ಮುಖಪುಟ › ಸೂರಗಳು › ಸೂರ Saad
ಸೂರ Saad ص
88 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 38
بِسْمِ ٱللَّهِ ٱلرَّحْمَٰنِ ٱلرَّحِيمِ صٓ وَٱلْقُرْءَانِ ذِى ٱلذِّكْرِ
Kannada Translation - Hamza Butur ಸ್ವಾದ್. ಉಪದೇಶವನ್ನು ಒಳಗೊಂಡಿರುವ ಕುರ್‌ಆನ್‍ನ ಮೇಲಾಣೆ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
بَلِ ٱلَّذِينَ كَفَرُوا۟ فِى عِزَّةٍ وَشِقَاقٍ
Kannada Translation - Hamza Butur ಆದರೆ ಸತ್ಯನಿಷೇಧಿಗಳು ದುರಭಿಮಾನ ಮತ್ತು ವಿರೋಧದಲ್ಲಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَمْ أَهْلَكْنَا مِن قَبْلِهِم مِّن قَرْنٍ فَنَادَوا۟ وَّلَاتَ حِينَ مَنَاصٍ
Kannada Translation - Hamza Butur ನಾವು ಅವರಿಗಿಂತ ಮುಂಚೆ ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಆಗ ಅವರು ಎಲ್ಲಾ ರೀತಿಯಲ್ಲೂ ಚೀತ್ಕರಿಸಿದರು. ಆದರೆ ಅದು ಪಾರಾಗುವ ಸಮಯವಾಗಿರಲಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَعَجِبُوٓا۟ أَن جَآءَهُم مُّنذِرٌ مِّنْهُمْ وَقَالَ ٱلْكَٰفِرُونَ هَٰذَا سَٰحِرٌ كَذَّابٌ
Kannada Translation - Hamza Butur ಅವರಿಂದಲೇ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಟ್ಟರು. ಸತ್ಯನಿಷೇಧಿಗಳು ಹೇಳಿದರು: “ಇವನೊಬ್ಬ ಮಾಟಗಾರ ಮತ್ತು ಸುಳ್ಳುಗಾರ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَجَعَلَ ٱلْـَٔالِهَةَ إِلَٰهًا وَٰحِدًا إِنَّ هَٰذَا لَشَىْءٌ عُجَابٌ
Kannada Translation - Hamza Butur ಇವನು ಇಷ್ಟೊಂದು ದೇವರುಗಳನ್ನು ಏಕೈಕ ದೇವರಾಗಿ ಮಾಡಿದನೇ? ನಿಜಕ್ಕೂ ಇದೊಂದು ಅಚ್ಚರಿದಾಯಕ ವಿಷಯವಾಗಿದೆ!”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱنطَلَقَ ٱلْمَلَأُ مِنْهُمْ أَنِ ٱمْشُوا۟ وَٱصْبِرُوا۟ عَلَىٰٓ ءَالِهَتِكُمْ إِنَّ هَٰذَا لَشَىْءٌ يُرَادُ
Kannada Translation - Hamza Butur ಅವರಲ್ಲಿನ ಸರದಾರರು ಹೇಳುತ್ತಾ ಸಾಗಿದರು: “ನಿಮ್ಮ ಧರ್ಮದಲ್ಲೇ ಮುಂದುವರಿಯಿರಿ ಮತ್ತು ನಿಮ್ಮ ದೇವರುಗಳ ವಿಷಯದಲ್ಲಿ ತಾಳ್ಮೆಯಿಂದಿರಿ. ಖಂಡಿತವಾಗಿಯೂ ಇದೊಂದು ಉದ್ದೇಶಪೂರ್ವಕ ಸಂಗತಿಯಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا سَمِعْنَا بِهَٰذَا فِى ٱلْمِلَّةِ ٱلْـَٔاخِرَةِ إِنْ هَٰذَآ إِلَّا ٱخْتِلَٰقٌ
Kannada Translation - Hamza Butur ನಾವು ಕೊನೆಯ ಧರ್ಮದಲ್ಲಿಯೂ[1] ಇದರ ಬಗ್ಗೆ ಕೇಳಿಲ್ಲ. ಇದೊಂದು ಸುಳ್ಳು ಸೃಷ್ಟಿಯಲ್ಲದೆ ಇನ್ನೇನೂ ಅಲ್ಲ!”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَءُنزِلَ عَلَيْهِ ٱلذِّكْرُ مِنۢ بَيْنِنَا بَلْ هُمْ فِى شَكٍّ مِّن ذِكْرِى بَل لَّمَّا يَذُوقُوا۟ عَذَابِ
Kannada Translation - Hamza Butur (ಅವರು ಹೇಳಿದರು): “ನಮ್ಮೆಲ್ಲರ ನಡುವೆ ಅವನಿಗೆ ಮಾತ್ರ ದೇವವಾಣಿಯನ್ನು ಅವತೀರ್ಣಗೊಳಿಸಲಾಗಿದೆಯೇ?” ಅಲ್ಲ, ವಾಸ್ತವವಾಗಿ ಅವರು ನನ್ನ ದೇವವಾಣಿಯ ಬಗ್ಗೆ ಸಂಶಯದಲ್ಲಿದ್ದಾರೆ. ಅಲ್ಲ, ವಾಸ್ತವವಾಗಿ ಅವರು ಈ ತನಕ ನನ್ನ ಶಿಕ್ಷೆಯ ರುಚಿಯನ್ನು ನೋಡಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ عِندَهُمْ خَزَآئِنُ رَحْمَةِ رَبِّكَ ٱلْعَزِيزِ ٱلْوَهَّابِ
Kannada Translation - Hamza Butur ಅವರ ಬಳಿ ಪ್ರಬಲನು ಮತ್ತು ಮಹಾ ಔದಾರ್ಯವಂತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯ ಖಜಾನೆಗಳಿವೆಯೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ لَهُم مُّلْكُ ٱلسَّمَٰوَٰتِ وَٱلْأَرْضِ وَمَا بَيْنَهُمَا فَلْيَرْتَقُوا۟ فِى ٱلْأَسْبَٰبِ
Kannada Translation - Hamza Butur ಅಥವಾ ಭೂಮ್ಯಾಕಾಶಗಳು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಸಾರ್ವಭೌಮತ್ವವು ಅವರಿಗೆ ಸೇರಿದೆಯೇ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಲೋಕಕ್ಕೆ) ಏರಿ ಹೋಗಲಿ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
