caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ As-Sajda السجدة

30 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 75

بِسْمِ ٱللَّهِ ٱلرَّحْمَٰنِ ٱلرَّحِيمِ الٓمٓ

Kannada Translation - Hamza Buturಅಲಿಫ್-ಲಾಮ್-ಮೀಮ್.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَنزِيلُ ٱلْكِتَٰبِ لَا رَيْبَ فِيهِ مِن رَّبِّ ٱلْعَٰلَمِينَ

Kannada Translation - Hamza Buturಈ ಗ್ರಂಥವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ يَقُولُونَ ٱفْتَرَىٰهُ بَلْ هُوَ ٱلْحَقُّ مِن رَّبِّكَ لِتُنذِرَ قَوْمًا مَّآ أَتَىٰهُم مِّن نَّذِيرٍ مِّن قَبْلِكَ لَعَلَّهُمْ يَهْتَدُونَ

Kannada Translation - Hamza Buturಅವರು (ಪ್ರವಾದಿ) ಇದನ್ನು ಸ್ವಯಂ ರಚಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದ ಸತ್ಯವಾಗಿದೆ. ನಿಮಗಿಂತ ಮೊದಲು ಯಾವುದೇ ಮುನ್ನೆಚ್ಚರಿಕೆಗಾರರು ಬರದ ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರು ಸನ್ಮಾರ್ಗವನ್ನು ಸ್ವೀಕರಿಸುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱللَّهُ ٱلَّذِى خَلَقَ ٱلسَّمَٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ مَا لَكُم مِّن دُونِهِۦ مِن وَلِىٍّ وَلَا شَفِيعٍ أَفَلَا تَتَذَكَّرُونَ

Kannada Translation - Hamza Buturಅಲ್ಲಾಹನೇ ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನ ಹೊರತು ನಿಮಗೆ ಬೇರೆ ರಕ್ಷಕರೋ, ಶಿಫಾರಸುಗಾರರೋ ಇಲ್ಲ. ಆದರೂ ನೀವು ಉಪದೇಶ ಪಡೆಯುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُدَبِّرُ ٱلْأَمْرَ مِنَ ٱلسَّمَآءِ إِلَى ٱلْأَرْضِ ثُمَّ يَعْرُجُ إِلَيْهِ فِى يَوْمٍ كَانَ مِقْدَارُهُۥٓ أَلْفَ سَنَةٍ مِّمَّا تَعُدُّونَ

Kannada Translation - Hamza Buturಅವನು ಆಕಾಶದಿಂದ ಭೂಮಿಯ ತನಕ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ನಂತರ ನಿಮ್ಮ ಎಣಿಕೆಯ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾದ ಒಂದು ದಿನದಂದು ಆ ಕಾರ್ಯಗಳು ಅವನ ಬಳಿಗೆ ಏರಿಹೋಗುತ್ತವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَٰلِكَ عَٰلِمُ ٱلْغَيْبِ وَٱلشَّهَٰدَةِ ٱلْعَزِيزُ ٱلرَّحِيمُ

Kannada Translation - Hamza Buturಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನಾಗಿದ್ದಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِىٓ أَحْسَنَ كُلَّ شَىْءٍ خَلَقَهُۥ وَبَدَأَ خَلْقَ ٱلْإِنسَٰنِ مِن طِينٍ

Kannada Translation - Hamza Buturಅವನು ತನ್ನ ಎಲ್ಲಾ ಸೃಷ್ಟಿಗಳನ್ನು ಅತ್ಯಂತ ಸಮರ್ಪಕವಾಗಿ ಸೃಷ್ಟಿಸಿದ್ದಾನೆ. ಅವನು ಮನುಷ್ಯ ಸೃಷ್ಟಿಯನ್ನು ಜೇಡಿಮಣ್ಣಿನಿಂದ ಆರಂಭಿಸಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ جَعَلَ نَسْلَهُۥ مِن سُلَٰلَةٍ مِّن مَّآءٍ مَّهِينٍ

