caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Anbiyaa الأنبياء

112 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 73

بِسْمِ ٱللَّهِ ٱلرَّحْمَٰنِ ٱلرَّحِيمِ ٱقْتَرَبَ لِلنَّاسِ حِسَابُهُمْ وَهُمْ فِى غَفْلَةٍ مُّعْرِضُونَ

Kannada Translation - Hamza Buturಜನರಿಗೆ ವಿಚಾರಣೆಯ ಸಮಯವು ಸನ್ನಿಹಿತವಾಗಿದೆ. ಆದರೂ ಅವರು ನಿರ್ಲಕ್ಷ್ಯದಿಂದ ವಿಮುಖರಾಗುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَا يَأْتِيهِم مِّن ذِكْرٍ مِّن رَّبِّهِم مُّحْدَثٍ إِلَّا ٱسْتَمَعُوهُ وَهُمْ يَلْعَبُونَ

Kannada Translation - Hamza Buturಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಯಾವುದೇ ಹೊಸ ಉಪದೇಶವು ಬಂದಾಗಲೆಲ್ಲಾ ಅವರು ಆಟವಾಡುತ್ತಲೇ ಅದಕ್ಕೆ ಕಿವಿಗೊಡುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَاهِيَةً قُلُوبُهُمْ وَأَسَرُّوا۟ ٱلنَّجْوَى ٱلَّذِينَ ظَلَمُوا۟ هَلْ هَٰذَآ إِلَّا بَشَرٌ مِّثْلُكُمْ أَفَتَأْتُونَ ٱلسِّحْرَ وَأَنتُمْ تُبْصِرُونَ

Kannada Translation - Hamza Buturಅವರ ಹೃದಯಗಳು ಸಂಪೂರ್ಣ ನಿರ್ಲಕ್ಷ್ಯದಲ್ಲಿವೆ. ಅಕ್ರಮಿಗಳು ಪರಸ್ಪರ ರಹಸ್ಯವಾಗಿ ಮಾತನಾಡುತ್ತಾ ಕೇಳುತ್ತಾರೆ: “ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೇ? ನಿಮಗೆ ದೃಷ್ಟಿಯಿದ್ದೂ ಸಹ ನೀವು ಮಾಟಗಾರಿಕೆಗೆ ಬಲಿಯಾಗುತ್ತೀರಾ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ رَبِّى يَعْلَمُ ٱلْقَوْلَ فِى ٱلسَّمَآءِ وَٱلْأَرْضِ وَهُوَ ٱلسَّمِيعُ ٱلْعَلِيمُ

Kannada Translation - Hamza Buturಪ್ರವಾದಿ ಹೇಳಿದರು: “ಆಕಾಶ ಮತ್ತು ಭೂಮಿಯಲ್ಲಿರುವ ಎಲ್ಲಾ ಮಾತುಗಳನ್ನು ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿಯುತ್ತಾನೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ قَالُوٓا۟ أَضْغَٰثُ أَحْلَٰمٍۭ بَلِ ٱفْتَرَىٰهُ بَلْ هُوَ شَاعِرٌ فَلْيَأْتِنَا بِـَٔايَةٍ كَمَآ أُرْسِلَ ٱلْأَوَّلُونَ

Kannada Translation - Hamza Buturಅಷ್ಟೇ ಅಲ್ಲ; ಅವರು ಹೇಳಿದರು: “ಈ ಕುರ್‌ಆನ್ ಅರ್ಥಶೂನ್ಯ ಕನಸುಗಳ ಮಿಶ್ರಣವಾಗಿದೆ. ಅಲ್ಲ; ಅವನೇ (ಪ್ರವಾದಿ) ಅದನ್ನು ಸ್ವಯಂ ರಚಿಸಿ ತಂದಿದ್ದಾನೆ. ಅಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಇಲ್ಲದಿದ್ದರೆ, ಹಿಂದಿನ ಪ್ರವಾದಿಗಳು ತಂದಂತಹ ಯಾವುದಾದರೂ ದೃಷ್ಟಾಂತವನ್ನು ಇವನು ಕೂಡ ತಂದು ತೋರಿಸಲಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

مَآ ءَامَنَتْ قَبْلَهُم مِّن قَرْيَةٍ أَهْلَكْنَٰهَآ أَفَهُمْ يُؤْمِنُونَ

Kannada Translation - Hamza Buturಇವರಿಗಿಂತ ಮೊದಲು ನಾವು ನಾಶ ಮಾಡಿದ ಯಾವುದೇ ಊರಿನವರೂ ವಿಶ್ವಾಸವಿಟ್ಟಿರಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿಡುವರೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَرْسَلْنَا قَبْلَكَ إِلَّا رِجَالًا نُّوحِىٓ إِلَيْهِمْ فَسْـَٔلُوٓا۟ أَهْلَ ٱلذِّكْرِ إِن كُنتُمْ لَا تَعْلَمُونَ

Kannada Translation - Hamza Buturನಿಮಗಿಂತ ಮೊದಲು ನಾವು ಎಷ್ಟು ಸಂದೇಶವಾಹಕರನ್ನು ಕಳುಹಿಸಿದ್ದೆವೋ ಅವರೆಲ್ಲರೂ ನಾವು ದೇವವಾಣಿ ನೀಡಿದ ಪುರುಷರಾಗಿದ್ದರು. ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರೊಡನೆ ಕೇಳಿ ನೋಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا جَعَلْنَٰهُمْ جَسَدًا لَّا يَأْكُلُونَ ٱلطَّعَامَ وَمَا كَانُوا۟ خَٰلِدِينَ

Kannada Translation - Hamza Buturಅವರನ್ನು ನಾವು ಆಹಾರ ಸೇವಿಸದ ದೇಹಗಳನ್ನಾಗಿ ಮತ್ತು ಶಾಶ್ವತವಾಗಿ ವಾಸಿಸುವವರನ್ನಾಗಿ ಮಾಡಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ صَدَقْنَٰهُمُ ٱلْوَعْدَ فَأَنجَيْنَٰهُمْ وَمَن نَّشَآءُ وَأَهْلَكْنَا ٱلْمُسْرِفِينَ

Kannada Translation - Hamza Buturನಂತರ ನಾವು ಅವರಿಗೆ ನೀಡಿದ ಎಲ್ಲಾ ವಾಗ್ದಾನಗಳನ್ನು ಸತ್ಯವಾಗಿ ನೆರವೇರಿಸಿಕೊಟ್ಟೆವು. ಅವರನ್ನು ಮತ್ತು ನಾವು ರಕ್ಷಿಸಬೇಕೆಂದು ಇಚ್ಛಿಸಿದವರನ್ನು ರಕ್ಷಿಸಿದೆವು. ಎಲ್ಲೆ ಮೀರಿದವರನ್ನು ನಾವು ನಾಶ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَقَدْ أَنزَلْنَآ إِلَيْكُمْ كِتَٰبًا فِيهِ ذِكْرُكُمْ أَفَلَا تَعْقِلُونَ

Kannada Translation - Hamza Buturನಿಶ್ಚಯವಾಗಿಯೂ ನಾವು ನಿಮಗೆ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉಪದೇಶವಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَمْ قَصَمْنَا مِن قَرْيَةٍ كَانَتْ ظَالِمَةً وَأَنشَأْنَا بَعْدَهَا قَوْمًا ءَاخَرِينَ

Kannada Translation - Hamza Buturಅಕ್ರಮವೆಸಗುತ್ತಿದ್ದ ಎಷ್ಟೋ ಊರುಗಳನ್ನು ನಾವು ನಾಶ ಮಾಡಿದ್ದೇವೆ. ಅದರ ನಂತರ ನಾವು ಬೇರೊಂದು ಜನತೆಯನ್ನು ಸೃಷ್ಟಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَلَمَّآ أَحَسُّوا۟ بَأْسَنَآ إِذَا هُم مِّنْهَا يَرْكُضُونَ

Kannada Translation - Hamza Buturಅವರಿಗೆ ನಮ್ಮ ಶಿಕ್ಷೆಯ ಅನುಭವವಾದಾಗ ಅಗೋ! ಅವರು ಅದರಿಂದ ಓಡಿ ಪಾರಾಗಲು ಯತ್ನಿಸುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا تَرْكُضُوا۟ وَٱرْجِعُوٓا۟ إِلَىٰ مَآ أُتْرِفْتُمْ فِيهِ وَمَسَٰكِنِكُمْ لَعَلَّكُمْ تُسْـَٔلُونَ

Kannada Translation - Hamza Buturಓಡಬೇಡಿ! ನಾವು ನಿಮಗೆ ಒದಗಿಸಿದ ಆಡಂಬರಗಳ ಕಡೆಗೆ ಮತ್ತು ನಿಮ್ಮ ವಸತಿಗಳ ಕಡೆಗೆ ಬನ್ನಿರಿ. ನಿಮ್ಮೊಂದಿಗೆ ಪ್ರಶ್ನಿಸುವುದಕ್ಕಾಗಿ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ يَٰوَيْلَنَآ إِنَّا كُنَّا ظَٰلِمِينَ

