Kannada Translation - Hamza Buturಅವನು ಅದನ್ನು ಸರಿಯಾದ ರೀತಿಯಲ್ಲಿಟ್ಟಿದ್ದಾನೆ. ಅವನ ಕಡೆಯ ಕಠೋರ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಅತ್ಯುತ್ತಮ ಪ್ರತಿಫಲವಿದೆಯೆಂಬ ಸುವಾರ್ತೆಯನ್ನು ತಿಳಿಸಲು.
Kannada Translation - Hamza Buturಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ; ಅವರ ಪೂರ್ವಜರಿಗೂ ಇಲ್ಲ. ಅವರ ಬಾಯಿಯಿಂದ ಹೊರಬರುವ ಆ ಮಾತು ಬಹಳ ಗಂಭೀರವಾಗಿದೆ. ಅವರು ಸುಳ್ಳನ್ನು ಮಾತ್ರ ಹೇಳುತ್ತಿದ್ದಾರೆ.
Kannada Translation - Hamza Buturನಿಶ್ಚಯವಾಗಿಯೂ ನಾವು ಭೂಮಿಯ ಮೇಲಿರುವುದನ್ನು ಅದಕ್ಕೊಂದು ಅಲಂಕಾರವಾಗಿ ಮಾಡಿದ್ದೇವೆ. ಮನುಷ್ಯರಲ್ಲಿ ಅತ್ಯುತ್ತಮ ಕರ್ಮಗಳನ್ನು ಮಾಡುವವರು ಯಾರೆಂದು ಪರೀಕ್ಷಿಸುವುದಕ್ಕಾಗಿ.
Kannada Translation - Hamza Buturಆ ಯುವಕರು ಗುಹೆಯಲ್ಲಿ ಆಶ್ರಯ ಪಡೆದ ಸಂದರ್ಭ.[1] ಅವರು ಹೇಳಿದರು: “ನಮ್ಮ ಪರಿಪಾಲಕನೇ! ನಮಗೆ ನಿನ್ನ ಕಡೆಯ ದಯೆಯನ್ನು ನೀಡಿ ಆಶೀರ್ವದಿಸು ಮತ್ತು ನಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನಮಗೆ ಅನುಕೂಲ ಮಾಡಿಕೊಡು.”
Kannada Translation - Hamza Buturನಂತರ ನಾವು ಅವರನ್ನು ಎಬ್ಬಿಸಿದೆವು. ಅವರು ಗುಹೆಯಲ್ಲಿ ಎಷ್ಟು ವರ್ಷ ಕಳೆದಿದ್ದರೆಂದು ಆ ಎರಡು ಗುಂಪುಗಳಲ್ಲಿ ಖಚಿತವಾಗಿ ಲೆಕ್ಕ ಮಾಡಿದವರು ಯಾರೆಂದು ತಿಳಿಯುವುದಕ್ಕಾಗಿ.
Kannada Translation - Hamza Buturನಾವು ನಿಮಗೆ ಅವರ ನೈಜ ಸಮಾಚಾರವನ್ನು ವಿವರಿಸುವೆವು. ಅವರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು.
Kannada Translation - Hamza Buturಅವರು ಎದ್ದುನಿಂತು, “ಭೂಮ್ಯಾಕಾಶಗಳ ಪರಿಪಾಲಕನೇ ನಮ್ಮ ಪರಿಪಾಲಕ. ನಾವು ಅವನನ್ನು ಬಿಟ್ಟು ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲ. ಹಾಗೇನಾದರೂ ಆದರೆ ನಾವು ಕಡು ಅನ್ಯಾಯದ ಮಾತನ್ನು ಹೇಳಿದವರಾಗುವೆವು” ಎಂದು ಘೋಷಿಸಿದ ಸಂದರ್ಭದಲ್ಲಿ ನಾವು ಅವರ ಹೃದಯಗಳಿಗೆ ದೃಢತೆಯನ್ನು ನೀಡಿದೆವು.
Kannada Translation - Hamza Butur“ನಮ್ಮ ಈ ಜನರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಅವರು ದೇವರುಗಳು ಎಂಬುದಕ್ಕೆ ಇವರೇಕೆ ಸ್ಪಷ್ಟ ಸಾಕ್ಷ್ಯಾಧಾರವನ್ನು ತರುವುದಿಲ್ಲ? ಅಲ್ಲಾಹನ ಹೆಸರಲ್ಲಿ ಸುಳ್ಳು ಆರೋಪಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು?”
Kannada Translation - Hamza Butur(ಅವರು ಪರಸ್ಪರ ಹೇಳಿದರು): “ನೀವು ಅವರನ್ನು ಮತ್ತು ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುತ್ತಿರುವ ದೇವರುಗಳನ್ನು ತೊರೆದಿದ್ದೀರಿ. ಆದ್ದರಿಂದ ನೀವು ಆ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಅವನ ದಯೆಯನ್ನು ಹೇರಳವಾಗಿ ದಯಪಾಲಿಸುವನು ಮತ್ತು ನಿಮ್ಮ ವಿಷಯದಲ್ಲಿ ನಿಮಗೆ ಅನುಕೂಲತೆ ಮಾಡಿಕೊಡುವನು.”
Kannada Translation - Hamza Buturಸೂರ್ಯ ಉದಯಿಸುವಾಗ ಅದು ಅವರ ಗುಹೆಯ ಬಲಭಾಗಕ್ಕೆ ಚಲಿಸುವುದನ್ನು ಮತ್ತು ಸೂರ್ಯ ಅಸ್ತಮಿಸುವಾಗ ಅದು ಅವರನ್ನು ದಾಟಿ ಎಡಭಾಗಕ್ಕೆ ಚಲಿಸುವುದನ್ನು ನೀವು ಕಾಣುವಿರಿ.[1] ಅವರು ಆ ಗುಹೆಯ ವಿಸ್ತಾರವಾದ ಭಾಗದಲ್ಲಿದ್ದಾರೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಒಂದಾಗಿದೆ. ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುವ ಯಾವುದೇ ರಕ್ಷಕನನ್ನು ನೀವು ಎಂದಿಗೂ ಕಾಣಲಾರಿರಿ.
Kannada Translation - Hamza Buturಅವರು ಎಚ್ಚರದಲ್ಲಿದ್ದಾರೆಂದು ನೀವು ಭಾವಿಸಬಹುದು. ಆದರೆ ಅವರು ನಿದ್ರೆಯಲ್ಲಿದ್ದಾರೆ. ನಾವು ಅವರನ್ನು ಬಲಭಾಗಕ್ಕೂ ಎಡಭಾಗಕ್ಕೂ ಹೊರಳುವಂತೆ ಮಾಡುತ್ತೇವೆ. ಅವರ ನಾಯಿ ಗುಹೆಯ ಬಾಗಿಲಲ್ಲಿ ತನ್ನ ಎರಡು ಕೈಗಳನ್ನು ಚಾಚಿಕೊಂಡಿದೆ. ನೀವೇನಾದರೂ ಅವರ ಕಡೆಗೆ ಇಣುಕಿದರೆ, ಖಂಡಿತ ಬೆನ್ನು ತಿರುಗಿಸಿ ಓಡುವಿರಿ ಮತ್ತು ಆ ದೃಶ್ಯವನ್ನು ಕಂಡು ನೀವು ಭಯವಿಹ್ವಲರಾಗಿ ಬಿಡುವಿರಿ.
