caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Infitaar الإنفطار

19 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 82

بِسْمِ ٱللَّهِ ٱلرَّحْمَٰنِ ٱلرَّحِيمِ إِذَا ٱلسَّمَآءُ ٱنفَطَرَتْ

Kannada Translation - Hamza Buturಆಕಾಶವು ಒಡೆದು ಸೀಳುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلْكَوَاكِبُ ٱنتَثَرَتْ

Kannada Translation - Hamza Buturನಕ್ಷತ್ರಗಳು ಉದುರಿ ಬೀಳುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلْبِحَارُ فُجِّرَتْ

Kannada Translation - Hamza Buturಸಮುದ್ರಗಳು ಉಕ್ಕಿ ಹರಿಯುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلْقُبُورُ بُعْثِرَتْ

Kannada Translation - Hamza Buturಸಮಾಧಿಗಳು ಬುಡಮೇಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلِمَتْ نَفْسٌ مَّا قَدَّمَتْ وَأَخَّرَتْ

Kannada Translation - Hamza Buturಆಗ ಮನುಷ್ಯನು ತಾನು ಮುಂದಕ್ಕೆ ಕಳುಹಿಸಿದ ಮತ್ತು ಹಿಂದೆ ಉಳಿಸಿದ (ಕರ್ಮಗಳನ್ನು) ತಿಳಿಯುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰٓأَيُّهَا ٱلْإِنسَٰنُ مَا غَرَّكَ بِرَبِّكَ ٱلْكَرِيمِ

Kannada Translation - Hamza Buturಓ ಮನುಷ್ಯನೇ! ಅತ್ಯುದಾರಿಯಾದ ನಿನ್ನ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ನಿನ್ನನ್ನು ವಂಚಿಸಿದ್ದೇನು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى خَلَقَكَ فَسَوَّىٰكَ فَعَدَلَكَ

Kannada Translation - Hamza Buturಅವನು (ಅಲ್ಲಾಹು) ಯಾರೆಂದರೆ ನಿನ್ನನ್ನು ಸೃಷ್ಟಿಸಿದವನು, ನಿನ್ನನ್ನು ಸರಿಪಡಿಸಿದವನು ಮತ್ತು ನಿನ್ನನ್ನು ಸಮತೋಲನಗೊಳಿಸಿದವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِىٓ أَىِّ صُورَةٍ مَّا شَآءَ رَكَّبَكَ

Kannada Translation - Hamza Buturಅವನು ಇಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا بَلْ تُكَذِّبُونَ بِٱلدِّينِ

Kannada Translation - Hamza Buturಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ عَلَيْكُمْ لَحَٰفِظِينَ

Kannada Translation - Hamza Buturನಿಶ್ಚಯವಾಗಿಯೂ ನಿಮ್ಮ ಮೇಲೆ ನಿಗಾ ವಹಿಸುವವರಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كِرَامًا كَٰتِبِينَ

Kannada Translation - Hamza Buturಗೌರವಾನ್ವಿತ ಬರಹಗಾರರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَعْلَمُونَ مَا تَفْعَلُونَ

Kannada Translation - Hamza Buturನೀವು ಮಾಡುವುದೆಲ್ಲವನ್ನೂ ಅವರು ತಿಳಿಯುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلْأَبْرَارَ لَفِى نَعِيمٍ

Kannada Translation - Hamza Buturನಿಶ್ಚಯವಾಗಿಯೂ ಸತ್ಕರ್ಮಿಗಳು ಸುಖದ ಸುಪ್ಪತ್ತಿಗೆಯಲ್ಲಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ ٱلْفُجَّارَ لَفِى جَحِيمٍ

Kannada Translation - Hamza Buturನಿಶ್ಚಯವಾಗಿಯೂ ದುಷ್ಕರ್ಮಿಗಳು ಧಗಧಗಿಸುವ ನರಕದಲ್ಲಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَصْلَوْنَهَا يَوْمَ ٱلدِّينِ

Kannada Translation - Hamza Buturಪ್ರತಿಫಲ ದಿನದಂದು ಅವರು ಅದನ್ನು ಪ್ರವೇಶಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا هُمْ عَنْهَا بِغَآئِبِينَ

Kannada Translation - Hamza Buturಅವರಿಗೆ ಅದರಿಂದ ಅನುಪಸ್ಥಿತರಾಗಲು ಸಾಧ್ಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَدْرَىٰكَ مَا يَوْمُ ٱلدِّينِ

Kannada Translation - Hamza Buturಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ مَآ أَدْرَىٰكَ مَا يَوْمُ ٱلدِّينِ

Kannada Translation - Hamza Buturಪುನಃ (ಕೇಳುತ್ತೇನೆ). ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ لَا تَمْلِكُ نَفْسٌ لِّنَفْسٍ شَيْـًٔا وَٱلْأَمْرُ يَوْمَئِذٍ لِّلَّهِ

Kannada Translation - Hamza Buturಅಂದು ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಾಗಿ ಏನೂ ಅಧೀನದಲ್ಲಿಟ್ಟುಕೊಳ್ಳುವುದಿಲ್ಲ! ಅಂದು ಎಲ್ಲಾ ಆಜ್ಞೆಗಳು ಅಲ್ಲಾಹನದ್ದಾಗಿರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70