caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Az-Zukhruf الزخرف

89 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 63

بِسْمِ ٱللَّهِ ٱلرَّحْمَٰنِ ٱلرَّحِيمِ حمٓ

Kannada Translation - Hamza Buturಹಾ-ಮೀಮ್.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلْكِتَٰبِ ٱلْمُبِينِ

Kannada Translation - Hamza Buturಸ್ಪಷ್ಟ ಗ್ರಂಥದ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّا جَعَلْنَٰهُ قُرْءَٰنًا عَرَبِيًّا لَّعَلَّكُمْ تَعْقِلُونَ

Kannada Translation - Hamza Buturನಿಶ್ಚಯವಾಗಿಯೂ ನಾವು ಇದನ್ನು ಅರಬೀ ಭಾಷೆಯಲ್ಲಿರುವ ಕುರ್‌ಆನ್ ಆಗಿ ಮಾಡಿದ್ದೇವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّهُۥ فِىٓ أُمِّ ٱلْكِتَٰبِ لَدَيْنَا لَعَلِىٌّ حَكِيمٌ

Kannada Translation - Hamza Buturನಿಶ್ಚಯವಾಗಿಯೂ ಅದು ನಮ್ಮ ಬಳಿ ಮೂಲಗ್ರಂಥದಲ್ಲಿದೆ (ಲೌಹುಲ್ ಮಹ್ಫೂಝ್‌ನಲ್ಲಿದೆ). ಅದು ಅತ್ಯುನ್ನತ ಮತ್ತು ವಿವೇಕಭರಿತವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَنَضْرِبُ عَنكُمُ ٱلذِّكْرَ صَفْحًا أَن كُنتُمْ قَوْمًا مُّسْرِفِينَ

Kannada Translation - Hamza Buturನೀವು ಎಲ್ಲೆ ಮೀರಿದ ಜನರಾಗಿದ್ದೀರಿ ಎಂಬ ಕಾರಣದಿಂದ ಈ ಉಪದೇಶವನ್ನು ನಾವು ನಿಮ್ಮಿಂದ ದೂರ ಸರಿಸುವೆವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَمْ أَرْسَلْنَا مِن نَّبِىٍّ فِى ٱلْأَوَّلِينَ

Kannada Translation - Hamza Buturನಾವು ಪೂರ್ವಿಕ ಸಮುದಾಯಗಳಲ್ಲಿ ಎಷ್ಟೋ ಪ್ರವಾದಿಗಳನ್ನು ಕಳುಹಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يَأْتِيهِم مِّن نَّبِىٍّ إِلَّا كَانُوا۟ بِهِۦ يَسْتَهْزِءُونَ

Kannada Translation - Hamza Buturಯಾವುದೇ ಒಬ್ಬ ಪ್ರವಾದಿ ಅವರ ಬಳಿ ಬರುವಾಗಲೆಲ್ಲಾ ಅವರು ಆ ಪ್ರವಾದಿಯನ್ನು ತಮಾಷೆ ಮಾಡುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَهْلَكْنَآ أَشَدَّ مِنْهُم بَطْشًا وَمَضَىٰ مَثَلُ ٱلْأَوَّلِينَ

Kannada Translation - Hamza Buturಇವರಿಗಿಂತಲೂ ಶಕ್ತಿಶಾಲಿಗಳನ್ನು ನಾವು ನಾಶ ಮಾಡಿದ್ದೇವೆ. ಪೂರ್ವಿಕರ ಉದಾಹರಣೆಗಳು ಈಗಾಗಲೇ ಗತಿಸಿಹೋಗಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَئِن سَأَلْتَهُم مَّنْ خَلَقَ ٱلسَّمَٰوَٰتِ وَٱلْأَرْضَ لَيَقُولُنَّ خَلَقَهُنَّ ٱلْعَزِيزُ ٱلْعَلِيمُ

Kannada Translation - Hamza Butur“ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಯಾರು?” ಎಂದು ನೀವು ಅವರೊಡನೆ ಕೇಳಿದರೆ, “ಅವುಗಳನ್ನು ಸೃಷ್ಟಿಸಿದ್ದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹು” ಎಂದು ಅವರು ಖಂಡಿತವಾಗಿಯೂ ಉತ್ತರಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى جَعَلَ لَكُمُ ٱلْأَرْضَ مَهْدًا وَجَعَلَ لَكُمْ فِيهَا سُبُلًا لَّعَلَّكُمْ تَهْتَدُونَ

Kannada Translation - Hamza Buturಅವನು ಯಾರೆಂದರೆ, ನಿಮಗೆ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿಕೊಟ್ಟವನು ಮತ್ತು ಅದರಲ್ಲಿ ನೀವು ದಾರಿ ಕಂಡುಕೊಳ್ಳುವುದಕ್ಕಾಗಿ ಮಾರ್ಗಗಳನ್ನು ಮಾಡಿಕೊಟ್ಟವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِى نَزَّلَ مِنَ ٱلسَّمَآءِ مَآءًۢ بِقَدَرٍ فَأَنشَرْنَا بِهِۦ بَلْدَةً مَّيْتًا كَذَٰلِكَ تُخْرَجُونَ

Kannada Translation - Hamza Buturಒಂದು ನಿರ್ಣಯಕ್ಕೆ ಅನುಗುಣವಾಗಿ ಆಕಾಶದಿಂದ ಮಳೆಯನ್ನು ಸುರಿಸಿಕೊಟ್ಟವನು. ನಂತರ ನಾವು ಅದರ ಮೂಲಕ ನಿರ್ಜೀವ ಪ್ರದೇಶವನ್ನು ಜೀವಂತಗೊಳಿಸಿದೆವು. ಇದೇ ರೀತಿ ನಿಮ್ಮ ಹೊರತರಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّذِى خَلَقَ ٱلْأَزْوَٰجَ كُلَّهَا وَجَعَلَ لَكُم مِّنَ ٱلْفُلْكِ وَٱلْأَنْعَٰمِ مَا تَرْكَبُونَ

Kannada Translation - Hamza Buturಎಲ್ಲಾ ವಸ್ತುಗಳಲ್ಲೂ ಜೋಡಿಗಳನ್ನು ಸೃಷ್ಟಿಸಿದವನು ಮತ್ತು ನಿಮಗೆ ಸವಾರಿ ಮಾಡಲು ನಾವೆಗಳನ್ನು ಹಾಗೂ ಜಾನುವಾರುಗಳನ್ನು ಮಾಡಿಕೊಟ್ಟವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِتَسْتَوُۥا۟ عَلَىٰ ظُهُورِهِۦ ثُمَّ تَذْكُرُوا۟ نِعْمَةَ رَبِّكُمْ إِذَا ٱسْتَوَيْتُمْ عَلَيْهِ وَتَقُولُوا۟ سُبْحَٰنَ ٱلَّذِى سَخَّرَ لَنَا هَٰذَا وَمَا كُنَّا لَهُۥ مُقْرِنِينَ