Kannada Translation - Hamza Buturಈ ರೀತಿ ಅವರು ಪರಸ್ಪರ ಕೇಳುವುದಕ್ಕಾಗಿ ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬರು ಕೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ?” ಇತರರು ಹೇಳಿದರು: “ನಾವು ಒಂದು ದಿನ ಅಥವಾ ದಿನದ ಕೆಲವು ತಾಸುಗಳಷ್ಟು ಕಾಲ ಗುಹೆಯಲ್ಲಿದ್ದೆವು.” ಅವರು ಹೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ ಎಂಬುದನ್ನು ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನೀವು ನಿಮ್ಮಲ್ಲೊಬ್ಬರನ್ನು ಈ ಬೆಳ್ಳಿ ನಾಣ್ಯದೊಂದಿಗೆ ನಗರಕ್ಕೆ ಕಳುಹಿಸಿ. ಅಲ್ಲಿ ಯಾರ ಬಳಿ ಶುದ್ಧ ಆಹಾರವಿದೆಯೆಂದು ನೋಡಿ ಅವನು ನಿಮಗೆ ಆಹಾರವನ್ನು ತರಲಿ. ಅವನು ಅತ್ಯಂತ ಜಾಗರೂಕನಾಗಿರಲಿ ಮತ್ತು ನಿಮ್ಮ ಬಗ್ಗೆ ಯಾರಿಗೂ ಸುಳಿವು ನೀಡದಿರಲಿ.
Kannada Translation - Hamza Buturಅವರಿಗೆ ನಿಮ್ಮ ಬಗ್ಗೆ ಮಾಹಿತಿ ಸಿಕ್ಕಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು; ಅಥವಾ ನಿಮ್ಮನ್ನು ಬಲವಂತವಾಗಿ ಅವರ ಧರ್ಮಕ್ಕೆ ಸೇರಿಸುವರು. ಹಾಗೇನಾದರೂ ಆದರೆ ನೀವೆಂದಿಗೂ ಯಶಸ್ವಿಯಾಗಲಾರಿರಿ.”
Kannada Translation - Hamza Buturಈ ರೀತಿ ನಾವು ಅವರ ಬಗ್ಗೆ ಜನರಿಗೆ ಸುಳಿವು ನೀಡಿದೆವು. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯದಿನವು ಸಂಭವಿಸುತ್ತದೆಯೆಂಬ ವಿಷಯದಲ್ಲಿ ಸಂಶಯವೇ ಇಲ್ಲ ಎಂದು ಜನರು ತಿಳಿಯುವುದಕ್ಕಾಗಿ. ಅವರು ಗುಹಾವಾಸಿಗಳ ಬಗ್ಗೆ ಪರಸ್ಪರ ತರ್ಕಿಸುತ್ತಿದ್ದ ಸಂದರ್ಭ. ಅವರು ಹೇಳಿದರು: “ಇವರ ಗುಹೆಯ ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ. ಅವರ ಬಗ್ಗೆ ಅವರ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.” ಅವರ ವಿಷಯದಲ್ಲಿ ಪ್ರಾಬಲ್ಯ ಪಡೆದವರು ಹೇಳಿದರು: “ನಿಶ್ಚಯವಾಗಿಯೂ ನಾವು ಅವರ ಗುಹೆಯ ಬಳಿ ಒಂದು ಮಸೀದಿಯನ್ನು ನಿರ್ಮಿಸುತ್ತೇವೆ.”
Kannada Translation - Hamza Buturಅವರಲ್ಲಿ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಮೂರು; ನಾಲ್ಕನೆಯದು ಅವರ ನಾಯಿ.” ಇತರ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಐದು; ಆರನೆಯದು ಅವರ ನಾಯಿ.” ಅವರು ಅದೃಶ್ಯ ವಿಷಯಗಳ ಬಗ್ಗೆ ಊಹಿಸಿ ಹೇಳುತ್ತಿದ್ದಾರೆ. ಇತರ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಏಳು; ಎಂಟನೆಯದು ಅವರ ನಾಯಿ.” (ಪ್ರವಾದಿಯವರೇ) ಹೇಳಿರಿ: “ಅವರ ಸಂಖ್ಯೆ ಎಷ್ಟೆಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಕೆಲವರಿಗೆ ಮಾತ್ರ ಅವರ ಬಗ್ಗೆ ಮಾಹಿತಿಯಿದೆ. ಆದ್ದರಿಂದ ನೀವು ಅವರ ವಿಷಯದಲ್ಲಿ ಸ್ಪಷ್ಟ ಸಾಕ್ಷ್ಯವಿಲ್ಲದೆ ತರ್ಕಿಸಬೇಡಿ. ಅವರ ಬಗ್ಗೆ ಜನರಲ್ಲಿ ಯಾರೊಡನೆಯೂ ಅಭಿಪ್ರಾಯ ಕೇಳಬೇಡಿ.
Kannada Translation - Hamza Butur“ಇನ್ ಶಾ ಅಲ್ಲಾಹ್” (ಅಲ್ಲಾಹು ಇಚ್ಛಿಸಿದರೆ ಮಾಡುತ್ತೇನೆ) ಎಂದು ಅದಕ್ಕೆ ಸೇರಿಸದೆ.[1] ನಿಮಗೆ ಅದನ್ನು ಸೇರಿಸಲು ಮರೆತುಹೋದರೆ ನೆನಪಾದಾಗ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. “ಸನ್ಮಾರ್ಗಕ್ಕೆ ಇದಕ್ಕಿಂತಲೂ ಹೆಚ್ಚು ಹತ್ತಿರವಾಗಿರುವ ಮಾತಿಗೆ ನನ್ನ ಪರಿಪಾಲಕನು (ಅಲ್ಲಾಹು) ನನ್ನನ್ನು ಮುನ್ನಡೆಸುವನೆಂದು ನನಗೆ ಸಂಪೂರ್ಣ ಭರವಸೆಯಿದೆ” ಎಂದು ಹೇಳಿರಿ.
Kannada Translation - Hamza Buturಹೇಳಿರಿ: “ಅವರು ಎಷ್ಟು ಕಾಲ ವಾಸಿಸಿದ್ದರು ಎಂಬ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಭೂಮ್ಯಾಕಾಶಗಳ ಅದೃಶ್ಯ ಜ್ಞಾನವಿರುವುದು ಅವನಿಗೆ ಮಾತ್ರ. ಅವನ ದೃಷ್ಟಿ ಮತ್ತು ಕೇಳುವ ಶಕ್ತಿ ಎಷ್ಟು ಸೂಕ್ಷ್ಮವಾಗಿದೆ! ಅವರಿಗೆ ಅವನ ಹೊರತು ಬೇರೆ ರಕ್ಷಕರಿಲ್ಲ. ಅವನು ತನ್ನ ಶಾಸನಾಧಿಕಾರದಲ್ಲಿ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.”
