Kannada Translation - Hamza Buturಅವರು ನಿಮ್ಮಲ್ಲಿ ಯುದ್ಧಾರ್ಜಿತ ಸೊತ್ತುಗಳ ಬಗ್ಗೆ ಕೇಳುತ್ತಾರೆ.[1] ಹೇಳಿರಿ: “ಯುದ್ಧಾರ್ಜಿತ ಸೊತ್ತು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು.”[2] ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬಂಧಗಳನ್ನು ಸುಧಾರಿಸಿರಿ. ಅಲ್ಲಾಹನನ್ನು ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Kannada Translation - Hamza Buturಅಲ್ಲಾಹನ ಹೆಸರು ಹೇಳಿದಾಗ ಯಾರ ಹೃದಯಗಳು ಭಯದಿಂದ ನಡುಗುತ್ತದೋ, ಅವನ ವಚನಗಳನ್ನು ಪಠಿಸಲಾದರೆ ಯಾರ ವಿಶ್ವಾಸವು ಅಧಿಕವಾಗುತ್ತದೋ ಮತ್ತು ಯಾರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುತ್ತಾರೋ ಅವರೇ ಸತ್ಯವಿಶ್ವಾಸಿಗಳು.
Kannada Translation - Hamza Buturಅದು ಹೇಗೆಂದರೆ, ನಿಮ್ಮ ಪರಿಪಾಲಕ (ಅಲ್ಲಾಹು) ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದಂತೆ. ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಲ್ಲಿ ಒಂದು ಗುಂಪಿಗೆ ಅದು ಇಷ್ಟವಿರಲಿಲ್ಲ.
Kannada Translation - Hamza Buturಯುದ್ಧವು ಸಂಭವಿಸುತ್ತದೆಯೆಂದು ಸ್ಪಷ್ಟವಾದ ಬಳಿಕವೂ ಅವರು ನಿಮ್ಮೊಡನೆ ಅದರ ಬಗ್ಗೆ ತರ್ಕಿಸುತ್ತಾರೆ. ಸಾವನ್ನು ನೋಡುತ್ತಿರುವಂತೆಯೇ ಅವರನ್ನು ಅದಕ್ಕೆ ಸಾಗಿಸಲಾಗುತ್ತಿದೆಯೋ ಎಂಬಂತೆ.
Kannada Translation - Hamza Buturಎರಡು ಗುಂಪುಗಳಲ್ಲಿ ಒಂದನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ನಿಮಗೆ ಆಶ್ವಾಸನೆ ನೀಡಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಶಸ್ತ್ರ ಗುಂಪು ನಿಮ್ಮ ವಶಕ್ಕೆ ಬರಬೇಕೆಂದು ನೀವು ಬಯಸುತ್ತೀರಿ. ಆದರೆ ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸ್ಥಾಪಿಸಲು ಮತ್ತು ಸತ್ಯನಿಷೇಧಿಗಳನ್ನು ಬೇರು ಸಹಿತ ನಿರ್ನಾಮ ಮಾಡಲು ಬಯಸುತ್ತಿದ್ದನು.[1]
Kannada Translation - Hamza Buturನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಸಹಾಯ ಯಾಚಿಸುತ್ತಿದ್ದ ಸಂದರ್ಭ(ವನ್ನು ಸ್ಮರಿಸಿ). ಆಗ, “ನಾನು ಒಂದು ಸಾವಿರ ದೇವದೂತರುಗಳನ್ನು ನಿರಂತರವಾಗಿ ಕಳುಹಿಸುವ ಮೂಲಕ ನಿಮಗೆ ಸಹಾಯ ಮಾಡುವೆನು” ಎಂದು ಅವನು ನಿಮಗೆ ಉತ್ತರವಿತ್ತನು.
Kannada Translation - Hamza Buturಅಲ್ಲಾಹು ಅದನ್ನೊಂದು ಶುಭ ಸುದ್ದಿಯಾಗಿ ಮಾಡಿದನು. ಅದರಿಂದ ನಿಮ್ಮ ಹೃದಯಗಳು ಶಾಂತವಾಗುವುದಕ್ಕಾಗಿ. ಸಹಾಯವು ಅಲ್ಲಾಹನಿಂದಲ್ಲದೆ ಬೇರೆ ಯಾರಿಂದಲೂ ದೊರೆಯುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Butur(ನೀವು ಶತ್ರುಗಳ ಬಗ್ಗೆ ಭಯಪಡದಿರಲು) ಅವನು ತನ್ನ ಕಡೆಯ ಸುರಕ್ಷೆಯಾಗಿ ನಿಮ್ಮನ್ನು ಮಂಪರಿನಿಂದ ಆವರಿಸಿಕೊಂಡ ಸಂದರ್ಭ(ವನ್ನು ಸ್ಮರಿಸಿ). ನಿಮ್ಮನ್ನು ಶುದ್ಧೀಕರಿಸಲು, ನಿಮ್ಮಿಂದ ಶೈತಾನನ ಕೊಳೆಯನ್ನು (ದುಷ್ಪ್ರೇರಣೆಗಳನ್ನು) ನಿವಾರಿಸಲು, ನಿಮ್ಮ ಹೃದಯಗಳನ್ನು ಸ್ಥೈರ್ಯದಿಂದ ಹಿಡಿದಿಡಲು ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸಲು ಅವನು ಆಕಾಶದಿಂದ ಮಳೆಯನ್ನು ಸುರಿಸಿದನು.
