caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Naba النبإ

40 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 80

بِسْمِ ٱللَّهِ ٱلرَّحْمَٰنِ ٱلرَّحِيمِ عَمَّ يَتَسَآءَلُونَ

Kannada Translation - Hamza Buturಅವರು ಪರಸ್ಪರ ಯಾವುದರ ಬಗ್ಗೆ ವಿಚಾರಿಸುತ್ತಿದ್ದಾರೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَنِ ٱلنَّبَإِ ٱلْعَظِيمِ

Kannada Translation - Hamza Buturಆ ಮಹಾ ಸಮಾಚಾರದ (ಪುನರುತ್ಥಾನದ) ಬಗ್ಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى هُمْ فِيهِ مُخْتَلِفُونَ

Kannada Translation - Hamza Buturಅದು ಅವರು ಭಿನ್ನಮತ ತಳೆದಿರುವ ಸಮಾಚಾರವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا سَيَعْلَمُونَ

Kannada Translation - Hamza Buturಖಂಡಿತವಾಗಿಯೂ ಅವರು ಸದ್ಯವೇ ತಿಳಿಯುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ كَلَّا سَيَعْلَمُونَ

Kannada Translation - Hamza Buturನಂತರ ಖಂಡಿತವಾಗಿಯೂ ಅವರಿಗೆ ಶೀಘ್ರವೇ ತಿಳಿದುಬರುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ نَجْعَلِ ٱلْأَرْضَ مِهَٰدًا

Kannada Translation - Hamza Buturನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْجِبَالَ أَوْتَادًا

Kannada Translation - Hamza Buturಪರ್ವತಗಳನ್ನು ಗೂಟಗಳನ್ನಾಗಿ ಮಾಡಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَخَلَقْنَٰكُمْ أَزْوَٰجًا

Kannada Translation - Hamza Buturನಿಮ್ಮನ್ನು ನಾವು ಜೋಡಿಗಳಾಗಿ ಸೃಷ್ಟಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا نَوْمَكُمْ سُبَاتًا

Kannada Translation - Hamza Buturನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಗೆ ಕಾರಣವಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا ٱلَّيْلَ لِبَاسًا

Kannada Translation - Hamza Buturನಾವು ರಾತ್ರಿಯನ್ನು ಪರದೆಯಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا ٱلنَّهَارَ مَعَاشًا

Kannada Translation - Hamza Buturನಾವು ಹಗಲನ್ನು ಜೀವನೋಪಾಯದ ವೇಳೆಯಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَبَنَيْنَا فَوْقَكُمْ سَبْعًا شِدَادًا

Kannada Translation - Hamza Buturನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಬಲಿಷ್ಠ ಆಕಾಶಗಳನ್ನು ನಿರ್ಮಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا سِرَاجًا وَهَّاجًا

Kannada Translation - Hamza Buturನಾವು ಬೆಳಗುವ ಒಂದು ದೀಪವನ್ನು (ಸೂರ್ಯ) ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَنزَلْنَا مِنَ ٱلْمُعْصِرَٰتِ مَآءً ثَجَّاجًا

Kannada Translation - Hamza Buturನಾವು ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّنُخْرِجَ بِهِۦ حَبًّا وَنَبَاتًا

Kannada Translation - Hamza Buturಅದರಿಂದ ಧಾನ್ಯ ಹಾಗೂ ತರಕಾರಿಯನ್ನು ಬೆಳೆಸುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَنَّٰتٍ أَلْفَافًا

Kannada Translation - Hamza Buturಮತ್ತು ದಟ್ಟವಾದ ತೋಟಗಳನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ يَوْمَ ٱلْفَصْلِ كَانَ مِيقَٰتًا

Kannada Translation - Hamza Buturನಿಶ್ಚಯವಾಗಿಯೂ ತೀರ್ಪು ನೀಡುವ ದಿನದ ಸಮಯವನ್ನು ನಿಶ್ಚಯಿಸಲಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يُنفَخُ فِى ٱلصُّورِ فَتَأْتُونَ أَفْوَاجًا