Kannada Translation - Hamza Buturನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಗ್ರಂಥದಿಂದ ನೀಡಲಾದ ದೇವವಾಣಿಗಳನ್ನು ಪಠಿಸಿರಿ. ಅವನ ವಚನಗಳಿಗೆ ಬದಲಾವಣೆ ತರಲು ಯಾರಿಗೂ ಸಾಧ್ಯವಿಲ್ಲ. ಅವನ ಹೊರತು ಯಾವುದೇ ಆಶ್ರಯವನ್ನು ನೀವೆಂದಿಗೂ ಕಾಣಲಾರಿರಿ.
Kannada Translation - Hamza Buturತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ, ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರ ಜೊತೆಗೆ ನೀವು ನಿಮ್ಮನ್ನು ಸ್ಥೈರ್ಯದಿಂದ ನಿಲ್ಲಿಸಿರಿ. ಇಹಲೋಕ ಜೀವನದ ಅಲಂಕಾರಗಳಿಗೆ ಮರುಳಾಗಿ ನಿಮ್ಮ ದೃಷ್ಟಿಯು ಅವರಿಂದ ದೂರವಾಗದಿರಲಿ. ನಾವು ಯಾರ ಹೃದಯಕ್ಕೆ ನಮ್ಮ ನೆನಪು ಬರದಂತೆ ಮಾಡಿದ್ದೇವೆಯೋ, ಯಾರು ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾನೋ ಮತ್ತು ಯಾರ ಕರ್ಮಗಳು ಹದ್ದು ಮೀರಿವೆಯೋ ಅವರನ್ನು ಅನುಸರಿಸಬೇಡಿ.
Kannada Translation - Hamza Buturಹೇಳಿರಿ: “ನನ್ನ ಈ ಸತ್ಯಸಂದೇಶವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ. ಇಚ್ಛೆಯಿರುವವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಇಚ್ಛೆಯಿಲ್ಲದವರು ನಿಷೇಧಿಸಲಿ. ನಿಶ್ಚಯವಾಗಿಯೂ, ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿವೆ. ಅವರು ಕುಡಿಯಲು ನೀರು ಕೇಳುವಾಗ ನಾವು ಅವರಿಗೆ ಕಾಯಿಸಿದ ಎಣ್ಣೆಯ ಮಡ್ಡಿಯಂತಹ ನೀರನ್ನು ಕೊಡುವೆವು. ಅದು ಅವರ ಮುಖಗಳನ್ನು ಸುಟ್ಟು ಬಿಡುತ್ತದೆ. ಆ ಪಾನೀಯವು ಬಹಳ ನಿಕೃಷ್ಟವಾಗಿದೆ. ಆ ವಾಸಸ್ಥಳವು ಕೂಡ ಬಹಳ ನಿಕೃಷ್ಟವಾಗಿದೆ.
Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅತ್ಯುತ್ತಮ ಕರ್ಮಗಳನ್ನು ಮಾಡುವ ಯಾರ ಪ್ರತಿಫಲವನ್ನೂ ನಾವು ವ್ಯರ್ಥಗೊಳಿಸುವುದಿಲ್ಲ.
Kannada Translation - Hamza Buturಅವರಿಗೆ ಶಾಶ್ವತವಾಸದ ಸ್ವರ್ಗೋದ್ಯಾನಗಳಿವೆ. ಅವರ ತಳಭಾಗದಿಂದ ನದಿಗಳು ಹರಿಯುತ್ತವೆ. ಅಲ್ಲಿ ಅವರಿಗೆ ಚಿನ್ನದ ಕಡಗಗಳನ್ನು ತೊಡಿಸಲಾಗುವುದು. ಅವರು ನಯವಾದ ಮತ್ತು ದಪ್ಪ ಹಸಿರು ರೇಷ್ಮೆ ಬಟ್ಟೆಗಳನ್ನು ಧರಿಸುವರು. ಅಲ್ಲಿ ಅವರು ಮಂಚಗಳಲ್ಲಿ ಒರಗಿ ಕುಳಿತು ವಿಶ್ರಾಂತಿ ಪಡೆಯುವರು. ಆ ಪ್ರತಿಫಲವು ಬಹಳ ಉತ್ಕೃಷ್ಟವಾಗಿದೆ. ಆ ವಾಸಸ್ಥಳವು ಬಹಳ ಶ್ರೇಷ್ಠವಾಗಿದೆ.
Kannada Translation - Hamza Buturಅವರಿಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಇಬ್ಬರು ವ್ಯಕ್ತಿಗಳಿದ್ದರು. ಅವರಲ್ಲೊಬ್ಬನಿಗೆ ನಾವು ಎರಡು ದ್ರಾಕ್ಷಿ ತೋಟಗಳನ್ನು ನೀಡಿದ್ದೆವು. ಆ ಎರಡು ತೋಟಗಳನ್ನು ಖರ್ಜೂರ ಮರಗಳು ಸುತ್ತುವರಿಯುವಂತೆ ಮಾಡಿದ್ದೆವು. ಆ ತೋಟಗಳ ಮಧ್ಯೆ ಹೊಲವನ್ನು ಕೂಡ ಮಾಡಿಕೊಟ್ಟಿದ್ದೆವು.
Kannada Translation - Hamza Buturಆ ಎರಡು ತೋಟಗಳೂ ಅವುಗಳ ಫಲಗಳನ್ನು ನೀಡುತ್ತಿದ್ದವು. ಅದರಲ್ಲಿ ಅವು ಏನನ್ನೂ ಕಡಿಮೆ ಮಾಡಿರಲಿಲ್ಲ. ಅವುಗಳ ಮಧ್ಯೆ ತುಂಬಿ ಹರಿಯುವ ಒಂದು ಹೊಳೆಯನ್ನೂ ಮಾಡಿಕೊಟ್ಟಿದ್ದೆವು.
Kannada Translation - Hamza Buturಈ ಮಧ್ಯೆ, ಅವನ ಬಳಿ ಹಣ್ಣುಗಳಿದ್ದಾಗ, ಅವನು ತನ್ನ ಗೆಳೆಯನೊಡನೆ ಮಾತನಾಡುತ್ತಾ ಹೇಳಿದನು: “ನನಗೆ ನಿನಗಿಂತಲೂ ಹೆಚ್ಚು ಆಸ್ತಿಯಿದೆ. ಸಂತಾನದ ವಿಷಯದಲ್ಲೂ ನಾನು ನಿನಗಿಂತ ಪ್ರಬಲನಾಗಿದ್ದೇನೆ.”
Kannada Translation - Hamza Buturಅವನು ತನ್ನ ತೋಟವನ್ನು ಪ್ರವೇಶಿಸಿದನು. ಅವನು ಸ್ವಯಂ ಅಕ್ರಮವೆಸಗಿದವನಾಗಿದ್ದನು. ಅವನು ಹೇಳಿದನು: “ಇದು ಯಾವತ್ತಾದರೂ ನಾಶವಾಗಬಹುದೆಂದು ನಾನು ಭಾವಿಸುವುದೇ ಇಲ್ಲ.
