ಮುಖಪುಟ › ಸೂರಗಳು › ಸೂರ Al-Haaqqa
ಸೂರ Al-Haaqqa الحاقة
52 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 78
بِسْمِ ٱللَّهِ ٱلرَّحْمَٰنِ ٱلرَّحِيمِ ٱلْحَآقَّةُ
Kannada Translation - Hamza Butur ಸತ್ಯವಾಗಿ ಸಂಭವಿಸುವಂತದ್ದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا ٱلْحَآقَّةُ
Kannada Translation - Hamza Butur ಸತ್ಯವಾಗಿ ಸಂಭವಿಸುವಂತದ್ದು ಏನು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَدْرَىٰكَ مَا ٱلْحَآقَّةُ
Kannada Translation - Hamza Butur ಸತ್ಯವಾಗಿ ಸಂಭವಿಸುವಂತದ್ದು ಏನೆಂದು ನಿಮಗೇನು ಗೊತ್ತು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ ثَمُودُ وَعَادٌۢ بِٱلْقَارِعَةِ
Kannada Translation - Hamza Butur ಸಮೂದ್ ಮತ್ತು ಆದ್ ಗೋತ್ರದವರು ಆ ಭಯಾನಕ ಘಟನೆಯನ್ನು (ಪುನರುತ್ಥಾನವನ್ನು) ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَمَّا ثَمُودُ فَأُهْلِكُوا۟ بِٱلطَّاغِيَةِ
Kannada Translation - Hamza Butur ಸಮೂದ್ ಗೋತ್ರದವರನ್ನು ಮಿತಿಮೀರಿದ (ಭಯಾನಕ ಸದ್ದಿನ) ಮೂಲಕ ನಾಶ ಮಾಡಲಾಯಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّا عَادٌ فَأُهْلِكُوا۟ بِرِيحٍ صَرْصَرٍ عَاتِيَةٍ
Kannada Translation - Hamza Butur ಆದ್ ಗೋತ್ರದವರನ್ನು ಅತಿಶೀತ ಉಗ್ರ ಗಾಳಿಯ ಮೂಲಕ ನಾಶ ಮಾಡಲಾಯಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
سَخَّرَهَا عَلَيْهِمْ سَبْعَ لَيَالٍ وَثَمَٰنِيَةَ أَيَّامٍ حُسُومًا فَتَرَى ٱلْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ
Kannada Translation - Hamza Butur ಅಲ್ಲಾಹು ಅದನ್ನು ಅವರ ಮೇಲೆ ಏಳು ರಾತ್ರಿಗಳು ಮತ್ತು ಎಂಟು ದಿನಗಳ ಕಾಲ ನಿರಂತರವಾಗಿ ಹೇರಿದನು; ನಂತರ ಆ ಜನರು—ಕುಸಿದು ಬಿದ್ದ ಖರ್ಜೂರ ಮರಗಳ ಕಾಂಡಗಳೋ ಎಂಬಂತೆ—ಬೋರಲು ಬಿದ್ದು ಸತ್ತಿರುವುದು ನಿಮಗೆ ಕಾಣಬಹುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَهَلْ تَرَىٰ لَهُم مِّنۢ بَاقِيَةٍ
Kannada Translation - Hamza Butur ಅವರಲ್ಲಿ ಯಾರಾದರೂ ಬಾಕಿಯುಳಿದದ್ದನ್ನು ನೀವು ಕಂಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَجَآءَ فِرْعَوْنُ وَمَن قَبْلَهُۥ وَٱلْمُؤْتَفِكَٰتُ بِٱلْخَاطِئَةِ
Kannada Translation - Hamza Butur ಫರೋಹ, ಅವನಿಗಿಂತ ಮೊದಲಿನವರು ಮತ್ತು ಬುಡಮೇಲುಗೊಳಿಸಲಾದ ಊರಿನವರು ಪಾಪಗಳೊಂದಿಗೆ ಬಂದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَعَصَوْا۟ رَسُولَ رَبِّهِمْ فَأَخَذَهُمْ أَخْذَةً رَّابِيَةً
Kannada Translation - Hamza Butur ಅವರು ಅವರ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಿಗೆ ಅವಿಧೇಯತೆ ತೋರಿದರು. ಆಗ ಅಲ್ಲಾಹು ಅವರನ್ನು ಕಠೋರವಾದ ಹಿಡಿತದಿಂದ ಹಿಡಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا لَمَّا طَغَا ٱلْمَآءُ حَمَلْنَٰكُمْ فِى ٱلْجَارِيَةِ
Kannada Translation - Hamza Butur ನಿಶ್ಚಯವಾಗಿಯೂ ನೀರು ಎಲ್ಲೆ ಮೀರಿ ಹರಿದಾಗ ನಾವು ನಿಮ್ಮನ್ನು ನಾವೆಯಲ್ಲಿ ಹೊತ್ತೊಯ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لِنَجْعَلَهَا لَكُمْ تَذْكِرَةً وَتَعِيَهَآ أُذُنٌ وَٰعِيَةٌ
