ಮುಖಪುಟ › ಸೂರಗಳು › ಸೂರ Ash-Shu'araa
ಸೂರ Ash-Shu'araa الشعراء
227 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 47
بِسْمِ ٱللَّهِ ٱلرَّحْمَٰنِ ٱلرَّحِيمِ طسٓمٓ
Kannada Translation - Hamza Butur ತ್ವಾ ಸೀನ್ ಮೀಮ್.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تِلْكَ ءَايَٰتُ ٱلْكِتَٰبِ ٱلْمُبِينِ
Kannada Translation - Hamza Butur ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَعَلَّكَ بَٰخِعٌ نَّفْسَكَ أَلَّا يَكُونُوا۟ مُؤْمِنِينَ
Kannada Translation - Hamza Butur ಅವರು ಸತ್ಯವಿಶ್ವಾಸಿಗಳಾಗದ ಕಾರಣ ಬಹುಶಃ ನೀವು ನಿಮ್ಮ ಪ್ರಾಣವನ್ನೇ ಕಳಕೊಳ್ಳುತ್ತಿದ್ದೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِن نَّشَأْ نُنَزِّلْ عَلَيْهِم مِّنَ ٱلسَّمَآءِ ءَايَةً فَظَلَّتْ أَعْنَٰقُهُمْ لَهَا خَٰضِعِينَ
Kannada Translation - Hamza Butur ನಾವು ಇಚ್ಛಿಸಿದರೆ ಅವರಿಗೆ ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸಿಕೊಡುವೆವು. ಅದರ ಮುಂದೆ ಅವರ ಕೊರಳುಗಳು ವಿನಮ್ರವಾಗುವುವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا يَأْتِيهِم مِّن ذِكْرٍ مِّنَ ٱلرَّحْمَٰنِ مُحْدَثٍ إِلَّا كَانُوا۟ عَنْهُ مُعْرِضِينَ
Kannada Translation - Hamza Butur ಅವರ ಬಳಿಗೆ ಪರಮ ದಯಾಮಯನ (ಅಲ್ಲಾಹನ) ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَقَدْ كَذَّبُوا۟ فَسَيَأْتِيهِمْ أَنۢبَٰٓؤُا۟ مَا كَانُوا۟ بِهِۦ يَسْتَهْزِءُونَ
Kannada Translation - Hamza Butur ಅವರು ನಿಷೇಧಿಸಿದರು. ಆದ್ದರಿಂದ ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದರ ಸಮಾಚಾರವು ಸದ್ಯವೇ ಅವರ ಬಳಿಗೆ ಬರುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوَلَمْ يَرَوْا۟ إِلَى ٱلْأَرْضِ كَمْ أَنۢبَتْنَا فِيهَا مِن كُلِّ زَوْجٍ كَرِيمٍ
Kannada Translation - Hamza Butur ಅವರು ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳಿಂದ ಎಷ್ಟೆಲ್ಲಾ ಬೆಳೆಸಿದ್ದೇವೆಂದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِذْ نَادَىٰ رَبُّكَ مُوسَىٰٓ أَنِ ٱئْتِ ٱلْقَوْمَ ٱلظَّٰلِمِينَ
Kannada Translation - Hamza Butur ನಿಮ್ಮ ಪರಿಪಾಲಕನು (ಅಲ್ಲಾಹು) ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅತಿರೇಕಿಗಳಾದ ಆ ಜನರ ಬಳಿಗೆ ಹೋಗಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَوْمَ فِرْعَوْنَ أَلَا يَتَّقُونَ
Kannada Translation - Hamza Butur ಫರೋಹನ ಜನರ ಬಳಿಗೆ.” ಅವರು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّ إِنِّىٓ أَخَافُ أَن يُكَذِّبُونِ
Kannada Translation - Hamza Butur ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನ್ನನ್ನು ನಿಷೇಧಿಸುವರೆಂದು ನನಗೆ ಭಯವಾಗುತ್ತಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيَضِيقُ صَدْرِى وَلَا يَنطَلِقُ لِسَانِى فَأَرْسِلْ إِلَىٰ هَٰرُونَ
Kannada Translation - Hamza Butur ನನಗೆ ಹೃದಯದಲ್ಲಿ ಇಕ್ಕಟ್ಟು ಅನುಭವವಾಗುತ್ತದೆ ಮತ್ತು ನನ್ನ ನಾಲಗೆ ಸರಿಯಾಗಿ ಚಲಿಸುವುದಿಲ್ಲ. ಆದ್ದರಿಂದ ನೀನು ಹಾರೂನರಿಗೂ ಸಂದೇಶ ಕಳುಹಿಸು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَهُمْ عَلَىَّ ذَنۢبٌ فَأَخَافُ أَن يَقْتُلُونِ
Kannada Translation - Hamza Butur ಅವರಿಗೆ ನನ್ನ ಮೇಲೆ ಒಂದು ಅಪರಾಧ ಮಾಡಿದ ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ كَلَّا فَٱذْهَبَا بِـَٔايَٰتِنَآ إِنَّا مَعَكُم مُّسْتَمِعُونَ
Kannada Translation - Hamza Butur ಅಲ್ಲಾಹು ಹೇಳಿದನು: “ಸಾಧ್ಯವೇ ಇಲ್ಲ. ನೀವಿಬ್ಬರೂ ನಮ್ಮ ದೃಷ್ಟಾಂತಗಳೊಂದಿಗೆ ಹೋಗಿರಿ. ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಕೇಳುತ್ತಾ ನಿಮ್ಮ ಜೊತೆಗಿದ್ದೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأْتِيَا فِرْعَوْنَ فَقُولَآ إِنَّا رَسُولُ رَبِّ ٱلْعَٰلَمِينَ
Kannada Translation - Hamza Butur ನೀವು ಫರೋಹನ ಬಳಿಗೆ ಹೋಗಿರಿ. ನಂತರ ಹೇಳಿರಿ: “ನಾವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَنْ أَرْسِلْ مَعَنَا بَنِىٓ إِسْرَٰٓءِيلَ
Kannada Translation - Hamza Butur ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕು (ಎಂಬ ಆದೇಶದೊಂದಿಗೆ ಬಂದಿದ್ದೇವೆ).”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
Kannada Translation - Hamza Butur ಫರೋಹ ಹೇಳಿದನು: “ನೀನು ಮಗುವಾಗಿದ್ದಾಗ ನಾವು ನಿನ್ನನ್ನು ಸಾಕಲಿಲ್ಲವೇ? ನೀನಂತೂ ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನಮ್ಮ ಜೊತೆಗೇ ಕಳೆದಿರುವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَفَعَلْتَ فَعْلَتَكَ ٱلَّتِى فَعَلْتَ وَأَنتَ مِنَ ٱلْكَٰفِرِينَ
Kannada Translation - Hamza Butur ನಂತರ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು ಮಾಡಿದೆ. ನಿಜಕ್ಕೂ ನೀನು ಕೃತಜ್ಞತೆಯಿಲ್ಲದವನಾಗಿದ್ದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَعَلْتُهَآ إِذًا وَأَنَا۠ مِنَ ٱلضَّآلِّينَ
Kannada Translation - Hamza Butur ಮೂಸಾ ಹೇಳಿದರು: “ನಾನು ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಆಗ ನಾನು ಸರಿದಾರಿಯನ್ನು ತಿಳಿಯದ ಜನರಲ್ಲಿ ಸೇರಿದ್ದೆನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَفَرَرْتُ مِنكُمْ لَمَّا خِفْتُكُمْ فَوَهَبَ لِى رَبِّى حُكْمًا وَجَعَلَنِى مِنَ ٱلْمُرْسَلِينَ
Kannada Translation - Hamza Butur ನಂತರ ನಿಮ್ಮ ಭಯದಿಂದ ನಾನು ನಿಮ್ಮಿಂದ ದೂರ ಓಡಿದೆನು. ನಂತರ ನನ್ನ ಪರಿಪಾಲಕನು (ಅಲ್ಲಾಹು) ನನಗೆ ವಿವೇಕವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتِلْكَ نِعْمَةٌ تَمُنُّهَا عَلَىَّ أَنْ عَبَّدتَّ بَنِىٓ إِسْرَٰٓءِيلَ
Kannada Translation - Hamza Butur ನೀನು ನನ್ನನ್ನು ಸಾಕಿ ಸಲಹಿದ್ದನ್ನು ನೀನು ನನಗೆ ಮಾಡಿದ ಉಪಕಾರವೆಂದು ಹೇಳುತ್ತಿರುವೆಯಾ? ಆದರೆ ವಾಸ್ತವವಾಗಿ, ನೀನು ಇಸ್ರಾಯೇಲ್ ಮಕ್ಕಳನ್ನು ನಿನ್ನ ಗುಲಾಮರನ್ನಾಗಿ ಮಾಡಿಕೊಂಡಿರುವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فِرْعَوْنُ وَمَا رَبُّ ٱلْعَٰلَمِينَ