Kannada Translation - Hamza Buturಅಂತ್ಯಸಮಯವು ಸಂಭವಿಸುವುದೆಂದು ಕೂಡ ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಹಿಂದಿರುಗಿಸಲ್ಪಟ್ಟರೂ ಸಹ, ನಾನು ಅಲ್ಲಿಯೂ ಕೂಡ ಇದಕ್ಕಿಂತಲೂ ಶ್ರೇಷ್ಠವಾದುದನ್ನು ಬದಲಿಯಾಗಿ ಪಡೆಯುವೆನು.”
Kannada Translation - Hamza Buturಅವನೊಡನೆ ಮಾತನಾಡುತ್ತಾ ಅವನ ಗೆಳೆಯ ಹೇಳಿದನು: “ನಿನ್ನನ್ನು ಮಣ್ಣಿನಿಂದ, ನಂತರ ವೀರ್ಯದಿಂದ ಸೃಷ್ಟಿಸಿ, ನಿನ್ನನ್ನು ಒಬ್ಬ ಪೂರ್ಣ ಮಾನವನನ್ನಾಗಿ ಮಾಡಿದ ಅಲ್ಲಾಹನನ್ನು ನೀನು ನಿಷೇಧಿಸುವೆಯಾ?
Kannada Translation - Hamza Buturನೀನು ನಿನ್ನ ತೋಟವನ್ನು ಪ್ರವೇಶಿಸುವಾಗ, “ಇವೆಲ್ಲವೂ ಅಲ್ಲಾಹು ಇಚ್ಛಿಸಿದ್ದು. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿಯಿಲ್ಲ” ಎಂದು ಏಕೆ ಹೇಳಲಿಲ್ಲ? ಆಸ್ತಿ ಮತ್ತು ಸಂತಾನದಲ್ಲಿ ನೀನು ನನ್ನನ್ನು ನಿನಗಿಂತಲೂ ಕೀಳಾಗಿ ಕಾಣುತ್ತಿದ್ದರೆ.
Kannada Translation - Hamza Buturನನ್ನ ಪರಿಪಾಲಕನು (ಅಲ್ಲಾಹು) ನಿನ್ನ ತೋಟಕ್ಕಿಂತಲೂ ಶ್ರೇಷ್ಠವಾದುದನ್ನು ನನಗೆ ನೀಡಬಹುದು ಮತ್ತು ನಿನ್ನ ತೋಟಕ್ಕೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿ ಅದನ್ನು ಜಾರುಭೂಮಿಯಾಗಿ ಪರಿವರ್ತಿಸಬಹುದು.
Kannada Translation - Hamza Buturಅವನ ಎಲ್ಲಾ ಫಲಗಳು ಆವರಿಸಲ್ಪಟ್ಟಿತು (ಸಂಪೂರ್ಣ ನಾಶವಾಯಿತು). ಆಗ ಅವನು ಅದಕ್ಕೆ ಮಾಡಿದ ಖರ್ಚುಗಳಿಗಾಗಿ (ಹತಾಶೆಯಿಂದ) ಕೈಗಳನ್ನು ತಿರುಗಿಸತೊಡಗಿದನು. ಆ ತೋಟಗಳು ಸಂಪೂರ್ಣವಾಗಿ ಮಗುಚಿ ಬಿದ್ದಿದ್ದವು. ಅವನು ಹೇಳಿದನು: “ನಾನು ನನ್ನ ಪರಿಪಾಲಕನೊಡನೆ (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
Kannada Translation - Hamza Buturಅಲ್ಲಿ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನದ್ದೆಂದು (ಸಾಬೀತಾಗಿದೆ). ಅವನು ಪ್ರತಿಫಲ ನೀಡುವುದಲ್ಲಿ ಅತ್ಯುತ್ತಮನಾಗಿದ್ದಾನೆ ಮತ್ತು ಅಂತಿಮ ಫಲಿತಾಂಶ ನೀಡುವುದರಲ್ಲೂ ಅತ್ಯುತ್ತಮನಾಗಿದ್ದಾನೆ.
Kannada Translation - Hamza Butur(ಪ್ರವಾದಿಯವರೇ) ಅವರಿಗೆ ಇಹಲೋಕದ ಬಗ್ಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಅದು (ಇಹಲೋಕವು) ನಾವು ಆಕಾಶದಿಂದ ಸುರಿಸಿದ ಮಳೆಯಂತೆ. ಭೂಮಿಯ ಸಸ್ಯಗಳು ಅದರೊಂದಿಗೆ ಬೆರೆತು ಬೆಳೆದವು. ನಂತರ ಅವು ಗಾಳಿ ಬೀಸಿದರೆ ಹಾರಿ ಹೋಗುವ ಧೂಳಿಯಂತಾದವು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸರ್ವಶಕ್ತನಾಗಿದ್ದಾನೆ.
Kannada Translation - Hamza Buturಆಸ್ತಿ ಮತ್ತು ಸಂತಾನಗಳು ಇಹಲೋಕ ಜೀವನದ ಅಲಂಕಾರಗಳಾಗಿವೆ. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಭರವಸೆಯನ್ನು ಹೊಂದಿವೆ.
Kannada Translation - Hamza Buturನಾವು ಪರ್ವತಗಳನ್ನು ಚಲಿಸುವಂತೆ ಮಾಡುವ ಮತ್ತು ಭೂಮಿಯನ್ನು ನೀವು ಸಮತಟ್ಟಾದ ಬಯಲಿನಂತೆ ಕಾಣುವ ಹಾಗೂ ನಾವು ಅವರಲ್ಲಿ (ಮನುಷ್ಯರಲ್ಲಿ) ಒಬ್ಬರನ್ನೂ ಬಿಡದೆ ಒಟ್ಟುಗೂಡಿಸುವ ದಿನ!
Kannada Translation - Hamza Buturಅವರನ್ನು ತಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ಸಾಲು ಸಾಲಾಗಿ ಪ್ರದರ್ಶಿಸಲಾಗುವುದು. (ಅಲ್ಲಾಹು ಹೇಳುವನು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ಒಂದು ಸಮಯವನ್ನು ಮೀಸಲಿಡುವುದಿಲ್ಲ ಎಂದು ನೀವು ವಾದಿಸುತ್ತಿದ್ದಿರಿ.”
Kannada Translation - Hamza Buturಕರ್ಮ ಪುಸ್ತಕವನ್ನು ಇಡಲಾಗುವುದು. ಆಗ ಅಪರಾಧಿಗಳು ಅದರಲ್ಲಿರುವ ಉಲ್ಲೇಖಗಳನ್ನು ನೋಡಿ ಭಯದಿಂದ ನಡುಗುವುದನ್ನು ನೀವು ನೋಡುವಿರಿ. ಅವರು ಹೇಳುವರು: “ಅಯ್ಯೋ ನಮ್ಮ ದುರದೃಷ್ಟವೇ! ಇದೆಂತಹ ಪುಸ್ತಕ? ಇದರಲ್ಲಿ ಚಿಕ್ಕ ಮತ್ತು ದೊಡ್ಡದಾದ ಯಾವುದನ್ನೂ ದಾಖಲಿಸದೆ ಬಿಟ್ಟಿಲ್ಲವಲ್ಲ!” ಅವರು ಮಾಡಿದ ಎಲ್ಲಾ ಕರ್ಮಗಳನ್ನೂ ಅವರು ಅದರಲ್ಲಿ ದಾಖಲಾಗಿರುವುದನ್ನು ಕಾಣುವರು. ನಿಮ್ಮ ಪರಿಪಾಲಕನು (ಅಲ್ಲಾಹು) ಯಾರಿಗೂ ಅನ್ಯಾಯ ಮಾಡುವವನಲ್ಲ.
