Kannada Translation - Hamza Buturಅವನೇ ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು. ನಿಮ್ಮಲ್ಲಿ ಅತ್ಯುತ್ತಮ ಕರ್ಮವೆಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.
Kannada Translation - Hamza Buturಅವನೇ ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದವನು. ನೀವು ಪರಮ ದಯಾಮಯನ ಸೃಷ್ಟಿಯಲ್ಲಿ ಯಾವುದೇ ಕುಂದು-ಕೊರತೆಯನ್ನು ಕಾಣಲಾರಿರಿ. ಎರಡನೇ ಬಾರಿ ದೃಷ್ಟಿಯನ್ನು ಮರಳಿಸಿ ನೋಡಿ. ನೀವು ಯಾವುದಾದರೂ ಬಿರುಕುಗಳನ್ನು ಕಾಣುತ್ತೀರಾ?
Kannada Translation - Hamza Buturನಾವು ಇಹಲೋಕದ ಆಕಾಶವನ್ನು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ. ಅವುಗಳನ್ನು ಶೈತಾನರಿಗೆ ಹೊಡೆದೋಡಿಸುವ ಸಾಧನವಾಗಿ ಮಾಡಿದ್ದೇವೆ. ನಾವು ಅವರಿಗೆ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Kannada Translation - Hamza Buturಅದು (ಕ್ರೋಧದಿಂದ) ಇನ್ನೇನು ಸ್ಫೋಟಿಸುವಂತಿರುವುದು. ಅದಕ್ಕೆ ಒಂದೊಂದು ಗುಂಪನ್ನು ಎಸೆಯುವಾಗಲೆಲ್ಲಾ ಅದರ ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬರಲಿಲ್ಲವೇ?”
Kannada Translation - Hamza Buturಅವರು ಉತ್ತರಿಸುವರು: “ಹೌದು, ನಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು. ನಾವು ಹೇಳಿದೆವು: ಅಲ್ಲಾಹು ಏನನ್ನೂ ಅವತೀರ್ಣಗೊಳಿಸಿಲ್ಲ; ನೀವು ಬಹುದೊಡ್ಡ ದುರ್ಮಾರ್ಗದಲ್ಲಿದ್ದೀರಿ.”
Kannada Translation - Hamza Buturಅವರು (ಸತ್ಯನಿಷೇಧಿಗಳು) ಹೇಳುವರು: “ನಾವು ಕಿವಿಗೊಡುತ್ತಿದ್ದರೆ ಅಥವಾ ಅರ್ಥಮಾಡಿಕೊಳ್ಳುತ್ತಿದ್ದರೆ ನಾವು ನರಕವಾಸಿಗಳಲ್ಲಿ ಸೇರುತ್ತಿರಲಿಲ್ಲ.”
Kannada Translation - Hamza Buturಅವನೇ ನಿಮಗೆ ಭೂಮಿಯನ್ನು ವಿಧೇಯಗೊಳಿಸಿಕೊಟ್ಟವನು. ನೀವು ಅದರ ರಸ್ತೆಗಳಲ್ಲಿ ಚಲಿಸುವುದಕ್ಕಾಗಿ. ಅವನು ಒದಗಿಸಿದ ಉಪಜೀವನದಿಂದ ತಿನ್ನಿರಿ. ಪುನರುತ್ಥಾನವು ಅವನ ಬಳಿಗೇ ಆಗಿದೆ.
Kannada Translation - Hamza Buturಅಥವಾ ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ನಂತರ ನನ್ನ ಎಚ್ಚರಿಕೆ ಹೇಗಿತ್ತೆಂದು ನೀವು ಸದ್ಯವೇ ತಿಳಿದುಕೊಳ್ಳುವಿರಿ.
Kannada Translation - Hamza Buturಅವರು ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಚಾಚಿ ಹಾರಾಡುವ ಮತ್ತು ರೆಕ್ಕೆಗಳನ್ನು ಮಡಚುವ ಹಕ್ಕಿಗಳನ್ನು ನೋಡಿಲ್ಲವೇ? ಅವುಗಳನ್ನು ಪರಮ ದಯಾಳುವಾದ ಅಲ್ಲಾಹನಲ್ಲದೆ ಇನ್ನಾರೂ ಆಧರಿಸಿ ಹಿಡಿದಿಲ್ಲ. ನಿಶ್ಚಯವಾಗಿಯೂ ಅವನು ಎಲ್ಲವನ್ನೂ ನೋಡುತ್ತಿದ್ದಾನೆ.
Kannada Translation - Hamza Buturಅಲ್ಲಾಹು ನಿಮಗೆ ಉಪಜೀವನವನ್ನು ತಡೆಹಿಡಿದರೆ, ನಿಮಗೆ ಉಪಜೀವನ ನೀಡಲು ಯಾರಿಗೆ ಸಾಧ್ಯವಿದೆ? ಅಲ್ಲ, ವಾಸ್ತವವಾಗಿ (ಸತ್ಯನಿಷೇಧಿಗಳು) ಸೊಕ್ಕು ಮತ್ತು ವಿದ್ವೇಷದಲ್ಲೇ ನಿರತರಾಗಿದ್ದಾರೆ.
Kannada Translation - Hamza Buturಹಾಗಾದರೆ ಹೆಚ್ಚು ಸನ್ಮಾರ್ಗದಲ್ಲಿರುವವನು ತಲೆಕೆಳಗಾಗಿ ಮುಖದ ಮೇಲೆ ನಡೆಯುವವನೋ, ಅಥವಾ (ಕಾಲುಗಳ ಮೇಲೆ) ನೇರ ಮಾರ್ಗದಲ್ಲಿ ಸರಿಯಾಗಿ ನಡೆಯುವವನೋ?
Kannada Translation - Hamza Buturಹೇಳಿರಿ: “ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಶ್ರವಣ, ದೃಷ್ಟಿ ಹಾಗೂ ಹೃದಯವನ್ನು ನೀಡಿದವನು. ನೀವು ಸ್ವಲ್ಪ ಮಾತ್ರ ಕೃತಜ್ಞರಾಗುತ್ತೀರಿ.”
Kannada Translation - Hamza Buturಅವರು ಆ ವಾಗ್ದಾನವು ಸಮೀಪದಲ್ಲಿರುವುದನ್ನು ಕಾಣುವಾಗ, ಸತ್ಯನಿಷೇಧಿಗಳ ಮುಖಗಳು ಬಿಳಿಚಿಕೊಳ್ಳುವುದು. (ಅವರೊಡನೆ ಹೇಳಲಾಗುವುದು): “ಇದೇ ನೀವು ಬೇಡುತ್ತಿದ್ದ ಆ ಶಿಕ್ಷೆ.”
Kannada Translation - Hamza Buturಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನನ್ನನ್ನು ಮತ್ತು ನನ್ನ ಅನುಯಾಯಿಗಳನ್ನು ನಾಶ ಮಾಡಿದರೆ, ಅಥವಾ ನಮಗೆ ದಯೆ ತೋರಿದರೆ, ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯಿಂದ ಪಾರು ಮಾಡುವವರು ಯಾರು?”
Kannada Translation - Hamza Buturಹೇಳಿರಿ: “ಅವನು ಪರಮ ದಯಾಳು. ನಾವು ಅವನಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನಲ್ಲಿ ಭರವಸೆಯಿಟ್ಟಿದ್ದೇವೆ. ಸ್ಪಷ್ಟ ದುರ್ಮಾರ್ಗದಲ್ಲಿರುವುದು ಯಾರೆಂದು ನೀವು ಸದ್ಯವೇ ತಿಳಿಯುವಿರಿ.”