caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Muminoon المؤمنون

118 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 74

بِسْمِ ٱللَّهِ ٱلرَّحْمَٰنِ ٱلرَّحِيمِ قَدْ أَفْلَحَ ٱلْمُؤْمِنُونَ

Kannada Translation - Hamza Buturಸತ್ಯವಿಶ್ವಾಸಿಗಳು ಯಶಸ್ವಿಯಾದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ هُمْ فِى صَلَاتِهِمْ خَٰشِعُونَ

Kannada Translation - Hamza Buturಅವರು ಯಾರೆಂದರೆ, ತಮ್ಮ ನಮಾಝ್‍ನಲ್ಲಿ ವಿನಮ್ರತೆಯಿರುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ عَنِ ٱللَّغْوِ مُعْرِضُونَ

Kannada Translation - Hamza Buturಅನಗತ್ಯ ವಿಷಯಗಳಿಂದ ವಿಮುಖರಾಗುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ لِلزَّكَوٰةِ فَٰعِلُونَ

Kannada Translation - Hamza Buturಝಕಾತ್ ನೀಡುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ لِفُرُوجِهِمْ حَٰفِظُونَ

Kannada Translation - Hamza Buturತಮ್ಮ ಗುಹ್ಯಭಾಗಗಳನ್ನು (ಅನೈತಿಕ ಸಂಗದಿಂದ) ಕಾಪಾಡುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَٰنُهُمْ فَإِنَّهُمْ غَيْرُ مَلُومِينَ

Kannada Translation - Hamza Buturತಮ್ಮ ಮಡದಿಯರು ಅಥವಾ ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಜೊತೆಗೆ ಹೊರತು. ಇವರು ಆಕ್ಷೇಪಾರ್ಹರಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَنِ ٱبْتَغَىٰ وَرَآءَ ذَٰلِكَ فَأُو۟لَٰٓئِكَ هُمُ ٱلْعَادُونَ

Kannada Translation - Hamza Buturಆದರೆ ಯಾರು ಇವರ ಹೊರತಾದವರನ್ನು ಹುಡುಕುತ್ತಾರೋ ಅವರೇ ಅತಿರೇಕಿಗಳು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ لِأَمَٰنَٰتِهِمْ وَعَهْدِهِمْ رَٰعُونَ

Kannada Translation - Hamza Buturಅವರು ಯಾರೆಂದರೆ, ತಮ್ಮ ವಿಶ್ವಸ್ಥತೆಯನ್ನು ಮತ್ತು ಕರಾರುಗಳನ್ನು ಕಾಪಾಡುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُمْ عَلَىٰ صَلَوَٰتِهِمْ يُحَافِظُونَ

Kannada Translation - Hamza Buturತಮ್ಮ ನಮಾಝ್‍ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أُو۟لَٰٓئِكَ هُمُ ٱلْوَٰرِثُونَ

Kannada Translation - Hamza Buturಅವರೇ ವಾರಸುದಾರರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ يَرِثُونَ ٱلْفِرْدَوْسَ هُمْ فِيهَا خَٰلِدُونَ

Kannada Translation - Hamza Buturಅಂದರೆ, ಅತ್ಯುನ್ನತ ಸ್ವರ್ಗವನ್ನು (ಫಿರ್ದೌಸ್) ವಾರೀಸಾಗಿ ಪಡೆಯುವವರು. ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ خَلَقْنَا ٱلْإِنسَٰنَ مِن سُلَٰلَةٍ مِّن طِينٍ

Kannada Translation - Hamza Buturನಿಶ್ಚಯವಾಗಿಯೂ ನಾವು ಮನುಷ್ಯನನ್ನು ಜೇಡಿಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ جَعَلْنَٰهُ نُطْفَةً فِى قَرَارٍ مَّكِينٍ

Kannada Translation - Hamza Buturನಂತರ ಅವನನ್ನು ವೀರ್ಯವಾಗಿ ಮಾಡಿ ಒಂದು ಭದ್ರ ಸ್ಥಳದಲ್ಲಿಟ್ಟೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ خَلَقْنَا ٱلنُّطْفَةَ عَلَقَةً فَخَلَقْنَا ٱلْعَلَقَةَ مُضْغَةً فَخَلَقْنَا ٱلْمُضْغَةَ عِظَٰمًا فَكَسَوْنَا ٱلْعِظَٰمَ لَحْمًا ثُمَّ أَنشَأْنَٰهُ خَلْقًا ءَاخَرَ فَتَبَارَكَ ٱللَّهُ أَحْسَنُ ٱلْخَٰلِقِينَ

Kannada Translation - Hamza Buturನಂತರ ಆ ವೀರ್ಯವನ್ನು ಹೆಪ್ಪುಗಟ್ಟಿದ ರಕ್ತಪಿಂಡವಾಗಿ ಮಾಡಿದೆವು. ನಂತರ ಆ ರಕ್ತಪಿಂಡವನ್ನು ಮಾಂಸದ ಮುದ್ದೆಯಾಗಿ ಮಾಡಿದೆವು. ನಂತರ ಆ ಮಾಂಸದ ಮುದ್ದೆಯನ್ನು ಮೂಳೆಗಳಾಗಿ ಮಾಡಿದೆವು. ನಂತರ ಆ ಮೂಳೆಗಳನ್ನು ಮಾಂಸದಿಂದ ಹೊದಿಸಿದೆವು. ನಂತರ ಅದನ್ನು ಇನ್ನೊಂದು ಸೃಷ್ಟಿಯಾಗಿ ಬೆಳೆಸಿದೆವು. ಆದ್ದರಿಂದ ಅತ್ಯುತ್ತಮ ಸೃಷ್ಟಿಕರ್ತನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِنَّكُم بَعْدَ ذَٰلِكَ لَمَيِّتُونَ

Kannada Translation - Hamza Buturನಂತರ ಅದರ ಬಳಿಕ ನೀವು ಖಂಡಿತ ಸಾಯುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ إِنَّكُمْ يَوْمَ ٱلْقِيَٰمَةِ تُبْعَثُونَ

Kannada Translation - Hamza Buturನಂತರ ಪುನರುತ್ಥಾನ ದಿನದಂದು ನಿಮ್ಮನ್ನು ಖಂಡಿತ ಜೀವ ನೀಡಿ ಎಬ್ಬಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ خَلَقْنَا فَوْقَكُمْ سَبْعَ طَرَآئِقَ وَمَا كُنَّا عَنِ ٱلْخَلْقِ غَٰفِلِينَ

Kannada Translation - Hamza Buturನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಆಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಸೃಷ್ಟಿಯ ಬಗ್ಗೆ ಯಾವತ್ತೂ ನಿರ್ಲಕ್ಷ್ಯರಾಗಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَنزَلْنَا مِنَ ٱلسَّمَآءِ مَآءًۢ بِقَدَرٍ فَأَسْكَنَّٰهُ فِى ٱلْأَرْضِ وَإِنَّا عَلَىٰ ذَهَابٍۭ بِهِۦ لَقَٰدِرُونَ

Kannada Translation - Hamza Buturನಾವು ಆಕಾಶದಿಂದ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯನ್ನು ಸುರಿಸಿ, ಅದನ್ನು ಭೂಮಿಯಲ್ಲಿ ತಂಗುವಂತೆ ಮಾಡಿದೆವು. ಅದನ್ನು ಇಂಗಿ ಹೋಗುವಂತೆ ಮಾಡಲು ನಮಗೆ ಖಂಡಿತ ಸಾಮರ್ಥ್ಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَنشَأْنَا لَكُم بِهِۦ جَنَّٰتٍ مِّن نَّخِيلٍ وَأَعْنَٰبٍ لَّكُمْ فِيهَا فَوَٰكِهُ كَثِيرَةٌ وَمِنْهَا تَأْكُلُونَ

