caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Ar-Rahmaan الرحمن

78 ಆಯತ್‌ಗಳು · ಮದೀನಾ · ಅವತರಣ ಕ್ರಮ 97

بِسْمِ ٱللَّهِ ٱلرَّحْمَٰنِ ٱلرَّحِيمِ ٱلرَّحْمَٰنُ

Kannada Translation - Hamza Buturಪರಮ ದಯಾಳು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَّمَ ٱلْقُرْءَانَ

Kannada Translation - Hamza Buturಕುರ್‌ಆನನ್ನು ಕಲಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خَلَقَ ٱلْإِنسَٰنَ

Kannada Translation - Hamza Buturಮನುಷ್ಯನನ್ನು ಸೃಷ್ಟಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَّمَهُ ٱلْبَيَانَ

Kannada Translation - Hamza Buturಅವನಿಗೆ ಮಾತನಾಡಲು ಕಲಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلشَّمْسُ وَٱلْقَمَرُ بِحُسْبَانٍ

Kannada Translation - Hamza Buturಸೂರ್ಯ ಮತ್ತು ಚಂದ್ರ (ನಿಶ್ಚಿತ) ಗಣನೆಯಲ್ಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلنَّجْمُ وَٱلشَّجَرُ يَسْجُدَانِ

Kannada Translation - Hamza Buturಸಸ್ಯಗಳು ಮತ್ತು ಮರಗಳು (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلسَّمَآءَ رَفَعَهَا وَوَضَعَ ٱلْمِيزَانَ

Kannada Translation - Hamza Buturಅವನು ಆಕಾಶವನ್ನು ಎತ್ತರಕ್ಕೇರಿಸಿದನು ಮತ್ತು ತಕ್ಕಡಿಯನ್ನು ಸ್ಥಾಪಿಸಿದನು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَّا تَطْغَوْا۟ فِى ٱلْمِيزَانِ

Kannada Translation - Hamza Buturನೀವು ತೂಕದಲ್ಲಿ ಅಸಮತೋಲನ ಮಾಡದಿರುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَقِيمُوا۟ ٱلْوَزْنَ بِٱلْقِسْطِ وَلَا تُخْسِرُوا۟ ٱلْمِيزَانَ

Kannada Translation - Hamza Buturನೀವು ನ್ಯಾಯದೊಂದಿಗೆ ತಕ್ಕಡಿಯನ್ನು ಸ್ಥಾಪಿಸಿರಿ. ತೂಕದಲ್ಲಿ ಕಡಿಮೆ ಮಾಡಬೇಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْأَرْضَ وَضَعَهَا لِلْأَنَامِ

Kannada Translation - Hamza Buturಅವನು ಭೂಮಿಯನ್ನು ಮನುಷ್ಯರಿಗೋಸ್ಕರ ಇಟ್ಟನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهَا فَٰكِهَةٌ وَٱلنَّخْلُ ذَاتُ ٱلْأَكْمَامِ

Kannada Translation - Hamza Buturಅದರಲ್ಲಿ ಹಣ್ಣು-ಹಂಪಲುಗಳು ಮತ್ತು ಪೊರೆಗಳಿರುವ ಖರ್ಜೂರದ ಮರಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْحَبُّ ذُو ٱلْعَصْفِ وَٱلرَّيْحَانُ

Kannada Translation - Hamza Buturಹೊಟ್ಟಿರುವ ಧಾನ್ಯಗಳು ಮತ್ತು ಸುಗಂಧಪೂರಿತ ಸಸ್ಯಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು (ಜಿನ್ನ್ ಮತ್ತು ಮನುಷ್ಯರು) ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خَلَقَ ٱلْإِنسَٰنَ مِن صَلْصَٰلٍ كَٱلْفَخَّارِ

Kannada Translation - Hamza Buturಅವನು ಮನುಷ್ಯನನ್ನು ಕುಂಬಾರಿಕೆಯ ಜೇಡಿಮಣ್ಣಿನಿಂದ ಸೃಷ್ಟಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَخَلَقَ ٱلْجَآنَّ مِن مَّارِجٍ مِّن نَّارٍ

