caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Alaq العلق

19 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 1

بِسْمِ ٱللَّهِ ٱلرَّحْمَٰنِ ٱلرَّحِيمِ ٱقْرَأْ بِٱسْمِ رَبِّكَ ٱلَّذِى خَلَقَ

Kannada Translation - Hamza Buturಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خَلَقَ ٱلْإِنسَٰنَ مِنْ عَلَقٍ

Kannada Translation - Hamza Buturಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱقْرَأْ وَرَبُّكَ ٱلْأَكْرَمُ

Kannada Translation - Hamza Buturಓದಿರಿ. ನಿಮ್ಮ ಪರಿಪಾಲಕ (ಅಲ್ಲಾಹು) ಅತ್ಯುದಾರಿಯಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى عَلَّمَ بِٱلْقَلَمِ

Kannada Translation - Hamza Buturಅವನು ಯಾರೆಂದರೆ ಲೇಖನಿಯ ಮೂಲಕ ಕಲಿಸಿದವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَّمَ ٱلْإِنسَٰنَ مَا لَمْ يَعْلَمْ

Kannada Translation - Hamza Buturಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّآ إِنَّ ٱلْإِنسَٰنَ لَيَطْغَىٰٓ

Kannada Translation - Hamza Buturನಿಸ್ಸಂದೇಹವಾಗಿಯೂ ಮನುಷ್ಯನು ಎಲ್ಲೆ ಮೀರಿ ನಡೆಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَن رَّءَاهُ ٱسْتَغْنَىٰٓ

Kannada Translation - Hamza Buturಅದೇಕೆಂದರೆ, ಅವನು ಅವನನ್ನೇ ಸ್ವಯಂ-ಪರ್ಯಾಪ್ತನಾಗಿ ಕಾಣುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ إِلَىٰ رَبِّكَ ٱلرُّجْعَىٰٓ

Kannada Translation - Hamza Buturನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗಬೇಕಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَرَءَيْتَ ٱلَّذِى يَنْهَىٰ

Kannada Translation - Hamza Buturತಡೆಯುವವನನ್ನು ನೀವು ನೋಡಿದ್ದೀರಾ?[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَبْدًا إِذَا صَلَّىٰٓ

Kannada Translation - Hamza Buturದಾಸನನ್ನು—ಅವನು ನಮಾಝ್ ಮಾಡುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَرَءَيْتَ إِن كَانَ عَلَى ٱلْهُدَىٰٓ

Kannada Translation - Hamza Buturನೀವು ನೋಡಿದ್ದೀರಾ—ಒಂದು ವೇಳೆ ಅವನು (ದಾಸನು) ಸನ್ಮಾರ್ಗದಲ್ಲಿದ್ದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوْ أَمَرَ بِٱلتَّقْوَىٰٓ

Kannada Translation - Hamza Buturಅಥವಾ ಅವನು ದೇವಭಯವಿಟ್ಟುಕೊಳ್ಳಲು ಆದೇಶಿಸಿದ್ದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَرَءَيْتَ إِن كَذَّبَ وَتَوَلَّىٰٓ

Kannada Translation - Hamza Buturನೀವು ನೋಡಿದ್ದೀರಾ—ಒಂದು ವೇಳೆ ಅವನು (ತಡೆಯುವವನು) ನಿಷೇಧಿಸಿದ್ದರೆ ಮತ್ತು ವಿಮುಖನಾಗಿದ್ದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ يَعْلَم بِأَنَّ ٱللَّهَ يَرَىٰ

Kannada Translation - Hamza Buturಅಲ್ಲಾಹು ಅವನನ್ನು ನೋಡುತ್ತಿದ್ದಾನೆಂದು ಅವನಿಗೆ ತಿಳಿದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا لَئِن لَّمْ يَنتَهِ لَنَسْفَعًۢا بِٱلنَّاصِيَةِ

Kannada Translation - Hamza Buturಅವನು ದೂರ ಸರಿಯದಿದ್ದರೆ ನಾವು ಖಂಡಿತವಾಗಿಯೂ ಅವನ ಮುಂದಲೆಯನ್ನು ಹಿಡಿದು ಎಳೆಯುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نَاصِيَةٍ كَٰذِبَةٍ خَاطِئَةٍ

Kannada Translation - Hamza Buturಸುಳ್ಳು ಹೇಳುವ, ಪಾಪವೆಸಗುವ ಮುಂದಲೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلْيَدْعُ نَادِيَهُۥ

Kannada Translation - Hamza Buturಅವನು ತನ್ನ ಸಭಾ ಸದಸ್ಯರನ್ನು ಕರೆಯಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَنَدْعُ ٱلزَّبَانِيَةَ

Kannada Translation - Hamza Buturನಾವು (ನರಕದಲ್ಲಿ) ಶಿಕ್ಷೆ ನೀಡುವ ದೇವದೂತರನ್ನು ಕರೆಯುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَلَّا لَا تُطِعْهُ وَٱسْجُدْ وَٱقْتَرِب

Kannada Translation - Hamza Buturಎಚ್ಚರಾ! ಅವನ ಮಾತನ್ನು ಎಂದಿಗೂ ಕೇಳಬೇಡಿ. (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ ಮತ್ತು ಅವನಿಗೆ ಸಮೀಪವಾಗಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70