Kannada Translation - Hamza Buturನಂತರ ಅದರಿಂದ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷಿ ತೋಟಗಳನ್ನು ನಿರ್ಮಿಸಿಕೊಟ್ಟೆವು. ಅವುಗಳಲ್ಲಿ ನಿಮಗೆ ಹೇರಳ ಹಣ್ಣು-ಹಂಪಲುಗಳಿವೆ. ಅದರಿಂದಲೇ ನೀವು ತಿನ್ನುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَشَجَرَةً تَخْرُجُ مِن طُورِ سَيْنَآءَ تَنۢبُتُ بِٱلدُّهْنِ وَصِبْغٍ لِّلْـَٔاكِلِينَ

Kannada Translation - Hamza Buturಸೀನಾ ಪರ್ವತದಲ್ಲಿ ಬೆಳೆಯುವ ಒಂದು ಮರವನ್ನು ನಾವು ಸೃಷ್ಟಿಸಿದ್ದೇವೆ. ಅದು ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಆಹಾರ ಸೇವಿಸುವವರಿಗೆ ಪಲ್ಯವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ لَكُمْ فِى ٱلْأَنْعَٰمِ لَعِبْرَةً نُّسْقِيكُم مِّمَّا فِى بُطُونِهَا وَلَكُمْ فِيهَا مَنَٰفِعُ كَثِيرَةٌ وَمِنْهَا تَأْكُلُونَ

Kannada Translation - Hamza Buturನಿಶ್ಚಯವಾಗಿಯೂ ನಿಮಗೆ ಜಾನುವಾರುಗಳಲ್ಲಿ ನೀತಿಪಾಠವಿದೆ. ಅವುಗಳ ಹೊಟ್ಟೆಗಳಲ್ಲಿ ಏನಿದೆಯೋ ಅದರಿಂದ ನಾವು ನಿಮಗೆ ಕುಡಿಯಲು (ಹಾಲು) ನೀಡುತ್ತೇವೆ. ಅವುಗಳಿಂದ ನಿಮಗೆ ಹಲವಾರು ಉಪಕಾರಗಳಿವೆ. ಅವುಗಳ ಮಾಂಸವನ್ನೂ ನೀವು ತಿನ್ನುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَعَلَيْهَا وَعَلَى ٱلْفُلْكِ تُحْمَلُونَ

Kannada Translation - Hamza Buturಅವುಗಳ ಬೆನ್ನುಗಳಲ್ಲಿ ಮತ್ತು ನಾವೆಗಳಲ್ಲಿ ನೀವು ಸವಾರಿ ಮಾಡುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ أَرْسَلْنَا نُوحًا إِلَىٰ قَوْمِهِۦ فَقَالَ يَٰقَوْمِ ٱعْبُدُوا۟ ٱللَّهَ مَا لَكُم مِّنْ إِلَٰهٍ غَيْرُهُۥٓ أَفَلَا تَتَّقُونَ

Kannada Translation - Hamza Buturನಾವು ನೂಹರನ್ನು ಅವರ ಜನರ ಬಳಿಗೆ ಸಂದೇಶವಾಹಕರಾಗಿ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರು ನಿಮಗಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَالَ ٱلْمَلَؤُا۟ ٱلَّذِينَ كَفَرُوا۟ مِن قَوْمِهِۦ مَا هَٰذَآ إِلَّا بَشَرٌ مِّثْلُكُمْ يُرِيدُ أَن يَتَفَضَّلَ عَلَيْكُمْ وَلَوْ شَآءَ ٱللَّهُ لَأَنزَلَ مَلَٰٓئِكَةً مَّا سَمِعْنَا بِهَٰذَا فِىٓ ءَابَآئِنَا ٱلْأَوَّلِينَ

Kannada Translation - Hamza Buturಆಗ ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ಇವನು ನಿಮಗಿಂತಲೂ ಹೆಚ್ಚು ಶ್ರೇಷ್ಠನಾಗಲು ಬಯಸುತ್ತಿದ್ದಾನೆ. ಅಲ್ಲಾಹು ಇಚ್ಛಿಸಿದ್ದರೆ ದೇವದೂತರನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರ ಕಾಲದಿಂದ ಇಂತಹ ಒಂದು ಸುದ್ದಿಯನ್ನು ಕೇಳಿಯೇ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنْ هُوَ إِلَّا رَجُلٌۢ بِهِۦ جِنَّةٌ فَتَرَبَّصُوا۟ بِهِۦ حَتَّىٰ حِينٍ

Kannada Translation - Hamza Buturಈತ ಬುದ್ಧಿಸ್ತಿಮಿತ ಕಳಕೊಂಡ ವ್ಯಕ್ತಿಯಾಗಿದ್ದಾನೆ. ಆದ್ದರಿಂದ ಇವನ ವಿಷಯದಲ್ಲಿ ಸ್ವಲ್ಪ ಸಮಯ ಕಾಯಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ رَبِّ ٱنصُرْنِى بِمَا كَذَّبُونِ

Kannada Translation - Hamza Buturನೂಹ್ ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَوْحَيْنَآ إِلَيْهِ أَنِ ٱصْنَعِ ٱلْفُلْكَ بِأَعْيُنِنَا وَوَحْيِنَا فَإِذَا جَآءَ أَمْرُنَا وَفَارَ ٱلتَّنُّورُ فَٱسْلُكْ فِيهَا مِن كُلٍّ زَوْجَيْنِ ٱثْنَيْنِ وَأَهْلَكَ إِلَّا مَن سَبَقَ عَلَيْهِ ٱلْقَوْلُ مِنْهُمْ وَلَا تُخَٰطِبْنِى فِى ٱلَّذِينَ ظَلَمُوٓا۟ إِنَّهُم مُّغْرَقُونَ

Kannada Translation - Hamza Buturಆಗ ನಾವು ಅವರಿಗೆ ದೇವವಾಣಿಯನ್ನು ನೀಡಿದೆವು: ನಮ್ಮ ಕಣ್ಣುಗಳ ಮುಂಭಾಗದಲ್ಲಿ ನಮ್ಮ ದೇವವಾಣಿಯ ನಿರ್ದೇಶನದಂತೆ ನೀವು ಒಂದು ನಾವೆಯನ್ನು ನಿರ್ಮಿಸಿರಿ. ನಂತರ ನಮ್ಮ ಆಜ್ಞೆಯು ಬಂದು ಒಲೆ ಉಕ್ಕಿ ಹರಿದಾಗ, ಎಲ್ಲಾ ಜೀವಿಗಳ ಒಂದೊಂದು ಜೋಡಿಯನ್ನು (ಗಂಡು ಮತ್ತು ಹೆಣ್ಣು) ಅದರಲ್ಲಿ ಹತ್ತಿಸಿರಿ. ತಮ್ಮ ಕುಟುಂಬದವರಲ್ಲಿ ಯಾರ ಮೇಲೆ ಅಲ್ಲಾಹನ ಮಾತು ಖಾತ್ರಿಯಾಗಿದೆಯೋ ಅವರನ್ನು ಬಿಟ್ಟು ಉಳಿದವರನ್ನು ಹತ್ತಿಸಿರಿ. ಅಕ್ರಮಿಗಳ ವಿಷಯದಲ್ಲಿ ನನ್ನೊಂದಿಗೆ ಮಾತನಾಡಬೇಡಿ. ನಿಶ್ಚಯವಾಗಿಯೂ ಅವರು ಮುಳುಗಿ ಸಾಯುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا ٱسْتَوَيْتَ أَنتَ وَمَن مَّعَكَ عَلَى ٱلْفُلْكِ فَقُلِ ٱلْحَمْدُ لِلَّهِ ٱلَّذِى نَجَّىٰنَا مِنَ ٱلْقَوْمِ ٱلظَّٰلِمِينَ

Kannada Translation - Hamza Buturನಂತರ ನೀವು ಮತ್ತು ನಿಮ್ಮ ಜೊತೆಯಲ್ಲಿರುವವರು ನಾವೆಯಲ್ಲಿ ಆರೂಢರಾದಾಗ, “ಅಕ್ರಮಿಗಳಾದ ಜನರಿಂದ ನಮ್ಮನ್ನು ಪಾರುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ” ಎಂದು ಹೇಳಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقُل رَّبِّ أَنزِلْنِى مُنزَلًا مُّبَارَكًا وَأَنتَ خَيْرُ ٱلْمُنزِلِينَ

