ಮುಖಪುಟ › ಸೂರಗಳು › ಸೂರ Al-Waaqia
ಸೂರ Al-Waaqia الواقعة
96 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 46
بِسْمِ ٱللَّهِ ٱلرَّحْمَٰنِ ٱلرَّحِيمِ إِذَا وَقَعَتِ ٱلْوَاقِعَةُ
Kannada Translation - Hamza Butur ಪುನರುತ್ಥಾನವು ಸಂಭವಿಸುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَيْسَ لِوَقْعَتِهَا كَاذِبَةٌ
Kannada Translation - Hamza Butur ಅದು ಸಂಭವಿಸುತ್ತದೆ ಎಂಬುದರಲ್ಲಿ ಯಾವುದೇ ನಿರಾಕರಣೆಯಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
خَافِضَةٌ رَّافِعَةٌ
Kannada Translation - Hamza Butur ಅದು (ಕೆಲವರನ್ನು) ಕೆಳಗಿಳಿಸುತ್ತದೆ ಮತ್ತು (ಕೆಲವರನ್ನು) ಮೇಲೇರಿಸುತ್ತದೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذَا رُجَّتِ ٱلْأَرْضُ رَجًّا
Kannada Translation - Hamza Butur ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَبُسَّتِ ٱلْجِبَالُ بَسًّا
Kannada Translation - Hamza Butur ಪರ್ವತಗಳು ಸಂಪೂರ್ಣ ನುಚ್ಚುನೂರಾಗುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَكَانَتْ هَبَآءً مُّنۢبَثًّا
Kannada Translation - Hamza Butur ಅವು ಚೆದರಿದ ಧೂಳಿಯಾಗುವಾಗ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَكُنتُمْ أَزْوَٰجًا ثَلَٰثَةً
Kannada Translation - Hamza Butur ನೀವು ಮೂರು ಗುಂಪುಗಳಾಗುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَصْحَٰبُ ٱلْمَيْمَنَةِ مَآ أَصْحَٰبُ ٱلْمَيْمَنَةِ
Kannada Translation - Hamza Butur ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَصْحَٰبُ ٱلْمَشْـَٔمَةِ مَآ أَصْحَٰبُ ٱلْمَشْـَٔمَةِ
Kannada Translation - Hamza Butur ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلسَّٰبِقُونَ ٱلسَّٰبِقُونَ
Kannada Translation - Hamza Butur ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أُو۟لَٰٓئِكَ ٱلْمُقَرَّبُونَ
Kannada Translation - Hamza Butur ಅವರು (ಅಲ್ಲಾಹನ) ಸಾಮೀಪ್ಯ ಪಡೆದವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى جَنَّٰتِ ٱلنَّعِيمِ
Kannada Translation - Hamza Butur ಅವರು ಸುಖಾನುಗ್ರಹಗಳು ತುಂಬಿದ ಸ್ವರ್ಗಗಳಲ್ಲಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُلَّةٌ مِّنَ ٱلْأَوَّلِينَ
Kannada Translation - Hamza Butur ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَلِيلٌ مِّنَ ٱلْـَٔاخِرِينَ
Kannada Translation - Hamza Butur ನಂತರದವರಲ್ಲಿ ಸೇರಿದ ಕೆಲವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَلَىٰ سُرُرٍ مَّوْضُونَةٍ
Kannada Translation - Hamza Butur ಅವರು ಸ್ವರ್ಣದಾರದಿಂದ ನೇಯ್ದ ಮಂಚಗಳಲ್ಲಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مُّتَّكِـِٔينَ عَلَيْهَا مُتَقَٰبِلِينَ
Kannada Translation - Hamza Butur ಅವುಗಳಲ್ಲಿ ಪರಸ್ಪರ ಎದುರುಬದುರಾಗಿ ಒರಗಿ ಕುಳಿತಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَطُوفُ عَلَيْهِمْ وِلْدَٰنٌ مُّخَلَّدُونَ
Kannada Translation - Hamza Butur ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بِأَكْوَابٍ وَأَبَارِيقَ وَكَأْسٍ مِّن مَّعِينٍ
