caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Naazi'aat النازعات

46 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 81

بِسْمِ ٱللَّهِ ٱلرَّحْمَٰنِ ٱلرَّحِيمِ وَٱلنَّٰزِعَٰتِ غَرْقًا

Kannada Translation - Hamza Butur(ದೇಹದೊಳಗೆ) ಧುಮುಕಿ (ಸತ್ಯನಿಷೇಧಿಗಳ ಆತ್ಮಗಳನ್ನು) ಕಠೋರವಾಗಿ ಎಳೆಯುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلنَّٰشِطَٰتِ نَشْطًا

Kannada Translation - Hamza Butur(ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಎಳೆಯುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلسَّٰبِحَٰتِ سَبْحًا

Kannada Translation - Hamza Buturಈಜುತ್ತಾ ಚಲಿಸುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلسَّٰبِقَٰتِ سَبْقًا

Kannada Translation - Hamza Buturನಂತರ ದೌಡಾಯಿಸುತ್ತಾ ಮುಂದಕ್ಕೆ ಸಾಗುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْمُدَبِّرَٰتِ أَمْرًا

Kannada Translation - Hamza Buturಕಾರ್ಯಗಳನ್ನು ನಿಯಂತ್ರಿಸುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ تَرْجُفُ ٱلرَّاجِفَةُ

Kannada Translation - Hamza Buturನಡುಗಿಸುವಂತದ್ದು (ಪ್ರಥಮ ಊದುವಿಕೆ) ನಡುಗಿಸುವ ದಿನ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَتْبَعُهَا ٱلرَّادِفَةُ

Kannada Translation - Hamza Buturಹಿಂಬಾಲಿಸಿ ಬರುವಂತದ್ದು (ಎರಡನೇ ಊದುವಿಕೆ) ಅದರ ಹಿಂದೆಯೇ ಬರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلُوبٌ يَوْمَئِذٍ وَاجِفَةٌ

Kannada Translation - Hamza Buturಅಂದು ಬಹಳಷ್ಟು ಹೃದಯಗಳು ಢವಗುಡುತ್ತಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَبْصَٰرُهَا خَٰشِعَةٌ

Kannada Translation - Hamza Buturಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَقُولُونَ أَءِنَّا لَمَرْدُودُونَ فِى ٱلْحَافِرَةِ

Kannada Translation - Hamza Buturಅವರು ಕೇಳುವರು: “ನಮ್ಮನ್ನು ನಮ್ಮ ಪೂರ್ವಸ್ಥಿತಿಗೆ ಮರಳಿಸಲಾಗುವುದೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَءِذَا كُنَّا عِظَٰمًا نَّخِرَةً

Kannada Translation - Hamza Buturನಾವು ಕೊಳೆತ ಮೂಳೆಗಳಾಗಿ ಬಿಟ್ಟ ಬಳಿಕ!”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ تِلْكَ إِذًا كَرَّةٌ خَاسِرَةٌ

Kannada Translation - Hamza Buturಅವರು ಹೇಳುವರು: “ಹಾಗಿದ್ದರೆ ಅದು ನಷ್ಟಭರಿತ ಮರಳುವಿಕೆಯಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنَّمَا هِىَ زَجْرَةٌ وَٰحِدَةٌ

Kannada Translation - Hamza Buturಅದು ಕೇವಲ ಒಂದು (ಭಯಾನಕ) ಗದರಿಕೆಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا هُم بِٱلسَّاهِرَةِ

Kannada Translation - Hamza Buturಆಗ ಅಗೋ ಅವರು ಒಂದು ಮೈದಾನದಲ್ಲಿ ಒಟ್ಟುಗೂಡುವರು!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَلْ أَتَىٰكَ حَدِيثُ مُوسَىٰٓ

Kannada Translation - Hamza Buturಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذْ نَادَىٰهُ رَبُّهُۥ بِٱلْوَادِ ٱلْمُقَدَّسِ طُوًى

Kannada Translation - Hamza Buturಪವಿತ್ರ ತುವಾ ಕಣಿವೆಯಲ್ಲಿ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಕರೆದು ಹೇಳಿದ ಸಂದರ್ಭ:

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱذْهَبْ إِلَىٰ فِرْعَوْنَ إِنَّهُۥ طَغَىٰ

Kannada Translation - Hamza Butur“ಫರೋಹನ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರಿ ವರ್ತಿಸಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقُلْ هَل لَّكَ إِلَىٰٓ أَن تَزَكَّىٰ