Kannada Translation - Hamza Buturಅವರು ಹೇಳಿದರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳೇ ಆಗಿದ್ದೆವು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَا زَالَت تِّلْكَ دَعْوَىٰهُمْ حَتَّىٰ جَعَلْنَٰهُمْ حَصِيدًا خَٰمِدِينَ

Kannada Translation - Hamza Buturಅವರು ಹೀಗೆ ರೋದಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ನಾವು ಅವರನ್ನು ಬುಡದಿಂದ ಕತ್ತರಿಸಲಾದ ತೆನೆಗಳಂತೆ ಮತ್ತು ಆರಿಹೋದ ಬೆಂಕಿಯಂತೆ ಮಾಡುವ ತನಕ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا خَلَقْنَا ٱلسَّمَآءَ وَٱلْأَرْضَ وَمَا بَيْنَهُمَا لَٰعِبِينَ

Kannada Translation - Hamza Buturನಾವು ಭೂಮ್ಯಾಕಾಶಗಳನ್ನು ಅಥವಾ ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَوْ أَرَدْنَآ أَن نَّتَّخِذَ لَهْوًا لَّٱتَّخَذْنَٰهُ مِن لَّدُنَّآ إِن كُنَّا فَٰعِلِينَ

Kannada Translation - Hamza Buturಮನರಂಜನೆಯು ನಮ್ಮ ಉದ್ದೇಶವಾಗಿದ್ದರೆ, ನಾವು ಅದನ್ನು ನಮ್ಮ ಬಳಿಯಲ್ಲೇ ಮಾಡುತ್ತಿದ್ದೆವು. ನಾವು ಹಾಗೆ ಮಾಡುವವರಾಗಿದ್ದರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ نَقْذِفُ بِٱلْحَقِّ عَلَى ٱلْبَٰطِلِ فَيَدْمَغُهُۥ فَإِذَا هُوَ زَاهِقٌ وَلَكُمُ ٱلْوَيْلُ مِمَّا تَصِفُونَ

Kannada Translation - Hamza Buturಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅಸತ್ಯವನ್ನು ಒಡೆದು ಹಾಕುತ್ತದೆ. ಆಗ ಅದು (ಅಸತ್ಯ) ತಕ್ಷಣ ನಾಶವಾಗುತ್ತದೆ. ನೀವು (ಅಲ್ಲಾಹನ ಬಗ್ಗೆ) ಆರೋಪಿಸುವ ಮಾತುಗಳಿಂದಾಗಿ ನಿಮಗೆ ವಿನಾಶವು ಕಾದಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَهُۥ مَن فِى ٱلسَّمَٰوَٰتِ وَٱلْأَرْضِ وَمَنْ عِندَهُۥ لَا يَسْتَكْبِرُونَ عَنْ عِبَادَتِهِۦ وَلَا يَسْتَحْسِرُونَ

Kannada Translation - Hamza Buturಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನಿಗೆ ಸೇರಿದವರು. ಅವನ ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸಲು ಅಹಂಕಾರಪಡುವುದಿಲ್ಲ. ಅವರು ದಣಿಯುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يُسَبِّحُونَ ٱلَّيْلَ وَٱلنَّهَارَ لَا يَفْتُرُونَ

Kannada Translation - Hamza Buturಅವರು ರಾತ್ರಿ-ಹಗಲು ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಅವರಿಗೆ ಸುಸ್ತಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمِ ٱتَّخَذُوٓا۟ ءَالِهَةً مِّنَ ٱلْأَرْضِ هُمْ يُنشِرُونَ

Kannada Translation - Hamza Buturಅವರು ಭೂಮಿಯಲ್ಲಿ ಯಾರನ್ನು ದೇವರಾಗಿ ಸ್ವೀಕರಿಸಿದ್ದಾರೋ ಅವರು (ಸತ್ತವರಿಗೆ) ಜೀವ ನೀಡುತ್ತಾರೆಯೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَوْ كَانَ فِيهِمَآ ءَالِهَةٌ إِلَّا ٱللَّهُ لَفَسَدَتَا فَسُبْحَٰنَ ٱللَّهِ رَبِّ ٱلْعَرْشِ عَمَّا يَصِفُونَ

Kannada Translation - Hamza Buturಭೂಮ್ಯಾಕಾಶಗಳಲ್ಲಿ ಅಲ್ಲಾಹನ ಹೊರತು ಬೇರೆ ದೇವರುಗಳು ಇರುತ್ತಿದ್ದರೆ ಅವು ನಾಶವಾಗಿ ಹೋಗುತ್ತಿದ್ದವು.[1] ಅವರು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲದ್ದರಿಂದಲೂ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يُسْـَٔلُ عَمَّا يَفْعَلُ وَهُمْ يُسْـَٔلُونَ

Kannada Translation - Hamza Buturಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಅವನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆದರೆ ಅವರು (ಮನುಷ್ಯರು) ಉತ್ತರದಾಯಿಗಳಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمِ ٱتَّخَذُوا۟ مِن دُونِهِۦٓ ءَالِهَةً قُلْ هَاتُوا۟ بُرْهَٰنَكُمْ هَٰذَا ذِكْرُ مَن مَّعِىَ وَذِكْرُ مَن قَبْلِى بَلْ أَكْثَرُهُمْ لَا يَعْلَمُونَ ٱلْحَقَّ فَهُم مُّعْرِضُونَ

Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆಯೇ? ಹೇಳಿರಿ: “ಅದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ತನ್ನಿರಿ.” ಇದು (ಕುರ್‌ಆನ್) ನನ್ನ ಜೊತೆಯಲ್ಲಿರುವವರಿಗೆ ಮತ್ತು ನನಗಿಂತ ಮೊದಲಿನವರಿಗೆ ಇರುವ ಉಪದೇಶವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರಿಗೂ ಸತ್ಯವೇನೆಂದು ತಿಳಿದಿಲ್ಲ. ಆದ್ದರಿಂದ ಅವರು ವಿಮುಖರಾಗುತ್ತಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَرْسَلْنَا مِن قَبْلِكَ مِن رَّسُولٍ إِلَّا نُوحِىٓ إِلَيْهِ أَنَّهُۥ لَآ إِلَٰهَ إِلَّآ أَنَا۠ فَٱعْبُدُونِ

Kannada Translation - Hamza Buturನಿಮಗಿಂತ ಮೊದಲು ನಾವು ಯಾವೆಲ್ಲಾ ಸಂದೇಶವಾಹಕರುಗಳನ್ನು ಕಳುಹಿಸಿದ್ದೆವೋ ಅವರೆಲ್ಲರಿಗೂ, “ನನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ” ಎಂಬ ದೇವವಾಣಿಯನ್ನೇ ನೀಡಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَقَالُوا۟ ٱتَّخَذَ ٱلرَّحْمَٰنُ وَلَدًا سُبْحَٰنَهُۥ بَلْ عِبَادٌ مُّكْرَمُونَ

Kannada Translation - Hamza Buturಅವರು ಹೇಳಿದರು: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಮಕ್ಕಳಿದ್ದಾರೆ.” ಅವನು ಪರಿಶುದ್ಧನು. ಅಲ್ಲ, ವಾಸ್ತವವಾಗಿ ಅವರು ಅವನ ಸನ್ಮಾನ್ಯ ದಾಸರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يَسْبِقُونَهُۥ بِٱلْقَوْلِ وَهُم بِأَمْرِهِۦ يَعْمَلُونَ

Kannada Translation - Hamza Buturಅಲ್ಲಾಹು ಮಾತನಾಡುವುದಕ್ಕೆ ಮೊದಲೇ ಅವರು ಮಾತನಾಡುವುದಿಲ್ಲ. ಅವರು ಅವನ ಆಜ್ಞೆಯಂತೆ ಕೆಲಸ ಮಾಡುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ٱرْتَضَىٰ وَهُم مِّنْ خَشْيَتِهِۦ مُشْفِقُونَ

Kannada Translation - Hamza Buturಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವ ಎಲ್ಲವನ್ನೂ ಅವನು ತಿಳಿಯುತ್ತಾನೆ. ಅವನ ಸಂಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಅವರು ಶಿಫಾರಸು ಮಾಡುತ್ತಾರೆ. ಅವರು ಅವನ ಭಯದಿಂದ ತರಗುಟ್ಟುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَن يَقُلْ مِنْهُمْ إِنِّىٓ إِلَٰهٌ مِّن دُونِهِۦ فَذَٰلِكَ نَجْزِيهِ جَهَنَّمَ كَذَٰلِكَ نَجْزِى ٱلظَّٰلِمِينَ

Kannada Translation - Hamza Butur“ಅಲ್ಲಾಹನ ಹೊರತು ನಾನೇ ದೇವನು” ಎಂದು ಅವರಲ್ಲಿ ಯಾರು ಹೇಳುತ್ತಾನೋ, ಅವನಿಗೆ ನಾವು ಪ್ರತಿಫಲವಾಗಿ ನರಕಾಗ್ನಿಯನ್ನು ನೀಡುವೆವು. ಅಕ್ರಮಿಗಳಿಗೆ ನಾವು ಹೀಗೆಯೇ ಪ್ರತಿಫಲ ನೀಡುತ್ತೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَوَلَمْ يَرَ ٱلَّذِينَ كَفَرُوٓا۟ أَنَّ ٱلسَّمَٰوَٰتِ وَٱلْأَرْضَ كَانَتَا رَتْقًا فَفَتَقْنَٰهُمَا وَجَعَلْنَا مِنَ ٱلْمَآءِ كُلَّ شَىْءٍ حَىٍّ أَفَلَا يُؤْمِنُونَ

