caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Mutaffifin المطففين

36 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 86

بِسْمِ ٱللَّهِ ٱلرَّحْمَٰنِ ٱلرَّحِيمِ وَيْلٌ لِّلْمُطَفِّفِينَ

Kannada Translation - Hamza Buturಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡುವವರಿಗೆ ಮಹಾ ನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ إِذَا ٱكْتَالُوا۟ عَلَى ٱلنَّاسِ يَسْتَوْفُونَ

Kannada Translation - Hamza Buturಅವರು ಯಾರೆಂದರೆ ಜನರಿಂದ ಅಳತೆ ಮಾಡಿ ಪಡೆಯುವಾಗ ಪೂರ್ಣವಾಗಿ ಪಡೆಯುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا كَالُوهُمْ أَو وَّزَنُوهُمْ يُخْسِرُونَ

Kannada Translation - Hamza Buturಆದರೆ ಜನರಿಗೆ ಅಳತೆ ಮಾಡಿ ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿಮೆ ಮಾಡುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَا يَظُنُّ أُو۟لَٰٓئِكَ أَنَّهُم مَّبْعُوثُونَ

Kannada Translation - Hamza Buturಮರಣಾನಂತರ ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೆಂಬ ಪ್ರಜ್ಞೆ ಅವರಿಗಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِيَوْمٍ عَظِيمٍ

Kannada Translation - Hamza Buturಆ ಮಹಾ ದಿನಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَقُومُ ٱلنَّاسُ لِرَبِّ ٱلْعَٰلَمِينَ

Kannada Translation - Hamza Buturಜನರೆಲ್ಲರೂ ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಮುಂದೆ ಎದ್ದು ನಿಲ್ಲುವ ದಿನ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّ كِتَٰبَ ٱلْفُجَّارِ لَفِى سِجِّينٍ

Kannada Translation - Hamza Buturನಿಶ್ಚಯವಾಗಿಯೂ ದುಷ್ಕರ್ಮಿಗಳ ಕರ್ಮದಾಖಲೆಯು ಸಿಜ್ಜೀನ್‍ನಲ್ಲಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَدْرَىٰكَ مَا سِجِّينٌ

Kannada Translation - Hamza Buturಸಿಜ್ಜೀನ್ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كِتَٰبٌ مَّرْقُومٌ

Kannada Translation - Hamza Buturಅದು ನಮೂದಿಸಲಾದ ಪುಸ್ತಕವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ಮಹಾ ನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ يُكَذِّبُونَ بِيَوْمِ ٱلدِّينِ

Kannada Translation - Hamza Buturಅವರು ಯಾರೆಂದರೆ ಪ್ರತಿಫಲ ದಿನವನ್ನು ನಿಷೇಧಿಸುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يُكَذِّبُ بِهِۦٓ إِلَّا كُلُّ مُعْتَدٍ أَثِيمٍ

Kannada Translation - Hamza Buturಎಲ್ಲೆ ಮೀರಿ ನಡೆಯುವವರು ಮತ್ತು ಮಹಾಪಾಪಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذَا تُتْلَىٰ عَلَيْهِ ءَايَٰتُنَا قَالَ أَسَٰطِيرُ ٱلْأَوَّلِينَ

Kannada Translation - Hamza Buturಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ ಅದನ್ನು “ಪ್ರಾಚೀನ ಕಾಲದ ಜನರ ಪುರಾಣಗಳು” ಎನ್ನುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا بَلْ رَانَ عَلَىٰ قُلُوبِهِم مَّا كَانُوا۟ يَكْسِبُونَ

Kannada Translation - Hamza Buturಅಲ್ಲ, ಅವರು ಮಾಡುತ್ತಿದ್ದ ದುಷ್ಕರ್ಮಗಳ ಕಾರಣ ಕಪ್ಪುಕಲೆಗಳು ಅವರ ಹೃದಯಗಳನ್ನು ಆವರಿಸಿಕೊಂಡಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّهُمْ عَن رَّبِّهِمْ يَوْمَئِذٍ لَّمَحْجُوبُونَ

Kannada Translation - Hamza Buturಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِنَّهُمْ لَصَالُوا۟ ٱلْجَحِيمِ

Kannada Translation - Hamza Buturನಂತರ ನಿಶ್ಚಯವಾಗಿಯೂ ಅವರನ್ನು ಧಗಧಗಿಸುವ ನರಕಕ್ಕೆ ಎಸೆಯಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ يُقَالُ هَٰذَا ٱلَّذِى كُنتُم بِهِۦ تُكَذِّبُونَ

Kannada Translation - Hamza Buturನಂತರ ಅವರೊಡನೆ ಹೇಳಲಾಗುವುದು: “ಇದೇ ನೀವು ನಿಷೇಧಿಸುತ್ತಿದ್ದ ನರಕ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّ كِتَٰبَ ٱلْأَبْرَارِ لَفِى عِلِّيِّينَ

Kannada Translation - Hamza Buturಇಲ್ಲವೇ ಇಲ್ಲ. ನಿಶ್ಚಯವಾಗಿಯೂ ಸಜ್ಜನರ ಕರ್ಮದಾಖಲೆಯು ಇಲ್ಲಿಯ್ಯೂನ್‍ನಲ್ಲಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَدْرَىٰكَ مَا عِلِّيُّونَ