Kannada Translation - Hamza Butur“ನಿಶ್ಚಯವಾಗಿಯೂ ನಾನು ನಿಮ್ಮ ಜೊತೆಗಿದ್ದೇನೆ. ನೀವು ಸತ್ಯವಿಶ್ವಾಸಿಗಳಿಗೆ ಶಕ್ತಿಯನ್ನು ನೀಡಿರಿ. ಸತ್ಯನಿಷೇಧಿಗಳ ಹೃದಯಗಳಲ್ಲಿ ನಾನು ಭೀತಿಯನ್ನು ಹಾಕುತ್ತೇನೆ. ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಎಲ್ಲಾ ಬೆರಳುಗಳ ತುದಿಗಳಿಗೂ ಹೊಡೆಯಿರಿ” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳಿಗೆ ದಿವ್ಯಪ್ರೇರಣೆ ನೀಡಿದ ಸಂದರ್ಭ.
Kannada Translation - Hamza Buturಅದೇಕೆಂದರೆ ಅವರು (ಸತ್ಯನಿಷೇಧಿಗಳು) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗಿದರು. ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿಕಠೋರವಾಗಿ ಶಿಕ್ಷಿಸುತ್ತಾನೆ.
Kannada Translation - Hamza Buturಯುದ್ಧತಂತ್ರದ ಭಾಗವಾಗಿ ತಟ್ಟನೆ ಬದಿಗೆ ಸರಿಯುವುದು, ಅಥವಾ ಇನ್ನೊಂದು ತುಕಡಿಯನ್ನು ಸೇರುವುದು ಮುಂತಾದ ಕಾರಣಗಳಿಂದಲ್ಲದೆ ಯಾರು ಆ ದಿನ (ಯುದ್ಧದ ದಿನ) ಬೆನ್ನು ತೋರಿಸಿ ಓಡುತ್ತಾರೋ ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿಯೇ ಮರಳುತ್ತಾರೆ. ಅವರ ವಾಸಸ್ಥಳ ನರಕವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನವಾಗಿದೆ.
Kannada Translation - Hamza Buturನೀವು ಅವರನ್ನು ಕೊಲ್ಲಲಿಲ್ಲ. ಆದರೆ ಅಲ್ಲಾಹು ಅವರನ್ನು ಕೊಂದನು.[1] ನೀವು ಎಸೆದಾಗ (ವಾಸ್ತವದಲ್ಲಿ) ನೀವು ಎಸೆದಿರಲಿಲ್ಲ, ಬದಲಿಗೆ, ಅಲ್ಲಾಹು ಎಸೆದಿದ್ದನು.[2] ಅಲ್ಲಾಹು ತನ್ನ ವತಿಯ ಒಂದು ಸುಂದರ ಪರೀಕ್ಷೆಯ ಮೂಲಕ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಮಾಡಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturನೀವು (ಸತ್ಯನಿಷೇಧಿಗಳು) ತೀರ್ಪನ್ನು ಬಯಸಿದ್ದೇ ಆದರೆ ಇಗೋ ಆ ತೀರ್ಪು (ಸೋಲು) ಬಂದುಬಿಟ್ಟಿದೆ.[1] ನೀವು (ಯುದ್ಧವನ್ನು) ನಿಲ್ಲಿಸುವುದಾದರೆ ಅದು ನಿಮಗೇ ಒಳ್ಳೆಯದು. ನೀವು ಪುನಃ (ಯುದ್ಧಕ್ಕೆ) ಮರಳುವುದಾದರೆ ನಾವು ಕೂಡ ಮರಳುವೆವು. ನಿಮ್ಮ ಸೈನ್ಯ ಎಷ್ಟು ದೊಡ್ಡದಿದ್ದರೂ ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. (ಅವರ ಆಜ್ಞೆಗಳನ್ನು) ಕೇಳುತ್ತಾ ಅವರಿಂದ ಹಿಂದೆ ಸರಿಯಬೇಡಿ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಜೀವಿಗಳಲ್ಲೇ ಅತ್ಯಂತ ಕೀಳಾಗಿರುವವರು (ಸತ್ಯವನ್ನು) ಅರ್ಥಮಾಡಿಕೊಳ್ಳದ ಕಿವುಡರು ಮತ್ತು ಮೂಕರಾಗಿದ್ದಾರೆ.
Kannada Translation - Hamza Buturಅವರು (ಸತ್ಯವನ್ನು) ಕೇಳುವುದರಲ್ಲಿ ಒಳಿತಿದೆಯೆಂದು ಅಲ್ಲಾಹು ತಿಳಿದಿದ್ದರೆ ಅವರು ಅದನ್ನು ಕೇಳುವಂತೆ ಅವನು ಮಾಡುತ್ತಿದ್ದನು. ಇನ್ನು (ಅವರ ಇಚ್ಛೆಗೆ ವಿರುದ್ಧವಾಗಿ) ಅವರು ಅದನ್ನು ಕೇಳುವಂತೆ ಮಾಡಿದರೂ ಸಹ ಅವರು ಅದನ್ನು ಲೆಕ್ಕಿಸದೆ ವಿಮುಖರಾಗುತ್ತಿದ್ದರು.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನಿಮಗೆ ಜೀವ ತುಂಬುವ ವಿಷಯಕ್ಕೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಮ್ಮನ್ನು ಕರೆದರೆ ಅವರಿಗೆ ಉತ್ತರ ನೀಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಪರದೆಯಾಗಿ ಬರುತ್ತಾನೆ. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.
