ಮುಖಪುಟ › ಸೂರಗಳು › ಸೂರ An-Najm
ಸೂರ An-Najm النجم
62 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 23
بِسْمِ ٱللَّهِ ٱلرَّحْمَٰنِ ٱلرَّحِيمِ وَٱلنَّجْمِ إِذَا هَوَىٰ
Kannada Translation - Hamza Butur ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا ضَلَّ صَاحِبُكُمْ وَمَا غَوَىٰ
Kannada Translation - Hamza Butur ನಿಮ್ಮ ಸಂಗಡಿಗನು (ಪ್ರವಾದಿ) ದಾರಿತಪ್ಪಿಲ್ಲ, ಅವರು ವಕ್ರ ದಾರಿಯಲ್ಲೂ ಇಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا يَنطِقُ عَنِ ٱلْهَوَىٰٓ
Kannada Translation - Hamza Butur ಅವರು ಮನಬಂದಂತೆ ಮಾತನಾಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ هُوَ إِلَّا وَحْىٌ يُوحَىٰ
Kannada Translation - Hamza Butur ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَلَّمَهُۥ شَدِيدُ ٱلْقُوَىٰ
Kannada Translation - Hamza Butur ಅವರಿಗೆ ಮಹಾ ಶಕ್ತಿಶಾಲಿಯಾದ ದೇವದೂತರು (ಜಿಬ್ರೀಲ್) ಕಲಿಸಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ذُو مِرَّةٍ فَٱسْتَوَىٰ
Kannada Translation - Hamza Butur ಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَهُوَ بِٱلْأُفُقِ ٱلْأَعْلَىٰ
Kannada Translation - Hamza Butur ಅವರು ಅತ್ಯುನ್ನತ ದಿಗಂತದಲ್ಲಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ دَنَا فَتَدَلَّىٰ
Kannada Translation - Hamza Butur ನಂತರ ಅವರು ಹತ್ತಿರವಾದರು ಮತ್ತು ಇಳಿದು ಬಂದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكَانَ قَابَ قَوْسَيْنِ أَوْ أَدْنَىٰ
Kannada Translation - Hamza Butur ಅವರು ಎರಡು ಬಿಲ್ಲುಗಳ ದೂರದಲ್ಲಿ ಅಥವಾ ಅದಕ್ಕಿಂತಲೂ ಹತ್ತಿರವಾದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَوْحَىٰٓ إِلَىٰ عَبْدِهِۦ مَآ أَوْحَىٰ
Kannada Translation - Hamza Butur ಅವರು ಅಲ್ಲಾಹನ ದಾಸರಿಗೆ (ಪ್ರವಾದಿಗೆ) ದೇವವಾಣಿಯಾಗಿ ತಲುಪಿಸಬೇಕಾದುದನ್ನು ತಲುಪಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا كَذَبَ ٱلْفُؤَادُ مَا رَأَىٰٓ
Kannada Translation - Hamza Butur ಅವರು (ಪ್ರವಾದಿ) ನೋಡಿದ ಆ ನೋಟವನ್ನು ಹೃದಯವು ನಿಷೇಧಿಸಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَتُمَٰرُونَهُۥ عَلَىٰ مَا يَرَىٰ
Kannada Translation - Hamza Butur ಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَقَدْ رَءَاهُ نَزْلَةً أُخْرَىٰ
Kannada Translation - Hamza Butur ಅವರು ಇನ್ನೊಂದು ಬಾರಿಯೂ ಅವರನ್ನು (ಜಿಬ್ರೀಲರನ್ನು) ನೋಡಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عِندَ سِدْرَةِ ٱلْمُنتَهَىٰ
Kannada Translation - Hamza Butur ಸಿದ್ರತುಲ್ ಮುಂತಹಾದ (ತುತ್ತುತುದಿಯ ಬೋರೆ ಮರದ) ಬಳಿಯಲ್ಲಿ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عِندَهَا جَنَّةُ ٱلْمَأْوَىٰٓ
Kannada Translation - Hamza Butur ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ يَغْشَى ٱلسِّدْرَةَ مَا يَغْشَىٰ
