caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Ma'aarij المعارج

44 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 79

بِسْمِ ٱللَّهِ ٱلرَّحْمَٰنِ ٱلرَّحِيمِ سَأَلَ سَآئِلٌۢ بِعَذَابٍ وَاقِعٍ

Kannada Translation - Hamza Buturಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّلْكَٰفِرِينَ لَيْسَ لَهُۥ دَافِعٌ

Kannada Translation - Hamza Buturಸತ್ಯನಿಷೇಧಿಗಳಿಗೆ (ಸಂಭವಿಸುವ ಶಿಕ್ಷೆ). ಅದನ್ನು ನಿವಾರಿಸುವವರಾರೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مِّنَ ٱللَّهِ ذِى ٱلْمَعَارِجِ

Kannada Translation - Hamza Buturಆರೋಹಣ ದಾರಿಗಳ ಒಡೆಯನಾದ ಅಲ್ಲಾಹನಿಂದ (ಸಂಭವಿಸಲಿರುವ ಶಿಕ್ಷೆ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَعْرُجُ ٱلْمَلَٰٓئِكَةُ وَٱلرُّوحُ إِلَيْهِ فِى يَوْمٍ كَانَ مِقْدَارُهُۥ خَمْسِينَ أَلْفَ سَنَةٍ

Kannada Translation - Hamza Buturಐವತ್ತು ಸಾವಿರ ವರ್ಷಗಳ ಗಾತ್ರವನ್ನು ಹೊಂದಿರುವ ಒಂದು ದಿನದಲ್ಲಿ ದೇವದೂತರು ಮತ್ತು ರೂಹ್ ಅವನ ಬಳಿಗೆ ಏರಿಹೋಗುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱصْبِرْ صَبْرًا جَمِيلًا

Kannada Translation - Hamza Buturಆದ್ದರಿಂದ ನೀವು ಉತ್ತಮ ರೀತಿಯಲ್ಲಿ ತಾಳ್ಮೆ ತೋರಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُمْ يَرَوْنَهُۥ بَعِيدًا

Kannada Translation - Hamza Buturನಿಶ್ಚಯವಾಗಿಯೂ ಅವರು ಅದನ್ನು ದೂರದಲ್ಲಿರುವಂತೆ ಕಾಣುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَرَىٰهُ قَرِيبًا

Kannada Translation - Hamza Buturಆದರೆ ನಾವು ಅದನ್ನು ಸಮೀಪದಲ್ಲಿರುವಂತೆ ಕಾಣುತ್ತಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ تَكُونُ ٱلسَّمَآءُ كَٱلْمُهْلِ

Kannada Translation - Hamza Buturಆಕಾಶವು ಎಣ್ಣೆಯ ಮಡ್ಡಿಯಂತಾಗುವ ದಿನ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَكُونُ ٱلْجِبَالُ كَٱلْعِهْنِ

Kannada Translation - Hamza Buturಪರ್ವತಗಳು ಬಣ್ಣದ ತುಪ್ಪಳದಂತಾಗುವ ದಿನ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يَسْـَٔلُ حَمِيمٌ حَمِيمًا

Kannada Translation - Hamza Buturಯಾವುದೇ ಒಬ್ಬ ಗೆಳೆಯನು ತನ್ನ ಆತ್ಮೀಯ ಗೆಳೆಯನ ಬಗ್ಗೆ ಕೇಳುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُبَصَّرُونَهُمْ يَوَدُّ ٱلْمُجْرِمُ لَوْ يَفْتَدِى مِنْ عَذَابِ يَوْمِئِذٍۭ بِبَنِيهِ

Kannada Translation - Hamza Buturವಾಸ್ತವವಾಗಿ ಅವರನ್ನು ಪರಸ್ಪರ ತೋರಿಸಲಾಗುವುದು. ಅಪರಾಧಿಯು ಆಶಿಸುವನು—ಅಂದಿನ ಶಿಕ್ಷೆಗೆ ಬದಲಿಯಾಗಿ ತನ್ನ ಗಂಡುಮಕ್ಕಳನ್ನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَصَٰحِبَتِهِۦ وَأَخِيهِ