Kannada Translation - Hamza Butur ಲೋಟಗಳು, ಹೂಜಿಗಳು ಮತ್ತು ಹರಿಯುವ ತೊರೆಯ ಶರಾಬನ್ನು ಹೊಂದಿರುವ ಪಾತ್ರೆಗಳೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّا يُصَدَّعُونَ عَنْهَا وَلَا يُنزِفُونَ
Kannada Translation - Hamza Butur ಅದನ್ನು ಕುಡಿಯುವುದರಿಂದ ತಲೆನೋವು ಅಥವಾ ಅಮಲು ಉಂಟಾಗುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَفَٰكِهَةٍ مِّمَّا يَتَخَيَّرُونَ
Kannada Translation - Hamza Butur ಅವರಿಗೆ ಇಷ್ಟವಾದ ಹಣ್ಣುಗಳೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَحْمِ طَيْرٍ مِّمَّا يَشْتَهُونَ
Kannada Translation - Hamza Butur ಅವರು ಬಯಸುವ ಹಕ್ಕಿಗಳ ಮಾಂಸಗಳೊಂದಿಗೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَحُورٌ عِينٌ
Kannada Translation - Hamza Butur (ಅಲ್ಲಿ) ಅರಳಿದ ಕಣ್ಣುಗಳಿರುವ ಬೆಳ್ಳಗಿನ ಅಪ್ಸರೆಗಳಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَأَمْثَٰلِ ٱللُّؤْلُؤِ ٱلْمَكْنُونِ
Kannada Translation - Hamza Butur ಅವರು (ಚಿಪ್ಪುಗಳಲ್ಲಿ) ಜೋಪಾನವಾಗಿಡಲಾದ ಮುತ್ತುಗಳಂತೆ ಕಾಣುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
جَزَآءًۢ بِمَا كَانُوا۟ يَعْمَلُونَ
Kannada Translation - Hamza Butur ಇವೆಲ್ಲವೂ ಅವರು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَا يَسْمَعُونَ فِيهَا لَغْوًا وَلَا تَأْثِيمًا
Kannada Translation - Hamza Butur ಅವರು ಅಲ್ಲಿ ಅನಗತ್ಯ ಮಾತುಗಳನ್ನು ಮತ್ತು ದೋಷಪೂರಿತ ಮಾತುಗಳನ್ನು ಕೇಳುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّا قِيلًا سَلَٰمًا سَلَٰمًا
Kannada Translation - Hamza Butur ಸಲಾಂ ಸಲಾಂ (ಶಾಂತಿ ಶಾಂತಿ) ಎಂಬ ಮಾತುಗಳ ಹೊರತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَصْحَٰبُ ٱلْيَمِينِ مَآ أَصْحَٰبُ ٱلْيَمِينِ
Kannada Translation - Hamza Butur ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى سِدْرٍ مَّخْضُودٍ
Kannada Translation - Hamza Butur ಅವರು ಮುಳ್ಳುಗಳಿಲ್ಲದ ಬೋರೆ ಮರಗಳಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَطَلْحٍ مَّنضُودٍ
Kannada Translation - Hamza Butur ಪದರ ಪದರ ಗೊನೆಗಳಿರುವ ಬಾಳೆಗಳಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَظِلٍّ مَّمْدُودٍ
Kannada Translation - Hamza Butur ಸುದೀರ್ಘ ನೆರಳಿನಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَآءٍ مَّسْكُوبٍ
Kannada Translation - Hamza Butur ಹರಿಯುವ ನೀರಿನಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَفَٰكِهَةٍ كَثِيرَةٍ
Kannada Translation - Hamza Butur ಹೇರಳ ಹಣ್ಣು-ಹಂಪಲುಗಳಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّا مَقْطُوعَةٍ وَلَا مَمْنُوعَةٍ
Kannada Translation - Hamza Butur ಅದು ಎಂದಿಗೂ ಮುಗಿಯುವುದಿಲ್ಲ ಮತ್ತು ತಡೆಯಲ್ಪಡುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَفُرُشٍ مَّرْفُوعَةٍ
Kannada Translation - Hamza Butur ಎತ್ತರವಾಗಿರುವ ಹಾಸಿಗೆಗಳಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّآ أَنشَأْنَٰهُنَّ إِنشَآءً