Kannada Translation - Hamza Butur ನಾವು ಅದನ್ನು ನಿಮಗೆ ಒಂದು ನೆನಪಾಗಿ ಮಾಡಲು ಮತ್ತು ಜಾಗೃತ ಕಿವಿಯು ಅದರ ಬಗ್ಗೆ ಜಾಗೃತವಾಗಿರಲು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَإِذَا نُفِخَ فِى ٱلصُّورِ نَفْخَةٌ وَٰحِدَةٌ
Kannada Translation - Hamza Butur ಕಹಳೆಯಲ್ಲಿ ಒಂದು ಊದುವಿಕೆಯನ್ನು ಊದಲಾದಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَحُمِلَتِ ٱلْأَرْضُ وَٱلْجِبَالُ فَدُكَّتَا دَكَّةً وَٰحِدَةً
Kannada Translation - Hamza Butur ಭೂಮಿ ಮತ್ತು ಪರ್ವತಗಳನ್ನು ಎತ್ತಲಾಗುವುದು ಮತ್ತು ಅವೆರಡನ್ನು ಒಂದೇ ಹೊಡೆತಕ್ಕೆ ಪುಡಿಪುಡಿ ಮಾಡಲಾಗುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَيَوْمَئِذٍ وَقَعَتِ ٱلْوَاقِعَةُ
Kannada Translation - Hamza Butur ಅಂದು ಆ ಸಂಭವಿಸುವಿಕೆಯು (ಪುನರುತ್ಥಾನವು) ಸಂಭವಿಸುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱنشَقَّتِ ٱلسَّمَآءُ فَهِىَ يَوْمَئِذٍ وَاهِيَةٌ
Kannada Translation - Hamza Butur ಆಕಾಶವು ಇಬ್ಭಾಗವಾಗುವುದು ಮತ್ತು ಅಂದು ಅದು ಬಲಹೀನವಾಗಿರುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلْمَلَكُ عَلَىٰٓ أَرْجَآئِهَا وَيَحْمِلُ عَرْشَ رَبِّكَ فَوْقَهُمْ يَوْمَئِذٍ ثَمَٰنِيَةٌ
Kannada Translation - Hamza Butur ದೇವದೂತರುಗಳು ಅದರ ತುದಿಗಳಲ್ಲಿರುವರು. ಅಂದು ಅವರ ಮೇಲ್ಭಾಗದಲ್ಲಿ ಎಂಟು (ದೇವದೂತರು) ನಿಮ್ಮ ಪರಿಪಾಲಕನ (ಅಲ್ಲಾಹನ) ಸಿಂಹಾಸನವನ್ನು ಎತ್ತಿಕೊಂಡಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَوْمَئِذٍ تُعْرَضُونَ لَا تَخْفَىٰ مِنكُمْ خَافِيَةٌ
Kannada Translation - Hamza Butur ಅಂದು ನಿಮ್ಮೆಲ್ಲರನ್ನೂ ಪ್ರದರ್ಶಿಸಲಾಗುವುದು. ನಿಮ್ಮ ಯಾವುದೇ ರಹಸ್ಯಗಳು ರಹಸ್ಯವಾಗಿರುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَمَّا مَنْ أُوتِىَ كِتَٰبَهُۥ بِيَمِينِهِۦ فَيَقُولُ هَآؤُمُ ٱقْرَءُوا۟ كِتَٰبِيَهْ
Kannada Translation - Hamza Butur ಆದ್ದರಿಂದ ಯಾರಿಗೆ ಅವನ ಕರ್ಮಪುಸ್ತಕವನ್ನು ಬಲಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ಇಗೋ! ನನ್ನ ಕರ್ಮಪುಸ್ತಕವನ್ನು ಓದಿರಿ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى ظَنَنتُ أَنِّى مُلَٰقٍ حِسَابِيَهْ
Kannada Translation - Hamza Butur ನಿಶ್ಚಯವಾಗಿಯೂ, ನಾನು ನನ್ನ ವಿಚಾರಣೆಯನ್ನು ಎದುರಿಸಬೇಕಾಗಿದೆಯೆಂದು ನನಗೆ ಪೂರ್ಣ ನಂಬಿಕೆಯಿತ್ತು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَهُوَ فِى عِيشَةٍ رَّاضِيَةٍ
Kannada Translation - Hamza Butur ಆದ್ದರಿಂದ ಅವನು ಸಂತೃಪ್ತ ಜೀವನದಲ್ಲಿರುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى جَنَّةٍ عَالِيَةٍ
Kannada Translation - Hamza Butur ಉನ್ನತ ಸ್ವರ್ಗದಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُطُوفُهَا دَانِيَةٌ
Kannada Translation - Hamza Butur ಅದರ ಹಣ್ಣುಗಳು ಬಾಗಿಕೊಂಡಿರುವುವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كُلُوا۟ وَٱشْرَبُوا۟ هَنِيٓـًٔۢا بِمَآ أَسْلَفْتُمْ فِى ٱلْأَيَّامِ ٱلْخَالِيَةِ
Kannada Translation - Hamza Butur (ಅವರೊಡನೆ ಹೇಳಲಾಗುವುದು): “ಕಳೆದುಹೋದ ದಿನಗಳಲ್ಲಿ ನೀವು ಮುಂದಕ್ಕೆ ಕಳುಹಿಸಿದ ಸತ್ಕರ್ಮಗಳ ಕಾರಣದಿಂದ ಸಂತೋಷವಾಗಿ ತಿನ್ನಿರಿ ಮತ್ತು ಕುಡಿಯಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّا مَنْ أُوتِىَ كِتَٰبَهُۥ بِشِمَالِهِۦ فَيَقُولُ يَٰلَيْتَنِى لَمْ أُوتَ كِتَٰبِيَهْ
