caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Yaseen يس

83 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 41

بِسْمِ ٱللَّهِ ٱلرَّحْمَٰنِ ٱلرَّحِيمِ يسٓ

Kannada Translation - Hamza Buturಯಾಸೀನ್.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْقُرْءَانِ ٱلْحَكِيمِ

Kannada Translation - Hamza Buturವಿವೇಕಪೂರ್ಣವಾದ ಕುರ್‌ಆನಿನ ಮೇಲಾಣೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّكَ لَمِنَ ٱلْمُرْسَلِينَ

Kannada Translation - Hamza Buturನಿಶ್ಚಯವಾಗಿಯೂ ನೀವು ಸಂದೇಶವಾಹಕರುಗಳಲ್ಲಿ ಒಬ್ಬರಾಗಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَلَىٰ صِرَٰطٍ مُّسْتَقِيمٍ

Kannada Translation - Hamza Buturನೀವು ನೇರ ಮಾರ್ಗದಲ್ಲಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَنزِيلَ ٱلْعَزِيزِ ٱلرَّحِيمِ

Kannada Translation - Hamza Buturಈ ಕುರ್‌ಆನ್ ಪ್ರಬಲನು ಮತ್ತು ಕರುಣಾನಿಧಿಯಾದ ಅಲ್ಲಾಹನಿಂದ ಅವತೀರ್ಣವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِتُنذِرَ قَوْمًا مَّآ أُنذِرَ ءَابَآؤُهُمْ فَهُمْ غَٰفِلُونَ

Kannada Translation - Hamza Buturನೀವು ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರ ಪೂರ್ವಜರಿಗೆ ಯಾರೂ ಎಚ್ಚರಿಕೆ ನೀಡಿಲ್ಲ. ಆದ್ದರಿಂದ ಅವರು ನಿರ್ಲಕ್ಷ್ಯದಲ್ಲಿದ್ದಾರೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَقَدْ حَقَّ ٱلْقَوْلُ عَلَىٰٓ أَكْثَرِهِمْ فَهُمْ لَا يُؤْمِنُونَ

Kannada Translation - Hamza Buturಅವರಲ್ಲಿ ಹೆಚ್ಚಿನವರ ಮೇಲೂ ಶಿಕ್ಷೆಯ ವಚನವು ಖಾತ್ರಿಯಾಗಿದೆ. ಆದ್ದರಿಂದ ಅವರು ವಿಶ್ವಾಸವಿಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّا جَعَلْنَا فِىٓ أَعْنَٰقِهِمْ أَغْلَٰلًا فَهِىَ إِلَى ٱلْأَذْقَانِ فَهُم مُّقْمَحُونَ

Kannada Translation - Hamza Buturನಾವು ಅವರ ಕೊರಳುಗಳಲ್ಲಿ ಸಂಕೋಲೆಗಳನ್ನು ಹಾಕಿದ್ದೇವೆ. ಅದು ಅವರ ಗಲ್ಲಗಳ ತನಕ ಇದೆ. ಆದ್ದರಿಂದ ಅವರು ತಲೆಯೆತ್ತಿಕೊಂಡೇ ಇರುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا مِنۢ بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَٰهُمْ فَهُمْ لَا يُبْصِرُونَ

Kannada Translation - Hamza Buturನಾವು ಅವರ ಮುಂಭಾಗದಲ್ಲಿ ಒಂದು ಪರದೆಯನ್ನು ಮತ್ತು ಅವರ ಹಿಂಭಾಗದಲ್ಲಿ ಒಂದು ಪರದೆಯನ್ನು ಹಾಕಿ ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಆದ್ದರಿಂದ ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَسَوَآءٌ عَلَيْهِمْ ءَأَنذَرْتَهُمْ أَمْ لَمْ تُنذِرْهُمْ لَا يُؤْمِنُونَ

Kannada Translation - Hamza Buturನೀವು ಅವರಿಗೆ ಎಚ್ಚರಿಕೆ ನೀಡಿದರೂ ಅಥವಾ ಎಚ್ಚರಿಕೆ ನೀಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅವರು ವಿಶ್ವಾಸವಿಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّمَا تُنذِرُ مَنِ ٱتَّبَعَ ٱلذِّكْرَ وَخَشِىَ ٱلرَّحْمَٰنَ بِٱلْغَيْبِ فَبَشِّرْهُ بِمَغْفِرَةٍ وَأَجْرٍ كَرِيمٍ

Kannada Translation - Hamza Buturಯಾರು ನಿಮ್ಮ ಉಪದೇಶವನ್ನು ಅನುಸರಿಸುತ್ತಾನೋ ಮತ್ತು ಪರಮ ದಯಾಳುವಾದ ಅಲ್ಲಾಹನನ್ನು ಅದೃಶ್ಯ ಸ್ಥಿತಿಯಲ್ಲಿ ಭಯಪಡುತ್ತಾನೋ ಅವನಿಗೆ ಮಾತ್ರ ನಿಮ್ಮ ಎಚ್ಚರಿಕೆ ಪ್ರಯೋಜನ ನೀಡುತ್ತದೆ. ಆದ್ದರಿಂದ ಅವನಿಗೆ ಕ್ಷಮೆ ಮತ್ತು ಉದಾರ ಪ್ರತಿಫಲದ ಸುವಾರ್ತೆಯನ್ನು ತಿಳಿಸಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّا نَحْنُ نُحْىِ ٱلْمَوْتَىٰ وَنَكْتُبُ مَا قَدَّمُوا۟ وَءَاثَٰرَهُمْ وَكُلَّ شَىْءٍ أَحْصَيْنَٰهُ فِىٓ إِمَامٍ مُّبِينٍ