Kannada Translation - Hamza Buturನೀವು ಅವುಗಳ ಬೆನ್ನ ಮೇಲೆ ಆರೂಢರಾಗಿ, ನಂತರ ನೀವು ಅದರ ಮೇಲೆ ಆರೂಢರಾಗುವಾಗ ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹವನ್ನು ನೆನದು ಈ ರೀತಿ ಹೇಳುವುದಕ್ಕಾಗಿ: “ಇದನ್ನು ನಮಗೆ ವಿಧೇಯಗೊಳಿಸಿಕೊಟ್ಟವನು ಪರಮ ಪರಿಶುದ್ಧನು! ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّآ إِلَىٰ رَبِّنَا لَمُنقَلِبُونَ

Kannada Translation - Hamza Buturನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗುವವರಾಗಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلُوا۟ لَهُۥ مِنْ عِبَادِهِۦ جُزْءًا إِنَّ ٱلْإِنسَٰنَ لَكَفُورٌ مُّبِينٌ

Kannada Translation - Hamza Buturಅವರು ಅಲ್ಲಾಹನ ಕೆಲವು ದಾಸರನ್ನು ಅವನ ಒಂದು ಭಾಗವಾಗಿ ಮಾಡಿಕೊಂಡರು. ನಿಶ್ಚಯವಾಗಿಯೂ ಮನುಷ್ಯನು ಅಕ್ಷರಶಃ ಕೃತಘ್ನನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمِ ٱتَّخَذَ مِمَّا يَخْلُقُ بَنَاتٍ وَأَصْفَىٰكُم بِٱلْبَنِينَ

Kannada Translation - Hamza Buturಅಲ್ಲಾಹು ಅವನ ಸೃಷ್ಟಿಗಳಲ್ಲಿ ಸೇರಿದ ಹೆಣ್ಣುಮಕ್ಕಳನ್ನು ತನಗಿಟ್ಟು ನಿಮಗೆ ಗಂಡುಮಕ್ಕಳನ್ನು ದಯಪಾಲಿಸಿದನೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا بُشِّرَ أَحَدُهُم بِمَا ضَرَبَ لِلرَّحْمَٰنِ مَثَلًا ظَلَّ وَجْهُهُۥ مُسْوَدًّا وَهُوَ كَظِيمٌ

Kannada Translation - Hamza Butur(ವಾಸ್ತವವಾಗಿ) ಅವರು ಪರಮ ದಯಾಳುವಾದ ಅಲ್ಲಾಹನಿಗೆ ಉದಾಹರಣೆ ಕೊಡುತ್ತಿದ್ದ (ಹೆಣ್ಣು ಮಗುವಿನ ಜನನದ) ಬಗ್ಗೆ ಅವರಲ್ಲೊಬ್ಬನಿಗೆ ಶುಭಸುದ್ದಿ ನೀಡಲಾದರೆ, ಅವನ ಮುಖವು ಕರ್‍ರಗಾಗುತ್ತದೆ ಮತ್ತು ಅವನು ಬಹಳ ದುಃಖಿತನಾಗುತ್ತಾನೆ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَمَن يُنَشَّؤُا۟ فِى ٱلْحِلْيَةِ وَهُوَ فِى ٱلْخِصَامِ غَيْرُ مُبِينٍ

Kannada Translation - Hamza Buturಆಭರಣಗಳನ್ನು ತೊಟ್ಟು ಬೆಳೆಯುವ ಮತ್ತು ತರ್ಕಿಸುವಾಗ ವಾದವನ್ನು ಸ್ಪಷ್ಟವಾಗಿ ಮುಂದಿಡಲು ಸಾಧ್ಯವಾಗದ (ಹೆಣ್ಣುಮಕ್ಕಳನ್ನು ಅವರು ಅಲ್ಲಾಹನಿಗೆ ಮಕ್ಕಳನ್ನಾಗಿ ಮಾಡಿದ್ದಾರೆಯೇ)?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلُوا۟ ٱلْمَلَٰٓئِكَةَ ٱلَّذِينَ هُمْ عِبَٰدُ ٱلرَّحْمَٰنِ إِنَٰثًا أَشَهِدُوا۟ خَلْقَهُمْ سَتُكْتَبُ شَهَٰدَتُهُمْ وَيُسْـَٔلُونَ

Kannada Translation - Hamza Buturಪರಮ ದಯಾಮಯನ (ಅಲ್ಲಾಹನ) ದಾಸರಾದ ದೇವದೂತರು‌ಗಳನ್ನು ಅವರು ಮಹಿಳೆಯರಾಗಿ ಮಾಡಿದ್ದಾರೆ. ಅವರನ್ನು (ದೇವದೂತರು‍ಗಳನ್ನು) ಸೃಷ್ಟಿಸುವಾಗ ಇವರು ಉಪಸ್ಥಿತರಿದ್ದರೇ? ಅವರ ಸಾಕ್ಷ್ಯವನ್ನು ಬರೆದಿಡಲಾಗುವುದು ಮತ್ತು ಅವರಲ್ಲಿ (ಅದರ ಬಗ್ಗೆ) ವಿಚಾರಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ لَوْ شَآءَ ٱلرَّحْمَٰنُ مَا عَبَدْنَٰهُم مَّا لَهُم بِذَٰلِكَ مِنْ عِلْمٍ إِنْ هُمْ إِلَّا يَخْرُصُونَ

Kannada Translation - Hamza Buturಅವರು ಹೇಳಿದರು: “ಪರಮ ದಯಾಮಯನು (ಅಲ್ಲಾಹು) ಇಚ್ಛಿಸುತ್ತಿದ್ದರೆ ನಾವು ಅವರನ್ನು (ದೇವದೂತರು‍ಗಳನ್ನು) ಆರಾಧಿಸುತ್ತಿರಲಿಲ್ಲ.” ಅವರಿಗೆ ಅದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ. ಅವರು ಕೇವಲ ಊಹಿಸಿ ಹೇಳುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ ءَاتَيْنَٰهُمْ كِتَٰبًا مِّن قَبْلِهِۦ فَهُم بِهِۦ مُسْتَمْسِكُونَ

Kannada Translation - Hamza Buturನಾವು ಇದಕ್ಕೆ ಮೊದಲು ಅವರಿಗೆ ಯಾವುದಾದರೂ ಗ್ರಂಥವನ್ನು ನೀಡಿದ್ದು ಅವರು ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ قَالُوٓا۟ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَٰرِهِم مُّهْتَدُونَ

Kannada Translation - Hamza Buturಅಲ್ಲ, ಅವರು ಹೇಳಿದರು: “ನಮ್ಮ ಪೂರ್ವಜರು ಒಂದು ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆ. ನಿಶ್ಚಯವಾಗಿಯೂ ನಾವು ಅವರ ಹೆಜ್ಜೆಗುರುತುಗಳಲ್ಲೇ ಸನ್ಮಾರ್ಗವನ್ನು ಪಡೆಯುತ್ತೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَذَٰلِكَ مَآ أَرْسَلْنَا مِن قَبْلِكَ فِى قَرْيَةٍ مِّن نَّذِيرٍ إِلَّا قَالَ مُتْرَفُوهَآ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَٰرِهِم مُّقْتَدُونَ