Kannada Translation - Hamza Butur ಫರೋಹ ಕೇಳಿದನು: “ಸರ್ವಲೋಕಗಳ ಪರಿಪಾಲಕ ಎಂದರೇನು?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبُّ ٱلسَّمَٰوَٰتِ وَٱلْأَرْضِ وَمَا بَيْنَهُمَآ إِن كُنتُم مُّوقِنِينَ
Kannada Translation - Hamza Butur ಮೂಸಾ ಹೇಳಿದರು: “ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ لِمَنْ حَوْلَهُۥٓ أَلَا تَسْتَمِعُونَ
Kannada Translation - Hamza Butur ಫರೋಹ ತನ್ನ ಸುತ್ತಮುತ್ತಲಿರುವ ಜನರೊಡನೆ ಕೇಳಿದನು: “ಏನು? ನೀವು ಕಿವಿಗೊಡುವುದಿಲ್ಲವೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبُّكُمْ وَرَبُّ ءَابَآئِكُمُ ٱلْأَوَّلِينَ
Kannada Translation - Hamza Butur ಮೂಸಾ ಹೇಳಿದರು: “ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ إِنَّ رَسُولَكُمُ ٱلَّذِىٓ أُرْسِلَ إِلَيْكُمْ لَمَجْنُونٌ
Kannada Translation - Hamza Butur ಫರೋಹ ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ಈ ನಿಮ್ಮ ಸಂದೇಶವಾಹಕ ನಿಜಕ್ಕೂ ಒಬ್ಬ ಮಾನಸಿಕ ಅಸ್ವಸ್ಥ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبُّ ٱلْمَشْرِقِ وَٱلْمَغْرِبِ وَمَا بَيْنَهُمَآ إِن كُنتُمْ تَعْقِلُونَ
Kannada Translation - Hamza Butur ಮೂಸಾ ಹೇಳಿದರು: “ಅವನೇ ಪೂರ್ವ, ಪಶ್ಚಿಮ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ಆಲೋಚಿಸುವವರಾಗಿದ್ದರೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ لَئِنِ ٱتَّخَذْتَ إِلَٰهًا غَيْرِى لَأَجْعَلَنَّكَ مِنَ ٱلْمَسْجُونِينَ
Kannada Translation - Hamza Butur ಫರೋಹ ಹೇಳಿದನು: “ನೀನು ನನ್ನನ್ನು ಬಿಟ್ಟು ಬೇರೊಬ್ಬನನ್ನು ದೇವರೆಂದು ಸ್ವೀಕರಿಸಿದರೆ ನಾನು ನಿನ್ನನ್ನು ಖಂಡಿತ ಸೆರೆಮನೆಗೆ ತಳ್ಳುವೆನು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ أَوَلَوْ جِئْتُكَ بِشَىْءٍ مُّبِينٍ
Kannada Translation - Hamza Butur ಮೂಸಾ ಹೇಳಿದರು: “ಒಂದು ವೇಳೆ ನಾನು ನಿಮ್ಮ ಬಳಿಗೆ ಒಂದು ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿದರೆ (ನೀವು ನನ್ನ ಮಾತನ್ನು ನಂಬುವಿರಾ)?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَأْتِ بِهِۦٓ إِن كُنتَ مِنَ ٱلصَّٰدِقِينَ
Kannada Translation - Hamza Butur ಫರೋಹ ಹೇಳಿದನು: “ಸರಿ! ತಂದು ತೋರಿಸು. ನೀನು ಸತ್ಯವಂತನಾಗಿದ್ದರೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَلْقَىٰ عَصَاهُ فَإِذَا هِىَ ثُعْبَانٌ مُّبِينٌ
Kannada Translation - Hamza Butur ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಅದು ತಕ್ಷಣ ಒಂದು ಸರ್ಪವಾಗಿ ಮಾರ್ಪಟ್ಟಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَنَزَعَ يَدَهُۥ فَإِذَا هِىَ بَيْضَآءُ لِلنَّٰظِرِينَ
Kannada Translation - Hamza Butur ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಎಳೆದರು. ಆಗ ಅದು ನೋಡುಗರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ لِلْمَلَإِ حَوْلَهُۥٓ إِنَّ هَٰذَا لَسَٰحِرٌ عَلِيمٌ
Kannada Translation - Hamza Butur ಫರೋಹ ತನ್ನ ಸುತ್ತಮುತ್ತಲಿದ್ದ ಮುಖಂಡರೊಂದಿಗೆ ಹೇಳಿದನು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يُرِيدُ أَن يُخْرِجَكُم مِّنْ أَرْضِكُم بِسِحْرِهِۦ فَمَاذَا تَأْمُرُونَ
Kannada Translation - Hamza Butur ತನ್ನ ಮಾಟಗಾರಿಕೆಯಿಂದ ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಹೇಳಿ, ನೀವೇನು ಆದೇಶಿಸುತ್ತೀರಿ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوٓا۟ أَرْجِهْ وَأَخَاهُ وَٱبْعَثْ فِى ٱلْمَدَآئِنِ حَٰشِرِينَ
Kannada Translation - Hamza Butur ಮುಖಂಡರು ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَأْتُوكَ بِكُلِّ سَحَّارٍ عَلِيمٍ
Kannada Translation - Hamza Butur ಅವರು ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಕರೆದುಕೊಂಡು ಬರಲಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَجُمِعَ ٱلسَّحَرَةُ لِمِيقَٰتِ يَوْمٍ مَّعْلُومٍ
Kannada Translation - Hamza Butur ನಂತರ ಒಂದು ಸುಪರಿಚಿತ ದಿನದ ನಿಶ್ಚಿತ ಸಮಯದಲ್ಲಿ ಮಾಟಗಾರರನ್ನು ಒಟ್ಟು ಸೇರಿಸಲಾಯಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقِيلَ لِلنَّاسِ هَلْ أَنتُم مُّجْتَمِعُونَ
Kannada Translation - Hamza Butur ಪ್ರಜೆಗಳೊಡನೆ ಕೇಳಲಾಯಿತು: “ನೀವು ಕೂಡ ಒಟ್ಟುಗೂಡುತ್ತೀರಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَعَلَّنَا نَتَّبِعُ ٱلسَّحَرَةَ إِن كَانُوا۟ هُمُ ٱلْغَٰلِبِينَ
Kannada Translation - Hamza Butur ಮಾಟಗಾರರು ಗೆದ್ದರೆ ನಮಗೆ ಅವರನ್ನೇ ಹಿಂಬಾಲಿಸಬಹುದು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَمَّا جَآءَ ٱلسَّحَرَةُ قَالُوا۟ لِفِرْعَوْنَ أَئِنَّ لَنَا لَأَجْرًا إِن كُنَّا نَحْنُ ٱلْغَٰلِبِينَ
Kannada Translation - Hamza Butur ನಂತರ ಮಾಟಗಾರರು ಬಂದಾಗ, ಅವರು ಫರೋಹನೊಡನೆ ಕೇಳಿದರು: “ನಾವು ಗೆದ್ದರೆ ನಮಗೆ ಖಂಡಿತ ಪ್ರತಿಫಲವಿದೆಯಲ್ಲವೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ نَعَمْ وَإِنَّكُمْ إِذًا لَّمِنَ ٱلْمُقَرَّبِينَ
Kannada Translation - Hamza Butur ಫರೋಹ ಹೇಳಿದನು: “ಹೌದು! ನೀವು ಖಂಡಿತ ನನ್ನ ಆಪ್ತರಾಗಿ ಬಿಡುವಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ لَهُم مُّوسَىٰٓ أَلْقُوا۟ مَآ أَنتُم مُّلْقُونَ
Kannada Translation - Hamza Butur ಮೂಸಾ ಅವರೊಡನೆ ಹೇಳಿದರು: “ನಿಮಗೆ ಎಸೆಯಲಿರುವುದನ್ನು ಎಸೆಯಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَلْقَوْا۟ حِبَالَهُمْ وَعِصِيَّهُمْ وَقَالُوا۟ بِعِزَّةِ فِرْعَوْنَ إِنَّا لَنَحْنُ ٱلْغَٰلِبُونَ
Kannada Translation - Hamza Butur ಆಗ ಅವರು ಅವರ ಹಗ್ಗಗಳನ್ನು ಮತ್ತು ಕೋಲುಗಳನ್ನು ಎಸೆದರು. ಅವರು ಹೇಳಿದರು: “ಫರೋಹನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾವೇ ಗೆಲ್ಲುವೆವು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَلْقَىٰ مُوسَىٰ عَصَاهُ فَإِذَا هِىَ تَلْقَفُ مَا يَأْفِكُونَ
