Hamza Butur ಕಣಕಾಲನ್ನು ಪ್ರದರ್ಶಿಸಲಾಗುವ ದಿನ. ಆಗ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುವುದು. ಆದರೆ ಅವರಿಗೆ (ಸಾಷ್ಟಾಂಗ ಮಾಡಲು) ಸಾಧ್ಯವಾಗುವುದಿಲ್ಲ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
خَٰشِعَةً أَبْصَٰرُهُمْ تَرْهَقُهُمْ ذِلَّةٌ وَقَدْ كَانُوا۟ يُدْعَوْنَ إِلَى ٱلسُّجُودِ وَهُمْ سَٰلِمُونَ
Kannada Translation - Hamza Butur ಅವರ ಕಣ್ಣುಗಳು ತಗ್ಗಿಕೊಂಡಿರುವುವು ಮತ್ತು ಅವಮಾನವು ಅವರನ್ನು ಆವರಿಸಿಕೊಂಡಿರುವುದು. ವಾಸ್ತವದಲ್ಲಿ ಅವರು ಇಹಲೋಕದಲ್ಲಿ ಸುಸ್ಥಿತಿಯಲ್ಲಿದ್ದಾಗಲೂ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುತ್ತಿತ್ತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَذَرْنِى وَمَن يُكَذِّبُ بِهَٰذَا ٱلْحَدِيثِ سَنَسْتَدْرِجُهُم مِّنْ حَيْثُ لَا يَعْلَمُونَ
Kannada Translation - Hamza Butur ಆದ್ದರಿಂದ ನನ್ನನ್ನು ಮತ್ತು ಈ ಮಾತನ್ನು (ಕುರ್‌ಆನನ್ನು) ನಿಷೇಧಿಸುವವನನ್ನು ಬಿಟ್ಟುಬಿಡಿ.[1] ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಹಿಡಿಯುವೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأُمْلِى لَهُمْ إِنَّ كَيْدِى مَتِينٌ
Kannada Translation - Hamza Butur ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರವು ಬಲಿಷ್ಠವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ تَسْـَٔلُهُمْ أَجْرًا فَهُم مِّن مَّغْرَمٍ مُّثْقَلُونَ
Kannada Translation - Hamza Butur ನೀವು ಅವರೊಡನೆ ಪ್ರತಿಫಲವನ್ನು ಕೇಳಿ ಅವರು (ಅದನ್ನು ನೀಡಲು ಸಾಧ್ಯವಾಗದೆ) ಸಾಲದ ಹೊರೆಯನ್ನು ಹೊರುತ್ತಿದ್ದಾರೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ عِندَهُمُ ٱلْغَيْبُ فَهُمْ يَكْتُبُونَ
Kannada Translation - Hamza Butur ಅವರ ಬಳಿ ಅದೃಶ್ಯ ಜ್ಞಾನವಿದ್ದು ಅವರು ಅದನ್ನು ಬರೆಯುತ್ತಿದ್ದಾರೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱصْبِرْ لِحُكْمِ رَبِّكَ وَلَا تَكُن كَصَاحِبِ ٱلْحُوتِ إِذْ نَادَىٰ وَهُوَ مَكْظُومٌ
Kannada Translation - Hamza Butur ಆದ್ದರಿಂದ, ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಮಾನಕ್ಕಾಗಿ ತಾಳ್ಮೆಯಿಂದಿರಿ. ನೀವು ಮೀನಿನ ಸಂಗಡಿಗನಂತೆ (ಯೂನುಸರಂತೆ) ಆಗಬೇಡಿ. ತೀವ್ರ ದುಃಖಿತನಾಗಿದ್ದ ಸ್ಥಿತಿಯಲ್ಲಿ ಅವರು ಕರೆದು ಪ್ರಾರ್ಥಿಸಿದ ಸಂದರ್ಭ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّوْلَآ أَن تَدَٰرَكَهُۥ نِعْمَةٌ مِّن رَّبِّهِۦ لَنُبِذَ بِٱلْعَرَآءِ وَهُوَ مَذْمُومٌ
Kannada Translation - Hamza Butur ಅವರ ಪರಿಪಾಲಕನ (ಅಲ್ಲಾಹನ) ಅನುಗ್ರಹವು ಅವರನ್ನು ತಲುಪದಿರುತ್ತಿದ್ದರೆ, ಅವರನ್ನು ಆಕ್ಷೇಪಿತ ಸ್ಥಿತಿಯಲ್ಲಿ ಬಯಲು ತೀರಕ್ಕೆ ಎಸೆಯಲಾಗುತ್ತಿತ್ತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱجْتَبَٰهُ رَبُّهُۥ فَجَعَلَهُۥ مِنَ ٱلصَّٰلِحِينَ
Kannada Translation - Hamza Butur ಅವರ ಪರಿಪಾಲಕ (ಅಲ್ಲಾಹು) ಅವರನ್ನು ಆರಿಸಿದನು ಮತ್ತು ಅವರನ್ನು ನೀತಿವಂತರಲ್ಲಿ ಸೇರಿಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِن يَكَادُ ٱلَّذِينَ كَفَرُوا۟ لَيُزْلِقُونَكَ بِأَبْصَٰرِهِمْ لَمَّا سَمِعُوا۟ ٱلذِّكْرَ وَيَقُولُونَ إِنَّهُۥ لَمَجْنُونٌ
Kannada Translation - Hamza Butur ಸತ್ಯನಿಷೇಧಿಗಳು ಈ ಉಪದೇಶವನ್ನು (ಕುರ್‌ಆನನ್ನು) ಕೇಳಿದಾಗ, ತಮ್ಮ ಕೆಟ್ಟದೃಷ್ಟಿಗಳಿಂದ ನಿಮ್ಮನ್ನು ಇನ್ನೇನು ಜಾರುವಂತೆ ಮಾಡುವುದರಲ್ಲಿದ್ದರು.[1] ಅವರು ಹೇಳುತ್ತಿದ್ದರು: “ನಿಶ್ಚಯವಾಗಿಯೂ ಅವನೊಬ್ಬ ಮಾನಸಿಕ ಅಸ್ವಸ್ಥ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا هُوَ إِلَّا ذِكْرٌ لِّلْعَٰلَمِينَ
Kannada Translation - Hamza Butur ಇದು (ಕುರ್‌ಆನ್) ಸರ್ವಲೋಕಗಳ ಜನರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Mulk
ಸೂರ Al-Haaqqa →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.