caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Fajr الفجر

30 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 10

بِسْمِ ٱللَّهِ ٱلرَّحْمَٰنِ ٱلرَّحِيمِ وَٱلْفَجْرِ

Kannada Translation - Hamza Buturಪ್ರಭಾತದ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَيَالٍ عَشْرٍ

Kannada Translation - Hamza Buturಹತ್ತು ರಾತ್ರಿಗಳ ಮೇಲಾಣೆ![1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلشَّفْعِ وَٱلْوَتْرِ

Kannada Translation - Hamza Buturಸಮ ಮತ್ತು ಬೆಸಗಳ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّيْلِ إِذَا يَسْرِ

Kannada Translation - Hamza Buturರಾತ್ರಿಯ ಮೇಲಾಣೆ! ಅದು ಚಲಿಸತೊಡಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَلْ فِى ذَٰلِكَ قَسَمٌ لِّذِى حِجْرٍ

Kannada Translation - Hamza Buturಇವುಗಳಲ್ಲಿ ಬುದ್ಧಿಯಿರುವವನ ಮಟ್ಟಿಗೆ ಪರ್ಯಾಪ್ತ ಆಣೆಯಿದೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ تَرَ كَيْفَ فَعَلَ رَبُّكَ بِعَادٍ

Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಆದ್ ಗೋತ್ರದವರೊಂದಿಗೆ ಏನು ಮಾಡಿದನೆಂದು ನೀವು ನೋಡಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِرَمَ ذَاتِ ٱلْعِمَادِ

Kannada Translation - Hamza Buturಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّتِى لَمْ يُخْلَقْ مِثْلُهَا فِى ٱلْبِلَٰدِ

Kannada Translation - Hamza Buturಅವರಂತಿರುವ ಜನರನ್ನು ಯಾವುದೇ ಊರಲ್ಲೂ ಸೃಷ್ಟಿಸಲಾಗಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَثَمُودَ ٱلَّذِينَ جَابُوا۟ ٱلصَّخْرَ بِٱلْوَادِ

Kannada Translation - Hamza Buturಕಣಿವೆಯಲ್ಲಿ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಗೋತ್ರದವರೊಂದಿಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَفِرْعَوْنَ ذِى ٱلْأَوْتَادِ

Kannada Translation - Hamza Buturಗೂಟಗಳ ಒಡೆಯನಾದ ಫರೋಹ‍ನೊಂದಿಗೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ طَغَوْا۟ فِى ٱلْبِلَٰدِ

Kannada Translation - Hamza Buturಅವರೆಲ್ಲರೂ ಊರುಗಳಲ್ಲಿ ಅತಿರೇಕವೆಸಗುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَكْثَرُوا۟ فِيهَا ٱلْفَسَادَ

Kannada Translation - Hamza Buturಕಿಡಿಗೇಡಿತನವನ್ನು ಅತಿಯಾಗಿ ಹಬ್ಬಿಸಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَصَبَّ عَلَيْهِمْ رَبُّكَ سَوْطَ عَذَابٍ

Kannada Translation - Hamza Buturಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ رَبَّكَ لَبِٱلْمِرْصَادِ

Kannada Translation - Hamza Buturನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಗಾವಣೆಯಲ್ಲಿದ್ದಾನೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَمَّا ٱلْإِنسَٰنُ إِذَا مَا ٱبْتَلَىٰهُ رَبُّهُۥ فَأَكْرَمَهُۥ وَنَعَّمَهُۥ فَيَقُولُ رَبِّىٓ أَكْرَمَنِ

Kannada Translation - Hamza Buturಮನುಷ್ಯನ ಸ್ಥಿತಿ ಹೇಗಿದೆಯೆಂದರೆ, ಅವನ ಪರಿಪಾಲಕನು (ಅಲ್ಲಾಹು) ಅವನನ್ನು ಪರೀಕ್ಷಿಸಿ ಅವನಿಗೆ ಗೌರವ ಮತ್ತು ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಗಣ್ಯ ವ್ಯಕ್ತಿಯಾಗಿ ಮಾಡಿದ್ದಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّآ إِذَا مَا ٱبْتَلَىٰهُ فَقَدَرَ عَلَيْهِ رِزْقَهُۥ فَيَقُولُ رَبِّىٓ أَهَٰنَنِ

Kannada Translation - Hamza Buturಆದರೆ ಅವನು ಮನುಷ್ಯನನ್ನು ಪರೀಕ್ಷಿಸಿ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ನಿಂದನಾರ್ಹನಾಗಿ ಮಾಡಿದ್ದಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا بَل لَّا تُكْرِمُونَ ٱلْيَتِيمَ