Kannada Translation - Hamza Buturಈ ರೀತಿ ನಿಮಗಿಂತ ಮೊದಲು ಯಾವುದೇ ಪ್ರದೇಶಕ್ಕೆ ನಾವು ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದಾಗಲೆಲ್ಲಾ ಅಲ್ಲಿನ ಸಂಪನ್ನರು, “ನಮ್ಮ ಪೂರ್ವಜರು ಒಂದು ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆ. ನಿಶ್ಚಯವಾಗಿಯೂ ನಾವು ಅವರ ಹೆಜ್ಜೆಗುರುತುಗಳನ್ನೇ ಹಿಂಬಾಲಿಸುತ್ತೇವೆ” ಎಂದು ಹೇಳದಿರಲಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَٰلَ أَوَلَوْ جِئْتُكُم بِأَهْدَىٰ مِمَّا وَجَدتُّمْ عَلَيْهِ ءَابَآءَكُمْ قَالُوٓا۟ إِنَّا بِمَآ أُرْسِلْتُم بِهِۦ كَٰفِرُونَ

Kannada Translation - Hamza Buturಅವರು (ಪ್ರವಾದಿಗಳು) ಹೇಳಿದರು: “ನಿಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನೀವು ಕಂಡಿದ್ದೀರೋ ಅದಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸಿಕೊಡುವ ಸಂದೇಶದೊಂದಿಗೆ ನಾವು ನಿಮ್ಮ ಬಳಿಗೆ ಬಂದರೂ (ನೀವು ಅವರನ್ನೇ ಹಿಂಬಾಲಿಸುವಿರಾ)?” ಅವರು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಖಂಡಿತ ನಿಷೇಧಿಸುತ್ತೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱنتَقَمْنَا مِنْهُمْ فَٱنظُرْ كَيْفَ كَانَ عَٰقِبَةُ ٱلْمُكَذِّبِينَ

Kannada Translation - Hamza Buturಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು. ಆ ನಿಷೇಧಿಗಳ ಅಂತ್ಯ ಹೇಗಿತ್ತೆಂದು ನೋಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذْ قَالَ إِبْرَٰهِيمُ لِأَبِيهِ وَقَوْمِهِۦٓ إِنَّنِى بَرَآءٌ مِّمَّا تَعْبُدُونَ

Kannada Translation - Hamza Buturಇಬ್ರಾಹೀಮ್ ತಮ್ಮ ತಂದೆ ಹಾಗೂ ಊರಿನ ಜನರೊಡನೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನೀವು ಆರಾಧಿಸುತ್ತಿರುವ ದೇವರುಗಳಿಂದ ನಾನು ಸಂಪೂರ್ಣ ದೂರವಾಗಿದ್ದೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا ٱلَّذِى فَطَرَنِى فَإِنَّهُۥ سَيَهْدِينِ

Kannada Translation - Hamza Buturನನ್ನನ್ನು ಸೃಷ್ಟಿಸಿದವನ ಹೊರತು. ನಿಶ್ಚಯವಾಗಿಯೂ ಅವನು ನನಗೆ ಸನ್ಮಾರ್ಗವನ್ನು ತೋರಿಸುತ್ತಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلَهَا كَلِمَةًۢ بَاقِيَةً فِى عَقِبِهِۦ لَعَلَّهُمْ يَرْجِعُونَ

Kannada Translation - Hamza Buturಇಬ್ರಾಹೀಮರು ಅದನ್ನು ತಮ್ಮ ಸಂತಾನಗಳಲ್ಲೂ ಅವಶೇಷಿಸುವ ಒಂದು ವಚನವಾಗಿ ಮಾಡಿದರು. ಜನರು (ಬಹುದೇವವಿಶ್ವಾಸದಿಂದ ಏಕದೇವವಿಶ್ವಾಸಕ್ಕೆ) ಮರಳುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ مَتَّعْتُ هَٰٓؤُلَآءِ وَءَابَآءَهُمْ حَتَّىٰ جَآءَهُمُ ٱلْحَقُّ وَرَسُولٌ مُّبِينٌ

Kannada Translation - Hamza Buturಅಲ್ಲ, ನಾನು ಅವರಿಗೆ ಮತ್ತು ಅವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆನು. ಎಲ್ಲಿಯವರೆಗೆಂದರೆ ಸತ್ಯಸಂದೇಶ ಮತ್ತು ಅದನ್ನು ಸ್ಪಷ್ಟವಾಗಿ ವಿವರಿಸಿಕೊಡುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬರುವವರೆಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَمَّا جَآءَهُمُ ٱلْحَقُّ قَالُوا۟ هَٰذَا سِحْرٌ وَإِنَّا بِهِۦ كَٰفِرُونَ

Kannada Translation - Hamza Buturಸತ್ಯವು ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದು ಮಾಟಗಾರಿಕೆಯಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ನಿಷೇಧಿಸುತ್ತೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ لَوْلَا نُزِّلَ هَٰذَا ٱلْقُرْءَانُ عَلَىٰ رَجُلٍ مِّنَ ٱلْقَرْيَتَيْنِ عَظِيمٍ

Kannada Translation - Hamza Buturಅವರು ಕೇಳಿದರು: “ಈ ಎರಡು ಊರುಗಳಲ್ಲಿರುವ (ಮಕ್ಕಾ ಮತ್ತು ತಾಯಿಫ್) ಯಾರಾದರೂ ಒಬ್ಬ ಮಹಾಪುರುಷನ ಮೇಲೆ ಈ ಕುರ್‌ಆನ್ ಏಕೆ ಅವತೀರ್ಣವಾಗಲಿಲ್ಲ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَهُمْ يَقْسِمُونَ رَحْمَتَ رَبِّكَ نَحْنُ قَسَمْنَا بَيْنَهُم مَّعِيشَتَهُمْ فِى ٱلْحَيَوٰةِ ٱلدُّنْيَا وَرَفَعْنَا بَعْضَهُمْ فَوْقَ بَعْضٍ دَرَجَٰتٍ لِّيَتَّخِذَ بَعْضُهُم بَعْضًا سُخْرِيًّا وَرَحْمَتُ رَبِّكَ خَيْرٌ مِّمَّا يَجْمَعُونَ