Kannada Translation - Hamza Buturಭೂಮ್ಯಾಕಾಶಗಳು ಪರಸ್ಪರ ಅಂಟಿಕೊಂಡಿದ್ದವು ಮತ್ತು ನಾವು ಅವುಗಳನ್ನು ಬೇರ್ಪಡಿಸಿದೆವು ಎಂದು ಸತ್ಯನಿಷೇಧಿಗಳು ನೋಡುವುದಿಲ್ಲವೇ? ಜೀವವಿರುವ ಎಲ್ಲ ವಸ್ತುಗಳನ್ನೂ ನಾವು ನೀರಿನಿಂದ ಉಂಟು ಮಾಡಿದೆವು. ಆದರೂ ಅವರು ವಿಶ್ವಾಸವಿಡುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا فِى ٱلْأَرْضِ رَوَٰسِىَ أَن تَمِيدَ بِهِمْ وَجَعَلْنَا فِيهَا فِجَاجًا سُبُلًا لَّعَلَّهُمْ يَهْتَدُونَ

Kannada Translation - Hamza Buturಭೂಮಿಯು ಅವರೊಂದಿಗೆ ಅಲುಗಾಡದಿರಲು ನಾವು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ವಿಶಾಲವಾದ ಮಾರ್ಗಗಳನ್ನು ಮಾಡಿದೆವು. ಅವರು ದಾರಿ ಕಾಣುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا ٱلسَّمَآءَ سَقْفًا مَّحْفُوظًا وَهُمْ عَنْ ءَايَٰتِهَا مُعْرِضُونَ

Kannada Translation - Hamza Buturನಾವು ಆಕಾಶವನ್ನು ಭದ್ರ ಮೇಲ್ಛಾವಣಿಯನ್ನಾಗಿ ಮಾಡಿದೆವು. ಆದರೆ ಅವರು ಆಕಾಶದ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهُوَ ٱلَّذِى خَلَقَ ٱلَّيْلَ وَٱلنَّهَارَ وَٱلشَّمْسَ وَٱلْقَمَرَ كُلٌّ فِى فَلَكٍ يَسْبَحُونَ

Kannada Translation - Hamza Buturಅವನೇ ರಾತ್ರಿ-ಹಗಲು ಮತ್ತು ಸೂರ್ಯ-ಚಂದ್ರರನ್ನು ಸೃಷ್ಟಿಸಿದವನು. ಎಲ್ಲವೂ ಒಂದು ನಿಗದಿತ ಕಕ್ಷೆಯಲ್ಲಿ ಈಜುತ್ತಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا جَعَلْنَا لِبَشَرٍ مِّن قَبْلِكَ ٱلْخُلْدَ أَفَإِي۟ن مِّتَّ فَهُمُ ٱلْخَٰلِدُونَ

Kannada Translation - Hamza Butur(ಪ್ರವಾದಿಯವರೇ) ನಿಮಗಿಂತ ಮೊದಲು ನಾವು ಯಾವುದೇ ವ್ಯಕ್ತಿಗೂ ಶಾಶ್ವತ ಬದುಕನ್ನು ನೀಡಿಲ್ಲ. ಹೀಗಿರುವಾಗ, ನೀವು ನಿಧನರಾದರೆ ಅವರು ಶಾಶ್ವತವಾಗಿ ಉಳಿಯುವರೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كُلُّ نَفْسٍ ذَآئِقَةُ ٱلْمَوْتِ وَنَبْلُوكُم بِٱلشَّرِّ وَٱلْخَيْرِ فِتْنَةً وَإِلَيْنَا تُرْجَعُونَ

Kannada Translation - Hamza Buturಪ್ರತಿಯೊಂದು ಜೀವಿಯೂ ಮರಣದ ರುಚಿಯನ್ನು ನೋಡಲಿದೆ. ನಾವು ಪರೀಕ್ಷೆಯ ರೂಪದಲ್ಲಿ ನಿಮ್ಮಲ್ಲರನ್ನೂ ಒಳಿತು ಮತ್ತು ಕೆಡುಕುಗಳಲ್ಲಿ ಪರೀಕ್ಷಿಸುತ್ತೇವೆ. ನೀವೆಲ್ಲರೂ ನಮ್ಮ ಬಳಿಗೇ ಮರಳಿ ಬರುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا رَءَاكَ ٱلَّذِينَ كَفَرُوٓا۟ إِن يَتَّخِذُونَكَ إِلَّا هُزُوًا أَهَٰذَا ٱلَّذِى يَذْكُرُ ءَالِهَتَكُمْ وَهُم بِذِكْرِ ٱلرَّحْمَٰنِ هُمْ كَٰفِرُونَ

Kannada Translation - Hamza Buturಸತ್ಯನಿಷೇಧಿಗಳು ನಿಮ್ಮನ್ನು ನೋಡಿದಾಗಲೆಲ್ಲಾ ನಿಮ್ಮನ್ನು ತಮಾಷೆ ಮಾಡುತ್ತಾ, “ನಿಮ್ಮ ದೇವರುಗಳ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವವನು ಇವನೇ ಏನು?” ಎಂದು (ಪರಸ್ಪರ) ಕೇಳುತ್ತಾರೆ. ಅವರಂತೂ ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿಷೇಧಿಸಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

خُلِقَ ٱلْإِنسَٰنُ مِنْ عَجَلٍ سَأُو۟رِيكُمْ ءَايَٰتِى فَلَا تَسْتَعْجِلُونِ

Kannada Translation - Hamza Buturಮಾನವನನ್ನು ಆತುರ ಜೀವಿಯಾಗಿ ಸೃಷ್ಟಿಸಲಾಗಿದೆ. ನಾನು ಸದ್ಯವೇ ನನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡಲಿದ್ದೇನೆ. ಆದ್ದರಿಂದ ನೀವು ನನ್ನೊಂದಿಗೆ ತ್ವರೆ ಮಾಡಬೇಡಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَقُولُونَ مَتَىٰ هَٰذَا ٱلْوَعْدُ إِن كُنتُمْ صَٰدِقِينَ

Kannada Translation - Hamza Buturಅವರು ಕೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ವಾಗ್ದಾನವು ನಿಜವಾಗುವುದು ಯಾವಾಗ ಎಂದು ಹೇಳಿರಿ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَوْ يَعْلَمُ ٱلَّذِينَ كَفَرُوا۟ حِينَ لَا يَكُفُّونَ عَن وُجُوهِهِمُ ٱلنَّارَ وَلَا عَن ظُهُورِهِمْ وَلَا هُمْ يُنصَرُونَ

Kannada Translation - Hamza Buturತಮ್ಮ ಮುಖಗಳಿಂದ ಮತ್ತು ಬೆನ್ನುಗಳಿಂದ ಬೆಂಕಿಯನ್ನು ತಡೆಯಲು ಸಾಧ್ಯವಾಗದ ಮತ್ತು ಯಾವುದೇ ಸಹಾಯವು ದೊರಕದ ಆ ಒಂದು ಸಮಯದ ಬಗ್ಗೆ ಸತ್ಯನಿಷೇಧಿಗಳು ತಿಳಿದಿದ್ದರೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ تَأْتِيهِم بَغْتَةً فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنظَرُونَ

Kannada Translation - Hamza Buturಅಲ್ಲ; ಅಂತ್ಯ ಸಮಯವು ಅವರ ಬಳಿಗೆ ಹಠಾತ್ತನೆ ಬರಲಿದೆ. ಅದು ಅವರನ್ನು ತಬ್ಬಿಬ್ಬುಗೊಳಿಸಲಿದೆ. ಅದನ್ನು ತಡೆಗಟ್ಟಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدِ ٱسْتُهْزِئَ بِرُسُلٍ مِّن قَبْلِكَ فَحَاقَ بِٱلَّذِينَ سَخِرُوا۟ مِنْهُم مَّا كَانُوا۟ بِهِۦ يَسْتَهْزِءُونَ

Kannada Translation - Hamza Buturನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಅವರನ್ನು ಅಪಹಾಸ್ಯ ಮಾಡಿದವರನ್ನು ನಂತರ ಅವರು ಅಪಹಾಸ್ಯ ಮಾಡುತ್ತಿದ್ದ ವಿಷಯವೇ ಆವರಿಸಿಬಿಟ್ಟಿತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ مَن يَكْلَؤُكُم بِٱلَّيْلِ وَٱلنَّهَارِ مِنَ ٱلرَّحْمَٰنِ بَلْ هُمْ عَن ذِكْرِ رَبِّهِم مُّعْرِضُونَ