Kannada Translation - Hamza Butur ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا زَاغَ ٱلْبَصَرُ وَمَا طَغَىٰ
Kannada Translation - Hamza Butur (ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَقَدْ رَأَىٰ مِنْ ءَايَٰتِ رَبِّهِ ٱلْكُبْرَىٰٓ
Kannada Translation - Hamza Butur ಅವರು ಅವರ ಪರಿಪಾಲಕನ (ಅಲ್ಲಾಹನ) ಮಹಾ ದೃಷ್ಟಾಂತಗಳಲ್ಲಿ ಕೆಲವನ್ನು ನೋಡಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتُمُ ٱللَّٰتَ وَٱلْعُزَّىٰ
Kannada Translation - Hamza Butur ನೀವು ಲಾತ್ ಮತ್ತು ಉಝ್ಝಾದ ಬಗ್ಗೆ ಆಲೋಚಿಸಿ ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَنَوٰةَ ٱلثَّالِثَةَ ٱلْأُخْرَىٰٓ
Kannada Translation - Hamza Butur ಇನ್ನೊಂದು ಮೂರನೆಯ (ದೇವರಾದ) ಮನಾತ್ ಬಗ್ಗೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَلَكُمُ ٱلذَّكَرُ وَلَهُ ٱلْأُنثَىٰ
Kannada Translation - Hamza Butur ನಿಮಗೆ ಗಂಡು ಮಕ್ಕಳು ಮತ್ತು ಅಲ್ಲಾಹನಿಗೆ ಹೆಣ್ಣು ಮಕ್ಕಳೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تِلْكَ إِذًا قِسْمَةٌ ضِيزَىٰٓ
Kannada Translation - Hamza Butur ಇದು ಬಹುದೊಡ್ಡ ಅನ್ಯಾಯದ ಹಂಚಿಕೆಯಾಗಿದೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ هِىَ إِلَّآ أَسْمَآءٌ سَمَّيْتُمُوهَآ أَنتُمْ وَءَابَآؤُكُم مَّآ أَنزَلَ ٱللَّهُ بِهَا مِن سُلْطَٰنٍ إِن يَتَّبِعُونَ إِلَّا ٱلظَّنَّ وَمَا تَهْوَى ٱلْأَنفُسُ وَلَقَدْ جَآءَهُم مِّن رَّبِّهِمُ ٱلْهُدَىٰٓ
Kannada Translation - Hamza Butur ಇವೆಲ್ಲವೂ ನೀವು ಮತ್ತು ನಿಮ್ಮ ಪೂರ್ವಜರು ನಾಮಕರಣ ಮಾಡಿದ ಕೆಲವು (ವಿಗ್ರಹಗಳ) ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸಿಕೊಟ್ಟಿಲ್ಲ. ಅವರು ಕೇವಲ ಊಹೆಯನ್ನು ಮತ್ತು ಅವರ ಮನಸ್ಸು ಬಯಸುವುದನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅವರ ಬಳಿಗೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಸನ್ಮಾರ್ಗವು ಬಂದುಬಿಟ್ಟಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لِلْإِنسَٰنِ مَا تَمَنَّىٰ
Kannada Translation - Hamza Butur ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلِلَّهِ ٱلْـَٔاخِرَةُ وَٱلْأُولَىٰ
Kannada Translation - Hamza Butur ಪರಲೋಕ ಮತ್ತು ಇಹಲೋಕವು ಅಲ್ಲಾಹನ ವಶದಲ್ಲಿವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَكَم مِّن مَّلَكٍ فِى ٱلسَّمَٰوَٰتِ لَا تُغْنِى شَفَٰعَتُهُمْ شَيْـًٔا إِلَّا مِنۢ بَعْدِ أَن يَأْذَنَ ٱللَّهُ لِمَن يَشَآءُ وَيَرْضَىٰٓ
Kannada Translation - Hamza Butur ಆಕಾಶಗಳಲ್ಲಿ ಎಷ್ಟು ದೇವದೂತರುಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ ٱلَّذِينَ لَا يُؤْمِنُونَ بِٱلْـَٔاخِرَةِ لَيُسَمُّونَ ٱلْمَلَٰٓئِكَةَ تَسْمِيَةَ ٱلْأُنثَىٰ