Kannada Translation - Hamza Buturಇವರೇ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯನ್ನು ಪಾಲು ಮಾಡುವವರು? ಇಹಲೋಕದಲ್ಲಿ ನಾವೇ ಅವರ ಉಪಜೀವನವನ್ನು ಅವರ ನಡುವೆ ಹಂಚಿದ್ದೇವೆ. ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಕೆಳದರ್ಜೆಯವರನ್ನಾಗಿ ಮಾಡಿಕೊಳ್ಳಲು ನಾವು ಅವರಲ್ಲಿ ಕೆಲವರಿಗೆ ಇತರರಿಗಿಂತ ಉನ್ನತ ಸ್ಥಾನಮಾನವನ್ನು ನೀಡಿದ್ದೇವೆ. ಅವರು ಸಂಗ್ರಹಿಸಿಡುವ ಎಲ್ಲಾ ವಸ್ತುಗಳಿಗಿಂತಲೂ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯು ಶ್ರೇಷ್ಠವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْلَآ أَن يَكُونَ ٱلنَّاسُ أُمَّةً وَٰحِدَةً لَّجَعَلْنَا لِمَن يَكْفُرُ بِٱلرَّحْمَٰنِ لِبُيُوتِهِمْ سُقُفًا مِّن فِضَّةٍ وَمَعَارِجَ عَلَيْهَا يَظْهَرُونَ

Kannada Translation - Hamza Buturಮನುಷ್ಯರೆಲ್ಲರೂ ಒಂದೇ (ಸತ್ಯನಿಷೇಧಿ) ಸಮುದಾಯವಾಗಿ ಮಾರ್ಪಡಲಾರರು ಎಂದಿದ್ದರೆ ಪರಮ ದಯಾಮಯನನ್ನು (ಅಲ್ಲಾಹನನ್ನು) ನಿಷೇಧಿಸುವವರ ಮನೆಗಳಿಗೆ ನಾವು ಬೆಳ್ಳಿಯ ಛಾವಣಿಗಳನ್ನು ಮತ್ತು ಮೇಲೇರಲು (ಬೆಳ್ಳಿಯ) ಮಟ್ಟಿಲುಗಳನ್ನು ನಿರ್ಮಿಸಿಕೊಡುತ್ತಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلِبُيُوتِهِمْ أَبْوَٰبًا وَسُرُرًا عَلَيْهَا يَتَّكِـُٔونَ

Kannada Translation - Hamza Buturಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲುಗಳನ್ನು ಮತ್ತು ಒರಗಿ ಕೂರಲು (ಬೆಳ್ಳಿಯ) ಮಂಚಗಳನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَزُخْرُفًا وَإِن كُلُّ ذَٰلِكَ لَمَّا مَتَٰعُ ٱلْحَيَوٰةِ ٱلدُّنْيَا وَٱلْـَٔاخِرَةُ عِندَ رَبِّكَ لِلْمُتَّقِينَ

Kannada Translation - Hamza Buturಮತ್ತು ಸ್ವರ್ಣಾಲಂಕಾರಗಳನ್ನು. ಆದರೆ ಅವೆಲ್ಲವೂ ಇಹಲೋಕ ಜೀವನದ ಸವಲತ್ತುಗಳಾಗಿವೆ. ಪರಲೋಕವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ದೇವಭಯವುಳ್ಳವರಿಗೆ ಮಾತ್ರವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَن يَعْشُ عَن ذِكْرِ ٱلرَّحْمَٰنِ نُقَيِّضْ لَهُۥ شَيْطَٰنًا فَهُوَ لَهُۥ قَرِينٌ

Kannada Translation - Hamza Buturಯಾರು ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿರ್ಲಕ್ಷಿಸುತ್ತಾನೋ ಅವನಿಗೆ ನಾವು ಒಬ್ಬ ಶೈತಾನನನ್ನು ನಿಶ್ಚಯಿಸುವೆವು. ಅವನು (ಶೈತಾನನು) ಅವನ ಸಂಗಡಿಗನಾಗುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّهُمْ لَيَصُدُّونَهُمْ عَنِ ٱلسَّبِيلِ وَيَحْسَبُونَ أَنَّهُم مُّهْتَدُونَ

Kannada Translation - Hamza Buturಅವರು (ಶೈತಾನರು) ಅವರನ್ನು ಸನ್ಮಾರ್ಗದಿಂದ ತಡೆಯುವರು. ನಿಶ್ಚಯವಾಗಿಯೂ ನಾವು ಸನ್ಮಾರ್ಗದಲ್ಲಿದ್ದೇವೆಂದೇ ಅವರು ಭಾವಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَا جَآءَنَا قَالَ يَٰلَيْتَ بَيْنِى وَبَيْنَكَ بُعْدَ ٱلْمَشْرِقَيْنِ فَبِئْسَ ٱلْقَرِينُ

Kannada Translation - Hamza Buturಎಲ್ಲಿಯವರೆಗೆಂದರೆ, ಅವನು (ಮನುಷ್ಯನು) ನಮ್ಮ ಬಳಿಗೆ ತಲುಪುವಾಗ (ತನ್ನ ಸಂಗಡಿಗನಾದ ಶೈತಾನನೊಂದಿಗೆ) ಹೇಳುವನು: “ನನ್ನ ಮತ್ತು ನಿನ್ನ ನಡುವೆ ಪೂರ್ವ ಮತ್ತು ಪಶ್ಚಿಮದಷ್ಟು ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!” ಆ ಸಂಗಡಿಗನು ಬಹಳ ನಿಕೃಷ್ಟನಾಗಿದ್ದಾನೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَن يَنفَعَكُمُ ٱلْيَوْمَ إِذ ظَّلَمْتُمْ أَنَّكُمْ فِى ٱلْعَذَابِ مُشْتَرِكُونَ

Kannada Translation - Hamza Buturನೀವು ಅಕ್ರಮಿಗಳಾಗಿದ್ದರೆ, ಇಂದು ನೀವೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗಿದ್ದೀರಿ ಎನ್ನುವುದು ನಿಮಗೆ ಯಾವುದೇ ಉಪಕಾರ ಮಾಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَفَأَنتَ تُسْمِعُ ٱلصُّمَّ أَوْ تَهْدِى ٱلْعُمْىَ وَمَن كَانَ فِى ضَلَٰلٍ مُّبِينٍ

Kannada Translation - Hamza Buturಹಾಗಾದರೆ, ಕಿವುಡರಿಗೆ ಕೇಳುವಂತೆ ಮಾಡಲು ಮತ್ತು ಕುರುಡರಿಗೆ ಹಾಗೂ ಸ್ಪಷ್ಟ ದುರ್ಮಾರ್ಗದಲ್ಲಿರುವವರಿಗೆ ದಾರಿ ತೋರಿಸಿಕೊಡಲು ನಿಮ್ಮಿಂದ ಸಾಧ್ಯವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ

Kannada Translation - Hamza Buturನಾವು ನಿಮ್ಮನ್ನು ಇಲ್ಲಿಂದ ಕೊಂಡೊಯ್ಯುವುದಾದರೂ ಸಹ, ನಿಶ್ಚಯವಾಗಿಯೂ ನಾವು ಅವರಿಂದ ಪ್ರತೀಕಾರ ಪಡೆಯುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوْ نُرِيَنَّكَ ٱلَّذِى وَعَدْنَٰهُمْ فَإِنَّا عَلَيْهِم مُّقْتَدِرُونَ