Kannada Translation - Hamza Butur ಆದರೆ ಯಾರಿಗೆ ಅವನ ಕರ್ಮಪುಸ್ತಕವನ್ನು ಎಡಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ನನಗೆ ನನ್ನ ಕರ್ಮಪುಸ್ತಕವನ್ನು ನೀಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَمْ أَدْرِ مَا حِسَابِيَهْ
Kannada Translation - Hamza Butur ನನ್ನ ವಿಚಾರಣೆ ಏನೆಂದು ನನಗೆ ತಿಳಿಯದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَٰلَيْتَهَا كَانَتِ ٱلْقَاضِيَةَ
Kannada Translation - Hamza Butur ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَآ أَغْنَىٰ عَنِّى مَالِيَهْ
Kannada Translation - Hamza Butur ನನಗೆ ನನ್ನ ಆಸ್ತಿ ಪ್ರಯೋಜನ ನೀಡಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَلَكَ عَنِّى سُلْطَٰنِيَهْ
Kannada Translation - Hamza Butur ನನ್ನ ಅಧಿಕಾರವು ನನ್ನಿಂದ ಹೊರಟುಹೋಗಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
خُذُوهُ فَغُلُّوهُ
Kannada Translation - Hamza Butur (ಆಗ ಹೀಗೆ ಆಜ್ಞಾಪಿಸಲಾಗುವುದು): “ಅವನನ್ನು ಹಿಡಿಯಿರಿ; ಮತ್ತು ಅವನಿಗೆ ಸಂಕೋಲೆಯನ್ನು ತೊಡಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ ٱلْجَحِيمَ صَلُّوهُ
Kannada Translation - Hamza Butur ನಂತರ ಅವನನ್ನು ನರಕದಲ್ಲಿ ಹಾಕಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ فِى سِلْسِلَةٍ ذَرْعُهَا سَبْعُونَ ذِرَاعًا فَٱسْلُكُوهُ
Kannada Translation - Hamza Butur ನಂತರ ಎಪ್ಪತ್ತು ಮೊಳ ಅಳತೆಯಿರುವ ಸಂಕೋಲೆಯಲ್ಲಿ ಅವನನ್ನು ನುಸುಳಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُۥ كَانَ لَا يُؤْمِنُ بِٱللَّهِ ٱلْعَظِيمِ
Kannada Translation - Hamza Butur ನಿಶ್ಚಯವಾಗಿಯೂ, ಅವನು ಪರಮೋಚ್ಛನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಿರಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا يَحُضُّ عَلَىٰ طَعَامِ ٱلْمِسْكِينِ
Kannada Translation - Hamza Butur ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَيْسَ لَهُ ٱلْيَوْمَ هَٰهُنَا حَمِيمٌ
Kannada Translation - Hamza Butur ಆದ್ದರಿಂದ ಇಂದು ಅವನಿಗೆ ಇಲ್ಲಿ ಯಾವುದೇ ಆತ್ಮೀಯ ಗೆಳೆಯನಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا طَعَامٌ إِلَّا مِنْ غِسْلِينٍ
Kannada Translation - Hamza Butur ಕೀವಿನಿಂದಲೇ ಹೊರತು ಅವನಿಗೆ ಬೇರೆ ಆಹಾರವಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّا يَأْكُلُهُۥٓ إِلَّا ٱلْخَٰطِـُٔونَ
Kannada Translation - Hamza Butur ಅದನ್ನು ಪಾಪಿಗಳ ಹೊರತಾಗಿ ಯಾರೂ ಸೇವಿಸುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَآ أُقْسِمُ بِمَا تُبْصِرُونَ
Kannada Translation - Hamza Butur ಆದ್ದರಿಂದ ನೀವು ನೋಡುತ್ತಿರುವುದರ ಮೇಲೆ ನಾನು ಆಣೆ ಮಾಡುತ್ತೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا لَا تُبْصِرُونَ
Kannada Translation - Hamza Butur ನೀವು ನೋಡದಿರುವವುಗಳ ಮೇಲೂ (ಆಣೆ ಮಾಡುತ್ತೇನೆ).