Kannada Translation - Hamza Buturಅವನೊಡನೆ ಕೇಳಿರಿ: ನೀನು ಸ್ವಯಂ ಸಂಸ್ಕರಿಸಲು ಬಯಸುವೆಯಾ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَهْدِيَكَ إِلَىٰ رَبِّكَ فَتَخْشَىٰ

Kannada Translation - Hamza Buturನಾನು ನಿನಗೆ ನಿನ್ನ ಪರಿಪಾಲಕನ (ಅಲ್ಲಾಹನ) ಮಾರ್ಗವನ್ನು ತೋರಿಸಿಕೊಡುವೆನು. ಅದರಿಂದ ನೀನು ದೇವಭಯವುಳ್ಳವನಾಗಬಹುದು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَرَىٰهُ ٱلْـَٔايَةَ ٱلْكُبْرَىٰ

Kannada Translation - Hamza Buturಮೂಸಾ ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَكَذَّبَ وَعَصَىٰ

Kannada Translation - Hamza Buturಆದರೆ ಅವನು ನಿಷೇಧಿಸಿದನು ಮತ್ತು ಅವಿಧೇಯತೆ ತೋರಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَدْبَرَ يَسْعَىٰ

Kannada Translation - Hamza Buturನಂತರ ಅವನು (ತಂತ್ರಗಾರಿಕೆ ಮಾಡಲು) ಪರಿಶ್ರಮಿಸುತ್ತಾ ಹಿಂದಿರುಗಿ ಹೋದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَحَشَرَ فَنَادَىٰ

Kannada Translation - Hamza Buturನಂತರ ಎಲ್ಲರನ್ನೂ ಜಮಾವಣೆಗೊಳಿಸಿ ಘೋಷಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَالَ أَنَا۠ رَبُّكُمُ ٱلْأَعْلَىٰ

Kannada Translation - Hamza Buturಅವನು ಹೇಳಿದನು: “ನಾನು ನಿಮ್ಮ ಪರಮೋಚ್ಛ ದೇವನಾಗಿದ್ದೇನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَخَذَهُ ٱللَّهُ نَكَالَ ٱلْـَٔاخِرَةِ وَٱلْأُولَىٰٓ

Kannada Translation - Hamza Buturಆಗ ಅಲ್ಲಾಹು ಅವನನ್ನು ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಹಿಡಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ فِى ذَٰلِكَ لَعِبْرَةً لِّمَن يَخْشَىٰٓ

Kannada Translation - Hamza Buturನಿಶ್ಚಯವಾಗಿಯೂ ಭಯಪಡುವವರಿಗೆ ಅದರಲ್ಲಿ ನೀತಿಪಾಠವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ءَأَنتُمْ أَشَدُّ خَلْقًا أَمِ ٱلسَّمَآءُ بَنَىٰهَا

Kannada Translation - Hamza Buturನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಆಕಾಶವನ್ನು ನಿರ್ಮಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَفَعَ سَمْكَهَا فَسَوَّىٰهَا

Kannada Translation - Hamza Buturಅದರ ಛಾವಣಿಯನ್ನು ಎತ್ತರಿಸಿದನು ಮತ್ತು ಅದನ್ನು ಸರಿಪಡಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَغْطَشَ لَيْلَهَا وَأَخْرَجَ ضُحَىٰهَا

Kannada Translation - Hamza Buturಅದರ ರಾತ್ರಿಯನ್ನು ಕತ್ತಲೆಯಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರತ್ಯಕ್ಷಗೊಳಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْأَرْضَ بَعْدَ ذَٰلِكَ دَحَىٰهَآ

Kannada Translation - Hamza Buturಅದರ ನಂತರ ಅವನು ಭೂಮಿಯನ್ನು ವಿಸ್ತರಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَخْرَجَ مِنْهَا مَآءَهَا وَمَرْعَىٰهَا

Kannada Translation - Hamza Buturಅದರಿಂದ ನೀರನ್ನು ಮತ್ತು ಹುಲ್ಲುಗಾವಲುಗಳನ್ನು ಹೊರತೆಗೆದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْجِبَالَ أَرْسَىٰهَا

Kannada Translation - Hamza Buturಪರ್ವತಗಳನ್ನು ದೃಢವಾಗಿ ನಿಲ್ಲಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَتَٰعًا لَّكُمْ وَلِأَنْعَٰمِكُمْ