Kannada Translation - Hamza Buturಒಂದು ಪರೀಕ್ಷೆಯ (ಶಿಕ್ಷೆಯ) ಬಗ್ಗೆ ಜಾಗೃತರಾಗಿರಿ. (ಅದು ಎಂತಹ ಪರೀಕ್ಷೆಯೆಂದರೆ) ನಿಮ್ಮಲ್ಲಿ ಅಕ್ರಮವೆಸಗಿದವರಿಗೆ ಮಾತ್ರ ಅದು ಬಾಧಿಸುವುದಿಲ್ಲ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆ.
Kannada Translation - Hamza Buturನೀವು ಭೂಮಿಯಲ್ಲಿ ದುರ್ಬಲರು ಮತ್ತು ಅಲ್ಪಸಂಖ್ಯಾತರಾಗಿದ್ದ ಸಂದರ್ಭವನ್ನು ಸ್ಮರಿಸಿ. ಜನರು (ಶತ್ರುಗಳು) ನಿಮ್ಮನ್ನು ಅಪಹರಿಸುವರೋ ಎಂಬ ಭಯ ನಿಮ್ಮನ್ನು ಕಾಡುತ್ತಿತ್ತು. ನಂತರ ಅವನು ನಿಮಗೆ ಆಶ್ರಯವನ್ನು ಒದಗಿಸಿದನು, ತನ್ನ ಸಹಾಯದಿಂದ ನಿಮಗೆ ಶಕ್ತಿ ನೀಡಿದನು ಮತ್ತು ಶುದ್ಧ ವಸ್ತುಗಳನ್ನು ನಿಮಗೆ ಆಹಾರವಾಗಿ ನೀಡಿದನು. ನೀವು ಕೃತಜ್ಞರಾಗುವುದಕ್ಕಾಗಿ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡಬೇಡಿ.[1] ನಿಮ್ಮ ಮೇಲೆ ವಿಶ್ವಾಸವಿಡಲಾದ ವಿಷಯಗಳಲ್ಲೂ ವಿಶ್ವಾಸದ್ರೋಹ ಮಾಡಬೇಡಿ. (ಅದರ ಫಲಿತಾಂಶವೇನೆಂದು) ನೀವು ತಿಳಿದಿದ್ದೂ ಸಹ.
Kannada Translation - Hamza Buturತಿಳಿಯಿರಿ! ನಿಶ್ಚಯವಾಗಿಯೂ ನಿಮ್ಮ ಸಂಪತ್ತು ಮತ್ತು ನಿಮ್ಮ ಮಕ್ಕಳು ನಿಮಗೊಂದು ಪರೀಕ್ಷೆಯಾಗಿದ್ದಾರೆ. ಮಹಾ ಪ್ರತಿಫಲವಿರುವುದು ಅಲ್ಲಾಹನ ಬಳಿಯಲ್ಲಿ ಮಾತ್ರ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಭಯಪಡುವುದಾದರೆ ಅವನು ನಿಮಗೆ ಸತ್ಯಾಸತ್ಯವನ್ನು ವಿವೇಚಿಸಿ ತಿಳಿಯುವ ಶಕ್ತಿಯನ್ನು ನೀಡುವನು. ಅವನು ನಿಮ್ಮ ಪಾಪಗಳನ್ನು ಅಳಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ.
Kannada Translation - Hamza Buturಸತ್ಯನಿಷೇಧಿಗಳು ನಿಮ್ಮನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅಥವಾ ಊರಿನಿಂದ ಓಡಿಸಲು ಸಂಚು ರೂಪಿಸುತ್ತಿದ್ದ ಸಂದರ್ಭ. ಅವರು ಸಂಚು ರೂಪಿಸುತ್ತಾರೆ. ಅಲ್ಲಾಹು ಕೂಡ ಸಂಚು ರೂಪಿಸುತ್ತಾನೆ. ಸಂಚು ರೂಪಿಸುವುದರಲ್ಲಿ ಅಲ್ಲಾಹು ಅತಿಶ್ರೇಷ್ಠನಾಗಿದ್ದಾನೆ.
Kannada Translation - Hamza Buturಅವರಿಗೆ ನಮ್ಮ ವಚನಗಳನ್ನು ಪಠಿಸಲಾದಾಗ, ಅವರು ಹೇಳುತ್ತಾರೆ: “ನಾವು ಕೇಳಿದೆವು. ನಾವು ಇಚ್ಛಿಸಿದರೆ ಇದರಂತೆಯೇ ಹೇಳುವೆವು. ಇದು ಪ್ರಾಚೀನ ಜನರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”
Kannada Translation - Hamza Buturಅವರು (ಸತ್ಯನಿಷೇಧಿಗಳು) ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಅಲ್ಲಾಹ್! ಇದು ನಿನ್ನ ಕಡೆಯ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮಗೆ ಯಾತನಾಮಯ ಶಿಕ್ಷೆಯನ್ನು ನೀಡು.”
