Kannada Translation - Hamza Buturರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಆಹಾರವನ್ನು (ಮಳೆಯನ್ನು) ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಆಲೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
Kannada Translation - Hamza Buturಇವು ಅಲ್ಲಾಹನ ವಚನಗಳಾಗಿದ್ದು, ನಾವು ಅವುಗಳನ್ನು ನಿಮಗೆ ಸತ್ಯ ಸಮೇತವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಮತ್ತು ಅವನ ವಚನಗಳ ನಂತರ ಇನ್ನು ಯಾವ ಮಾತಿನಲ್ಲಿ ಅವರು ವಿಶ್ವಾಸವಿಡುವರು?
Kannada Translation - Hamza Buturತನಗೆ ಓದಿಕೊಡಲಾಗುವ ಅಲ್ಲಾಹನ ವಚನಗಳಿಗೆ ಅವನು ಕಿವಿಗೊಡುತ್ತಾನೆ. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ಅಹಂಕಾರದಿಂದ ಹಟತೊಟ್ಟು ನಿಲ್ಲುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.
Kannada Translation - Hamza Buturನರಕಾಗ್ನಿ ಅವರ ಮುಂಭಾಗದಲ್ಲೇ ಇದೆ! ಅವರು ಏನು ಸಂಪಾದಿಸಿದರೋ ಮತ್ತು ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ರಕ್ಷಕರನ್ನಾಗಿ ಸ್ವೀಕರಿಸಿದರೋ ಯಾವುದೂ ಅವರಿಗೆ ಪ್ರಯೋಜನ ನೀಡುವುದಿಲ್ಲ. ಅವರಿಗೆ ಕಠೋರ ಶಿಕ್ಷೆಯಿದೆ.
Kannada Translation - Hamza Buturಅಲ್ಲಾಹನೇ ನಿಮಗೆ ಸಮುದ್ರವನ್ನು ಅಧೀನಗೊಳಿಸಿದವನು. ಅವನ ಅಪ್ಪಣೆಯಂತೆ ನಾವೆಗಳು ಅದರಲ್ಲಿ ಸಂಚರಿಸುವುದಕ್ಕಾಗಿ, ನೀವು ಅವನ ಔದಾರ್ಯದಿಂದ ಬೇಡಿಕೊಳ್ಳುವುದಕ್ಕಾಗಿ ಮತ್ತು ನೀವು ಕೃತಜ್ಞರಾಗುವುದಕ್ಕಾಗಿ.
Kannada Translation - Hamza Buturಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳನ್ನು ಅವನು ತನ್ನ ವತಿಯಿಂದ ನಿಮಗೆ ಅಧೀನಗೊಳಿಸಿದ್ದಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
Kannada Translation - Hamza Buturಅಲ್ಲಾಹನ ದಿನಗಳನ್ನು ನಿರೀಕ್ಷಿಸದ ಸತ್ಯನಿಷೇಧಿಗಳಿಗೆ ಅವರು ಕ್ಷಮಿಸಿ ಬಿಡಲಿ ಎಂದು ಸತ್ಯವಿಶ್ವಾಸಿಗಳೊಡನೆ ಹೇಳಿರಿ. ಇದು ಅಲ್ಲಾಹು ಆ ಜನರಿಗೆ ಅವರು ಮಾಡಿದ ಕರ್ಮಗಳ ಫಲವನ್ನು ನೀಡುವುದಕ್ಕಾಗಿ.
Kannada Translation - Hamza Buturಯಾರಾದರೂ ಒಳಿತು ಮಾಡಿದರೆ ಅದು ಅವನ ಒಳಿತಿಗೇ ಆಗಿದೆ. ಯಾರಾದರೂ ಕೆಡುಕು ಮಾಡಿದರೆ ಅದರ ಕೆಡುಕು ಅವನಿಗೇ ಆಗಿದೆ. ನಂತರ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ನಿಮ್ಮನ್ನು ಮರಳಿಸಲಾಗುವುದು.
Kannada Translation - Hamza Buturನಾವು ಇಸ್ರಾಯೇಲ್ ಮಕ್ಕಳಿಗೆ ಗ್ರಂಥ, ಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದೆವು, ಶುದ್ಧ ವಸ್ತುಗಳಿಂದ ಅವರಿಗೆ ಆಹಾರವನ್ನು ಒದಗಿಸಿದೆವು ಮತ್ತು ಜಗತ್ತಿನ ಎಲ್ಲಾ (ಸಮಕಾಲೀನ) ಜನರಿಗಿಂತ ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದೆವು.
