caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Qaaf ق

45 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 34

بِسْمِ ٱللَّهِ ٱلرَّحْمَٰنِ ٱلرَّحِيمِ قٓ وَٱلْقُرْءَانِ ٱلْمَجِيدِ

Kannada Translation - Hamza Buturಕ್ವಾಫ್. ಈ ಮಹತ್ವಪೂರ್ಣ ಕುರ್‌ಆನಿನ ಮೇಲಾಣೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ عَجِبُوٓا۟ أَن جَآءَهُم مُّنذِرٌ مِّنْهُمْ فَقَالَ ٱلْكَٰفِرُونَ هَٰذَا شَىْءٌ عَجِيبٌ

Kannada Translation - Hamza Buturಅವರಿಂದಲೇ ಅವರಿಗೆ ಒಬ್ಬ ಮುನ್ನೆಚ್ಚರಿಕೆಗಾರ (ಪ್ರವಾದಿ) ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಡುತ್ತಾರೆ. ಸತ್ಯನಿಷೇಧಿಗಳು ಹೇಳುತ್ತಾರೆ: “ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَءِذَا مِتْنَا وَكُنَّا تُرَابًا ذَٰلِكَ رَجْعٌۢ بَعِيدٌ

Kannada Translation - Hamza Buturನಾವು ಸತ್ತು ಮಣ್ಣಾಗಿ ಬಿಟ್ಟ ಬಳಿಕ (ಪುನಃ ಜೀವ ಪಡೆಯುವೆವೇ)? ಈ ಮರಳುವಿಕೆ ಬಹಳ ದೂರದ (ಅಸಂಭವ್ಯ) ಸಂಗತಿಯಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَدْ عَلِمْنَا مَا تَنقُصُ ٱلْأَرْضُ مِنْهُمْ وَعِندَنَا كِتَٰبٌ حَفِيظٌۢ

Kannada Translation - Hamza Buturನಿಶ್ಚಯವಾಗಿಯೂ ಭೂಮಿಯು ಅವರಿಂದ ಏನನ್ನು ಕಡಿಮೆ ಮಾಡುತ್ತಿದೆಯೆಂದು ನಮಗೆ ತಿಳಿದಿದೆ. ನಮ್ಮ ಬಳಿ ಎಲ್ಲವನ್ನೂ ನೆನಪಿಡುವ ಒಂದು ಗ್ರಂಥವಿದೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ كَذَّبُوا۟ بِٱلْحَقِّ لَمَّا جَآءَهُمْ فَهُمْ فِىٓ أَمْرٍ مَّرِيجٍ

Kannada Translation - Hamza Buturವಾಸ್ತವವಾಗಿ, ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಗೊಂದಲಪೂರ್ಣ (ಅನಿಶ್ಚಿತ) ಸ್ಥಿತಿಯಲ್ಲಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَلَمْ يَنظُرُوٓا۟ إِلَى ٱلسَّمَآءِ فَوْقَهُمْ كَيْفَ بَنَيْنَٰهَا وَزَيَّنَّٰهَا وَمَا لَهَا مِن فُرُوجٍ

Kannada Translation - Hamza Buturಅವರ ಮೇಲ್ಭಾಗದಲ್ಲಿರುವ ಆಕಾಶವನ್ನು ಅವರು ನೋಡುವುದಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವು ಎಂದು? ಅದರಲ್ಲಿ ಯಾವುದೇ ಬಿರುಕುಗಳಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْأَرْضَ مَدَدْنَٰهَا وَأَلْقَيْنَا فِيهَا رَوَٰسِىَ وَأَنۢبَتْنَا فِيهَا مِن كُلِّ زَوْجٍۭ بَهِيجٍ

Kannada Translation - Hamza Buturನಾವು ಭೂಮಿಯನ್ನು ಹರಡಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ಎಲ್ಲಾ ವಿಧಗಳ ಸುಂದರ ವಸ್ತುಗಳನ್ನು ಬೆಳೆಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَبْصِرَةً وَذِكْرَىٰ لِكُلِّ عَبْدٍ مُّنِيبٍ

