caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Ghaashiya الغاشية

26 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 68

بِسْمِ ٱللَّهِ ٱلرَّحْمَٰنِ ٱلرَّحِيمِ هَلْ أَتَىٰكَ حَدِيثُ ٱلْغَٰشِيَةِ

Kannada Translation - Hamza Buturಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وُجُوهٌ يَوْمَئِذٍ خَٰشِعَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳು ದೀನವಾಗಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَامِلَةٌ نَّاصِبَةٌ

Kannada Translation - Hamza Buturಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَصْلَىٰ نَارًا حَامِيَةً

Kannada Translation - Hamza Buturಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تُسْقَىٰ مِنْ عَيْنٍ ءَانِيَةٍ

Kannada Translation - Hamza Buturಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّيْسَ لَهُمْ طَعَامٌ إِلَّا مِن ضَرِيعٍ

Kannada Translation - Hamza Buturಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا يُسْمِنُ وَلَا يُغْنِى مِن جُوعٍ

Kannada Translation - Hamza Buturಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وُجُوهٌ يَوْمَئِذٍ نَّاعِمَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّسَعْيِهَا رَاضِيَةٌ

Kannada Translation - Hamza Buturಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِى جَنَّةٍ عَالِيَةٍ

Kannada Translation - Hamza Buturಅವರು ಉನ್ನತ ಸ್ವರ್ಗಗಳಲ್ಲಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا تَسْمَعُ فِيهَا لَٰغِيَةً

Kannada Translation - Hamza Buturಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهَا عَيْنٌ جَارِيَةٌ

Kannada Translation - Hamza Buturಅದರಲ್ಲಿ ಹರಿಯುವ ತೊರೆಯಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهَا سُرُرٌ مَّرْفُوعَةٌ

Kannada Translation - Hamza Buturಅಲ್ಲಿ ಎತ್ತರದ ಮಂಚಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَكْوَابٌ مَّوْضُوعَةٌ

Kannada Translation - Hamza Buturಜೋಡಿಸಿಡಲಾದ ಲೋಟಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَمَارِقُ مَصْفُوفَةٌ

Kannada Translation - Hamza Buturಸಾಲಾಗಿಡಲಾದ ದಿಂಬುಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَزَرَابِىُّ مَبْثُوثَةٌ

Kannada Translation - Hamza Buturಹರಡಿಕೊಂಡಿರುವ ಜಮಖಾನೆಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَلَا يَنظُرُونَ إِلَى ٱلْإِبِلِ كَيْفَ خُلِقَتْ

Kannada Translation - Hamza Buturಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِلَى ٱلسَّمَآءِ كَيْفَ رُفِعَتْ

Kannada Translation - Hamza Buturಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِلَى ٱلْجِبَالِ كَيْفَ نُصِبَتْ

Kannada Translation - Hamza Buturಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِلَى ٱلْأَرْضِ كَيْفَ سُطِحَتْ

Kannada Translation - Hamza Buturಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَكِّرْ إِنَّمَآ أَنتَ مُذَكِّرٌ

Kannada Translation - Hamza Butur(ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّسْتَ عَلَيْهِم بِمُصَيْطِرٍ

Kannada Translation - Hamza Buturನೀವು ಅವರ ಮೇಲೆ ಅಧಿಕಾರವಿರುವವರಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا مَن تَوَلَّىٰ وَكَفَرَ

Kannada Translation - Hamza Buturಆದರೆ ವಿಮುಖನಾಗುವವನು ಮತ್ತು ನಿಷೇಧಿಸುವವನು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَيُعَذِّبُهُ ٱللَّهُ ٱلْعَذَابَ ٱلْأَكْبَرَ

Kannada Translation - Hamza Buturಅವನಿಗೆ ಅಲ್ಲಾಹು ಅತಿದೊಡ್ಡ ಶಿಕ್ಷೆಯನ್ನು ನೀಡುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ إِلَيْنَآ إِيَابَهُمْ

Kannada Translation - Hamza Buturನಿಶ್ಚಯವಾಗಿಯೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِنَّ عَلَيْنَا حِسَابَهُم

Kannada Translation - Hamza Buturನಂತರ ಅವರನ್ನು ವಿಚಾರಣೆ ಮಾಡುವುದು ನಮ್ಮ ಹೊಣೆಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70