Kannada Translation - Hamza Buturನಾವು ಅವರಿಗೆ (ಧಾರ್ಮಿಕ) ವಿಷಯಗಳ ಬಗ್ಗೆ ಸ್ಪಷ್ಟ ಪುರಾವೆಗಳನ್ನು ನೀಡಿದೆವು. ಆದರೆ ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಅವರು ಭಿನ್ನಮತ ತಳೆಯಲಿಲ್ಲ. ಅವರು ಪರಸ್ಪರ ಹೊಂದಿದ್ದ ದ್ವೇಷವೇ ಅದಕ್ಕೆ ಕಾರಣವಾಗಿತ್ತು. ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಆ ವಿಷಯದಲ್ಲಿ ಪುನರುತ್ಥಾನ ದಿನದಂದು ನಿಮ್ಮ ಪರಿಪಾಲಕನು (ಅಲ್ಲಾಹು) ಅವರ ನಡುವೆ ತೀರ್ಪು ನೀಡುವನು.
Kannada Translation - Hamza Buturನಂತರ ನಾವು ನಿಮ್ಮನ್ನು ಧರ್ಮದ ಸ್ಪಷ್ಟ ಮಾರ್ಗದಲ್ಲಿ ನಿಲ್ಲಿಸಿದೆವು. ಆದ್ದರಿಂದ ನೀವು ಅದನ್ನು ಅನುಸರಿಸಿರಿ. ತಿಳುವಳಿಕೆಯಿಲ್ಲದ ಜನರ ಸ್ವೇಚ್ಛೆಗಳನ್ನು ಅನುಸರಿಸಬೇಡಿ.
Kannada Translation - Hamza Buturಅಲ್ಲಾಹನ ಮುಂದೆ ಇವರು ಯಾವ ರೀತಿಯಲ್ಲೂ ನಿಮಗೆ ಉಪಕಾರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಕ್ರಮಿಗಳು ಪರಸ್ಪರ ಮಿತ್ರರಾಗಿದ್ದಾರೆ. ಅಲ್ಲಾಹು ದೇವಭಯವುಳ್ಳವರ ರಕ್ಷಕನಾಗಿದ್ದಾನೆ.
Kannada Translation - Hamza Buturಕೆಡುಕು ಮಾಡಿದವರು ಯಾರೋ ಅವರನ್ನು ನಾವು ಸತ್ಯವಿಶ್ವಾಸಿಗಳಾಗಿದ್ದು ಸತ್ಕರ್ಮವೆಸಗುವವರಂತೆ—ಅವರಿಬ್ಬರ ಜೀವನ ಮತ್ತು ಮರಣಗಳು ಸಮಾನವಾಗುವ ರೀತಿಯಲ್ಲಿ—ಮಾಡುವೆವೆಂದು ಭಾವಿಸಿದ್ದಾರೆಯೇ? ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.
Kannada Translation - Hamza Buturಅಲ್ಲಾಹು ಭೂಮ್ಯಾಕಾಶಗಳನ್ನು ಸತ್ಯ ಸಮೇತ ಸೃಷ್ಟಿಸಿದ್ದಾನೆ. ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Kannada Translation - Hamza Buturತನ್ನ ಸ್ವೇಚ್ಛೆಯನ್ನೇ ದೇವನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿದ್ದೀರಾ?[1] ಅಲ್ಲಾಹು ತಿಳಿದೇ ಅವನನ್ನು ದಾರಿತಪ್ಪಿಸಿದ್ದಾನೆ, ಅವನ ಕಿವಿ ಮತ್ತು ಹೃದಯಕ್ಕೆ ಮೊಹರು ಹಾಕಿದ್ದಾನೆ ಮತ್ತು ಅವನ ಕಣ್ಣಿನ ಮೇಲೆ ಒಂದು ಪರದೆಯನ್ನಿಟ್ಟಿದ್ದಾನೆ. ಅಲ್ಲಾಹನ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರು? ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Kannada Translation - Hamza Buturಅವರು ಹೇಳಿದರು: “ಜೀವನವೆಂದರೆ ನಮ್ಮ ಇಹಲೋಕ ಜೀವನ ಮಾತ್ರವಾಗಿದೆ. ನಾವು ಸಾಯುತ್ತೇವೆ ಮತ್ತು ಬದುಕುತ್ತೇವೆ. ಕಾಲವಲ್ಲದೆ ಬೇರೇನೂ ನಮ್ಮನ್ನು ನಾಶ ಮಾಡುವುದಿಲ್ಲ.” ವಾಸ್ತವವಾಗಿ ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹಿಸಿ ಹೇಳುತ್ತಾರೆ.