Kannada Translation - Hamza Buturಕೇಳಿರಿ: “ನಿಮ್ಮನ್ನು ಪರಮ ದಯಾಮಯನಿಂದ (ಅಲ್ಲಾಹನಿಂದ) ಹಗಲು-ರಾತ್ರಿ ರಕ್ಷಣೆ ಮಾಡಲು ಯಾರಿದ್ದಾರೆ?” ಅಲ್ಲ; ವಾಸ್ತವವಾಗಿ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖರಾಗಿದ್ದಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَمْ لَهُمْ ءَالِهَةٌ تَمْنَعُهُم مِّن دُونِنَا لَا يَسْتَطِيعُونَ نَصْرَ أَنفُسِهِمْ وَلَا هُم مِّنَّا يُصْحَبُونَ

Kannada Translation - Hamza Buturಅವರ ರಕ್ಷಣೆ ಮಾಡಲು ಅವರಿಗೆ ನಮ್ಮ ಹೊರತು ಬೇರೆ ದೇವರುಗಳು ಇದ್ದಾರೆಯೇ? ಆ ದೇವರುಗಳಿಗೆ ಸ್ವಯಂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ನಮ್ಮ ಕಡೆಯಿಂದಲೂ ರಕ್ಷಣೆ ಸಿಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

بَلْ مَتَّعْنَا هَٰٓؤُلَآءِ وَءَابَآءَهُمْ حَتَّىٰ طَالَ عَلَيْهِمُ ٱلْعُمُرُ أَفَلَا يَرَوْنَ أَنَّا نَأْتِى ٱلْأَرْضَ نَنقُصُهَا مِنْ أَطْرَافِهَآ أَفَهُمُ ٱلْغَٰلِبُونَ

Kannada Translation - Hamza Buturಅಲ್ಲ; ನಾವು ಇವರಿಗೆ ಮತ್ತು ಇವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆವು. ಹೀಗೆ ಅವರು ದೀರ್ಘಕಾಲ ಬಾಳಿ ಬದುಕಿದರು. ನಾವು ಭೂಮಿಯನ್ನು ಅದರ ಅಂಚುಗಳಿಂದ ಕುಗ್ಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ?[1] ಹೀಗಿದ್ದೂ ಅವರೇ ವಿಜಯಿಗಳಾಗುವರೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ إِنَّمَآ أُنذِرُكُم بِٱلْوَحْىِ وَلَا يَسْمَعُ ٱلصُّمُّ ٱلدُّعَآءَ إِذَا مَا يُنذَرُونَ

Kannada Translation - Hamza Butur(ಪ್ರವಾದಿಯವರೇ) ಹೇಳಿರಿ: “ನಾನು ನಿಮಗೆ ದೇವವಾಣಿಯ ಆಧಾರದಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ.” ಅವರಿಗೆ ಎಚ್ಚರಿಕೆ ನೀಡಲಾಗುವಾಗ ಕಿವಿ ಕೇಳದವರು ಆ ಕರೆಯನ್ನು ಕೇಳಲಾರರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَئِن مَّسَّتْهُمْ نَفْحَةٌ مِّنْ عَذَابِ رَبِّكَ لَيَقُولُنَّ يَٰوَيْلَنَآ إِنَّا كُنَّا ظَٰلِمِينَ

Kannada Translation - Hamza Buturಅವರಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಒಂದು ಸುಳಿವು ತಾಗಿದರೆ ಸಾಕು, ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَضَعُ ٱلْمَوَٰزِينَ ٱلْقِسْطَ لِيَوْمِ ٱلْقِيَٰمَةِ فَلَا تُظْلَمُ نَفْسٌ شَيْـًٔا وَإِن كَانَ مِثْقَالَ حَبَّةٍ مِّنْ خَرْدَلٍ أَتَيْنَا بِهَا وَكَفَىٰ بِنَا حَٰسِبِينَ

Kannada Translation - Hamza Buturಪುನರುತ್ಥಾನ ದಿನದಂದು ನಾವು ನ್ಯಾಯಯುತ ತಕ್ಕಡಿಗಳನ್ನು ಸ್ಥಾಪಿಸುವೆವು. ಅಂದು ಯಾವುದೇ ವ್ಯಕ್ತಿಗೂ ಅನ್ಯಾಯವಾಗುವುದಿಲ್ಲ. ಅವರು ಮಾಡಿದ ಕರ್ಮವು ಒಂದು ಸಾಸಿವೆ ಕಾಳಿನ ತೂಕದಷ್ಟಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಯಥೇಷ್ಟ ಸಾಕು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ ءَاتَيْنَا مُوسَىٰ وَهَٰرُونَ ٱلْفُرْقَانَ وَضِيَآءً وَذِكْرًا لِّلْمُتَّقِينَ

Kannada Translation - Hamza Buturನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯ ವಿವೇಚನೆಯನ್ನು, ಪ್ರಕಾಶವನ್ನು ಮತ್ತು ದೇವಭಯವುಳ್ಳವರಿಗೆ ಉಪದೇಶವನ್ನು ನೀಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ يَخْشَوْنَ رَبَّهُم بِٱلْغَيْبِ وَهُم مِّنَ ٱلسَّاعَةِ مُشْفِقُونَ

Kannada Translation - Hamza Buturಅವರು (ದೇವಭಯವುಳ್ಳವರು) ಯಾರೆಂದರೆ, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅದೃಶ್ಯರೂಪದಲ್ಲಿ ಭಯಪಡುವವರು ಮತ್ತು ಅಂತ್ಯಸಮಯದ ವಿಷಯದಲ್ಲಿ ಅತೀವ ಆತಂಕದಲ್ಲಿರುವವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَهَٰذَا ذِكْرٌ مُّبَارَكٌ أَنزَلْنَٰهُ أَفَأَنتُمْ لَهُۥ مُنكِرُونَ

Kannada Translation - Hamza Buturಇದು (ಕುರ್‌ಆನ್) ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಉಪದೇಶವಾಗಿದೆ. ಆದರೂ ನೀವು ಅದನ್ನು ನಿರಾಕರಿಸುತ್ತೀರಾ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ ءَاتَيْنَآ إِبْرَٰهِيمَ رُشْدَهُۥ مِن قَبْلُ وَكُنَّا بِهِۦ عَٰلِمِينَ

Kannada Translation - Hamza Buturಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ವಿವೇಚನೆಯನ್ನು ನೀಡಿದ್ದೆವು. ನಾವು ಅವರ ಸ್ಥಿತಿಗತಿಗಳ ಬಗ್ಗೆ ತಿಳಿದವರಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِذْ قَالَ لِأَبِيهِ وَقَوْمِهِۦ مَا هَٰذِهِ ٱلتَّمَاثِيلُ ٱلَّتِىٓ أَنتُمْ لَهَا عَٰكِفُونَ

Kannada Translation - Hamza Buturಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದ ಸಂದರ್ಭ: “ನೀವು ಧ್ಯಾನ ನಿರತರಾಗಿ ಕುಳಿತುಕೊಳ್ಳುವ ಈ ವಿಗ್ರಹಗಳು ಏನು?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ وَجَدْنَآ ءَابَآءَنَا لَهَا عَٰبِدِينَ

Kannada Translation - Hamza Buturಅವರು ಉತ್ತರಿಸಿದರು: “ನಮ್ಮ ಪೂರ್ವಜರು ಇವುಗಳನ್ನು ಆರಾಧಿಸುವುದನ್ನು ನಾವು ನೋಡಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ لَقَدْ كُنتُمْ أَنتُمْ وَءَابَآؤُكُمْ فِى ضَلَٰلٍ مُّبِينٍ

Kannada Translation - Hamza Buturಇಬ್ರಾಹೀಮ್ ಹೇಳಿದರು: “ನಿಜಕ್ಕೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوٓا۟ أَجِئْتَنَا بِٱلْحَقِّ أَمْ أَنتَ مِنَ ٱللَّٰعِبِينَ

Kannada Translation - Hamza Buturಅವರು ಕೇಳಿದರು: “ನೀನು ನಮ್ಮ ಬಳಿಗೆ ಸತ್ಯವನ್ನು ತಂದಿದ್ದೀಯಾ? ಅಥವಾ ಕೇವಲ ತಮಾಷೆಗಾಗಿ ಹೇಳುತ್ತಿದ್ದೀಯಾ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ بَل رَّبُّكُمْ رَبُّ ٱلسَّمَٰوَٰتِ وَٱلْأَرْضِ ٱلَّذِى فَطَرَهُنَّ وَأَنَا۠ عَلَىٰ ذَٰلِكُم مِّنَ ٱلشَّٰهِدِينَ

Kannada Translation - Hamza Buturಇಬ್ರಾಹೀಮ್ ಹೇಳಿದರು: “ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅವುಗಳ ಪರಿಪಾಲಕನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನಾನು ಅದಕ್ಕೆ ಸಾಕ್ಷಿಯಾಗಿರುವವರಲ್ಲಿ ಒಬ್ಬನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَٱللَّهِ لَأَكِيدَنَّ أَصْنَٰمَكُم بَعْدَ أَن تُوَلُّوا۟ مُدْبِرِينَ