Kannada Translation - Hamza Buturತನ್ನ ಪತ್ನಿಯನ್ನು ಮತ್ತು ಸಹೋದರನನ್ನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَفَصِيلَتِهِ ٱلَّتِى تُـْٔوِيهِ

Kannada Translation - Hamza Buturತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَن فِى ٱلْأَرْضِ جَمِيعًا ثُمَّ يُنجِيهِ

Kannada Translation - Hamza Buturಮತ್ತು ಭೂಮಿಯಲ್ಲಿರುವ ಎಲ್ಲರನ್ನೂ ಪರಿಹಾರವಾಗಿ ನೀಡಿ ಅದು ತನ್ನನ್ನು ಪಾರು ಮಾಡುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّهَا لَظَىٰ

Kannada Translation - Hamza Buturಎಂದಿಗೂ ಇಲ್ಲ! ನಿಶ್ಚಯವಾಗಿಯೂ ಅದು ಧಗಧಗಿಸುವ ಬೆಂಕಿಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نَزَّاعَةً لِّلشَّوَىٰ

Kannada Translation - Hamza Buturತಲೆಯ ಚರ್ಮವನ್ನು ಸುಲಿಯುವಂತಹ ಬೆಂಕಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَدْعُوا۟ مَنْ أَدْبَرَ وَتَوَلَّىٰ

Kannada Translation - Hamza Buturಹಿಂದಕ್ಕೆ ಸರಿದ ಮತ್ತು ಮುಖ ತಿರುಗಿಸಿ ನಡೆದ ಎಲ್ಲರನ್ನೂ ಅದು ಕರೆಯುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَمَعَ فَأَوْعَىٰٓ

Kannada Translation - Hamza Butur(ಆಸ್ತಿಯನ್ನು) ಕೂಡಿಟ್ಟು ಜೋಪಾನವಾಗಿಟ್ಟವನನ್ನೂ (ಕರೆಯುತ್ತದೆ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلْإِنسَٰنَ خُلِقَ هَلُوعًا

Kannada Translation - Hamza Buturನಿಶ್ಚಯವಾಗಿಯೂ ಮನುಷ್ಯನನ್ನು ಚಿಂತಾಕ್ರಾಂತನಾಗಿ ಸೃಷ್ಟಿಸಲಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذَا مَسَّهُ ٱلشَّرُّ جَزُوعًا

Kannada Translation - Hamza Buturಅವನಿಗೆ ವಿಪತ್ತು ಸಂಭವಿಸಿದರೆ ತಾಳ್ಮೆಗೆಡುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا مَسَّهُ ٱلْخَيْرُ مَنُوعًا

Kannada Translation - Hamza Buturಅವನಿಗೆ ಆರಾಮ ದೊರೆತರೆ ಜಿಪುಣನಾಗುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا ٱلْمُصَلِّينَ

Kannada Translation - Hamza Buturಆದರೆ ನಮಾಝ್ ನಿರ್ವಹಿಸುವವರು ಇದಕ್ಕೆ ಹೊರತಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ هُمْ عَلَىٰ صَلَاتِهِمْ دَآئِمُونَ

Kannada Translation - Hamza Buturಅವರು ಯಾರೆಂದರೆ ತಮ್ಮ ನಮಾಝ್‌ನಲ್ಲಿ ಸ್ಥಿರವಾಗಿರುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ فِىٓ أَمْوَٰلِهِمْ حَقٌّ مَّعْلُومٌ

Kannada Translation - Hamza Buturತಮ್ಮ ಸಂಪತ್ತಿನಲ್ಲಿ ಒಂದು ನಿಶ್ಚಿತ ಹಕ್ಕು ಇರುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّلسَّآئِلِ وَٱلْمَحْرُومِ