جُندٌ مَّا هُنَالِكَ مَهْزُومٌ مِّنَ ٱلْأَحْزَابِ
Kannada Translation - Hamza Butur ಇವರು (ದೊಡ್ಡ ದೊಡ್ಡ) ಸೈನ್ಯಗಳ ಪೈಕಿ ಸೋತು ಸುಣ್ಣವಾಗುವ ಒಂದು (ಚಿಕ್ಕ) ಸೈನ್ಯವಾಗಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كَذَّبَتْ قَبْلَهُمْ قَوْمُ نُوحٍ وَعَادٌ وَفِرْعَوْنُ ذُو ٱلْأَوْتَادِ
Kannada Translation - Hamza Butur ಅವರಿಗಿಂತ ಮೊದಲು ನೂಹರ ಜನರು, ಆದ್ ಗೋತ್ರದವರು ಮತ್ತು ಗೂಟಗಳ ಒಡೆಯನಾದ ಫರೋಹ[1] ಸತ್ಯವನ್ನು ನಿಷೇಧಿಸಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَثَمُودُ وَقَوْمُ لُوطٍ وَأَصْحَٰبُ لْـَٔيْكَةِ أُو۟لَٰٓئِكَ ٱلْأَحْزَابُ
Kannada Translation - Hamza Butur ಸಮೂದ್ ಗೋತ್ರ, ಲೂತರ ಜನರು ಮತ್ತು ಐಕತ್‌ನ ಜನರು ಕೂಡ (ಸತ್ಯವನ್ನು ನಿಷೇಧಿಸಿದ್ದರು). ಇವು (ದೊಡ್ಡ ದೊಡ್ಡ) ಸೈನ್ಯಗಳಾಗಿದ್ದವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِن كُلٌّ إِلَّا كَذَّبَ ٱلرُّسُلَ فَحَقَّ عِقَابِ
Kannada Translation - Hamza Butur ಇವರಲ್ಲಿ ಸಂದೇಶವಾಹಕರುಗಳನ್ನು ನಿಷೇಧಿಸದವರು ಯಾರೂ ಇರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯು (ಅವರ ವಿಷಯದಲ್ಲಿ) ಖಾತ್ರಿಯಾಯಿತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا يَنظُرُ هَٰٓؤُلَآءِ إِلَّا صَيْحَةً وَٰحِدَةً مَّا لَهَا مِن فَوَاقٍ
Kannada Translation - Hamza Butur ಇವರು ಒಂದು ಭಯಾನಕ ಚೀತ್ಕಾರವನ್ನಲ್ಲದೆ ಬೇರೇನನ್ನೂ ಕಾಯುವುದಿಲ್ಲ. ಅದರಲ್ಲಿ ಯಾವುದೇ ವಿರಾಮ (ಅಥವಾ ಕಾಲಾವಕಾಶ) ಇರುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَالُوا۟ رَبَّنَا عَجِّل لَّنَا قِطَّنَا قَبْلَ يَوْمِ ٱلْحِسَابِ
Kannada Translation - Hamza Butur ಅವರು ಹೇಳುವರು: “ನಮ್ಮ ಪರಿಪಾಲಕನೇ! ವಿಚಾರಣೆಯ ದಿನಕ್ಕಿಂತ ಮೊದಲೇ ನಮ್ಮ ವಿಧಿಬರಹವನ್ನು ನಮಗೆ ನೀಡು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱصْبِرْ عَلَىٰ مَا يَقُولُونَ وَٱذْكُرْ عَبْدَنَا دَاوُۥدَ ذَا ٱلْأَيْدِ إِنَّهُۥٓ أَوَّابٌ
Kannada Translation - Hamza Butur ಅವರು ಹೇಳುತ್ತಿರುವ ಮಾತುಗಳ ಬಗ್ಗೆ ನೀವು ತಾಳ್ಮೆಯಿಂದಿರಿ. ನಮ್ಮ ಬಲಿಷ್ಠ ದಾಸರಾಗಿದ್ದ ದಾವೂದರನ್ನು ಸ್ಮರಿಸಿ. ನಿಶ್ಚಯವಾಗಿಯೂ ಅವರು ಅತಿಹೆಚ್ಚು ಪಶ್ಚಾತ್ತಾಪಪಡುತ್ತಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّا سَخَّرْنَا ٱلْجِبَالَ مَعَهُۥ يُسَبِّحْنَ بِٱلْعَشِىِّ وَٱلْإِشْرَاقِ
Kannada Translation - Hamza Butur ನಾವು ಪರ್ವತಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಅವು ಸಂಜೆ ಮತ್ತು ಮುಂಜಾನೆ ಅವರ ಜೊತೆಗೆ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿದ್ದವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلطَّيْرَ مَحْشُورَةً كُلٌّ لَّهُۥٓ أَوَّابٌ
Kannada Translation - Hamza Butur ಹಕ್ಕಿಗಳನ್ನು ಕೂಡ ಒಟ್ಟುಗೂಡಿಸಲಾಗಿತ್ತು. ಎಲ್ಲವೂ ಅವರ ಆಜ್ಞೆಗೆ ವಿಧೇಯವಾಗಿದ್ದವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَشَدَدْنَا مُلْكَهُۥ وَءَاتَيْنَٰهُ ٱلْحِكْمَةَ وَفَصْلَ ٱلْخِطَابِ
Kannada Translation - Hamza Butur ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದೆವು ಮತ್ತು ಅವರಿಗೆ ವಿವೇಕವನ್ನು ಹಾಗೂ ತೀರ್ಪು ನೀಡುವ ಮಾತುಗಾರಿಕೆಯನ್ನು ನೀಡಿದ್ದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَهَلْ أَتَىٰكَ نَبَؤُا۟ ٱلْخَصْمِ إِذْ تَسَوَّرُوا۟ ٱلْمِحْرَابَ
Kannada Translation - Hamza Butur ಜಗಳವಾಡುವವರ ಸಮಾಚಾರವು ನಿಮಗೆ ತಲುಪಿದೆಯೇ? ಅವರು ಪ್ರಾರ್ಥನಾ ಪೀಠದ ಗೋಡೆಯನ್ನು ಏರಿ ಬಂದ ಸಂದರ್ಭ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ دَخَلُوا۟ عَلَىٰ دَاوُۥدَ فَفَزِعَ مِنْهُمْ قَالُوا۟ لَا تَخَفْ خَصْمَانِ بَغَىٰ بَعْضُنَا عَلَىٰ بَعْضٍ فَٱحْكُم بَيْنَنَا بِٱلْحَقِّ وَلَا تُشْطِطْ وَٱهْدِنَآ إِلَىٰ سَوَآءِ ٱلصِّرَٰطِ