Kannada Translation - Hamza Buturಅಲ್ಲಾಹನಾಣೆ! ನೀವು ಇಲ್ಲಿಂದ ತಿರುಗಿ ಹೊರಟುಹೋದ ಬಳಿಕ ನಾನು ನಿಮ್ಮ ವಿಗ್ರಹಗಳ ವಿರುದ್ಧ ಒಂದು ಸಂಚು ರೂಪಿಸುತ್ತೇನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَجَعَلَهُمْ جُذَٰذًا إِلَّا كَبِيرًا لَّهُمْ لَعَلَّهُمْ إِلَيْهِ يَرْجِعُونَ

Kannada Translation - Hamza Buturನಂತರ ಇಬ್ರಾಹೀಮ್ ಆ ಎಲ್ಲಾ ವಿಗ್ರಹಗಳನ್ನು ಧ್ವಂಸ ಮಾಡಿದರು. ಆದರೆ ಅವುಗಳಲ್ಲಿ ದೊಡ್ಡ ವಿಗ್ರಹವನ್ನು ಹಾಗೆಯೇ ಬಿಟ್ಟರು. ಜನರು ಅದರ ಬಳಿಗೆ ಹಿಂದಿರುಗಿ ಬರುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ مَن فَعَلَ هَٰذَا بِـَٔالِهَتِنَآ إِنَّهُۥ لَمِنَ ٱلظَّٰلِمِينَ

Kannada Translation - Hamza Buturಜನರು ಕೇಳಿದರು: “ನಮ್ಮ ದೇವರುಗಳೊಡನೆ ಇಂತಹ ಕೃತ್ಯವನ್ನು ಮಾಡಿದ್ದು ಯಾರು? ನಿಶ್ಚಯವಾಗಿಯೂ ಅವನು ಅಕ್ರಮಿಯಾಗಿದ್ದಾನೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ سَمِعْنَا فَتًى يَذْكُرُهُمْ يُقَالُ لَهُۥٓ إِبْرَٰهِيمُ

Kannada Translation - Hamza Buturಕೆಲವರು ಹೇಳಿದರು: “ಇಬ್ರಾಹೀಮ್ ಎಂಬ ಹೆಸರಿನ ಒಬ್ಬ ಯುವಕ ಈ ದೇವರುಗಳ ಬಗ್ಗೆ ಮಾತನಾಡುವುದನ್ನು ನಾವು ಕೇಳಿದ್ದೇವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ فَأْتُوا۟ بِهِۦ عَلَىٰٓ أَعْيُنِ ٱلنَّاسِ لَعَلَّهُمْ يَشْهَدُونَ

Kannada Translation - Hamza Buturಜನರು ಹೇಳಿದರು: “ಅವನನ್ನು ಜನರ ಕಣ್ಣ ಮುಂದೆ ತಂದು ನಿಲ್ಲಿಸಿ. ಎಲ್ಲರೂ ಅವನನ್ನು ನೋಡಲಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوٓا۟ ءَأَنتَ فَعَلْتَ هَٰذَا بِـَٔالِهَتِنَا يَٰٓإِبْرَٰهِيمُ

Kannada Translation - Hamza Buturಅವರು ಕೇಳಿದರು: “ಓ ಇಬ್ರಾಹೀಮ್! ನಮ್ಮ ದೇವರುಗಳೊಂದಿಗೆ ಈ ಕೃತ್ಯವನ್ನು ಮಾಡಿದ್ದು ನೀನೇ ಏನು?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ بَلْ فَعَلَهُۥ كَبِيرُهُمْ هَٰذَا فَسْـَٔلُوهُمْ إِن كَانُوا۟ يَنطِقُونَ

Kannada Translation - Hamza Buturಇಬ್ರಾಹೀಮ್ ಉತ್ತರಿಸಿದರು: “ಅಲ್ಲ; ಈ ದೊಡ್ಡ ವಿಗ್ರಹವೇ ಇದನ್ನು ಮಾಡಿದ್ದು. ನೀವು ಆ (ಧ್ವಂಸವಾದ) ವಿಗ್ರಹಗಳೊಡನೆ ಕೇಳಿ ನೋಡಿ. ಅವುಗಳಿಗೆ ಮಾತನಾಡಲು ಸಾಧ್ಯವಿದ್ದರೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَرَجَعُوٓا۟ إِلَىٰٓ أَنفُسِهِمْ فَقَالُوٓا۟ إِنَّكُمْ أَنتُمُ ٱلظَّٰلِمُونَ

Kannada Translation - Hamza Buturಅವರು (ಸತ್ಯವನ್ನು ಅರಿತು) ಪರಸ್ಪರರ ಕಡೆಗೆ ತಿರುಗಿ ಹೇಳಿದರು: “ನಿಜವಾಗಿಯೂ ನೀವೇ ಅಕ್ರಮಿಗಳು.”[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ نُكِسُوا۟ عَلَىٰ رُءُوسِهِمْ لَقَدْ عَلِمْتَ مَا هَٰٓؤُلَآءِ يَنطِقُونَ

Kannada Translation - Hamza Buturನಂತರ ಅವರು ಉಲ್ಟಾ ಹೊಡೆದು ಹೇಳಿದರು: “ಈ ವಿಗ್ರಹಗಳು ಮಾತನಾಡುವುದಿಲ್ಲವೆಂದು ನಿನಗೆ ಗೊತ್ತಿಲ್ಲವೇ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالَ أَفَتَعْبُدُونَ مِن دُونِ ٱللَّهِ مَا لَا يَنفَعُكُمْ شَيْـًٔا وَلَا يَضُرُّكُمْ

Kannada Translation - Hamza Buturಇಬ್ರಾಹೀಮ್ ಕೇಳಿದರು: “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದ ಈ ವಸ್ತುಗಳನ್ನು ಆರಾಧಿಸುತ್ತಿದ್ದೀರಾ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أُفٍّ لَّكُمْ وَلِمَا تَعْبُدُونَ مِن دُونِ ٱللَّهِ أَفَلَا تَعْقِلُونَ

Kannada Translation - Hamza Buturನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ಈ ದೇವರುಗಳಿಗೆ ನಾಚಿಕೆಯಾಗಬೇಕು! ನೀವು ಆಲೋಚಿಸುವುದಿಲ್ಲವೇ?”[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَالُوا۟ حَرِّقُوهُ وَٱنصُرُوٓا۟ ءَالِهَتَكُمْ إِن كُنتُمْ فَٰعِلِينَ

Kannada Translation - Hamza Buturಜನರು ಹೇಳಿದರು: “ಅವನನ್ನು ಸುಟ್ಟುಬಿಡಿ; ಮತ್ತು ನಿಮ್ಮ ದೇವರುಗಳಿಗೆ ಸಹಾಯ ಮಾಡಿ. ನೀವೇನಾದರೂ ಮಾಡುವುದಿದ್ದರೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْنَا يَٰنَارُ كُونِى بَرْدًا وَسَلَٰمًا عَلَىٰٓ إِبْرَٰهِيمَ

Kannada Translation - Hamza Buturನಾವು ಹೇಳಿದೆವು: “ಓ ಬೆಂಕಿಯೇ! ನೀನು ಇಬ್ರಾಹೀಮರಿಗೆ ತಂಪು ಮತ್ತು ಸುರಕ್ಷೆಯಾಗಿ ಮಾರ್ಪಡು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَرَادُوا۟ بِهِۦ كَيْدًا فَجَعَلْنَٰهُمُ ٱلْأَخْسَرِينَ

Kannada Translation - Hamza Buturಅವರು ಇಬ್ರಾಹೀಮರ ಮೇಲೆ ತಂತ್ರ ಪ್ರಯೋಗಿಸಲು ಬಯಸಿದ್ದರು. ಆದರೆ ನಾವು ಅವರ (ತಂತ್ರವನ್ನು) ವಿಫಲಗೊಳಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَجَّيْنَٰهُ وَلُوطًا إِلَى ٱلْأَرْضِ ٱلَّتِى بَٰرَكْنَا فِيهَا لِلْعَٰلَمِينَ

Kannada Translation - Hamza Buturನಾವು ಅವರನ್ನು ಮತ್ತು ಲೂತರನ್ನು ಪಾರು ಮಾಡಿ ನಾವು ಸರ್ವಲೋಕದವರಿಗಾಗಿ ಸಮೃದ್ಧಗೊಳಿಸಿದ ಪ್ರದೇಶಕ್ಕೆ ಸಾಗಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَوَهَبْنَا لَهُۥٓ إِسْحَٰقَ وَيَعْقُوبَ نَافِلَةً وَكُلًّا جَعَلْنَا صَٰلِحِينَ

Kannada Translation - Hamza Buturನಾವು ಅವರಿಗೆ ಇಸ್‍ಹಾಕರನ್ನು ಮತ್ತು ಹೆಚ್ಚಿಗೆಯಾಗಿ ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ನೀತಿವಂತರನ್ನಾಗಿ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَٰهُمْ أَئِمَّةً يَهْدُونَ بِأَمْرِنَا وَأَوْحَيْنَآ إِلَيْهِمْ فِعْلَ ٱلْخَيْرَٰتِ وَإِقَامَ ٱلصَّلَوٰةِ وَإِيتَآءَ ٱلزَّكَوٰةِ وَكَانُوا۟ لَنَا عَٰبِدِينَ

