caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Fussilat فصلت

54 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 61

بِسْمِ ٱللَّهِ ٱلرَّحْمَٰنِ ٱلرَّحِيمِ حمٓ

Kannada Translation - Hamza Buturಹಾ-ಮೀಮ್.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

تَنزِيلٌ مِّنَ ٱلرَّحْمَٰنِ ٱلرَّحِيمِ

Kannada Translation - Hamza Buturಇದು ಪರಮ ದಯಾಳು ಮತ್ತು ಕರುಣಾನಿಧಿಯಾದ (ಅಲ್ಲಾಹನ) ಕಡೆಯಿಂದ ಅವತೀರ್ಣವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كِتَٰبٌ فُصِّلَتْ ءَايَٰتُهُۥ قُرْءَانًا عَرَبِيًّا لِّقَوْمٍ يَعْلَمُونَ

Kannada Translation - Hamza Buturಇದು ವಚನಗಳನ್ನು ವಿವರಿಸಿಕೊಡಲಾದ ಗ್ರಂಥವಾಗಿದೆ. ತಿಳುವಳಿಕೆಯಿರುವ ಜನರಿಗೆ ಅರಬ್ಬಿ ಭಾಷೆಯಲ್ಲಿರುವ ಕುರ್‌ಆನ್ ಆಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَشِيرًا وَنَذِيرًا فَأَعْرَضَ أَكْثَرُهُمْ فَهُمْ لَا يَسْمَعُونَ

Kannada Translation - Hamza Buturಇದು ಸುವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ (ಗ್ರಂಥವಾಗಿದೆ). ಆದರೆ ಅವರಲ್ಲಿ ಹೆಚ್ಚಿನವರು ವಿಮುಖರಾಗಿದ್ದಾರೆ. ಅವರು (ಇದಕ್ಕೆ) ಕಿವಿಗೊಡುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ قُلُوبُنَا فِىٓ أَكِنَّةٍ مِّمَّا تَدْعُونَآ إِلَيْهِ وَفِىٓ ءَاذَانِنَا وَقْرٌ وَمِنۢ بَيْنِنَا وَبَيْنِكَ حِجَابٌ فَٱعْمَلْ إِنَّنَا عَٰمِلُونَ

Kannada Translation - Hamza Buturಅವರು ಹೇಳಿದರು: “ನೀವು ನಮ್ಮನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ (ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ) ರೀತಿಯಲ್ಲಿ ನಮ್ಮ ಹೃದಯಗಳನ್ನು ಮುಚ್ಚಲಾಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ ಮತ್ತು ನಿಮ್ಮ ನಡುವೆ ಒಂದು ಪರದೆಯಿದೆ. ಆದ್ದರಿಂದ ನೀವು ಕರ್ಮವೆಸಗಿರಿ. ನಾವು ಕೂಡ ಕರ್ಮವೆಸಗುತ್ತೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ إِنَّمَآ أَنَا۠ بَشَرٌ مِّثْلُكُمْ يُوحَىٰٓ إِلَىَّ أَنَّمَآ إِلَٰهُكُمْ إِلَٰهٌ وَٰحِدٌ فَٱسْتَقِيمُوٓا۟ إِلَيْهِ وَٱسْتَغْفِرُوهُ وَوَيْلٌ لِّلْمُشْرِكِينَ

Kannada Translation - Hamza Buturಹೇಳಿರಿ: “ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಆದ್ದರಿಂದ ನೀವು ಅವನ ಕಡೆಗೆ ತಿರುಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ.” ಬಹುದೇವಾರಾಧಕರಿಗೆ ವಿನಾಶ ಕಾದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ لَا يُؤْتُونَ ٱلزَّكَوٰةَ وَهُم بِٱلْـَٔاخِرَةِ هُمْ كَٰفِرُونَ

Kannada Translation - Hamza Buturಅಂದರೆ ಝಕಾತ್ ನೀಡದವರಿಗೆ. ಅವರು ಪರಲೋಕವನ್ನು ನಿಷೇಧಿಸುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ لَهُمْ أَجْرٌ غَيْرُ مَمْنُونٍ

Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅಂತ್ಯವಿಲ್ಲದ ಪ್ರತಿಫಲವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ أَئِنَّكُمْ لَتَكْفُرُونَ بِٱلَّذِى خَلَقَ ٱلْأَرْضَ فِى يَوْمَيْنِ وَتَجْعَلُونَ لَهُۥٓ أَندَادًا ذَٰلِكَ رَبُّ ٱلْعَٰلَمِينَ

Kannada Translation - Hamza Buturಹೇಳಿರಿ: “ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದ (ಅಲ್ಲಾಹನನ್ನು) ನೀವು ನಿಷೇಧಿಸುತ್ತೀರಾ ಮತ್ತು ಅವನೊಂದಿಗೆ ಸರಿಸಾಟಿಗಳನ್ನು ಮಾಡುತ್ತೀರಾ? ಅವನೇ ಸರ್ವಲೋಕಗಳ ಪರಿಪಾಲಕ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلَ فِيهَا رَوَٰسِىَ مِن فَوْقِهَا وَبَٰرَكَ فِيهَا وَقَدَّرَ فِيهَآ أَقْوَٰتَهَا فِىٓ أَرْبَعَةِ أَيَّامٍ سَوَآءً لِّلسَّآئِلِينَ

Kannada Translation - Hamza Buturಅವನು ಭೂಮಿಯಲ್ಲಿ—ಅದರ ಮೇಲ್ಭಾಗದಲ್ಲಿ—ಪರ್ವತಗಳನ್ನು ಸ್ಥಾಪಿಸಿದನು ಮತ್ತು ಅದರಲ್ಲಿ ಸಮೃದ್ಧಿಯನ್ನಿಟ್ಟನು. ಅದರಲ್ಲಿರುವ (ನಿವಾಸಿಗಳ) ಆಹಾರಗಳನ್ನು ಅದರಲ್ಲಿ ನಿರ್ಣಯಿಸಿದನು. (ಅವನು ಇದನ್ನು ಮಾಡಿದ್ದು ಕೇವಲ) ನಾಲ್ಕು ದಿನಗಳಲ್ಲಿ. ಅಗತ್ಯವುಳ್ಳವರಿಗೆ ಸರಿಯಾದ ಪ್ರಮಾಣದಲ್ಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ ٱسْتَوَىٰٓ إِلَى ٱلسَّمَآءِ وَهِىَ دُخَانٌ فَقَالَ لَهَا وَلِلْأَرْضِ ٱئْتِيَا طَوْعًا أَوْ كَرْهًا قَالَتَآ أَتَيْنَا طَآئِعِينَ