Kannada Translation - Hamza Buturನಾವು ದೇವದೂತರುಗಳೊಡನೆ, “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ಹೇಳಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು. ಇಬ್ಲೀಸನ ಹೊರತು. ಅವನು ಜಿನ್ನ್‌ಗಳಲ್ಲಿ ಸೇರಿದ್ದನು. ಅವನು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದನು. ಹೀಗಿರುವಾಗ, ನೀವು ನನ್ನನ್ನು ಬಿಟ್ಟು ಅವನನ್ನು ಮತ್ತು ಅವನ ಸಂತಾನವನ್ನು ಮಿತ್ರರಾಗಿ ಸ್ವೀಕರಿಸುವಿರಾ? ವಾಸ್ತವವಾಗಿ ಅವರು ನಿಮ್ಮ ವೈರಿಗಳಾಗಿದ್ದೂ ಸಹ. ಅಕ್ರಮಿಗಳಿಗೆ ಬದಲಿಯಾಗಿ ಸಿಕ್ಕಿದ್ದು ಬಹಳ ನಿಕೃಷ್ಟವಾಗಿದೆ.
Kannada Translation - Hamza Buturನಾನು ಭೂಮ್ಯಾಕಾಶಗಳ ಸೃಷ್ಟಿಸುವಾಗ ಅಥವಾ ಸ್ವತಃ ಅವರನ್ನೇ ಸೃಷ್ಟಿಸುವಾಗ ಅವರನ್ನು (ಶೈತಾನರನ್ನು) ಅದಕ್ಕೆ ಸಾಕ್ಷಿಗಳನ್ನಾಗಿ ಮಾಡಲಿಲ್ಲ. ದಾರಿತಪ್ಪಿಸುವವರನ್ನು ನಾನು ಸಹಾಯಕರನ್ನಾಗಿ ಮಾಡುವುದೂ ಇಲ್ಲ.
Kannada Translation - Hamza Butur“ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ದೇವರುಗಳನ್ನು ಕರೆಯಿರಿ” ಎಂದು ಅಲ್ಲಾಹು ಆದೇಶಿಸುವ ದಿನ. ಅವರು ಆ ದೇವರುಗಳನ್ನು ಕರೆಯುವರು. ಆದರೆ ಅವರು ಇವರಿಗೆ ಉತ್ತರ ನೀಡುವುದಿಲ್ಲ. ನಾವು ಅವರ ನಡುವೆ ವಿನಾಶದ ಕಂದಕವನ್ನು ನಿರ್ಮಿಸುವೆವು.
Kannada Translation - Hamza Buturಅಪರಾಧಿಗಳು ನರಕವನ್ನು ಕಣ್ಣಾರೆ ನೋಡುವರು. ಅವರು ಅದರಲ್ಲಿ ಬೀಳುವರೆಂದು ಅವರಿಗೆ ಖಾತ್ರಿಯಾಗುವುದು. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಮಾರ್ಗವನ್ನು ಅವರು ಕಾಣಲಾರರು.
Kannada Translation - Hamza Buturನಿಶ್ಚಯವಾಗಿಯೂ ನಾವು ಈ ಕುರ್‌ಆನಿನಲ್ಲಿ ಮನುಷ್ಯರಿಗೆ ಎಲ್ಲಾ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ವಾಸ್ತವವಾಗಿ, ಮನುಷ್ಯನು ಅತಿ ಹೆಚ್ಚು ತರ್ಕಿಸುವವನಾಗಿದ್ದಾನೆ.
Kannada Translation - Hamza Buturಜನರ ಬಳಿಗೆ ಸನ್ಮಾರ್ಗವು ಬಂದಾಗ ಅವರು ಅದರಲ್ಲಿ ವಿಶ್ವಾಸವಿಡದಿರಲು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸದಿರಲು ಅವರಿಗೆ ತಡೆಯಾಗಿರುವುದು, ಪೂರ್ವಿಕರ ವಿಷಯದಲ್ಲಿ ಕೈಗೊಳ್ಳಲಾದ ಅದೇ ಕ್ರಮವು ನಮಗೂ ಬರಬೇಕು ಅಥವಾ ಶಿಕ್ಷೆಯನ್ನು ನಮ್ಮ ಕಣ್ಣ ಮುಂದೆ ತರಬೇಕು ಎಂಬುದು ಮಾತ್ರವಾಗಿತ್ತು.
Kannada Translation - Hamza Buturನಾವು ಸಂದೇಶವಾಹಕರುಗಳನ್ನು ಕಳುಹಿಸುವುದು ಸುವಾರ್ತೆ ತಿಳಿಸಲು ಮತ್ತು ಎಚ್ಚರಿಕೆ ನೀಡಲು ಮಾತ್ರ. ಸತ್ಯನಿಷೇಧಿಗಳು ಅಸತ್ಯದ ಆಧಾರದಲ್ಲಿ ತರ್ಕಿಸುತ್ತಾರೆ ಮತ್ತು ಅದರ ಮೂಲಕ ಸತ್ಯವನ್ನು ನಾಶ ಮಾಡಬಹುದೆಂದು ಭಾವಿಸುತ್ತಾರೆ. ಅವರು ನನ್ನ ವಚನಗಳನ್ನು ಮತ್ತು ಅವರಿಗೆ ನೀಡಲಾದ ಎಚ್ಚರಿಕೆಗಳನ್ನು ತಮಾಷೆಯಾಗಿ ಸ್ವೀಕರಿಸುತ್ತಾರೆ.
Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅದನ್ನು ಲೆಕ್ಕಿಸದವನು ಮತ್ತು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳನ್ನು ಮರೆತವನಿಗಿಂತಲೂ ದೊಡ್ಡ ಅಕ್ರಮಿ ಯಾರು? ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳಿಗೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಿಗೆ ಕಿವುಡುತನವಿದೆ. ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೂ ಅವರು ಎಂದಿಗೂ ಸನ್ಮಾರ್ಗವನ್ನು ಸ್ವೀಕರಿಸುವುದಿಲ್ಲ.
Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಾಶೀಲನು ಮತ್ತು ಪರಮ ದಯಾಳುವಾಗಿದ್ದಾನೆ. ಅವರು ಮಾಡಿದ ದುಷ್ಕರ್ಮಗಳಿಗಾಗಿ ಅವನು ಅವರನ್ನು ಹಿಡಿಯುತ್ತಿದ್ದರೆ, ಅವನು ಅವರಿಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು. ಆದರೆ ಅವರಿಗೆ ಒಂದು ನಿಶ್ಚಿತ ಅವಧಿಯಿದೆ. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಸ್ಥಳವನ್ನೂ ಅವರು ಕಾಣಲಾರರು.