Kannada Translation - Hamza Buturನಾವು ಅವರನ್ನು ನಮ್ಮ ಆಜ್ಞೆಯಂತೆ ಮಾರ್ಗದರ್ಶನ ಮಾಡುವ ಮುಖಂಡರನ್ನಾಗಿ ಮಾಡಿದೆವು. ನಾವು ಅವರಿಗೆ ಸತ್ಕರ್ಮಗಳನ್ನು ಮಾಡಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ದೇವವಾಣಿಯನ್ನು (ನಿರ್ದೇಶನವನ್ನು) ನೀಡಿದೆವು. ಅವರು ನಮ್ಮನ್ನು ಮಾತ್ರ ಆರಾಧಿಸುವ ದಾಸರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلُوطًا ءَاتَيْنَٰهُ حُكْمًا وَعِلْمًا وَنَجَّيْنَٰهُ مِنَ ٱلْقَرْيَةِ ٱلَّتِى كَانَت تَّعْمَلُ ٱلْخَبَٰٓئِثَ إِنَّهُمْ كَانُوا۟ قَوْمَ سَوْءٍ فَٰسِقِينَ

Kannada Translation - Hamza Buturನಾವು ಲೂತರಿಗೆ ತೀರ್ಪುಗಾರಿಕೆ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅಶ್ಲೀಲಕೃತ್ಯವನ್ನು ಮಾಡುತ್ತಿದ್ದ ಊರಿನಿಂದ ನಾವು ಅವರನ್ನು ಪಾರು ಮಾಡಿದೆವು. ನಿಶ್ಚಯವಾಗಿಯೂ ಆ ಊರಿನವರು ದುಷ್ಟ ಅವಿಧೇಯ ಜನರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَدْخَلْنَٰهُ فِى رَحْمَتِنَآ إِنَّهُۥ مِنَ ٱلصَّٰلِحِينَ

Kannada Translation - Hamza Buturನಾವು ಅವರನ್ನು (ಲೂತ್‍ರನ್ನು) ನಮ್ಮ ದಯೆಯಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنُوحًا إِذْ نَادَىٰ مِن قَبْلُ فَٱسْتَجَبْنَا لَهُۥ فَنَجَّيْنَٰهُ وَأَهْلَهُۥ مِنَ ٱلْكَرْبِ ٱلْعَظِيمِ

Kannada Translation - Hamza Buturನೂಹರನ್ನು ಕೂಡ ನೆನಪಿಸಿಕೊಳ್ಳಿ! ಇದಕ್ಕೆ ಮೊದಲು ಅವರು ನಮ್ಮನ್ನು ಕರೆದು ಪ್ರಾರ್ಥಿಸಿದ ಸಂದರ್ಭದಲ್ಲಿ ನಾವು ಅವರ ಕರೆಗೆ ಉತ್ತರಿಸಿದೆವು. ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಮಹಾ ದುರಂತದಿಂದ ಪಾರು ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَنَصَرْنَٰهُ مِنَ ٱلْقَوْمِ ٱلَّذِينَ كَذَّبُوا۟ بِـَٔايَٰتِنَآ إِنَّهُمْ كَانُوا۟ قَوْمَ سَوْءٍ فَأَغْرَقْنَٰهُمْ أَجْمَعِينَ

Kannada Translation - Hamza Buturನಮ್ಮ ವಚನಗಳನ್ನು ನಿಷೇಧಿಸಿದ ಜನರ ವಿರುದ್ಧ ನಾವು ಅವರಿಗೆ (ನೂಹರಿಗೆ) ಸಹಾಯ ಮಾಡಿದೆವು. ನಿಶ್ಚಯವಾಗಿಯೂ ಅವರು ದುಷ್ಟ ಜನರಾಗಿದ್ದರು. ಆದ್ದರಿಂದ ನಾವು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَدَاوُۥدَ وَسُلَيْمَٰنَ إِذْ يَحْكُمَانِ فِى ٱلْحَرْثِ إِذْ نَفَشَتْ فِيهِ غَنَمُ ٱلْقَوْمِ وَكُنَّا لِحُكْمِهِمْ شَٰهِدِينَ

Kannada Translation - Hamza Buturದಾವೂದ್ ಮತ್ತು ಸುಲೈಮಾನರನ್ನು ನೆನಪಿಸಿಕೊಳ್ಳಿ! ಅವರಿಬ್ಬರು ಒಂದು ಹೊಲದ ವಿಷಯದಲ್ಲಿ ತೀರ್ಪು ನೀಡುತ್ತಿದ್ದರು. ಆ ಹೊಲಕ್ಕೆ ಕೆಲವು ಜನರ ಕುರಿಗಳು ನುಸುಳಿದ್ದವು. ಅವರು ನೀಡುವ ತೀರ್ಪಿಗೆ ನಾವು ಸಾಕ್ಷಿಯಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَفَهَّمْنَٰهَا سُلَيْمَٰنَ وَكُلًّا ءَاتَيْنَا حُكْمًا وَعِلْمًا وَسَخَّرْنَا مَعَ دَاوُۥدَ ٱلْجِبَالَ يُسَبِّحْنَ وَٱلطَّيْرَ وَكُنَّا فَٰعِلِينَ

Kannada Translation - Hamza Buturನಾವು ಸುಲೈಮಾನರಿಗೆ ಈ ಪ್ರಕರಣವು ಸರಿಯಾಗಿ ಅರ್ಥವಾಗುವಂತೆ ಮಾಡಿದೆವು.[1] ಅವರಿಬ್ಬರಿಗೂ ನಾವು ತೀರ್ಪುಗಾರಿಕೆ ಮತ್ತು ಜ್ಞಾನವನ್ನು ನೀಡಿದ್ದೆವು. ದಾವೂದರೊಂದಿಗೆ ಸ್ತುತಿಕೀರ್ತನೆ ಮಾಡಲು ನಾವು ಪರ್ವತಗಳನ್ನು ಮತ್ತು ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದೆವು. ನಾವು (ಅದನ್ನೆಲ್ಲಾ) ಮಾಡುವವರಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَعَلَّمْنَٰهُ صَنْعَةَ لَبُوسٍ لَّكُمْ لِتُحْصِنَكُم مِّنۢ بَأْسِكُمْ فَهَلْ أَنتُمْ شَٰكِرُونَ

Kannada Translation - Hamza Buturಯುದ್ಧದಲ್ಲಿ (ವೈರಿಗಳ ಏಟುಗಳಿಂದ) ನಿಮಗೆ ರಕ್ಷಣೆ ಒದಗಿಸುವ ಅಂಗಿಗಳ ತಯಾರಿಕೆಯನ್ನು ನಾವು ದಾವೂದರಿಗೆ ಕಲಿಸಿಕೊಟ್ಟೆವು.[1] ಆದರೂ ನೀವು ಕೃತಜ್ಞರಾಗುವುದಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلِسُلَيْمَٰنَ ٱلرِّيحَ عَاصِفَةً تَجْرِى بِأَمْرِهِۦٓ إِلَى ٱلْأَرْضِ ٱلَّتِى بَٰرَكْنَا فِيهَا وَكُنَّا بِكُلِّ شَىْءٍ عَٰلِمِينَ

Kannada Translation - Hamza Buturನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ನಾವು ಸಮೃದ್ಧಗೊಳಿಸಿದ ಭೂಪ್ರದೇಶಕ್ಕೆ ಚಲಿಸುತ್ತಿತ್ತು.[1] ನಾವು ಎಲ್ಲಾ ವಿಷಯಗಳ ಬಗ್ಗೆಯೂ ಜ್ಞಾನವುಳ್ಳವರಾಗಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمِنَ ٱلشَّيَٰطِينِ مَن يَغُوصُونَ لَهُۥ وَيَعْمَلُونَ عَمَلًا دُونَ ذَٰلِكَ وَكُنَّا لَهُمْ حَٰفِظِينَ

Kannada Translation - Hamza Buturಶೈತಾನರಲ್ಲಿ ಕೆಲವರನ್ನು ಅವರಿಗೆ ಅಧೀನಗೊಳಿಸಿದೆವು. ಅವರು ಸುಲೈಮಾನರಿಗಾಗಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದಲ್ಲದೆ ಇನ್ನಿತರ ಅನೇಕ ಕೆಲಸಗಳನ್ನು ಅವರು ಮಾಡುತ್ತಿದ್ದರು. ನಾವು ಅವರೆಲ್ಲರ ಪಾಲಕರಾಗಿದ್ದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَيُّوبَ إِذْ نَادَىٰ رَبَّهُۥٓ أَنِّى مَسَّنِىَ ٱلضُّرُّ وَأَنتَ أَرْحَمُ ٱلرَّٰحِمِينَ