Kannada Translation - Hamza Buturನಿಶ್ಚಯವಾಗಿಯೂ ನಾವು ಮೃತರಿಗೆ ಜೀವ ನೀಡುತ್ತೇವೆ. ಅವರು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ಮತ್ತು ಅವರು ಹಿಂದೆಯೇ ಬಿಟ್ಟಿರುವ ಕರ್ಮಗಳನ್ನು ನಾವು ದಾಖಲಿಸಿಡುತ್ತೇವೆ. ನಾವು ಎಲ್ಲಾ ವಿಷಯಗಳನ್ನೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಿಟ್ಟಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱضْرِبْ لَهُم مَّثَلًا أَصْحَٰبَ ٱلْقَرْيَةِ إِذْ جَآءَهَا ٱلْمُرْسَلُونَ

Kannada Translation - Hamza Buturಅವರಿಗೆ ಒಂದು ಊರಿನ ನಿವಾಸಿಗಳ ಉದಾಹರಣೆಯನ್ನು ತಿಳಿಸಿಕೊಡಿ. ಅಲ್ಲಿಗೆ ಸಂದೇಶವಾಹಕರುಗಳು ಬಂದ ಸಂದರ್ಭ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذْ أَرْسَلْنَآ إِلَيْهِمُ ٱثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوٓا۟ إِنَّآ إِلَيْكُم مُّرْسَلُونَ

Kannada Translation - Hamza Buturನಾವು ಅವರ ಬಳಿಗೆ ಇಬ್ಬರು ಸಂದೇಶವಾಹಕರುಗಳನ್ನು ಕಳುಹಿಸಿದ್ದೆವು. ಆದರೆ ಅವರು ಆ ಇಬ್ಬರು ಸಂದೇಶವಾಹಕರನ್ನೂ ನಿಷೇಧಿಸಿದರು. ಆಗ ಅವರಿಗೆ ಬಲ ನೀಡುವುದಕ್ಕಾಗಿ ನಾವು ಮೂರನೆಯವರನ್ನು ಕಳುಹಿಸಿದೆವು. ಅವರು ಹೇಳಿದರು: “ನಿಶ್ಚಯವಾಗಿಯೂ ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ مَآ أَنتُمْ إِلَّا بَشَرٌ مِّثْلُنَا وَمَآ أَنزَلَ ٱلرَّحْمَٰنُ مِن شَىْءٍ إِنْ أَنتُمْ إِلَّا تَكْذِبُونَ

Kannada Translation - Hamza Buturಜನರು ಹೇಳಿದರು: “ನೀವು ನಮ್ಮಂತೆಯೇ ಇರುವ ಮನುಷ್ಯರಾಗಿದ್ದೀರಿ. ಪರಮ ದಯಾಳು (ಅಲ್ಲಾಹು) ಏನನ್ನೂ ಅವತೀರ್ಣಗೊಳಿಸಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿದ್ದೀರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ رَبُّنَا يَعْلَمُ إِنَّآ إِلَيْكُمْ لَمُرْسَلُونَ

Kannada Translation - Hamza Buturಸಂದೇಶವಾಹಕರುಗಳು ಹೇಳಿದರು: “ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆಯೆಂದು ನಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا عَلَيْنَآ إِلَّا ٱلْبَلَٰغُ ٱلْمُبِينُ

Kannada Translation - Hamza Buturನಮ್ಮ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುವುದು ಮಾತ್ರವಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوٓا۟ إِنَّا تَطَيَّرْنَا بِكُمْ لَئِن لَّمْ تَنتَهُوا۟ لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ

Kannada Translation - Hamza Buturಜನರು ಹೇಳಿದರು: “ನಾವು ನಿಮ್ಮನ್ನು ಅಪಶಕುನವೆಂದು ಭಾವಿಸಿದ್ದೇವೆ. ನೀವು (ನಿಮ್ಮ ಧರ್ಮಪ್ರಚಾರವನ್ನು) ನಿಲ್ಲಿಸದಿದ್ದರೆ ನಾವು ನಿಮ್ಮನ್ನು ಖಂಡಿತ ಕಲ್ಲೆಸೆದು ಸಾಯಿಸುವೆವು ಮತ್ತು ನಿಮಗೆ ನಮ್ಮ ಕಡೆಯ ಯಾತನಾಮಯ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುವುದು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ طَٰٓئِرُكُم مَّعَكُمْ أَئِن ذُكِّرْتُم بَلْ أَنتُمْ قَوْمٌ مُّسْرِفُونَ

Kannada Translation - Hamza Buturಸಂದೇಶವಾಹಕರುಗಳು ಹೇಳಿದರು: “ನಿಮ್ಮ ಅಪಶಕುನವು ನಿಮ್ಮ ಜೊತೆಯಲ್ಲೇ ಇದೆ. ನಿಮಗೆ ಉಪದೇಶ ನೀಡಿದರೆ ನೀವು ಅದನ್ನು ಅಪಶಕುನ ಎನ್ನುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَآءَ مِنْ أَقْصَا ٱلْمَدِينَةِ رَجُلٌ يَسْعَىٰ قَالَ يَٰقَوْمِ ٱتَّبِعُوا۟ ٱلْمُرْسَلِينَ

Kannada Translation - Hamza Buturನಗರದ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡುತ್ತಾ ಬಂದನು. ಅವನು ಹೇಳಿದನು: “ಓ ನನ್ನ ಜನರೇ! ನೀವು ಸಂದೇಶವಾಹಕರುಗಳನ್ನು ಅನುಸರಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱتَّبِعُوا۟ مَن لَّا يَسْـَٔلُكُمْ أَجْرًا وَهُم مُّهْتَدُونَ