Kannada Translation - Hamza Buturಹೇಳಿರಿ: “ಓ ನನ್ನ ಪರಿಪಾಲಕನೇ! ನನ್ನನ್ನು ಸಮೃದ್ಧವಾದ ಸ್ಥಳದಲ್ಲಿ ಇಳಿಸು. ಇಳಿಸುವವರಲ್ಲಿ ನೀನು ಅತಿಶ್ರೇಷ್ಠನಾಗಿರುವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ فِى ذَٰلِكَ لَـَٔايَٰتٍ وَإِن كُنَّا لَمُبْتَلِينَ

Kannada Translation - Hamza Buturನಿಶ್ಚಯವಾಗಿಯೂ ಅದರಲ್ಲಿ (ಜಲಪ್ರಳಯದಲ್ಲಿ) ಅನೇಕ ದೃಷ್ಟಾಂತಗಳಿವೆ. ನಿಜಕ್ಕೂ ನಾವು ಪರೀಕ್ಷಿಸುವವರೇ ಆಗಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَنشَأْنَا مِنۢ بَعْدِهِمْ قَرْنًا ءَاخَرِينَ

Kannada Translation - Hamza Buturನಂತರ, ಅವರ ಬಳಿಕ ನಾವು ಇನ್ನೊಂದು ತಲೆಮಾರನ್ನು ಸೃಷ್ಟಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَرْسَلْنَا فِيهِمْ رَسُولًا مِّنْهُمْ أَنِ ٱعْبُدُوا۟ ٱللَّهَ مَا لَكُم مِّنْ إِلَٰهٍ غَيْرُهُۥٓ أَفَلَا تَتَّقُونَ

Kannada Translation - Hamza Buturಅವರ ಬಳಿಗೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಕಳುಹಿಸಿದೆವು. (ಅವರು ಹೇಳಿದರು): “ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالَ ٱلْمَلَأُ مِن قَوْمِهِ ٱلَّذِينَ كَفَرُوا۟ وَكَذَّبُوا۟ بِلِقَآءِ ٱلْـَٔاخِرَةِ وَأَتْرَفْنَٰهُمْ فِى ٱلْحَيَوٰةِ ٱلدُّنْيَا مَا هَٰذَآ إِلَّا بَشَرٌ مِّثْلُكُمْ يَأْكُلُ مِمَّا تَأْكُلُونَ مِنْهُ وَيَشْرَبُ مِمَّا تَشْرَبُونَ

Kannada Translation - Hamza Buturಅವರ ಜನರಲ್ಲಿದ್ದ, ಸತ್ಯನಿಷೇಧಿಗಳಾದ ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದ ಮುಖಂಡರು—ನಾವು ಅವರಿಗೆ ಐಹಿಕ ಸುಖಭೋಗಗಳನ್ನು ನೀಡಿದ್ದೆವು—ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ನೀವು ತಿನ್ನುವುದನ್ನೇ ಇವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَئِنْ أَطَعْتُم بَشَرًا مِّثْلَكُمْ إِنَّكُمْ إِذًا لَّخَٰسِرُونَ

Kannada Translation - Hamza Buturನೀವು ನಿಮ್ಮಂತಿರುವ ಒಬ್ಬ ಮನುಷ್ಯನನ್ನು ಅನುಸರಿಸಿದರೆ, ನೀವು ಖಂಡಿತ ನಷ್ಟ ಹೊಂದುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَيَعِدُكُمْ أَنَّكُمْ إِذَا مِتُّمْ وَكُنتُمْ تُرَابًا وَعِظَٰمًا أَنَّكُم مُّخْرَجُونَ

Kannada Translation - Hamza Buturನೀವು ಸತ್ತು, ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಿಮಗೆ ಪುನಃ ಜೀವ ನೀಡಿ ಹೊರತೆಗೆಯಲಾಗುವುದೆಂದು ಇವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَيْهَاتَ هَيْهَاتَ لِمَا تُوعَدُونَ

Kannada Translation - Hamza Buturನಿಮಗೆ ವಾಗ್ದಾನ ಮಾಡಲಾಗುತ್ತಿರುವ ಈ ವಿಷಯವು ಬಹಳ ದೂರದಲ್ಲಿದೆ! ಬಹಳ ದೂರದಲ್ಲಿದೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنْ هِىَ إِلَّا حَيَاتُنَا ٱلدُّنْيَا نَمُوتُ وَنَحْيَا وَمَا نَحْنُ بِمَبْعُوثِينَ

Kannada Translation - Hamza Buturಜೀವನವೆಂದರೆ ನಮ್ಮ ಈ ಇಹಲೋಕದ ಜೀವನದ ಮಾತ್ರ. ಇಲ್ಲಿ ನಾವು ಹುಟ್ಟುತ್ತಲೂ ಸಾಯುತ್ತಲೂ ಇರುತ್ತೇವೆ. ನಮಗೆ ಜೀವ ನೀಡಿ ಎಬ್ಬಿಸಲಾಗುವ ಸಂಗತಿಯೇ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنْ هُوَ إِلَّا رَجُلٌ ٱفْتَرَىٰ عَلَى ٱللَّهِ كَذِبًا وَمَا نَحْنُ لَهُۥ بِمُؤْمِنِينَ

Kannada Translation - Hamza Buturಇವನು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವ ವ್ಯಕ್ತಿ. ನಾವು ಇವನಲ್ಲಿ ವಿಶ್ವಾಸವಿಡುವುದೇ ಇಲ್ಲ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ رَبِّ ٱنصُرْنِى بِمَا كَذَّبُونِ

Kannada Translation - Hamza Buturಅವರು (ಸಂದೇಶವಾಹಕರು) ಹೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ عَمَّا قَلِيلٍ لَّيُصْبِحُنَّ نَٰدِمِينَ

Kannada Translation - Hamza Buturಅಲ್ಲಾಹು ಹೇಳಿದನು: “ಅವರು ಶೀಘ್ರದಲ್ಲೇ ಖಂಡಿತ ಮರುಗುವ ಸ್ಥಿತಿಯಲ್ಲಾಗುವರು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَخَذَتْهُمُ ٱلصَّيْحَةُ بِٱلْحَقِّ فَجَعَلْنَٰهُمْ غُثَآءً فَبُعْدًا لِّلْقَوْمِ ٱلظَّٰلِمِينَ

Kannada Translation - Hamza Buturನಂತರ ಒಂದು ಭಯಾನಕ ಚೀತ್ಕಾರವು ನ್ಯಾಯಯುತವಾಗಿ ಅವರನ್ನು ಹಿಡಿದುಕೊಂಡಿತು. ನಾವು ಅವರನ್ನು ಕಸಕಡ್ಡಿಗಳಂತೆ ಮಾಡಿದೆವು. ಅಕ್ರಮವೆಸಗಿದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَنشَأْنَا مِنۢ بَعْدِهِمْ قُرُونًا ءَاخَرِينَ

Kannada Translation - Hamza Buturನಂತರ, ಅವರ ಬಳಿಕ ನಾವು ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا تَسْبِقُ مِنْ أُمَّةٍ أَجَلَهَا وَمَا يَسْتَـْٔخِرُونَ

Kannada Translation - Hamza Buturಯಾವುದೇ ಸಮುದಾಯವು ಅದಕ್ಕೆ ನಿಶ್ಚಯಿಸಲಾದ ಅವಧಿಯನ್ನು ದಾಟಿ ಹೋಗುವುದಿಲ್ಲ. ಅವರು ಹಿಂದೆ ಉಳಿಯುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَرْسَلْنَا رُسُلَنَا تَتْرَا كُلَّ مَا جَآءَ أُمَّةً رَّسُولُهَا كَذَّبُوهُ فَأَتْبَعْنَا بَعْضَهُم بَعْضًا وَجَعَلْنَٰهُمْ أَحَادِيثَ فَبُعْدًا لِّقَوْمٍ لَّا يُؤْمِنُونَ