Kannada Translation - Hamza Buturಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಅನಾಥರಿಗೆ ಗೌರವ ನೀಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا تَحَٰٓضُّونَ عَلَىٰ طَعَامِ ٱلْمِسْكِينِ

Kannada Translation - Hamza Buturಬಡವರಿಗೆ ಅನ್ನ ನೀಡಲು ಪರಸ್ಪರ ಉತ್ತೇಜಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَأْكُلُونَ ٱلتُّرَاثَ أَكْلًا لَّمًّا

Kannada Translation - Hamza Buturನೀವು ಉತ್ತರಾಧಿಕಾರದ ಆಸ್ತಿಯನ್ನು ಬಾಚಿ ಬಾಚಿ ತಿನ್ನುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتُحِبُّونَ ٱلْمَالَ حُبًّا جَمًّا

Kannada Translation - Hamza Buturನೀವು ಧನವನ್ನು ಅತಿಯಾಗಿ ಪ್ರೀತಿಸುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِذَا دُكَّتِ ٱلْأَرْضُ دَكًّا دَكًّا

Kannada Translation - Hamza Buturಅಲ್ಲ (ನಿಮ್ಮ ಸ್ಥಿತಿ ಹಾಗಾಗಬಾರದು). ಭೂಮಿಯನ್ನು ಸಂಪೂರ್ಣ ಪುಡಿ ಮಾಡಿ ಸಮತಟ್ಟುಗೊಳಿಸುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَآءَ رَبُّكَ وَٱلْمَلَكُ صَفًّا صَفًّا

Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಬರುವಾಗ ಮತ್ತು ಸಾಲುಸಾಲಾಗಿ ದೇವದೂತರು‍ಗಳು ಬರುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجِا۟ىٓءَ يَوْمَئِذٍۭ بِجَهَنَّمَ يَوْمَئِذٍ يَتَذَكَّرُ ٱلْإِنسَٰنُ وَأَنَّىٰ لَهُ ٱلذِّكْرَىٰ

Kannada Translation - Hamza Buturಆ ದಿನ ನರಕವನ್ನು ತರಲಾಗುವುದು. ಅಂದು ಮನುಷ್ಯನಿಗೆ ಮನವರಿಕೆಯಾಗುವುದು. ಆದರೆ ಆಗ ಮನವರಿಕೆಯಾಗುವುದರಿಂದ ಏನು ಪ್ರಯೋಜನ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَقُولُ يَٰلَيْتَنِى قَدَّمْتُ لِحَيَاتِى

Kannada Translation - Hamza Buturಅವನು ಹೇಳುವನು: “ಅಯ್ಯೋ! ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಸಿದ್ಧತೆಗಳನ್ನು ಮಾಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَيَوْمَئِذٍ لَّا يُعَذِّبُ عَذَابَهُۥٓ أَحَدٌ

Kannada Translation - Hamza Buturಅಂದು ಅಲ್ಲಾಹು ನೀಡುವಂತಹ (ಕಠೋರ) ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يُوثِقُ وَثَاقَهُۥٓ أَحَدٌ

Kannada Translation - Hamza Buturಅವನು ಹಿಡಿದು ಬಂಧಿಸುವಂತೆ ಹಿಡಿದು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰٓأَيَّتُهَا ٱلنَّفْسُ ٱلْمُطْمَئِنَّةُ

Kannada Translation - Hamza Buturಓ ಸಮಾಧಾನದಲ್ಲಿರುವ ಆತ್ಮವೇ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱرْجِعِىٓ إِلَىٰ رَبِّكِ رَاضِيَةً مَّرْضِيَّةً

Kannada Translation - Hamza Buturನಿನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳು—ನೀನು ಅವನ ಬಗ್ಗೆ ಸಂಪ್ರೀತನಾಗಿರುವ ಮತ್ತು ಅವನು ನಿನ್ನ ಬಗ್ಗೆ ಸಂಪ್ರೀತನಾಗಿರುವ ಸ್ಥಿತಿಯಲ್ಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱدْخُلِى فِى عِبَٰدِى

Kannada Translation - Hamza Buturನನ್ನ ವಿಶೇಷ ದಾಸರೊಡನೆ ಸೇರಿಕೋ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱدْخُلِى جَنَّتِى

Kannada Translation - Hamza Buturನನ್ನ ಸ್ವರ್ಗಕ್ಕೆ ಪ್ರವೇಶಿಸು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70