Kannada Translation - Hamza Butur ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಆಗ ಅಗೋ! ಅವರು ಕಣ್ಕಟ್ಟಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأُلْقِىَ ٱلسَّحَرَةُ سَٰجِدِينَ
Kannada Translation - Hamza Butur ಆಗ ಮಾಟಗಾರರು ಸಾಷ್ಟಾಂಗ ಬಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوٓا۟ ءَامَنَّا بِرَبِّ ٱلْعَٰلَمِينَ
Kannada Translation - Hamza Butur ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَبِّ مُوسَىٰ وَهَٰرُونَ
Kannada Translation - Hamza Butur ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ ءَامَنتُمْ لَهُۥ قَبْلَ أَنْ ءَاذَنَ لَكُمْ إِنَّهُۥ لَكَبِيرُكُمُ ٱلَّذِى عَلَّمَكُمُ ٱلسِّحْرَ فَلَسَوْفَ تَعْلَمُونَ لَأُقَطِّعَنَّ أَيْدِيَكُمْ وَأَرْجُلَكُم مِّنْ خِلَٰفٍ وَلَأُصَلِّبَنَّكُمْ أَجْمَعِينَ
Kannada Translation - Hamza Butur ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ನೀವು ಸದ್ಯವೇ ತಿಳಿಯುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ لَا ضَيْرَ إِنَّآ إِلَىٰ رَبِّنَا مُنقَلِبُونَ
Kannada Translation - Hamza Butur ಮಾಟಗಾರರು ಹೇಳಿದರು: “ಪರವಾಗಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا نَطْمَعُ أَن يَغْفِرَ لَنَا رَبُّنَا خَطَٰيَٰنَآ أَن كُنَّآ أَوَّلَ ٱلْمُؤْمِنِينَ
Kannada Translation - Hamza Butur ನಾವು ಮೊತ್ತಮೊದಲು ವಿಶ್ವಾಸವಿಟ್ಟ ಜನರಾಗಿರುವುದರಿಂದ ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮ ಪಾಪಗಳನ್ನು ಕ್ಷಮಿಸುವನೆಂದು ನಮಗೆ ಭರವಸೆಯಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَوْحَيْنَآ إِلَىٰ مُوسَىٰٓ أَنْ أَسْرِ بِعِبَادِىٓ إِنَّكُم مُّتَّبَعُونَ
Kannada Translation - Hamza Butur ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಖಂಡಿತವಾಗಿಯೂ ಅವರು ನಿಮ್ಮನ್ನು ಹಿಂಬಾಲಿಸಿ ಬರುವರು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَرْسَلَ فِرْعَوْنُ فِى ٱلْمَدَآئِنِ حَٰشِرِينَ
Kannada Translation - Hamza Butur ಆಗ ಫರೋಹ ಎಲ್ಲಾ ಪಟ್ಟಣಗಳಿಗೂ ಸೈನಿಕರನ್ನು ಕಳುಹಿಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰٓؤُلَآءِ لَشِرْذِمَةٌ قَلِيلُونَ
Kannada Translation - Hamza Butur “ನಿಜಕ್ಕೂ ಇವರೊಂದು ಚಿಕ್ಕ ಸಂಖ್ಯೆಯ ಜನರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُمْ لَنَا لَغَآئِظُونَ
Kannada Translation - Hamza Butur ಆದರೂ ಇವರು ನಮ್ಮನ್ನೇ ರೇಗಿಸುತ್ತಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّا لَجَمِيعٌ حَٰذِرُونَ
Kannada Translation - Hamza Butur ನಿಶ್ಚಯವಾಗಿಯೂ ನಾವು ದೊಡ್ಡ ಸಂಖ್ಯೆಯಲ್ಲಿದ್ದು (ಇವರ ಪಿತೂರಿಯನ್ನು ಸೋಲಿಸಲು) ಸದಾ ಎಚ್ಚರವಾಗಿರಬೇಕಾಗಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَخْرَجْنَٰهُم مِّن جَنَّٰتٍ وَعُيُونٍ
Kannada Translation - Hamza Butur ಕೊನೆಗೆ ನಾವು ಅವರನ್ನು ತೋಟಗಳಿಂದ ಮತ್ತು ನೀರಿನ ತೊರೆಗಳಿಂದ ಹೊರಹಾಕಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَكُنُوزٍ وَمَقَامٍ كَرِيمٍ
Kannada Translation - Hamza Butur ಖಜಾನೆಗಳಿಂದ ಮತ್ತು ಉನ್ನತ ಸ್ಥಾನಮಾನಗಳಿಂದ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَٰلِكَ وَأَوْرَثْنَٰهَا بَنِىٓ إِسْرَٰٓءِيلَ
Kannada Translation - Hamza Butur ಇದೇ ರೀತಿ. ನಂತರ ನಾವು ಇಸ್ರಾಯೇಲ್ ಮಕ್ಕಳನ್ನು ಆ ಎಲ್ಲಾ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَتْبَعُوهُم مُّشْرِقِينَ
Kannada Translation - Hamza Butur ಫರೋಹ ಮತ್ತು ಸೈನ್ಯವು ಸೂರ್ಯೋದಯವಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَمَّا تَرَٰٓءَا ٱلْجَمْعَانِ قَالَ أَصْحَٰبُ مُوسَىٰٓ إِنَّا لَمُدْرَكُونَ
Kannada Translation - Hamza Butur ನಂತರ ಎರಡು ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಮೂಸಾರ ಜೊತೆಗಿದ್ದವರು ಹೇಳಿದರು: “ಅಯ್ಯೋ! ನಾವು ಸಿಕ್ಕಿಬಿದ್ದೆವು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ كَلَّآ إِنَّ مَعِىَ رَبِّى سَيَهْدِينِ
Kannada Translation - Hamza Butur ಮೂಸಾ ಹೇಳಿದರು: “ಸಾಧ್ಯವೇ ಇಲ್ಲ. ನನ್ನ ಪರಿಪಾಲಕ (ಅಲ್ಲಾಹು) ನನ್ನ ಜೊತೆಯಲ್ಲೇ ಇದ್ದಾನೆ. ಅವನು ನನಗೆ ಖಂಡಿತ ದಾರಿ ತೋರಿಸುತ್ತಾನೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَوْحَيْنَآ إِلَىٰ مُوسَىٰٓ أَنِ ٱضْرِب بِّعَصَاكَ ٱلْبَحْرَ فَٱنفَلَقَ فَكَانَ كُلُّ فِرْقٍ كَٱلطَّوْدِ ٱلْعَظِيمِ
Kannada Translation - Hamza Butur ಆಗ ನಾವು ಮೂಸಾರಿಗೆ, “ನಿಮ್ಮ ಕೋಲಿನಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದೇವವಾಣಿ ನೀಡಿದೆವು. ಆಗ ಸಮುದ್ರವು ಇಬ್ಭಾಗವಾಯಿತು. ಅದರ ಒಂದೊಂದು ಭಾಗವು ಬೃಹತ್ ಪರ್ವತದಂತೆ ನಿಂತಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَزْلَفْنَا ثَمَّ ٱلْـَٔاخَرِينَ
Kannada Translation - Hamza Butur ನಾವು ಇತರರನ್ನು (ಫರೋಹನ ಜನರನ್ನು) ಕೂಡ ಅದರ ಸಮೀಪಕ್ಕೆ ತಂದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنجَيْنَا مُوسَىٰ وَمَن مَّعَهُۥٓ أَجْمَعِينَ
Kannada Translation - Hamza Butur ನಾವು ಮೂಸಾ ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ أَغْرَقْنَا ٱلْـَٔاخَرِينَ
Kannada Translation - Hamza Butur ನಂತರ ಇತರರನ್ನು (ಫರೋಹ ಮತ್ತು ಅವನ ಜನರನ್ನು) ಮುಳುಗಿಸಿ ಬಿಟ್ಟೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱتْلُ عَلَيْهِمْ نَبَأَ إِبْرَٰهِيمَ
Kannada Translation - Hamza Butur ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لِأَبِيهِ وَقَوْمِهِۦ مَا تَعْبُدُونَ
Kannada Translation - Hamza Butur ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ نَعْبُدُ أَصْنَامًا فَنَظَلُّ لَهَا عَٰكِفِينَ