Kannada Translation - Hamza Buturನಂತರ ನಾವು ಸತತವಾಗಿ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು. ಯಾವುದೇ ಸಮುದಾಯಕ್ಕೆ ಅವರ ಸಂದೇಶವಾಹಕರು ಬಂದಾಗಲೆಲ್ಲ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನಾವು ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಹಿಂಬಾಲಿಸುವಂತೆ ಮಾಡಿ, ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು. ವಿಶ್ವಾಸವಿಡದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ أَرْسَلْنَا مُوسَىٰ وَأَخَاهُ هَٰرُونَ بِـَٔايَٰتِنَا وَسُلْطَٰنٍ مُّبِينٍ

Kannada Translation - Hamza Buturನಂತರ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ فِرْعَوْنَ وَمَلَإِي۟هِۦ فَٱسْتَكْبَرُوا۟ وَكَانُوا۟ قَوْمًا عَالِينَ

Kannada Translation - Hamza Buturಫರೋಹ ಮತ್ತು ಅವನ ಜನರ ಮುಖಂಡರ ಬಳಿಗೆ. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಮಹಾ ದರ್ಪದ ಜನರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَالُوٓا۟ أَنُؤْمِنُ لِبَشَرَيْنِ مِثْلِنَا وَقَوْمُهُمَا لَنَا عَٰبِدُونَ

Kannada Translation - Hamza Buturಅವರು ಹೇಳಿದರು: “ಏನು? ನಾವು ನಮ್ಮಂತಿರುವ ಇಬ್ಬರು ವ್ಯಕ್ತಿಗಳಲ್ಲಿ ವಿಶ್ವಾಸವಿಡಬೇಕೇ? ಅದೂ ಅವರ ಜನರು ನಮ್ಮ ಗುಲಾಮರಾಗಿರುವಾಗ!”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَكَذَّبُوهُمَا فَكَانُوا۟ مِنَ ٱلْمُهْلَكِينَ

Kannada Translation - Hamza Buturಅವರು ಅವರಿಬ್ಬರನ್ನೂ ನಿಷೇಧಿಸಿದರು. ಆದ್ದರಿಂದ ಅವರು ವಿನಾಶ ಹೊಂದಿದವರಲ್ಲಿ ಸೇರಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ ءَاتَيْنَا مُوسَى ٱلْكِتَٰبَ لَعَلَّهُمْ يَهْتَدُونَ

Kannada Translation - Hamza Buturನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರು (ಇಸ್ರಾಯೇಲ್ ಮಕ್ಕಳು) ಸನ್ಮಾರ್ಗ ಪಡೆಯಲೆಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا ٱبْنَ مَرْيَمَ وَأُمَّهُۥٓ ءَايَةً وَءَاوَيْنَٰهُمَآ إِلَىٰ رَبْوَةٍ ذَاتِ قَرَارٍ وَمَعِينٍ

Kannada Translation - Hamza Buturನಾವು ಮರ್ಯಮರ ಪುತ್ರ ಈಸಾರನ್ನು ಮತ್ತು ಅವರ ತಾಯಿಯನ್ನು ಒಂದು ದೃಷ್ಟಾಂತವಾಗಿ ಮಾಡಿದೆವು. ವಾಸಯೋಗ್ಯವಾದ ಮತ್ತು ನೀರಿನ ಚಿಲುಮೆಯಿರುವ ಒಂದು ಎತ್ತರದ ಸ್ಥಳದಲ್ಲಿ ನಾವು ಅವರಿಬ್ಬರಿಗೆ ಆಶ್ರಯ ನೀಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰٓأَيُّهَا ٱلرُّسُلُ كُلُوا۟ مِنَ ٱلطَّيِّبَٰتِ وَٱعْمَلُوا۟ صَٰلِحًا إِنِّى بِمَا تَعْمَلُونَ عَلِيمٌ

Kannada Translation - Hamza Buturಸಂದೇಶವಾಹಕರುಗಳೇ![[ ImageMedia, 22-01-2024 18:07]] ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಸತ್ಕರ್ಮ ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ನಾನು ತಿಳಿಯುತ್ತಿದ್ದೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ هَٰذِهِۦٓ أُمَّتُكُمْ أُمَّةً وَٰحِدَةً وَأَنَا۠ رَبُّكُمْ فَٱتَّقُونِ

Kannada Translation - Hamza Buturನಿಶ್ಚಯವಾಗಿಯೂ ಇದು ನಿಮ್ಮ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮ ಪರಿಪಾಲಕನಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَتَقَطَّعُوٓا۟ أَمْرَهُم بَيْنَهُمْ زُبُرًا كُلُّ حِزْبٍۭ بِمَا لَدَيْهِمْ فَرِحُونَ

Kannada Translation - Hamza Buturನಂತರ ಅವರು ತಮ್ಮ ವಿಷಯದಲ್ಲಿ (ಧರ್ಮದಲ್ಲಿ) ಭಿನ್ನಮತ ತಳೆದು ಹಲವು ಗುಂಪುಗಳಾಗಿ ವಿಭಜನೆಯಾದರು. ಎಲ್ಲಾ ಗುಂಪುಗಳೂ ಅವರ ಬಳಿ ಏನಿದೆಯೋ ಅದರಲ್ಲೇ ಖುಷಿಪಡುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَرْهُمْ فِى غَمْرَتِهِمْ حَتَّىٰ حِينٍ

Kannada Translation - Hamza Buturಆದ್ದರಿಂದ (ಪ್ರವಾದಿಯವರೇ) ನೀವು ಅವರನ್ನು ಒಂದು ಅವಧಿಯವರೆಗೆ ಅವರ ಗೊಂದಲದಲ್ಲೇ ಇರಲು ಬಿಟ್ಟುಬಿಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَيَحْسَبُونَ أَنَّمَا نُمِدُّهُم بِهِۦ مِن مَّالٍ وَبَنِينَ

Kannada Translation - Hamza Buturಅವರೇನು ಭಾವಿಸುತ್ತಿದ್ದಾರೆ? ನಾವು ಅವರಿಗೆ ಆಸ್ತಿ ಮತ್ತು ಮಕ್ಕಳನ್ನು ಹೆಚ್ಚಿಸುತ್ತಿರುವುದು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نُسَارِعُ لَهُمْ فِى ٱلْخَيْرَٰتِ بَل لَّا يَشْعُرُونَ

Kannada Translation - Hamza Buturಅವರಿಗೆ ಒಳಿತುಗಳನ್ನು ನೀಡಲು ನಾವು ತ್ವರೆ ಮಾಡುತ್ತಿದ್ದೇವೆ ಎಂದೇ? ಅಲ್ಲ, ಅವರು (ಸತ್ಯಸಂಗತಿಯನ್ನು) ತಿಳಿಯುವುದಿಲ್ಲ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ هُم مِّنْ خَشْيَةِ رَبِّهِم مُّشْفِقُونَ

Kannada Translation - Hamza Buturನಿಶ್ಚಯವಾಗಿಯೂ ತಮ್ಮ ಪರಿಪಾಲಕನ (ಅಲ್ಲಾಹನ) ಭಯದಿಂದ ನಡುಗುವವರು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُم بِـَٔايَٰتِ رَبِّهِمْ يُؤْمِنُونَ

Kannada Translation - Hamza Buturತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ವಿಶ್ವಾಸವಿಡುವವರು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ هُم بِرَبِّهِمْ لَا يُشْرِكُونَ

Kannada Translation - Hamza Buturತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡದವರು,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِينَ يُؤْتُونَ مَآ ءَاتَوا۟ وَّقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَٰجِعُونَ

Kannada Translation - Hamza Buturಕೊಡುವುದೆಲ್ಲವನ್ನೂ ಕೊಡುವವರು ಮತ್ತು ನಮಗೆ ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಬೇಕಾಗಿದೆಯೆಂದು ಹೃದಯಗಳಲ್ಲಿ ಭಯವನ್ನು ಹೊಂದಿರುವವರು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أُو۟لَٰٓئِكَ يُسَٰرِعُونَ فِى ٱلْخَيْرَٰتِ وَهُمْ لَهَا سَٰبِقُونَ

Kannada Translation - Hamza Buturಅವರೇ ಒಳಿತಿನ ವಿಷಯಗಳಲ್ಲಿ ತ್ವರೆ ಮಾಡುವವರು. ಅವರೇ ಅದರಲ್ಲಿ ಮುಂಚೂಣಿಯಲ್ಲಿರುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا نُكَلِّفُ نَفْسًا إِلَّا وُسْعَهَا وَلَدَيْنَا كِتَٰبٌ يَنطِقُ بِٱلْحَقِّ وَهُمْ لَا يُظْلَمُونَ

Kannada Translation - Hamza Buturಯಾವುದೇ ಮನುಷ್ಯನ ಮೇಲೂ ಅವನ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ನಾವು ಹೊರಿಸುವುದಿಲ್ಲ. ಸತ್ಯ ಸಮೇತ ಮಾತನಾಡುವ ಒಂದು ಗ್ರಂಥವು ನಮ್ಮ ಬಳಿಯಿದೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ قُلُوبُهُمْ فِى غَمْرَةٍ مِّنْ هَٰذَا وَلَهُمْ أَعْمَٰلٌ مِّن دُونِ ذَٰلِكَ هُمْ لَهَا عَٰمِلُونَ

Kannada Translation - Hamza Buturಆದರೆ, ಅವರ ಹೃದಯಗಳು ಈ ವಿಷಯದಲ್ಲಿ ನಿರ್ಲಕ್ಷ್ಯವಾಗಿವೆ. ಅವರಿಗೆ ಇದರ ಹೊರತಾಗಿರುವ ಬೇರೆ ದುಷ್ಕರ್ಮಗಳೂ ಇವೆ. ಅವರು ಅದನ್ನು ಮಾಡುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَآ أَخَذْنَا مُتْرَفِيهِم بِٱلْعَذَابِ إِذَا هُمْ يَجْـَٔرُونَ

Kannada Translation - Hamza Buturಎಲ್ಲಿಯವರೆಗೆಂದರೆ, ನಾವು ಅವರಲ್ಲಿನ ಸಂಪನ್ನರನ್ನು ಶಿಕ್ಷೆಯ ಮೂಲಕ ಹಿಡಿದುಕೊಂಡಾಗ ಅಗೋ! ಅವರು ಗೋಗರೆಯುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا تَجْـَٔرُوا۟ ٱلْيَوْمَ إِنَّكُم مِّنَّا لَا تُنصَرُونَ

Kannada Translation - Hamza Buturಇಂದು ನೀವು ಗೋಗರೆಯಬೇಕಾಗಿಲ್ಲ. ನಿಶ್ಚಯವಾಗಿಯೂ ನಿಮಗೆ ನಮ್ಮ ಕಡೆಯಿಂದ ಸಹಾಯವು ದೊರೆಯುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَدْ كَانَتْ ءَايَٰتِى تُتْلَىٰ عَلَيْكُمْ فَكُنتُمْ عَلَىٰٓ أَعْقَٰبِكُمْ تَنكِصُونَ

Kannada Translation - Hamza Buturನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುತ್ತಿತ್ತು. ಆಗ ನೀವು ನಿಮ್ಮ ಹಿಮ್ಮಡಿಗಳಲ್ಲಿ ಹಿಂದಕ್ಕೆ ತಿರುಗಿ ನಡೆಯುತ್ತಿದ್ದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مُسْتَكْبِرِينَ بِهِۦ سَٰمِرًا تَهْجُرُونَ

Kannada Translation - Hamza Buturಅಹಂಕಾರದಿಂದ ವರ್ತಿಸುತ್ತಾ (ನಡೆಯುತ್ತಿದ್ದಿರಿ). ಅದೊಂದು ರಾತ್ರಿ ಕಥೆಯೋ ಎಂಬಂತೆ ನೀವು ಅದರ (ಕುರ್‌ಆನ್‍ನ) ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَلَمْ يَدَّبَّرُوا۟ ٱلْقَوْلَ أَمْ جَآءَهُم مَّا لَمْ يَأْتِ ءَابَآءَهُمُ ٱلْأَوَّلِينَ

Kannada Translation - Hamza Buturಅವರು ಈ ಮಾತಿನ (ಕುರ್‌ಆನಿನ) ಬಗ್ಗೆ ಆಳವಾಗಿ ಯೋಚಿಸುವುದಿಲ್ಲವೇ? ಅಥವಾ, ಅವರ ಪೂರ್ವಜರ ಬಳಿಗೆ ಬರದೇ ಇರುವಂತದ್ದು ಇವರ ಬಳಿಗೆ ಬಂದಿದೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ لَمْ يَعْرِفُوا۟ رَسُولَهُمْ فَهُمْ لَهُۥ مُنكِرُونَ

Kannada Translation - Hamza Buturಅವರಿಗೆ ಅವರ ಸಂದೇಶವಾಹಕರ ಪರಿಚಯವಿಲ್ಲದಿರುವುದರಿಂದ ಅವರು ಅವರನ್ನು ನಿಷೇಧಿಸುತ್ತಿದ್ದಾರೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ يَقُولُونَ بِهِۦ جِنَّةٌۢ بَلْ جَآءَهُم بِٱلْحَقِّ وَأَكْثَرُهُمْ لِلْحَقِّ كَٰرِهُونَ

Kannada Translation - Hamza Buturಅವರಿಗೆ (ಪ್ರವಾದಿಗೆ) ಬುದ್ಧಿಭ್ರಮಣೆಯಾಗಿದೆಯೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوِ ٱتَّبَعَ ٱلْحَقُّ أَهْوَآءَهُمْ لَفَسَدَتِ ٱلسَّمَٰوَٰتُ وَٱلْأَرْضُ وَمَن فِيهِنَّ بَلْ أَتَيْنَٰهُم بِذِكْرِهِمْ فَهُمْ عَن ذِكْرِهِم مُّعْرِضُونَ

Kannada Translation - Hamza Buturಒಂದು ವೇಳೆ ಸತ್ಯವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದ್ದರೆ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಎಲ್ಲರೂ ನಾಶವಾಗುತ್ತಿದ್ದರು. ಅಲ್ಲ, ವಾಸ್ತವವಾಗಿ ನಾವು ಅವರಿಗೆ ನಮ್ಮ ಉಪದೇಶವನ್ನು ತಲುಪಿಸಿದ್ದೇವೆ. ಆದರೆ ಅವರು ಅವರಿಗೆ ನೀಡಲಾದ ಉಪದೇಶದಿಂದ ವಿಮುಖರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ تَسْـَٔلُهُمْ خَرْجًا فَخَرَاجُ رَبِّكَ خَيْرٌ وَهُوَ خَيْرُ ٱلرَّٰزِقِينَ

Kannada Translation - Hamza Buturನೀವು ಅವರೊಡನೆ ಏನಾದರೂ ಪ್ರತಿಫಲವನ್ನು ಕೇಳುತ್ತಿದ್ದೀರಾ? ನಿಮಗಂತೂ ನಿಮ್ಮ ಪರಿಪಾಲಕನು (ಅಲ್ಲಾಹು) ಕೊಡುವ ಪ್ರತಿಫಲವೇ ಅತ್ಯುತ್ತಮವಾಗಿದೆ. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّكَ لَتَدْعُوهُمْ إِلَىٰ صِرَٰطٍ مُّسْتَقِيمٍ

Kannada Translation - Hamza Buturನಿಶ್ಚಯವಾಗಿಯೂ ನೀವು ಅವರನ್ನು ನೇರಮಾರ್ಗಕ್ಕೆ ಕರೆಯುತ್ತಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ ٱلَّذِينَ لَا يُؤْمِنُونَ بِٱلْـَٔاخِرَةِ عَنِ ٱلصِّرَٰطِ لَنَٰكِبُونَ