Kannada Translation - Hamza Butur(ಅಲ್ಲಾಹನ ಕಡೆಗೆ ಮರಳುವ) ಪ್ರತಿಯೊಬ್ಬ ದಾಸನಿಗೂ ಅಂತರ್ದೃಷ್ಟಿ ಮತ್ತು ಉಪದೇಶದ ರೂಪದಲ್ಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَزَّلْنَا مِنَ ٱلسَّمَآءِ مَآءً مُّبَٰرَكًا فَأَنۢبَتْنَا بِهِۦ جَنَّٰتٍ وَحَبَّ ٱلْحَصِيدِ

Kannada Translation - Hamza Buturನಾವು ಆಕಾಶದಿಂದ ಸಮೃದ್ಧವಾದ ಮಳೆಯನ್ನು ಸುರಿಸಿದೆವು. ಅದರ ಮೂಲಕ ತೋಟಗಳನ್ನು ಮತ್ತು ಕಟಾವು ಮಾಡುವ ಧಾನ್ಯಗಳನ್ನು ಬೆಳೆಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلنَّخْلَ بَاسِقَٰتٍ لَّهَا طَلْعٌ نَّضِيدٌ

Kannada Translation - Hamza Buturಮತ್ತು ಪದರ ಪದರ ಗೊನೆಗಳಿರುವ ಎತ್ತರವಾದ ಖರ್ಜೂರದ ಮರಗಳನ್ನು (ಬೆಳೆಸಿದೆವು)

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رِّزْقًا لِّلْعِبَادِ وَأَحْيَيْنَا بِهِۦ بَلْدَةً مَّيْتًا كَذَٰلِكَ ٱلْخُرُوجُ

Kannada Translation - Hamza Buturದಾಸರ ಉಪಜೀವನಕ್ಕಾಗಿ. ನಾವು ಅದರಿಂದ (ಆ ನೀರಿನಿಂದ) ನಿರ್ಜೀವವಾಗಿದ್ದ ಪ್ರದೇಶಕ್ಕೆ ಜೀವವನ್ನು ನೀಡಿದೆವು. ಇದೇ ರೀತಿ (ಸಮಾಧಿಗಳಿಂದ ನಿಮ್ಮನ್ನು) ಹೊರತೆಗೆಯಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَذَّبَتْ قَبْلَهُمْ قَوْمُ نُوحٍ وَأَصْحَٰبُ ٱلرَّسِّ وَثَمُودُ

Kannada Translation - Hamza Buturಇವರಿಗಿಂತ ಮೊದಲು ನೂಹರ ಜನತೆ, ರಸ್ಸ್‌ನ ಜನರು ಮತ್ತು ಸಮೂದ್ ಗೋತ್ರದವರು ಸತ್ಯವನ್ನು ನಿಷೇಧಿಸಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَعَادٌ وَفِرْعَوْنُ وَإِخْوَٰنُ لُوطٍ

Kannada Translation - Hamza Buturಆದ್ ಗೋತ್ರದವರು, ಫರೋಹ ಮತ್ತು ಲೂತರ ಸಹೋದರರು (ಜನರು) ಕೂಡ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَصْحَٰبُ ٱلْأَيْكَةِ وَقَوْمُ تُبَّعٍ كُلٌّ كَذَّبَ ٱلرُّسُلَ فَحَقَّ وَعِيدِ

Kannada Translation - Hamza Buturಐಕತ್‌ನ ಜನರು ಮತ್ತು ತುಬ್ಬಅ್‌ನ ಜನರು ಕೂಡ. ಅವರೆಲ್ಲರೂ ಸಂದೇಶವಾಹಕರುಗಳನ್ನು ನಿಷೇಧಿಸಿದರು. ಆದ್ದರಿಂದ ಅವರ ಮೇಲೆ ನನ್ನ ವಾಗ್ದಾನವು ಖಾತ್ರಿಯಾಗಿ ಬಿಟ್ಟಿತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَعَيِينَا بِٱلْخَلْقِ ٱلْأَوَّلِ بَلْ هُمْ فِى لَبْسٍ مِّنْ خَلْقٍ جَدِيدٍ