Kannada Translation - Hamza Buturಇವೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا جَآءَتِ ٱلطَّآمَّةُ ٱلْكُبْرَىٰ

Kannada Translation - Hamza Buturಆ ಮಹಾ ವಿಪತ್ತು (ಪುನರುತ್ಥಾನ ದಿನ) ಬರುವ ಸಂದರ್ಭ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَتَذَكَّرُ ٱلْإِنسَٰنُ مَا سَعَىٰ

Kannada Translation - Hamza Buturಅಂದು ಮನುಷ್ಯನು ತಾನು ಮಾಡಿಟ್ಟ ಕರ್ಮಗಳನ್ನು ಸ್ಮರಿಸುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَبُرِّزَتِ ٱلْجَحِيمُ لِمَن يَرَىٰ

Kannada Translation - Hamza Buturನೋಡುಗರೆಲ್ಲರ ಮುಂದೆ ನರಕವನ್ನು ಪ್ರದರ್ಶಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَمَّا مَن طَغَىٰ

Kannada Translation - Hamza Buturಆದ್ದರಿಂದ ಯಾರು ಎಲ್ಲೆ ಮೀರಿದವನೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَءَاثَرَ ٱلْحَيَوٰةَ ٱلدُّنْيَا

Kannada Translation - Hamza Buturಮತ್ತು ಇಹಲೋಕಕ್ಕೆ ಪ್ರಾಶಸ್ತ್ಯ ನೀಡಿದವನೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنَّ ٱلْجَحِيمَ هِىَ ٱلْمَأْوَىٰ

Kannada Translation - Hamza Buturನಿಶ್ಚಯವಾಗಿಯೂ ನರಕವೇ ಅವನ ವಾಸಸ್ಥಳ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا مَنْ خَافَ مَقَامَ رَبِّهِۦ وَنَهَى ٱلنَّفْسَ عَنِ ٱلْهَوَىٰ

Kannada Translation - Hamza Buturಯಾರು ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಟ್ಟನೋ ಮತ್ತು ತನ್ನ ದೇಹವನ್ನು ಸ್ವೇಚ್ಛೆಗಳಿಂದ ದೂರವಿಟ್ಟವನೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنَّ ٱلْجَنَّةَ هِىَ ٱلْمَأْوَىٰ

Kannada Translation - Hamza Buturನಿಶ್ಚಯವಾಗಿಯೂ ಸ್ವರ್ಗವೇ ಅವನ ವಾಸಸ್ಥಳ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَسْـَٔلُونَكَ عَنِ ٱلسَّاعَةِ أَيَّانَ مُرْسَىٰهَا

Kannada Translation - Hamza Buturಅಂತ್ಯಸಮಯವು—ಅದು ಯಾವಾಗ ಸಂಭವಿಸುತ್ತದೆಯೆಂದು ಅವರು ನಿಮ್ಮಲ್ಲಿ ಕೇಳುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيمَ أَنتَ مِن ذِكْرَىٰهَآ

Kannada Translation - Hamza Buturನಿಮಗೆ ಅದರ ಬಗ್ಗೆ ಏನು ಜ್ಞಾನವಿದೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ رَبِّكَ مُنتَهَىٰهَآ

Kannada Translation - Hamza Buturಅದರ ಆತ್ಯಂತಿಕ ಜ್ಞಾನವಿರುವುದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّمَآ أَنتَ مُنذِرُ مَن يَخْشَىٰهَا

Kannada Translation - Hamza Buturನೀವಂತೂ ಅದನ್ನು ಭಯಪಡುವವರಿಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَأَنَّهُمْ يَوْمَ يَرَوْنَهَا لَمْ يَلْبَثُوٓا۟ إِلَّا عَشِيَّةً أَوْ ضُحَىٰهَا

Kannada Translation - Hamza Buturಅವರು ಅದನ್ನು ನೋಡುವ ದಿನದಂದು, ದಿನದ ಕೊನೆಯ ಭಾಗ ಅಥವಾ ದಿನದ ಮೊದಲ ಭಾಗ ಮಾತ್ರ ಅವರು (ಭೂಮಿಯಲ್ಲಿ) ವಾಸವಾಗಿದ್ದರು ಎಂದು ಅವರಿಗೆ ಭಾಸವಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70