Kannada Translation - Hamza Buturನಂತರ ಅವನ (ಮನುಷ್ಯನ) ಸಂತಾನವನ್ನು ತುಚ್ಛ ನೀರಿನ ಸತ್ವದಿಂದ (ವೀರ್ಯದಿಂದ) ಉಂಟುಮಾಡಿದನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ سَوَّىٰهُ وَنَفَخَ فِيهِ مِن رُّوحِهِۦ وَجَعَلَ لَكُمُ ٱلسَّمْعَ وَٱلْأَبْصَٰرَ وَٱلْأَفْـِٔدَةَ قَلِيلًا مَّا تَشْكُرُونَ

Kannada Translation - Hamza Buturನಂತರ ಅವನಿಗೆ ಸರಿಯಾದ ರೂಪವನ್ನು ನೀಡಿ, ತನ್ನ ಕಡೆಯ ಆತ್ಮವನ್ನು ಊದಿದನು. ಅವನು ನಿಮಗೆ ಕೇಳುವ ಶಕ್ತಿಯನ್ನು, ನೋಡುವ ಶಕ್ತಿಯನ್ನು ಮತ್ತು ಹೃದಯವನ್ನು ನೀಡಿದನು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوٓا۟ أَءِذَا ضَلَلْنَا فِى ٱلْأَرْضِ أَءِنَّا لَفِى خَلْقٍ جَدِيدٍۭ بَلْ هُم بِلِقَآءِ رَبِّهِمْ كَٰفِرُونَ

Kannada Translation - Hamza Buturಸತ್ಯನಿಷೇಧಿಗಳು ಹೇಳಿದರು: “ನಾವು ಭೂಮಿಯಲ್ಲಿ ವಿಲೀನವಾಗಿ ಕಣ್ಮರೆಯಾದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?” ಅಲ್ಲ, ವಾಸ್ತವವಾಗಿ ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ يَتَوَفَّىٰكُم مَّلَكُ ٱلْمَوْتِ ٱلَّذِى وُكِّلَ بِكُمْ ثُمَّ إِلَىٰ رَبِّكُمْ تُرْجَعُونَ

Kannada Translation - Hamza Buturಹೇಳಿರಿ: “ನಿಮ್ಮ ಹೊಣೆ ವಹಿಸಿಕೊಡಲಾದ ಮರಣದ ದೂತರು ನಿಮ್ಮ ಆತ್ಮವನ್ನು ವಶಪಡಿಸುವರು. ನಂತರ ನಿಮ್ಮನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ تَرَىٰٓ إِذِ ٱلْمُجْرِمُونَ نَاكِسُوا۟ رُءُوسِهِمْ عِندَ رَبِّهِمْ رَبَّنَآ أَبْصَرْنَا وَسَمِعْنَا فَٱرْجِعْنَا نَعْمَلْ صَٰلِحًا إِنَّا مُوقِنُونَ

Kannada Translation - Hamza Buturಅಪರಾಧಿಗಳು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ತಲೆತಗ್ಗಿಸಿ ನಿಂತು, “ನಮ್ಮ ಪರಿಪಾಲಕನೇ! ನಾವು ಕಣ್ಣಾರೆ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ದರಿಂದ ನಮ್ಮನ್ನು ಭೂಮಿಗೆ ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ಖಂಡಿತವಾಗಿಯೂ ಈಗ ನಮಗೆ ದೃಢನಂಬಿಕೆ ಬಂದಿದೆ” ಎಂದು ಹೇಳುವ ದೃಶ್ಯವನ್ನು ನೀವು ನೋಡಿರುತ್ತಿದ್ದರೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ شِئْنَا لَـَٔاتَيْنَا كُلَّ نَفْسٍ هُدَىٰهَا وَلَٰكِنْ حَقَّ ٱلْقَوْلُ مِنِّى لَأَمْلَأَنَّ جَهَنَّمَ مِنَ ٱلْجِنَّةِ وَٱلنَّاسِ أَجْمَعِينَ