Kannada Translation - Hamza Buturಅಥವಾ ಅವರಿಗೆ ನಾವು ಎಚ್ಚರಿಕೆ ನೀಡಿದ ಶಿಕ್ಷೆಯನ್ನು ನಾವು ನಿಮಗೆ ತೋರಿಸಿಕೊಡುವುದಾದರೂ ನಮಗೆ ಅವರ ಮೇಲೆ ಸಂಪೂರ್ಣ ಸಾಮರ್ಥ್ಯವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱسْتَمْسِكْ بِٱلَّذِىٓ أُوحِىَ إِلَيْكَ إِنَّكَ عَلَىٰ صِرَٰطٍ مُّسْتَقِيمٍ

Kannada Translation - Hamza Buturಆದ್ದರಿಂದ ನಿಮಗೆ ದೇವವಾಣಿಯ ಮೂಲಕ ನೀಡಲಾಗಿರುವುದನ್ನು ಬಿಗಿಯಾಗಿ ಹಿಡಿಯಿರಿ. ನಿಶ್ಚಯವಾಗಿಯೂ ನೀವು ನೇರಮಾರ್ಗಲ್ಲಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّهُۥ لَذِكْرٌ لَّكَ وَلِقَوْمِكَ وَسَوْفَ تُسْـَٔلُونَ

Kannada Translation - Hamza Buturನಿಶ್ಚಯವಾಗಿಯೂ ಇದು ನಿಮಗೆ ಮತ್ತು ನಿಮ್ಮ ಜನರಿಗೆ ಒಂದು ಉಪದೇಶವಾಗಿದೆ. ಸದ್ಯವೇ ನಿಮ್ಮೊಡನೆ ಪ್ರಶ್ನಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَسْـَٔلْ مَنْ أَرْسَلْنَا مِن قَبْلِكَ مِن رُّسُلِنَآ أَجَعَلْنَا مِن دُونِ ٱلرَّحْمَٰنِ ءَالِهَةً يُعْبَدُونَ

Kannada Translation - Hamza Buturನಿಮಗಿಂತ ಮೊದಲು ನಾವು ಕಳುಹಿಸಿದ ನಮ್ಮ ಸಂದೇಶವಾಹಕರೊಡನೆ ಕೇಳಿ ನೋಡಿರಿ, “ಪರಮ ದಯಾಮಯನ (ಅಲ್ಲಾಹನ) ಹೊರತು ಆರಾಧಿಸಲಾಗುವ ಒಬ್ಬ ದೇವರನ್ನು ನಾವು ನಿಶ್ಚಯಿಸಿದ್ದೇವೆಯೇ?” ಎಂದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ أَرْسَلْنَا مُوسَىٰ بِـَٔايَٰتِنَآ إِلَىٰ فِرْعَوْنَ وَمَلَإِي۟هِۦ فَقَالَ إِنِّى رَسُولُ رَبِّ ٱلْعَٰلَمِينَ

Kannada Translation - Hamza Buturನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫರೋಹ ಮತ್ತು ಅವನ ಮುಖಂಡರ ಕಡೆಗೆ ಕಳುಹಿಸಿದೆವು. ಮೂಸಾ ಹೇಳಿದರು: “ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَمَّا جَآءَهُم بِـَٔايَٰتِنَآ إِذَا هُم مِّنْهَا يَضْحَكُونَ

Kannada Translation - Hamza Buturಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಗಹಗಹಿಸಿ ನಗತೊಡಗಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا نُرِيهِم مِّنْ ءَايَةٍ إِلَّا هِىَ أَكْبَرُ مِنْ أُخْتِهَا وَأَخَذْنَٰهُم بِٱلْعَذَابِ لَعَلَّهُمْ يَرْجِعُونَ

Kannada Translation - Hamza Buturನಾವು ಅವರಿಗೆ ತೋರಿಸುತ್ತಿದ್ದ ಒಂದೊಂದು ದೃಷ್ಟಾಂತವು ಇನ್ನೊಂದು ದೃಷ್ಟಾಂತಕ್ಕಿಂತ ದೊಡ್ಡದಾಗಿತ್ತು. ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದೆವು. ಅವರು ಮರಳಿ ಬರುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ يَٰٓأَيُّهَ ٱلسَّاحِرُ ٱدْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ

Kannada Translation - Hamza Buturಅವರು ಹೇಳಿದರು: “ಓ ಮಾಟಗಾರನೇ! ನಿನ್ನ ಪರಿಪಾಲಕನು (ಅಲ್ಲಾಹು) ನಿನಗೆ ಏನು ವಾಗ್ದಾನ ಮಾಡಿದ್ದಾನೋ ಅದರ ಮೂಲಕ ಅವನನ್ನು ಕರೆದು ನಮಗೋಸ್ಕರ ಪ್ರಾರ್ಥಿಸು. ನಿಶ್ಚಯವಾಗಿಯೂ ನಾವು ಸನ್ಮಾರ್ಗದಲ್ಲಾಗುವೆವು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَمَّا كَشَفْنَا عَنْهُمُ ٱلْعَذَابَ إِذَا هُمْ يَنكُثُونَ

Kannada Translation - Hamza Buturಆದರೆ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ ಅಗೋ! ಅವರು ಮಾತು ತಪ್ಪುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَادَىٰ فِرْعَوْنُ فِى قَوْمِهِۦ قَالَ يَٰقَوْمِ أَلَيْسَ لِى مُلْكُ مِصْرَ وَهَٰذِهِ ٱلْأَنْهَٰرُ تَجْرِى مِن تَحْتِىٓ أَفَلَا تُبْصِرُونَ

Kannada Translation - Hamza Buturಫರೋಹ ತನ್ನ ಜನರನ್ನು ಕರೆದು ಘೋಷಿಸಿದನು: “ಓ ನನ್ನ ಜನರೇ! ಈಜಿಪ್ಟಿನ ಸಾಮ್ರಾಜ್ಯವು ನನ್ನದಲ್ಲವೇ? ಈ ನದಿಗಳು ನನ್ನ (ಅರಮನೆಯ) ತಳಭಾಗದಿಂದ ಹರಿಯುತ್ತಿವೆ. ನೀವು ನೋಡುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ أَنَا۠ خَيْرٌ مِّنْ هَٰذَا ٱلَّذِى هُوَ مَهِينٌ وَلَا يَكَادُ يُبِينُ

Kannada Translation - Hamza Buturಮಾತನಾಡಲು ಕೂಡ ಸರಿಯಾಗಿ ಬರದ ಈ ಅಲ್ಪನಿಗಿಂತ ನಾನು ಶ್ರೇಷ್ಠನಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَوْلَآ أُلْقِىَ عَلَيْهِ أَسْوِرَةٌ مِّن ذَهَبٍ أَوْ جَآءَ مَعَهُ ٱلْمَلَٰٓئِكَةُ مُقْتَرِنِينَ