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُۥ لَقَوْلُ رَسُولٍ كَرِيمٍ
Kannada Translation - Hamza Butur ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗಣ್ಯ ಸಂದೇಶವಾಹಕನ ವಚನವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا هُوَ بِقَوْلِ شَاعِرٍ قَلِيلًا مَّا تُؤْمِنُونَ
Kannada Translation - Hamza Butur ಇದು ಯಾವುದೇ ಕವಿಯ ಮಾತುಗಳಲ್ಲ. ನೀವು ಸ್ವಲ್ಪವೇ ವಿಶ್ವಾಸವಿಡುತ್ತೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا بِقَوْلِ كَاهِنٍ قَلِيلًا مَّا تَذَكَّرُونَ
Kannada Translation - Hamza Butur ಇದು ಜ್ಯೋತಿಷಿಯ ಮಾತುಗಳೂ ಅಲ್ಲ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تَنزِيلٌ مِّن رَّبِّ ٱلْعَٰلَمِينَ
Kannada Translation - Hamza Butur ಇದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಗ್ರಂಥವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَوْ تَقَوَّلَ عَلَيْنَا بَعْضَ ٱلْأَقَاوِيلِ
Kannada Translation - Hamza Butur ಅವರು (ಪ್ರವಾದಿ) ನಮ್ಮ ಮೇಲೆ ಕೆಲವು (ಸುಳ್ಳು) ಮಾತುಗಳನ್ನು ಆರೋಪಿಸುತ್ತಿದ್ದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَأَخَذْنَا مِنْهُ بِٱلْيَمِينِ
Kannada Translation - Hamza Butur ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ لَقَطَعْنَا مِنْهُ ٱلْوَتِينَ
Kannada Translation - Hamza Butur ನಂತರ ನಾವು ಅವರ ಅಪಧಮನಿಯನ್ನು ಕತ್ತರಿಸುತ್ತಿದ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَمَا مِنكُم مِّنْ أَحَدٍ عَنْهُ حَٰجِزِينَ
Kannada Translation - Hamza Butur ಆಗ ಅವರನ್ನು (ನಮ್ಮಿಂದ) ತಡೆಯುವವರು ನಿಮ್ಮಲ್ಲಿ ಯಾರೂ ಇರಲಾರರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَتَذْكِرَةٌ لِّلْمُتَّقِينَ
Kannada Translation - Hamza Butur ನಿಶ್ಚಯವಾಗಿಯೂ ಇದು ದೇವಭಯವುಳ್ಳವರಿಗೆ ಒಂದು ಉಪದೇಶವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّا لَنَعْلَمُ أَنَّ مِنكُم مُّكَذِّبِينَ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮಲ್ಲಿ ಇದನ್ನು ನಿಷೇಧಿಸುವವರಿದ್ದಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَحَسْرَةٌ عَلَى ٱلْكَٰفِرِينَ
Kannada Translation - Hamza Butur ನಿಶ್ಚಯವಾಗಿಯೂ ಅದು (ನಿಷೇಧಿಸುವುದು) ಸತ್ಯನಿಷೇಧಿಗಳ ವಿಷಾದಕ್ಕೆ ಕಾರಣವಾಗಲಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَحَقُّ ٱلْيَقِينِ
Kannada Translation - Hamza Butur ನಿಶ್ಚಯವಾಗಿಯೂ ಅದು ಖಚಿತ ಸತ್ಯವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَبِّحْ بِٱسْمِ رَبِّكَ ٱلْعَظِيمِ
Kannada Translation - Hamza Butur ಆದ್ದರಿಂದ ನೀವು ಪರಮೋಚ್ಛನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Qalam
ಸೂರ Al-Ma'aarij →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.