Kannada Translation - Hamza Butur ನಿಶ್ಚಯವಾಗಿಯೂ ನಾವು ಅವರ ಪತ್ನಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَجَعَلْنَٰهُنَّ أَبْكَارًا
Kannada Translation - Hamza Butur ನಾವು ಅವರನ್ನು ಕನ್ಯೆಯರಾಗಿ ಮಾಡಿದ್ದೇವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عُرُبًا أَتْرَابًا
Kannada Translation - Hamza Butur ಪ್ರೀತಿಸುವವರಾಗಿ ಮತ್ತು ಸಮವಯಸ್ಕರಾಗಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لِّأَصْحَٰبِ ٱلْيَمِينِ
Kannada Translation - Hamza Butur ಇವೆಲ್ಲವೂ ಬಲಭಾಗದ ಜನರಿಗೋಸ್ಕರ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُلَّةٌ مِّنَ ٱلْأَوَّلِينَ
Kannada Translation - Hamza Butur ಅವರು ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَثُلَّةٌ مِّنَ ٱلْـَٔاخِرِينَ
Kannada Translation - Hamza Butur ನಂತರದವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَصْحَٰبُ ٱلشِّمَالِ مَآ أَصْحَٰبُ ٱلشِّمَالِ
Kannada Translation - Hamza Butur ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى سَمُومٍ وَحَمِيمٍ
Kannada Translation - Hamza Butur ಅವರು ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَظِلٍّ مِّن يَحْمُومٍ
Kannada Translation - Hamza Butur ಕರಿ ಹೊಗೆಯ ನೆರಳುಗಳಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّا بَارِدٍ وَلَا كَرِيمٍ
Kannada Translation - Hamza Butur ಅದು ತಂಪಾಗಿಲ್ಲ ಅಥವಾ ಆಹ್ಲಾದಕರವಾಗಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُمْ كَانُوا۟ قَبْلَ ذَٰلِكَ مُتْرَفِينَ
Kannada Translation - Hamza Butur ಇದಕ್ಕಿಂತ ಮೊದಲು (ಇಹಲೋಕದಲ್ಲಿ) ಅವರು ಐಶ್ವರ್ಯವಂತರಾಗಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَكَانُوا۟ يُصِرُّونَ عَلَى ٱلْحِنثِ ٱلْعَظِيمِ
Kannada Translation - Hamza Butur ಅವರು ದೊಡ್ಡ ದೊಡ್ಡ ಪಾಪಕೃತ್ಯಗಳಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَكَانُوا۟ يَقُولُونَ أَئِذَا مِتْنَا وَكُنَّا تُرَابًا وَعِظَٰمًا أَءِنَّا لَمَبْعُوثُونَ
Kannada Translation - Hamza Butur ಅವರು ಹೇಳುತ್ತಿದ್ದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವಂತವಾಗಿ ಎಬ್ಬಿಸಲಾಗುವುದೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَوَءَابَآؤُنَا ٱلْأَوَّلُونَ
Kannada Translation - Hamza Butur ನಮ್ಮ ಪೂರ್ವಜರನ್ನು ಕೂಡ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُلْ إِنَّ ٱلْأَوَّلِينَ وَٱلْـَٔاخِرِينَ
Kannada Translation - Hamza Butur ಹೇಳಿರಿ: “ನಿಶ್ಚಯವಾಗಿಯೂ ನಿಮ್ಮಲ್ಲಿ ಮೊದಲಿನವರನ್ನು ಮತ್ತು ನಂತರದವರನ್ನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَمَجْمُوعُونَ إِلَىٰ مِيقَٰتِ يَوْمٍ مَّعْلُومٍ
Kannada Translation - Hamza Butur ಒಂದು ನಿಶ್ಚಿತ ದಿನದ ಸಮಯದಲ್ಲಿ ಒಟ್ಟುಗೂಡಿಸಲಾಗುವುದು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ثُمَّ إِنَّكُمْ أَيُّهَا ٱلضَّآلُّونَ ٱلْمُكَذِّبُونَ
Kannada Translation - Hamza Butur ನಂತರ, ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَـَٔاكِلُونَ مِن شَجَرٍ مِّن زَقُّومٍ