Kannada Translation - Hamza Butur ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರುಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا لَهُم بِهِۦ مِنْ عِلْمٍ إِن يَتَّبِعُونَ إِلَّا ٱلظَّنَّ وَإِنَّ ٱلظَّنَّ لَا يُغْنِى مِنَ ٱلْحَقِّ شَيْـًٔا
Kannada Translation - Hamza Butur ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ನಿಶ್ಚಯವಾಗಿಯೂ ಸತ್ಯದೆದುರು ಊಹೆಯು ಯಾವುದೇ ಉಪಕಾರ ಮಾಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَعْرِضْ عَن مَّن تَوَلَّىٰ عَن ذِكْرِنَا وَلَمْ يُرِدْ إِلَّا ٱلْحَيَوٰةَ ٱلدُّنْيَا
Kannada Translation - Hamza Butur ನಮ್ಮ ಸ್ಮರಣೆಯಿಂದ ವಿಮುಖರಾದವರು ಮತ್ತು ಇಹಲೋಕವನ್ನು ಮಾತ್ರ ಬಯಸುವವರು ಯಾರೋ—ಅವರಿಂದ ನೀವು ವಿಮುಖರಾಗಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ذَٰلِكَ مَبْلَغُهُم مِّنَ ٱلْعِلْمِ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِمَنِ ٱهْتَدَىٰ
Kannada Translation - Hamza Butur ಅದೇ ಅವರ ಜ್ಞಾನದ ಪರಾಕಾಷ್ಠೆ. ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلِلَّهِ مَا فِى ٱلسَّمَٰوَٰتِ وَمَا فِى ٱلْأَرْضِ لِيَجْزِىَ ٱلَّذِينَ أَسَٰٓـُٔوا۟ بِمَا عَمِلُوا۟ وَيَجْزِىَ ٱلَّذِينَ أَحْسَنُوا۟ بِٱلْحُسْنَى
Kannada Translation - Hamza Butur ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱلَّذِينَ يَجْتَنِبُونَ كَبَٰٓئِرَ ٱلْإِثْمِ وَٱلْفَوَٰحِشَ إِلَّا ٱللَّمَمَ إِنَّ رَبَّكَ وَٰسِعُ ٱلْمَغْفِرَةِ هُوَ أَعْلَمُ بِكُمْ إِذْ أَنشَأَكُم مِّنَ ٱلْأَرْضِ وَإِذْ أَنتُمْ أَجِنَّةٌ فِى بُطُونِ أُمَّهَٰتِكُمْ فَلَا تُزَكُّوٓا۟ أَنفُسَكُمْ هُوَ أَعْلَمُ بِمَنِ ٱتَّقَىٰٓ
Kannada Translation - Hamza Butur ಅವರು (ಸತ್ಕರ್ಮಿಗಳು) ಯಾರೆಂದರೆ, ಮಹಾಪಾಪಗಳಿಂದ ಮತ್ತು ಅಶ್ಲೀಲಕೃತ್ಯಗಳಿಂದ ದೂರವಿರುವವರು. ಕೆಲವು ಚಿಕ್ಕಪುಟ್ಟ ಪಾಪಗಳ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲವಾಗಿ ಕ್ಷಮಿಸುವವನಾಗಿದ್ದಾನೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗ ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಭ್ರೂಣಗಳಾಗಿದ್ದಾಗ ಅವನಿಗೆ ನಿಮ್ಮ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಆದ್ದರಿಂದ ನೀವು ನಿಮ್ಮನ್ನು ಪರಿಶುದ್ಧರೆಂದು ಘೋಷಿಸಬೇಡಿ. ದೇವಭಯವುಳ್ಳವರ ಬಗ್ಗೆ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتَ ٱلَّذِى تَوَلَّىٰ
Kannada Translation - Hamza Butur ಮುಖ ತಿರುಗಿಸಿ ಹೋದವನನ್ನು ನೀವು ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَعْطَىٰ قَلِيلًا وَأَكْدَىٰٓ
Kannada Translation - Hamza Butur ಅವನು ಬಹಳ ಕಡಿಮೆ ಕೊಟ್ಟನು ಮತ್ತು ನಿಲ್ಲಿಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَعِندَهُۥ عِلْمُ ٱلْغَيْبِ فَهُوَ يَرَىٰٓ