Kannada Translation - Hamza Butur ಅವರು ದಾವೂದರ ಬಳಿಗೆ ತಲುಪಿದರು. ದಾವೂದ್ ಅವರನ್ನು ಕಂಡು ಗಾಬರಿಯಾದರು. ಅವರು ಹೇಳಿದರು: “ಭಯಪಡಬೇಡಿ. ನಾವು ಎದುರಾಳಿಗಳಾಗಿದ್ದೇವೆ. ನಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನೀವು ನಮ್ಮ ನಡುವೆ ನ್ಯಾಯಬದ್ಧವಾದ ತೀರ್ಪನ್ನು ನೀಡಿರಿ. ಅನ್ಯಾಯವೆಸಗಬೇಡಿ. ನಮಗೆ ನೇರ ಮಾರ್ಗವನ್ನು ತೋರಿಸಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذَآ أَخِى لَهُۥ تِسْعٌ وَتِسْعُونَ نَعْجَةً وَلِىَ نَعْجَةٌ وَٰحِدَةٌ فَقَالَ أَكْفِلْنِيهَا وَعَزَّنِى فِى ٱلْخِطَابِ
Kannada Translation - Hamza Butur ಇವನು ನನ್ನ ಸಹೋದರ. ಇವನಿಗೆ ತೊಂಬತ್ತೊಂಬತ್ತು ಹೆಣ್ಣುಕುರಿಗಳಿವೆ. ನನಗಿರುವುದು ಒಂದು ಹೆಣ್ಣುಕುರಿ. ಆದರೆ ಅವನು, “ಅದನ್ನು ಕೂಡ ನನಗೆ ಕೊಟ್ಟು ಬಿಡು” ಎನ್ನುತ್ತಿದ್ದಾನೆ. ಅವನು ಮಾತಿನಲ್ಲಿ ನನ್ನನ್ನು ಸೋಲಿಸಿಬಿಟ್ಟನು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ لَقَدْ ظَلَمَكَ بِسُؤَالِ نَعْجَتِكَ إِلَىٰ نِعَاجِهِۦ وَإِنَّ كَثِيرًا مِّنَ ٱلْخُلَطَآءِ لَيَبْغِى بَعْضُهُمْ عَلَىٰ بَعْضٍ إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَقَلِيلٌ مَّا هُمْ وَظَنَّ دَاوُۥدُ أَنَّمَا فَتَنَّٰهُ فَٱسْتَغْفَرَ رَبَّهُۥ وَخَرَّ رَاكِعًا وَأَنَابَ
Kannada Translation - Hamza Butur ಅವರು (ದಾವೂದ್) ಹೇಳಿದರು: “ಅವನ ಹೆಣ್ಣುಕುರಿಗಳ ಜೊತೆಗೆ ನಿನ್ನ ಹೆಣ್ಣುಕುರಿಯನ್ನು ಸೇರಿಸಬೇಕೆಂದು ಬೇಡುವ ಮೂಲಕ ಅವನು ನಿನ್ನೊಡನೆ ಖಂಡಿತ ಅಕ್ರಮವೆಸಗಿದ್ದಾನೆ. ನಿಶ್ಚಯವಾಗಿಯೂ ಪಾಲುದಾರರಲ್ಲಿ ಹೆಚ್ಚಿನವರೂ (ಹೀಗೆಯೇ) ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗುವವರು ಇದಕ್ಕೆ ಹೊರತಾಗಿದ್ದಾರೆ. ಆದರೆ ಅವರು ಬಹಳ ಕಡಿಮೆ ಜನರು ಮಾತ್ರ.” ನಾವು ಅವರನ್ನು ಪರೀಕ್ಷಿಸಿದ್ದೆಂದು ದಾವೂದರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿದರು ಮತ್ತು ಸಾಷ್ಟಾಂಗವೆರಗಿ ಪಶ್ಚಾತ್ತಾಪಪಟ್ಟರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَغَفَرْنَا لَهُۥ ذَٰلِكَ وَإِنَّ لَهُۥ عِندَنَا لَزُلْفَىٰ وَحُسْنَ مَـَٔابٍ
Kannada Translation - Hamza Butur ಆಗ ನಾವು ಅವರನ್ನು ಕ್ಷಮಿಸಿದೆವು. ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವಿದೆ ಮತ್ತು ಅತ್ಯುತ್ತಮವಾದ ಠಿಕಾಣಿಯಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
يَٰدَاوُۥدُ إِنَّا جَعَلْنَٰكَ خَلِيفَةً فِى ٱلْأَرْضِ فَٱحْكُم بَيْنَ ٱلنَّاسِ بِٱلْحَقِّ وَلَا تَتَّبِعِ ٱلْهَوَىٰ فَيُضِلَّكَ عَن سَبِيلِ ٱللَّهِ إِنَّ ٱلَّذِينَ يَضِلُّونَ عَن سَبِيلِ ٱللَّهِ لَهُمْ عَذَابٌ شَدِيدٌۢ بِمَا نَسُوا۟ يَوْمَ ٱلْحِسَابِ
Kannada Translation - Hamza Butur “ಓ ದಾವೂದ್! ನಿಶ್ಚಯವಾಗಿಯೂ ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದ್ದರಿಂದ ನೀವು ಜನರ ಮಧ್ಯೆ ನ್ಯಾಯಯುತವಾಗಿ ತೀರ್ಪು ನೀಡಿರಿ. ನೀವು ಸ್ವೇಚ್ಛೆಯನ್ನು ಹಿಂಬಾಲಿಸಬೇಡಿ. ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುತ್ತದೆ. ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿಹೋಗುತ್ತಾರೋ ಅವರು ವಿಚಾರಣಾ ದಿನವನ್ನು ಮರೆತ ಕಾರಣ ಅವರಿಗೆ ನಿಶ್ಚಯವಾಗಿಯೂ ಕಠಿಣವಾದ ಶಿಕ್ಷೆಯಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَمَا خَلَقْنَا ٱلسَّمَآءَ وَٱلْأَرْضَ وَمَا بَيْنَهُمَا بَٰطِلًا ذَٰلِكَ ظَنُّ ٱلَّذِينَ كَفَرُوا۟ فَوَيْلٌ لِّلَّذِينَ كَفَرُوا۟ مِنَ ٱلنَّارِ