Kannada Translation - Hamza Buturನಮ್ಮ ಸ್ಪಷ್ಟ ವಚನಗಳನ್ನು ಅವರಿಗೆ ಓದಿಕೊಡಲಾದರೆ ಅವರು ಹೇಳುವ ತರ್ಕವು: “ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಕರೆತನ್ನಿರಿ” ಎಂದು ಮಾತ್ರವಾಗಿರುತ್ತದೆ.
Kannada Translation - Hamza Buturಹೇಳಿರಿ: “ಅಲ್ಲಾಹು ನಿಮಗೆ ಜೀವ ನೀಡುತ್ತಾನೆ. ನಂತರ ಅವನು ಸಾವನ್ನು ನೀಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವನು ನಿಮ್ಮನ್ನು ಒಟ್ಟುಗೂಡಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.
Kannada Translation - Hamza Butur(ಆ ದಿನ) ಎಲ್ಲ ಸಮುದಾಯಗಳನ್ನು ಮಂಡಿಯೂರಿದ ಸ್ಥಿತಿಯಲ್ಲಿ ನೀವು ನೋಡುವಿರಿ. ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮದಾಖಲೆಯ ಕಡೆಗೆ ಕರೆಯಲಾಗುವುದು. “ನೀವು ಮಾಡಿರುವ ಕರ್ಮಗಳಿಗೆ ಇಂದು ನಿಮಗೆ ಪ್ರತಿಫಲ ನೀಡಲಾಗುವುದು.
Kannada Translation - Hamza Buturಇದು ನಮ್ಮ ದಾಖಲೆಯಾಗಿದ್ದು ಇದು ನಿಮ್ಮ ಬಗ್ಗೆ ಸತ್ಯವನ್ನು ಹೇಳಲಿದೆ. ನಿಶ್ಚಯವಾಗಿಯೂ ನೀವು ಮಾಡುತ್ತಿದ್ದ ಎಲ್ಲಾ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೆವು.”
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ಅವರ ಪರಿಪಾಲಕನು (ಅಲ್ಲಾಹು) ಅವನ ದಯೆಯಲ್ಲಿ ಸೇರಿಸುವನು. ಅದೇ ಸ್ಪಷ್ಟವಾದ ವಿಜಯ.
Kannada Translation - Hamza Buturಸತ್ಯನಿಷೇಧಿಗಳು ಯಾರೋ (ಅವರೊಡನೆ ಹೇಳಲಾಗುವುದು:) “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗಿಲ್ಲವೇ? ಆದರೂ ನೀವು ಅಹಂಕಾರ ತೋರಿದಿರಿ ಮತ್ತು ಪಾಪಿಗಳಾದ ಜನರಾಗಿದ್ದಿರಿ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯಸಮಯದ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾದರೆ, ಅಂತ್ಯಸಮಯವೇನೆಂದು ನಮಗೆ ತಿಳಿದಿಲ್ಲ. ನಮಗೆ ಕೆಲವು ಕಲ್ಪನೆಗಳಿದ್ದವು. ನಮಗೆ ಯಾವುದರ ಬಗ್ಗೆಯೂ ಖಾತ್ರಿಯಿರಲಿಲ್ಲ ಎಂದು ನೀವು ಉತ್ತರಿಸಿದಿರಿ.”
Kannada Translation - Hamza Buturಅವರೊಡನೆ ಹೇಳಲಾಗುವುದು: “ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತುಬಿಟ್ಟಂತೆ ಇಂದು ನಾವು ನಿಮ್ಮನ್ನೂ ಮರೆತಿದ್ದೇವೆ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಸಹಾಯ ಮಾಡುವವರು ಯಾರೂ ಇಲ್ಲ.
Kannada Translation - Hamza Buturಅದೇಕೆಂದರೆ ನೀವು ಅಲ್ಲಾಹನ ವಚನಗಳನ್ನು ತಮಾಷೆಯ ವಸ್ತುವಾಗಿ ಸ್ವೀಕರಿಸಿದಿರಿ ಮತ್ತು ಇಹಲೋಕ ಜೀವನವು ನಿಮ್ಮನ್ನು ಮರುಳುಗೊಳಿಸಿತು. ಇಂದು ಅವರನ್ನು ಅಲ್ಲಿಂದ ಹೊರತೆಗೆಯಲಾಗುವುದಿಲ್ಲ ಮತ್ತು ಅವರ ನೆಪಗಳನ್ನು ಸ್ವೀಕರಿಸಲಾಗುವುದಿಲ್ಲ.