Kannada Translation - Hamza Buturಅಯ್ಯೂಬರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ. “ನಿಶ್ಚಯವಾಗಿಯೂ ನನಗೆ ತೊಂದರೆ ತಗುಲಿದೆ. ನೀನಾದರೋ ದಯೆ ತೋರುವವರಲ್ಲೇ ಅತ್ಯಧಿಕ ದಯೆ ತೋರುವವನು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱسْتَجَبْنَا لَهُۥ فَكَشَفْنَا مَا بِهِۦ مِن ضُرٍّ وَءَاتَيْنَٰهُ أَهْلَهُۥ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَٰبِدِينَ

Kannada Translation - Hamza Buturಆಗ ನಾವು ಅವರ ಕರೆಗೆ ಉತ್ತರ ನೀಡಿ ಅವರು ಬಳಲುತ್ತಿದ್ದ ತೊಂದರೆಯನ್ನು ನಿವಾರಿಸಿದೆವು. ನಾವು ಅವರಿಗೆ ಅವರ ಕುಟುಂಬವನ್ನು ಮತ್ತು ಅವರೊಂದಿಗೆ ಅವರಷ್ಟೇ ಇತರರನ್ನು ನೀಡಿದೆವು. ಇದು ನಮ್ಮ ಕಡೆಯ ದಯೆಯಾಗಿದೆ ಮತ್ತು ಆರಾಧಕರಿಗೆ ಒಂದು ಉಪದೇಶವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِسْمَٰعِيلَ وَإِدْرِيسَ وَذَا ٱلْكِفْلِ كُلٌّ مِّنَ ٱلصَّٰبِرِينَ

Kannada Translation - Hamza Buturಇಸ್ಮಾಈಲ್‍, ಇದ್ರೀಸ್‍ ಮತ್ತು ದುಲ್-ಕಿಫ್ಲರನ್ನು ಕೂಡ ನೆನಪಿಸಿಕೊಳ್ಳಿ! ಅವರೆಲ್ಲರೂ ತಾಳ್ಮೆಯುಳ್ಳವರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَدْخَلْنَٰهُمْ فِى رَحْمَتِنَآ إِنَّهُم مِّنَ ٱلصَّٰلِحِينَ

Kannada Translation - Hamza Buturನಾವು ಅವರನ್ನು ನಮ್ಮ ಕಾರುಣ್ಯದಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَذَا ٱلنُّونِ إِذ ذَّهَبَ مُغَٰضِبًا فَظَنَّ أَن لَّن نَّقْدِرَ عَلَيْهِ فَنَادَىٰ فِى ٱلظُّلُمَٰتِ أَن لَّآ إِلَٰهَ إِلَّآ أَنتَ سُبْحَٰنَكَ إِنِّى كُنتُ مِنَ ٱلظَّٰلِمِينَ

Kannada Translation - Hamza Buturದುನ್ನೂನರನ್ನು[1] (ಯೂನುಸ್) ಕೂಡ ನೆನಪಿಸಿಕೊಳ್ಳಿ! ಅವರು ಕೋಪದಿಂದ ಹೊರಟುಹೋದ ಸಂದರ್ಭ. ನಮಗೆ ಅವರನ್ನು ಹಿಡಿಯಲು ಸಾಧ್ಯವಿಲ್ಲವೆಂದು ಅವರು ಭಾವಿಸಿದ್ದರು. ನಂತರ ಅವರು ಅಂಧಕಾರಗಳ ಒಳಗಿನಿಂದ ಕೂಗಿ ಕರೆದರು: “ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವನಿಲ್ಲ. ನೀನು ಪರಿಶುದ್ಧನು! ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದ್ದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱسْتَجَبْنَا لَهُۥ وَنَجَّيْنَٰهُ مِنَ ٱلْغَمِّ وَكَذَٰلِكَ نُـۨجِى ٱلْمُؤْمِنِينَ

Kannada Translation - Hamza Buturಆಗ ನಾವು ಅವರ ಕರೆಗೆ ಉತ್ತರ ನೀಡಿದೆವು ಮತ್ತು ಅವರನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ಇದೇ ರೀತಿ ಸತ್ಯವಿಶ್ವಾಸಿಗಳನ್ನು ಪಾರು ಮಾಡುತ್ತೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَزَكَرِيَّآ إِذْ نَادَىٰ رَبَّهُۥ رَبِّ لَا تَذَرْنِى فَرْدًا وَأَنتَ خَيْرُ ٱلْوَٰرِثِينَ

Kannada Translation - Hamza Buturಝಕರಿಯ್ಯರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನನ್ನು ಒಂಟಿಯಾಗಿ ಬಿಟ್ಟುಬಿಡಬೇಡ. ನೀನು ಅತ್ಯುತ್ತಮ ವಾರಸುದಾರನಾಗಿರುವೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱسْتَجَبْنَا لَهُۥ وَوَهَبْنَا لَهُۥ يَحْيَىٰ وَأَصْلَحْنَا لَهُۥ زَوْجَهُۥٓ إِنَّهُمْ كَانُوا۟ يُسَٰرِعُونَ فِى ٱلْخَيْرَٰتِ وَيَدْعُونَنَا رَغَبًا وَرَهَبًا وَكَانُوا۟ لَنَا خَٰشِعِينَ

Kannada Translation - Hamza Buturಆಗ ನಾವು ಅವರ ಕರೆಗೆ ಉತ್ತರ ನೀಡಿದೆವು. ಅವರಿಗೆ ಯಹ್ಯಾ ಎಂಬ ಪುತ್ರನನ್ನು ದಯಪಾಲಿಸಿದೆವು. ಅವರ ಪತ್ನಿಯನ್ನು (ಗರ್ಭಧಾರಣೆಗೆ) ಯೋಗ್ಯಳನ್ನಾಗಿಸಿದೆವು. ನಿಶ್ಚಯವಾಗಿಯೂ ಈ ಎಲ್ಲಾ ಪ್ರವಾದಿಗಳು ಸತ್ಕರ್ಮಗಳನ್ನು ಮಾಡಲು ತ್ವರೆ ಮಾಡುತ್ತಿದ್ದರು ಮತ್ತು ನಿರೀಕ್ಷೆ ಹಾಗೂ ಭಯದಿಂದ ನಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ನಮಗೆ ವಿನಮ್ರರಾಗಿದ್ದರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّتِىٓ أَحْصَنَتْ فَرْجَهَا فَنَفَخْنَا فِيهَا مِن رُّوحِنَا وَجَعَلْنَٰهَا وَٱبْنَهَآ ءَايَةً لِّلْعَٰلَمِينَ

Kannada Translation - Hamza Buturತನ್ನ ಕನ್ಯತ್ವವನ್ನು ಸಂರಕ್ಷಿಸಿದ ಆ ಪರಿಶುದ್ಧ ಮಹಿಳೆಯನ್ನು (ಮರ್ಯಮರನ್ನು) ಕೂಡ ನೆನಪಿಸಿಕೊಳ್ಳಿ. ನಾವು ಅವರೊಳಗೆ ಆತ್ಮವನ್ನು ಊದಿದೆವು. ಅವರನ್ನು ಮತ್ತು ಅವರ ಪುತ್ರನನ್ನು ಸರ್ವಲೋಕದವರಿಗೆ ದೃಷ್ಟಾಂತವೆಂಬಂತೆ ಮಾಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ هَٰذِهِۦٓ أُمَّتُكُمْ أُمَّةً وَٰحِدَةً وَأَنَا۠ رَبُّكُمْ فَٱعْبُدُونِ

Kannada Translation - Hamza Buturನಿಶ್ಚಯವಾಗಿಯೂ, ಇದೇ ನಿಮ್ಮ ಸಮುದಾಯ. ಏಕೈಕ ಸಮುದಾಯ! ಮತ್ತು ನಾನೇ ನಿಮ್ಮ ಪರಿಪಾಲಕ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَتَقَطَّعُوٓا۟ أَمْرَهُم بَيْنَهُمْ كُلٌّ إِلَيْنَا رَٰجِعُونَ

Kannada Translation - Hamza Buturಆದರೆ ಜನರು ತಮ್ಮ ಧರ್ಮದ ವಿಷಯದಲ್ಲಿ ಒಡೆದು ಭಿನ್ನರಾದರು. ಎಲ್ಲರೂ ನಮ್ಮ ಬಳಿಗೆ ಮರಳಿ ಬರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَمَن يَعْمَلْ مِنَ ٱلصَّٰلِحَٰتِ وَهُوَ مُؤْمِنٌ فَلَا كُفْرَانَ لِسَعْيِهِۦ وَإِنَّا لَهُۥ كَٰتِبُونَ

Kannada Translation - Hamza Buturಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾನೋ, ಅವನ ಪರಿಶ್ರಮಗಳನ್ನು ನಿರಾಕರಿಸಲಾಗುವುದಿಲ್ಲ. ನಿಶ್ಚಯವಾಗಿಯೂ ನಾವು ಅವುಗಳನ್ನು ದಾಖಲಿಸಿಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَحَرَٰمٌ عَلَىٰ قَرْيَةٍ أَهْلَكْنَٰهَآ أَنَّهُمْ لَا يَرْجِعُونَ