Kannada Translation - Hamza Buturನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳದ ಮತ್ತು ಸನ್ಮಾರ್ಗದಲ್ಲಿರುವ ಇವರನ್ನು ಅನುಸರಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا لِىَ لَآ أَعْبُدُ ٱلَّذِى فَطَرَنِى وَإِلَيْهِ تُرْجَعُونَ

Kannada Translation - Hamza Buturನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ? ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ءَأَتَّخِذُ مِن دُونِهِۦٓ ءَالِهَةً إِن يُرِدْنِ ٱلرَّحْمَٰنُ بِضُرٍّ لَّا تُغْنِ عَنِّى شَفَٰعَتُهُمْ شَيْـًٔا وَلَا يُنقِذُونِ

Kannada Translation - Hamza Buturನಾನು ಅವನನ್ನು (ಅಲ್ಲಾಹನನ್ನು) ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಬೇಕೇ? ಪರಮ ದಯಾಳು (ಅಲ್ಲಾಹು) ನನಗೇನಾದರೂ ತೊಂದರೆ ಕೊಡಲು ಬಯಸಿದರೆ ಅವರು (ಆ ದೇವರುಗಳು) ಮಾಡುವ ಶಿಫಾರಸು ನನಗೆ ಸ್ವಲ್ಪವೂ ಪ್ರಯೋಜನವಾಗುವುದಿಲ್ಲ. ಅವರು ನನ್ನನ್ನು ರಕ್ಷಿಸುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنِّىٓ إِذًا لَّفِى ضَلَٰلٍ مُّبِينٍ

Kannada Translation - Hamza Buturಹಾಗೇನಾದರೂ ಆದರೆ, ನಾನು ಸ್ಪಷ್ಟವಾಗಿ ದಾರಿತಪ್ಪುವುದು ನಿಶ್ಚಿತ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنِّىٓ ءَامَنتُ بِرَبِّكُمْ فَٱسْمَعُونِ

Kannada Translation - Hamza Buturನಿಶ್ಚಯವಾಗಿಯೂ ನಾನು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇನೆ. ಆದ್ದರಿಂದ ನೀವು ನನ್ನ ಮಾತಿಗೆ ಕಿವಿಗೊಡಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قِيلَ ٱدْخُلِ ٱلْجَنَّةَ قَالَ يَٰلَيْتَ قَوْمِى يَعْلَمُونَ

Kannada Translation - Hamza Buturಆ ವ್ಯಕ್ತಿಯೊಡನೆ ಹೇಳಲಾಯಿತು: “ಸ್ವರ್ಗವನ್ನು ಪ್ರವೇಶಿಸಿ.” ಆ ವ್ಯಕ್ತಿ ಹೇಳಿದರು: “ನನ್ನ ಜನರು ಇದನ್ನು ತಿಳಿಯುತ್ತಿದ್ದರೆ ಎಷ್ಟು ಚೆನ್ನಾಗಿತ್ತು!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بِمَا غَفَرَ لِى رَبِّى وَجَعَلَنِى مِنَ ٱلْمُكْرَمِينَ

Kannada Translation - Hamza Buturಅಂದರೆ, ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಕ್ಷಮಿಸಿದ್ದಾನೆ ಮತ್ತು ನನ್ನನ್ನು ಗಣ್ಯರಲ್ಲಿ ಸೇರಿಸಿದ್ದಾನೆಂದು.”[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَنزَلْنَا عَلَىٰ قَوْمِهِۦ مِنۢ بَعْدِهِۦ مِن جُندٍ مِّنَ ٱلسَّمَآءِ وَمَا كُنَّا مُنزِلِينَ

Kannada Translation - Hamza Buturಅವರ ಬಳಿಕ ಅವರ ಜನರ ಮೇಲೆ ನಾವು ಆಕಾಶದಿಂದ ಯಾವುದೇ ಸೈನ್ಯವನ್ನು ಇಳಿಸಲಿಲ್ಲ. ನಾವು ಆ ರೀತಿ ಇಳಿಸುವವರೂ ಅಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِن كَانَتْ إِلَّا صَيْحَةً وَٰحِدَةً فَإِذَا هُمْ خَٰمِدُونَ

Kannada Translation - Hamza Buturಅದು ಒಂದು ಮಹಾ ಚೀತ್ಕಾರ ಮಾತ್ರವಾಗಿತ್ತು. ಆಗ ಹಠಾತ್ತನೆ ಅವರೆಲ್ಲರೂ ಸರ್ವನಾಶವಾದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰحَسْرَةً عَلَى ٱلْعِبَادِ مَا يَأْتِيهِم مِّن رَّسُولٍ إِلَّا كَانُوا۟ بِهِۦ يَسْتَهْزِءُونَ

Kannada Translation - Hamza Buturಅಯ್ಯೋ ನನ್ನ ದಾಸರೇ! ಅವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಆ ಸಂದೇಶವಾಹಕರನ್ನು ತಮಾಷೆ ಮಾಡುತ್ತಲೇ ಇದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ يَرَوْا۟ كَمْ أَهْلَكْنَا قَبْلَهُم مِّنَ ٱلْقُرُونِ أَنَّهُمْ إِلَيْهِمْ لَا يَرْجِعُونَ

Kannada Translation - Hamza Buturಏನು ಅವರು ನೋಡಿಲ್ಲವೇ? ಅವರಿಗಿಂತ ಮೊದಲು ನಾವು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಮತ್ತು ಅವರಲ್ಲಿ ಯಾರೂ ಇವರ ಬಳಿಗೆ ಮರಳಿ ಬರುವುದಿಲ್ಲವೆಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِن كُلٌّ لَّمَّا جَمِيعٌ لَّدَيْنَا مُحْضَرُونَ