Kannada Translation - Hamza Buturನಂತರ ಅವನು ಆಕಾಶದ ಕಡೆಗೆ ತಿರುಗಿದನು. ಅದು ಹೊಗೆಯಂತೆ ಇತ್ತು. ಅವನು ಅದರೊಂದಿಗೆ ಮತ್ತು ಭೂಮಿಯೊಂದಿಗೆ ಹೇಳಿದನು: “ನೀವು ಸ್ವಯಂಪ್ರೇರಣೆಯಿಂದ ಅಥವಾ ಬಲವಂತದಿಂದ ಬನ್ನಿರಿ.” ಅವೆರಡೂ ಹೇಳಿದವು: “ನಾವು ಸ್ವಯಂಪ್ರೇರಣೆಯಿಂದ ಬಂದಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَضَىٰهُنَّ سَبْعَ سَمَٰوَاتٍ فِى يَوْمَيْنِ وَأَوْحَىٰ فِى كُلِّ سَمَآءٍ أَمْرَهَا وَزَيَّنَّا ٱلسَّمَآءَ ٱلدُّنْيَا بِمَصَٰبِيحَ وَحِفْظًا ذَٰلِكَ تَقْدِيرُ ٱلْعَزِيزِ ٱلْعَلِيمِ

Kannada Translation - Hamza Buturಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನು ನಿರ್ಮಿಸಿದನು. ಎಲ್ಲಾ ಆಕಾಶಗಳಿಗೂ ಅದರ ಕಾರ್ಯನಿರ್ವಹಣೆಯನ್ನು ಆದೇಶಿಸಿದನು. ನಾವು ಇಹಲೋಕದ ಆಕಾಶವನ್ನು ದೀಪಗಳಿಂದ ಅಲಂಕರಿಸಿದೆವು ಮತ್ತು ಸುರಕ್ಷಿತಗೊಳಿಸಿದೆವು. ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنْ أَعْرَضُوا۟ فَقُلْ أَنذَرْتُكُمْ صَٰعِقَةً مِّثْلَ صَٰعِقَةِ عَادٍ وَثَمُودَ

Kannada Translation - Hamza Buturಅವರೇನಾದರೂ ವಿಮುಖರಾಗುವುದಾದರೆ ಹೇಳಿರಿ: “ಆದ್ ಗೋತ್ರ ಮತ್ತು ಸಮೂದ್ ಗೋತ್ರಗಳ ಮೇಲೆರಗಿದ ಭೀಕರ ಶಿಕ್ಷೆಯಂತಿರುವ ಒಂದು ಶಿಕ್ಷೆಯ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذْ جَآءَتْهُمُ ٱلرُّسُلُ مِنۢ بَيْنِ أَيْدِيهِمْ وَمِنْ خَلْفِهِمْ أَلَّا تَعْبُدُوٓا۟ إِلَّا ٱللَّهَ قَالُوا۟ لَوْ شَآءَ رَبُّنَا لَأَنزَلَ مَلَٰٓئِكَةً فَإِنَّا بِمَآ أُرْسِلْتُم بِهِۦ كَٰفِرُونَ

Kannada Translation - Hamza Butur“ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ” ಎಂದು ಹೇಳುತ್ತಾ ಅವರ ಮುಂದಿನಿಂದಲೂ ಹಿಂದಿನಿಂದಲೂ ಸಂದೇಶವಾಹಕರುಗಳು ಅವರ ಬಳಿಗೆ ಬಂದ ಸಂದರ್ಭ. ಅವರು ಹೇಳಿದರು: “ನಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸುತ್ತಿದ್ದರೆ ದೇವದೂತರು‍ಗಳನ್ನು ಕಳುಹಿಸುತ್ತಿದ್ದನು. ನಿಮ್ಮೊಡನೆ ಕಳುಹಿಸಲಾದ ಆ ಸಂದೇಶವನ್ನು ನಿಶ್ಚಯವಾಗಿಯೂ ನಾವು ನಿಷೇಧಿಸಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَمَّا عَادٌ فَٱسْتَكْبَرُوا۟ فِى ٱلْأَرْضِ بِغَيْرِ ٱلْحَقِّ وَقَالُوا۟ مَنْ أَشَدُّ مِنَّا قُوَّةً أَوَلَمْ يَرَوْا۟ أَنَّ ٱللَّهَ ٱلَّذِى خَلَقَهُمْ هُوَ أَشَدُّ مِنْهُمْ قُوَّةً وَكَانُوا۟ بِـَٔايَٰتِنَا يَجْحَدُونَ

Kannada Translation - Hamza Buturಆದ್ ಗೋತ್ರದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರಿದರು. “ನಮಗಿಂತಲೂ ಹೆಚ್ಚು ಶಕ್ತಿಯಿರುವವರು ಯಾರು?” ಎಂದು ಅವರು ಕೇಳಿದರು. ಅವರನ್ನು ಸೃಷ್ಟಿಸಿದ ಅಲ್ಲಾಹು ಅವರಿಗಿಂತಲೂ ಹೆಚ್ಚು ಶಕ್ತಿಶಾಲಿಯೆಂದು ಅವರಿಗೆ ತಿಳಿದಿಲ್ಲವೇ? ಅವರು ನಮ್ಮ ವಚನಗಳನ್ನು ನಿಷೇಧಿಸುತ್ತಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَرْسَلْنَا عَلَيْهِمْ رِيحًا صَرْصَرًا فِىٓ أَيَّامٍ نَّحِسَاتٍ لِّنُذِيقَهُمْ عَذَابَ ٱلْخِزْىِ فِى ٱلْحَيَوٰةِ ٱلدُّنْيَا وَلَعَذَابُ ٱلْـَٔاخِرَةِ أَخْزَىٰ وَهُمْ لَا يُنصَرُونَ