Kannada Translation - Hamza Butur ನಾವು ಆಕಾಶ, ಭೂಮಿ ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಸತ್ಯನಿಷೇಧಿಗಳ ಊಹೆಯಾಗಿದೆ. ಸತ್ಯನಿಷೇಧಿಗಳಿಗೆ ನರಕ ಶಿಕ್ಷೆಯ ವಿನಾಶ ಕಾದಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَمْ نَجْعَلُ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ كَٱلْمُفْسِدِينَ فِى ٱلْأَرْضِ أَمْ نَجْعَلُ ٱلْمُتَّقِينَ كَٱلْفُجَّارِ
Kannada Translation - Hamza Butur ನಾವು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ಭೂಮಿಯಲ್ಲಿ ನಿರಂತರ ಕಿಡಿಗೇಡಿತನ ಹರಡುವವರಂತೆ ಮಾಡುವೆವೇ? ಅಥವಾ ನಾವು ದೇವಭಯವುಳ್ಳವರನ್ನು ದುಷ್ಕರ್ಮಿಗಳಂತೆ ಮಾಡುವೆವೇ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
كِتَٰبٌ أَنزَلْنَٰهُ إِلَيْكَ مُبَٰرَكٌ لِّيَدَّبَّرُوٓا۟ ءَايَٰتِهِۦ وَلِيَتَذَكَّرَ أُو۟لُوا۟ ٱلْأَلْبَٰبِ
Kannada Translation - Hamza Butur ಇದು ನಾವು ನಿಮಗೆ ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಇದರಲ್ಲಿರುವ ವಚನಗಳ ಬಗ್ಗೆ ಅವರು ಆಲೋಚಿಸುವುದಕ್ಕಾಗಿ ಮತ್ತು ಬುದ್ಧಿವಂತರು ಉಪದೇಶ ಪಡೆಯುವುದಕ್ಕಾಗಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَوَهَبْنَا لِدَاوُۥدَ سُلَيْمَٰنَ نِعْمَ ٱلْعَبْدُ إِنَّهُۥٓ أَوَّابٌ
Kannada Translation - Hamza Butur ನಾವು ದಾವೂದರಿಗೆ ಸುಲೈಮಾನರನ್ನು ದಯಪಾಲಿಸಿದೆವು. ಅತ್ಯುತ್ತಮ ದಾಸ! ಅವರು ಅತ್ಯಧಿಕ ಪಶ್ಚಾತ್ತಾಪಪಡುವವರಾಗಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ عُرِضَ عَلَيْهِ بِٱلْعَشِىِّ ٱلصَّٰفِنَٰتُ ٱلْجِيَادُ
Kannada Translation - Hamza Butur ಸಂಜೆ ಅವರ ಮುಂದೆ ವೇಗವಾಗಿ ಓಡುವ ವಿಶಿಷ್ಟ ಕುದುರೆಗಳನ್ನು ಹಾಜರುಪಡಿಸಿದ ಸಂದರ್ಭ!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَقَالَ إِنِّىٓ أَحْبَبْتُ حُبَّ ٱلْخَيْرِ عَن ذِكْرِ رَبِّى حَتَّىٰ تَوَارَتْ بِٱلْحِجَابِ
Kannada Translation - Hamza Butur ಅವರು ಹೇಳಿದರು: “ನಾನು ನನ್ನ ಪರಿಪಾಲಕನ (ಅಲ್ಲಾಹನ) ಸ್ಮರಣೆಗಿಂತಲೂ ಈ ಕುದುರೆಗಳಿಗೆ ಪ್ರಾಶಸ್ತ್ಯ ನೀಡಿದೆನು; ಎಲ್ಲಿಯವರೆಗೆಂದರೆ ಸೂರ್ಯ ಮುಳುಗುವ ತನಕ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رُدُّوهَا عَلَىَّ فَطَفِقَ مَسْحًۢا بِٱلسُّوقِ وَٱلْأَعْنَاقِ
Kannada Translation - Hamza Butur (ಅವರು ಹೇಳಿದರು): “ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿ.” ನಂತರ ಅವರು (ಅವುಗಳ) ಕಣಕಾಲು ಮತ್ತು ಕತ್ತುಗಳನ್ನು ಸವರಲು ಆರಂಭಿಸಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَقَدْ فَتَنَّا سُلَيْمَٰنَ وَأَلْقَيْنَا عَلَىٰ كُرْسِيِّهِۦ جَسَدًا ثُمَّ أَنَابَ
Kannada Translation - Hamza Butur ನಾವು ಸುಲೈಮಾನರನ್ನು ಪರೀಕ್ಷಿಸಿದೆವು. ನಾವು ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ನಂತರ ಅವರು ವಿನಮ್ರತೆಯಿಂದ ಮರಳಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّ ٱغْفِرْ لِى وَهَبْ لِى مُلْكًا لَّا يَنۢبَغِى لِأَحَدٍ مِّنۢ بَعْدِىٓ إِنَّكَ أَنتَ ٱلْوَهَّابُ
Kannada Translation - Hamza Butur ಅವರು ಹೇಳಿದರು: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನ್ನ ಬಳಿಕ ಯಾರಿಗೂ ಹೊಂದಿಕೆಯಾಗದಂತಹ ಒಂದು ಸಾಮ್ರಾಜ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯೂ ನೀನು ಅತ್ಯಧಿಕ ಉದಾರಿಯಾಗಿರುವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَخَّرْنَا لَهُ ٱلرِّيحَ تَجْرِى بِأَمْرِهِۦ رُخَآءً حَيْثُ أَصَابَ
Kannada Translation - Hamza Butur ನಾವು ಅವರಿಗೆ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ಅವರು ಬಯಸಿದ ಕಡೆಗೆ ಅವರನ್ನು ಮೃದುವಾಗಿ ಒಯ್ಯುತ್ತಿತ್ತು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱلشَّيَٰطِينَ كُلَّ بَنَّآءٍ وَغَوَّاصٍ
Kannada Translation - Hamza Butur ಕಟ್ಟಡ ನಿರ್ಮಾಣಗಾರು ಮತ್ತು ಮುಳುಗುಗಾರರಾದ ಎಲ್ಲಾ ಶೈತಾನರನ್ನು (ನಾನು ಅವರಿಗೆ ಅಧೀನಗೊಳಿಸಿದೆವು).