Kannada Translation - Hamza Butur ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ هَلْ يَسْمَعُونَكُمْ إِذْ تَدْعُونَ
Kannada Translation - Hamza Butur ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوْ يَنفَعُونَكُمْ أَوْ يَضُرُّونَ
Kannada Translation - Hamza Butur ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ بَلْ وَجَدْنَآ ءَابَآءَنَا كَذَٰلِكَ يَفْعَلُونَ
Kannada Translation - Hamza Butur ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ أَفَرَءَيْتُم مَّا كُنتُمْ تَعْبُدُونَ
Kannada Translation - Hamza Butur ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَنتُمْ وَءَابَآؤُكُمُ ٱلْأَقْدَمُونَ
Kannada Translation - Hamza Butur ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَإِنَّهُمْ عَدُوٌّ لِّىٓ إِلَّا رَبَّ ٱلْعَٰلَمِينَ
Kannada Translation - Hamza Butur ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱلَّذِى خَلَقَنِى فَهُوَ يَهْدِينِ
Kannada Translation - Hamza Butur ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلَّذِى هُوَ يُطْعِمُنِى وَيَسْقِينِ
Kannada Translation - Hamza Butur ನನಗೆ ಆಹಾರ-ಪಾನೀಯಗಳನ್ನು ನೀಡುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِذَا مَرِضْتُ فَهُوَ يَشْفِينِ
Kannada Translation - Hamza Butur ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلَّذِى يُمِيتُنِى ثُمَّ يُحْيِينِ
Kannada Translation - Hamza Butur ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلَّذِىٓ أَطْمَعُ أَن يَغْفِرَ لِى خَطِيٓـَٔتِى يَوْمَ ٱلدِّينِ
Kannada Translation - Hamza Butur ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَبِّ هَبْ لِى حُكْمًا وَأَلْحِقْنِى بِٱلصَّٰلِحِينَ
Kannada Translation - Hamza Butur ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱجْعَل لِّى لِسَانَ صِدْقٍ فِى ٱلْـَٔاخِرِينَ
Kannada Translation - Hamza Butur ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱجْعَلْنِى مِن وَرَثَةِ جَنَّةِ ٱلنَّعِيمِ
Kannada Translation - Hamza Butur ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱغْفِرْ لِأَبِىٓ إِنَّهُۥ كَانَ مِنَ ٱلضَّآلِّينَ
Kannada Translation - Hamza Butur ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا تُخْزِنِى يَوْمَ يُبْعَثُونَ
Kannada Translation - Hamza Butur ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَوْمَ لَا يَنفَعُ مَالٌ وَلَا بَنُونَ
Kannada Translation - Hamza Butur ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّا مَنْ أَتَى ٱللَّهَ بِقَلْبٍ سَلِيمٍ
Kannada Translation - Hamza Butur ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأُزْلِفَتِ ٱلْجَنَّةُ لِلْمُتَّقِينَ
Kannada Translation - Hamza Butur ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَبُرِّزَتِ ٱلْجَحِيمُ لِلْغَاوِينَ
Kannada Translation - Hamza Butur ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقِيلَ لَهُمْ أَيْنَ مَا كُنتُمْ تَعْبُدُونَ
Kannada Translation - Hamza Butur ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مِن دُونِ ٱللَّهِ هَلْ يَنصُرُونَكُمْ أَوْ يَنتَصِرُونَ
Kannada Translation - Hamza Butur ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكُبْكِبُوا۟ فِيهَا هُمْ وَٱلْغَاوُۥنَ
Kannada Translation - Hamza Butur ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَجُنُودُ إِبْلِيسَ أَجْمَعُونَ
Kannada Translation - Hamza Butur ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ وَهُمْ فِيهَا يَخْتَصِمُونَ
Kannada Translation - Hamza Butur ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು:
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تَٱللَّهِ إِن كُنَّا لَفِى ضَلَٰلٍ مُّبِينٍ
Kannada Translation - Hamza Butur “ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ نُسَوِّيكُم بِرَبِّ ٱلْعَٰلَمِينَ
Kannada Translation - Hamza Butur ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَضَلَّنَآ إِلَّا ٱلْمُجْرِمُونَ
Kannada Translation - Hamza Butur ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَمَا لَنَا مِن شَٰفِعِينَ
Kannada Translation - Hamza Butur ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا صَدِيقٍ حَمِيمٍ
Kannada Translation - Hamza Butur ಆತ್ಮೀಯ ಮಿತ್ರರೂ ಇಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَوْ أَنَّ لَنَا كَرَّةً فَنَكُونَ مِنَ ٱلْمُؤْمِنِينَ
Kannada Translation - Hamza Butur ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ قَوْمُ نُوحٍ ٱلْمُرْسَلِينَ
Kannada Translation - Hamza Butur ನೂಹರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لَهُمْ أَخُوهُمْ نُوحٌ أَلَا تَتَّقُونَ
Kannada Translation - Hamza Butur ಅವರೊಡನೆ ಅವರ ಸಹೋದರ ನೂಹ್ ಹೇಳಿದ ಸಂದರ್ಭ.“ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى لَكُمْ رَسُولٌ أَمِينٌ
Kannada Translation - Hamza Butur ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَسْـَٔلُكُمْ عَلَيْهِ مِنْ أَجْرٍ إِنْ أَجْرِىَ إِلَّا عَلَىٰ رَبِّ ٱلْعَٰلَمِينَ