Kannada Translation - Hamza Buturಕೊನೆಗೆ ಅಶುಭ ದಿನಗಳಲ್ಲಿ ನಾವು ಅವರ ಕಡೆಗೆ ಭೀಕರ ಚಳಿಗಾಳಿಯನ್ನು ಕಳುಹಿಸಿದೆವು. ಇಹಲೋಕದಲ್ಲಿ ಅವರು ಅವಮಾನಕರ ಶಿಕ್ಷೆಯ ರುಚಿ ನೋಡುವುದಕ್ಕಾಗಿ. ಆದರೆ ಪರಲೋಕದ ಶಿಕ್ಷೆಯು ಅತ್ಯಧಿಕ ಅವಮಾನಕರವಾಗಿದೆ. ಅವರಿಗೆ ಯಾವುದೇ ಸಹಾಯವು ಸಿಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا ثَمُودُ فَهَدَيْنَٰهُمْ فَٱسْتَحَبُّوا۟ ٱلْعَمَىٰ عَلَى ٱلْهُدَىٰ فَأَخَذَتْهُمْ صَٰعِقَةُ ٱلْعَذَابِ ٱلْهُونِ بِمَا كَانُوا۟ يَكْسِبُونَ

Kannada Translation - Hamza Buturಸಮೂದ್ ಗೋತ್ರಕ್ಕೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಕುರುಡುತನವನ್ನೇ ಇಷ್ಟಪಟ್ಟರು. ಆದ್ದರಿಂದ ಅವರು ಮಾಡಿದ ದುಷ್ಕೃತ್ಯಗಳ ಕಾರಣದಿಂದ ಅವಮಾನಕರವಾದ ಭೀಕರ ಶಿಕ್ಷೆಯು ಅವರನ್ನು ಹಿಡಿಯಿತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَجَّيْنَا ٱلَّذِينَ ءَامَنُوا۟ وَكَانُوا۟ يَتَّقُونَ

Kannada Translation - Hamza Buturನಾವು ಸತ್ಯವಿಶ್ವಾಸಿಗಳನ್ನು ಮತ್ತು ದೇವಭಯವುಳ್ಳವರನ್ನು ರಕ್ಷಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَوْمَ يُحْشَرُ أَعْدَآءُ ٱللَّهِ إِلَى ٱلنَّارِ فَهُمْ يُوزَعُونَ

Kannada Translation - Hamza Buturಅಲ್ಲಾಹನ ಶತ್ರುಗಳನ್ನು ನರಕದ ಬಳಿಗೆ ಕರೆತರಲಾಗುವ ದಿನ. ಅವರೆಲ್ಲರನ್ನೂ ಒಟ್ಟುಗೂಡಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَا مَا جَآءُوهَا شَهِدَ عَلَيْهِمْ سَمْعُهُمْ وَأَبْصَٰرُهُمْ وَجُلُودُهُم بِمَا كَانُوا۟ يَعْمَلُونَ

Kannada Translation - Hamza Buturಎಲ್ಲಿಯವರೆಗೆಂದರೆ ಅವರು ನರಕದ ಬಳಿಗೆ ಬಂದಾಗ ಅವರ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ಅವರ ವಿರುದ್ಧವಾಗಿ ಸಾಕ್ಷಿ ನುಡಿಯುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ لِجُلُودِهِمْ لِمَ شَهِدتُّمْ عَلَيْنَا قَالُوٓا۟ أَنطَقَنَا ٱللَّهُ ٱلَّذِىٓ أَنطَقَ كُلَّ شَىْءٍ وَهُوَ خَلَقَكُمْ أَوَّلَ مَرَّةٍ وَإِلَيْهِ تُرْجَعُونَ

Kannada Translation - Hamza Buturಅವರು ತಮ್ಮ ಚರ್ಮಗಳೊಂದಿಗೆ ಕೇಳುವರು: “ನೀವೇಕೆ ನಮ್ಮ ವಿರುದ್ಧ ಸಾಕ್ಷಿ ಹೇಳಿದಿರಿ?” ಅವು ಹೇಳುವುವು: “ಎಲ್ಲ ವಸ್ತುಗಳಿಗೂ ಮಾತನಾಡುವ ಶಕ್ತಿ ನೀಡಿದ ಅಲ್ಲಾಹು ನಮ್ಮನ್ನು ಮಾತನಾಡಿಸಿದನು.” ಅವನೇ ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا كُنتُمْ تَسْتَتِرُونَ أَن يَشْهَدَ عَلَيْكُمْ سَمْعُكُمْ وَلَآ أَبْصَٰرُكُمْ وَلَا جُلُودُكُمْ وَلَٰكِن ظَنَنتُمْ أَنَّ ٱللَّهَ لَا يَعْلَمُ كَثِيرًا مِّمَّا تَعْمَلُونَ

Kannada Translation - Hamza Buturನಿಮ್ಮ ಕಿವಿಗಳು, ನಿಮ್ಮ ಕಣ್ಣುಗಳು ಅಥವಾ ನಿಮ್ಮ ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳದಿರುವುದಕ್ಕಾಗಿ ನೀವು (ನಿಮ್ಮ ದುಷ್ಕರ್ಮಗಳನ್ನು) ಅವುಗಳಿಂದ ಅಡಗಿಸುತ್ತಿರಲಿಲ್ಲ. ಆದರೆ ನೀವು ಮಾಡುತ್ತಿರುವ ಕರ್ಮಗಳಲ್ಲಿ ಹೆಚ್ಚಿನವುಗಳನ್ನು ಅಲ್ಲಾಹು ತಿಳಿಯುವುದೇ ಇಲ್ಲ ಎಂದು ನೀವು ಭಾವಿಸಿದಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَذَٰلِكُمْ ظَنُّكُمُ ٱلَّذِى ظَنَنتُم بِرَبِّكُمْ أَرْدَىٰكُمْ فَأَصْبَحْتُم مِّنَ ٱلْخَٰسِرِينَ