Kannada Translation - Hamza Buturಈತನಿಗೆ ಸ್ವರ್ಣ ಕಡಗಗಳನ್ನು ಏಕೆ ತೊಡಿಸಲಾಗಿಲ್ಲ? ಅಥವಾ ಈತನಿಗೆ ಸಹಾಯಕರಾಗಿ ದೇವದೂತರು‍ಗಳು ಏಕೆ ಬಂದಿಲ್ಲ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱسْتَخَفَّ قَوْمَهُۥ فَأَطَاعُوهُ إِنَّهُمْ كَانُوا۟ قَوْمًا فَٰسِقِينَ

Kannada Translation - Hamza Buturಅವನು ತನ್ನ ಜನರನ್ನು ಮರುಳುಗೊಳಿಸಿದನು. ಅವರು ಅವನ ಮಾತನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَمَّآ ءَاسَفُونَا ٱنتَقَمْنَا مِنْهُمْ فَأَغْرَقْنَٰهُمْ أَجْمَعِينَ

Kannada Translation - Hamza Buturಅವರು ನಮ್ಮನ್ನು ರೇಗಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَجَعَلْنَٰهُمْ سَلَفًا وَمَثَلًا لِّلْـَٔاخِرِينَ

Kannada Translation - Hamza Buturಹೀಗೆ ನಾವು ಅವರನ್ನು ಒಂದು ಪೂರ್ವ ಮಾದರಿಯಾಗಿ ಮತ್ತು ನಂತರದವರಿಗೆ ಒಂದು ಉದಾಹರಣೆಯಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَمَّا ضُرِبَ ٱبْنُ مَرْيَمَ مَثَلًا إِذَا قَوْمُكَ مِنْهُ يَصِدُّونَ

Kannada Translation - Hamza Buturಮರ್ಯಮರ ಪುತ್ರನನ್ನು (ಈಸಾರನ್ನು) ಉದಾಹರಣೆಯಾಗಿ ತೋರಿಸಲಾದಾಗ ಅಗೋ! ನಿಮ್ಮ ಜನರು ಅಟ್ಟಹಾಸದಿಂದ ನಗುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوٓا۟ ءَأَٰلِهَتُنَا خَيْرٌ أَمْ هُوَ مَا ضَرَبُوهُ لَكَ إِلَّا جَدَلًۢا بَلْ هُمْ قَوْمٌ خَصِمُونَ

Kannada Translation - Hamza Buturಅವರು ಕೇಳಿದರು: “ನಮ್ಮ ದೇವರುಗಳು ಶ್ರೇಷ್ಠರೋ ಅಥವಾ ಅವನೋ?”[1] ಅವರು ಕೇವಲ ತರ್ಕಕ್ಕಾಗಿ ನಿಮ್ಮ ಮುಂದೆ ಅದನ್ನು ಹೇಳಿದ್ದರು. ವಾಸ್ತವವಾಗಿ, ಅವರು ಜಗಳಗಂಟಿ ಜನರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنْ هُوَ إِلَّا عَبْدٌ أَنْعَمْنَا عَلَيْهِ وَجَعَلْنَٰهُ مَثَلًا لِّبَنِىٓ إِسْرَٰٓءِيلَ

Kannada Translation - Hamza Buturಅವರು (ಈಸಾ) ಕೇವಲ ಒಬ್ಬ ದಾಸ. ನಾವು ಅವರಿಗೆ ಅನುಗ್ರಹವನ್ನು ನೀಡಿ ಅವರನ್ನು ಇಸ್ರಾಯೇಲ್ ಮಕ್ಕಳಿಗೆ ಮಾದರಿಯಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ نَشَآءُ لَجَعَلْنَا مِنكُم مَّلَٰٓئِكَةً فِى ٱلْأَرْضِ يَخْلُفُونَ

Kannada Translation - Hamza Buturನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಬದಲಿಗೆ (ಒಬ್ಬರ ನಂತರ ಒಬ್ಬರು) ಉತ್ತರಾಧಿಕಾರಿಗಳಾಗಿ ಬರುವ ದೇವದೂತರು‍ಗಳನ್ನು ಉಂಟುಮಾಡುತ್ತಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّهُۥ لَعِلْمٌ لِّلسَّاعَةِ فَلَا تَمْتَرُنَّ بِهَا وَٱتَّبِعُونِ هَٰذَا صِرَٰطٌ مُّسْتَقِيمٌ

Kannada Translation - Hamza Buturನಿಶ್ಚಯವಾಗಿಯೂ ಅವರು (ಈಸಾ) ಅಂತ್ಯಸಮಯದ ಒಂದು ಚಿಹ್ನೆಯಾಗಿದ್ದಾರೆ.[1] ಆದ್ದರಿಂದ ನೀವು ಅದರ (ಅಂತ್ಯಸಮಯದ) ವಿಷಯದಲ್ಲಿ ಸಂಶಯಪಡಬೇಡಿ. ನನ್ನನ್ನು ಅನುಸರಿಸಿರಿ. ಇದೇ ನೇರವಾದ ಮಾರ್ಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يَصُدَّنَّكُمُ ٱلشَّيْطَٰنُ إِنَّهُۥ لَكُمْ عَدُوٌّ مُّبِينٌ

Kannada Translation - Hamza Buturಶೈತಾನನು ನಿಮ್ಮನ್ನು (ನೇರಮಾರ್ಗದಿಂದ) ತಡೆಯದಿರಲಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَمَّا جَآءَ عِيسَىٰ بِٱلْبَيِّنَٰتِ قَالَ قَدْ جِئْتُكُم بِٱلْحِكْمَةِ وَلِأُبَيِّنَ لَكُم بَعْضَ ٱلَّذِى تَخْتَلِفُونَ فِيهِ فَٱتَّقُوا۟ ٱللَّهَ وَأَطِيعُونِ

Kannada Translation - Hamza Buturಈಸಾ ಪವಾಡಗಳೊಂದಿಗೆ ಬಂದು ಹೇಳಿದರು: “ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ವಿವೇಕವನ್ನು ತಂದಿದ್ದೇನೆ. ನೀವು ಭಿನ್ನಮತ ತಳೆದಿರುವ ವಿಷಯಗಳಲ್ಲಿ ಕೆಲವನ್ನು ನಿಮಗೆ ವಿವರಿಸಿಕೊಡುವುದಕ್ಕಾಗಿ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱللَّهَ هُوَ رَبِّى وَرَبُّكُمْ فَٱعْبُدُوهُ هَٰذَا صِرَٰطٌ مُّسْتَقِيمٌ

Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನೇ ನನ್ನ ಮತ್ತು ನಿಮ್ಮ ಪರಿಪಾಲಕನು. ಆದ್ದರಿಂದ ಅವನನ್ನೇ ಆರಾಧಿಸಿರಿ. ಇದೇ ನೇರವಾದ ಮಾರ್ಗ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱخْتَلَفَ ٱلْأَحْزَابُ مِنۢ بَيْنِهِمْ فَوَيْلٌ لِّلَّذِينَ ظَلَمُوا۟ مِنْ عَذَابِ يَوْمٍ أَلِيمٍ