Kannada Translation - Hamza Butur ನೀವು ಖಂಡಿತ ಝಕ್ಕೂಮ್ ಮರದಿಂದ ತಿನ್ನುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَمَالِـُٔونَ مِنْهَا ٱلْبُطُونَ
Kannada Translation - Hamza Butur ಅದರಿಂದ ನಿಮ್ಮ ಹೊಟ್ಟೆಗಳನ್ನು ತುಂಬಿಸುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَشَٰرِبُونَ عَلَيْهِ مِنَ ٱلْحَمِيمِ
Kannada Translation - Hamza Butur ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَشَٰرِبُونَ شُرْبَ ٱلْهِيمِ
Kannada Translation - Hamza Butur ಬಾಯಾರಿದ ಒಂಟೆಗಳು ಕುಡಿಯುವಂತೆ ಕುಡಿಯುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا نُزُلُهُمْ يَوْمَ ٱلدِّينِ
Kannada Translation - Hamza Butur ಇದು ಪ್ರತಿಫಲ ದಿನದಂದು ಅವರಿಗೆ ನೀಡಲಾಗುವ ಸತ್ಕಾರವಾಗಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نَحْنُ خَلَقْنَٰكُمْ فَلَوْلَا تُصَدِّقُونَ
Kannada Translation - Hamza Butur ನಾವೇ ನಿಮ್ಮನ್ನು ಸೃಷ್ಟಿಸಿದವರು. ಆದರೂ ನೀವು ನಂಬುವುದಿಲ್ಲವೇಕೆ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتُم مَّا تُمْنُونَ
Kannada Translation - Hamza Butur ನೀವು ಸ್ರವಿಸುವ ವೀರ್ಯವನ್ನು ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ءَأَنتُمْ تَخْلُقُونَهُۥٓ أَمْ نَحْنُ ٱلْخَٰلِقُونَ
Kannada Translation - Hamza Butur ಅದರಿಂದ ಮನುಷ್ಯನನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نَحْنُ قَدَّرْنَا بَيْنَكُمُ ٱلْمَوْتَ وَمَا نَحْنُ بِمَسْبُوقِينَ
Kannada Translation - Hamza Butur ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದವರು. ನಾವು ಸೋಲುವುದಿಲ್ಲ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
عَلَىٰٓ أَن نُّبَدِّلَ أَمْثَٰلَكُمْ وَنُنشِئَكُمْ فِى مَا لَا تَعْلَمُونَ
Kannada Translation - Hamza Butur ನಿಮ್ಮ ಸ್ಥಾನದಲ್ಲಿ ನಿಮ್ಮಂತಹವರನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ನಿಮಗೆ (ಸ್ವಲ್ಪವೂ) ತಿಳಿದಿಲ್ಲದ ಹೊಸ ರೂಪದಲ್ಲಿ ಸೃಷ್ಟಿಸುವ ವಿಷಯದಲ್ಲಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَقَدْ عَلِمْتُمُ ٱلنَّشْأَةَ ٱلْأُولَىٰ فَلَوْلَا تَذَكَّرُونَ
Kannada Translation - Hamza Butur ಪ್ರಥಮ ಬಾರಿ ಸೃಷ್ಟಿಸಿದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ನೀವೇಕೆ ಪಾಠ ಕಲಿಯುವುದಿಲ್ಲ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتُم مَّا تَحْرُثُونَ
Kannada Translation - Hamza Butur ನೀವು ಬಿತ್ತುವ (ಬೀಜವನ್ನು) ನೀವು ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ءَأَنتُمْ تَزْرَعُونَهُۥٓ أَمْ نَحْنُ ٱلزَّٰرِعُونَ
Kannada Translation - Hamza Butur ಅದನ್ನು ನೀವು (ಸಸ್ಯವಾಗಿ) ಬೆಳೆಸುತ್ತೀರೋ? ಅಥವಾ ಬೆಳೆಸುವವರು ನಾವೋ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَوْ نَشَآءُ لَجَعَلْنَٰهُ حُطَٰمًا فَظَلْتُمْ تَفَكَّهُونَ
Kannada Translation - Hamza Butur ನಾವು ಇಚ್ಛಿಸಿದರೆ ಅದನ್ನು (ಸಸ್ಯವನ್ನು) ಕಸಕಡ್ಡಿಯಾಗಿ ಮಾಡುತ್ತಿದ್ದೆವು. ಆಗ ನೀವು ಅಚ್ಚರಿಯಿಂದ ಹೇಳುವಿರಿ:
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا لَمُغْرَمُونَ