Kannada Translation - Hamza Buturನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಗ್ಗೆ ಇಟ್ಟುಕೊಂಡ ಆ ಭಾವನೆಯೇ ನಿಮ್ಮನ್ನು ಸರ್ವನಾಶ ಮಾಡಿತು. ಕೊನೆಗೆ ನೀವು ನಷ್ಟ ಹೊಂದಿದವರಲ್ಲಿ ಸೇರಿಬಿಟ್ಟಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِن يَصْبِرُوا۟ فَٱلنَّارُ مَثْوًى لَّهُمْ وَإِن يَسْتَعْتِبُوا۟ فَمَا هُم مِّنَ ٱلْمُعْتَبِينَ

Kannada Translation - Hamza Buturಈಗ ಅವರು ತಾಳ್ಮೆ ವಹಿಸಿದರೂ ಅವರ ವಾಸಸ್ಥಳವು ನರಕಾಗ್ನಿಯೇ ಆಗಿದೆ. ಅವರು ವಿನಾಯಿತಿಯನ್ನು ಬೇಡಿದರೂ ಅವರಿಗೆ ವಿನಾಯಿತಿ ನೀಡಲಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَيَّضْنَا لَهُمْ قُرَنَآءَ فَزَيَّنُوا۟ لَهُم مَّا بَيْنَ أَيْدِيهِمْ وَمَا خَلْفَهُمْ وَحَقَّ عَلَيْهِمُ ٱلْقَوْلُ فِىٓ أُمَمٍ قَدْ خَلَتْ مِن قَبْلِهِم مِّنَ ٱلْجِنِّ وَٱلْإِنسِ إِنَّهُمْ كَانُوا۟ خَٰسِرِينَ

Kannada Translation - Hamza Buturನಾವು ಅವರಿಗೆ ಕೆಲವು ಸಂಗಡಿಗರನ್ನು ನಿಶ್ಚಯಿಸಿದ್ದೆವು. ಆ ಸಂಗಡಿಗರು ಅವರಿಗೆ ಅವರ ಮುಂದಿರುವುದನ್ನು ಮತ್ತು ಹಿಂದಿರುವುದನ್ನು ಅಲಂಕಾರಗೊಳಿಸಿ ತೋರಿಸಿದರು. ಅವರಿಗಿಂತ ಮೊದಲು ಗತಿಸಿದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳ ಜೊತೆಗೆ ಇವರ ಮೇಲೂ (ಶಿಕ್ಷೆಯ) ವಚನವು ಖಾತ್ರಿಯಾಗಿ ಬಿಟ್ಟಿತು. ನಿಶ್ಚಯವಾಗಿಯೂ ಅವರು ನಷ್ಟ ಹೊಂದಿದವರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالَ ٱلَّذِينَ كَفَرُوا۟ لَا تَسْمَعُوا۟ لِهَٰذَا ٱلْقُرْءَانِ وَٱلْغَوْا۟ فِيهِ لَعَلَّكُمْ تَغْلِبُونَ

Kannada Translation - Hamza Buturಸತ್ಯನಿಷೇಧಿಗಳು ಹೇಳಿದರು: “ನೀವು ಈ ಕುರ್‌ಆನಿಗೆ ಕಿವಿಗೊಡಬೇಡಿ. ಅದನ್ನು ಪಠಿಸುವುದನ್ನು ಕೇಳುವಾಗ ಗದ್ದಲ ಮಾಡಿರಿ. ನಿಮಗೆ ಅದನ್ನು ಸೋಲಿಸಲು ಸಾಧ್ಯವಾಗಬಹುದು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَنُذِيقَنَّ ٱلَّذِينَ كَفَرُوا۟ عَذَابًا شَدِيدًا وَلَنَجْزِيَنَّهُمْ أَسْوَأَ ٱلَّذِى كَانُوا۟ يَعْمَلُونَ

Kannada Translation - Hamza Buturನಿಶ್ಚಯವಾಗಿಯೂ ಆ ಸತ್ಯನಿಷೇಧಿಗಳಿಗೆ ನಾವು ಕಠೋರ ಶಿಕ್ಷೆಯ ರುಚಿಯನ್ನು ತೋರಿಸುವೆವು. ನಾವು ಅವರಿಗೆ ಅವರ ದುಷ್ಕರ್ಮಗಳ ಪ್ರತಿಫಲವನ್ನು ಖಂಡಿತ ನೀಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَٰلِكَ جَزَآءُ أَعْدَآءِ ٱللَّهِ ٱلنَّارُ لَهُمْ فِيهَا دَارُ ٱلْخُلْدِ جَزَآءًۢ بِمَا كَانُوا۟ بِـَٔايَٰتِنَا يَجْحَدُونَ

Kannada Translation - Hamza Buturಅದು ಅಲ್ಲಾಹನ ಶತ್ರುಗಳಿಗೆ ಶಿಕ್ಷೆಯಾಗಿರುವ ನರಕ. ಅವರಿಗೆ ಅಲ್ಲಿ ಶಾಶ್ವತ ವಾಸಕ್ಕಿರುವ ವಾಸ್ತವ್ಯವಿದೆ. ಅದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ್ದಕ್ಕೆ ಪ್ರತಿಫಲವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالَ ٱلَّذِينَ كَفَرُوا۟ رَبَّنَآ أَرِنَا ٱلَّذَيْنِ أَضَلَّانَا مِنَ ٱلْجِنِّ وَٱلْإِنسِ نَجْعَلْهُمَا تَحْتَ أَقْدَامِنَا لِيَكُونَا مِنَ ٱلْأَسْفَلِينَ