Kannada Translation - Hamza Buturನಿಶ್ಚಯವಾಗಿಯೂ ಅವರಲ್ಲಿ ಯಾರನ್ನೂ ಬಿಡದೆ ಎಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَءَايَةٌ لَّهُمُ ٱلْأَرْضُ ٱلْمَيْتَةُ أَحْيَيْنَٰهَا وَأَخْرَجْنَا مِنْهَا حَبًّا فَمِنْهُ يَأْكُلُونَ

Kannada Translation - Hamza Buturಬರಡು ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದಕ್ಕೆ ಜೀವವನ್ನು ನೀಡಿದೆವು ಮತ್ತು ಅದರಿಂದ ಧಾನ್ಯವನ್ನು ಉತ್ಪಾದಿಸಿದೆವು. ಅವರು ಅದರಿಂದ ತಿನ್ನುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا فِيهَا جَنَّٰتٍ مِّن نَّخِيلٍ وَأَعْنَٰبٍ وَفَجَّرْنَا فِيهَا مِنَ ٱلْعُيُونِ

Kannada Translation - Hamza Buturನಾವು ಅಲ್ಲಿ ಖರ್ಜೂರ ಮತ್ತು ದ್ರಾಕ್ಷಿಗಳ ತೋಟಗಳನ್ನು ಮಾಡಿಕೊಟ್ಟೆವು. ನಾವು ಅದರಲ್ಲಿ ಚಿಲುಮೆಗಳನ್ನೂ ಹರಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِيَأْكُلُوا۟ مِن ثَمَرِهِۦ وَمَا عَمِلَتْهُ أَيْدِيهِمْ أَفَلَا يَشْكُرُونَ

Kannada Translation - Hamza Buturಅವರು ಅದರ ಹಣ್ಣುಗಳನ್ನು ತಿನ್ನಲೆಂದು. ಅದನ್ನು ಅವರ ಕೈಗಳು ಉತ್ಪಾದಿಸಿಲ್ಲ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سُبْحَٰنَ ٱلَّذِى خَلَقَ ٱلْأَزْوَٰجَ كُلَّهَا مِمَّا تُنۢبِتُ ٱلْأَرْضُ وَمِنْ أَنفُسِهِمْ وَمِمَّا لَا يَعْلَمُونَ

Kannada Translation - Hamza Buturಭೂಮಿ ಉತ್ಪಾದಿಸುವ ಸಸ್ಯಲತಾದಿಗಳು, ಅವರ (ಮನುಷ್ಯರ) ವರ್ಗಗಳು ಮತ್ತು ಅವರಿಗೆ ತಿಳಿದಿಲ್ಲದ ವಸ್ತುಗಳು ಮುಂತಾದ ಎಲ್ಲದರಲ್ಲೂ ಜೋಡಿಗಳನ್ನು ಸೃಷ್ಟಿಸಿದ ಅಲ್ಲಾಹು ಪರಿಶುದ್ಧನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَءَايَةٌ لَّهُمُ ٱلَّيْلُ نَسْلَخُ مِنْهُ ٱلنَّهَارَ فَإِذَا هُم مُّظْلِمُونَ

Kannada Translation - Hamza Buturರಾತ್ರಿ ಅವರಿಗೆ ಒಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಎಳೆದು ತೆಗೆಯುತ್ತೇವೆ. ಆಗ ಅಗೋ! ಅವರು ಇರುಳಿನಲ್ಲಿರುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلشَّمْسُ تَجْرِى لِمُسْتَقَرٍّ لَّهَا ذَٰلِكَ تَقْدِيرُ ٱلْعَزِيزِ ٱلْعَلِيمِ

Kannada Translation - Hamza Buturಸೂರ್ಯ ಅದರ ನಿಶ್ಚಿತ ಪಥದಲ್ಲಿ ಚಲಿಸುತ್ತಿದೆ. ಅದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْقَمَرَ قَدَّرْنَٰهُ مَنَازِلَ حَتَّىٰ عَادَ كَٱلْعُرْجُونِ ٱلْقَدِيمِ

Kannada Translation - Hamza Buturನಾವು ಚಂದ್ರನಿಗೆ ಕೆಲವು ಹಂತಗಳನ್ನು ನಿರ್ಣಯಿಸಿದ್ದೇವೆ. ಎಲ್ಲಿಯವರೆಗೆಂದರೆ, ಅದು ಹಳೆಯ ಖರ್ಜೂರದ ದಿಂಡಿನ ರೂಪಕ್ಕೆ ಮರಳುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا ٱلشَّمْسُ يَنۢبَغِى لَهَآ أَن تُدْرِكَ ٱلْقَمَرَ وَلَا ٱلَّيْلُ سَابِقُ ٱلنَّهَارِ وَكُلٌّ فِى فَلَكٍ يَسْبَحُونَ

Kannada Translation - Hamza Buturಸೂರ್ಯನಿಗೆ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ರಾತ್ರಿ ಹಗಲನ್ನು ದಾಟಿಹೋಗುವುದಿಲ್ಲ. ಎಲ್ಲವೂ ಅವುಗಳ ನಿಶ್ಚಿತ ಕಕ್ಷೆಗಳಲ್ಲಿ ಈಜುತ್ತಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَءَايَةٌ لَّهُمْ أَنَّا حَمَلْنَا ذُرِّيَّتَهُمْ فِى ٱلْفُلْكِ ٱلْمَشْحُونِ