Kannada Translation - Hamza Buturನಾವು ಪ್ರಥಮ ಬಾರಿ ಸೃಷ್ಟಿಸಿದಾಗಲೇ ಸುಸ್ತಾದೆವೇ? ಅಲ್ಲ, ವಾಸ್ತವವಾಗಿ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಪಡುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ خَلَقْنَا ٱلْإِنسَٰنَ وَنَعْلَمُ مَا تُوَسْوِسُ بِهِۦ نَفْسُهُۥ وَنَحْنُ أَقْرَبُ إِلَيْهِ مِنْ حَبْلِ ٱلْوَرِيدِ

Kannada Translation - Hamza Buturನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿದೆವು. ಅವನ ಮನಸ್ಸು ಅವನೊಡನೆ ಪಿಸುಗುಡುವ ಸಂಗತಿಗಳನ್ನು ನಾವು ತಿಳಿಯುತ್ತೇವೆ. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹತ್ತಿರದಲ್ಲಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذْ يَتَلَقَّى ٱلْمُتَلَقِّيَانِ عَنِ ٱلْيَمِينِ وَعَنِ ٱلشِّمَالِ قَعِيدٌ

Kannada Translation - Hamza Buturಇಬ್ಬರು ಪಡೆಯುವವರು (ಕರ್ಮಗಳನ್ನು ದಾಖಲಿಸುವ ದೇವದೂತರು) ಪಡೆಯುವ ಸಂದರ್ಭ. ಒಬ್ಬರು ಬಲಭಾಗದಲ್ಲಿ ಮತ್ತು ಇನ್ನೊಬ್ಬರು ಎಡಭಾಗದಲ್ಲಿ ಕುಳಿತಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّا يَلْفِظُ مِن قَوْلٍ إِلَّا لَدَيْهِ رَقِيبٌ عَتِيدٌ

Kannada Translation - Hamza Buturಮನುಷ್ಯನು ಯಾವುದೇ ಮಾತನ್ನೂ ಹೇಳಲಾರನು—ಅವನ ಬಳಿ ಒಬ್ಬ ವೀಕ್ಷಕನು (ಅದನ್ನು ದಾಖಲಿಸಲು) ಸಿದ್ಧವಾಗಿರದ ಹೊರತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَآءَتْ سَكْرَةُ ٱلْمَوْتِ بِٱلْحَقِّ ذَٰلِكَ مَا كُنتَ مِنْهُ تَحِيدُ

Kannada Translation - Hamza Buturಮರಣದ ಕಡು ಯಾತನೆಯು ಸತ್ಯದೊಂದಿಗೆ ಬರುವುದು. ಯಾವುದರಿಂದ ನೀನು ದೂರವಾಗಲು ಪ್ರಯತ್ನಿಸುತ್ತಿದ್ದೆಯೋ ಅದೇ ಇದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنُفِخَ فِى ٱلصُّورِ ذَٰلِكَ يَوْمُ ٱلْوَعِيدِ

Kannada Translation - Hamza Buturಕಹಳೆಯಲ್ಲಿ ಊದಲಾಗುವುದು. ಅದು ಎಚ್ಚರಿಕೆಯ ದಿನವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَآءَتْ كُلُّ نَفْسٍ مَّعَهَا سَآئِقٌ وَشَهِيدٌ

Kannada Translation - Hamza Buturಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೊತೆಗೆ ಒಬ್ಬ ಸಾಗಾಟಗಾರ ಮತ್ತು ಸಾಕ್ಷಿಯನ್ನು ಹೊಂದಿರುವ ಸ್ಥಿತಿಯಲ್ಲಿ ಬರುವರು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّقَدْ كُنتَ فِى غَفْلَةٍ مِّنْ هَٰذَا فَكَشَفْنَا عَنكَ غِطَآءَكَ فَبَصَرُكَ ٱلْيَوْمَ حَدِيدٌ