Kannada Translation - Hamza Buturಸತ್ಯನಿಷೇಧಿಗಳು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮನ್ನು ದಾರಿತಪ್ಪಿಸಿದ ಜಿನ್ನ್ ಮತ್ತು ಮನುಷ್ಯರ (ಎರಡು ಪಂಗಡಗಳನ್ನು) ನಮಗೆ ತೋರಿಸಿಕೊಡು. ಅವರು (ನರಕದಲ್ಲಿ) ಅತ್ಯಂತ ಕೆಳಗಿನವರಾಗಲು (ಕಠೋರ ಶಿಕ್ಷೆ ಅನುಭವಿಸುವಂತಾಗಲು) ನಾವು ಅವರನ್ನು ನಮ್ಮ ಪಾದಗಳ ಅಡಿಯಲ್ಲಿ ಹಾಕಿ ತುಳಿಯುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ قَالُوا۟ رَبُّنَا ٱللَّهُ ثُمَّ ٱسْتَقَٰمُوا۟ تَتَنَزَّلُ عَلَيْهِمُ ٱلْمَلَٰٓئِكَةُ أَلَّا تَخَافُوا۟ وَلَا تَحْزَنُوا۟ وَأَبْشِرُوا۟ بِٱلْجَنَّةِ ٱلَّتِى كُنتُمْ تُوعَدُونَ

Kannada Translation - Hamza Butur“ನಮ್ಮ ಪರಿಪಾಲಕನು ಅಲ್ಲಾಹು” ಎಂದು ಹೇಳಿ, ನಂತರ ಅದರಲ್ಲಿ ದೃಢವಾಗಿ ನಿಂತವರು ಯಾರೋ ಅವರ ಬಳಿಗೆ (ಅವರ ಮರಣದ ಸಮಯದಲ್ಲಿ) ದೇವದೂತರು‍ಗಳು ಇಳಿದು ಬಂದು ಹೇಳುವರು: “ನೀವು ಭಯಪಡಬೇಡಿ ಮತ್ತು ದುಃಖಿಸಬೇಡಿ. ನಿಮಗೆ ವಾಗ್ದಾನ ಮಾಡಲಾದ ಸ್ವರ್ಗದ ಬಗ್ಗೆ ಸಂತೋಷಪಡಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نَحْنُ أَوْلِيَآؤُكُمْ فِى ٱلْحَيَوٰةِ ٱلدُّنْيَا وَفِى ٱلْـَٔاخِرَةِ وَلَكُمْ فِيهَا مَا تَشْتَهِىٓ أَنفُسُكُمْ وَلَكُمْ فِيهَا مَا تَدَّعُونَ

Kannada Translation - Hamza Buturಇಹಲೋಕದಲ್ಲಿ ನಾವು ನಿಮ್ಮ ಮಿತ್ರರಾಗಿದ್ದೆವು; ಪರಲೋಕದಲ್ಲೂ ಮಿತ್ರರಾಗಿರುವೆವು. ನಿಮಗೆ ಅಲ್ಲಿ ನಿಮ್ಮ ಮನಸ್ಸುಗಳು ಬಯಸುವುದೆಲ್ಲವೂ ಇರುವುವು ಮತ್ತು ನೀವು ಬೇಡುವುದೆಲ್ಲವೂ ಇರುವುವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

نُزُلًا مِّنْ غَفُورٍ رَّحِيمٍ

Kannada Translation - Hamza Buturಅದು ಕ್ಷಮಾಶೀಲನು ಮತ್ತು ದಯಾಳುವಾದ ಅಲ್ಲಾಹನ ಆತಿಥ್ಯವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَنْ أَحْسَنُ قَوْلًا مِّمَّن دَعَآ إِلَى ٱللَّهِ وَعَمِلَ صَٰلِحًا وَقَالَ إِنَّنِى مِنَ ٱلْمُسْلِمِينَ

Kannada Translation - Hamza Buturಅಲ್ಲಾಹನ ಕಡೆಗೆ ಕರೆಯುವ, ಸತ್ಕರ್ಮವೆಸಗುವ ಮತ್ತು ನಿಶ್ಚಯವಾಗಿಯೂ ನಾನು ಮುಸ್ಲಿಮರಲ್ಲಿ ಸೇರಿದವನೆಂದು ಹೇಳಿದವನಿಗಿಂತ ಉತ್ತಮ ಮಾತನ್ನು ಹೇಳಿದವನು ಯಾರು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا تَسْتَوِى ٱلْحَسَنَةُ وَلَا ٱلسَّيِّئَةُ ٱدْفَعْ بِٱلَّتِى هِىَ أَحْسَنُ فَإِذَا ٱلَّذِى بَيْنَكَ وَبَيْنَهُۥ عَدَٰوَةٌ كَأَنَّهُۥ وَلِىٌّ حَمِيمٌ

Kannada Translation - Hamza Buturಒಳಿತು ಮತ್ತು ಕೆಡುಕು ಸಮಾನವಾಗುವುದಿಲ್ಲ. ಕೆಡುಕನ್ನು ಒಳಿತಿನ ಮೂಲಕ ತಡೆಯಿರಿ. ಆಗ ಯಾರೊಡನೆ ನಿಮಗೆ ಶತ್ರುತ್ವವಿದೆಯೋ ಅವನು ನಿಮ್ಮ ಆಪ್ತ ಮಿತ್ರನಂತೆ ಮಾರ್ಪಡುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يُلَقَّىٰهَآ إِلَّا ٱلَّذِينَ صَبَرُوا۟ وَمَا يُلَقَّىٰهَآ إِلَّا ذُو حَظٍّ عَظِيمٍ

Kannada Translation - Hamza Buturತಾಳ್ಮೆಯುಳ್ಳವರಿಗೆ ಮಾತ್ರ ಇದನ್ನು ನೀಡಲಾಗಿದೆ. ಮಹಾ ಭಾಗ್ಯವಂತರಿಗೆ ಮಾತ್ರ ಇದನ್ನು ನೀಡಲಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِمَّا يَنزَغَنَّكَ مِنَ ٱلشَّيْطَٰنِ نَزْغٌ فَٱسْتَعِذْ بِٱللَّهِ إِنَّهُۥ هُوَ ٱلسَّمِيعُ ٱلْعَلِيمُ

