ಮುಖಪುಟ › ಸೂರಗಳು › ಸೂರ Al-Insaan
ಸೂರ Al-Insaan الانسان
31 ಆಯತ್‌ಗಳು · ಮದೀನಾ · ಅವತರಣ ಕ್ರಮ 98
بِسْمِ ٱللَّهِ ٱلرَّحْمَٰنِ ٱلرَّحِيمِ هَلْ أَتَىٰ عَلَى ٱلْإِنسَٰنِ حِينٌ مِّنَ ٱلدَّهْرِ لَمْ يَكُن شَيْـًٔا مَّذْكُورًا
Kannada Translation - Hamza Butur ಮನುಷ್ಯನು ಪ್ರಸ್ತಾಪಯೋಗ್ಯವೇ ಆಗಿರದಿದ್ದ ಒಂದು ಕಾಲವು ಅವನ ಮೇಲೆ ಕಳೆದುಹೋಗಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا خَلَقْنَا ٱلْإِنسَٰنَ مِن نُّطْفَةٍ أَمْشَاجٍ نَّبْتَلِيهِ فَجَعَلْنَٰهُ سَمِيعًۢا بَصِيرًا
Kannada Translation - Hamza Butur ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸಮ್ಮಿಶ್ರ ವೀರ್ಯದಿಂದ ಸೃಷ್ಟಿಸಿದೆವು. ಅವನನ್ನು ಪರೀಕ್ಷಿಸುವುದಕ್ಕಾಗಿ. ನಾವು ಅವನನ್ನು ಕೇಳುವವನಾಗಿ ಮತ್ತು ನೋಡುವವನಾಗಿ ಮಾಡಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا هَدَيْنَٰهُ ٱلسَّبِيلَ إِمَّا شَاكِرًا وَإِمَّا كَفُورًا
Kannada Translation - Hamza Butur ನಿಶ್ಚಯವಾಗಿಯೂ ನಾವು ಅವನಿಗೆ ಮಾರ್ಗವನ್ನು ತೋರಿಸಿದೆವು. ಅವನು ಒಂದೋ ಕೃತಜ್ಞನಾಗಲೆಂದು ಅಥವಾ ಕೃತಘ್ನನಾಗಲೆಂದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّآ أَعْتَدْنَا لِلْكَٰفِرِينَ سَلَٰسِلَا۟ وَأَغْلَٰلًا وَسَعِيرًا
Kannada Translation - Hamza Butur ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು, ಬೇಡಿಗಳನ್ನು ಮತ್ತು ಜ್ವಲಿಸುವ ನರಕವನ್ನು ಸಿದ್ಧಗೊಳಿಸಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ ٱلْأَبْرَارَ يَشْرَبُونَ مِن كَأْسٍ كَانَ مِزَاجُهَا كَافُورًا
Kannada Translation - Hamza Butur ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَيْنًا يَشْرَبُ بِهَا عِبَادُ ٱللَّهِ يُفَجِّرُونَهَا تَفْجِيرًا
Kannada Translation - Hamza Butur ಅದೊಂದು ಚಿಲುಮೆಯ ನೀರಾಗಿದೆ. ಅಲ್ಲಾಹನ ದಾಸರು ಅದರಿಂದ ಕುಡಿಯುವರು. ಅವರು (ಬಯಸಿದ ಸ್ಥಳದಲ್ಲಿ) ಅದನ್ನು ಚಿಮ್ಮಿ ಹರಿಯುವಂತೆ ಮಾಡುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يُوفُونَ بِٱلنَّذْرِ وَيَخَافُونَ يَوْمًا كَانَ شَرُّهُۥ مُسْتَطِيرًا
Kannada Translation - Hamza Butur ಅವರು (ಅಲ್ಲಾಹನ ದಾಸರು) ಯಾರೆಂದರೆ, ಹರಕೆಗಳನ್ನು ಈಡೇರಿಸುವವರು ಮತ್ತು ನಾಲ್ಕೂ ಕಡೆ ಕೆಡುಕು ಹರಡುವ ಒಂದು ದಿನವನ್ನು ಭಯಪಡುವವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيُطْعِمُونَ ٱلطَّعَامَ عَلَىٰ حُبِّهِۦ مِسْكِينًا وَيَتِيمًا وَأَسِيرًا