Kannada Translation - Hamza Buturನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರು ಆ ಮಾರ್ಗದಿಂದ ತಪ್ಪಿಹೋಗುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ رَحِمْنَٰهُمْ وَكَشَفْنَا مَا بِهِم مِّن ضُرٍّ لَّلَجُّوا۟ فِى طُغْيَٰنِهِمْ يَعْمَهُونَ

Kannada Translation - Hamza Buturನಾವು ಅವರ ಮೇಲೆ ದಯೆ ತೋರಿ ಅವರ ಕಷ್ಟವನ್ನು ದೂರೀಕರಿಸಿದರೆ, ಅವರು ತಮ್ಮ ಅತಿರೇಕದಲ್ಲಿ ಅಂಧವಾಗಿ ವಿಹರಿಸುವುದನ್ನು ಹಟದಿಂದ ಮುಂದುವರಿಸುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ أَخَذْنَٰهُم بِٱلْعَذَابِ فَمَا ٱسْتَكَانُوا۟ لِرَبِّهِمْ وَمَا يَتَضَرَّعُونَ

Kannada Translation - Hamza Buturನಾವು ಅವರನ್ನು ಶಿಕ್ಷೆಯ ಮೂಲಕವೂ ಹಿಡಿದಿದ್ದೆವು. ಆದರೂ ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಲಿಲ್ಲ, ವಿನಮ್ರತೆಯನ್ನೂ ತೋರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَا فَتَحْنَا عَلَيْهِم بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ

Kannada Translation - Hamza Buturಎಲ್ಲಿಯವರೆಗೆಂದರೆ, ನಾವು ಅವರ ಮೇಲೆ ಕಠೋರ ಶಿಕ್ಷೆಯ ಬಾಗಿಲನ್ನು ತೆರೆದುಕೊಟ್ಟಾಗ, ಅಗೋ! ಅವರು ಹತಾಶರಾಗುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ ٱلَّذِىٓ أَنشَأَ لَكُمُ ٱلسَّمْعَ وَٱلْأَبْصَٰرَ وَٱلْأَفْـِٔدَةَ قَلِيلًا مَّا تَشْكُرُونَ

Kannada Translation - Hamza Buturನಿಮಗೆ ಕೇಳುವ ಶಕ್ತಿ, ದೃಷ್ಟಿ ಮತ್ತು ಹೃದಯಗಳನ್ನು ನೀಡಿದವನು ಅವನೇ. ನೀವು ಸ್ವಲ್ಪವೇ ಕೃತಜ್ಞರಾಗುತ್ತೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ ٱلَّذِى ذَرَأَكُمْ فِى ٱلْأَرْضِ وَإِلَيْهِ تُحْشَرُونَ

Kannada Translation - Hamza Buturಅವನೇ ನಿಮ್ಮನ್ನು ಸೃಷ್ಟಿಸಿ ಭೂಮಿಯಲ್ಲಿ ಹಬ್ಬಿಸಿದವನು. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ ٱلَّذِى يُحْىِۦ وَيُمِيتُ وَلَهُ ٱخْتِلَٰفُ ٱلَّيْلِ وَٱلنَّهَارِ أَفَلَا تَعْقِلُونَ

Kannada Translation - Hamza Buturಅವನೇ ಜೀವ ಮತ್ತು ಮರಣ ನೀಡುವವನು. ರಾತ್ರಿ ಹಗಲುಗಳ ಬದಲಾವಣೆಯು ಅವನ ನಿಯಂತ್ರಣದಲ್ಲಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ قَالُوا۟ مِثْلَ مَا قَالَ ٱلْأَوَّلُونَ

Kannada Translation - Hamza Buturಬದಲಿಗೆ, ಅವರ ಪೂರ್ವಜರು ಹೇಳಿದಂತೆಯೇ ಅವರೂ ಹೇಳಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوٓا۟ أَءِذَا مِتْنَا وَكُنَّا تُرَابًا وَعِظَٰمًا أَءِنَّا لَمَبْعُوثُونَ

Kannada Translation - Hamza Buturಅವರು ಹೇಳಿದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَقَدْ وُعِدْنَا نَحْنُ وَءَابَآؤُنَا هَٰذَا مِن قَبْلُ إِنْ هَٰذَآ إِلَّآ أَسَٰطِيرُ ٱلْأَوَّلِينَ

Kannada Translation - Hamza Buturಇದನ್ನು ನಮಗೂ, ನಮಗಿಂತ ಮೊದಲು ನಮ್ಮ ಪೂರ್ವಜರಿಗೂ ವಾಗ್ದಾನ ಮಾಡಲಾಗಿದೆ. ಇದು ಪ್ರಾಚೀನ ಕಾಲದ ಜನರ ಪುರಾಣಗಳಲ್ಲದೆ ಇನ್ನೇನೂ ಅಲ್ಲ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُل لِّمَنِ ٱلْأَرْضُ وَمَن فِيهَآ إِن كُنتُمْ تَعْلَمُونَ

Kannada Translation - Hamza Butur(ಪ್ರವಾದಿಯವರೇ) ಕೇಳಿರಿ: “ಭೂಮಿ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳು ಯಾರಿಗೆ ಸೇರಿದ್ದು? ನಿಮಗೆ ತಿಳಿದಿದ್ದರೆ ಹೇಳಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَيَقُولُونَ لِلَّهِ قُلْ أَفَلَا تَذَكَّرُونَ

Kannada Translation - Hamza Buturಅವರು ಹೇಳುತ್ತಾರೆ: “ಅಲ್ಲಾಹನಿಗೆ ಸೇರಿದ್ದು.” ಕೇಳಿರಿ: “ಆದರೂ ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ مَن رَّبُّ ٱلسَّمَٰوَٰتِ ٱلسَّبْعِ وَرَبُّ ٱلْعَرْشِ ٱلْعَظِيمِ

Kannada Translation - Hamza Buturಕೇಳಿರಿ: “ಏಳಾಕಾಶಗಳ ಮತ್ತು ಮಹಾ ಸಿಂಹಾಸನದ ಪರಿಪಾಲಕ ಯಾರು?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَيَقُولُونَ لِلَّهِ قُلْ أَفَلَا تَتَّقُونَ

Kannada Translation - Hamza Buturಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಭಯಪಡುವುದಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ مَنۢ بِيَدِهِۦ مَلَكُوتُ كُلِّ شَىْءٍ وَهُوَ يُجِيرُ وَلَا يُجَارُ عَلَيْهِ إِن كُنتُمْ تَعْلَمُونَ

Kannada Translation - Hamza Buturಕೇಳಿರಿ: “ಸರ್ವ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆ? ಅಭಯ ನೀಡುವವನು ಮತ್ತು ಅವನಿಗೆ ವಿರುದ್ಧವಾಗಿ ಅಭಯ ನೀಡಲು ಯಾರಿಗೂ ಸಾಧ್ಯವಿಲ್ಲದಂತಹವನು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَيَقُولُونَ لِلَّهِ قُلْ فَأَنَّىٰ تُسْحَرُونَ

Kannada Translation - Hamza Buturಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಮೋಡಿಗೆ ಬಲಿಯಾಗುತ್ತಿರುವುದು ಹೇಗೆ?”[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ أَتَيْنَٰهُم بِٱلْحَقِّ وَإِنَّهُمْ لَكَٰذِبُونَ

Kannada Translation - Hamza Buturಅಲ್ಲ, ವಾಸ್ತವವಾಗಿ ನಾವು ಅವರ ಬಳಿಗೆ ಸತ್ಯವನ್ನೇ ತಂದಿದ್ದೇವೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا ٱتَّخَذَ ٱللَّهُ مِن وَلَدٍ وَمَا كَانَ مَعَهُۥ مِنْ إِلَٰهٍ إِذًا لَّذَهَبَ كُلُّ إِلَٰهٍۭ بِمَا خَلَقَ وَلَعَلَا بَعْضُهُمْ عَلَىٰ بَعْضٍ سُبْحَٰنَ ٱللَّهِ عَمَّا يَصِفُونَ

