ಮುಖಪುಟ › ಸೂರಗಳು › ಸೂರ Nooh
ಸೂರ Nooh نوح
28 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 71
بِسْمِ ٱللَّهِ ٱلرَّحْمَٰنِ ٱلرَّحِيمِ إِنَّآ أَرْسَلْنَا نُوحًا إِلَىٰ قَوْمِهِۦٓ أَنْ أَنذِرْ قَوْمَكَ مِن قَبْلِ أَن يَأْتِيَهُمْ عَذَابٌ أَلِيمٌ
Kannada Translation - Hamza Butur ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರಿಗೆ ಯಾತನಾಮಯ ಶಿಕ್ಷೆ ಎರಗುವುದಕ್ಕೆ ಮೊದಲೇ ಅವರಿಗೆ ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ يَٰقَوْمِ إِنِّى لَكُمْ نَذِيرٌ مُّبِينٌ
Kannada Translation - Hamza Butur ನೂಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَنِ ٱعْبُدُوا۟ ٱللَّهَ وَٱتَّقُوهُ وَأَطِيعُونِ
Kannada Translation - Hamza Butur ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَغْفِرْ لَكُم مِّن ذُنُوبِكُمْ وَيُؤَخِّرْكُمْ إِلَىٰٓ أَجَلٍ مُّسَمًّى إِنَّ أَجَلَ ٱللَّهِ إِذَا جَآءَ لَا يُؤَخَّرُ لَوْ كُنتُمْ تَعْلَمُونَ
Kannada Translation - Hamza Butur ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿಶ್ಚಿತ ಅವಧಿಯವರೆಗೆ ನಿಮ್ಮನ್ನು ಬಿಟ್ಟುಬಿಡುವನು. ನಿಶ್ಚಯವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದನ್ನು ಮುಂದೂಡಲಾಗುವುದಿಲ್ಲ. ನೀವು ತಿಳಿದವರಾಗಿದ್ದರೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّ إِنِّى دَعَوْتُ قَوْمِى لَيْلًا وَنَهَارًا
Kannada Translation - Hamza Butur ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಜನರನ್ನು ಹಗಲು-ರಾತ್ರಿ ನಿನ್ನ ಕಡೆಗೆ ಕರೆದಿದ್ದೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَمْ يَزِدْهُمْ دُعَآءِىٓ إِلَّا فِرَارًا
Kannada Translation - Hamza Butur ಆದರೆ ನನ್ನ ಕರೆಯು ಅವರಿಗೆ ಪಲಾಯನವನ್ನೇ ವಿನಾ ಇನ್ನೇನನ್ನೂ ಹೆಚ್ಚಿಸಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنِّى كُلَّمَا دَعَوْتُهُمْ لِتَغْفِرَ لَهُمْ جَعَلُوٓا۟ أَصَٰبِعَهُمْ فِىٓ ءَاذَانِهِمْ وَٱسْتَغْشَوْا۟ ثِيَابَهُمْ وَأَصَرُّوا۟ وَٱسْتَكْبَرُوا۟ ٱسْتِكْبَارًا
Kannada Translation - Hamza Butur ನಿಶ್ಚಯವಾಗಿಯೂ ನೀನು ಅವರನ್ನು ಕ್ಷಮಿಸಬೇಕೆಂದು ನಾನು ಅವರನ್ನು ನಿನ್ನ ಕಡೆಗೆ ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು, ಬಟ್ಟೆಗಳಿಂದ ತಮ್ಮನ್ನು ಮುಚ್ಚಿಕೊಂಡರು, (ಸತ್ಯನಿಷೇಧದಲ್ಲಿ) ದೃಢವಾಗಿ ನಿಂತರು ಮತ್ತು ಮಹಾ ಅಹಂಕಾರವನ್ನು ತೋರಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ إِنِّى دَعَوْتُهُمْ جِهَارًا
Kannada Translation - Hamza Butur ನಂತರ ನಿಶ್ಚಯವಾಗಿಯೂ ನಾನು ಅವರನ್ನು ಉಚ್ಛ ಧ್ವನಿಯಲ್ಲಿ ಕರೆದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ إِنِّىٓ أَعْلَنتُ لَهُمْ وَأَسْرَرْتُ لَهُمْ إِسْرَارًا