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَءَاخَرِينَ مُقَرَّنِينَ فِى ٱلْأَصْفَادِ
Kannada Translation - Hamza Butur ಸಂಕೋಲೆಗಳಲ್ಲಿ ಬಂಧಿಸಲಾದ ಇತರ ಕೆಲವು (ಶೈತಾನರನ್ನೂ ಅಧೀನಗೊಳಿಸಿದೆವು).
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا عَطَآؤُنَا فَٱمْنُنْ أَوْ أَمْسِكْ بِغَيْرِ حِسَابٍ
Kannada Translation - Hamza Butur “ಇದು ನಮ್ಮ ಉಡುಗೊರೆಯಾಗಿದೆ. ನೀವು ಉಪಕಾರ ಮಾಡಿರಿ ಅಥವಾ ತಡೆದುಕೊಳ್ಳಿರಿ. ಯಾವುದೇ ಲೆಕ್ಕ ನೀಡಬೇಕಾಗಿಲ್ಲ.”[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ لَهُۥ عِندَنَا لَزُلْفَىٰ وَحُسْنَ مَـَٔابٍ
Kannada Translation - Hamza Butur ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವಿದೆ ಮತ್ತು ಅತ್ಯುತ್ತಮವಾದ ಠಿಕಾಣಿಯಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱذْكُرْ عَبْدَنَآ أَيُّوبَ إِذْ نَادَىٰ رَبَّهُۥٓ أَنِّى مَسَّنِىَ ٱلشَّيْطَٰنُ بِنُصْبٍ وَعَذَابٍ
Kannada Translation - Hamza Butur ನಮ್ಮ ದಾಸರಾದ ಅಯ್ಯೂಬರನ್ನು ಸ್ಮರಿಸಿರಿ. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ: “ಶೈತಾನನು ನನಗೆ ಬಳಲಿಕೆ ಮತ್ತು ದುಃಖವುಂಟಾಗುವಂತೆ ಮಾಡಿದ್ದಾನೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
ٱرْكُضْ بِرِجْلِكَ هَٰذَا مُغْتَسَلٌۢ بَارِدٌ وَشَرَابٌ
Kannada Translation - Hamza Butur (ನಾವು ಹೇಳಿದೆವು): “ನಿಮ್ಮ ಕಾಲಿನಿಂದ (ನೆಲಕ್ಕೆ) ಬಡಿಯಿರಿ. ಇದು ತಂಪಾದ ಸ್ನಾನದ ನೀರು ಮತ್ತು ಕುಡಿಯುವ ನೀರಾಗಿದೆ.”[1]
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَوَهَبْنَا لَهُۥٓ أَهْلَهُۥ وَمِثْلَهُم مَّعَهُمْ رَحْمَةً مِّنَّا وَذِكْرَىٰ لِأُو۟لِى ٱلْأَلْبَٰبِ
Kannada Translation - Hamza Butur ನಾವು ಅವರಿಗೆ ಅವರ ಸಂಪೂರ್ಣ ಕುಟುಂಬವನ್ನು ಮತ್ತು ಅದರೊಂದಿಗೆ ಅಷ್ಟೇ ಸಂಖ್ಯೆಯ ಇತರರನ್ನೂ ದಯಪಾಲಿಸಿದೆವು. ನಮ್ಮ ವಿಶೇಷ ದಯೆಯಾಗಿ ಮತ್ತು ಬುದ್ಧಿವಂತರಿಗೆ ಒಂದು ಉಪದೇಶವಾಗಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَخُذْ بِيَدِكَ ضِغْثًا فَٱضْرِب بِّهِۦ وَلَا تَحْنَثْ إِنَّا وَجَدْنَٰهُ صَابِرًا نِّعْمَ ٱلْعَبْدُ إِنَّهُۥٓ أَوَّابٌ
Kannada Translation - Hamza Butur “ನೀವು ಒಂದು ಹಿಡಿ ಹುಲ್ಲನ್ನು ನಿಮ್ಮ ಕೈಯಲ್ಲಿ ಹಿಡಿದು ಅದರಿಂದ ಬಡಿಯಿರಿ. ನಿಮ್ಮ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ.”[1] ನಿಶ್ಚಯವಾಗಿಯೂ ನಾವು ಅವರನ್ನು ಬಹಳ ಸಹಿಷ್ಣುತೆಯಿರುವ ದಾಸನಾಗಿ ಕಂಡೆವು. ಅತ್ಯುತ್ತಮ ದಾಸ! ಅವರು ಅತ್ಯಧಿಕ ಪಶ್ಚಾತ್ತಾಪಪಡುವವರಾಗಿದ್ದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱذْكُرْ عِبَٰدَنَآ إِبْرَٰهِيمَ وَإِسْحَٰقَ وَيَعْقُوبَ أُو۟لِى ٱلْأَيْدِى وَٱلْأَبْصَٰرِ
Kannada Translation - Hamza Butur ಶಕ್ತಿಶಾಲಿ ಮತ್ತು ದೂರದೃಷ್ಟಿಯುಳ್ಳ ನಮ್ಮ ದಾಸರಾದ ಇಬ್ರಾಹೀಮ್, ಇಸ್‍ಹಾಕ್ ಮತ್ತು ಯಾಕೂಬರನ್ನು ಸ್ಮರಿಸಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّآ أَخْلَصْنَٰهُم بِخَالِصَةٍ ذِكْرَى ٱلدَّارِ