Kannada Translation - Hamza Buturಇಲ್ಲಿಯ್ಯೂನ್ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كِتَٰبٌ مَّرْقُومٌ

Kannada Translation - Hamza Buturಅದು ನಮೂದಿಸಲಾದ ಪುಸ್ತಕವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَشْهَدُهُ ٱلْمُقَرَّبُونَ

Kannada Translation - Hamza Buturಸಾಮೀಪ್ಯ ಪಡೆದವರು (ದೇವದೂತರು) ಅದರ ಬಳಿ ಉಪಸ್ಥಿತರಾಗುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلْأَبْرَارَ لَفِى نَعِيمٍ

Kannada Translation - Hamza Buturನಿಶ್ಚಯವಾಗಿಯೂ ಸಜ್ಜನರು ಸುಖಾಡಂಬರಗಳಲ್ಲಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَى ٱلْأَرَآئِكِ يَنظُرُونَ

Kannada Translation - Hamza Buturಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَعْرِفُ فِى وُجُوهِهِمْ نَضْرَةَ ٱلنَّعِيمِ

Kannada Translation - Hamza Buturನೀವು ಅವರ ಮುಖಗಳಲ್ಲಿ ಆ ಸುಖಗಳ ಹೊಳಪನ್ನು ಗುರುತಿಸುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُسْقَوْنَ مِن رَّحِيقٍ مَّخْتُومٍ

Kannada Translation - Hamza Buturಅವರಿಗೆ ಮೊಹರು ಹಾಕಲಾದ ಶುದ್ಧ ಮದ್ಯವನ್ನು ಕುಡಿಯಲು ನೀಡಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خِتَٰمُهُۥ مِسْكٌ وَفِى ذَٰلِكَ فَلْيَتَنَافَسِ ٱلْمُتَنَٰفِسُونَ

Kannada Translation - Hamza Buturಅದರ ಮೊಹರು ಕಸ್ತೂರಿಯಾಗಿದೆ. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِزَاجُهُۥ مِن تَسْنِيمٍ

Kannada Translation - Hamza Buturಅದರ ಮಿಶ್ರಣವು ತಸ್ನೀಮ್[1] ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَيْنًا يَشْرَبُ بِهَا ٱلْمُقَرَّبُونَ

Kannada Translation - Hamza Buturಅಂದರೆ ಸಾಮೀಪ್ಯ ಪಡೆದವರು ಕುಡಿಯುವ ಚಿಲುಮೆಯ ನೀರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ أَجْرَمُوا۟ كَانُوا۟ مِنَ ٱلَّذِينَ ءَامَنُوا۟ يَضْحَكُونَ

Kannada Translation - Hamza Buturನಿಶ್ಚಯವಾಗಿಯೂ (ಇಹಲೋಕದಲ್ಲಿ) ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡಿ ನಗುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا مَرُّوا۟ بِهِمْ يَتَغَامَزُونَ

Kannada Translation - Hamza Buturಅವರು ಸತ್ಯವಿಶ್ವಾಸಿಗಳ ಬಳಿಯಿಂದ ಹೋಗುವಾಗ ಒಬ್ಬರು ಇನ್ನೊಬ್ಬರಿಗೆ ಕಣ್ಣಿನಿಂದ ಸನ್ನೆ ಮಾಡುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱنقَلَبُوٓا۟ إِلَىٰٓ أَهْلِهِمُ ٱنقَلَبُوا۟ فَكِهِينَ

Kannada Translation - Hamza Buturಅವರ ತಮ್ಮ ಮನೆಯವರ ಬಳಿಗೆ ಮರಳುವಾಗ ಮೋಜು ಮಾಡುತ್ತಾ ಮರಳುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا رَأَوْهُمْ قَالُوٓا۟ إِنَّ هَٰٓؤُلَآءِ لَضَآلُّونَ

Kannada Translation - Hamza Buturಸತ್ಯವಿಶ್ವಾಸಿಗಳನ್ನು ಕಂಡರೆ, “ನಿಶ್ಚಯವಾಗಿಯೂ ಇವರೆಲ್ಲರೂ ದಾರಿತಪ್ಪಿದವರು” ಎನ್ನುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أُرْسِلُوا۟ عَلَيْهِمْ حَٰفِظِينَ

Kannada Translation - Hamza Buturಇವರನ್ನು ಅವರ (ಸತ್ಯವಿಶ್ವಾಸಿಗಳ) ಕಾವಲುಗಾರರಾಗಿ ಮಾಡಿ ಕಳುಹಿಸಲಾಗಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْيَوْمَ ٱلَّذِينَ ءَامَنُوا۟ مِنَ ٱلْكُفَّارِ يَضْحَكُونَ

Kannada Translation - Hamza Buturಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ನೋಡಿ ನಗುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَى ٱلْأَرَآئِكِ يَنظُرُونَ

Kannada Translation - Hamza Buturಅವರು ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَلْ ثُوِّبَ ٱلْكُفَّارُ مَا كَانُوا۟ يَفْعَلُونَ

Kannada Translation - Hamza Buturಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗಿದೆಯೋ ಎಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70