Kannada Translation - Hamza Buturಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَبُّ ٱلْمَشْرِقَيْنِ وَرَبُّ ٱلْمَغْرِبَيْنِ

Kannada Translation - Hamza Buturಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَرَجَ ٱلْبَحْرَيْنِ يَلْتَقِيَانِ

Kannada Translation - Hamza Buturಅವನು ಎರಡು ಸಮುದ್ರಗಳನ್ನು ಪರಸ್ಪರ ಬೆರೆಯುವಂತೆ ಹರಿಯಲು ಬಿಟ್ಟನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَيْنَهُمَا بَرْزَخٌ لَّا يَبْغِيَانِ

Kannada Translation - Hamza Buturಅವೆರಡರ ನಡುವೆ ಒಂದು ತಡೆಯಿದ್ದು ಅವು ಅದನ್ನು ಮೀರಿ ಹೋಗುವುದಿಲ್ಲ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَخْرُجُ مِنْهُمَا ٱللُّؤْلُؤُ وَٱلْمَرْجَانُ

Kannada Translation - Hamza Buturಅವೆರಡರಿಂದಲೂ ಮುತ್ತು ಮತ್ತು ಹವಳಗಳು ಹೊರಬರುತ್ತವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَهُ ٱلْجَوَارِ ٱلْمُنشَـَٔاتُ فِى ٱلْبَحْرِ كَٱلْأَعْلَٰمِ

Kannada Translation - Hamza Buturಸಮುದ್ರದಲ್ಲಿ ಬೆಟ್ಟಗಳಂತೆ ಎತ್ತರವಾಗಿದ್ದು ಸಂಚರಿಸುವ ಹಡಗುಗಳು ಅವನ ನಿಯಂತ್ರಣದಲ್ಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كُلُّ مَنْ عَلَيْهَا فَانٍ

Kannada Translation - Hamza Buturಭೂಮಿಯ ಮೇಲಿರುವ ಎಲ್ಲವೂ ನಾಶವಾಗಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَبْقَىٰ وَجْهُ رَبِّكَ ذُو ٱلْجَلَٰلِ وَٱلْإِكْرَامِ

Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಮಹತ್ವಪೂರ್ಣ ಮತ್ತು ಗೌರವಾರ್ಹವಾದ ಮುಖವು ಮಾತ್ರ ಅವಶೇಷಿಸುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَسْـَٔلُهُۥ مَن فِى ٱلسَّمَٰوَٰتِ وَٱلْأَرْضِ كُلَّ يَوْمٍ هُوَ فِى شَأْنٍ

Kannada Translation - Hamza Buturಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅವನು ಒಂದು ಕೆಲಸದಲ್ಲಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَنَفْرُغُ لَكُمْ أَيُّهَ ٱلثَّقَلَانِ

Kannada Translation - Hamza Buturಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಸದ್ಯವೇ ನಾವು ನಿಮಗೋಸ್ಕರ ಸಂಪೂರ್ಣ ಬಿಡುವು ಮಾಡಿಕೊಳ್ಳುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰمَعْشَرَ ٱلْجِنِّ وَٱلْإِنسِ إِنِ ٱسْتَطَعْتُمْ أَن تَنفُذُوا۟ مِنْ أَقْطَارِ ٱلسَّمَٰوَٰتِ وَٱلْأَرْضِ فَٱنفُذُوا۟ لَا تَنفُذُونَ إِلَّا بِسُلْطَٰنٍ

Kannada Translation - Hamza Buturಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಭೂಮ್ಯಾಕಾಶಗಳ ಸೀಮೆಗಳಿಂದ ಹೊರಗೆ ಓಡಿಹೋಗುವ ಸಾಮರ್ಥ್ಯ ನಿಮಗಿದ್ದರೆ ಓಡಿಹೋಗಿರಿ. ಪ್ರಬಲ ಶಕ್ತಿಯಿಲ್ಲದೆ ನಿಮಗೆ ಓಡಿಹೋಗಲು ಸಾಧ್ಯವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُرْسَلُ عَلَيْكُمَا شُوَاظٌ مِّن نَّارٍ وَنُحَاسٌ فَلَا تَنتَصِرَانِ