Kannada Translation - Hamza Buturನಾವು ಅವರ ಸಂತಾನವನ್ನು ತುಂಬಿ ತುಳುಕುವ ನಾವೆಯಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَخَلَقْنَا لَهُم مِّن مِّثْلِهِۦ مَا يَرْكَبُونَ

Kannada Translation - Hamza Buturಅವರು ಸವಾರಿ ಮಾಡಲು ಬಳಸುವ ಇಂತಹ ಅನೇಕ ವಸ್ತುಗಳನ್ನು ನಾವು ಸೃಷ್ಟಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِن نَّشَأْ نُغْرِقْهُمْ فَلَا صَرِيخَ لَهُمْ وَلَا هُمْ يُنقَذُونَ

Kannada Translation - Hamza Buturನಾವು ಇಚ್ಛಿಸಿದರೆ ಅವರನ್ನು ಮುಳುಗಿಸಿ ಬಿಡುವೆವು. ಆಗ ಅವರ ಕೂಗನ್ನು ಕೇಳುವವರು ಯಾರೂ ಇರಲಾರರು. ಅವರು ಸ್ವತಃ ರಕ್ಷಣೆಯನ್ನೂ ಪಡೆಯಲಾರರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا رَحْمَةً مِّنَّا وَمَتَٰعًا إِلَىٰ حِينٍ

Kannada Translation - Hamza Buturಆದರೆ ನಾವು ನಮ್ಮ ಕಡೆಯ ದಯೆಯಿಂದ ಅವರನ್ನು ರಕ್ಷಿಸುತ್ತೇವೆ ಮತ್ತು ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ಸವಲತ್ತುಗಳನ್ನು ನೀಡುತ್ತೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا قِيلَ لَهُمُ ٱتَّقُوا۟ مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ

Kannada Translation - Hamza Butur“ಮುಂದೆ ಉಂಟಾಗಲಿರುವ ಮತ್ತು ಈಗಾಗಲೇ ಉಂಟಾಗಿರುವ ಪಾಪಗಳ ಬಗ್ಗೆ ಎಚ್ಚರವಾಗಿರಿ; ನಿಮಗೆ ದಯೆ ತೋರಲಾಗುವುದಕ್ಕಾಗಿ” ಎಂದು ಅವರೊಡನೆ ಹೇಳಲಾದರೆ (ಅವರು ಅದನ್ನು ನಿರ್ಲಕ್ಷಿಸುತ್ತಾರೆ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا تَأْتِيهِم مِّنْ ءَايَةٍ مِّنْ ءَايَٰتِ رَبِّهِمْ إِلَّا كَانُوا۟ عَنْهَا مُعْرِضِينَ

Kannada Translation - Hamza Buturಅವರ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತಗಳಲ್ಲಿ ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದರೂ ಅವರು ಅದನ್ನು ನಿರ್ಲಕ್ಷಿಸಿ ವಿಮುಖರಾಗುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا قِيلَ لَهُمْ أَنفِقُوا۟ مِمَّا رَزَقَكُمُ ٱللَّهُ قَالَ ٱلَّذِينَ كَفَرُوا۟ لِلَّذِينَ ءَامَنُوٓا۟ أَنُطْعِمُ مَن لَّوْ يَشَآءُ ٱللَّهُ أَطْعَمَهُۥٓ إِنْ أَنتُمْ إِلَّا فِى ضَلَٰلٍ مُّبِينٍ

Kannada Translation - Hamza Butur“ಅಲ್ಲಾಹು ನಿಮಗೆ ಒದಗಿಸಿದ ಸಂಪತ್ತಿನಿಂದ ಖರ್ಚು ಮಾಡಿರಿ”[1] ಎಂದು ಅವರೊಡನೆ ಹೇಳಲಾದರೆ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಅಲ್ಲಾಹು ಇಚ್ಛಿಸಿದರೆ ಅವನೇ ಆಹಾರ ನೀಡಬಹುದಾದ ಈ ಜನರಿಗೆ ನಾವೇಕೆ ಆಹಾರ ನೀಡಬೇಕು? ನಿಜಕ್ಕೂ ನೀವು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”[2]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَقُولُونَ مَتَىٰ هَٰذَا ٱلْوَعْدُ إِن كُنتُمْ صَٰدِقِينَ

Kannada Translation - Hamza Buturಅವರು ಹೇಳುತ್ತಾರೆ: “ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ನಿಜವಾಗುತ್ತದೆಂದು ಹೇಳಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا يَنظُرُونَ إِلَّا صَيْحَةً وَٰحِدَةً تَأْخُذُهُمْ وَهُمْ يَخِصِّمُونَ

Kannada Translation - Hamza Buturಅವರು ಒಂದು ಮಹಾ ಚೀತ್ಕಾರವನ್ನು ಮಾತ್ರ ಕಾಯುತ್ತಿದ್ದಾರೆ. ಅವರು ಪರಸ್ಪರ ತರ್ಕಿಸುತ್ತಿರುವಾಗಲೇ ಅದು ಅವರನ್ನು ಹಿಡಿಯುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَا يَسْتَطِيعُونَ تَوْصِيَةً وَلَآ إِلَىٰٓ أَهْلِهِمْ يَرْجِعُونَ

Kannada Translation - Hamza Buturಆಗ ಯಾವುದೇ ಉಯಿಲು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ತಮ್ಮ ಮನೆಯವರ ಬಳಿಗೆ ಮರಳಲೂ ಸಾಧ್ಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنُفِخَ فِى ٱلصُّورِ فَإِذَا هُم مِّنَ ٱلْأَجْدَاثِ إِلَىٰ رَبِّهِمْ يَنسِلُونَ