Kannada Translation - Hamza Buturನಂತರ (ಇಸ್ರಾಯೇಲರಲ್ಲಿದ್ದ) ಗುಂಪುಗಳು ಪರಸ್ಪರ ಭಿನ್ನಮತ ತಳೆದರು. ಆದ್ದರಿಂದ ಅಕ್ರಮಿಗಳಿಗೆ ಯಾತನಾಮಯ ದಿನದ ಶಿಕ್ಷೆಯಿಂದಾಗಿ ವಿನಾಶ ಕಾದಿದೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَلْ يَنظُرُونَ إِلَّا ٱلسَّاعَةَ أَن تَأْتِيَهُم بَغْتَةً وَهُمْ لَا يَشْعُرُونَ

Kannada Translation - Hamza Buturಅವರು ನಿರೀಕ್ಷಿಸದ ರೀತಿಯಲ್ಲಿ ಹಠಾತ್ತನೆ ಅಂತ್ಯಸಮಯವು ಅವರ ಬಳಿಗೆ ಬರುವುದನ್ನು ಅವರು ಕಾಯುತ್ತಿದ್ದಾರೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلْأَخِلَّآءُ يَوْمَئِذٍۭ بَعْضُهُمْ لِبَعْضٍ عَدُوٌّ إِلَّا ٱلْمُتَّقِينَ

Kannada Translation - Hamza Buturಅಂದು ಆಪ್ತಮಿತ್ರರು ಪರಸ್ಪರ ವೈರಿಗಳಾಗುವರು. ದೇವಭಯವುಳ್ಳವರ ಹೊರತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَٰعِبَادِ لَا خَوْفٌ عَلَيْكُمُ ٱلْيَوْمَ وَلَآ أَنتُمْ تَحْزَنُونَ

Kannada Translation - Hamza Butur(ದೇವಭಯವುಳ್ಳವರೊಡನೆ ಹೇಳಲಾಗುವುದು): “ಓ ನನ್ನ ದಾಸರೇ! ಇಂದು ನಿಮಗೆ ಯಾವುದೇ ಭಯವಿಲ್ಲ. ನೀವು ದುಃಖಿಸಬೇಕಾಗಿಯೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ ءَامَنُوا۟ بِـَٔايَٰتِنَا وَكَانُوا۟ مُسْلِمِينَ

Kannada Translation - Hamza Buturಅವರು (ದಾಸರು) ಯಾರೆಂದರೆ, ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟವರು ಮತ್ತು ಮುಸ್ಲಿಮರಾದವರು (ನನ್ನ ಆಜ್ಞೆಗಳನ್ನು ಶಿರಸಾ ಪಾಲಿಸಿದವರು).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱدْخُلُوا۟ ٱلْجَنَّةَ أَنتُمْ وَأَزْوَٰجُكُمْ تُحْبَرُونَ

Kannada Translation - Hamza Buturನೀವು ಮತ್ತು ನಿಮ್ಮ ಪತ್ನಿಯರು ಸಂತೋಷದಿಂದ ಸ್ವರ್ಗವನ್ನು ಪ್ರವೇಶಿಸಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُطَافُ عَلَيْهِم بِصِحَافٍ مِّن ذَهَبٍ وَأَكْوَابٍ وَفِيهَا مَا تَشْتَهِيهِ ٱلْأَنفُسُ وَتَلَذُّ ٱلْأَعْيُنُ وَأَنتُمْ فِيهَا خَٰلِدُونَ

Kannada Translation - Hamza Buturಸ್ವರ್ಣ ಬಟ್ಟಲುಗಳನ್ನು ಮತ್ತು ಲೋಟಗಳನ್ನು ಅವರ ಸುತ್ತಲೂ ತರಲಾಗುವುದು. ಅವರ ಮನಸ್ಸುಗಳು ಬಯಸುವುದೆಲ್ಲವೂ ಮತ್ತು ಅವರ ಕಣ್ಣುಗಳಿಗೆ ಆನಂದ ನೀಡುವುದೆಲ್ಲವೂ ಅಲ್ಲಿರುವುವು. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتِلْكَ ٱلْجَنَّةُ ٱلَّتِىٓ أُورِثْتُمُوهَا بِمَا كُنتُمْ تَعْمَلُونَ

Kannada Translation - Hamza Buturಆ ಸ್ವರ್ಗವನ್ನು ನೀವು ಮಾಡಿರುವ ಕರ್ಮಗಳ ಕಾರಣ ನಿಮಗೆ ಉತ್ತರಾಧಿಕಾರವಾಗಿ ನೀಡಲಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَكُمْ فِيهَا فَٰكِهَةٌ كَثِيرَةٌ مِّنْهَا تَأْكُلُونَ

Kannada Translation - Hamza Buturಅಲ್ಲಿ ನಿಮಗೆ ಯಥೇಷ್ಟ ಹಣ್ಣು-ಹಂಪಲುಗಳಿವೆ. ಅದರಿಂದ ನೀವು ತಿನ್ನುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلْمُجْرِمِينَ فِى عَذَابِ جَهَنَّمَ خَٰلِدُونَ

Kannada Translation - Hamza Buturನಿಶ್ಚಯವಾಗಿಯೂ ಅಪರಾಧಿಗಳು ನರಕದ ಶಿಕ್ಷೆಯಲ್ಲಿ ಶಾಶ್ವತವಾಗಿ ವಾಸಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يُفَتَّرُ عَنْهُمْ وَهُمْ فِيهِ مُبْلِسُونَ

Kannada Translation - Hamza Buturಅದನ್ನು ಅವರಿಗೆ ಹಗುರಗೊಳಿಸಲಾಗುವುದೇ ಇಲ್ಲ. ಅವರು ಅದರಲ್ಲಿ ನಿರಾಶರಾಗಿ ಕಳೆಯುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا ظَلَمْنَٰهُمْ وَلَٰكِن كَانُوا۟ هُمُ ٱلظَّٰلِمِينَ

Kannada Translation - Hamza Buturನಾವು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَادَوْا۟ يَٰمَٰلِكُ لِيَقْضِ عَلَيْنَا رَبُّكَ قَالَ إِنَّكُم مَّٰكِثُونَ

Kannada Translation - Hamza Buturಅವರು ಕೂಗಿ ಹೇಳುವರು: “ಓ ಮಾಲಿಕ್! ನಿಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ಮುಗಿಸಿ ಬಿಡಲು ಹೇಳಿ!” ಮಾಲಿಕ್ ಹೇಳುವರು: “ನೀವು (ಶಾಶ್ವತವಾಗಿ) ಇಲ್ಲೇ ವಾಸಿಸುವಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَقَدْ جِئْنَٰكُم بِٱلْحَقِّ وَلَٰكِنَّ أَكْثَرَكُمْ لِلْحَقِّ كَٰرِهُونَ

