ಸೂರ Ad-Dhuhaa الضحى
11 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 11
بِسْمِ ٱللَّهِ ٱلرَّحْمَٰنِ ٱلرَّحِيمِ وَٱلضُّحَىٰ
Kannada Translation - Hamza Buturಪೂರ್ವಾಹ್ನದ ಮೇಲಾಣೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلَّيْلِ إِذَا سَجَىٰ
Kannada Translation - Hamza Buturರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا وَدَّعَكَ رَبُّكَ وَمَا قَلَىٰ
Kannada Translation - Hamza Butur(ಪ್ರವಾದಿಯವರೇ) ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ತೊರೆದಿಲ್ಲ ಮತ್ತು ನಿಮ್ಮ ಬಗ್ಗೆ ಬೇಸರಪಟ್ಟಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَلْـَٔاخِرَةُ خَيْرٌ لَّكَ مِنَ ٱلْأُولَىٰ
Kannada Translation - Hamza Buturನಿಶ್ಚಯವಾಗಿಯೂ ನಿಮಗೆ ಇಹಲೋಕಕ್ಕಿಂತಲೂ ಪರಲೋಕವು ಶ್ರೇಷ್ಠವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَسَوْفَ يُعْطِيكَ رَبُّكَ فَتَرْضَىٰٓ
Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಸದ್ಯವೇ ನಿಮಗೆ (ಅನುಗ್ರಹಗಳನ್ನು) ದಯಪಾಲಿಸುವನು. ಆಗ ನೀವು ಸಂತೃಪ್ತರಾಗುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَلَمْ يَجِدْكَ يَتِيمًا فَـَٔاوَىٰ
Kannada Translation - Hamza Buturಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯ ನೀಡಲಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَوَجَدَكَ ضَآلًّا فَهَدَىٰ
Kannada Translation - Hamza Buturಅವನು ನಿಮ್ಮನ್ನು ದಾರಿ ತಪ್ಪಿದವನಾಗಿ ಕಂಡು ನಿಮಗೆ ಮಾರ್ಗದರ್ಶನ ಮಾಡಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَوَجَدَكَ عَآئِلًا فَأَغْنَىٰ
Kannada Translation - Hamza Buturಅವನು ನಿಮ್ಮನ್ನು ಬಡವನಾಗಿ ಕಂಡು ನಿಮಗೆ ಐಶ್ವರ್ಯವನ್ನು ನೀಡಿದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَمَّا ٱلْيَتِيمَ فَلَا تَقْهَرْ
Kannada Translation - Hamza Buturಆದ್ದರಿಂದ ನೀವು ಅನಾಥನೊಡನೆ ಕಠಿಣವಾಗಿ ವರ್ತಿಸಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّا ٱلسَّآئِلَ فَلَا تَنْهَرْ
Kannada Translation - Hamza Buturಬೇಡುವವನನ್ನು ಗದರಿಸಬೇಡಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّا بِنِعْمَةِ رَبِّكَ فَحَدِّثْ
Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳ ಬಗ್ಗೆ ಮಾತನಾಡುತ್ತಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
Looking for a topic? Try the meaning search — your question is scanned across all 6,236 verses.
→