Kannada Translation - Hamza Butur ಅವರು ಆಹಾರದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಬಡವರಿಗೆ, ಅನಾಥರಿಗೆ ಮತ್ತು ಖೈದಿಗಳಿಗೆ ನೀಡುವವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّمَا نُطْعِمُكُمْ لِوَجْهِ ٱللَّهِ لَا نُرِيدُ مِنكُمْ جَزَآءً وَلَا شُكُورًا
Kannada Translation - Hamza Butur (ಅವರು ಹೇಳುತ್ತಾರೆ): “ನಾವು ನಿಮಗೆ ಆಹಾರ ನೀಡುವುದು ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ. ನಾವು ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಕೃತಜ್ಞತೆಯನ್ನು ಬಯಸುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا نَخَافُ مِن رَّبِّنَا يَوْمًا عَبُوسًا قَمْطَرِيرًا
Kannada Translation - Hamza Butur ನಾವು ನಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಆ ಕಠೋರ ಮತ್ತು ಆತಂಕಕಾರಿ ದಿನವನ್ನು ಭಯಪಡುತ್ತೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَوَقَىٰهُمُ ٱللَّهُ شَرَّ ذَٰلِكَ ٱلْيَوْمِ وَلَقَّىٰهُمْ نَضْرَةً وَسُرُورًا
Kannada Translation - Hamza Butur ಆದ್ದರಿಂದ ಅಲ್ಲಾಹು ಅವರನ್ನು ಆ ದಿನದ ಕೆಡುಕಿನಿಂದ ಕಾಪಾಡುವನು ಮತ್ತು ಅವರಿಗೆ ತಾಜಾತನ ಹಾಗೂ ಸಂತೋಷವನ್ನು ದಯಪಾಲಿಸುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَجَزَىٰهُم بِمَا صَبَرُوا۟ جَنَّةً وَحَرِيرًا
Kannada Translation - Hamza Butur ಅವರು ತಾಳ್ಮೆ ವಹಿಸಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗವನ್ನು ಮತ್ತು ರೇಷ್ಮೆ ಉಡುಪುಗಳನ್ನು ನೀಡುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مُّتَّكِـِٔينَ فِيهَا عَلَى ٱلْأَرَآئِكِ لَا يَرَوْنَ فِيهَا شَمْسًا وَلَا زَمْهَرِيرًا
Kannada Translation - Hamza Butur ಅವರು ಅಲ್ಲಿ ಸುಖಾಸನಗಳಲ್ಲಿ ಒರಗಿ ಕುಳಿತಿರುವರು. ಅವರು ಅಲ್ಲಿ ಬಿಸಿಲಿನ ಬೇಗೆಯನ್ನು ಅಥವಾ ಚಳಿಯ ಕಠೋರತೆಯನ್ನು ನೋಡಲಾರರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَدَانِيَةً عَلَيْهِمْ ظِلَٰلُهَا وَذُلِّلَتْ قُطُوفُهَا تَذْلِيلًا
Kannada Translation - Hamza Butur ಆ ಸ್ವರ್ಗಗಳ ನೆರಳು ಅವರ ಮೇಲೆ ಚಾಚಿಕೊಂಡಿರುವುದು. ಅದರ ಹಣ್ಣುಗಳು ಮತ್ತು ಗೊಂಚಲುಗಳು ಬಾಗಿಕೊಂಡಿರುವುವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيُطَافُ عَلَيْهِم بِـَٔانِيَةٍ مِّن فِضَّةٍ وَأَكْوَابٍ كَانَتْ قَوَارِيرَا۠
Kannada Translation - Hamza Butur ಅವರ ಸುತ್ತಲೂ ಬೆಳ್ಳಿಯ ಪಾತ್ರೆಗಳು ಮತ್ತು ಸ್ಫಟಿಕದ ಲೋಟಗಳೊಂದಿಗೆ (ಪರಿಚಾರಕರು) ಸುತ್ತುತ್ತಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَوَارِيرَا۟ مِن فِضَّةٍ قَدَّرُوهَا تَقْدِيرًا