Kannada Translation - Hamza Buturನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಸನ್ಮಾರ್ಗವನ್ನು ತೋರಿಸುತ್ತಿದ್ದೆವು. ಆದರೆ, ನಾನು ಜಿನ್ನ್ ಮತ್ತು ಮಾನವರಿಂದ ನರಕವನ್ನು ತುಂಬಿಸಿಯೇ ಬಿಡುತ್ತೇನೆ ಎಂಬ ನನ್ನ ವಚನವು ಖಾತ್ರಿಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذُوقُوا۟ بِمَا نَسِيتُمْ لِقَآءَ يَوْمِكُمْ هَٰذَآ إِنَّا نَسِينَٰكُمْ وَذُوقُوا۟ عَذَابَ ٱلْخُلْدِ بِمَا كُنتُمْ تَعْمَلُونَ

Kannada Translation - Hamza Buturಆದ್ದರಿಂದ ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತಿರುವ ಕಾರಣದಿಂದ ಶಿಕ್ಷೆಯ ರುಚಿಯನ್ನು ನೋಡಿರಿ. ಇಂದು ನಾವು ನಿಮ್ಮನ್ನು ಮರೆತಿದ್ದೇವೆ. ನೀವು ಮಾಡುತ್ತಿದ್ದ ದುಷ್ಕರ್ಮಗಳ ಕಾರಣದಿಂದ ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّمَا يُؤْمِنُ بِـَٔايَٰتِنَا ٱلَّذِينَ إِذَا ذُكِّرُوا۟ بِهَا خَرُّوا۟ سُجَّدًا وَسَبَّحُوا۟ بِحَمْدِ رَبِّهِمْ وَهُمْ لَا يَسْتَكْبِرُونَ

Kannada Translation - Hamza Buturನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ಯಾರೆಂದರೆ, ಅವುಗಳ ಮೂಲಕ ಉಪದೇಶ ಮಾಡಲಾದರೆ ಸಾಷ್ಟಾಂಗ ಮಾಡುತ್ತಾ ಬೀಳುವವರು ಮತ್ತು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಕೊಂಡಾಡುವವರು. ಅವರು ಅಹಂಕಾರ ಪಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَتَجَافَىٰ جُنُوبُهُمْ عَنِ ٱلْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَٰهُمْ يُنفِقُونَ

Kannada Translation - Hamza Buturಅವರ ಪಾರ್ಶ್ವಗಳು ಅವರ ಹಾಸಿಗೆಗಳನ್ನು ಬಿಟ್ಟು ಬೇರ್ಪಡುತ್ತವೆ. ಅವರು ಭಯ ಮತ್ತು ನಿರೀಕ್ಷೆಯಿಂದ ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸುತ್ತಾರೆ. ನಾವು ಅವರಿಗೆ ಒದಗಿಸಿದ ಸಂಪತ್ತಿನಿಂದ ಅವರು ಖರ್ಚು ಮಾಡುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَا تَعْلَمُ نَفْسٌ مَّآ أُخْفِىَ لَهُم مِّن قُرَّةِ أَعْيُنٍ جَزَآءًۢ بِمَا كَانُوا۟ يَعْمَلُونَ

Kannada Translation - Hamza Buturಕಣ್ಣು ತಂಪಾಗಿಸುವ ಯಾವೆಲ್ಲಾ ವಸ್ತುಗಳನ್ನು ಅವರಿಗೋಸ್ಕರ ಗೋಪ್ಯವಾಗಿಡಲಾಗಿದೆ ಎಂದು ಯಾವುದೇ ವ್ಕಕ್ತಿಯೂ ತಿಳಿದಿಲ್ಲ. ಇದು ಅವರು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَمَن كَانَ مُؤْمِنًا كَمَن كَانَ فَاسِقًا لَّا يَسْتَوُۥنَ

Kannada Translation - Hamza Buturಹಾಗಾದರೆ ಸತ್ಯವಿಶ್ವಾಸಿ ದುಷ್ಕರ್ಮಿಗೆ ಸಮಾನನಾಗುವನೇ? ಇಲ್ಲ, ಅವರು ಸಮಾನರಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ فَلَهُمْ جَنَّٰتُ ٱلْمَأْوَىٰ نُزُلًۢا بِمَا كَانُوا۟ يَعْمَلُونَ

Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಶಾಶ್ವತ ಸ್ವರ್ಗೋದ್ಯಾನಗಳಿವೆ. ಅವರು ಮಾಡಿದ ಸತ್ಕರ್ಮಗಳ ಫಲವಾಗಿ ಅವರಿಗೆ ಅಲ್ಲಿ ಆತಿಥ್ಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا ٱلَّذِينَ فَسَقُوا۟ فَمَأْوَىٰهُمُ ٱلنَّارُ كُلَّمَآ أَرَادُوٓا۟ أَن يَخْرُجُوا۟ مِنْهَآ أُعِيدُوا۟ فِيهَا وَقِيلَ لَهُمْ ذُوقُوا۟ عَذَابَ ٱلنَّارِ ٱلَّذِى كُنتُم بِهِۦ تُكَذِّبُونَ

Kannada Translation - Hamza Buturದುಷ್ಕರ್ಮವೆಸಗಿದವರು ಯಾರೋ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗಲೆಲ್ಲಾ ಅವರನ್ನು ಮತ್ತೆ ಅದಕ್ಕೇ ತಳ್ಳಲಾಗುವುದು. (ಅವರೊಡನೆ ಹೇಳಲಾಗುವುದು:) “ನೀವು ನಿಷೇಧಿಸುತ್ತಿದ್ದ ಆ ನರಕ ಶಿಕ್ಷೆಯ ರುಚಿಯನ್ನು ನೋಡಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَنُذِيقَنَّهُم مِّنَ ٱلْعَذَابِ ٱلْأَدْنَىٰ دُونَ ٱلْعَذَابِ ٱلْأَكْبَرِ لَعَلَّهُمْ يَرْجِعُونَ

Kannada Translation - Hamza Buturಆ ಮಹಾ ಶಿಕ್ಷೆಗೆ ಮೊದಲು ನಾವು ಅವರಿಗೆ (ಇಹಲೋಕದಲ್ಲಿ) ಕೆಲವು ಸಣ್ಣ ಶಿಕ್ಷೆಗಳ ರುಚಿಯನ್ನು ತೋರಿಸುತ್ತೇವೆ. ಅವರು (ಪಶ್ಚಾತ್ತಾಪಪಟ್ಟು) ಮರಳಿ ಬರಲೆಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَنْ أَظْلَمُ مِمَّن ذُكِّرَ بِـَٔايَٰتِ رَبِّهِۦ ثُمَّ أَعْرَضَ عَنْهَآ إِنَّا مِنَ ٱلْمُجْرِمِينَ مُنتَقِمُونَ

Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಮುಖ ತಿರುಗಿಸಿ ನಡೆಯುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ನಾವು ಅಂತಹ ಅಪರಾಧಿಗಳಿಂದ ಪ್ರತೀಕಾರ ಪಡೆಯುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ ءَاتَيْنَا مُوسَى ٱلْكِتَٰبَ فَلَا تَكُن فِى مِرْيَةٍ مِّن لِّقَآئِهِۦ وَجَعَلْنَٰهُ هُدًى لِّبَنِىٓ إِسْرَٰٓءِيلَ

Kannada Translation - Hamza Buturನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೇವೆ. ಆದ್ದರಿಂದ ಅವರನ್ನು ಭೇಟಿಯಾಗುವ ವಿಷಯದಲ್ಲಿ ನಿಮಗೆ ಸಂಶಯವುಂಟಾಗದಿರಲಿ.[1] ನಾವು ಅದನ್ನು (ಗ್ರಂಥವನ್ನು) ಇಸ್ರಾಯೇಲ್ ಮಕ್ಕಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا مِنْهُمْ أَئِمَّةً يَهْدُونَ بِأَمْرِنَا لَمَّا صَبَرُوا۟ وَكَانُوا۟ بِـَٔايَٰتِنَا يُوقِنُونَ

Kannada Translation - Hamza Buturಅವರು ತಾಳ್ಮೆಯಿಂದ ಜೀವಿಸಿದಾಗ ನಾವು ಅವರಲ್ಲಿ ಕೆಲವರನ್ನು ನಮ್ಮ ಆಜ್ಞೆಯ ಪ್ರಕಾರ ಜನರಿಗೆ ಸನ್ಮಾರ್ಗ ತೋರಿಸುವ ಮುಖಂಡರನ್ನಾಗಿ ಮಾಡಿದೆವು. ಅವರು ನಮ್ಮ ವಚನಗಳಲ್ಲಿ ದೃಢನಂಬಿಕೆಯುಳ್ಳವರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ رَبَّكَ هُوَ يَفْصِلُ بَيْنَهُمْ يَوْمَ ٱلْقِيَٰمَةِ فِيمَا كَانُوا۟ فِيهِ يَخْتَلِفُونَ