Kannada Translation - Hamza Buturಮೂಸಾ ತನ್ನ ಸೇವಕನೊಡನೆ ಹೇಳಿದ ಸಂದರ್ಭ: “ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪುವ ತನಕ ನಾನು ನಡೆಯುತ್ತಲೇ ಇರುವೆನು. ಅದಕ್ಕಾಗಿ ದೀರ್ಘ ಸಮಯ ಪ್ರಯಾಣ ಮಾಡಬೇಕಾಗಿ ಬಂದರೂ ಸಹ.”[1]
Kannada Translation - Hamza Buturನಂತರ ಅವರು ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪಿದಾಗ ತಮ್ಮಲ್ಲಿದ್ದ ಮೀನನ್ನು ಮರೆತುಬಿಟ್ಟರು. ಅದು ಸಮುದ್ರಕ್ಕೆ ನೆಗೆದು ತಾನು ಸಾಗಿದ ಹಾದಿಯನ್ನು ಒಂದು ಸುರಂಗದಂತೆ ಮಾಡಿತು.
Kannada Translation - Hamza Buturಅವರು ಆ ಸ್ಥಳದಿಂದ ಮುಂದೆ ಸಾಗಿದಾಗ ಮೂಸಾ ತನ್ನ ಸೇವಕನೊಡನೆ ಹೇಳಿದರು: “ನಮ್ಮ ಉಪಹಾರವನ್ನು ತೆಗೆದುಕೊಂಡು ಬಾ. ನಮ್ಮ ಈ ಪ್ರಯಾಣದಿಂದ ನಮಗೆ ಬಹಳ ಸುಸ್ತಾಗಿದೆ.”
Kannada Translation - Hamza Buturಸೇವಕ ಹೇಳಿದನು: “ನಿಮಗೆ ಗೊತ್ತೇ? ನಾವು ಆ ಬಂಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾನು ಆ ಮೀನನ್ನು ಮರೆತೇ ಬಿಟ್ಟಿದ್ದೆ. ನಾನು ಅದರ ಬಗ್ಗೆ ಮಾತನಾಡಬಾರದೆಂದು ಶೈತಾನನೇ ನನಗೆ ಅದನ್ನು ಮರೆಯುವಂತೆ ಮಾಡಿದ್ದನು. ಅದು ಸಮುದ್ರದಲ್ಲಿ ತಾನು ಸಾಗಿದ ಹಾದಿಯನ್ನು ಒಂದು ವಿಚಿತ್ರವನ್ನಾಗಿ ಮಾಡಿತ್ತು.”
Kannada Translation - Hamza Buturಅಲ್ಲಿ ಅವರು ನಮ್ಮ ದಾಸರಲ್ಲಿ ಒಬ್ಬರನ್ನು ಕಂಡರು. ಅವರಿಗೆ ನಾವು ನಮ್ಮ ಕಡೆಯ ದಯೆಯನ್ನು ನೀಡಿದ್ದೆವು. ಅವರಿಗೆ ನಮ್ಮ ಕಡೆಯ ಜ್ಞಾನವನ್ನೂ ಕಲಿಸಿದ್ದೆವು.
Kannada Translation - Hamza Buturಮೂಸಾ ಹೇಳಿದರು: “ಅಲ್ಲಾಹು ಬಯಸಿದರೆ ತಾವು ನನ್ನನ್ನು ತಾಳ್ಮೆಯುಳ್ಳವನಾಗಿ ಕಾಣುವಿರಿ. ತಮ್ಮ ಯಾವುದೇ ಆಜ್ಞೆಯನ್ನು ನಾನು ಉಲ್ಲಂಘಿಸುವುದಿಲ್ಲ.”
Kannada Translation - Hamza Buturಆ ವ್ಯಕ್ತಿ ಹೇಳಿದರು: “ನೀವು ನನ್ನನ್ನು ಹಿಂಬಾಲಿಸುವುದಾದರೆ ಯಾವುದೇ ವಿಷಯದ ಬಗ್ಗೆಯೂ ನನ್ನೊಡನೆ ಪ್ರಶ್ನಿಸಬಾರದು. ನಾನು ಅದರ ಬಗ್ಗೆ ನಿಮಗೆ ಮಾಹಿತಿ ನೀಡುವ ತನಕ.”
Kannada Translation - Hamza Buturಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರಿಬ್ಬರು ಒಂದು ನಾವೆಯನ್ನೇರಿದಾಗ ಆ ವ್ಯಕ್ತಿ ನಾವೆಯ ಹಲಗೆಯನ್ನು ಒಡೆದು ತೂತು ಮಾಡಿದರು. ಮೂಸಾ ಹೇಳಿದರು: “ಏನಿದು? ಅದರಲ್ಲಿರುವ ಜನರನ್ನು ಮುಳುಗಿಸಿ ಬಿಡಲು ತೂತು ಮಾಡುತ್ತಿದ್ದೀರಾ? ನಿಜಕ್ಕೂ ನೀವು ಒಂದು ಘೋರ ಕೆಲಸವನ್ನು ಮಾಡಿದ್ದೀರಿ!”
Kannada Translation - Hamza Buturಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರೊಬ್ಬ ಹುಡುಗನನ್ನು ಭೇಟಿಯಾದಾಗ, ಆ ವ್ಯಕ್ತಿ ಆ ಹುಡುಗನನ್ನು ಕೊಂದರು. ಮೂಸಾ ಹೇಳಿದರು: “ಯಾರನ್ನೂ ಕೊಲೆ ಮಾಡದ ಒಂದು ಪರಿಶುದ್ಧ ಜೀವವನ್ನು ನೀವು ಕೊಂದುಬಿಟ್ಟಿರಿ. ನಿಜಕ್ಕೂ ನೀವು ಬಹಳ ಶೋಚನೀಯ ಕೆಲಸವನ್ನು ಮಾಡಿದ್ದೀರಿ.”
Kannada Translation - Hamza Buturಮೂಸಾ ಹೇಳಿದರು: “ಇನ್ನು ಮುಂದಕ್ಕೆ ನಾನು ನಿಮ್ಮಲ್ಲಿ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನಿಸಿದರೆ, ನೀವು ನನ್ನನ್ನು ಬಿಟ್ಟು ಹೋಗಬಹುದು. ನನ್ನ ಕಡೆಯಿಂದ ನಿಮಗಂತೂ ಒಂದು ನೆವನ ಸಿಕ್ಕಿಬಿಟ್ಟಿದೆ.”