Kannada Translation - Hamza Butur ಅವನ ಬಳಿ ಅದೃಶ್ಯ ಜ್ಞಾನವಿದ್ದು ಅವನು ಅದರ ಮೂಲಕ (ಎಲ್ಲವನ್ನು) ನೋಡುತ್ತಿದ್ದಾನೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لَمْ يُنَبَّأْ بِمَا فِى صُحُفِ مُوسَىٰ
Kannada Translation - Hamza Butur ಮೂಸಾರ ಗ್ರಂಥಗಳಲ್ಲಿರುವುದರ ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِبْرَٰهِيمَ ٱلَّذِى وَفَّىٰٓ
Kannada Translation - Hamza Butur (ಕರ್ತವ್ಯಗಳನ್ನು) ನೆರವೇರಿಸಿದ ಇಬ್ರಾಹೀಮರ ಗ್ರಂಥಗಳಲ್ಲಿರುವುದನ್ನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَلَّا تَزِرُ وَازِرَةٌ وِزْرَ أُخْرَىٰ
Kannada Translation - Hamza Butur ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರುವುದಿಲ್ಲವೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَن لَّيْسَ لِلْإِنسَٰنِ إِلَّا مَا سَعَىٰ
Kannada Translation - Hamza Butur ಮನುಷ್ಯನಿಗೆ ಅವನು ಮಾಡುವ ಪರಿಶ್ರಮಗಳಲ್ಲದೆ ಬೇರೇನೂ ಇಲ್ಲವೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّ سَعْيَهُۥ سَوْفَ يُرَىٰ
Kannada Translation - Hamza Butur ಅವನ ಪರಿಶ್ರಮವನ್ನು ಸದ್ಯವೇ ಅವನಿಗೆ ತೋರಿಸಲಾಗುವುದೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ يُجْزَىٰهُ ٱلْجَزَآءَ ٱلْأَوْفَىٰ
Kannada Translation - Hamza Butur ನಂತರ ಅವನಿಗೆ ಪೂರ್ಣರೂಪದಲ್ಲಿ ಪ್ರತಿಫಲ ನೀಡಲಾಗುವುದೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّ إِلَىٰ رَبِّكَ ٱلْمُنتَهَىٰ
Kannada Translation - Hamza Butur ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೇ ತಲುಪಬೇಕೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥ هُوَ أَضْحَكَ وَأَبْكَىٰ
Kannada Translation - Hamza Butur ಅವನೇ ನಗುವಂತೆ ಮತ್ತು ಅಳುವಂತೆ ಮಾಡುವವನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥ هُوَ أَمَاتَ وَأَحْيَا
Kannada Translation - Hamza Butur ಅವನೇ ಮರಣ ಮತ್ತು ಜೀವನವನ್ನು ನೀಡುವವನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥ خَلَقَ ٱلزَّوْجَيْنِ ٱلذَّكَرَ وَٱلْأُنثَىٰ
Kannada Translation - Hamza Butur ಅವನೇ ಗಂಡು-ಹೆಣ್ಣುಗಳೆಂಬ ಜೋಡಿಯನ್ನು ಸೃಷ್ಟಿಸಿದವನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مِن نُّطْفَةٍ إِذَا تُمْنَىٰ
Kannada Translation - Hamza Butur ವೀರ್ಯದಿಂದ—ಅದನ್ನು ಸೃವಿಸಲಾದಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّ عَلَيْهِ ٱلنَّشْأَةَ ٱلْأُخْرَىٰ
Kannada Translation - Hamza Butur ಎರಡನೆಯ ಬಾರಿ ಜೀವ ನೀಡುವುದು ಅವನ ಹೊಣೆಗಾರಿಕೆಯೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥ هُوَ أَغْنَىٰ وَأَقْنَىٰ
Kannada Translation - Hamza Butur ಅವನೇ ಐಶ್ವರ್ಯ ಮತ್ತು ಸಂತೃಪ್ತತೆಯನ್ನು ನೀಡುವವನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥ هُوَ رَبُّ ٱلشِّعْرَىٰ
Kannada Translation - Hamza Butur ಅವನೇ ಶಿಅರಾ[1] ನಕ್ಷತ್ರದ ಒಡೆಯನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُۥٓ أَهْلَكَ عَادًا ٱلْأُولَىٰ
