caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Inshiqaaq الإنشقاق

25 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 83

بِسْمِ ٱللَّهِ ٱلرَّحْمَٰنِ ٱلرَّحِيمِ إِذَا ٱلسَّمَآءُ ٱنشَقَّتْ

Kannada Translation - Hamza Buturಆಕಾಶವು ಒಡೆದು ಸೀಳುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَذِنَتْ لِرَبِّهَا وَحُقَّتْ

Kannada Translation - Hamza Buturಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلْأَرْضُ مُدَّتْ

Kannada Translation - Hamza Buturಭೂಮಿಯು ವಿಸ್ತರಿಸಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَلْقَتْ مَا فِيهَا وَتَخَلَّتْ

Kannada Translation - Hamza Buturಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَذِنَتْ لِرَبِّهَا وَحُقَّتْ

Kannada Translation - Hamza Buturಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰٓأَيُّهَا ٱلْإِنسَٰنُ إِنَّكَ كَادِحٌ إِلَىٰ رَبِّكَ كَدْحًا فَمُلَٰقِيهِ

Kannada Translation - Hamza Buturಓ ಮನುಷ್ಯನೇ! ನೀನು ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ತನಕ ಎಲ್ಲಾ ರೀತಿಯ ಕಠಿಣ ಪರಿಶ್ರಮ ಮಾಡಿ ನಂತರ ಅವನನ್ನು ಭೇಟಿಯಾಗುವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَمَّا مَنْ أُوتِىَ كِتَٰبَهُۥ بِيَمِينِهِۦ

Kannada Translation - Hamza Buturಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುತ್ತದೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَسَوْفَ يُحَاسَبُ حِسَابًا يَسِيرًا

Kannada Translation - Hamza Buturಅವನನ್ನು ಅತ್ಯಂತ ಸರಳವಾಗಿ ವಿಚಾರಣೆ ಮಾಡಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَنقَلِبُ إِلَىٰٓ أَهْلِهِۦ مَسْرُورًا

Kannada Translation - Hamza Buturಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا مَنْ أُوتِىَ كِتَٰبَهُۥ وَرَآءَ ظَهْرِهِۦ

Kannada Translation - Hamza Buturಆದರೆ ಯಾರಿಗೆ ಅವನ ಗ್ರಂಥವನ್ನು ಬೆನ್ನ ಹಿಂದಿನಿಂದ ನೀಡಲಾಗುತ್ತದೋ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَسَوْفَ يَدْعُوا۟ ثُبُورًا

Kannada Translation - Hamza Buturಅವನು ಸಾವನ್ನು ಕರೆಯುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَصْلَىٰ سَعِيرًا

Kannada Translation - Hamza Buturಮತ್ತು ಧಗಧಗನೆ ಉರಿಯುವ ನರಕಾಗ್ನಿಯನ್ನು ಪ್ರವೇಶಿಸುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُۥ كَانَ فِىٓ أَهْلِهِۦ مَسْرُورًا

Kannada Translation - Hamza Buturನಿಶ್ಚಯವಾಗಿಯೂ ಅವನು (ಇಹಲೋಕದಲ್ಲಿ) ಅವನ ಮನೆಯವರೊಡನೆ ಸಂತೋಷವಾಗಿದ್ದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُۥ ظَنَّ أَن لَّن يَحُورَ

Kannada Translation - Hamza Buturಅಲ್ಲಾಹನ ಬಳಿಗೆ ಮರಳಿ ಹೋಗುವುದೇ ಇಲ್ಲವೆಂದು ಅವನು ಭಾವಿಸಿದ್ದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلَىٰٓ إِنَّ رَبَّهُۥ كَانَ بِهِۦ بَصِيرًا

Kannada Translation - Hamza Buturಹೌದು! ನಿಶ್ಚಯವಾಗಿಯೂ ಅವನ ಪರಿಪಾಲಕನು (ಅಲ್ಲಾಹು) ಅವನನ್ನು ನೋಡುತ್ತಿದ್ದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَآ أُقْسِمُ بِٱلشَّفَقِ

Kannada Translation - Hamza Buturನಾನು ಮುಸ್ಸಂಜೆಯ ಮೇಲೆ ಆಣೆ ಮಾಡುತ್ತೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّيْلِ وَمَا وَسَقَ

Kannada Translation - Hamza Buturರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْقَمَرِ إِذَا ٱتَّسَقَ

Kannada Translation - Hamza Buturಚಂದ್ರನ ಮೇಲಾಣೆ! ಅದು ಪೂರ್ಣರೂಪವನ್ನು ಪಡೆಯುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَتَرْكَبُنَّ طَبَقًا عَن طَبَقٍ

Kannada Translation - Hamza Buturನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَا لَهُمْ لَا يُؤْمِنُونَ

Kannada Translation - Hamza Buturಅವರಿಗೇನಾಗಿದೆ? ಅವರೇಕೆ ವಿಶ್ವಾಸವಿಡುವುದಿಲ್ಲ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا قُرِئَ عَلَيْهِمُ ٱلْقُرْءَانُ لَا يَسْجُدُونَ

Kannada Translation - Hamza Buturಅವರಿಗೆ ಕುರ್‌ಆನನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلِ ٱلَّذِينَ كَفَرُوا۟ يُكَذِّبُونَ

Kannada Translation - Hamza Buturಆದರೆ ಆ ಸತ್ಯನಿಷೇಧಿಗಳು ನಿಷೇಧಿಸುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱللَّهُ أَعْلَمُ بِمَا يُوعُونَ

Kannada Translation - Hamza Buturಅವರು ಅವರ ಒಡಲಲ್ಲಿ ಮುಚ್ಚಿಡುವುದನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبَشِّرْهُم بِعَذَابٍ أَلِيمٍ

Kannada Translation - Hamza Buturಅವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ನೀಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ لَهُمْ أَجْرٌ غَيْرُ مَمْنُونٍۭ

Kannada Translation - Hamza Buturಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70