Kannada Translation - Hamza Buturಅಲ್ಲಾಹು ಅವರನ್ನೇಕೆ ಶಿಕ್ಷಿಸಬಾರದು? ಅವರು ಪವಿತ್ರ ಮಸೀದಿಯಿಂದ ಜನರನ್ನು ತಡೆಯುತ್ತಿದ್ದಾರೆ. ಅವರಂತೂ ಅದರ ಪರಿಪಾಲಕರಲ್ಲ. ದೇವಭಯವುಳ್ಳವರೇ ಅದರ ಪರಿಪಾಲಕರು. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Kannada Translation - Hamza Buturಭವನದಲ್ಲಿ (ಕಅಬಾಲಯದಲ್ಲಿ) ಅವರು ಮಾಡುವ ನಮಾಝ್ ಶಿಳ್ಳೆ ಹಾಕುವುದು ಮತ್ತು ಚಪ್ಪಾಳೆ ತಟ್ಟುವುದಕ್ಕೆ ಮಾತ್ರ ಸೀಮಿತವಾಗಿದೆ. ನೀವು ಸತ್ಯವನ್ನು ನಿಷೇಧಿಸಿದ ಕಾರಣ ಶಿಕ್ಷೆಯ ರುಚಿಯನ್ನು ನೋಡಿರಿ.
Kannada Translation - Hamza Buturನಿಶ್ಚಯವಾಗಿಯೂ ಸತ್ಯನಿಷೇಧಿಗಳು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯಲು ತಮ್ಮ ಧನವನ್ನು ಖರ್ಚು ಮಾಡುತ್ತಾರೆ. ಅವರು ಮುಂದೆಯೂ ಅದನ್ನು ಖರ್ಚು ಮಾಡುವರು. ನಂತರ ಅದು ಅವರಿಗೆ ವ್ಯಥೆಯಾಗಿ ಪರಿಣಮಿಸುವುದು. ನಂತರ ಅವರನ್ನು ಸದೆಬಡಿಯಲಾಗುವುದು. ಸತ್ಯನಿಷೇಧಿಗಳನ್ನು ನರಕಾಗ್ನಿಗೆ ಒಟ್ಟುಗೂಡಿಸಲಾಗುವುದು.
Kannada Translation - Hamza Buturಅದು ಅಲ್ಲಾಹು ಶುದ್ಧದಿಂದ ಹೊಲಸನ್ನು ಪ್ರತೇಕಿಸುವುದಕ್ಕಾಗಿ ಮತ್ತು ಹೊಲಸನ್ನು ಪರಸ್ಪರ ಒಟ್ಟುಗೂಡಿಸಿ, ನಂತರ ಅವೆಲ್ಲವನ್ನೂ ನರಕದಲ್ಲಿ ಹಾಕುವುದಕ್ಕಾಗಿದೆ. ಅವರೇ ನಷ್ಟಹೊಂದಿದವರು.
Kannada Translation - Hamza Buturಸತ್ಯನಿಷೇಧಿಗಳೊಡನೆ, ಅವರು (ಸತ್ಯನಿಷೇಧದಿಂದ) ಹಿಂದೆ ಸರಿದರೆ, ಅವರು ಹಿಂದೆ ಮಾಡಿದ ದುಷ್ಕರ್ಮಗಳನ್ನು ಅವರಿಗೆ ಕ್ಷಮಿಸಲಾಗುವುದು ಎಂದು ಹೇಳಿರಿ. ಆದರೆ ಅವರು (ತಮ್ಮ ಹಿಂದಿನ ಸ್ಥಿತಿಗೇ) ಮರಳುವುದಾದರೆ, ಪೂರ್ವಜರ ವಿಷಯದಲ್ಲಿ (ಅಲ್ಲಾಹನ) ದಂಡನಾಕ್ರಮವು ಈಗಾಗಲೇ ಸಂಭವಿಸಿ ಬಿಟ್ಟಿದೆ.
Kannada Translation - Hamza Buturಕ್ಷೋಭೆ ನಿವಾರಣೆಯಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗಾಗುವ ತನಕ ಅವರೊಡನೆ ಯುದ್ಧ ಮಾಡಿರಿ. ಅವರು ಹಿಂದೆ ಸರಿದರೆ, ನಿಶ್ಚಯವಾಗಿಯೂ ಅಲ್ಲಾಹು ಅವರು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ.