Kannada Translation - Hamza Buturಬೇಡುವವನಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವನಿಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ يُصَدِّقُونَ بِيَوْمِ ٱلدِّينِ

Kannada Translation - Hamza Buturಅವರು ಪ್ರತಿಫಲದ ದಿನವನ್ನು ಸತ್ಯವೆಂದು ದೃಢೀಕರಿಸುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُم مِّنْ عَذَابِ رَبِّهِم مُّشْفِقُونَ

Kannada Translation - Hamza Buturಅವರು ತಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಬಗ್ಗೆ ಭಯಪಡುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ عَذَابَ رَبِّهِمْ غَيْرُ مَأْمُونٍ

Kannada Translation - Hamza Buturನಿಶ್ಚಯವಾಗಿಯೂ ಅವರ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಭಯಪಡದೇ ಇರುವಂತದ್ದಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ لِفُرُوجِهِمْ حَٰفِظُونَ

Kannada Translation - Hamza Buturಅವರು ತಮ್ಮ ಗುಹ್ಯಾಂಗಗಳನ್ನು ಕಾಪಾಡಿಕೊಳ್ಳುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَٰنُهُمْ فَإِنَّهُمْ غَيْرُ مَلُومِينَ

Kannada Translation - Hamza Buturಅವರ ಪತ್ನಿಯರು ಅಥವಾ ಅವರ ಬಲಗೈಗಳು ಅಧೀನದಲ್ಲಿರಿಸಿದವರನ್ನು ಬಿಟ್ಟು. ನಿಶ್ಚಯವಾಗಿಯೂ ಅವರು ಆಕ್ಷೇಪಾರ್ಹರಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَنِ ٱبْتَغَىٰ وَرَآءَ ذَٰلِكَ فَأُو۟لَٰٓئِكَ هُمُ ٱلْعَادُونَ

Kannada Translation - Hamza Buturಆದರೆ ಯಾರು ಅದಕ್ಕಿಂತ ಆಚೆಗಿರುವುದನ್ನು ಹುಡುಕುತ್ತಾರೋ ಅವರೇ ಎಲ್ಲೆ ಮೀರಿದವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ لِأَمَٰنَٰتِهِمْ وَعَهْدِهِمْ رَٰعُونَ

Kannada Translation - Hamza Buturಅವರು ತಮ್ಮ ವಿಶ್ವಾಸಾರ್ಹತೆಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُم بِشَهَٰدَٰتِهِمْ قَآئِمُونَ

Kannada Translation - Hamza Buturಅವರು ತಮ್ಮ ಸಾಕ್ಷಿಗಳಲ್ಲಿ ನೇರವಾಗಿ ನಿಲ್ಲುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ عَلَىٰ صَلَاتِهِمْ يُحَافِظُونَ

Kannada Translation - Hamza Buturಅವರು ತಮ್ಮ ನಮಾಝ್‌ಗಳನ್ನು ಸಂರಕ್ಷಿಸುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أُو۟لَٰٓئِكَ فِى جَنَّٰتٍ مُّكْرَمُونَ

Kannada Translation - Hamza Buturಅವರು ಸ್ವರ್ಗಗಳಲ್ಲಿ ಗೌರವಿಸಲ್ಪಡುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَالِ ٱلَّذِينَ كَفَرُوا۟ قِبَلَكَ مُهْطِعِينَ

Kannada Translation - Hamza Buturಸತ್ಯನಿಷೇಧಿಗಳಿಗೇನಾಗಿದೆ? ಅವರೇಕೆ ನಿಮ್ಮ ಕಡೆಗೆ ಅವಸರದಿಂದ ಬರುತ್ತಿದ್ದಾರೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَنِ ٱلْيَمِينِ وَعَنِ ٱلشِّمَالِ عِزِينَ

Kannada Translation - Hamza Buturಗುಂಪು ಗುಂಪಾಗಿ ಬಲಭಾಗದಿಂದ ಮತ್ತು ಎಡಭಾಗದಿಂದ?[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَيَطْمَعُ كُلُّ ٱمْرِئٍ مِّنْهُمْ أَن يُدْخَلَ جَنَّةَ نَعِيمٍ