Kannada Translation - Hamza Butur ಅವನೇ ಪ್ರಾಚೀನ ಆದ್ ಗೋತ್ರವನ್ನು ನಾಶ ಮಾಡಿದವನೆಂದು,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَثَمُودَا۟ فَمَآ أَبْقَىٰ
Kannada Translation - Hamza Butur ಮತ್ತು ಸಮೂದ್ ಗೋತ್ರವನ್ನು. ಅವನು ಅವರಲ್ಲಿ ಒಬ್ಬನನ್ನೂ ಬಾಕಿಯುಳಿಸಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَوْمَ نُوحٍ مِّن قَبْلُ إِنَّهُمْ كَانُوا۟ هُمْ أَظْلَمَ وَأَطْغَىٰ
Kannada Translation - Hamza Butur ಅದಕ್ಕಿಂತ ಮೊದಲು ನೂಹರ ಜನರನ್ನು. ನಿಶ್ಚಯವಾಗಿಯೂ ಅವರು ಮಹಾ ಅಕ್ರಮಿಗಳು ಮತ್ತು ಅತಿರೇಕಿಗಳಾಗಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلْمُؤْتَفِكَةَ أَهْوَىٰ
Kannada Translation - Hamza Butur ಮತ್ತು ಬುಡಮೇಲಾದ ದೇಶವನ್ನು.[1] ಅವನು ಅದನ್ನು ಬುಡಮೇಲುಗೊಳಿಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَغَشَّىٰهَا مَا غَشَّىٰ
Kannada Translation - Hamza Butur ನಂತರ ಅದನ್ನು ಆವರಿಸಬೇಕಾದುದೆಲ್ಲವೂ ಆವರಿಸುವಂತೆ ಮಾಡಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَبِأَىِّ ءَالَآءِ رَبِّكَ تَتَمَارَىٰ
Kannada Translation - Hamza Butur ಆದ್ದರಿಂದ (ಓ ಮಾನವನೇ), ನೀನು ನಿನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳಲ್ಲಿ ಯಾವುದರ ಬಗ್ಗೆ ಸಂಶಯಪಡುವೆ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا نَذِيرٌ مِّنَ ٱلنُّذُرِ ٱلْأُولَىٰٓ
Kannada Translation - Hamza Butur ಇವರು (ಪ್ರವಾದಿ) ಪೂರ್ವಿಕ ಮುನ್ನೆಚ್ಚರಿಕೆಗಾರರಲ್ಲಿ (ಪ್ರವಾದಿಗಳಲ್ಲಿ) ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَزِفَتِ ٱلْـَٔازِفَةُ
Kannada Translation - Hamza Butur ಹತ್ತಿರವಾಗುವ ಆ ಸಮಯವು (ಪುನರುತ್ಥಾನ ದಿನ) ಹತ್ತಿರವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَيْسَ لَهَا مِن دُونِ ٱللَّهِ كَاشِفَةٌ
Kannada Translation - Hamza Butur ಅದನ್ನು (ಅದರ ನಿಶ್ಚಿತ ಸಮಯದಲ್ಲಿ) ಅಲ್ಲಾಹನ ಹೊರತು ಯಾರೂ ತೋರಿಸುವವರಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَمِنْ هَٰذَا ٱلْحَدِيثِ تَعْجَبُونَ
Kannada Translation - Hamza Butur ಹಾಗಾದರೆ ಈ ಸಮಾಚಾರದಿಂದ ನಿಮಗೆ ಅಚ್ಚರಿಯಾಗುತ್ತಿದೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَضْحَكُونَ وَلَا تَبْكُونَ
Kannada Translation - Hamza Butur ನೀವು ನಗುತ್ತಿದ್ದೀರಿ. ನೀವು ಅಳುತ್ತಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنتُمْ سَٰمِدُونَ
Kannada Translation - Hamza Butur ನೀವು ಆಟವಾಡುತ್ತಿದ್ದೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱسْجُدُوا۟ لِلَّهِ وَٱعْبُدُوا۟
Kannada Translation - Hamza Butur ನೀವು ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ ಮತ್ತು ಅವನನ್ನು ಆರಾಧಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ At-Tur
ಸೂರ Al-Qamar →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.