Kannada Translation - Hamza Butur ನಾವು ಅವರನ್ನು ಒಂದು ವಿಶೇಷ ವಿಷಯಕ್ಕೆ ಅಂದರೆ ಪರಲೋಕದ ಸ್ಮರಣೆಯೊಂದಿಗೆ ಉತ್ಕೃಷ್ಟಗೊಳಿಸಿದೆವು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّهُمْ عِندَنَا لَمِنَ ٱلْمُصْطَفَيْنَ ٱلْأَخْيَارِ
Kannada Translation - Hamza Butur ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆರಿಸಲಾದ ಮತ್ತು ಅತಿಶ್ರೇಷ್ಠ ಜನರಾಗಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَٱذْكُرْ إِسْمَٰعِيلَ وَٱلْيَسَعَ وَذَا ٱلْكِفْلِ وَكُلٌّ مِّنَ ٱلْأَخْيَارِ
Kannada Translation - Hamza Butur ಇಸ್ಮಾಈಲ್, ಅಲ್‍ಯಸಅ್, ಮತ್ತು ದುಲ್‍ಕಿಫ್ಲರನ್ನು ಸ್ಮರಿಸಿರಿ. ಅವರೆಲ್ಲರೂ ಅತಿಶ್ರೇಷ್ಠರಾಗಿದ್ದಾರೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا ذِكْرٌ وَإِنَّ لِلْمُتَّقِينَ لَحُسْنَ مَـَٔابٍ
Kannada Translation - Hamza Butur ಇದೊಂದು ಉಪದೇಶವಾಗಿದೆ. ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ಅತ್ಯುತ್ತಮ ವಾಸಸ್ಥಳವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
جَنَّٰتِ عَدْنٍ مُّفَتَّحَةً لَّهُمُ ٱلْأَبْوَٰبُ
Kannada Translation - Hamza Butur ಶಾಶ್ವತ ವಾಸದ ಸ್ವರ್ಗೋದ್ಯಾನಗಳು. ಅವರಿಗೆ ಅದರ ದ್ವಾರಗಳನ್ನು ತೆರೆದಿಡಲಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مُتَّكِـِٔينَ فِيهَا يَدْعُونَ فِيهَا بِفَٰكِهَةٍ كَثِيرَةٍ وَشَرَابٍ
Kannada Translation - Hamza Butur ಅಲ್ಲಿ ಅವರು ಒರಗಿ ಕುಳಿತು ಹಲವಾರು ವಿಧಗಳ ಹಣ್ಣುಗಳನ್ನು ಮತ್ತು ಪಾನೀಯಗಳಿಗೆ ಬೇಡಿಕೆಯಿಡುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَعِندَهُمْ قَٰصِرَٰتُ ٱلطَّرْفِ أَتْرَابٌ
Kannada Translation - Hamza Butur ಅವರ ಬಳಿ ದೃಷ್ಟಿಗಳನ್ನು ನಿಯಂತ್ರಿಸುವ ಸಮಪ್ರಾಯದ ತರುಣಿಗಳಿರುವರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا مَا تُوعَدُونَ لِيَوْمِ ٱلْحِسَابِ
Kannada Translation - Hamza Butur ಇದು ನಿಮಗೆ ವಿಚಾರಣೆಯ ದಿನಕ್ಕಾಗಿ ಮಾಡಲಾದ ವಾಗ್ದಾನವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ هَٰذَا لَرِزْقُنَا مَا لَهُۥ مِن نَّفَادٍ
Kannada Translation - Hamza Butur ನಿಶ್ಚಯವಾಗಿಯೂ ಇದು ನಮ್ಮ ಕಡೆಯ ಉಪಜೀವನವಾಗಿದೆ. ಇದಕ್ಕೆ ಕೊನೆಯೆಂಬುದೇ ಇಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا وَإِنَّ لِلطَّٰغِينَ لَشَرَّ مَـَٔابٍ
Kannada Translation - Hamza Butur ಇದು (ದೇವಭಯವುಳ್ಳವರ ಸ್ಥಿತಿಯಾಗಿದೆ). ನಿಶ್ಚಯವಾಗಿಯೂ ಅತಿರೇಕಿಗಳಿಗೆ ಅತಿಕೆಟ್ಟ ವಾಸಸ್ಥಳವಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
جَهَنَّمَ يَصْلَوْنَهَا فَبِئْسَ ٱلْمِهَادُ
Kannada Translation - Hamza Butur ನರಕಾಗ್ನಿ! ಅವರು ಅದನ್ನು ಪ್ರವೇಶಿಸುವರು. ಅದು ಅತಿ ನಿಕೃಷ್ಟ ವಾಸಸ್ಥಳವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا فَلْيَذُوقُوهُ حَمِيمٌ وَغَسَّاقٌ
Kannada Translation - Hamza Butur ಇದು (ಅವರ ಸ್ಥಿತಿಯಾಗಿದೆ). ಆದ್ದರಿಂದ ಅವರು ಅದರ ರುಚಿಯನ್ನು ನೋಡಲಿ. ಕುದಿಯುವ ನೀರು ಮತ್ತು ಕೀವು!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَءَاخَرُ مِن شَكْلِهِۦٓ أَزْوَٰجٌ
Kannada Translation - Hamza Butur ಇದರ ಹೊರತಾಗಿ ಇನ್ನೂ ಅನೇಕ ವಿಧದ ಶಿಕ್ಷೆಗಳು!