Kannada Translation - Hamza Buturನಿಮಗೆ ಶೈತಾನನ ಕಡೆಯಿಂದ ಏನಾದರೂ ದುಷ್ಪ್ರೇರಣೆ ಉಂಟಾದರೆ ಅಲ್ಲಾಹನೊಡನೆ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِنْ ءَايَٰتِهِ ٱلَّيْلُ وَٱلنَّهَارُ وَٱلشَّمْسُ وَٱلْقَمَرُ لَا تَسْجُدُوا۟ لِلشَّمْسِ وَلَا لِلْقَمَرِ وَٱسْجُدُوا۟ لِلَّهِ ٱلَّذِى خَلَقَهُنَّ إِن كُنتُمْ إِيَّاهُ تَعْبُدُونَ

Kannada Translation - Hamza Buturರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಸೂರ್ಯನಿಗೋ, ಚಂದ್ರನಿಗೋ ಸಾಷ್ಟಾಂಗ ಮಾಡಬೇಡಿ. ಬದಲಿಗೆ, ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ. ನೀವು ಅವನನ್ನು ಆರಾಧಿಸುವವರಾಗಿದ್ದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنِ ٱسْتَكْبَرُوا۟ فَٱلَّذِينَ عِندَ رَبِّكَ يُسَبِّحُونَ لَهُۥ بِٱلَّيْلِ وَٱلنَّهَارِ وَهُمْ لَا يَسْـَٔمُونَ

Kannada Translation - Hamza Buturಅದರ ಬಳಿಕವೂ ಅವರು ಅಹಂಕಾರ ತೋರುವುದಾದರೆ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು‍ಗಳು) ರಾತ್ರಿ ಮತ್ತು ಹಗಲು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ. ಅವರು (ಎಂದಿಗೂ) ದಣಿಯುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِنْ ءَايَٰتِهِۦٓ أَنَّكَ تَرَى ٱلْأَرْضَ خَٰشِعَةً فَإِذَآ أَنزَلْنَا عَلَيْهَا ٱلْمَآءَ ٱهْتَزَّتْ وَرَبَتْ إِنَّ ٱلَّذِىٓ أَحْيَاهَا لَمُحْىِ ٱلْمَوْتَىٰٓ إِنَّهُۥ عَلَىٰ كُلِّ شَىْءٍ قَدِيرٌ

Kannada Translation - Hamza Buturನೀವು ಭೂಮಿಯನ್ನು ಒಣಗಿ ಬರಡಾಗಿ ಕಾಣುವುದು ಅವರ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನಾವು ಅದರ ಮೇಲೆ ನೀರನ್ನು ಸುರಿಸಿದರೆ ಅದಕ್ಕೆ ಕಂಪನವುಂಟಾಗಿ ಬೆಳೆಯತೊಡಗುತ್ತದೆ. ಅದಕ್ಕೆ ಜೀವ ನೀಡಿದವನು ಖಂಡಿತವಾಗಿಯೂ ಮರಣಹೊಂದಿದವರಿಗೆ ಜೀವ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ يُلْحِدُونَ فِىٓ ءَايَٰتِنَا لَا يَخْفَوْنَ عَلَيْنَآ أَفَمَن يُلْقَىٰ فِى ٱلنَّارِ خَيْرٌ أَم مَّن يَأْتِىٓ ءَامِنًا يَوْمَ ٱلْقِيَٰمَةِ ٱعْمَلُوا۟ مَا شِئْتُمْ إِنَّهُۥ بِمَا تَعْمَلُونَ بَصِيرٌ

Kannada Translation - Hamza Buturನಿಶ್ಚಯವಾಗಿಯೂ ನಮ್ಮ ದೃಷ್ಟಾಂತಗಳಲ್ಲಿ ವಿಚಲತೆಯನ್ನು ಉಂಟುಮಾಡುವವರು[1] ಯಾರೋ ಅವರು ನಮ್ಮಿಂದ (ಸ್ವಲ್ಪವೂ) ಮರೆಯಾಗಿಲ್ಲ. ಹಾಗಾದರೆ ನರಕಕ್ಕೆ ಹಾಕಲಾಗುವವನು ಶ್ರೇಷ್ಠನೋ? ಅಥವಾ ಪುನರುತ್ಥಾನ ದಿನದಂದು ನಿರ್ಭಯವಾಗಿ ಬರುವವನೋ? ನೀವು ಬಯಸುವುದನ್ನು ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅವನು ವೀಕ್ಷಿಸುತ್ತಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ كَفَرُوا۟ بِٱلذِّكْرِ لَمَّا جَآءَهُمْ وَإِنَّهُۥ لَكِتَٰبٌ عَزِيزٌ

Kannada Translation - Hamza Buturನಿಶ್ಚಯವಾಗಿಯೂ ಈ ಉಪದೇಶವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿದವರು (ನಷ್ಟ ಹೊಂದಿದರು). ನಿಶ್ಚಯವಾಗಿಯೂ ಇದೊಂದು ಪ್ರಬಲ ಗ್ರಂಥವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا يَأْتِيهِ ٱلْبَٰطِلُ مِنۢ بَيْنِ يَدَيْهِ وَلَا مِنْ خَلْفِهِۦ تَنزِيلٌ مِّنْ حَكِيمٍ حَمِيدٍ

Kannada Translation - Hamza Buturಅದರ ಮುಂದಿನಿಂದ ಅಥವಾ ಹಿಂದಿನಿಂದ ಮಿಥ್ಯವು ಅದರಲ್ಲಿ ಸೇರಿಕೊಳ್ಳುವುದಿಲ್ಲ. ಅದು ವಿವೇಕಪೂರ್ಣನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّا يُقَالُ لَكَ إِلَّا مَا قَدْ قِيلَ لِلرُّسُلِ مِن قَبْلِكَ إِنَّ رَبَّكَ لَذُو مَغْفِرَةٍ وَذُو عِقَابٍ أَلِيمٍ