Kannada Translation - Hamza Buturನಿಶ್ಚಯವಾಗಿಯೂ ನಾವು ಸತ್ಯವನ್ನು ನಿಮ್ಮ ಬಳಿಗೆ ತಂದಿದ್ದೆವು. ಆದರೆ ನಿಮ್ಮಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ أَبْرَمُوٓا۟ أَمْرًا فَإِنَّا مُبْرِمُونَ

Kannada Translation - Hamza Buturಅವರು ಯಾವುದಾದರೂ ವಿಷಯವನ್ನು ತೀರ್ಮಾನಿಸಿ ಬಿಟ್ಟಿದ್ದಾರೆಯೇ? ಹಾಗಾದರೆ ನಾವು ಕೂಡ ಒಂದು ವಿಷಯವನ್ನು ತೀರ್ಮಾನಿಸುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَىٰهُم بَلَىٰ وَرُسُلُنَا لَدَيْهِمْ يَكْتُبُونَ

Kannada Translation - Hamza Buturಅವರ ರಹಸ್ಯ ಮಾತುಗಳನ್ನು ಮತ್ತು ಗುಪ್ತ ಸಂಭಾಷಣೆಗಳನ್ನು ನಾವು ಕೇಳುತ್ತಿಲ್ಲ ಎಂದು ಅವರು ಭಾವಿಸಿದ್ದಾರೆಯೇ? ಹೌದು! ನಮ್ಮ ದೂತರು ಅವರ ಬಳಿ ದಾಖಲಿಸುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ إِن كَانَ لِلرَّحْمَٰنِ وَلَدٌ فَأَنَا۠ أَوَّلُ ٱلْعَٰبِدِينَ

Kannada Translation - Hamza Buturಹೇಳಿರಿ: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಮಕ್ಕಳಿರುತ್ತಿದ್ದರೆ ನಾನೇ ಮೊತ್ತಮೊದಲು (ಅವರನ್ನು) ಆರಾಧಿಸುತ್ತಿದ್ದೆನು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سُبْحَٰنَ رَبِّ ٱلسَّمَٰوَٰتِ وَٱلْأَرْضِ رَبِّ ٱلْعَرْشِ عَمَّا يَصِفُونَ

Kannada Translation - Hamza Buturಭೂಮ್ಯಾಕಾಶಗಳ ಮತ್ತು ಮಹಾ ಸಿಂಹಾಸನದ ಪರಿಪಾಲಕನು (ಅಲ್ಲಾಹು) ಅವರು ಸುಳ್ಳು ಸುಳ್ಳಾಗಿ ಹೇಳುವ ಎಲ್ಲಾ ಆರೋಪಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَرْهُمْ يَخُوضُوا۟ وَيَلْعَبُوا۟ حَتَّىٰ يُلَٰقُوا۟ يَوْمَهُمُ ٱلَّذِى يُوعَدُونَ

Kannada Translation - Hamza Buturಆದ್ದರಿಂದ ನೀವು ಅವರನ್ನು ಅವರ ವ್ಯರ್ಥ ಮಾತುಗಳಲ್ಲಿ ಮತ್ತು ಆಟಗಳಲ್ಲಿ ತಲ್ಲೀನರಾಗಲು ಬಿಟ್ಟುಬಿಡಿ. ಎಲ್ಲಿಯರೆಗೆಂದರೆ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಅವರು ಎದುರುಗೊಳ್ಳುವ ತನಕ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ ٱلَّذِى فِى ٱلسَّمَآءِ إِلَٰهٌ وَفِى ٱلْأَرْضِ إِلَٰهٌ وَهُوَ ٱلْحَكِيمُ ٱلْعَلِيمُ

Kannada Translation - Hamza Buturಅವನೇ ಆಕಾಶದಲ್ಲಿರುವ ದೇವನು ಮತ್ತು ಭೂಮಿಯಲ್ಲಿಯೂ ಆರಾಧನೆಗೆ ಅರ್ಹನಾಗಿರುವವನು. ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَبَارَكَ ٱلَّذِى لَهُۥ مُلْكُ ٱلسَّمَٰوَٰتِ وَٱلْأَرْضِ وَمَا بَيْنَهُمَا وَعِندَهُۥ عِلْمُ ٱلسَّاعَةِ وَإِلَيْهِ تُرْجَعُونَ

Kannada Translation - Hamza Buturಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಯಾರದ್ದೋ ಅವನು ಸಮೃದ್ಧಪೂರ್ಣನಾಗಿದ್ದಾನೆ. ಅಂತ್ಯದಿನದ ಜ್ಞಾನವಿರುವುದು ಅವನ ಬಳಿ ಮಾತ್ರ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يَمْلِكُ ٱلَّذِينَ يَدْعُونَ مِن دُونِهِ ٱلشَّفَٰعَةَ إِلَّا مَن شَهِدَ بِٱلْحَقِّ وَهُمْ يَعْلَمُونَ

Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ ಅವರಿಗೆ ಶಿಫಾರಸು ಮಾಡುವ ಯಾವುದೇ ಅಧಿಕಾರವಿಲ್ಲ. ಸತ್ಯಕ್ಕೆ ಸಾಕ್ಷ್ಯ ವಹಿಸಿದವರು ಮತ್ತು ಜ್ಞಾನವುಳ್ಳವರ ಹೊರತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَئِن سَأَلْتَهُم مَّنْ خَلَقَهُمْ لَيَقُولُنَّ ٱللَّهُ فَأَنَّىٰ يُؤْفَكُونَ

Kannada Translation - Hamza Buturನೀವು ಅವರೊಡನೆ, “ಅವರನ್ನು ಸೃಷ್ಟಿಸಿದ್ದು ಯಾರು?” ಎಂದು ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು” ಎನ್ನುತ್ತಾರೆ. ಆದರೂ ಅವರನ್ನು ತಪ್ಪಿಸಲಾಗುತ್ತಿರುವುದು ಹೇಗೆ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقِيلِهِۦ يَٰرَبِّ إِنَّ هَٰٓؤُلَآءِ قَوْمٌ لَّا يُؤْمِنُونَ

Kannada Translation - Hamza Buturಅವರು (ಪ್ರವಾದಿಯು ಹೆಚ್ಚಾಗಿ) ಹೇಳುವ ಈ ಮಾತು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಇವರು ವಿಶ್ವಾಸವಿಡದ ಜನರಾಗಿದ್ದಾರೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱصْفَحْ عَنْهُمْ وَقُلْ سَلَٰمٌ فَسَوْفَ يَعْلَمُونَ

Kannada Translation - Hamza Buturಆದ್ದರಿಂದ ನೀವು ಅವರಿಂದ ವಿಮುಖರಾಗಿ ಬಿಡಿ. ಅವರೊಡನೆ “ಸಲಾಂ” ಎಂದು ಹೇಳಿರಿ. ಅವರು ಸದ್ಯವೇ ತಿಳಿದುಕೊಳ್ಳುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70