Kannada Translation - Hamza Butur ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوٓا۟ أَنُؤْمِنُ لَكَ وَٱتَّبَعَكَ ٱلْأَرْذَلُونَ
Kannada Translation - Hamza Butur ಅವರು ಹೇಳಿದರು: “ನಾವು ನಿನ್ನನ್ನು ಅನುಸರಿಸಬೇಕೇ? ನಿನ್ನ ಹಿಂದೆಯಿರುವುದು ಕೆಳವರ್ಗದ ಜನರು ಮಾತ್ರ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ وَمَا عِلْمِى بِمَا كَانُوا۟ يَعْمَلُونَ
Kannada Translation - Hamza Butur ನೂಹ್ ಹೇಳಿದರು: “ಅವರು ಮೊದಲು ಏನು ಮಾಡುತ್ತಿದ್ದರೆಂದು ನನಗೇನು ಗೊತ್ತು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ حِسَابُهُمْ إِلَّا عَلَىٰ رَبِّى لَوْ تَشْعُرُونَ
Kannada Translation - Hamza Butur ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ನನ್ನ ಪರಿಪಾಲಕನದ್ದು (ಅಲ್ಲಾಹನದ್ದು). ನಿಮಗೆ ಹಾಗೆ ಅನ್ನಿಸುತ್ತಿದ್ದರೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَنَا۠ بِطَارِدِ ٱلْمُؤْمِنِينَ
Kannada Translation - Hamza Butur ನಾನು ಸತ್ಯವಿಶ್ವಾಸಿಗಳನ್ನು ದೂರ ತಳ್ಳುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ أَنَا۠ إِلَّا نَذِيرٌ مُّبِينٌ
Kannada Translation - Hamza Butur ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ لَئِن لَّمْ تَنتَهِ يَٰنُوحُ لَتَكُونَنَّ مِنَ ٱلْمَرْجُومِينَ
Kannada Translation - Hamza Butur ಅವರು ಹೇಳಿದರು: “ಓ ನೂಹ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುವೆವು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّ إِنَّ قَوْمِى كَذَّبُونِ
Kannada Translation - Hamza Butur ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱفْتَحْ بَيْنِى وَبَيْنَهُمْ فَتْحًا وَنَجِّنِى وَمَن مَّعِىَ مِنَ ٱلْمُؤْمِنِينَ
Kannada Translation - Hamza Butur ಆದ್ದರಿಂದ ನನ್ನ ಮತ್ತು ಅವರ ನಡುವೆ ನಿರ್ಣಾಯಕವಾದ ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَنجَيْنَٰهُ وَمَن مَّعَهُۥ فِى ٱلْفُلْكِ ٱلْمَشْحُونِ
Kannada Translation - Hamza Butur ಆಗ ನಾವು ಅವರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ತುಂಬಿ ತುಳುಕುವ ನಾವೆಯಲ್ಲಿ ರಕ್ಷಿಸಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ أَغْرَقْنَا بَعْدُ ٱلْبَاقِينَ
Kannada Translation - Hamza Butur ನಂತರ, ಉಳಿದವರನ್ನು ಮುಳುಗಿಸಿ ಕೊಂದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ عَادٌ ٱلْمُرْسَلِينَ
Kannada Translation - Hamza Butur ಆದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لَهُمْ أَخُوهُمْ هُودٌ أَلَا تَتَّقُونَ
Kannada Translation - Hamza Butur ಅವರೊಡನೆ ಅವರ ಸಹೋದರ ಹೂದ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى لَكُمْ رَسُولٌ أَمِينٌ
Kannada Translation - Hamza Butur ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَسْـَٔلُكُمْ عَلَيْهِ مِنْ أَجْرٍ إِنْ أَجْرِىَ إِلَّا عَلَىٰ رَبِّ ٱلْعَٰلَمِينَ
Kannada Translation - Hamza Butur ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَتَبْنُونَ بِكُلِّ رِيعٍ ءَايَةً تَعْبَثُونَ
Kannada Translation - Hamza Butur ನೀವು ಎಲ್ಲಾ ಗುಡ್ಡಗಳಲ್ಲೂ ಮೋಜು ಮಸ್ತಿಗಾಗಿ ನಿಶಾನಿಗಳನ್ನು (ಕಟ್ಟಡಗಳನ್ನು) ನಿರ್ಮಿಸುತ್ತಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَتَّخِذُونَ مَصَانِعَ لَعَلَّكُمْ تَخْلُدُونَ
Kannada Translation - Hamza Butur ನೀವು ಮಹಾ ರಚನೆಗಳನ್ನು (ಭವ್ಯ ಸೌಧಗಳನ್ನು) ನಿರ್ಮಿಸುತ್ತಿದ್ದೀರಾ? ನೀವು ಇಲ್ಲೇ ಶಾಶ್ವತವಾಗಿ ವಾಸಿಸುವಿರಿ ಎಂಬ ಕಲ್ಪನೆಯಲ್ಲಿ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِذَا بَطَشْتُم بَطَشْتُمْ جَبَّارِينَ
Kannada Translation - Hamza Butur ನೀವು ಯಾರನ್ನಾದರೂ ಹಿಡಿಯುವಾಗ ಬಹಳ ಕಠೋರವಾಗಿ ಹಿಡಿಯುತ್ತೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱتَّقُوا۟ ٱلَّذِىٓ أَمَدَّكُم بِمَا تَعْلَمُونَ
Kannada Translation - Hamza Butur ನಿಮಗೆ ತಿಳಿದೇ ಇರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದವನನ್ನು (ಅಲ್ಲಾಹನನ್ನು) ಭಯಪಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمَدَّكُم بِأَنْعَٰمٍ وَبَنِينَ
Kannada Translation - Hamza Butur ಅವನು ನಿಮಗೆ ಜಾನುವಾರುಗಳು ಮತ್ತು ಮಕ್ಕಳು-ಮರಿಗಳನ್ನು ನೀಡಿ ಸಹಾಯ ಮಾಡಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَجَنَّٰتٍ وَعُيُونٍ
Kannada Translation - Hamza Butur ತೋಟಗಳು ಮತ್ತು ಚಿಲುಮೆಗಳನ್ನು ನೀಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
Kannada Translation - Hamza Butur ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ سَوَآءٌ عَلَيْنَآ أَوَعَظْتَ أَمْ لَمْ تَكُن مِّنَ ٱلْوَٰعِظِينَ
Kannada Translation - Hamza Butur ಅವರು ಹೇಳಿದರು: “ನೀನು ನಮಗೆ ಉಪದೇಶ ಮಾಡಿದರೂ ಅಥವಾ ಉಪದೇಶ ಮಾಡದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ هَٰذَآ إِلَّا خُلُقُ ٱلْأَوَّلِينَ
Kannada Translation - Hamza Butur ಇದು ಪ್ರಾಚೀನ ಕಾಲದ ಜನರ ವರ್ತನೆಯಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا نَحْنُ بِمُعَذَّبِينَ
Kannada Translation - Hamza Butur ನಾವು ಎಂದಿಗೂ ಶಿಕ್ಷೆಗೆ ಗುರಿಯಾಗುವುದಿಲ್ಲ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكَذَّبُوهُ فَأَهْلَكْنَٰهُمْ إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ಅವರು ಹೂದರನ್ನು ನಿಷೇಧಿಸಿದರು. ಆದ್ದರಿಂದ ನಾವು ಅವರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ ثَمُودُ ٱلْمُرْسَلِينَ
Kannada Translation - Hamza Butur ಸಮೂದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لَهُمْ أَخُوهُمْ صَٰلِحٌ أَلَا تَتَّقُونَ
Kannada Translation - Hamza Butur ಅವರೊಡನೆ ಅವರ ಸಹೋದರ ಸಾಲಿಹ್ ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى لَكُمْ رَسُولٌ أَمِينٌ