Kannada Translation - Hamza Buturಅವರು ಭಿನ್ನಮತ ತಳೆದಿರುವ ವಿಷಯಗಳಲ್ಲಿ ನಿಮ್ಮ ಪರಿಪಾಲಕನು (ಅಲ್ಲಾಹು) ಪುನರುತ್ಥಾನ ದಿನದಂದು ಅವರ ನಡುವೆ ಖಂಡಿತ ತೀರ್ಪು ನೀಡುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَمْ يَهْدِ لَهُمْ كَمْ أَهْلَكْنَا مِن قَبْلِهِم مِّنَ ٱلْقُرُونِ يَمْشُونَ فِى مَسَٰكِنِهِمْ إِنَّ فِى ذَٰلِكَ لَـَٔايَٰتٍ أَفَلَا يَسْمَعُونَ

Kannada Translation - Hamza Buturನಾವು ಅವರಿಗಿಂತ ಮೊದಲು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಎಂಬ ಸತ್ಯವು ಅವರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ವಾಸಸ್ಥಳಗಳ ಮೂಲಕ ಇವರು ಸಾಗುತ್ತಿದ್ದಾರೆ! ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ. ಆದರೂ ಇವರು ಕಿವಿಗೊಡುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَمْ يَرَوْا۟ أَنَّا نَسُوقُ ٱلْمَآءَ إِلَى ٱلْأَرْضِ ٱلْجُرُزِ فَنُخْرِجُ بِهِۦ زَرْعًا تَأْكُلُ مِنْهُ أَنْعَٰمُهُمْ وَأَنفُسُهُمْ أَفَلَا يُبْصِرُونَ

Kannada Translation - Hamza Buturನಾವು ಬರಡು ಭೂಮಿಗೆ ನೀರು ಹರಿಸುವುದನ್ನು ಅವರು ನೋಡಿಲ್ಲವೇ? ನಂತರ ಅದರಿಂದ ನಾವು ಬೆಳೆಗಳನ್ನು ಹೊರತರುತ್ತೇವೆ. ಅದನ್ನು ಅವರ ಜಾನುವಾರುಗಳು ಮತ್ತು ಸ್ವತಃ ಅವರು ಕೂಡ ತಿನ್ನುತ್ತಾರೆ. ಆದರೂ ಅವರು ನೋಡುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَقُولُونَ مَتَىٰ هَٰذَا ٱلْفَتْحُ إِن كُنتُمْ صَٰدِقِينَ

Kannada Translation - Hamza Buturಅವರು ಹೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ತೀರ್ಪು ಯಾವಾಗ ಬರುತ್ತದೆ ಎಂದು ಹೇಳಿರಿ!”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ يَوْمَ ٱلْفَتْحِ لَا يَنفَعُ ٱلَّذِينَ كَفَرُوٓا۟ إِيمَٰنُهُمْ وَلَا هُمْ يُنظَرُونَ

Kannada Translation - Hamza Buturಹೇಳಿರಿ: “ತೀರ್ಪು ಬರುವ ದಿನದಂದು ಸತ್ಯನಿಷೇಧಿಗಳು ವಿಶ್ವಾಸವನ್ನು ಸ್ವೀಕರಿಸಿದರೆ ಅದು ಅವರಿಗೆ ಪ್ರಯೋಜನಪಡುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَعْرِضْ عَنْهُمْ وَٱنتَظِرْ إِنَّهُم مُّنتَظِرُونَ

Kannada Translation - Hamza Buturಆದ್ದರಿಂದ ನೀವು ಅವರಿಂದ ವಿಮುಖರಾಗಿರಿ ಮತ್ತು ಕಾಯಿರಿ. ನಿಶ್ಚಯವಾಗಿಯೂ ಅವರೂ ಕಾಯುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70