Kannada Translation - Hamza Butur “ನಾವು ನಷ್ಟದ ಹೊರೆಯನ್ನು ಹೊರಬೇಕಾಗಿ ಬಂದಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بَلْ نَحْنُ مَحْرُومُونَ
Kannada Translation - Hamza Butur ಅಲ್ಲ, ವಾಸ್ತವವಾಗಿ ನಮಗೆ ತಡೆಯಲಾಗಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتُمُ ٱلْمَآءَ ٱلَّذِى تَشْرَبُونَ
Kannada Translation - Hamza Butur ನೀವು ಕುಡಿಯುವ ನೀರನ್ನು ನೀವು ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ءَأَنتُمْ أَنزَلْتُمُوهُ مِنَ ٱلْمُزْنِ أَمْ نَحْنُ ٱلْمُنزِلُونَ
Kannada Translation - Hamza Butur ಅದನ್ನು ಮೋಡದಿಂದ ಸುರಿಸಿದವರು ನೀವೋ? ಅಥವಾ ಸುರಿಸುವವರು ನಾವೋ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَوْ نَشَآءُ جَعَلْنَٰهُ أُجَاجًا فَلَوْلَا تَشْكُرُونَ
Kannada Translation - Hamza Butur ನಾವು ಇಚ್ಛಿಸಿದರೆ ಅದನ್ನು ಕಹಿಯಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞರಾಗುವುದಿಲ್ಲವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَرَءَيْتُمُ ٱلنَّارَ ٱلَّتِى تُورُونَ
Kannada Translation - Hamza Butur ನೀವು ಉರಿಸುವ ಬೆಂಕಿಯನ್ನು ನೀವು ನೋಡಿದ್ದೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ءَأَنتُمْ أَنشَأْتُمْ شَجَرَتَهَآ أَمْ نَحْنُ ٱلْمُنشِـُٔونَ
Kannada Translation - Hamza Butur ಅದರ ಮರವನ್ನು ಸೃಷ್ಟಿಸಿದ್ದು ನೀವೋ? ಅಥವಾ ಸೃಷ್ಟಿಸುವವರು ನಾವೋ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
نَحْنُ جَعَلْنَٰهَا تَذْكِرَةً وَمَتَٰعًا لِّلْمُقْوِينَ
Kannada Translation - Hamza Butur ನಾವು ಅದನ್ನೊಂದು ಉಪದೇಶವಾಗಿ ಮತ್ತು ಪ್ರಯಾಣಿಕರಿಗೆ ಸವಲತ್ತಾಗಿ ಮಾಡಿದ್ದೇವೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَبِّحْ بِٱسْمِ رَبِّكَ ٱلْعَظِيمِ
Kannada Translation - Hamza Butur ಆದ್ದರಿಂದ ನೀವು ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَآ أُقْسِمُ بِمَوَٰقِعِ ٱلنُّجُومِ
Kannada Translation - Hamza Butur ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُۥ لَقَسَمٌ لَّوْ تَعْلَمُونَ عَظِيمٌ
Kannada Translation - Hamza Butur ನೀವು ತಿಳಿದಿದ್ದರೆ ಅದು ಬಹಳ ದೊಡ್ಡ ಆಣೆಯಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّهُۥ لَقُرْءَانٌ كَرِيمٌ
Kannada Translation - Hamza Butur ನಿಶ್ಚಯವಾಗಿಯೂ ಈ ಕುರ್‌ಆನ್ ಅತ್ಯಂತ ಆದರಣೀಯವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فِى كِتَٰبٍ مَّكْنُونٍ
Kannada Translation - Hamza Butur ಅದು ಭದ್ರವಾದ ಒಂದು ಗ್ರಂಥದಲ್ಲಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَّا يَمَسُّهُۥٓ إِلَّا ٱلْمُطَهَّرُونَ
Kannada Translation - Hamza Butur ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تَنزِيلٌ مِّن رَّبِّ ٱلْعَٰلَمِينَ
Kannada Translation - Hamza Butur ಅದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَفَبِهَٰذَا ٱلْحَدِيثِ أَنتُم مُّدْهِنُونَ
Kannada Translation - Hamza Butur ಹಾಗಾದರೆ ಈ ಮಾತುಗಳನ್ನು (ಕುರ್‌ಆನನ್ನು) ನೀವು ಅನಪೇಕ್ಷಿತವಾಗಿ ಸ್ವೀಕರಿಸುತ್ತೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَجْعَلُونَ رِزْقَكُمْ أَنَّكُمْ تُكَذِّبُونَ