Kannada Translation - Hamza Buturಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರು ಒಂದು ಊರನ್ನು ತಲುಪಿದಾಗ, ಅದರ ನಿವಾಸಿಗಳೊಡನೆ ಆಹಾರ ಕೇಳಿದರು. ಆದರೆ ಅವರು ಆತಿಥ್ಯ ನೀಡಲು ನಿರಾಕರಿಸಿದರು. ಆಗ ಅವರು ಅಲ್ಲಿ ಕುಸಿದು ಬೀಳುವಂತಾಗಿರುವ ಒಂದು ಗೋಡೆಯನ್ನು ಕಂಡರು. ತಕ್ಷಣ ಆ ವ್ಯಕ್ತಿ ಅದನ್ನು ದುರಸ್ತಿಗೊಳಿಸಿ ನಿಲ್ಲಿಸಿದರು. ಮೂಸಾ ಹೇಳಿದರು: “ನೀವು ಬಯಸಿದರೆ ಈ ಕೆಲಸ ಮಾಡಿದ್ದಕ್ಕಾಗಿ ಅವರಿಂದ ವೇತನ ಪಡೆಯಬಹುದಿತ್ತು.”
Kannada Translation - Hamza Buturಆ ವ್ಯಕ್ತಿ ಹೇಳಿದರು: “ಇದು ನಮ್ಮ ನಡುವಿನ ಅಗಲಿಕೆಯಾಗಿದೆ. ಯಾವುದರ ಬಗ್ಗೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಾಗಲಿಲ್ಲವೋ ಅದರ ಮರ್ಮವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.
Kannada Translation - Hamza Buturಆ ನಾವೆಯು ಕಡಲಲ್ಲಿ ಕೆಲಸ ಮಾಡುವ ಕೆಲವು ಬಡವರದ್ದಾಗಿತ್ತು. ಆದ್ದರಿಂದ ನಾನು ಅದನ್ನು ಹಾಳುಮಾಡಲು ಬಯಸಿದೆನು. ಏಕೆಂದರೆ, ಅವರ ಹಿಂಭಾಗದಲ್ಲಿ ಒಬ್ಬ ಅರಸನಿದ್ದನು ಮತ್ತು ಅವನು ಎಲ್ಲಾ (ಉತ್ತಮ) ನಾವೆಗಳನ್ನು ಬಲವಂತದಿಂದ ವಶಪಡಿಸಿಕೊಳ್ಳುತ್ತಿದ್ದನು.
Kannada Translation - Hamza Buturಆ ಹುಡುಗನ ಮಾತಾಪಿತರು ಸತ್ಯವಿಶ್ವಾಸಿಗಳಾಗಿದ್ದರು. ಅವನು (ದೊಡ್ಡವನಾಗಿ) ಅವರನ್ನು ಅತಿರೇಕ ಮತ್ತು ಸತ್ಯ ನಿಷೇಧಕ್ಕೆ ನಿರ್ಬಂಧಿಸಬಹುದೆಂದು ನಮಗೆ ಭಯವಾಯಿತು.
Kannada Translation - Hamza Buturಆದ್ದರಿಂದ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಅವನಿಗಿಂತಲೂ ಹೆಚ್ಚು ಪರಿಶುದ್ಧನಾದ ಮತ್ತು ಅವನಿಗಿಂತಲೂ ಹೆಚ್ಚು ಪ್ರೀತಿ-ವಾತ್ಸಲ್ಯವಿರುವ ಒಬ್ಬ ಮಗನನ್ನು ಬದಲಿಯಾಗಿ ನೀಡಲಿ ಎಂದು ನಾವು ಬಯಸಿದೆವು.
Kannada Translation - Hamza Buturಆ ಗೋಡೆಯು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅದರ ಅಡಿಯಲ್ಲಿ ಅವರಿಗೆ ಸಿಗಬೇಕಾದ ಒಂದು ನಿಧಿಯಿತ್ತು. ಅವರ ತಂದೆ ನೀತಿವಂತನಾಗಿದ್ದ. ಆದ್ದರಿಂದ ಅವರಿಬ್ಬರೂ ಪ್ರೌಢಾವಸ್ಥೆಯನ್ನು ತಲುಪಿದ ನಂತರ ತಮ್ಮ ನಿಧಿಯನ್ನು ಹೊರತೆಗೆಯಬೇಕೆಂದು ನಿಮ್ಮ ಪರಿಪಾಲಕ (ಅಲ್ಲಾಹು) ಬಯಸಿದ್ದನು. ಇದು ನಮ್ಮ ಪರಿಪಾಲಕನ (ಅಲ್ಲಾಹನ) ದಯೆಯಾಗಿದೆ. ನಾನು ಇವೆಲ್ಲವನ್ನೂ ನನ್ನ ಇಷ್ಟದಂತೆ ಮಾಡಿರಲಿಲ್ಲ. ಯಾವುದರ ಬಗ್ಗೆ ನಿಮಗೆ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲವೋ ಅದರ ಮರ್ಮವು ಇದೇ.”
Kannada Translation - Hamza Buturಎಲ್ಲಿಯವರೆಗೆಂದರೆ, ಅವರು ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಕೆಸರು ನೀರಿನ ತೊರೆಯಲ್ಲಿ ಅಸ್ತಮಿಸುವುದನ್ನು ಕಂಡರು. ಆ ತೊರೆಯ ಬಳಿ ಜನರನ್ನೂ ಕಂಡರು. ನಾವು ಹೇಳಿದೆವು: “ಓ ದುಲ್-ಕರ್ನೈನ್! ಒಂದೋ ಇವರನ್ನು ಶಿಕ್ಷಿಸಿ ಅಥವಾ ಅವರ ಬಗ್ಗೆ ಉತ್ತಮ ಸಮೀಪನವನ್ನು ಸ್ವೀಕರಿಸಿ.”
Kannada Translation - Hamza Buturಅವರು ಹೇಳಿದರು: “ಯಾರು ಅಕ್ರಮವೆಸಗುತ್ತಾನೋ ಅವನನ್ನು ನಾವು ಶಿಕ್ಷಿಸುತ್ತೇವೆ. ನಂತರ ಅವನನ್ನು ಅವನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುತ್ತದೆ. ಆಗ ಅವನು ಅವನಿಗೆ ಕಠೋರ ಶಿಕ್ಷೆಯನ್ನು ನೀಡುತ್ತಾನೆ.
Kannada Translation - Hamza Buturಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾನೋ ಅವನಿಗೆ ಅತ್ಯುತ್ತಮ ಪ್ರತಿಫಲವು ದೊರೆಯುತ್ತದೆ. ನಾವು ಅವನಿಗೆ ನಮ್ಮ ಕೆಲಸಗಳಲ್ಲಿ ಸುಲಭವಾಗಿರುವುದನ್ನೇ ಆದೇಶಿಸುತ್ತೇವೆ.”
Kannada Translation - Hamza Buturಎಲ್ಲಿಯವರೆಗೆಂದರೆ, ಅವರು ಸೂರ್ಯೋದಯದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಜನರ ಮೇಲೆ ಉದಯವಾಗುತ್ತಿರುವಂತೆ ಕಂಡರು. ಅದರಿಂದ ಮರೆಯಾಗಲು ನಾವು ಅವರಿಗೆ ಯಾವುದೇ ಪರದೆಯನ್ನು ಮಾಡಿಕೊಟ್ಟಿರಲಿಲ್ಲ.