Kannada Translation - Hamza Butur ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَسْـَٔلُكُمْ عَلَيْهِ مِنْ أَجْرٍ إِنْ أَجْرِىَ إِلَّا عَلَىٰ رَبِّ ٱلْعَٰلَمِينَ
Kannada Translation - Hamza Butur ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَتُتْرَكُونَ فِى مَا هَٰهُنَآ ءَامِنِينَ
Kannada Translation - Hamza Butur ಇಲ್ಲಿರುವ ವಸ್ತುಗಳೊಂದಿಗೆ ನಿರ್ಭಯದಿಂದ ಜೀವಿಸಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى جَنَّٰتٍ وَعُيُونٍ
Kannada Translation - Hamza Butur ಅಂದರೆ ಈ ತೋಟಗಳು ಮತ್ತು ಕಾಲುವೆಗಳೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَزُرُوعٍ وَنَخْلٍ طَلْعُهَا هَضِيمٌ
Kannada Translation - Hamza Butur ಈ ಹೊಲಗಳು ಮತ್ತು ಮೃದು ಹಾಗೂ ರುಚಿಯಾದ ಹಣ್ಣುಗಳಿರುವ ಖರ್ಜೂರದ ಮರಗಳೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَنْحِتُونَ مِنَ ٱلْجِبَالِ بُيُوتًا فَٰرِهِينَ
Kannada Translation - Hamza Butur ನೀವು ಕೌಶಲ್ಯದಿಂದ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا تُطِيعُوٓا۟ أَمْرَ ٱلْمُسْرِفِينَ
Kannada Translation - Hamza Butur ಹದ್ದು ಮೀರಿದವರ ಆಜ್ಞೆಗಳನ್ನು ಅನುಸರಿಸಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱلَّذِينَ يُفْسِدُونَ فِى ٱلْأَرْضِ وَلَا يُصْلِحُونَ
Kannada Translation - Hamza Butur ಅವರು ಯಾರೆಂದರೆ, ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು; ಸುಧಾರಣೆ ಮಾಡದವರು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوٓا۟ إِنَّمَآ أَنتَ مِنَ ٱلْمُسَحَّرِينَ
Kannada Translation - Hamza Butur ಅವರು ಹೇಳಿದರು: “ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَآ أَنتَ إِلَّا بَشَرٌ مِّثْلُنَا فَأْتِ بِـَٔايَةٍ إِن كُنتَ مِنَ ٱلصَّٰدِقِينَ
Kannada Translation - Hamza Butur ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನೀನು ಸತ್ಯವನ್ನೇ ಹೇಳುತ್ತಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಂದು ತೋರಿಸು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ هَٰذِهِۦ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ
Kannada Translation - Hamza Butur ಸಾಲಿಹ್ ಹೇಳಿದರು: “ನೋಡಿ! ಇದು ಒಂಟೆ. ಇದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಕೂಡ ನೀರು ಕುಡಿಯುವ ಒಂದು ನಿಶ್ಚಿತ ದಿನವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا تَمَسُّوهَا بِسُوٓءٍ فَيَأْخُذَكُمْ عَذَابُ يَوْمٍ عَظِيمٍ
Kannada Translation - Hamza Butur ಆದ್ದರಿಂದ ಇದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಭಯಾನಕ ದಿನದ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَعَقَرُوهَا فَأَصْبَحُوا۟ نَٰدِمِينَ
Kannada Translation - Hamza Butur ಆದರೂ ಅವರು ಅದರ ಕಾಲುಗಳನ್ನು ಕಡಿದು ಸಾಯಿಸಿದರು. ನಂತರ (ಶಿಕ್ಷೆಯನ್ನು ಕಂಡಾಗ) ಅವರು ಮರುಗಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَخَذَهُمُ ٱلْعَذَابُ إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ಶಿಕ್ಷೆಯು ಅವರನ್ನು ಹಿಡಿದು ಬಿಟ್ಟಿತು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ قَوْمُ لُوطٍ ٱلْمُرْسَلِينَ
Kannada Translation - Hamza Butur ಲೂತರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لَهُمْ أَخُوهُمْ لُوطٌ أَلَا تَتَّقُونَ
Kannada Translation - Hamza Butur ಅವರೊಡನೆ ಅವರ ಸಹೋದರ ಲೂತ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى لَكُمْ رَسُولٌ أَمِينٌ
Kannada Translation - Hamza Butur ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَسْـَٔلُكُمْ عَلَيْهِ مِنْ أَجْرٍ إِنْ أَجْرِىَ إِلَّا عَلَىٰ رَبِّ ٱلْعَٰلَمِينَ
Kannada Translation - Hamza Butur ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَتَأْتُونَ ٱلذُّكْرَانَ مِنَ ٱلْعَٰلَمِينَ
Kannada Translation - Hamza Butur ನೀವು (ತೆವಲು ತೀರಿಸಿಕೊಳ್ಳಲು) ಸರ್ವಲೋಕದವರ ಪೈಕಿ ಕೇವಲ ಪುರುಷರ ಬಳಿಗೆ ಹೋಗುತ್ತೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَذَرُونَ مَا خَلَقَ لَكُمْ رَبُّكُم مِّنْ أَزْوَٰجِكُم بَلْ أَنتُمْ قَوْمٌ عَادُونَ
Kannada Translation - Hamza Butur ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ಬಿಟ್ಟುಬಿಡುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಹದ್ದು ಮೀರಿದ ಜನರಾಗಿದ್ದೀರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ لَئِن لَّمْ تَنتَهِ يَٰلُوطُ لَتَكُونَنَّ مِنَ ٱلْمُخْرَجِينَ
Kannada Translation - Hamza Butur ಅವರು ಹೇಳಿದರು: “ಓ ಲೂತ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಖಂಡಿತ ಊರಿನಿಂದ ಓಡಿಸುವೆವು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ إِنِّى لِعَمَلِكُم مِّنَ ٱلْقَالِينَ
Kannada Translation - Hamza Butur ಲೂತ್ ಹೇಳಿದರು: “ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಈ ಕೃತ್ಯವನ್ನು ನಾನು ಬಹಳ ದ್ವೇಷಿಸುತ್ತೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَبِّ نَجِّنِى وَأَهْلِى مِمَّا يَعْمَلُونَ
Kannada Translation - Hamza Butur ಓ ನನ್ನ ಪರಿಪಾಲಕನೇ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುವ ಈ ಕೃತ್ಯದಿಂದ ರಕ್ಷಿಸು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَنَجَّيْنَٰهُ وَأَهْلَهُۥٓ أَجْمَعِينَ
Kannada Translation - Hamza Butur ಆದ್ದರಿಂದ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّا عَجُوزًا فِى ٱلْغَٰبِرِينَ
Kannada Translation - Hamza Butur ಒಬ್ಬ ಮುದುಕಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದಳು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ دَمَّرْنَا ٱلْـَٔاخَرِينَ