Kannada Translation - Hamza Buturನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಗ ನಿಮಗೆ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا ٱنشَقَّتِ ٱلسَّمَآءُ فَكَانَتْ وَرْدَةً كَٱلدِّهَانِ

Kannada Translation - Hamza Buturಆಕಾಶವು ಸಿಡಿದು ಹೋಳಾಗಿ ಕೆಂಪು ಚರ್ಮದಂತೆ ಕೆಂಪಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَيَوْمَئِذٍ لَّا يُسْـَٔلُ عَن ذَنۢبِهِۦٓ إِنسٌ وَلَا جَآنٌّ

Kannada Translation - Hamza Buturಅಂದು ಯಾವುದೇ ಮನುಷ್ಯನಲ್ಲಿ ಅಥವಾ ಜಿನ್ನ್‌ನಲ್ಲಿ ಅವನು ಮಾಡಿದ ಪಾಪಗಳ ಬಗ್ಗೆ ಕೇಳಲಾಗುವುದಿಲ್ಲ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُعْرَفُ ٱلْمُجْرِمُونَ بِسِيمَٰهُمْ فَيُؤْخَذُ بِٱلنَّوَٰصِى وَٱلْأَقْدَامِ

Kannada Translation - Hamza Buturಅಪರಾಧಿಗಳನ್ನು ಅವರ ಲಕ್ಷಣಗಳ ಮೂಲಕ ಗುರುತಿಸಲಾಗುವುದು. ಅವರನ್ನು ಅವರ ಜುಟ್ಟು ಮತ್ತು ಪಾದಗಳನ್ನು ಹಿಡಿದು ಒಯ್ಯಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَٰذِهِۦ جَهَنَّمُ ٱلَّتِى يُكَذِّبُ بِهَا ٱلْمُجْرِمُونَ

Kannada Translation - Hamza Buturಇದೇ ಅಪರಾಧಿಗಳು ನಿಷೇಧಿಸುತ್ತಿದ್ದ ನರಕಾಗ್ನಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَطُوفُونَ بَيْنَهَا وَبَيْنَ حَمِيمٍ ءَانٍ

Kannada Translation - Hamza Buturಅವರು ಅದರ ಮತ್ತು ಕುದಿಯುವ ಬಿಸಿನೀರಿನ ನಡುವೆ ಸುತ್ತುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلِمَنْ خَافَ مَقَامَ رَبِّهِۦ جَنَّتَانِ

Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಬೇಕೆಂಬ ಭಯವಿರುವ ವ್ಯಕ್ತಿಗೆ ಎರಡು ಸ್ವರ್ಗಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَوَاتَآ أَفْنَانٍ

Kannada Translation - Hamza Buturಅವೆರಡರಲ್ಲೂ ಅನೇಕ ಗೆಲ್ಲುಗಳು ಮತ್ತು ಶಾಖೆಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِمَا عَيْنَانِ تَجْرِيَانِ

Kannada Translation - Hamza Buturಅವೆರಡರಲ್ಲೂ ಹರಿಯುವ ಎರಡು ತೊರೆಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِمَا مِن كُلِّ فَٰكِهَةٍ زَوْجَانِ

Kannada Translation - Hamza Buturಅವೆರಡರಲ್ಲೂ ಎಲ್ಲಾ ತರಹದ ಹಣ್ಣುಗಳಲ್ಲೂ ಎರಡೆರಡು ವಿಧಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مُتَّكِـِٔينَ عَلَىٰ فُرُشٍۭ بَطَآئِنُهَا مِنْ إِسْتَبْرَقٍ وَجَنَى ٱلْجَنَّتَيْنِ دَانٍ

Kannada Translation - Hamza Buturಅವರು ಕೆಲವು ಹಾಸುಗಳ ಮೇಲೆ ಒರಗಿ ಕುಳಿತುಕೊಳ್ಳುವರು. ಆ ಹಾಸುಗಳ ಒಳಪದರವು ದಪ್ಪ ರೇಷ್ಮೆ ಬಟ್ಟೆಯದ್ದಾಗಿದೆ. ಆ ಎರಡು ಸ್ವರ್ಗಗಳಲ್ಲಿರುವ ಹಣ್ಣುಗಳು ಹತ್ತಿರಕ್ಕೆ ಬಾಗಿಕೊಂಡಿರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِنَّ قَٰصِرَٰتُ ٱلطَّرْفِ لَمْ يَطْمِثْهُنَّ إِنسٌ قَبْلَهُمْ وَلَا جَآنٌّ