Kannada Translation - Hamza Buturಅಲ್ಲಾಹನಿಗೆ ಯಾವುದೇ ಸಂತಾನವಿಲ್ಲ. ಅವನ ಜೊತೆಗೆ ಬೇರೆ ದೇವರುಗಳೂ ಇಲ್ಲ. ಇರುತ್ತಿದ್ದರೆ ಎಲ್ಲಾ ದೇವರುಗಳೂ ಅವರು ಸೃಷ್ಟಿಸಿದ್ದನ್ನು ತೆಗೆದುಕೊಂಡು ಹೋಗುತ್ತಿದ್ದರು. ಅವರು ಪ್ರಾಬಲ್ಯ ಪಡೆಯುವುದಕ್ಕಾಗಿ ಪರಸ್ಪರ ಹೊಡೆದಾಡುತ್ತಿದ್ದರು.[1] ಅವರು ಆರೋಪಿಸುವ ಎಲ್ಲಾ ಸುಳ್ಳುಗಳಿಂದಲೂ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عَٰلِمِ ٱلْغَيْبِ وَٱلشَّهَٰدَةِ فَتَعَٰلَىٰ عَمَّا يُشْرِكُونَ

Kannada Translation - Hamza Buturಅವನು ದೃಶ್ಯ-ಅದೃಶ್ಯವನ್ನು ತಿಳಿದವನು. ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅವನು ಎಷ್ಟೋ ಉನ್ನತನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُل رَّبِّ إِمَّا تُرِيَنِّى مَا يُوعَدُونَ

Kannada Translation - Hamza Buturಹೇಳಿರಿ: “ನನ್ನ ಪರಿಪಾಲಕನೇ! ಇವರಿಗೆ ವಾಗ್ದಾನ ಮಾಡಲಾಗುವ ಶಿಕ್ಷೆಯನ್ನು ನನಗೆ ತೋರಿಸಿಕೊಡುವುದಾದರೆ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَبِّ فَلَا تَجْعَلْنِى فِى ٱلْقَوْمِ ٱلظَّٰلِمِينَ

Kannada Translation - Hamza Buturನನ್ನ ಪರಿಪಾಲಕನೇ! ನನ್ನನ್ನು ಅಕ್ರಮಿಗಳಾದ ಜನರಲ್ಲಿ ಸೇರಿಸಬೇಡ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّا عَلَىٰٓ أَن نُّرِيَكَ مَا نَعِدُهُمْ لَقَٰدِرُونَ

Kannada Translation - Hamza Buturಅವರಿಗೆ ವಾಗ್ದಾನ ಮಾಡುತ್ತಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವ ಸಾಮರ್ಥ್ಯ ಖಂಡಿತ ನಮಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱدْفَعْ بِٱلَّتِى هِىَ أَحْسَنُ ٱلسَّيِّئَةَ نَحْنُ أَعْلَمُ بِمَا يَصِفُونَ

Kannada Translation - Hamza Buturನೀವು ಒಳಿತಿನ ಮೂಲಕ ಕೆಡುಕನ್ನು ದೂರೀಕರಿಸಿರಿ. ಅವರು ವರ್ಣಿಸುವ ವಿಷಯಗಳ ಬಗ್ಗೆ ನಮಗೆ ಬಹಳ ಚೆನ್ನಾಗಿ ತಿಳಿದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقُل رَّبِّ أَعُوذُ بِكَ مِنْ هَمَزَٰتِ ٱلشَّيَٰطِينِ

Kannada Translation - Hamza Buturಹೇಳಿರಿ: “ನನ್ನ ಪರಿಪಾಲಕನೇ! ಶೈತಾನರ ದುರ್ವಿಚಾರಗಳಿಂದ ನಾನು ನಿನ್ನಲ್ಲಿ ಅಭಯಕೋರುತ್ತೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَعُوذُ بِكَ رَبِّ أَن يَحْضُرُونِ

Kannada Translation - Hamza Buturಓ ನನ್ನ ಪರಿಪಾಲಕನೇ! ಅವರು ನನ್ನ ಬಳಿ ಬರುವುದರಿಂದಲೂ ನಾನು ನಿನ್ನಲ್ಲಿ ಅಭಯಕೋರುತ್ತೇನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَا جَآءَ أَحَدَهُمُ ٱلْمَوْتُ قَالَ رَبِّ ٱرْجِعُونِ

Kannada Translation - Hamza Buturಎಲ್ಲಿಯವರೆಗೆಂದರೆ, ಅವರಲ್ಲೊಬ್ಬನಿಗೆ ಸಾವು ಸನ್ನಿಹಿತವಾದಾಗ, ಅವನು ಹೇಳುವನು: “ಓ ನನ್ನ ಪರಿಪಾಲಕನೇ! ನನ್ನನ್ನು ಹಿಂದಕ್ಕೆ ಕಳಿಸು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَعَلِّىٓ أَعْمَلُ صَٰلِحًا فِيمَا تَرَكْتُ كَلَّآ إِنَّهَا كَلِمَةٌ هُوَ قَآئِلُهَا وَمِن وَرَآئِهِم بَرْزَخٌ إِلَىٰ يَوْمِ يُبْعَثُونَ

Kannada Translation - Hamza Buturನಾನು ಮಾಡದೆ ಬಿಟ್ಟಿರುವ ಸತ್ಕರ್ಮಗಳನ್ನು ನಿರ್ವಹಿಸಲು.” ಇಲ್ಲ, ಎಂದಿಗೂ ಇಲ್ಲ! ಅದು ಕೇವಲ ಒಂದು ಮಾತು ಮಾತ್ರ. ಅವನು ಅದನ್ನು ಹೇಳುತ್ತಲೇ ಇರುವನು. ಅವರನ್ನು ಜೀವ ನೀಡಿ ಎಬ್ಬಿಸಲಾಗುವ ದಿನದ ತನಕ ಅವರ ಹಿಂದೆ ಒಂದು ಪರದೆಯಿದೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا نُفِخَ فِى ٱلصُّورِ فَلَآ أَنسَابَ بَيْنَهُمْ يَوْمَئِذٍ وَلَا يَتَسَآءَلُونَ

Kannada Translation - Hamza Buturಕಹಳೆಯಲ್ಲಿ ಊದಲಾದರೆ, ಅಂದು ಅವರ ನಡುವೆ ಯಾವುದೇ ಸಂಬಂಧಗಳು ಇರುವುದಿಲ್ಲ. ಅವರು ಪರಸ್ಪರ ವಿಚಾರಿಸುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَن ثَقُلَتْ مَوَٰزِينُهُۥ فَأُو۟لَٰٓئِكَ هُمُ ٱلْمُفْلِحُونَ

Kannada Translation - Hamza Buturಯಾರ ತಕ್ಕಡಿಗಳು ಭಾರವಾಗುತ್ತದೋ ಅವರೇ ಯಶಸ್ವಿಯಾದವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَنْ خَفَّتْ مَوَٰزِينُهُۥ فَأُو۟لَٰٓئِكَ ٱلَّذِينَ خَسِرُوٓا۟ أَنفُسَهُمْ فِى جَهَنَّمَ خَٰلِدُونَ

Kannada Translation - Hamza Buturಯಾರ ತಕ್ಕಡಿಗಳು ಹಗುರವಾಗುತ್ತದೋ ಅವರೇ ಸ್ವಯಂ ನಷ್ಟ ಹೊಂದಿದವರು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَلْفَحُ وُجُوهَهُمُ ٱلنَّارُ وَهُمْ فِيهَا كَٰلِحُونَ

Kannada Translation - Hamza Buturನರಕದ ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಡುವುದು. ಅವರು ಅದರಲ್ಲಿ ವಿಕಾರವಾಗಿ ಹಲ್ಲುಕಿರಿಯುವರು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ تَكُنْ ءَايَٰتِى تُتْلَىٰ عَلَيْكُمْ فَكُنتُم بِهَا تُكَذِّبُونَ