Kannada Translation - Hamza Butur ನಂತರ ನಾನು ಅವರಿಗೆ ಬಹಿರಂಗವಾಗಿ ತಿಳಿಸಿದೆ. ಅತ್ಯಂತ ರಹಸ್ಯವಾಗಿಯೂ ತಿಳಿಸಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَقُلْتُ ٱسْتَغْفِرُوا۟ رَبَّكُمْ إِنَّهُۥ كَانَ غَفَّارًا
Kannada Translation - Hamza Butur ನಾನು ಹೇಳಿದೆ: “ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يُرْسِلِ ٱلسَّمَآءَ عَلَيْكُم مِّدْرَارًا
Kannada Translation - Hamza Butur ಅವನು ಆಕಾಶದಿಂದ ನಿಮಗೆ ಧಾರಾಕಾರ ಮಳೆಯನ್ನು ಸುರಿಸುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَيُمْدِدْكُم بِأَمْوَٰلٍ وَبَنِينَ وَيَجْعَل لَّكُمْ جَنَّٰتٍ وَيَجْعَل لَّكُمْ أَنْهَٰرًا
Kannada Translation - Hamza Butur ಅವನು ನಿಮಗೆ ಹೇರಳ ಆಸ್ತಿಪಾಸ್ತಿ ಮತ್ತು ಗಂಡುಮಕ್ಕಳನ್ನು ನೀಡಿ ನೆರವಾಗುವನು. ಅವನು ನಿಮಗೆ ತೋಟಗಳನ್ನು ಕೊಡುವನು ಮತ್ತು ಹೊಳೆಗಳನ್ನು ಹರಿಸುವನು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَّا لَكُمْ لَا تَرْجُونَ لِلَّهِ وَقَارًا
Kannada Translation - Hamza Butur ಅಲ್ಲಾಹನ ಮಹಿಮೆಯಲ್ಲಿ ನಂಬಿಕೆಯಿಡದಿರಲು ನಿಮಗೇನಾಗಿದೆ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَدْ خَلَقَكُمْ أَطْوَارًا
Kannada Translation - Hamza Butur ಅವನು ನಿಮ್ಮನ್ನು ಹಲವು ಘಟ್ಟಗಳ ಮೂಲಕ ಸೃಷ್ಟಿಸಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَلَمْ تَرَوْا۟ كَيْفَ خَلَقَ ٱللَّهُ سَبْعَ سَمَٰوَٰتٍ طِبَاقًا
Kannada Translation - Hamza Butur ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَجَعَلَ ٱلْقَمَرَ فِيهِنَّ نُورًا وَجَعَلَ ٱلشَّمْسَ سِرَاجًا
Kannada Translation - Hamza Butur ಅವನು ಅವುಗಳಲ್ಲಿ ಚಂದ್ರನನ್ನು ಬೆಳಕಾಗಿ ಮತ್ತು ಸೂರ್ಯನನ್ನು (ಉರಿಯುವ) ದೀಪವಾಗಿ ಮಾಡಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱللَّهُ أَنۢبَتَكُم مِّنَ ٱلْأَرْضِ نَبَاتًا
Kannada Translation - Hamza Butur ಅಲ್ಲಾಹು ನಿಮ್ಮನ್ನು (ವಿಶೇಷ ಮುತುವರ್ಜಿ ನೀಡಿ) ಭೂಮಿಯಿಂದ ಬೆಳೆಸಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ يُعِيدُكُمْ فِيهَا وَيُخْرِجُكُمْ إِخْرَاجًا
Kannada Translation - Hamza Butur ನಂತರ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು (ವಿಶೇಷ ರೀತಿಯಲ್ಲಿ) ನಿಮ್ಮನ್ನು ಹೊರತರುವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱللَّهُ جَعَلَ لَكُمُ ٱلْأَرْضَ بِسَاطًا
Kannada Translation - Hamza Butur ಅಲ್ಲಾಹು ನಿಮಗೆ ಭೂಮಿಯನ್ನು ಒಂದು ಹಾಸಿನಂತೆ ಮಾಡಿಕೊಟ್ಟನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لِّتَسْلُكُوا۟ مِنْهَا سُبُلًا فِجَاجًا
Kannada Translation - Hamza Butur ನೀವು ಅದರ ವಿಶಾಲವಾದ ದಾರಿಗಳಲ್ಲಿ ಸಾಗಲಿಕ್ಕಾಗಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ نُوحٌ رَّبِّ إِنَّهُمْ عَصَوْنِى وَٱتَّبَعُوا۟ مَن لَّمْ يَزِدْهُ مَالُهُۥ وَوَلَدُهُۥٓ إِلَّا خَسَارًا