Kannada Translation - Hamza Butur ಸತ್ಯವನ್ನು ನಿಷೇಧಿಸುವುದನ್ನೇ ನಿಮ್ಮ (ಪರಿಪಾಲಕನು ಒದಗಿಸಿದ) ಉಪಜೀವನಕ್ಕೆ (ಕೃತಜ್ಞತೆಯಾಗಿ) ಮಾಡಿಕೊಳ್ಳುತ್ತೀರಾ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَوْلَآ إِذَا بَلَغَتِ ٱلْحُلْقُومَ
Kannada Translation - Hamza Butur ಆದರೆ ಪ್ರಾಣವು ಗಂಟಲಿಗೆ ತಲುಪುವಾಗ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَنتُمْ حِينَئِذٍ تَنظُرُونَ
Kannada Translation - Hamza Butur ಆ ವೇಳೆಯಲ್ಲಿ ನೀವು ನೋಡುತ್ತಲೇ ಇರುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ
Kannada Translation - Hamza Butur ನಾವು ಆ ವ್ಯಕ್ತಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿದ್ದೇವೆ. ಆದರೆ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَلَوْلَآ إِن كُنتُمْ غَيْرَ مَدِينِينَ
Kannada Translation - Hamza Butur ನೀವು ಇನ್ನೊಬ್ಬರ (ಅಲ್ಲಾಹನ) ಆಜ್ಞೆಗೆ ವಿಧೇಯರಲ್ಲದಿದ್ದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
تَرْجِعُونَهَآ إِن كُنتُمْ صَٰدِقِينَ
Kannada Translation - Hamza Butur ಆ ಪ್ರಾಣವನ್ನು ಮರಳಿ ಪಡೆಯಬಾರದೇಕೆ? ನೀವು ಸತ್ಯವನ್ನೇ ಹೇಳುತ್ತಿದ್ದರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَأَمَّآ إِن كَانَ مِنَ ٱلْمُقَرَّبِينَ
Kannada Translation - Hamza Butur ಅವನು (ಮೃತನು) ಅಲ್ಲಾಹನ ಸಾಮೀಪ್ಯ ಪಡೆದವರಲ್ಲಿ ಸೇರಿದ್ದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَرَوْحٌ وَرَيْحَانٌ وَجَنَّتُ نَعِيمٍ
Kannada Translation - Hamza Butur ಅವನಿಗೆ ನೆಮ್ಮದಿ, ವಿಶಿಷ್ಟ ಆಹಾರ ಮತ್ತು ಅನುಗ್ರಹಪೂರ್ಣ ಸ್ವರ್ಗವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّآ إِن كَانَ مِنْ أَصْحَٰبِ ٱلْيَمِينِ
Kannada Translation - Hamza Butur ಅವನು ಬಲಭಾಗದ ಜನರಲ್ಲಿ ಸೇರಿದವನಾಗಿದ್ದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَلَٰمٌ لَّكَ مِنْ أَصْحَٰبِ ٱلْيَمِينِ
Kannada Translation - Hamza Butur (ಅವನೊಡನೆ ಹೇಳಲಾಗುವುದು): “ನೀನು ಬಲಭಾಗದ ಜನರಲ್ಲಿ ಸೇರಿದ್ದರಿಂದ ನಿನಗೆ ಸುರಕ್ಷೆಯಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَأَمَّآ إِن كَانَ مِنَ ٱلْمُكَذِّبِينَ ٱلضَّآلِّينَ
Kannada Translation - Hamza Butur ಆದರೆ ಅವನು ಸತ್ಯನಿಷೇಧಿಗಳಲ್ಲಿ ಮತ್ತು ದುರ್ಮಾರ್ಗಿಗಳಲ್ಲಿ ಸೇರಿದವನಾಗಿದ್ದರೆ,
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَنُزُلٌ مِّنْ حَمِيمٍ
Kannada Translation - Hamza Butur ಅವನಿಗೆ ಕುದಿಯುವ ನೀರಿನ ಸತ್ಕಾರವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَتَصْلِيَةُ جَحِيمٍ
Kannada Translation - Hamza Butur ನರಕಾಗ್ನಿಗೆ ಪ್ರವೇಶವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذَا لَهُوَ حَقُّ ٱلْيَقِينِ
Kannada Translation - Hamza Butur ನಿಶ್ಚಯವಾಗಿಯೂ ಇದು ಖಚಿತವಾದ ಸತ್ಯವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَبِّحْ بِٱسْمِ رَبِّكَ ٱلْعَظِيمِ
Kannada Translation - Hamza Butur ಆದ್ದರಿಂದ ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ Ar-Rahmaan
ಸೂರ Al-Hadid →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.