Kannada Translation - Hamza Buturಅಲ್ಲಿ ದೃಷ್ಟಿಯನ್ನು ತಗ್ಗಿಸುವ ಅಪ್ಸರೆಯರಿದ್ದಾರೆ. ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَأَنَّهُنَّ ٱلْيَاقُوتُ وَٱلْمَرْجَانُ

Kannada Translation - Hamza Buturಆ ಅಪ್ಸರೆಯರು ಮಾಣಿಕ್ಯ ಮತ್ತು ಹವಳದಂತೆ ಕಾಣುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَلْ جَزَآءُ ٱلْإِحْسَٰنِ إِلَّا ٱلْإِحْسَٰنُ

Kannada Translation - Hamza Buturಒಳಿತಿಗೆ ಪ್ರತಿಫಲವಾಗಿ ಒಳಿತಲ್ಲದೆ ಬೇರೇನಿದೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِن دُونِهِمَا جَنَّتَانِ

Kannada Translation - Hamza Buturಅವೆರಡರ ಹೊರತಾಗಿ ಬೇರೆ ಎರಡು ಸ್ವರ್ಗಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مُدْهَآمَّتَانِ

Kannada Translation - Hamza Buturಅವೆರಡು ಕಡುಹಸಿರು ಬಣ್ಣದ್ದಾಗಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِمَا عَيْنَانِ نَضَّاخَتَانِ

Kannada Translation - Hamza Buturಅವೆರಡರಲ್ಲೂ ರಭಸವಾಗಿ ಹರಿಯುವ ಎರಡು ತೊರೆಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِمَا فَٰكِهَةٌ وَنَخْلٌ وَرُمَّانٌ

Kannada Translation - Hamza Buturಅವೆರಡರಲ್ಲೂ ಹಣ್ಣುಗಳು, ಖರ್ಜೂರದ ಮರಗಳು ಮತ್ತು ದಾಳಿಂಬೆಗಳಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فِيهِنَّ خَيْرَٰتٌ حِسَانٌ

Kannada Translation - Hamza Buturಅವುಗಳಲ್ಲಿ ಶ್ರೇಷ್ಠ ಗುಣನಡತೆಯ ಸುರಸುಂದರಿ ಮಹಿಳೆಯರಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حُورٌ مَّقْصُورَٰتٌ فِى ٱلْخِيَامِ

Kannada Translation - Hamza Buturಡೇರೆಗಳಲ್ಲಿ ಜೋಪಾನವಾಗಿಡಲಾದ ಬೆಳ್ಳಗಿನ ಅಪ್ಸರೆಯರು!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَمْ يَطْمِثْهُنَّ إِنسٌ قَبْلَهُمْ وَلَا جَآنٌّ

Kannada Translation - Hamza Buturಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مُتَّكِـِٔينَ عَلَىٰ رَفْرَفٍ خُضْرٍ وَعَبْقَرِىٍّ حِسَانٍ

Kannada Translation - Hamza Buturಅವರು ಹಸಿರು ದಿಂಬುಗಳಲ್ಲಿ ಮತ್ತು ಸುಂದರ ಜಮಾಖಾನೆಗಳಲ್ಲಿ ಒರಗಿ ಕುಳಿತುಕೊಳ್ಳುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ ءَالَآءِ رَبِّكُمَا تُكَذِّبَانِ

Kannada Translation - Hamza Buturಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَبَٰرَكَ ٱسْمُ رَبِّكَ ذِى ٱلْجَلَٰلِ وَٱلْإِكْرَامِ

Kannada Translation - Hamza Buturಮಹತ್ವಪೂರ್ಣನು ಮತ್ತು ಗೌರವಾರ್ಹನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರು ಸಮೃದ್ಧಪೂರ್ಣವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70