Kannada Translation - Hamza Buturತಿಳಿಯಿರಿ! ನೀವು (ಯುದ್ಧದಲ್ಲಿ) ಗಳಿಸಿದ ಯಾವುದೇ ವಸ್ತುವಿದ್ದರೂ, ಅದರ ಐದನೇ ಒಂದು ಭಾಗವು ಅಲ್ಲಾಹನಿಗೆ, ಸಂದೇಶವಾಹಕರಿಗೆ, ಅವರ ನಿಕಟ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ನೀಡತಕ್ಕದ್ದು.[1] ನೀವು ಅಲ್ಲಾಹನಲ್ಲಿ ಮತ್ತು ಸತ್ಯಾಸತ್ಯ ವಿವೇಚನೆಯ ದಿನದಂದು—ಎರಡು ಬಣಗಳು ಮುಖಾಮುಖಿಯಾದ ದಿನದಂದು—ನಮ್ಮ ದಾಸನಿಗೆ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Kannada Translation - Hamza Buturನೀವು ಕಣಿವೆಯಲ್ಲಿ (ಮದೀನಕ್ಕೆ) ಸಮೀಪವಿರುವ ತೀರದಲ್ಲಿ, ಅವರು (ಶತ್ರುಗಳು) ದೂರದ ತೀರದಲ್ಲಿ ಮತ್ತು ವ್ಯಾಪಾರ ತಂಡವು ನಿಮ್ಮ ಕೆಳಭಾಗದಲ್ಲಿದ್ದ ಸಂದರ್ಭ. ನೀವು ಯುದ್ಧಕ್ಕೆ ಸಮಯ ನಿಶ್ಚಯಿಸಿದ್ದರೆ, ಆ ನಿಶ್ಚಿತ ಸಮಯದ ಬಗ್ಗೆ ನಿಮ್ಮಲ್ಲಿ ಭಿನ್ನಮತ ತಲೆದೋರುತ್ತಿತ್ತು. ನಾಶವಾಗುವವನು ಸ್ಪಷ್ಟ ಸಾಕ್ಷ್ಯವನ್ನು ನೋಡಿಯೇ ನಾಶವಾಗಬೇಕು ಮತ್ತು ಬದುಕುಳಿಯುವವನು ಸ್ಪಷ್ಟ ಸಾಕ್ಷ್ಯವನ್ನು ನೋಡಿಯೇ ಬದುಕುಳಿಯಬೇಕು ಎಂಬ ಈಗಾಗಲೇ ಮಾಡಿದ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ಅಲ್ಲಾಹು ಹೀಗೆ ಮಾಡಿದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturಅಲ್ಲಾಹು ನಿಮ್ಮ ಕನಸಿನಲ್ಲಿ ಅವರನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಿದ ಸಂದರ್ಭ(ವನ್ನು ಸ್ಮರಿಸಿ). ಅವನು ಅವರನ್ನು ದೊಡ್ಡ ಸಂಖ್ಯೆಯಲ್ಲಿ ತೋರಿಸಿದ್ದರೆ, ನೀವು ಎದೆಗುಂದುತ್ತಿದ್ದಿರಿ ಮತ್ತು (ಯುದ್ಧ ಮಾಡಬೇಕೋ ಎಂಬ) ವಿಷಯದಲ್ಲಿ ಭಿನ್ನಮತ ತಳೆಯುತ್ತಿದ್ದಿರಿ. ಆದರೆ ಅಲ್ಲಾಹು ನಿಮ್ಮನ್ನು ಕಾಪಾಡಿದನು. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
Kannada Translation - Hamza Buturನೀವು ಅವರನ್ನು ಮುಖಾಮುಖಿಯಾದ ಸಂದರ್ಭದಲ್ಲಿ ಅವನು ನಿಮಗೆ ಅವರನ್ನು ಕಡಿಮೆ ಸಂಖ್ಯೆಯಲ್ಲಿ ಮತ್ತು ಅವರಿಗೆ ನಿಮ್ಮನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಿಕೊಟ್ಟ ಸಂದರ್ಭ. ಇದೇಕೆಂದರೆ, ಅಲ್ಲಾಹು ಈಗಾಗಲೇ ಮಾಡಿದ ತೀರ್ಮಾನವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ. ವಿಷಯಗಳೆಲ್ಲವೂ ಅಲ್ಲಾಹನ ಬಳಿಗೇ ಮರಳುತ್ತವೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ವೈರಿಗಳಿಗೆ ಮುಖಾಮುಖಿಯಾದರೆ ದೃಢವಾಗಿ ನಿಲ್ಲಿರಿ ಮತ್ತು ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
Kannada Translation - Hamza Buturನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ಭಿನ್ನರಾಗಬೇಡಿ. ಹಾಗೇನಾದರೂ ಆದರೆ ನೀವು ಧೈರ್ಯಗೆಡುವಿರಿ ಮತ್ತು ನಿಮ್ಮ ಶಕ್ತಿ ಕುಸಿಯಬಹುದು. ಸ್ಥೈರ್ಯದಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ.
Kannada Translation - Hamza Buturದರ್ಪದಿಂದ ಜನರ ಮುಂದೆ ಪ್ರದರ್ಶನ ಮಾಡುತ್ತಾ ಮತ್ತು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದಕ್ಕಾಗಿ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗಬೇಡಿ.[1] ಅವರು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
Kannada Translation - Hamza Buturಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ ಸಂದರ್ಭ. ಅವನು (ಶೈತಾನನು) ಹೇಳಿದನು: “ಇಂದು ಜನರಲ್ಲಿ ಯಾರಿಗೂ ನಿಮ್ಮನ್ನು ಸದೆಬಡಿಯಲು ಸಾಧ್ಯವಿಲ್ಲ. ನಿಶ್ಚಯವಾಗಿಯೂ ನಾನು ನಿಮ್ಮ ರಕ್ಷಣೆಗಿದ್ದೇನೆ.” ಆದರೆ ಎರಡು ಬಣಗಳು ಪರಸ್ಪರ ಮುಖಾಮುಖಿಯಾದಾಗ ಅವನು ಬೆನ್ನು ತಿರುಗಿಸಿ ಓಡುತ್ತಾ ಹೇಳಿದನು: “ನಾನು ನಿಮ್ಮಿಂದ ಸಂಪೂರ್ಣ ಮುಕ್ತನಾಗಿದ್ದೇನೆ. ನಿಮಗೆ ನೋಡಲು ಸಾಧ್ಯವಾಗದ ದೃಶ್ಯಗಳು ನನಗೆ ಕಾಣುತ್ತಿವೆ. ನಿಶ್ಚಯವಾಗಿಯೂ ನಾನು ಅಲ್ಲಾಹನನ್ನು ಭಯಪಡುತ್ತೇನೆ. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.”