Kannada Translation - Hamza Butur ಅವು ಬೆಳ್ಳಿಯ ಸ್ಫಟಿಕಗಳಾಗಿವೆ. ಅವರು ಅದನ್ನು ಸರಿಯಾದ ಅಳತೆಯಿಂದ ನಿರ್ಣಯಿಸುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيُسْقَوْنَ فِيهَا كَأْسًا كَانَ مِزَاجُهَا زَنجَبِيلًا
Kannada Translation - Hamza Butur ಅಲ್ಲಿ ಅವರಿಗೆ ಒಂದು ಲೋಟವನ್ನು ಕುಡಿಯಲು ನೀಡಲಾಗುವುದು. ಅದರ ಮಿಶ್ರಣವು ಶುಂಠಿಯದ್ದಾಗಿರುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَيْنًا فِيهَا تُسَمَّىٰ سَلْسَبِيلًا
Kannada Translation - Hamza Butur ಸ್ವರ್ಗದ ಸಲ್ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಿಂದ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيَطُوفُ عَلَيْهِمْ وِلْدَٰنٌ مُّخَلَّدُونَ إِذَا رَأَيْتَهُمْ حَسِبْتَهُمْ لُؤْلُؤًا مَّنثُورًا
Kannada Translation - Hamza Butur ಅವರ ಸುತ್ತಲೂ ಚಿರಂಜೀವಿಗಳಾದ ಹುಡುಗರು ಸುತ್ತುತ್ತಿರುವರು. ನೀವು ಅವರನ್ನು ನೋಡಿದರೆ ಅವರನ್ನು ಚದುರಿದ ಮುತ್ತುಗಳೆಂದು ಭಾವಿಸುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِذَا رَأَيْتَ ثَمَّ رَأَيْتَ نَعِيمًا وَمُلْكًا كَبِيرًا
Kannada Translation - Hamza Butur ನೀವು ಅಲ್ಲಿ ಯಾವ ಕಡೆಗೆ ದೃಷ್ಟಿ ಹರಿಸಿದರೂ ಅಲ್ಲಿ ಐಶ್ವರ್ಯಗಳನ್ನು ಮತ್ತು ಮಹಾ ಸಾಮ್ರಾಜ್ಯವನ್ನು ಕಾಣುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَٰلِيَهُمْ ثِيَابُ سُندُسٍ خُضْرٌ وَإِسْتَبْرَقٌ وَحُلُّوٓا۟ أَسَاوِرَ مِن فِضَّةٍ وَسَقَىٰهُمْ رَبُّهُمْ شَرَابًا طَهُورًا
Kannada Translation - Hamza Butur ಅವರ ಮೇಲೆ ಹಸಿರು ಬಣ್ಣದ ನಯವಾದ ಮತ್ತು ದಪ್ಪಗಿನ ರೇಷ್ಮೆ ಉಡುಪುಗಳಿರುವುವು. ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು. ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಶುದ್ಧವಾದ ಪಾನೀಯವನ್ನು ಕುಡಿಸುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذَا كَانَ لَكُمْ جَزَآءً وَكَانَ سَعْيُكُم مَّشْكُورًا
Kannada Translation - Hamza Butur (ಅವರೊಡನೆ ಹೇಳಲಾಗುವುದು): “ಇವೆಲ್ಲವೂ ನಿಮಗಿರುವ ಪ್ರತಿಫಲವಾಗಿವೆ. ನಿಮ್ಮ ಪರಿಶ್ರಮಗಳು ಶ್ಲಾಘನಾರ್ಹವಾಗಿವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا نَحْنُ نَزَّلْنَا عَلَيْكَ ٱلْقُرْءَانَ تَنزِيلًا