Kannada Translation - Hamza Buturತನ್ನನ್ನು ಸುಖಸಮೃದ್ಧವಾದ ಸ್ವರ್ಗಕ್ಕೆ ಪ್ರವೇಶ ಮಾಡಿಸಬೇಕೆಂದು ಅವರಲ್ಲಿ ಪ್ರತಿಯೊಬ್ಬನೂ ಹಾರೈಸುತ್ತಾನೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّا خَلَقْنَٰهُم مِّمَّا يَعْلَمُونَ

Kannada Translation - Hamza Buturಎಂದಿಗೂ ಇಲ್ಲ; ನಾವು ಅವರನ್ನು ಅವರು ತಿಳಿದಿರುವ ವಸ್ತುವಿನಿಂದಲೇ ಸೃಷ್ಟಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَآ أُقْسِمُ بِرَبِّ ٱلْمَشَٰرِقِ وَٱلْمَغَٰرِبِ إِنَّا لَقَٰدِرُونَ

Kannada Translation - Hamza Buturಆದ್ದರಿಂದ ನಾನು ಪೂರ್ವಗಳ ಮತ್ತು ಪಶ್ಚಿಮಗಳ ಪರಿಪಾಲಕನ (ಅಲ್ಲಾಹನ) ಮೇಲೆ ಆಣೆ ಮಾಡುತ್ತೇನೆ. ನಿಶ್ಚಯವಾಗಿಯೂ ನಮಗೆ ಸಾಮರ್ಥ್ಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَىٰٓ أَن نُّبَدِّلَ خَيْرًا مِّنْهُمْ وَمَا نَحْنُ بِمَسْبُوقِينَ

Kannada Translation - Hamza Buturಅವರ ಬದಲಿಗೆ ಅವರಿಗಿಂತ ಶ್ರೇಷ್ಟರನ್ನು ತರಲು. ನಮ್ಮನ್ನು ಯಾರಿಗೂ ಸೋಲಿಸಲಾಗದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَرْهُمْ يَخُوضُوا۟ وَيَلْعَبُوا۟ حَتَّىٰ يُلَٰقُوا۟ يَوْمَهُمُ ٱلَّذِى يُوعَدُونَ

Kannada Translation - Hamza Buturಆದ್ದರಿಂದ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಅನಗತ್ಯ ಮಾತುಗಳಲ್ಲಿ ಮತ್ತು ಆಟದಲ್ಲಿ ಮಗ್ನರಾಗಲಿ. ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವ ಆ ದಿನವನ್ನು ಅವರು ಭೇಟಿಯಾಗುವ ತನಕ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَخْرُجُونَ مِنَ ٱلْأَجْدَاثِ سِرَاعًا كَأَنَّهُمْ إِلَىٰ نُصُبٍ يُوفِضُونَ

Kannada Translation - Hamza Buturಅವರು ಸಮಾಧಿಗಳಿಂದ ತರಾತುರಿಯಲ್ಲಿ ಹೊರಟುಬರುವ ದಿನ! ಅವರು ಒಂದು ಗುರಿಯೆಡೆಗೆ ವೇಗವಾಗಿ ಸಾಗುವಂತೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خَٰشِعَةً أَبْصَٰرُهُمْ تَرْهَقُهُمْ ذِلَّةٌ ذَٰلِكَ ٱلْيَوْمُ ٱلَّذِى كَانُوا۟ يُوعَدُونَ

Kannada Translation - Hamza Buturಅವರ ಕಣ್ಣುಗಳು ತಗ್ಗಿಕೊಂಡಿರುವುವು. ಅವಮಾನವು ಅವರನ್ನು ಆವರಿಸಿಕೊಳ್ಳುವುದು. ಅದೇ ಅವರಿಗೆ ವಾಗ್ದಾನ ಮಾಡಲಾಗುತ್ತಿದ್ದ ದಿನ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70