Kannada Translation - Hamza Buturಎಲ್ಲಿಯವರೆಗೆಂದರೆ, ಅವರು ಎರಡು ಬೆಟ್ಟಗಳ ನಡುವೆ ತಲುಪಿದಾಗ, ಅವುಗಳ ಈಚೆ ಬದಿಯಲ್ಲಿ ಒಂದು ಜನತೆಯನ್ನು ಕಂಡರು. ಅವರಿಗೆ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
Kannada Translation - Hamza Buturಅವರು ಹೇಳಿದರು: “ಓ ದುಲ್-ಕರ್ನೈನ್! ನಿಶ್ಚಯವಾಗಿಯೂ ಯಾಜೂಜ್-ಮಾಜೂಜರು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಿದ್ದಾರೆ. ನಾವು ನಿಮಗೆ ಒಂದು ಖರ್ಚನ್ನು ನಿಗದಿಪಡಿಸಿದರೆ, ನೀವು ನಮ್ಮ ಮತ್ತು ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸಿಕೊಡುವಿರಾ?
Kannada Translation - Hamza Buturದುಲ್-ಕರ್ನೈನ್ ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ಏನೆಲ್ಲಾ ನನ್ನ ಅಧಿಕಾರಕ್ಕೆ ನೀಡಿದ್ದಾನೋ ಅದು ಅತ್ಯುತ್ತಮವಾಗಿದೆ. ನೀವು ನಿಮ್ಮ ದೇಹಬಲದಿಂದ ನನಗೆ ಸಹಾಯ ಮಾಡಿರಿ. ನಿಮ್ಮ ಮತ್ತು ಅವರ ನಡುವೆ ನಾನು ಒಂದು ಬಲಿಷ್ಠ ಗೋಡೆಯನ್ನು ನಿರ್ಮಿಸಿಕೊಡುತ್ತೇನೆ.”
Kannada Translation - Hamza Butur(ನಂತರ ಅವರು ಹೇಳಿದರು): “ನನಗೆ ಕಬ್ಬಿಣದ ತುಂಡುಗಳನ್ನು ತಂದುಕೊಡಿ.” ಎಲ್ಲಿಯವರೆಗೆಂದರೆ, ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮಗೊಳಿಸಿದಾಗ, ಅವರು ಹೇಳಿದರು: “ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡಿರಿ.” ಎಲ್ಲಿಯವರೆಗೆಂದರೆ, ಆ ಕಬ್ಬಿಣದ ತುಂಡುಗಳು ಸಂಪೂರ್ಣ ಕೆಂಡದಂತಾದಾಗ, ಅವರು ಹೇಳಿದರು: “ನನಗೆ ಕರಗಿಸಿದ ತಾಮ್ರವನ್ನು ತಂದು ಕೊಡಿ. ನಾನು ಅದನ್ನು ಅದಕ್ಕೆ ಸುರಿಯುತ್ತೇನೆ.”
Kannada Translation - Hamza Buturದುಲ್-ಕರ್ನೈನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ದಯೆಯಾಗಿದೆ. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಬಂದರೆ ಅವನು ಅದನ್ನು ನುಚ್ಚುನೂರು ಮಾಡುವನು. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಸತ್ಯವಾಗಿದೆ.”
Kannada Translation - Hamza Buturನನ್ನನ್ನು ಬಿಟ್ಟು ನನ್ನ ದಾಸರನ್ನು ರಕ್ಷಕರನ್ನಾಗಿ ಸ್ವೀಕರಿಸಬಹುದೆಂದು ಸತ್ಯನಿಷೇಧಿಗಳು ಭಾವಿಸಿದ್ದಾರೆಯೇ? ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಆತಿಥ್ಯವಾಗಿ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
Kannada Translation - Hamza Buturಅವರು ಯಾರೆಂದರೆ, ಇಹಲೋಕ ಜೀವನದಲ್ಲಿ ತಮ್ಮ ಪರಿಶ್ರಮಗಳನ್ನು ವ್ಯರ್ಥಗೊಳಿಸಿದವರು. ಅವರು ತಾವು ಅತ್ಯುತ್ತಮ ಕರ್ಮಗಳನ್ನು ಮಾಡುತ್ತಿದ್ದೇವೆಂಬ ಭಾವನೆಯಲ್ಲಿದ್ದಾರೆ.”
Kannada Translation - Hamza Buturಅವರೇ ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಮತ್ತು ಅವನನ್ನು ಭೇಟಿಯಾಗುವುದನ್ನು ನಿಷೇಧಿಸಿದವರು. ಆದ್ದರಿಂದ ಅವರ ಕರ್ಮಗಳು ವ್ಯರ್ಥವಾದವು. ಪುನರುತ್ಥಾನ ದಿನದಂದು ನಾವು ಅವರಿಗೆ ಯಾವುದೇ ತೂಕವನ್ನು (ಪ್ರಾಮುಖ್ಯತೆಯನ್ನು) ನೀಡುವುದಿಲ್ಲ.
Kannada Translation - Hamza Buturಅದೇ ಅವರ ಸ್ಥಿತಿ! ಅವರು ನಿಷೇಧಿಸಿದ ಕಾರಣ ಮತ್ತು ನನ್ನ ವಚನಗಳನ್ನು ಹಾಗೂ ನನ್ನ ಸಂದೇಶವಾಹಕರುಗಳನ್ನು ತಮಾಷೆಯಾಗಿ ಸ್ವೀಕರಿಸಿದ ಕಾರಣ ಅವರಿಗಿರುವ ಪ್ರತಿಫಲವು ನರಕವಾಗಿದೆ.
Kannada Translation - Hamza Buturಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಬರೆಯಲು ಸಮುದ್ರ ಜಲವನ್ನು ಶಾಯಿಯಾಗಿ ಬಳಸಿದರೆ, ನನ್ನ ಪರಿಪಾಲಕನ (ಅಲ್ಲಾಹನ) ವಚನಗಳು ಮುಗಿಯುವ ಮೊದಲೇ ಸಮುದ್ರದ ನೀರು ಮುಗಿಯುವುದು ನಿಶ್ಚಿತ. ನಾವು ಅದರಂತಿರುವ ಇನ್ನೊಂದನ್ನು ಸಹಾಯಕ್ಕಾಗಿ ತಂದರೂ ಸಹ.”
Kannada Translation - Hamza Butur(ಪ್ರವಾದಿಯವರೇ) ಹೇಳಿರಿ: “ನಾನು ನಿಮ್ಮಂತಹ ಒಬ್ಬ ಮನುಷ್ಯ ಮಾತ್ರವಾಗಿದ್ದೇನೆ. ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಆದ್ದರಿಂದ ಯಾರು ತನ್ನ ಪರಿಪಾಲಕನ (ಅಲ್ಲಾಹನ) ಭೇಟಿಯನ್ನು ನಿರೀಕ್ಷಿಸುತ್ತಾನೋ ಅವನು ಸತ್ಕರ್ಮಗಳನ್ನು ಮಾಡಲಿ ಮತ್ತು ತನ್ನ ಪರಿಪಾಲಕನ (ಅಲ್ಲಾಹನ) ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯಾಗಿ ಮಾಡದಿರಲಿ.”