Kannada Translation - Hamza Butur“ನಿಶ್ಚಯವಾಗಿಯೂ ನೀನು ಇದನ್ನು ನಿರ್ಲಕ್ಷಿಸಿದ್ದೆ. ಆದರೆ ನಾವು ನಿನ್ನ ಮುಂಭಾಗದಿಂದ ಪರದೆಯನ್ನು ನಿವಾರಿಸಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ಹರಿತವಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالَ قَرِينُهُۥ هَٰذَا مَا لَدَىَّ عَتِيدٌ

Kannada Translation - Hamza Buturಅವನ ಜೊತೆಗಾರನು (ದೇವದೂತ) ಹೇಳುವನು: “ನನ್ನ ಬಳಿಯಿರುವ ಇದು (ದಾಖಲೆ) ಸಿದ್ಧವಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلْقِيَا فِى جَهَنَّمَ كُلَّ كَفَّارٍ عَنِيدٍ

Kannada Translation - Hamza Butur(ಅಲ್ಲಾಹು ಆಜ್ಞಾಪಿಸುವನು): “ಅವನನ್ನು ನರಕಕ್ಕೆ ಎಸೆದು ಬಿಡಿ—ಪ್ರತಿಯೊಬ್ಬ ಸತ್ಯನಿಷೇಧಿ ದುಷ್ಕರ್ಮಿಯನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّنَّاعٍ لِّلْخَيْرِ مُعْتَدٍ مُّرِيبٍ

Kannada Translation - Hamza Buturಒಳಿತನ್ನು ತಡೆಯುವ ಅತಿರೇಕಿ ಸಂಶಯಪಿಶಾಚಿಯನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى جَعَلَ مَعَ ٱللَّهِ إِلَٰهًا ءَاخَرَ فَأَلْقِيَاهُ فِى ٱلْعَذَابِ ٱلشَّدِيدِ

Kannada Translation - Hamza Buturಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ನಿಶ್ಚಯಿಸಿದವನನ್ನು. ಅವನನ್ನು ಕಠೋರ ಶಿಕ್ಷೆಗೆ ಎಸೆದುಬಿಡಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ قَرِينُهُۥ رَبَّنَا مَآ أَطْغَيْتُهُۥ وَلَٰكِن كَانَ فِى ضَلَٰلٍۭ بَعِيدٍ

Kannada Translation - Hamza Buturಅವನ ಜೊತೆಗಾರನು[1] ಹೇಳುವನು: “ನಮ್ಮ ಪರಿಪಾಲಕನೇ! ನಾನು ಅವನನ್ನು ದಾರಿತಪ್ಪಿಸಿಲ್ಲ. ಬದಲಿಗೆ, ಅವನೇ ವಿದೂರ ದುರ್ಮಾರ್ಗದಲ್ಲಿದ್ದ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ لَا تَخْتَصِمُوا۟ لَدَىَّ وَقَدْ قَدَّمْتُ إِلَيْكُم بِٱلْوَعِيدِ

Kannada Translation - Hamza Buturಅಲ್ಲಾಹು ಹೇಳುವನು: “ನನ್ನ ಮುಂದೆ ತರ್ಕ ಮಾಡಿಬೇಡಿ. ನಾನು ಈಗಾಗಲೇ ನಿಮ್ಮ ಬಳಿಗೆ ಎಚ್ಚರಿಕೆಯನ್ನು ಕಳುಹಿಸಿದ್ದೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا يُبَدَّلُ ٱلْقَوْلُ لَدَىَّ وَمَآ أَنَا۠ بِظَلَّٰمٍ لِّلْعَبِيدِ

Kannada Translation - Hamza Buturನನ್ನ ಬಳಿ ಮಾತು ಬದಲಾಗುವುದಿಲ್ಲ. ನಾನು ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ نَقُولُ لِجَهَنَّمَ هَلِ ٱمْتَلَأْتِ وَتَقُولُ هَلْ مِن مَّزِيدٍ

