caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Abasa عبس

42 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 24

بِسْمِ ٱللَّهِ ٱلرَّحْمَٰنِ ٱلرَّحِيمِ عَبَسَ وَتَوَلَّىٰٓ

Kannada Translation - Hamza Buturಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَن جَآءَهُ ٱلْأَعْمَىٰ

Kannada Translation - Hamza Buturಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يُدْرِيكَ لَعَلَّهُۥ يَزَّكَّىٰٓ

Kannada Translation - Hamza Butur(ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوْ يَذَّكَّرُ فَتَنفَعَهُ ٱلذِّكْرَىٰٓ

Kannada Translation - Hamza Buturಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمَّا مَنِ ٱسْتَغْنَىٰ

Kannada Translation - Hamza Buturಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَنتَ لَهُۥ تَصَدَّىٰ

Kannada Translation - Hamza Buturಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا عَلَيْكَ أَلَّا يَزَّكَّىٰ

Kannada Translation - Hamza Buturಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا مَن جَآءَكَ يَسْعَىٰ

Kannada Translation - Hamza Buturಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ يَخْشَىٰ

Kannada Translation - Hamza Buturಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَنتَ عَنْهُ تَلَهَّىٰ

Kannada Translation - Hamza Buturಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّهَا تَذْكِرَةٌ

Kannada Translation - Hamza Buturಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَن شَآءَ ذَكَرَهُۥ

Kannada Translation - Hamza Buturಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِى صُحُفٍ مُّكَرَّمَةٍ

Kannada Translation - Hamza Buturಅದು ಪ್ರತಿಷ್ಠಿತ ಗ್ರಂಥದಲ್ಲಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّرْفُوعَةٍ مُّطَهَّرَةٍۭ

Kannada Translation - Hamza Buturಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بِأَيْدِى سَفَرَةٍ

Kannada Translation - Hamza Buturಅದು ದೇವದೂತರುಗಳ ಕೈಗಳಲ್ಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كِرَامٍۭ بَرَرَةٍ

Kannada Translation - Hamza Buturಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُتِلَ ٱلْإِنسَٰنُ مَآ أَكْفَرَهُۥ

Kannada Translation - Hamza Buturಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مِنْ أَىِّ شَىْءٍ خَلَقَهُۥ

Kannada Translation - Hamza Buturಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مِن نُّطْفَةٍ خَلَقَهُۥ فَقَدَّرَهُۥ

Kannada Translation - Hamza Buturಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ ٱلسَّبِيلَ يَسَّرَهُۥ

Kannada Translation - Hamza Buturನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَمَاتَهُۥ فَأَقْبَرَهُۥ

Kannada Translation - Hamza Buturನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِذَا شَآءَ أَنشَرَهُۥ

Kannada Translation - Hamza Buturನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا لَمَّا يَقْضِ مَآ أَمَرَهُۥ

Kannada Translation - Hamza Buturಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلْيَنظُرِ ٱلْإِنسَٰنُ إِلَىٰ طَعَامِهِۦٓ

Kannada Translation - Hamza Buturಮನುಷ್ಯನು ತನ್ನ ಆಹಾರವನ್ನು ನೋಡಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَنَّا صَبَبْنَا ٱلْمَآءَ صَبًّا

Kannada Translation - Hamza Buturನಾವು ರಭಸವಾಗಿ ಮಳೆಯನ್ನು ಸುರಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ شَقَقْنَا ٱلْأَرْضَ شَقًّا

Kannada Translation - Hamza Buturನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَنۢبَتْنَا فِيهَا حَبًّا

Kannada Translation - Hamza Buturನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَعِنَبًا وَقَضْبًا

Kannada Translation - Hamza Buturದ್ರಾಕ್ಷಿ ಮತ್ತು ತರಕಾರಿಗಳನ್ನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَزَيْتُونًا وَنَخْلًا

Kannada Translation - Hamza Buturಆಲಿವ್ ಮತ್ತು ಖರ್ಜೂರ ಮರಗಳನ್ನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَحَدَآئِقَ غُلْبًا

Kannada Translation - Hamza Buturದಟ್ಟವಾದ ತೋಟಗಳನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَفَٰكِهَةً وَأَبًّا

Kannada Translation - Hamza Buturಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّتَٰعًا لَّكُمْ وَلِأَنْعَٰمِكُمْ

Kannada Translation - Hamza Buturನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا جَآءَتِ ٱلصَّآخَّةُ

Kannada Translation - Hamza Buturಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَفِرُّ ٱلْمَرْءُ مِنْ أَخِيهِ

Kannada Translation - Hamza Buturಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأُمِّهِۦ وَأَبِيهِ

Kannada Translation - Hamza Buturತನ್ನ ತಂದೆ-ತಾಯಿಗಳಿಂದ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَصَٰحِبَتِهِۦ وَبَنِيهِ

Kannada Translation - Hamza Buturತನ್ನ ಮಡದಿ-ಮಕ್ಕಳಿಂದ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِكُلِّ ٱمْرِئٍ مِّنْهُمْ يَوْمَئِذٍ شَأْنٌ يُغْنِيهِ

Kannada Translation - Hamza Buturಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وُجُوهٌ يَوْمَئِذٍ مُّسْفِرَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ضَاحِكَةٌ مُّسْتَبْشِرَةٌ

Kannada Translation - Hamza Buturಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَوُجُوهٌ يَوْمَئِذٍ عَلَيْهَا غَبَرَةٌ

Kannada Translation - Hamza Buturಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَرْهَقُهَا قَتَرَةٌ

Kannada Translation - Hamza Buturಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أُو۟لَٰٓئِكَ هُمُ ٱلْكَفَرَةُ ٱلْفَجَرَةُ

Kannada Translation - Hamza Buturಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70