Kannada Translation - Hamza Buturಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ಗುಂಪು ಗುಂಪಾಗಿ ಬರುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَفُتِحَتِ ٱلسَّمَآءُ فَكَانَتْ أَبْوَٰبًا

Kannada Translation - Hamza Buturಆಕಾಶವನ್ನು ತೆರೆಯಲಾಗುವುದು. ಆಗ ಅದು ಅಸಂಖ್ಯ ಬಾಗಿಲುಗಳಾಗಿ ಮಾರ್ಪಡುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَسُيِّرَتِ ٱلْجِبَالُ فَكَانَتْ سَرَابًا

Kannada Translation - Hamza Buturಪರ್ವತಗಳನ್ನು ಚಲಿಸುವಂತೆ ಮಾಡಲಾಗುವುದು. ಆಗ ಅವು ಮರೀಚಿಕೆಯಂತಾಗುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ جَهَنَّمَ كَانَتْ مِرْصَادًا

Kannada Translation - Hamza Buturನಿಶ್ಚಯವಾಗಿಯೂ ನರಕವು ನಿಗಾವಣೆಯ ಸ್ಥಳದಲ್ಲಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّلطَّٰغِينَ مَـَٔابًا

Kannada Translation - Hamza Buturಅದು ಎಲ್ಲೆ ಮೀರಿ ವರ್ತಿಸಿದವರ ವಾಸಸ್ಥಳವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّٰبِثِينَ فِيهَآ أَحْقَابًا

Kannada Translation - Hamza Buturಅವರು ಯುಗ ಯುಗಾಂತರ ಅದರಲ್ಲಿ ವಾಸಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا يَذُوقُونَ فِيهَا بَرْدًا وَلَا شَرَابًا

Kannada Translation - Hamza Buturಅವರು ಅಲ್ಲಿ ತಂಪು ಅಥವಾ ಪಾನೀಯದ ರುಚಿಯನ್ನು ನೋಡುವುದೇ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا حَمِيمًا وَغَسَّاقًا

Kannada Translation - Hamza Buturಕುದಿಯುವ ನೀರು ಮತ್ತು (ದುರ್ಗಂಧಪೂರಿತ) ಕೀವಿನ (ರುಚಿಯ) ಹೊರತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

جَزَآءً وِفَاقًا

Kannada Translation - Hamza Buturಅವರಿಗೆ ಪೂರ್ಣ ಪ್ರತಿಫಲ ನೀಡಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُمْ كَانُوا۟ لَا يَرْجُونَ حِسَابًا

Kannada Translation - Hamza Buturನಿಶ್ಚಯವಾಗಿಯೂ ಅವರು ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَذَّبُوا۟ بِـَٔايَٰتِنَا كِذَّابًا

Kannada Translation - Hamza Buturಅವರು ಸೊಕ್ಕಿನಿಂದ ನಮ್ಮ ವಚನಗಳನ್ನು ನಿಷೇಧಿಸಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكُلَّ شَىْءٍ أَحْصَيْنَٰهُ كِتَٰبًا

Kannada Translation - Hamza Buturನಾವು ಎಲ್ಲ ವಿಷಯಗಳನ್ನೂ ಲಿಖಿತಗೊಳಿಸಿ ಎಣಿಸಿಟ್ಟಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذُوقُوا۟ فَلَن نَّزِيدَكُمْ إِلَّا عَذَابًا

Kannada Translation - Hamza Buturಆದ್ದರಿಂದ ನೀವು (ನಿಮ್ಮ ದುಷ್ಕರ್ಮಗಳ) ರುಚಿಯನ್ನು ನೋಡಿರಿ. ನಾವು ನಿಮಗೆ ಶಿಕ್ಷೆಯಲ್ಲದೆ ಬೇರೇನನ್ನೂ ಅಧಿಕಗೊಳಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ لِلْمُتَّقِينَ مَفَازًا

Kannada Translation - Hamza Buturನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ವಿಜಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَدَآئِقَ وَأَعْنَٰبًا

Kannada Translation - Hamza Buturತೋಟಗಳು ಮತ್ತು ದ್ರಾಕ್ಷಿಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَوَاعِبَ أَتْرَابًا