Kannada Translation - Hamza Buturನಾವು ನರಕದೊಂದಿಗೆ, “ನೀನು ತುಂಬಿದೆಯಾ?” ಎಂದು ಕೇಳುವ ಸಂದರ್ಭ. ಆಗ ಅದು ಕೇಳುವುದು: “ಹೆಚ್ಚು ಏನಾದರೂ ಇದೆಯೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأُزْلِفَتِ ٱلْجَنَّةُ لِلْمُتَّقِينَ غَيْرَ بَعِيدٍ

Kannada Translation - Hamza Buturಸ್ವರ್ಗವನ್ನು ದೇವಭಯವುಳ್ಳವರ ಹತ್ತಿರಕ್ಕೆ ತರಲಾಗುವುದು. ಅದು ಅವರಿಗೆ ಸ್ವಲ್ಪವೂ ದೂರವಿರಲಾರದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَٰذَا مَا تُوعَدُونَ لِكُلِّ أَوَّابٍ حَفِيظٍ

Kannada Translation - Hamza Butur“ಇದು ನಿಮಗೆ—ನಿಮ್ಮ ಪೈಕಿ (ಅಲ್ಲಾಹನ ಕಡೆಗೆ ಪಶ್ಚಾತ್ತಪಪಟ್ಟು) ಮರಳುವ ಮತ್ತು (ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು) ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಗೆ—ವಾಗ್ದಾನ ಮಾಡಲಾದ ಸಂಗತಿಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّنْ خَشِىَ ٱلرَّحْمَٰنَ بِٱلْغَيْبِ وَجَآءَ بِقَلْبٍ مُّنِيبٍ

Kannada Translation - Hamza Buturಅದೃಶ್ಯ ಸ್ಥಿತಿಯಲ್ಲಿ ಪರಮ ದಯಾಮಯನನ್ನು (ಅಲ್ಲಾಹನನ್ನು) ಭಯಪಟ್ಟು (ಅಲ್ಲಾಹನ ಕಡೆಗೆ) ತಿರುಗಿದ ಹೃದಯದೊಂದಿಗೆ ಬಂದವನಿಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱدْخُلُوهَا بِسَلَٰمٍ ذَٰلِكَ يَوْمُ ٱلْخُلُودِ

Kannada Translation - Hamza Buturನೀವು ಸುರಕ್ಷಿತವಾಗಿ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಿ. ಇದು ಶಾಶ್ವತ ವಾಸದ ದಿನವಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَهُم مَّا يَشَآءُونَ فِيهَا وَلَدَيْنَا مَزِيدٌ

Kannada Translation - Hamza Buturಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ನಮ್ಮ ಬಳಿ ಇನ್ನೂ ಹೆಚ್ಚಿಗೆಯಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَمْ أَهْلَكْنَا قَبْلَهُم مِّن قَرْنٍ هُمْ أَشَدُّ مِنْهُم بَطْشًا فَنَقَّبُوا۟ فِى ٱلْبِلَٰدِ هَلْ مِن مَّحِيصٍ

Kannada Translation - Hamza Buturಇವರಿಗಿಂತ ಮೊದಲು ನಾವು ಅನೇಕ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಊರಿಡೀ ಜಾಲಾಡಿ ನೋಡಿದರು—ಓಡಿ ಪಾರಾಗಲು ಯಾವುದಾದರೂ ಸ್ಥಳವಿದೆಯೇ ಎಂದು!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ فِى ذَٰلِكَ لَذِكْرَىٰ لِمَن كَانَ لَهُۥ قَلْبٌ أَوْ أَلْقَى ٱلسَّمْعَ وَهُوَ شَهِيدٌ