Kannada Translation - Hamza Buturನಿಮಗಿಂತ ಮೊದಲಿನ ಸಂದೇಶವಾಹಕರುಗಳೊಡನೆ ಹೇಳಲಾಗಿರುವುದನ್ನೇ ನಿಮ್ಮೊಡನೆಯೂ ಹೇಳಲಾಗಿದೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಯಾತನಾಮಯ ಶಿಕ್ಷೆ ನೀಡುವವನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَوْ جَعَلْنَٰهُ قُرْءَانًا أَعْجَمِيًّا لَّقَالُوا۟ لَوْلَا فُصِّلَتْ ءَايَٰتُهُۥٓ ءَا۬عْجَمِىٌّ وَعَرَبِىٌّ قُلْ هُوَ لِلَّذِينَ ءَامَنُوا۟ هُدًى وَشِفَآءٌ وَٱلَّذِينَ لَا يُؤْمِنُونَ فِىٓ ءَاذَانِهِمْ وَقْرٌ وَهُوَ عَلَيْهِمْ عَمًى أُو۟لَٰٓئِكَ يُنَادَوْنَ مِن مَّكَانٍۭ بَعِيدٍ

Kannada Translation - Hamza Buturನಾವು ಇದನ್ನು ಅರಬ್ಬೇತರ ಭಾಷೆಯ ಕುರ್‌ಆನ್ ಆಗಿ ಮಾಡಿರುತ್ತಿದ್ದರೆ ಅವರು ಕೇಳುತ್ತಿದ್ದರು: “ಇದರ ವಚನಗಳನ್ನೇಕೆ ವಿವರಿಸಲಾಗಿಲ್ಲ? ಅರಬೇತರ (ಗ್ರಂಥ) ಮತ್ತು ಅರಬಿ(ಪ್ರವಾದಿ)ಯೇ?” ಹೇಳಿರಿ: “ಇದು (ಕುರ್‌ಆನ್) ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಮತ್ತು ಉಪಶಮನವಾಗಿದೆ. ಅದರಲ್ಲಿ ವಿಶ್ವಾಸವಿಡದವರು ಯಾರೋ ಅವರ ಕಿವಿಗಳಲ್ಲಿ ಕಿವುಡುತನವಿದೆ. ಅದು (ಕುರ್‌ಆನ್) ಅವರಿಗೆ ಕುರುಡುತನವಾಗಿದೆ. ಈ ಜನರು ವಿದೂರ ಸ್ಥಳದಿಂದ ಕೂಗಿ ಕರೆಯಲಾಗುವವರಾಗಿದ್ದಾರೆ.”[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ ءَاتَيْنَا مُوسَى ٱلْكِتَٰبَ فَٱخْتُلِفَ فِيهِ وَلَوْلَا كَلِمَةٌ سَبَقَتْ مِن رَّبِّكَ لَقُضِىَ بَيْنَهُمْ وَإِنَّهُمْ لَفِى شَكٍّ مِّنْهُ مُرِيبٍ

Kannada Translation - Hamza Buturನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಆದರೆ ಅವರು ಅದರಲ್ಲಿ ಭಿನ್ನಮತ ತಳೆದರು. ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَّنْ عَمِلَ صَٰلِحًا فَلِنَفْسِهِۦ وَمَنْ أَسَآءَ فَعَلَيْهَا وَمَا رَبُّكَ بِظَلَّٰمٍ لِّلْعَبِيدِ

Kannada Translation - Hamza Buturಯಾರು ಸತ್ಕರ್ಮವೆಸಗುತ್ತಾನೋ ಅದು ಅವನ ಒಳಿತಿಗೇ ಆಗಿದೆ. ಯಾರು ದುಷ್ಕರ್ಮವೆಸಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. ನಿಮ್ಮ ಪರಿಪಾಲಕ (ಅಲ್ಲಾಹು) ತನ್ನ ದಾಸರಿಗೆ ಅನ್ಯಾಯವೆಸಗುವವನೇ ಅಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَيْهِ يُرَدُّ عِلْمُ ٱلسَّاعَةِ وَمَا تَخْرُجُ مِن ثَمَرَٰتٍ مِّنْ أَكْمَامِهَا وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِۦ وَيَوْمَ يُنَادِيهِمْ أَيْنَ شُرَكَآءِى قَالُوٓا۟ ءَاذَنَّٰكَ مَا مِنَّا مِن شَهِيدٍ

Kannada Translation - Hamza Buturಅಂತ್ಯಸಮಯದ ಕುರಿತಾದ ಜ್ಞಾನವನ್ನು ಅಲ್ಲಾಹನಿಗೆ ಮರಳಿಸಲಾಗುತ್ತದೆ. ಅವನ ತಿಳುವಳಿಕೆಯಿಲ್ಲದೆ ಯಾವುದೇ ಹಣ್ಣು ಅದರ ತೊಗಲಿನಿಂದ ಹೊರಹೊಮ್ಮುವುದಿಲ್ಲ. (ಅವನ ತಿಳುವಳಿಕೆಯಿಲ್ಲದೆ) ಯಾವುದೇ ಸ್ತ್ರೀ ಗರ್ಭ ಧರಿಸುವುದೋ ಹಡೆಯುವುದೋ ಇಲ್ಲ. “ನನ್ನ ಸಹಭಾಗಿಗಳು ಎಲ್ಲಿ?” ಎಂದು ಅವನು ಅವರನ್ನು ಕರೆದು ಕೇಳುವ ದಿನ! ಅವರು ಉತ್ತರಿಸುವರು: “ನಮ್ಮಲ್ಲಿ ಯಾರೂ ಅದಕ್ಕೆ ಸಾಕ್ಷಿಗಳಲ್ಲ ಎಂದು ನಾವು ನಿನಗೆ ತಿಳಿಸುತ್ತಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَضَلَّ عَنْهُم مَّا كَانُوا۟ يَدْعُونَ مِن قَبْلُ وَظَنُّوا۟ مَا لَهُم مِّن مَّحِيصٍ

Kannada Translation - Hamza Buturಇದಕ್ಕೆ ಮೊದಲು ಅವರು ಕರೆದು ಪ್ರಾರ್ಥಿಸುತ್ತಿದ್ದವರೆಲ್ಲರೂ (ದೇವರುಗಳೆಲ್ಲರೂ) ಅವರನ್ನು ಬಿಟ್ಟು ಹೋಗುವರು. ಈಗ ಅವರನ್ನು ಪಾರು ಮಾಡುವವರು ಯಾರೂ ಇಲ್ಲವೆಂದು ಅವರಿಗೆ ಮನವರಿಕೆಯಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا يَسْـَٔمُ ٱلْإِنسَٰنُ مِن دُعَآءِ ٱلْخَيْرِ وَإِن مَّسَّهُ ٱلشَّرُّ فَيَـُٔوسٌ قَنُوطٌ