Kannada Translation - Hamza Butur“ಇವರನ್ನು ಇವರ ಧರ್ಮವು ಮೋಸಗೊಳಿಸಿದೆ” ಎಂದು ಕಪಟವಿಶ್ವಾಸಿಗಳು ಮತ್ತು ಹೃದಯದಲ್ಲಿ ರೋಗವಿರುವವರು ಹೇಳುತ್ತಿದ್ದ ಸಂದರ್ಭ. ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾರೋ (ಅವರಿಗೆ ಅಲ್ಲಾಹು ಸಾಕು). ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturದೇವದೂತರುಗಳು ಸತ್ಯನಿಷೇಧಿಗಳ ಆತ್ಮಗಳನ್ನು ವಶಪಡಿಸುವ ಸಂದರ್ಭವನ್ನು ನೀವು ನೋಡಿರುತ್ತಿದ್ದರೆ! ಅವರು ಅವರ ಮುಖಗಳಿಗೆ ಮತ್ತು ಬೆನ್ನುಗಳಿಗೆ ಥಳಿಸುತ್ತಾ (ಹೇಳುತ್ತಾರೆ): “ಜ್ವಲಿಸುವ ಅಗ್ನಿಯ ಶಿಕ್ಷೆಯ ರುಚಿಯನ್ನು ನೋಡಿ.
Kannada Translation - Hamza Buturಫರೋಹನ ಜನರು ಮತ್ತು ಅವರಿಗಿಂತ ಮೊದಲಿನವರ ಸ್ಥಿತಿಯಂತೆ. ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರನ್ನು ಅವರ ಪಾಪಗಳಿಗಾಗಿ ಹಿಡಿದನು. ನಿಶ್ಚಯವಾಗಿಯೂ ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Kannada Translation - Hamza Buturಅದೇಕೆಂದರೆ, ಅಲ್ಲಾಹು ಯಾವುದೇ ಒಂದು ಜನತೆಗೆ ನೀಡಿದ ಅನುಗ್ರಹವನ್ನು, ಅವರು ಸ್ವಯಂ ಅವರಲ್ಲಿ ಬದಲಾವಣೆ ತರುವವರೆಗೆ ಬದಲಾಯಿಸುವುದಿಲ್ಲ ಎಂಬುದರಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturಫರೋಹನ ಜನರು ಮತ್ತು ಅವರಿಗಿಂತ ಮೊದಲಿನವರ ಸ್ಥಿತಿಯಂತೆ. ಅವರು ಅವರ ಪರಿಪಾಲಕನ (ಅಲ್ಲಾಹನ) ವಚನಗಳನ್ನು ನಿಷೇಧಿಸಿದರು. ಆಗ ಅವರ ಪಾಪಗಳಿಗಾಗಿ ನಾವು ಅವರನ್ನು ನಾಶ ಮಾಡಿದೆವು. ಫರೋಹನ ಜನರನ್ನು ನಾವು ಮುಳುಗಿಸಿ ಕೊಂದೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.
Kannada Translation - Hamza Buturನಿಮ್ಮೊಡನೆ ಕರಾರು ಮಾಡಿಕೊಂಡವರು ಅವರಲ್ಲಿದ್ದಾರೆ. ಆದರೆ ಪ್ರತಿ ಬಾರಿಯೂ ಅವರು ತಮ್ಮ ಕರಾರನ್ನು ಉಲ್ಲಂಘಿಸುತ್ತಾರೆ. ಅವರು ಅಲ್ಲಾಹನನ್ನು ಭಯಪಡುವುದೇ ಇಲ್ಲ.
Kannada Translation - Hamza Buturನೀವು ಯುದ್ಧದಲ್ಲಿ ಅವರಿಗೆ ಮುಖಾಮುಖಿಯಾದರೆ, ಅವರ ಹಿಂದೆ ಇರುವವರೂ ಭಯದಿಂದ ನಡುಗುವಂತೆ ಅವರನ್ನು ಸದೆಬಡಿಯಿರಿ. ಅವರು ಅದನ್ನು ನೆನಪಿಡುವುದಕ್ಕಾಗಿ.