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
هَٰذَا فَوْجٌ مُّقْتَحِمٌ مَّعَكُمْ لَا مَرْحَبًۢا بِهِمْ إِنَّهُمْ صَالُوا۟ ٱلنَّارِ
Kannada Translation - Hamza Butur “ಇದು ನಿಮ್ಮ ಜೊತೆಗೆ (ನರಕವನ್ನು) ಪ್ರವೇಶಿಸುವ ಒಂದು ಗುಂಪಾಗಿದೆ. ಅವರಿಗೆ ಸ್ವಾಗತವಿಲ್ಲ. ನಿಶ್ಚಯವಾಗಿಯೂ ಅವರು ನರಕವನ್ನು ಪ್ರವೇಶಿಸುವರು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ بَلْ أَنتُمْ لَا مَرْحَبًۢا بِكُمْ أَنتُمْ قَدَّمْتُمُوهُ لَنَا فَبِئْسَ ٱلْقَرَارُ
Kannada Translation - Hamza Butur ಅವರು ಹೇಳುವರು: “ಅಲ್ಲ, ನಿಮಗೇ ಸ್ವಾಗತವಿಲ್ಲ. ನೀವೇ ಇದನ್ನು ನಮಗೆ ಮೊದಲು ತಂದಿಟ್ಟವರು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالُوا۟ رَبَّنَا مَن قَدَّمَ لَنَا هَٰذَا فَزِدْهُ عَذَابًا ضِعْفًا فِى ٱلنَّارِ
Kannada Translation - Hamza Butur ಅವರು ಹೇಳುವರು: “ನಮ್ಮ ಪರಿಪಾಲಕನೇ! ಇದನ್ನು ನಮಗೆ ತಂದಿಟ್ಟವರು ಯಾರೋ ಅವರಿಗೆ ನರಕದಲ್ಲಿ ಇಮ್ಮಡಿ ಶಿಕ್ಷೆಯನ್ನು ನೀಡು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَقَالُوا۟ مَا لَنَا لَا نَرَىٰ رِجَالًا كُنَّا نَعُدُّهُم مِّنَ ٱلْأَشْرَارِ
Kannada Translation - Hamza Butur ಅವರು ಹೇಳುವರು: “ಇದೇನು? ನಾವು ಕೆಟ್ಟವರೆಂದು ಪರಿಗಣಿಸಿದ್ದ ಆ ಜನರು ನಮಗೆ ಕಾಣಿಸುತ್ತಿಲ್ಲವಲ್ಲ?
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَتَّخَذْنَٰهُمْ سِخْرِيًّا أَمْ زَاغَتْ عَنْهُمُ ٱلْأَبْصَٰرُ
Kannada Translation - Hamza Butur ನಾವು ಅವರನ್ನು (ತಪ್ಪಾಗಿ) ತಮಾಷೆ ಮಾಡುತ್ತಿದ್ದೆವೋ? ಅಥವಾ ನಮ್ಮ ದೃಷ್ಟಿಯಿಂದ ಅವರು ತಪ್ಪಿಹೋಗಿದ್ದಾರೋ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنَّ ذَٰلِكَ لَحَقٌّ تَخَاصُمُ أَهْلِ ٱلنَّارِ
Kannada Translation - Hamza Butur ನರಕವಾಸಿಗಳ ಈ ಜಗಳವು ಸತ್ಯವಾಗಿಯೂ ಸಂಭವಿಸಿಯೇ ತೀರುತ್ತದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُلْ إِنَّمَآ أَنَا۠ مُنذِرٌ وَمَا مِنْ إِلَٰهٍ إِلَّا ٱللَّهُ ٱلْوَٰحِدُ ٱلْقَهَّارُ
Kannada Translation - Hamza Butur ಹೇಳಿರಿ: “ನಾನೊಬ್ಬ ಮುನ್ನೆಚ್ಚರಿಕೆಗಾರ ಮಾತ್ರ. ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
رَبُّ ٱلسَّمَٰوَٰتِ وَٱلْأَرْضِ وَمَا بَيْنَهُمَا ٱلْعَزِيزُ ٱلْغَفَّٰرُ
Kannada Translation - Hamza Butur ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُلْ هُوَ نَبَؤٌا۟ عَظِيمٌ
Kannada Translation - Hamza Butur ಹೇಳಿರಿ: “ಇದು ಗಂಭೀರ ವಾರ್ತೆಯಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
أَنتُمْ عَنْهُ مُعْرِضُونَ
Kannada Translation - Hamza Butur ನೀವು ಇದನ್ನು ಕಡೆಗಣಿಸುತ್ತಿದ್ದೀರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
مَا كَانَ لِىَ مِنْ عِلْمٍۭ بِٱلْمَلَإِ ٱلْأَعْلَىٰٓ إِذْ يَخْتَصِمُونَ
Kannada Translation - Hamza Butur ಉಪರಿಲೋಕದ ದೇವದೂತರುಗಳು ತರ್ಕಿಸುತ್ತಿದ್ದಾಗ ನನಗೆ ಅವರ (ಸಂಭಾಷಣೆಗಳ) ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِن يُوحَىٰٓ إِلَىَّ إِلَّآ أَنَّمَآ أَنَا۠ نَذِيرٌ مُّبِينٌ
Kannada Translation - Hamza Butur ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನೆಂದು ಮಾತ್ರ ನನಗೆ ದೇವವಾಣಿ ನೀಡಲಾಗುತ್ತಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِذْ قَالَ رَبُّكَ لِلْمَلَٰٓئِكَةِ إِنِّى خَٰلِقٌۢ بَشَرًا مِّن طِينٍ
Kannada Translation - Hamza Butur ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳೊಂದಿಗೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನಾನು ಜೇಡಿ ಮಣ್ಣಿನಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸುವೆನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَإِذَا سَوَّيْتُهُۥ وَنَفَخْتُ فِيهِ مِن رُّوحِى فَقَعُوا۟ لَهُۥ سَٰجِدِينَ
Kannada Translation - Hamza Butur ನಾನು ಅವನನ್ನು ರೂಪುಗೊಳಿಸಿ, ನನ್ನ ಆತ್ಮದಿಂದ ಅವನಿಗೆ ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
فَسَجَدَ ٱلْمَلَٰٓئِكَةُ كُلُّهُمْ أَجْمَعُونَ
Kannada Translation - Hamza Butur ಆಗ ದೇವದೂತರುಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّآ إِبْلِيسَ ٱسْتَكْبَرَ وَكَانَ مِنَ ٱلْكَٰفِرِينَ