Kannada Translation - Hamza Butur ನಿಶ್ಚಯವಾಗಿಯೂ ನಾವು ನಿಮಗೆ ಈ ಕುರ್‌ಆನನ್ನು ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱصْبِرْ لِحُكْمِ رَبِّكَ وَلَا تُطِعْ مِنْهُمْ ءَاثِمًا أَوْ كَفُورًا
Kannada Translation - Hamza Butur ಆದ್ದರಿಂದ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಪನ್ನು ತಾಳ್ಮೆಯಿಂದ ಕಾಯುತ್ತಿರಿ. ಅವರಲ್ಲಿ ಯಾವುದೇ ಪಾಪಿಯನ್ನು ಅಥವಾ ಕೃತಜ್ಞತೆಯಿಲ್ಲದವನನ್ನು ಅನುಸರಿಸಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱذْكُرِ ٱسْمَ رَبِّكَ بُكْرَةً وَأَصِيلًا
Kannada Translation - Hamza Butur ಮುಂಜಾನೆ ಮತ್ತು ಸಂಜೆ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمِنَ ٱلَّيْلِ فَٱسْجُدْ لَهُۥ وَسَبِّحْهُ لَيْلًا طَوِيلًا
Kannada Translation - Hamza Butur ರಾತ್ರಿಯಲ್ಲಿ ಅವನಿಗೆ ಸಾಷ್ಟಾಂಗ ಮಾಡಿರಿ ಮತ್ತು ದೀರ್ಘ ರಾತ್ರಿಯ ತನಕ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰٓؤُلَآءِ يُحِبُّونَ ٱلْعَاجِلَةَ وَيَذَرُونَ وَرَآءَهُمْ يَوْمًا ثَقِيلًا
Kannada Translation - Hamza Butur ನಿಶ್ಚಯವಾಗಿಯೂ ಇವರು ಇಹಲೋಕವನ್ನು ಇಷ್ಟಪಡುತ್ತಾರೆ ಮತ್ತು ಭಾರವಾದ ಒಂದು ದಿನವನ್ನು ತಮ್ಮ ಬೆನ್ನ ಹಿಂದೆ ತೊರೆಯುತ್ತಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نَّحْنُ خَلَقْنَٰهُمْ وَشَدَدْنَآ أَسْرَهُمْ وَإِذَا شِئْنَا بَدَّلْنَآ أَمْثَٰلَهُمْ تَبْدِيلًا
Kannada Translation - Hamza Butur ನಾವು ಅವರನ್ನು ಸೃಷ್ಟಿಸಿದ್ದೇವೆ ಮತ್ತು ಅವರ ದೇಹ ರಚನೆಯನ್ನು ಸದೃಢಗೊಳಿಸಿದ್ದೇವೆ. ನಾವು ಇಚ್ಛಿಸಿದರೆ ಅವರ ಬದಲಿಗೆ ಅವರಂತಿರುವವರನ್ನು ತರುತ್ತೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذِهِۦ تَذْكِرَةٌ فَمَن شَآءَ ٱتَّخَذَ إِلَىٰ رَبِّهِۦ سَبِيلًا
Kannada Translation - Hamza Butur ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗಿರುವ ಮಾರ್ಗವನ್ನು ಸ್ವೀಕರಿಸಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا تَشَآءُونَ إِلَّآ أَن يَشَآءَ ٱللَّهُ إِنَّ ٱللَّهَ كَانَ عَلِيمًا حَكِيمًا
Kannada Translation - Hamza Butur ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يُدْخِلُ مَن يَشَآءُ فِى رَحْمَتِهِۦ وَٱلظَّٰلِمِينَ أَعَدَّ لَهُمْ عَذَابًا أَلِيمًۢا
Kannada Translation - Hamza Butur ಅವನು ಇಚ್ಛಿಸುವವರನ್ನು ಅವನ ದಯೆಯಲ್ಲಿ ಸೇರಿಸುತ್ತಾನೆ. ಅಕ್ರಮಿಗಳಿಗೆ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Qiyaama
ಸೂರ Al-Mursalaat →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.