Kannada Translation - Hamza Buturಒಳಿತನ್ನು ಬೇಡಲು ಮನುಷ್ಯನಿಗೆ ಆಯಾಸವಾಗುವುದಿಲ್ಲ. ಆದರೆ ಅವನಿಗೆ ತೊಂದರೆಯುಂಟಾದರೆ ಅವನು ಹತಾಶ ಮತ್ತು ನಿರಾಶನಾಗುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَئِنْ أَذَقْنَٰهُ رَحْمَةً مِّنَّا مِنۢ بَعْدِ ضَرَّآءَ مَسَّتْهُ لَيَقُولَنَّ هَٰذَا لِى وَمَآ أَظُنُّ ٱلسَّاعَةَ قَآئِمَةً وَلَئِن رُّجِعْتُ إِلَىٰ رَبِّىٓ إِنَّ لِى عِندَهُۥ لَلْحُسْنَىٰ فَلَنُنَبِّئَنَّ ٱلَّذِينَ كَفَرُوا۟ بِمَا عَمِلُوا۟ وَلَنُذِيقَنَّهُم مِّنْ عَذَابٍ غَلِيظٍ

Kannada Translation - Hamza Buturಮನುಷ್ಯನಿಗೆ ವಿಪತ್ತು ಬಾಧಿಸಿದ ಬಳಿಕ ನಾವು ಅವನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ, ನಿಶ್ಚಯವಾಗಿಯೂ ಅವನು ಹೇಳುವನು: “ಇದಕ್ಕೆ ನಾನು ಹಕ್ಕುಳ್ಳವನಾಗಿದ್ದೇನೆ. ಅಂತ್ಯಸಮಯವು ಸಂಭವಿಸುವುದೆಂದು ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ಮರಳಿಸಲಾದರೂ ಸಹ ಅವನ ಬಳಿ ನನಗೆ ಒಳಿತು ಮಾತ್ರವೇ ಇರುತ್ತದೆ.” ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ಕರ್ಮಗಳ ಬಗ್ಗೆ ನಾವು ಖಂಡಿತ ತಿಳಿಸಿಕೊಡುವೆವು ಮತ್ತು ಅವರಿಗೆ ಕಠೋರ ಶಿಕ್ಷೆಯ ರುಚಿಯನ್ನು ಖಂಡಿತ ತೋರಿಸುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَآ أَنْعَمْنَا عَلَى ٱلْإِنسَٰنِ أَعْرَضَ وَنَـَٔا بِجَانِبِهِۦ وَإِذَا مَسَّهُ ٱلشَّرُّ فَذُو دُعَآءٍ عَرِيضٍ

Kannada Translation - Hamza Buturನಾವು ಮನುಷ್ಯನಿಗೆ ಅನುಗ್ರಹವನ್ನು ದಯಪಾಲಿಸಿದರೆ ಅವನು ಮುಖ ತಿರುಗಿಸಿ ನಡೆಯುತ್ತಾನೆ ಮತ್ತು ತನ್ನಷ್ಟಕ್ಕೆ ದೂರ ಸರಿಯುತ್ತಾನೆ. ಆದರೆ ಅವನಿಗೆ ಆಪತ್ತು ಸಂಭವಿಸಿದರೆ ಅವನು ದೀರ್ಘ ಪ್ರಾರ್ಥನೆಗಳಲ್ಲಿ ತೊಡಗುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ أَرَءَيْتُمْ إِن كَانَ مِنْ عِندِ ٱللَّهِ ثُمَّ كَفَرْتُم بِهِۦ مَنْ أَضَلُّ مِمَّنْ هُوَ فِى شِقَاقٍۭ بَعِيدٍ

Kannada Translation - Hamza Buturಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹನ ಕಡೆಯಿಂದಾಗಿದ್ದು, ನಂತರ ನೀವು ಅದನ್ನು ನಿಷೇಧಿಸುವುದಾದರೆ, (ಸತ್ಯದಿಂದ) ವಿದೂರವಾದ ಕಡು ವಿರೋಧದಲ್ಲಿರುವವನಿಗಿಂತಲೂ ಹೆಚ್ಚು ದಾರಿತಪ್ಪಿದವನು ಯಾರು?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

سَنُرِيهِمْ ءَايَٰتِنَا فِى ٱلْـَٔافَاقِ وَفِىٓ أَنفُسِهِمْ حَتَّىٰ يَتَبَيَّنَ لَهُمْ أَنَّهُ ٱلْحَقُّ أَوَلَمْ يَكْفِ بِرَبِّكَ أَنَّهُۥ عَلَىٰ كُلِّ شَىْءٍ شَهِيدٌ

Kannada Translation - Hamza Buturನಾವು ಸದ್ಯವೇ ಅವರಿಗೆ ದಿಗಂತಗಳಲ್ಲಿ ಮತ್ತು ಸ್ವತಃ ಅವರಲ್ಲೇ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡುವೆವು. ಇದು (ಕುರ್‌ಆನ್) ಸತ್ಯವೆಂದು ಅವರಿಗೆ ಸ್ಪಷ್ಟವಾಗುವ ತನಕ. ನಿಮ್ಮ ಪರಿಪಾಲಕನು (ಅಲ್ಲಾಹು) ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವುದು ನಿಮಗೆ ಸಾಕಾಗುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَآ إِنَّهُمْ فِى مِرْيَةٍ مِّن لِّقَآءِ رَبِّهِمْ أَلَآ إِنَّهُۥ بِكُلِّ شَىْءٍ مُّحِيطٌۢ

Kannada Translation - Hamza Buturತಿಳಿಯಿರಿ! ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ವಿಷಯದಲ್ಲಿ ಸಂದೇಹದಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅವನು ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70