Kannada Translation - Hamza Buturಅವರನ್ನು ಎದುರಿಸಲು ನಿಮಗೆ ಸಾಧ್ಯವಾಗುವ ಎಲ್ಲ ಶಕ್ತಿಯನ್ನು ಮತ್ತು ಅಶ್ವಸೇನೆಯನ್ನು ಸಿದ್ಧಗೊಳಿಸಿ. ಅದರಿಂದ ನೀವು ಅಲ್ಲಾಹನ ಶತ್ರುವನ್ನು ಮತ್ತು ನಿಮ್ಮ ಶತ್ರುವನ್ನು ಹಾಗೂ ಅವರ ಹೊರತಾದ—ನೀವು ತಿಳಿದಿರದ, ಆದರೆ ಅಲ್ಲಾಹು ತಿಳಿದಿರುವ—ಇತರರನ್ನು ಭಯಪಡಿಸಬಹುದು. ನೀವು ಅಲ್ಲಾಹನ ಮಾರ್ಗದಲ್ಲಿ ಏನು ಖರ್ಚು ಮಾಡಿದರೂ ಅದರ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮಗೆ ಯಾವುದೇ ಅನ್ಯಾಯವಾಗುವುದಿಲ್ಲ.
Kannada Translation - Hamza Buturಆದರೆ ಅವರು (ಯುದ್ಧವನ್ನು ತೊರೆದು) ಶಾಂತಿಯ ಕಡೆಗೆ ಒಲವು ತೋರಿದರೆ ನೀವು ಕೂಡ ಅದರ ಕಡೆಗೆ ಒಲವು ತೋರಿರಿ ಮತ್ತು ಅಲ್ಲಾಹನಲ್ಲಿ ಭರವಸೆಯಿಡಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturಅವರು ನಿಮಗೆ ದ್ರೋಹ ಬಗೆಯಲು ಬಯಸಿದರೆ, ನಿಶ್ಚಯವಾಗಿಯೂ ನಿಮಗೆ ಅಲ್ಲಾಹು ಸಾಕು. ತನ್ನ ಸಹಾಯದಿಂದ ಮತ್ತು ಸತ್ಯವಿಶ್ವಾಸಿಗಳ ಮೂಲಕ ನಿಮಗೆ ಶಕ್ತಿ ನೀಡಿದ್ದು ಅವನೇ.
Kannada Translation - Hamza Buturಅವನು ಅವರ (ಸತ್ಯವಿಶ್ವಾಸಿಗಳ) ಹೃದಯಗಳನ್ನು ಬೆಸೆದನು. ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನು ಖರ್ಚು ಮಾಡಿದರೂ ಸಹ ನಿಮಗೆ ಅವರ ಹೃದಯಗಳನ್ನು ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹು ಅವರನ್ನು ಒಂದುಗೂಡಿಸಿದನು. ನಿಶ್ಚಯವಾಗಿಯೂ ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಓ ಪ್ರವಾದಿಯವರೇ! ಸತ್ಯವಿಶ್ವಾಸಿಗಳನ್ನು ಯುದ್ಧ ಮಾಡಲು ಉತ್ತೇಜಿಸಿರಿ. ನಿಮ್ಮಲ್ಲಿ ಇಪ್ಪತ್ತು ಸ್ಥೈರ್ಯವಂತರಿದ್ದರೆ ಅವರು ಇನ್ನೂರು ವೈರಿಗಳನ್ನು ಸದೆಬಡಿಯುವರು. ನಿಮ್ಮಲ್ಲಿ ನೂರು ಮಂದಿಯಿದ್ದರೆ ಅವರು ಸಾವಿರ ಸತ್ಯನಿಷೇಧಿಗಳನ್ನು ಸದೆಬಡಿಯುವರು. ಅದೇಕೆಂದರೆ ಅವರು (ಸತ್ಯನಿಷೇಧಿಗಳು) ಅರ್ಥಮಾಡಿಕೊಳ್ಳದ ಜನರಾಗಿದ್ದಾರೆ.
Kannada Translation - Hamza Buturಈಗ ಅಲ್ಲಾಹು ನಿಮಗೆ ರಿಯಾಯಿತಿ ನೀಡಿದ್ದಾನೆ ಮತ್ತು ನಿಮ್ಮಲ್ಲಿ ಬಲಹೀನತೆಯಿದೆಯೆಂದು ತಿಳಿದಿದ್ದಾನೆ. ಆದ್ದರಿಂದ, ನಿಮ್ಮಲ್ಲಿ ನೂರು ಸ್ಥೈರ್ಯವಂತರಿದ್ದರೆ ಅವರು ಇನ್ನೂರು ಮಂದಿಯನ್ನು ಸದೆಬಡಿಯುವರು ಮತ್ತು ನಿಮ್ಮಲ್ಲಿ ಸಾವಿರ ಮಂದಿಯಿದ್ದರೆ ಅವರು ಅಲ್ಲಾಹನ ಅಪ್ಪಣೆಯಿಂದ ಎರಡು ಸಾವಿರ ವೈರಿಗಳನ್ನು ಸದೆಬಡಿಯುವರು. ಅಲ್ಲಾಹು ಸ್ಥೈರ್ಯವಂತರ ಜೊತೆಗಿದ್ದಾನೆ.