Kannada Translation - Hamza Buturಕಹಳೆಯಲ್ಲಿ ಊದಲಾಗುವುದು. ಆಗ ಅಗೋ! ಅವರು ಸಮಾಧಿಗಳಿಂದ ಎದ್ದು ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಧಾವಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ يَٰوَيْلَنَا مَنۢ بَعَثَنَا مِن مَّرْقَدِنَا هَٰذَا مَا وَعَدَ ٱلرَّحْمَٰنُ وَصَدَقَ ٱلْمُرْسَلُونَ

Kannada Translation - Hamza Buturಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಮ್ಮನ್ನು ನಿದ್ದೆಯಿಂದ ಎಬ್ಬಿಸಿದ್ದು ಯಾರು?” (ಆಗ ಅವರಿಗೆ ಉತ್ತರ ನೀಡಲಾಗುವುದು): “ಇದು ಪರಮ ದಯಾಳು (ಅಲ್ಲಾಹು) ಮಾಡಿದ ವಾಗ್ದಾನವಾಗಿದೆ ಮತ್ತು ಸಂದೇಶವಾಹಕರುಗಳು ಈ ಸತ್ಯವನ್ನು ನಿಮಗೆ ತಿಳಿಸಿದ್ದರು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِن كَانَتْ إِلَّا صَيْحَةً وَٰحِدَةً فَإِذَا هُمْ جَمِيعٌ لَّدَيْنَا مُحْضَرُونَ

Kannada Translation - Hamza Buturಅದು ಕೇವಲ ಒಂದು ಚೀತ್ಕಾರ ಮಾತ್ರವಾಗಿರುತ್ತದೆ. ಆಗ ಅಗೋ! ಅವರೆಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْيَوْمَ لَا تُظْلَمُ نَفْسٌ شَيْـًٔا وَلَا تُجْزَوْنَ إِلَّا مَا كُنتُمْ تَعْمَلُونَ

Kannada Translation - Hamza Buturಆ ದಿನ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ أَصْحَٰبَ ٱلْجَنَّةِ ٱلْيَوْمَ فِى شُغُلٍ فَٰكِهُونَ

Kannada Translation - Hamza Buturನಿಶ್ಚಯವಾಗಿಯೂ ಅಂದು ಸ್ವರ್ಗವಾಸಿಗಳು (ಆನಂದದಾಯಕ) ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هُمْ وَأَزْوَٰجُهُمْ فِى ظِلَٰلٍ عَلَى ٱلْأَرَآئِكِ مُتَّكِـُٔونَ

Kannada Translation - Hamza Buturಅವರು ಮತ್ತು ಅವರ ಮಡದಿಯರು ನೆರಳುಗಳಲ್ಲಿ ಮಂಚಗಳ ಮೇಲೆ ಒರಗಿ ಕುಳಿತಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَهُمْ فِيهَا فَٰكِهَةٌ وَلَهُم مَّا يَدَّعُونَ

Kannada Translation - Hamza Buturಅಲ್ಲಿ ಅವರಿಗೆ ಅನೇಕ ತರಹದ ಹಣ್ಣು-ಹಂಪಲುಗಳಿರುವುವು. ಅವರು ಕೇಳುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَلَٰمٌ قَوْلًا مِّن رَّبٍّ رَّحِيمٍ

Kannada Translation - Hamza Buturಕರುಣಾನಿಧಿಯಾದ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವರಿಗೆ ಸಲಾಂ ಹೇಳಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱمْتَٰزُوا۟ ٱلْيَوْمَ أَيُّهَا ٱلْمُجْرِمُونَ

Kannada Translation - Hamza Butur“ಅಪರಾಧಿಗಳೇ! ಇಂದು ನೀವು ಬೇರ್ಪಟ್ಟು ನಿಲ್ಲಿರಿ” (ಎಂದು ಘೋಷಿಸಲಾಗುವುದು).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ أَعْهَدْ إِلَيْكُمْ يَٰبَنِىٓ ءَادَمَ أَن لَّا تَعْبُدُوا۟ ٱلشَّيْطَٰنَ إِنَّهُۥ لَكُمْ عَدُوٌّ مُّبِينٌ

Kannada Translation - Hamza Buturಓ ಆದಮ್ ಸಂತತಿಗಳೇ! ನೀವು ಶೈತಾನನನ್ನು ಆರಾಧಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಸ್ಪಷ್ಟ ವೈರಿಯಾಗಿದ್ದಾನೆ ಎಂದು ನಾನು ನಿಮಗೆ ಆದೇಶಿಸಿರಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَنِ ٱعْبُدُونِى هَٰذَا صِرَٰطٌ مُّسْتَقِيمٌ

Kannada Translation - Hamza Buturನನ್ನನ್ನು ಮಾತ್ರ ಆರಾಧಿಸಿರಿ. ಇದೇ ನೇರ ಮಾರ್ಗ ಎಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ أَضَلَّ مِنكُمْ جِبِلًّا كَثِيرًا أَفَلَمْ تَكُونُوا۟ تَعْقِلُونَ

Kannada Translation - Hamza Buturನಿಶ್ಚಯವಾಗಿಯೂ ನಿಮ್ಮಲ್ಲಿ ಸೇರಿದ ಎಷ್ಟೋ ಜನರನ್ನು ಅವನು ದಾರಿತಪ್ಪಿಸಿದ್ದಾನೆ. ಆದರೂ ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَٰذِهِۦ جَهَنَّمُ ٱلَّتِى كُنتُمْ تُوعَدُونَ