Kannada Translation - Hamza Buturಸಮಪ್ರಾಯದ ಯುವ ತರುಣಿಯರಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَأْسًا دِهَاقًا

Kannada Translation - Hamza Buturತುಂಬಿ ತುಳುಕುವ ಲೋಟಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا يَسْمَعُونَ فِيهَا لَغْوًا وَلَا كِذَّٰبًا

Kannada Translation - Hamza Buturಅವರು ಅಲ್ಲಿ ಅನಗತ್ಯ ಮಾತುಗಳನ್ನು ಅಥವಾ ಸುಳ್ಳು ವಾರ್ತೆಗಳನ್ನು ಕೇಳುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

جَزَآءً مِّن رَّبِّكَ عَطَآءً حِسَابًا

Kannada Translation - Hamza Buturಇವೆಲ್ಲವೂ ಅವರಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ದೊರೆಯುವ ಪರ್ಯಾಪ್ತ ಪ್ರತಿಫಲವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَّبِّ ٱلسَّمَٰوَٰتِ وَٱلْأَرْضِ وَمَا بَيْنَهُمَا ٱلرَّحْمَٰنِ لَا يَمْلِكُونَ مِنْهُ خِطَابًا

Kannada Translation - Hamza Buturಅವನು ಯಾರೆಂದರೆ ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಅವನು ಪರಮ ದಯಾಳುವಾಗಿದ್ದಾನೆ. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَقُومُ ٱلرُّوحُ وَٱلْمَلَٰٓئِكَةُ صَفًّا لَّا يَتَكَلَّمُونَ إِلَّا مَنْ أَذِنَ لَهُ ٱلرَّحْمَٰنُ وَقَالَ صَوَابًا

Kannada Translation - Hamza Buturರೂಹ್ (ಜಿಬ್ರೀಲ್) ಮತ್ತು ದೇವದೂತರು‍ಗಳು ಸಾಲು ಸಾಲಾಗಿ ನಿಲ್ಲುವ ದಿನ. (ಅಂದು) ಪರಮ ದಯಾಳುವಾದ ಅಲ್ಲಾಹು ಯಾರಿಗೆ ಅನುಮತಿ ನೀಡುತ್ತಾನೋ ಮತ್ತು ಯಾರು ಸರಿಯಾದ ಮಾತನ್ನೇ ಆಡುತ್ತಾರೋ ಅವರ ಹೊರತು ಬೇರೆ ಯಾರಿಗೂ ತುಟಿ ಬಿಚ್ಚಲಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَٰلِكَ ٱلْيَوْمُ ٱلْحَقُّ فَمَن شَآءَ ٱتَّخَذَ إِلَىٰ رَبِّهِۦ مَـَٔابًا

Kannada Translation - Hamza Buturಆ ದಿನವು ಸತ್ಯವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು (ಸತ್ಕರ್ಮಗಳನ್ನು ಮಾಡಿ) ತನ್ನ ಪರಿಪಾಲಕನ (ಅಲ್ಲಾಹನ) ಬಳಿ ವಾಸಸ್ಥಳವನ್ನು ಸ್ವೀಕರಿಸಿಕೊಳ್ಳಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّآ أَنذَرْنَٰكُمْ عَذَابًا قَرِيبًا يَوْمَ يَنظُرُ ٱلْمَرْءُ مَا قَدَّمَتْ يَدَاهُ وَيَقُولُ ٱلْكَافِرُ يَٰلَيْتَنِى كُنتُ تُرَٰبًۢا

Kannada Translation - Hamza Buturನಾವು ನಿಮಗೆ ಶೀಘ್ರದಲ್ಲೇ ಬರುವ ಒಂದು ಶಿಕ್ಷೆಯ ಬಗ್ಗೆ ನಿಶ್ಚಯವಾಗಿಯೂ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ನೋಡುವನು ಮತ್ತು ಸತ್ಯನಿಷೇಧಿಯು ಹೇಳುವನು: “ಅಯ್ಯೋ! ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು!”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70