Kannada Translation - Hamza Butur(ಶತ್ರುಗಳನ್ನು ಸದೆಬಡಿದು) ನಾಡಿನಲ್ಲಿ ಪ್ರಾಬಲ್ಯ ಪಡೆಯುವ ತನಕ ಪ್ರವಾದಿಯ ಕೈಯಲ್ಲಿ ಯುದ್ಧ ಖೈದಿಗಳಿರುವುದು ಸರಿಯಲ್ಲ.[1] ನೀವು ಇಹಲೋಕದ ಐಶ್ವರ್ಯವನ್ನು ಬಯಸುತ್ತೀರಿ. ಆದರೆ ಅಲ್ಲಾಹು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಆದ್ದರಿಂದ (ಯುದ್ಧದಲ್ಲಿ) ನೀವು ಗಳಿಸಿದ ಧರ್ಮಸಮ್ಮತ ಮತ್ತು ಶುದ್ಧ ಸಂಪತ್ತನ್ನು ತಿನ್ನಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Kannada Translation - Hamza Buturಓ ಪ್ರವಾದಿಯವರೇ! ನಿಮ್ಮ ವಶದಲ್ಲಿರುವ ಯುದ್ಧ ಖೈದಿಗಳೊಡನೆ ಹೇಳಿರಿ: “ನಿಮ್ಮ ಹೃದಯಗಳಲ್ಲಿ ಒಳಿತಿದೆಯೆಂದು ಅಲ್ಲಾಹನಿಗೆ ತಿಳಿದರೆ ನಿಮ್ಮಿಂದ ಪಡೆಯಲಾದ (ಪರಿಹಾರಕ್ಕೆ ಬದಲಿಯಾಗಿ) ಅವನು ನಿಮಗೆ ಅತ್ಯುತ್ತಮವಾದುದನ್ನು ನೀಡುವನು[1] ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”
Kannada Translation - Hamza Buturಆದರೆ ಅವರು ನಿಮಗೆ ವಿಶ್ವಾಸದ್ರೋಹ ಮಾಡಲು ಬಯಸಿದರೆ—ಇದಕ್ಕಿಂತ ಮೊದಲೂ ಅವರು ಅಲ್ಲಾಹನಿಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಆದ್ದರಿಂದ ಅವನು ಅವರನ್ನು ನಿಮ್ಮ ವಶಕ್ಕೆ ಒಪ್ಪಿಸಿದನು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸವಿಟ್ಟವರು, ವಲಸೆ (ಹಿಜ್ರ) ಮಾಡಿದವರು, ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಮತ್ತು ಆಶ್ರಯ ನೀಡಿ ಸಹಾಯ ಮಾಡಿದವರು[1] ಯಾರೋ—ನಿಶ್ಚಯವಾಗಿಯೂ ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಆದರೆ ಸತ್ಯವಿಶ್ವಾಸಿಗಳಾಗಿದ್ದೂ ಸಹ ವಲಸೆ (ಹಿಜ್ರ) ಮಾಡದವರು ಯಾರೋ—ಅವರು ವಲಸೆ (ಹಿಜ್ರ) ಮಾಡುವ ತನಕ—ಅವರೊಡನೆ ನಿಮಗೆ ಯಾವುದೇ ಮೈತ್ರಿಯಿಲ್ಲ.[2] ಆದರೆ ಅವರು ಧರ್ಮದ ವಿಷಯದಲ್ಲಿ ನಿಮ್ಮೊಡನೆ ಸಹಾಯ ಕೇಳಿದರೆ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದರೆ ಯಾರೊಡನೆ ನೀವು ಕರಾರಿನಲ್ಲಿದ್ದೀರೋ ಅವರಿಗೆ ವಿರುದ್ಧವಾಗಿ ನೀವು ಅವರಿಗೆ ಸಹಾಯ ಮಾಡಬಾರದು. ಅಲ್ಲಾಹು ನೀವು ಮಾಡುವುದನ್ನು ನೋಡುತ್ತಿದ್ದಾನೆ.
Kannada Translation - Hamza Buturಸತ್ಯನಿಷೇಧಿಗಳು ಪರಸ್ಪರ ಆಪ್ತಮಿತ್ರರು. ನೀವು ಹೀಗೆ (ಪರಸ್ಪರ ಸಹಾಯ) ಮಾಡದಿದ್ದರೆ ಭೂಮಿಯಲ್ಲಿ ಕ್ಷೋಭೆ ಮತ್ತು ಮಹಾ ಅರಾಜಕತೆ ಉದ್ಭವವಾಗಬಹುದು.
Kannada Translation - Hamza Buturಸತ್ಯವಿಶ್ವಾಸವಿಟ್ಟವರು, ವಲಸೆ (ಹಿಜ್ರ) ಮಾಡಿದವರು, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಮತ್ತು ಆಶ್ರಯ ನೀಡಿ ಸಹಾಯ ಮಾಡಿದವರು ಯಾರೋ ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಕ್ಷಮೆ ಮತ್ತು ಗೌರವಾನ್ವಿತ ಉಪಜೀವನವಿದೆ.
Kannada Translation - Hamza Buturಅದರ ನಂತರ ಸತ್ಯವಿಶ್ವಾಸಿಗಳಾದವರು, ವಲಸೆ (ಹಿಜ್ರ) ಮಾಡಿದವರು ಮತ್ತು ನಿಮ್ಮ ಜೊತೆಗೂಡಿ ಯುದ್ಧ ಮಾಡಿದವರು ಯಾರೋ ಅವರು ಕೂಡ ನಿಮ್ಮವರೇ. ಆದರೆ ಅಲ್ಲಾಹನ ನಿಯಮದ ಪ್ರಕಾರ ರಕ್ತಸಂಬಂಧಿಗಳು ಪರಸ್ಪರ ಹೆಚ್ಚು ಹಕ್ಕುಳ್ಳವರು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.