Kannada Translation - Hamza Buturಇದೇ ನಿಮಗೆ ಎಚ್ಚರಿಕೆ ನೀಡಲಾದ ಆ ನರಕಾಗ್ನಿ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱصْلَوْهَا ٱلْيَوْمَ بِمَا كُنتُمْ تَكْفُرُونَ

Kannada Translation - Hamza Buturನಿಮ್ಮ ಸತ್ಯನಿಷೇಧದ ಪ್ರತಿಫಲ ಪಡೆಯಲು ನೀವು ಇಂದು ಅದನ್ನು ಪ್ರವೇಶಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلْيَوْمَ نَخْتِمُ عَلَىٰٓ أَفْوَٰهِهِمْ وَتُكَلِّمُنَآ أَيْدِيهِمْ وَتَشْهَدُ أَرْجُلُهُم بِمَا كَانُوا۟ يَكْسِبُونَ

Kannada Translation - Hamza Buturಇಂದು ನಾವು ಅವರ ಬಾಯಿಗಳಿಗೆ ಮೊಹರು ಹಾಕುವೆವು, ಅವರ ಕೈಗಳು ನಮ್ಮೊಡನೆ ಮಾತನಾಡುವುವು ಮತ್ತು ಅವರ ಕಾಲುಗಳು ಅವರು ಮಾಡಿದ ದುಷ್ಕರ್ಮಗಳಿಗೆ ಸಾಕ್ಷಿ ಹೇಳುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ نَشَآءُ لَطَمَسْنَا عَلَىٰٓ أَعْيُنِهِمْ فَٱسْتَبَقُوا۟ ٱلصِّرَٰطَ فَأَنَّىٰ يُبْصِرُونَ

Kannada Translation - Hamza Buturನಾವು ಬಯಸಿದರೆ ಅವರ ಕಣ್ಣುಗಳನ್ನು ಕುರುಡಾಗಿಸುವೆವು. ಆದರೂ ಅವರು ಮಾರ್ಗದ ಕಡೆಗೆ ಧಾವಿಸುವರು. ಆದರೆ ಅವರಿಗೆ ನೋಡಲು ಸಾಧ್ಯವಾಗುವುದು ಹೇಗೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ نَشَآءُ لَمَسَخْنَٰهُمْ عَلَىٰ مَكَانَتِهِمْ فَمَا ٱسْتَطَٰعُوا۟ مُضِيًّا وَلَا يَرْجِعُونَ

Kannada Translation - Hamza Buturನಾವು ಬಯಸಿದರೆ ಅವರು ನಿಂತ ಸ್ಥಳದಲ್ಲಿಯೇ ಅವರ ರೂಪವನ್ನು ವಿರೂಪಗೊಳಿಸುವೆವು. ಆಗ ಅವರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಿಂದಕ್ಕೆ ಮರಳಲೂ ಸಾಧ್ಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَن نُّعَمِّرْهُ نُنَكِّسْهُ فِى ٱلْخَلْقِ أَفَلَا يَعْقِلُونَ

Kannada Translation - Hamza Buturನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೆಯೋ ಅವನ ಸೃಷ್ಟಿಯನ್ನು ನಾವು ತಿರುಗುಮುರುಗು ಮಾಡುತ್ತೇವೆ. ಆದರೂ ಅವರು ಅರ್ಥಮಾಡಿಕೊಳ್ಳುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا عَلَّمْنَٰهُ ٱلشِّعْرَ وَمَا يَنۢبَغِى لَهُۥٓ إِنْ هُوَ إِلَّا ذِكْرٌ وَقُرْءَانٌ مُّبِينٌ

Kannada Translation - Hamza Buturನಾವು ಅವರಿಗೆ (ಪ್ರವಾದಿಗೆ) ಕಾವ್ಯವನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶ ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِّيُنذِرَ مَن كَانَ حَيًّا وَيَحِقَّ ٱلْقَوْلُ عَلَى ٱلْكَٰفِرِينَ

Kannada Translation - Hamza Buturಇದು ಜೀವಂತವಿರುವವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಖಾತ್ರಿಯಾಗುವುದಕ್ಕಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَمْ يَرَوْا۟ أَنَّا خَلَقْنَا لَهُم مِّمَّا عَمِلَتْ أَيْدِينَآ أَنْعَٰمًا فَهُمْ لَهَا مَٰلِكُونَ

Kannada Translation - Hamza Buturನಮ್ಮ ಕೈಗಳು ನಿರ್ಮಿಸಿದ ವಸ್ತುಗಳಲ್ಲಿ ಸೇರಿದ ಜಾನುವಾರುಗಳನ್ನು ನಾವು ಅವರಿಗೋಸ್ಕರ ಸೃಷ್ಟಿಸಿದ್ದೇವೆಂದು ಅವರು ನೋಡಿಲ್ಲವೇ? ಅವರು ಅವುಗಳ ಮಾಲಿಕರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَذَلَّلْنَٰهَا لَهُمْ فَمِنْهَا رَكُوبُهُمْ وَمِنْهَا يَأْكُلُونَ

Kannada Translation - Hamza Buturನಾವು ಅವುಗಳನ್ನು ಅವರಿಗೆ ಪಳಗಿಸಿಕೊಟ್ಟಿದ್ದೇವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ಅವರ ಸವಾರಿ ಮಾಡುತ್ತಾರೆ ಮತ್ತು ಕೆಲವು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَهُمْ فِيهَا مَنَٰفِعُ وَمَشَارِبُ أَفَلَا يَشْكُرُونَ