Kannada Translation - Hamza Butur ಇಬ್ಲೀಸನ ಹೊರತು. ಅವನು ಅಹಂಕಾರ ತೋರಿದನು ಮತ್ತು ಸತ್ಯನಿಷೇಧಿಗಳಲ್ಲಿ ಸೇರಿದವನಾದನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ يَٰٓإِبْلِيسُ مَا مَنَعَكَ أَن تَسْجُدَ لِمَا خَلَقْتُ بِيَدَىَّ أَسْتَكْبَرْتَ أَمْ كُنتَ مِنَ ٱلْعَالِينَ
Kannada Translation - Hamza Butur ಅಲ್ಲಾಹು ಕೇಳಿದನು: “ಇಬ್ಲೀಸ್! ನಾನು ನನ್ನ ಕೈಯಿಂದ ಸೃಷ್ಟಿಸಿದವನಿಗೆ ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದದ್ದು ಏನು? ನೀನು ಅಹಂಕಾರ ತೋರಿದೆಯಾ? ಅಥವಾ ನೀನು ದರ್ಪ ತೋರುವವರಲ್ಲಿ ಸೇರಿದೆಯಾ?”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ أَنَا۠ خَيْرٌ مِّنْهُ خَلَقْتَنِى مِن نَّارٍ وَخَلَقْتَهُۥ مِن طِينٍ
Kannada Translation - Hamza Butur ಇಬ್ಲೀಸ್ ಹೇಳಿದನು: “ನಾನೇ ಅವನಿಗಿಂತ ಶ್ರೇಷ್ಠ. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಜೇಡಿಮಣ್ಣಿನಿಂದ ಸೃಷ್ಟಿಸಿರುವೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَٱخْرُجْ مِنْهَا فَإِنَّكَ رَجِيمٌ
Kannada Translation - Hamza Butur ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಟುಹೋಗು. ನಿಶ್ಚಯವಾಗಿಯೂ ನೀನು ಬಹಿಷ್ಕೃತನಾಗಿರುವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَإِنَّ عَلَيْكَ لَعْنَتِىٓ إِلَىٰ يَوْمِ ٱلدِّينِ
Kannada Translation - Hamza Butur ಖಂಡಿತವಾಗಿಯೂ ನನ್ನ ಶಾಪವು ಪ್ರತಿಫಲದ ದಿನದ ತನಕ ನಿನ್ನ ಮೇಲೆ ಇರಲಿದೆ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ رَبِّ فَأَنظِرْنِىٓ إِلَىٰ يَوْمِ يُبْعَثُونَ
Kannada Translation - Hamza Butur ಇಬ್ಲೀಸ್ ಹೇಳಿದನು: “ನನ್ನ ಪರಿಪಾಲಕನೇ! ಅವರನ್ನು ಜೀವ ನೀಡಿ ಎಬ್ಬಿಸುವ ದಿನದವರೆಗೆ ನನಗೆ ಕಾಲಾವಕಾಶ ನೀಡು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَإِنَّكَ مِنَ ٱلْمُنظَرِينَ
Kannada Translation - Hamza Butur ಅಲ್ಲಾಹು ಹೇಳಿದನು: “ಸರಿ, ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿರುವೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَىٰ يَوْمِ ٱلْوَقْتِ ٱلْمَعْلُومِ
Kannada Translation - Hamza Butur ಆ ನಿಶ್ಚಿತ ಅವಧಿಯ ದಿನದ ತನಕ.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَبِعِزَّتِكَ لَأُغْوِيَنَّهُمْ أَجْمَعِينَ
Kannada Translation - Hamza Butur ಇಬ್ಲೀಸ್ ಹೇಳಿದನು: “ನಿನ್ನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾನು ಅವರೆಲ್ಲರನ್ನೂ ದಾರಿತಪ್ಪಿಸುವೆನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِلَّا عِبَادَكَ مِنْهُمُ ٱلْمُخْلَصِينَ
Kannada Translation - Hamza Butur ಅವರಲ್ಲಿರುವ ನಿನ್ನ ನಿಷ್ಕಳಂಕ ದಾಸರ ಹೊರತು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قَالَ فَٱلْحَقُّ وَٱلْحَقَّ أَقُولُ
Kannada Translation - Hamza Butur ಅಲ್ಲಾಹು ಹೇಳಿದನು: “ಇದೇ ಸತ್ಯ. ನಾನು ಸತ್ಯವನ್ನೇ ಹೇಳುವವನು.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
لَأَمْلَأَنَّ جَهَنَّمَ مِنكَ وَمِمَّن تَبِعَكَ مِنْهُمْ أَجْمَعِينَ
Kannada Translation - Hamza Butur ನಿಶ್ಚಯವಾಗಿಯೂ ನಿನ್ನನ್ನು ಮತ್ತು ಅವರ ಪೈಕಿ ನಿನ್ನನ್ನು ಹಿಂಬಾಲಿಸಿದವರನ್ನೆಲ್ಲಾ ನಾನು ನರಕಾಗ್ನಿಯಲ್ಲಿ ತುಂಬಿಸುವೆನು.”
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
قُلْ مَآ أَسْـَٔلُكُمْ عَلَيْهِ مِنْ أَجْرٍ وَمَآ أَنَا۠ مِنَ ٱلْمُتَكَلِّفِينَ
Kannada Translation - Hamza Butur ಹೇಳಿರಿ: “ನಾನು ಇದಕ್ಕಾಗಿ ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನಾನು ಏನನ್ನೂ ಸ್ವಯಂ ಕಲ್ಪಿಸಿ ಹೇಳುವುದಿಲ್ಲ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
إِنْ هُوَ إِلَّا ذِكْرٌ لِّلْعَٰلَمِينَ
Kannada Translation - Hamza Butur ಇದು ಸರ್ವಲೋಕದವರಿಗೆ ಒಂದು ಉಪದೇಶ ಮಾತ್ರವಾಗಿದೆ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
وَلَتَعْلَمُنَّ نَبَأَهُۥ بَعْدَ حِينٍۭ
Kannada Translation - Hamza Butur ಒಂದು ಅವಧಿಯ ನಂತರ ನೀವು ಇದರ ಸಮಾಚಾರವನ್ನು ಖಂಡಿತ ಅರ್ಥಮಾಡಿಕೊಳ್ಳುವಿರಿ.
ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →
← ಸೂರ As-Saaffaat
ಸೂರ Az-Zumar →
Looking for a topic? Try the meaning search — your question is scanned across all 6,236 verses.
→
Arabic text and translations via Tanzil and QuranEnc — verbatim, unmodified · Translations belong to their translators and are not the Qur'an itself
ಇದು ಸಂಶೋಧನಾ ಸಹಾಯಕ; ಧಾರ್ಮಿಕ ತೀರ್ಪಿನ ಮೂಲವಲ್ಲ.