Kannada Translation - Hamza Butur ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನಗೆ ಅವಿಧೇಯತೆ ತೋರಿದ್ದಾರೆ. ಯಾರ ಆಸ್ತಿ ಹಾಗೂ ಮಕ್ಕಳು ಅವನಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲವೋ ಅಂತಹವನನ್ನು ಅವರು ಹಿಂಬಾಲಿಸಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَكَرُوا۟ مَكْرًا كُبَّارًا
Kannada Translation - Hamza Butur ಅವರು ಬಹುದೊಡ್ಡ ಸಂಚು ರೂಪಿಸಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَالُوا۟ لَا تَذَرُنَّ ءَالِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا
Kannada Translation - Hamza Butur “(ಜನರೇ) ನೀವು ನಿಮ್ಮ ದೇವರುಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ” ಎಂದು ಅವರು ಹೇಳುತ್ತಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَدْ أَضَلُّوا۟ كَثِيرًا وَلَا تَزِدِ ٱلظَّٰلِمِينَ إِلَّا ضَلَٰلًا
Kannada Translation - Hamza Butur ಅವರು ಈಗಾಗಲೇ ಬಹಳಷ್ಟು ಜನರನ್ನು ದಾರಿ ತಪ್ಪಿಸಿದ್ದಾರೆ. ನೀನು ಆ ಅಕ್ರಮಿಗಳಿಗೆ ಅವರ ದುರ್ಮಾರ್ಗವನ್ನು ಇನ್ನಷ್ಟು ಹೆಚ್ಚಿಸಿಕೊಡು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مِّمَّا خَطِيٓـَٰٔتِهِمْ أُغْرِقُوا۟ فَأُدْخِلُوا۟ نَارًا فَلَمْ يَجِدُوا۟ لَهُم مِّن دُونِ ٱللَّهِ أَنصَارًا
Kannada Translation - Hamza Butur ಅವರ ಪಾಪಗಳ ಕಾರಣದಿಂದ ಅವರನ್ನು ಮುಳುಗಿಸಲಾಯಿತು. ನಂತರ ನರಕಾಗ್ನಿಗೆ ಪ್ರವೇಶ ಮಾಡಿಸಲಾಯಿತು. ಅವರು ಅಲ್ಲಾಹನ ಹೊರತು ಬೇರೆ ಯಾವುದೇ ಸಹಾಯಕರನ್ನು ಕಾಣಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَالَ نُوحٌ رَّبِّ لَا تَذَرْ عَلَى ٱلْأَرْضِ مِنَ ٱلْكَٰفِرِينَ دَيَّارًا
Kannada Translation - Hamza Butur ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನೀನು ಭೂಮಿಯ ಮೇಲೆ ಸತ್ಯನಿಷೇಧಿಗಳಲ್ಲಿ ಯಾರನ್ನೂ ವಾಸಿಸಲು ಬಿಡಬೇಡ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّكَ إِن تَذَرْهُمْ يُضِلُّوا۟ عِبَادَكَ وَلَا يَلِدُوٓا۟ إِلَّا فَاجِرًا كَفَّارًا
Kannada Translation - Hamza Butur ನೀನೇನಾದರೂ ಅವರನ್ನು ಬಿಟ್ಟುಬಿಟ್ಟರೆ ಅವರು ನಿನ್ನ ದಾಸರನ್ನು ದಾರಿತಪ್ಪಿಸುವರು. ಅವರು ದುಷ್ಕರ್ಮಿಗಳು ಮತ್ತು ಸತ್ಯನಿಷೇಧಿಗಳಿಗೆ ಮಾತ್ರ ಜನ್ಮ ನೀಡುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَّبِّ ٱغْفِرْ لِى وَلِوَٰلِدَىَّ وَلِمَن دَخَلَ بَيْتِىَ مُؤْمِنًا وَلِلْمُؤْمِنِينَ وَٱلْمُؤْمِنَٰتِ وَلَا تَزِدِ ٱلظَّٰلِمِينَ إِلَّا تَبَارًۢا
Kannada Translation - Hamza Butur ನನ್ನ ಪರಿಪಾಲಕನೇ! ನನಗೆ, ನನ್ನ ಮಾತಾಪಿತರಿಗೆ ಮತ್ತು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ ಕ್ಷಮಿಸು. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮಿಸು. ಅಕ್ರಮಿಗಳಿಗೆ ಸರ್ವನಾಶವಲ್ಲದೆ ಇನ್ನೇನೂ ಹೆಚ್ಚಿಸಬೇಡ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Al-Ma'aarij
ಸೂರ Al-Jinn →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.