Kannada Translation - Hamza Buturಅವುಗಳಲ್ಲಿ ಅವರಿಗೆ ಅನೇಕ ಪ್ರಯೋಜನಗಳಿವೆ; ಪಾನೀಯವೂ ಇದೆ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱتَّخَذُوا۟ مِن دُونِ ٱللَّهِ ءَالِهَةً لَّعَلَّهُمْ يُنصَرُونَ

Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆ ದೇವರುಗಳು ಅವರಿಗೆ ಸಹಾಯ ಮಾಡುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يَسْتَطِيعُونَ نَصْرَهُمْ وَهُمْ لَهُمْ جُندٌ مُّحْضَرُونَ

Kannada Translation - Hamza Buturಆದರೆ ಅವರಿಗೆ ಸಹಾಯ ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. (ಆದರೂ) ಅವರು ಆ ದೇವರುಗಳಿಗಿರುವ ಸನ್ನದ್ಧ ಸೈನ್ಯವಾಗಿ ಬಿಟ್ಟಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَا يَحْزُنكَ قَوْلُهُمْ إِنَّا نَعْلَمُ مَا يُسِرُّونَ وَمَا يُعْلِنُونَ

Kannada Translation - Hamza Buturಆದ್ದರಿಂದ ಅವರು ಹೇಳುವ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾವು ಖಂಡಿತ ತಿಳಿಯುತ್ತೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَمْ يَرَ ٱلْإِنسَٰنُ أَنَّا خَلَقْنَٰهُ مِن نُّطْفَةٍ فَإِذَا هُوَ خَصِيمٌ مُّبِينٌ

Kannada Translation - Hamza Buturಮನುಷ್ಯನು ನೋಡಿಲ್ಲವೇ? ನಾವು ಅವನನ್ನು ಒಂದು ವೀರ್ಯದಿಂದ ಸೃಷ್ಟಿಸಿದ್ದೇವೆಂದು? ನಂತರ ಇದ್ದಕ್ಕಿದ್ದಂತೆ ಅವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَضَرَبَ لَنَا مَثَلًا وَنَسِىَ خَلْقَهُۥ قَالَ مَن يُحْىِ ٱلْعِظَٰمَ وَهِىَ رَمِيمٌ

Kannada Translation - Hamza Buturಅವನು ನಮಗೆ ಒಂದು ಉದಾಹರಣೆಯನ್ನು ತಿಳಿಸುತ್ತಾನೆ. ಆದರೆ ಸ್ವತಃ ತನ್ನ ಸೃಷ್ಟಿಯನ್ನೇ ಅವನು ಮರೆತು ಬಿಟ್ಟಿದ್ದಾನೆ. ಅವನು ಕೇಳುತ್ತಾನೆ: “ಕೊಳೆತ ಮೂಳೆಗಳಿಗೆ ಜೀವ ನೀಡುವುದು ಯಾರು?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ يُحْيِيهَا ٱلَّذِىٓ أَنشَأَهَآ أَوَّلَ مَرَّةٍ وَهُوَ بِكُلِّ خَلْقٍ عَلِيمٌ

Kannada Translation - Hamza Buturಹೇಳಿರಿ: “ಅದನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುತ್ತಾನೆ. ಅವನು ಎಲ್ಲಾ ಸೃಷ್ಟಿಗಳ ಬಗ್ಗೆ ಸ್ಪಷ್ಟ ಜ್ಞಾನವುಳ್ಳವನಾಗಿದ್ದಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى جَعَلَ لَكُم مِّنَ ٱلشَّجَرِ ٱلْأَخْضَرِ نَارًا فَإِذَآ أَنتُم مِّنْهُ تُوقِدُونَ

Kannada Translation - Hamza Buturಅವನು ಯಾರೆಂದರೆ, ನಿಮಗೆ ಹಸಿರು ಮರದಿಂದ ಬೆಂಕಿಯನ್ನು ನಿರ್ಮಿಸಿ ಕೊಟ್ಟವನು. ಆಗ ಅಗೋ! ನೀವು ಅದರಿಂದ ಬೆಂಕಿ ಉರಿಸುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَيْسَ ٱلَّذِى خَلَقَ ٱلسَّمَٰوَٰتِ وَٱلْأَرْضَ بِقَٰدِرٍ عَلَىٰٓ أَن يَخْلُقَ مِثْلَهُم بَلَىٰ وَهُوَ ٱلْخَلَّٰقُ ٱلْعَلِيمُ

Kannada Translation - Hamza Buturಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ ಅವರಂತಿರುವ ಮನುಷ್ಯರನ್ನು ಸೃಷ್ಟಿಸುವ ಸಾಮರ್ಥ್ಯವಿಲ್ಲವೇ? ಹೌದು (ಖಂಡಿತ ಸಾಮರ್ಥ್ಯವಿದೆ)! ಅವನು ಎಲ್ಲವನ್ನು ಸೃಷ್ಟಿಸುವವನು ಮತ್ತು ಸರ್ವಜ್ಞನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّمَآ أَمْرُهُۥٓ إِذَآ أَرَادَ شَيْـًٔا أَن يَقُولَ لَهُۥ كُن فَيَكُونُ

Kannada Translation - Hamza Buturಅವನು ಯಾವುದೇ ವಸ್ತುವನ್ನು ಬಯಸಿದರೆ, ಅದಕ್ಕೆ “ಉಂಟಾಗು” ಎಂಬ ಆಜ್ಞೆಯನ್ನು ಮಾತ್ರ ನೀಡುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَسُبْحَٰنَ ٱلَّذِى بِيَدِهِۦ مَلَكُوتُ كُلِّ شَىْءٍ وَإِلَيْهِ تُرْجَعُونَ

Kannada Translation - Hamza Buturಎಲ್ಲ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಪರಮ ಪರಿಶುದ್ಧನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70