Kannada Translation - Hamza Buturನಿಶ್ಚಯವಾಗಿಯೂ ಅದರಲ್ಲಿ ನೀತಿಪಾಠವಿದೆ—ಹೃದಯವುಳ್ಳ ವ್ಯಕ್ತಿಗೆ ಅಥವಾ ಹೃದಯ ಸಾನಿಧ್ಯತೆಯಿಂದ ಕಿವಿಗೊಟ್ಟು ಕೇಳುವವನಿಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ خَلَقْنَا ٱلسَّمَٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍ وَمَا مَسَّنَا مِن لُّغُوبٍ

Kannada Translation - Hamza Buturನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದೆವು. ಆಯಾಸವು ನಮ್ಮನ್ನು ಸ್ಪರ್ಶಿಸಲೇ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ ٱلشَّمْسِ وَقَبْلَ ٱلْغُرُوبِ

Kannada Translation - Hamza Buturಆದ್ದರಿಂದ ಅವರು ಹೇಳುವ ಮಾತುಗಳ ಬಗ್ಗೆ ತಾಳ್ಮೆಯಿಂದಿರಿ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِنَ ٱلَّيْلِ فَسَبِّحْهُ وَأَدْبَٰرَ ٱلسُّجُودِ

Kannada Translation - Hamza Buturರಾತ್ರಿಯ ಸಮಯದಲ್ಲೂ ಮತ್ತು ನಮಾಝ್ ನಿರ್ವಹಿಸಿದ ಬಳಿಕವೂ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱسْتَمِعْ يَوْمَ يُنَادِ ٱلْمُنَادِ مِن مَّكَانٍ قَرِيبٍ

Kannada Translation - Hamza Buturಕಿವಿಗೊಟ್ಟು ಕೇಳಿರಿ. ಕರೆಯುವವನು ಹತ್ತಿರದಲ್ಲೇ ಇರುವ ಒಂದು ಸ್ಥಳದಿಂದ ಕೂಗಿ ಕರೆಯುವ ದಿನ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ يَسْمَعُونَ ٱلصَّيْحَةَ بِٱلْحَقِّ ذَٰلِكَ يَوْمُ ٱلْخُرُوجِ

Kannada Translation - Hamza Buturಆ ಭಯಾನಕ ಚೀತ್ಕಾರವನ್ನು ಖಾತ್ರಿಯಾಗಿ ಕೇಳುವ ದಿನ! ಅದು ಹೊರಡುವ ದಿನವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّا نَحْنُ نُحْىِۦ وَنُمِيتُ وَإِلَيْنَا ٱلْمَصِيرُ

Kannada Translation - Hamza Buturನಿಶ್ಚಯವಾಗಿಯೂ ನಾವು ಜೀವ ಮತ್ತು ಮರಣವನ್ನು ನೀಡುವೆವು. ಗಮ್ಯಸ್ಥಾನವು ನಮ್ಮ ಬಳಿಯೇ ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ تَشَقَّقُ ٱلْأَرْضُ عَنْهُمْ سِرَاعًا ذَٰلِكَ حَشْرٌ عَلَيْنَا يَسِيرٌ

Kannada Translation - Hamza Buturಭೂಮಿಯು ಒಡೆದು ಸೀಳಾಗಿ ಅವರು ತರಾತುರಿಯಿಂದ (ಹೊರಬರುವ) ದಿನ. ಅವರನ್ನು ಒಟ್ಟುಗೂಡಿಸುವುದು ನಮ್ಮ ಮಟ್ಟಿಗೆ ಬಹಳ ಸುಲಭವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نَّحْنُ أَعْلَمُ بِمَا يَقُولُونَ وَمَآ أَنتَ عَلَيْهِم بِجَبَّارٍ فَذَكِّرْ بِٱلْقُرْءَانِ مَن يَخَافُ وَعِيدِ

Kannada Translation - Hamza Buturಅವರು ಏನು ಹೇಳುತ್ತಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನೀವು ಅವರ ಮೇಲೆ ಸರ್ವಾಧಿಕಾರವಿರುವವರಲ್ಲ. ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ಕುರ್‌ಆನ್‍ನ ಮೂಲಕ ಉಪದೇಶವನ್ನು ನೀಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70