Kannada Translation - Hamza Butur ನಂತರ ನಾವು ಅವರೆಲ್ಲರನ್ನೂ ನಾಶ ಮಾಡಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمْطَرْنَا عَلَيْهِم مَّطَرًا فَسَآءَ مَطَرُ ٱلْمُنذَرِينَ
Kannada Translation - Hamza Butur ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَ أَصْحَٰبُ لْـَٔيْكَةِ ٱلْمُرْسَلِينَ
Kannada Translation - Hamza Butur ಐಕತ್‌ನ ಜನರು (ಮದ್ಯನ್ ದೇಶದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ لَهُمْ شُعَيْبٌ أَلَا تَتَّقُونَ
Kannada Translation - Hamza Butur ಅವರೊಡನೆ ಶುಐಬರು ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنِّى لَكُمْ رَسُولٌ أَمِينٌ
Kannada Translation - Hamza Butur ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَٱتَّقُوا۟ ٱللَّهَ وَأَطِيعُونِ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَسْـَٔلُكُمْ عَلَيْهِ مِنْ أَجْرٍ إِنْ أَجْرِىَ إِلَّا عَلَىٰ رَبِّ ٱلْعَٰلَمِينَ
Kannada Translation - Hamza Butur ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوْفُوا۟ ٱلْكَيْلَ وَلَا تَكُونُوا۟ مِنَ ٱلْمُخْسِرِينَ
Kannada Translation - Hamza Butur ಅಳತೆಯನ್ನು ಪೂರ್ತಿಯಾಗಿ ಕೊಡಿ. ಜನರಿಗೆ ನಷ್ಟ ಮಾಡುವವರಲ್ಲಿ ಸೇರಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَزِنُوا۟ بِٱلْقِسْطَاسِ ٱلْمُسْتَقِيمِ
Kannada Translation - Hamza Butur ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَا تَبْخَسُوا۟ ٱلنَّاسَ أَشْيَآءَهُمْ وَلَا تَعْثَوْا۟ فِى ٱلْأَرْضِ مُفْسِدِينَ
Kannada Translation - Hamza Butur ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಬೇಡಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱتَّقُوا۟ ٱلَّذِى خَلَقَكُمْ وَٱلْجِبِلَّةَ ٱلْأَوَّلِينَ
Kannada Translation - Hamza Butur ನಿಮ್ಮನ್ನು ಮತ್ತು ನಿಮಗಿಂತ ಮೊದಲಿನ ಜನರನ್ನು ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوٓا۟ إِنَّمَآ أَنتَ مِنَ ٱلْمُسَحَّرِينَ
Kannada Translation - Hamza Butur ಅವರು ಹೇಳಿದರು: “ನಿಶ್ಚಯವಾಗಿಯೂ ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَنتَ إِلَّا بَشَرٌ مِّثْلُنَا وَإِن نَّظُنُّكَ لَمِنَ ٱلْكَٰذِبِينَ
Kannada Translation - Hamza Butur ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀಯೆಂದೇ ನಾವು ಭಾವಿಸುತ್ತೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَسْقِطْ عَلَيْنَا كِسَفًا مِّنَ ٱلسَّمَآءِ إِن كُنتَ مِنَ ٱلصَّٰدِقِينَ
Kannada Translation - Hamza Butur ನೀನು ಹೇಳುವುದು ನಿಜವೇ ಆಗಿದ್ದರೆ ಆಕಾಶದಿಂದ (ನಮ್ಮ ಮೇಲೆ) ತುಣುಕುಗಳು ಬೀಳುವಂತೆ ಮಾಡು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّىٓ أَعْلَمُ بِمَا تَعْمَلُونَ
Kannada Translation - Hamza Butur ಶುಐಬ್ ಹೇಳಿದರು: “ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكَذَّبُوهُ فَأَخَذَهُمْ عَذَابُ يَوْمِ ٱلظُّلَّةِ إِنَّهُۥ كَانَ عَذَابَ يَوْمٍ عَظِيمٍ
Kannada Translation - Hamza Butur ಅವರು ಶುಐಬರನ್ನು ನಿಷೇಧಿಸಿದರು. ಆದ್ದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು. ನಿಜಕ್ಕೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ فِى ذَٰلِكَ لَـَٔايَةً وَمَا كَانَ أَكْثَرُهُم مُّؤْمِنِينَ
Kannada Translation - Hamza Butur ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Kannada Translation - Hamza Butur ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَتَنزِيلُ رَبِّ ٱلْعَٰلَمِينَ
Kannada Translation - Hamza Butur ನಿಶ್ಚಯವಾಗಿಯೂ ಈ ಕುರ್‌ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نَزَلَ بِهِ ٱلرُّوحُ ٱلْأَمِينُ
Kannada Translation - Hamza Butur ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَلَىٰ قَلْبِكَ لِتَكُونَ مِنَ ٱلْمُنذِرِينَ
Kannada Translation - Hamza Butur ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بِلِسَانٍ عَرَبِىٍّ مُّبِينٍ
Kannada Translation - Hamza Butur ಸ್ಪಷ್ಟ ಅರಬ್ಬಿ ಭಾಷೆಯಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَفِى زُبُرِ ٱلْأَوَّلِينَ
Kannada Translation - Hamza Butur ನಿಶ್ಚಯವಾಗಿಯೂ ಪೂರ್ವಕಾಲದವರ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوَلَمْ يَكُن لَّهُمْ ءَايَةً أَن يَعْلَمَهُۥ عُلَمَٰٓؤُا۟ بَنِىٓ إِسْرَٰٓءِيلَ
Kannada Translation - Hamza Butur ಇಸ್ರಾಯೇಲ್ ಮಕ್ಕಳಲ್ಲಿರುವ ವಿದ್ವಾಂಸರು ಕೂಡ ಇದರ ಸತ್ಯತೆಯನ್ನು ತಿಳಿದಿದ್ದಾರೆ ಎನ್ನುವುದು ಇವರಿಗೆ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಾಗುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَوْ نَزَّلْنَٰهُ عَلَىٰ بَعْضِ ٱلْأَعْجَمِينَ
Kannada Translation - Hamza Butur ನಾವು ಅದನ್ನು ಅರಬ್ಬೇತರ ವ್ಯಕ್ತಿಗೆ ಅವತೀರ್ಣಗೊಳಿಸಿ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَقَرَأَهُۥ عَلَيْهِم مَّا كَانُوا۟ بِهِۦ مُؤْمِنِينَ
Kannada Translation - Hamza Butur ನಂತರ ಆತ ಅದನ್ನು ಇವರಿಗೆ ಓದಿಕೊಟ್ಟರೂ ಇವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَٰلِكَ سَلَكْنَٰهُ فِى قُلُوبِ ٱلْمُجْرِمِينَ
Kannada Translation - Hamza Butur ಈ ರೀತಿ ನಾವು ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಸತ್ಯನಿಷೇಧವನ್ನು) ತೂರಿಸಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَا يُؤْمِنُونَ بِهِۦ حَتَّىٰ يَرَوُا۟ ٱلْعَذَابَ ٱلْأَلِيمَ
Kannada Translation - Hamza Butur ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَيَأْتِيَهُم بَغْتَةً وَهُمْ لَا يَشْعُرُونَ
Kannada Translation - Hamza Butur ಅದು ಹಠಾತ್ತನೆ ಅವರ ಬಳಿಗೆ ಬರುತ್ತದೆ. ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَيَقُولُوا۟ هَلْ نَحْنُ مُنظَرُونَ
