caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-A'laa الأعلى

19 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 8

بِسْمِ ٱللَّهِ ٱلرَّحْمَٰنِ ٱلرَّحِيمِ سَبِّحِ ٱسْمَ رَبِّكَ ٱلْأَعْلَى

Kannada Translation - Hamza Buturಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى خَلَقَ فَسَوَّىٰ

Kannada Translation - Hamza Buturಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِى قَدَّرَ فَهَدَىٰ

Kannada Translation - Hamza Butur(ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِىٓ أَخْرَجَ ٱلْمَرْعَىٰ

Kannada Translation - Hamza Buturಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَجَعَلَهُۥ غُثَآءً أَحْوَىٰ

Kannada Translation - Hamza Buturನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَنُقْرِئُكَ فَلَا تَنسَىٰٓ

Kannada Translation - Hamza Buturನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا مَا شَآءَ ٱللَّهُ إِنَّهُۥ يَعْلَمُ ٱلْجَهْرَ وَمَا يَخْفَىٰ

Kannada Translation - Hamza Buturಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنُيَسِّرُكَ لِلْيُسْرَىٰ

Kannada Translation - Hamza Buturನಾವು ನಿಮಗೆ ಸುಲಭ ಮಾಡಿಕೊಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَكِّرْ إِن نَّفَعَتِ ٱلذِّكْرَىٰ

Kannada Translation - Hamza Buturಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَيَذَّكَّرُ مَن يَخْشَىٰ

Kannada Translation - Hamza Buturಭಯಪಡುವವನು ಉಪದೇಶವನ್ನು ಸ್ವೀಕರಿಸುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَتَجَنَّبُهَا ٱلْأَشْقَى

Kannada Translation - Hamza Buturನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى يَصْلَى ٱلنَّارَ ٱلْكُبْرَىٰ

Kannada Translation - Hamza Buturಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ لَا يَمُوتُ فِيهَا وَلَا يَحْيَىٰ

Kannada Translation - Hamza Buturನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَدْ أَفْلَحَ مَن تَزَكَّىٰ

Kannada Translation - Hamza Buturನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَذَكَرَ ٱسْمَ رَبِّهِۦ فَصَلَّىٰ

Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ تُؤْثِرُونَ ٱلْحَيَوٰةَ ٱلدُّنْيَا

Kannada Translation - Hamza Buturಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْـَٔاخِرَةُ خَيْرٌ وَأَبْقَىٰٓ

Kannada Translation - Hamza Buturಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ هَٰذَا لَفِى ٱلصُّحُفِ ٱلْأُولَىٰ

Kannada Translation - Hamza Buturಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

صُحُفِ إِبْرَٰهِيمَ وَمُوسَىٰ

Kannada Translation - Hamza Buturಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70