Kannada Translation - Hamza Butur(ಅವರೊಂದಿಗೆ ಕೇಳಲಾಗುವುದು): “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುವಾಗ ನೀವು ಅದನ್ನು ನಿಷೇಧಿಸುತ್ತಿರಲಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَآلِّينَ

Kannada Translation - Hamza Buturಅವರು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮ ದುರ್ಗತಿಯು ನಮ್ಮನ್ನು ಮಣಿಸಿದೆ. ನಾವು ದಾರಿತಪ್ಪಿದ ಜನರಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَبَّنَآ أَخْرِجْنَا مِنْهَا فَإِنْ عُدْنَا فَإِنَّا ظَٰلِمُونَ

Kannada Translation - Hamza Buturನಮ್ಮ ಪರಿಪಾಲಕನೇ! ನಮ್ಮನ್ನು ಇಲ್ಲಿಂದ ಹೊರಗೆ ಬಿಡು. ನಾವೇನಾದರೂ ಪುನಃ ಅದೇ ದುರ್ಮಾರ್ಗಕ್ಕೆ ಮರಳಿದರೆ ನಿಜವಾಗಿಯೂ ನಾವೇ ಅಕ್ರಮಿಗಳು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ ٱخْسَـُٔوا۟ فِيهَا وَلَا تُكَلِّمُونِ

Kannada Translation - Hamza Buturಅಲ್ಲಾಹು ಹೇಳುವನು: “ಅವಮಾನವನ್ನು ಸಹಿಸುತ್ತಾ ಇಲ್ಲೇ ಬಿದ್ದಿರಿ. ನನ್ನೊಡನೆ ಮಾತನಾಡಬೇಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُۥ كَانَ فَرِيقٌ مِّنْ عِبَادِى يَقُولُونَ رَبَّنَآ ءَامَنَّا فَٱغْفِرْ لَنَا وَٱرْحَمْنَا وَأَنتَ خَيْرُ ٱلرَّٰحِمِينَ

Kannada Translation - Hamza Buturನಿಶ್ಚಯವಾಗಿಯೂ, ನನ್ನ ದಾಸರಲ್ಲಿ ಒಂದು ಗುಂಪು ಜನರು ಹೇಳುತ್ತಿದ್ದರು: “ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ದಯೆ ತೋರು. ನೀನು ದಯೆ ತೋರುವವರಲ್ಲಿ ಅತ್ಯುತ್ತಮನಾಗಿರುವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱتَّخَذْتُمُوهُمْ سِخْرِيًّا حَتَّىٰٓ أَنسَوْكُمْ ذِكْرِى وَكُنتُم مِّنْهُمْ تَضْحَكُونَ

Kannada Translation - Hamza Buturಆಗ ನೀವು ಅವರನ್ನು ತಮಾಷೆಯ ವಸ್ತುವಾಗಿ ಮಾಡಿಕೊಂಡಿರಿ. ಎಲ್ಲಿಯವರೆಗೆಂದರೆ, (ಈ ತಮಾಷೆಯು) ನಿಮಗೆ ನನ್ನ ನೆನಪನ್ನೇ ಮರೆಸಿಬಿಟ್ಟಿತು. ನೀವು ಅವರನ್ನು ಅಣಕಿಸಿ ನಗುತ್ತಿದ್ದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنِّى جَزَيْتُهُمُ ٱلْيَوْمَ بِمَا صَبَرُوٓا۟ أَنَّهُمْ هُمُ ٱلْفَآئِزُونَ

Kannada Translation - Hamza Buturಅವರು ತಾಳ್ಮೆಯಿಂದ ಜೀವಿಸಿದ ಕಾರಣ ಇಂದು ನಾನು ಅವರಿಗೆ ಪ್ರತಿಫಲವನ್ನು ನೀಡಿದ್ದೇನೆ. ನಿಶ್ಚಯವಾಗಿಯೂ ಅವರೇ ವಿಜಯ ಗಳಿಸಿದವರು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَٰلَ كَمْ لَبِثْتُمْ فِى ٱلْأَرْضِ عَدَدَ سِنِينَ

Kannada Translation - Hamza Buturಅಲ್ಲಾಹು ಕೇಳುವನು: “ನೀವು ಭೂಮಿಯಲ್ಲಿ ಎಷ್ಟು ವರ್ಷಗಳ ಕಾಲ ವಾಸವಾಗಿದ್ದಿರಿ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ لَبِثْنَا يَوْمًا أَوْ بَعْضَ يَوْمٍ فَسْـَٔلِ ٱلْعَآدِّينَ

Kannada Translation - Hamza Buturಅವರು ಹೇಳುವರು: “ನಾವು ಒಂದು ದಿನ ಅಥವಾ ದಿನದ ಸ್ವಲ್ಪ ಭಾಗ ಮಾತ್ರ ವಾಸವಾಗಿದ್ದೆವು. ಎಣಿಕೆ ಮಾಡಿದವರನ್ನು ಕೂಡ ಕೇಳಿ ನೋಡು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَٰلَ إِن لَّبِثْتُمْ إِلَّا قَلِيلًا لَّوْ أَنَّكُمْ كُنتُمْ تَعْلَمُونَ

Kannada Translation - Hamza Buturಅಲ್ಲಾಹು ಹೇಳುವನು: “ನೀವು ಸ್ವಲ್ಪ ಸಮಯ ಮಾತ್ರ ವಾಸವಾಗಿದ್ದಿರಿ. ನಿಮಗೆ ಮೊದಲೇ ತಿಳಿದಿರುತ್ತಿದ್ದರೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَحَسِبْتُمْ أَنَّمَا خَلَقْنَٰكُمْ عَبَثًا وَأَنَّكُمْ إِلَيْنَا لَا تُرْجَعُونَ

Kannada Translation - Hamza Buturನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆ ಮತ್ತು ನೀವು ನಮ್ಮ ಬಳಿಗೆ ಮರಳಿ ಬರುವುದಿಲ್ಲವೆಂದು ನೀವು ಭಾವಿಸಿದ್ದೀರಾ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَتَعَٰلَى ٱللَّهُ ٱلْمَلِكُ ٱلْحَقُّ لَآ إِلَٰهَ إِلَّا هُوَ رَبُّ ٱلْعَرْشِ ٱلْكَرِيمِ

Kannada Translation - Hamza Buturನೈಜ ಸಾಮ್ರಾಟನಾಗಿರುವ ಅಲ್ಲಾಹು ಪರಮೋನ್ನತನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನು ಗೌರವಾನ್ವಿತ ಸಿಂಹಾಸನದ ಪರಿಪಾಲಕನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَن يَدْعُ مَعَ ٱللَّهِ إِلَٰهًا ءَاخَرَ لَا بُرْهَٰنَ لَهُۥ بِهِۦ فَإِنَّمَا حِسَابُهُۥ عِندَ رَبِّهِۦٓ إِنَّهُۥ لَا يُفْلِحُ ٱلْكَٰفِرُونَ

Kannada Translation - Hamza Buturಯಾರು ಅಲ್ಲಾಹನ ಜೊತೆಗೆ ಬೇರೆ ದೇವರನ್ನು ಕರೆದು ಪ್ರಾರ್ಥಿಸುತ್ತಾನೋ—ಹಾಗೆ ಪ್ರಾರ್ಥಿಸಲು ಅವನ ಬಳಿ ಯಾವುದೇ ಸಾಕ್ಷ್ಯಾಧಾರವಿಲ್ಲ—ಅವನ ವಿಚಾರಣೆಯು ಅವನ ಪರಿಪಾಲಕನ (ಅಲ್ಲಾಹನ) ಬಳಿಯಲ್ಲಿದೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಶಸ್ವಿಯಾಗುವುದಿಲ್ಲ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقُل رَّبِّ ٱغْفِرْ وَٱرْحَمْ وَأَنتَ خَيْرُ ٱلرَّٰحِمِينَ

Kannada Translation - Hamza Buturಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70