Kannada Translation - Hamza Butur ಅವರು ಕೇಳುತ್ತಾರೆ: “ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَبِعَذَابِنَا يَسْتَعْجِلُونَ
Kannada Translation - Hamza Butur ಹಾಗಾದರೆ ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتَ إِن مَّتَّعْنَٰهُمْ سِنِينَ
Kannada Translation - Hamza Butur ನೀವು ಆಲೋಚಿಸಿ ನೋಡಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸವಲತ್ತುಗಳನ್ನು ನೀಡಿ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ جَآءَهُم مَّا كَانُوا۟ يُوعَدُونَ
Kannada Translation - Hamza Butur ನಂತರ ಅವರಿಗೆ ವಾಗ್ದಾನ ಮಾಡಲಾದ ಶಿಕ್ಷೆಯು ಅವರ ಬಳಿಗೆ ಬಂದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَآ أَغْنَىٰ عَنْهُم مَّا كَانُوا۟ يُمَتَّعُونَ
Kannada Translation - Hamza Butur ಅವರಿಗೆ ನೀಡಲಾದ ಯಾವುದೇ ಸವಲತ್ತುಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآ أَهْلَكْنَا مِن قَرْيَةٍ إِلَّا لَهَا مُنذِرُونَ
Kannada Translation - Hamza Butur ನಾವು ಯಾವುದೇ ಊರನ್ನು, ಅದಕ್ಕೆ ಮುನ್ನೆಚ್ಚರಿಕೆ ನೀಡುವವರನ್ನು (ಪ್ರವಾದಿಗಳನ್ನು) ಕಳುಹಿಸಿದ ನಂತರವಲ್ಲದೆ ನಾಶ ಮಾಡಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ذِكْرَىٰ وَمَا كُنَّا ظَٰلِمِينَ
Kannada Translation - Hamza Butur ಇದೊಂದು ಉಪದೇಶ ಮಾತ್ರ. ನಾವು ಎಂದಿಗೂ ಅನ್ಯಾಯ ಮಾಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا تَنَزَّلَتْ بِهِ ٱلشَّيَٰطِينُ
Kannada Translation - Hamza Butur ಶೈತಾನರು ಈ ಕುರ್‌ಆನನ್ನು ತಂದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا يَنۢبَغِى لَهُمْ وَمَا يَسْتَطِيعُونَ
Kannada Translation - Hamza Butur ಅದು ಅವರಿಗೆ ಯೋಗ್ಯವೂ ಅಲ್ಲ. ಅವರಿಗೆ ಅಂತಹ ಸಾಮರ್ಥ್ಯವೂ ಇಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُمْ عَنِ ٱلسَّمْعِ لَمَعْزُولُونَ
Kannada Translation - Hamza Butur ವಾಸ್ತವವಾಗಿ, ಅವರನ್ನು (ದೇವವಾಣಿಗೆ) ಕಿವಿಗೊಡದಂತೆ ದೂರ ಸರಿಸಲಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَا تَدْعُ مَعَ ٱللَّهِ إِلَٰهًا ءَاخَرَ فَتَكُونَ مِنَ ٱلْمُعَذَّبِينَ
Kannada Translation - Hamza Butur ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಹಾಗೇನಾದರೂ ಆದರೆ ನೀವು ಶಿಕ್ಷಗೆ ಗುರಿಯಾದವರಲ್ಲಿ ಸೇರುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنذِرْ عَشِيرَتَكَ ٱلْأَقْرَبِينَ
Kannada Translation - Hamza Butur ನಿಮ್ಮ ಹತ್ತಿರದ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱخْفِضْ جَنَاحَكَ لِمَنِ ٱتَّبَعَكَ مِنَ ٱلْمُؤْمِنِينَ
Kannada Translation - Hamza Butur ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿ (ಅವರೊಡನೆ ಸೌಮ್ಯವಾಗಿ ವರ್ತಿಸಿ).
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَإِنْ عَصَوْكَ فَقُلْ إِنِّى بَرِىٓءٌ مِّمَّا تَعْمَلُونَ
Kannada Translation - Hamza Butur ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಹೇಳಿರಿ: “ನೀವು ಮಾಡುವ ಕರ್ಮಗಳಿಗೆ ನಾನು ಹೊಣೆಯಲ್ಲ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَوَكَّلْ عَلَى ٱلْعَزِيزِ ٱلرَّحِيمِ
Kannada Translation - Hamza Butur ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱلَّذِى يَرَىٰكَ حِينَ تَقُومُ
Kannada Translation - Hamza Butur ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَقَلُّبَكَ فِى ٱلسَّٰجِدِينَ
Kannada Translation - Hamza Butur ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُۥ هُوَ ٱلسَّمِيعُ ٱلْعَلِيمُ
Kannada Translation - Hamza Butur ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಸರ್ವಜ್ಞನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَلْ أُنَبِّئُكُمْ عَلَىٰ مَن تَنَزَّلُ ٱلشَّيَٰطِينُ
Kannada Translation - Hamza Butur ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تَنَزَّلُ عَلَىٰ كُلِّ أَفَّاكٍ أَثِيمٍ
Kannada Translation - Hamza Butur ಪ್ರತಿಯೊಬ್ಬ ಸುಳ್ಳುಗಾರ ಪಾಪಿಯ ಮೇಲೆ ಅವರು ಇಳಿಯುತ್ತಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يُلْقُونَ ٱلسَّمْعَ وَأَكْثَرُهُمْ كَٰذِبُونَ
Kannada Translation - Hamza Butur ಅವರು ಕೇಳಿದ್ದೆಲ್ಲವನ್ನೂ ತಲುಪಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳರಾಗಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلشُّعَرَآءُ يَتَّبِعُهُمُ ٱلْغَاوُۥنَ
Kannada Translation - Hamza Butur ಕವಿಗಳನ್ನು ದುರ್ಮಾರ್ಗಿಗಳು ಹಿಂಬಾಲಿಸುತ್ತಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَلَمْ تَرَ أَنَّهُمْ فِى كُلِّ وَادٍ يَهِيمُونَ
Kannada Translation - Hamza Butur ಅವರು (ಕವಿಗಳು) ಎಲ್ಲ ಕಣಿವೆಗಳಲ್ಲೂ ವಿಹರಿಸುವುದನ್ನು ನೀವು ನೋಡಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنَّهُمْ يَقُولُونَ مَا لَا يَفْعَلُونَ
Kannada Translation - Hamza Butur ಅವರು ಮಾಡದ ಕೆಲಸಗಳನ್ನು ಅವರು ಹೇಳುತ್ತಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَذَكَرُوا۟ ٱللَّهَ كَثِيرًا وَٱنتَصَرُوا۟ مِنۢ بَعْدِ مَا ظُلِمُوا۟ وَسَيَعْلَمُ ٱلَّذِينَ ظَلَمُوٓا۟ أَىَّ مُنقَلَبٍ يَنقَلِبُونَ
Kannada Translation - Hamza Butur ಆದರೆ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರು, ಮರ್ದನಕ್ಕೊಳಗಾದ ಬಳಿಕ ಪ್ರತೀಕಾರ ಪಡೆಯುವವರು ಇದರಿಂದ ಹೊರತಾಗಿದ್ದಾರೆ. ಅಕ್ರಮವೆಸಗಿದವರು ಸದ್ಯವೇ ಅವರು ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ತಿಳಿದುಕೊಳ್ಳುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Furqaan
ಸೂರ An-Naml →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.