Kannada Translation - Hamza Buturನಾವು ಯಾವೆಲ್ಲಾ ಊರುಗಳನ್ನು ನಾಶ ಮಾಡಿದ್ದೇವೆಯೋ ಅವುಗಳ ನಿವಾಸಿಗಳು (ಭೂಮಿಗೆ) ಮರಳಿ ಬರುವುದಿಲ್ಲ ಎಂಬುದು ಅನಿಷೇಧ್ಯ ಸತ್ಯವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

حَتَّىٰٓ إِذَا فُتِحَتْ يَأْجُوجُ وَمَأْجُوجُ وَهُم مِّن كُلِّ حَدَبٍ يَنسِلُونَ

Kannada Translation - Hamza Buturಎಲ್ಲಿಯವರೆಗೆಂದರೆ, ಯಾ‌ಜೂಜ್-ಮಾ‌ಜೂಜರನ್ನು ತೆರೆದು ಬಿಡಲಾಗುವುದು ಮತ್ತು ಅವರು ಎಲ್ಲ ದಿಬ್ಬಗಳಿಂದಲೂ ಇಳಿದು ಬರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱقْتَرَبَ ٱلْوَعْدُ ٱلْحَقُّ فَإِذَا هِىَ شَٰخِصَةٌ أَبْصَٰرُ ٱلَّذِينَ كَفَرُوا۟ يَٰوَيْلَنَا قَدْ كُنَّا فِى غَفْلَةٍ مِّنْ هَٰذَا بَلْ كُنَّا ظَٰلِمِينَ

Kannada Translation - Hamza Buturಆ ಸತ್ಯ ವಾಗ್ದಾನವು ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ಎವೆಯಿಕ್ಕದೆ ದಿಟ್ಟಿಸುತ್ತಿರುವುದು. (ಅವರು ಹೇಳುವರು): “ಅಯ್ಯೋ! ನಮ್ಮ ದುರ್ಗತಿಯೇ! ನಾವು ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯದಲ್ಲಿದ್ದೆವು. ಅಲ್ಲ, ನಾವು ಅಕ್ರಮಿಗಳಾಗಿದ್ದೆವು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّكُمْ وَمَا تَعْبُدُونَ مِن دُونِ ٱللَّهِ حَصَبُ جَهَنَّمَ أَنتُمْ لَهَا وَٰرِدُونَ

Kannada Translation - Hamza Buturನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ. ನೀವೆಲ್ಲರೂ ಅದಕ್ಕೇ ಹೋಗಿ ಸೇರುವಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَوْ كَانَ هَٰٓؤُلَآءِ ءَالِهَةً مَّا وَرَدُوهَا وَكُلٌّ فِيهَا خَٰلِدُونَ

Kannada Translation - Hamza Buturಇವರು ನಿಜಕ್ಕೂ ದೇವರುಗಳಾಗಿದ್ದರೆ ಇವರು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲೇ ಶಾಶ್ವತವಾಗಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَهُمْ فِيهَا زَفِيرٌ وَهُمْ فِيهَا لَا يَسْمَعُونَ

Kannada Translation - Hamza Buturಅಲ್ಲಿ ಅವರು ದೀರ್ಘ ನಿಟ್ಟುಸಿರುಗಳನ್ನು ಬಿಡುವರು. ಅದರಲ್ಲಿ ಅವರಿಗೆ ಏನೂ ಕೇಳಿಸಲಾರದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلَّذِينَ سَبَقَتْ لَهُم مِّنَّا ٱلْحُسْنَىٰٓ أُو۟لَٰٓئِكَ عَنْهَا مُبْعَدُونَ

Kannada Translation - Hamza Buturನಿಶ್ಚಯವಾಗಿಯೂ, ನಮ್ಮ ಕಡೆಯಿಂದ ಯಾರಿಗೆ ಒಳಿತನ್ನು ಮೊದಲೇ ನೀಡಲಾಗಿದೆಯೋ ಅವರನ್ನು ಅದರಿಂದ (ನರಕದಿಂದ) ದೂರವಿರಿಸಲಾಗುವುದು.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يَسْمَعُونَ حَسِيسَهَا وَهُمْ فِى مَا ٱشْتَهَتْ أَنفُسُهُمْ خَٰلِدُونَ

Kannada Translation - Hamza Buturಅವರಿಗೆ ನರಕದ ಕಿರಿಚಾಟಗಳು ಕೇಳುವುದಿಲ್ಲ. ಅವರ ಮನಸ್ಸುಗಳು ಅಸೆಪಡುವ ಸುಖಗಳಲ್ಲಿ ಅವರು ಸದಾಕಾಲ ವಾಸಿಸುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يَحْزُنُهُمُ ٱلْفَزَعُ ٱلْأَكْبَرُ وَتَتَلَقَّىٰهُمُ ٱلْمَلَٰٓئِكَةُ هَٰذَا يَوْمُكُمُ ٱلَّذِى كُنتُمْ تُوعَدُونَ

Kannada Translation - Hamza Buturಆ ಮಹಾ ದಿಗಿಲಿನಿಂದಲೂ ಅವರು ಸಂಕಟಪಡಲಾರರು. ದೇವದೂತರುಗಳು ಅವರನ್ನು ಬರಮಾಡಿಕೊಳ್ಳುತ್ತಾ ಹೇಳುವರು: “ಇದು ನಿಮಗೆ ವಾಗ್ದಾನ ಮಾಡಲಾದ ನಿಮ್ಮ ದಿನವಾಗಿದೆ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

يَوْمَ نَطْوِى ٱلسَّمَآءَ كَطَىِّ ٱلسِّجِلِّ لِلْكُتُبِ كَمَا بَدَأْنَآ أَوَّلَ خَلْقٍ نُّعِيدُهُۥ وَعْدًا عَلَيْنَآ إِنَّا كُنَّا فَٰعِلِينَ

Kannada Translation - Hamza Buturಪುಸ್ತಕದ ಹಾಳೆಗಳನ್ನು ಸುರುಳಿಯಾಗಿ ಸುತ್ತುವಂತೆ ನಾವು ಆಕಾಶವನ್ನು ಸುತ್ತುವ ದಿನ. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆ ಮತ್ತೊಮ್ಮೆ ಸೃಷ್ಟಿಸುವೆವು. ಅದು ನಾವು ನೆರವೇರಿಸಬೇಕಾದ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಅದನ್ನು ನೆರವೇರಿಸುತ್ತೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَقَدْ كَتَبْنَا فِى ٱلزَّبُورِ مِنۢ بَعْدِ ٱلذِّكْرِ أَنَّ ٱلْأَرْضَ يَرِثُهَا عِبَادِىَ ٱلصَّٰلِحُونَ

Kannada Translation - Hamza Buturನಿಶ್ಚಯವಾಗಿಯೂ ನೀತಿವಂತರಾದ ನನ್ನ ದಾಸರೇ ಭೂಮಿಯ ವಾರಸುದಾರರಾಗುವರು ಎಂದು ನಾವು ಝಬೂರ್‌ನಲ್ಲಿ ಉಪದೇಶದ ನಂತರ ದಾಖಲಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ فِى هَٰذَا لَبَلَٰغًا لِّقَوْمٍ عَٰبِدِينَ

Kannada Translation - Hamza Buturನಿಶ್ಚಯವಾಗಿಯೂ ಇದರಲ್ಲಿ ಆರಾಧನೆ ಮಾಡುವವರಿಗೆ ದೊಡ್ಡ ಸಂದೇಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَرْسَلْنَٰكَ إِلَّا رَحْمَةً لِّلْعَٰلَمِينَ

Kannada Translation - Hamza Butur(ಪ್ರವಾದಿಯವರೇ) ನಾವು ನಿಮ್ಮನ್ನು ಸರ್ವಲೋಕದವರಿಗೆ ಒಂದು ದಯೆಯಾಗಿಯೇ ಕಳುಹಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قُلْ إِنَّمَا يُوحَىٰٓ إِلَىَّ أَنَّمَآ إِلَٰهُكُمْ إِلَٰهٌ وَٰحِدٌ فَهَلْ أَنتُم مُّسْلِمُونَ

Kannada Translation - Hamza Buturಹೇಳಿರಿ: “ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಇನ್ನಾದರೂ ನೀವು ಮುಸ್ಲಿಮರಾಗುವಿರಾ?”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِن تَوَلَّوْا۟ فَقُلْ ءَاذَنتُكُمْ عَلَىٰ سَوَآءٍ وَإِنْ أَدْرِىٓ أَقَرِيبٌ أَم بَعِيدٌ مَّا تُوعَدُونَ

Kannada Translation - Hamza Buturಅವರೇನಾದರೂ ಮುಖ ತಿರುಗಿಸಿ ನಡೆದರೆ ಹೇಳಿರಿ: “ನಾನು ನಿಮಗೆ ಸಮಾನ ರೂಪದಲ್ಲಿ ಎಚ್ಚರಿಸಿದ್ದೇನೆ.[1] ನಿಮಗೆ ವಾಗ್ದಾನ ಮಾಡಲಾಗಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ವಿದೂರದಲ್ಲಿದೆಯೋ ಎಂದು ನನಗೆ ತಿಳಿದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهُۥ يَعْلَمُ ٱلْجَهْرَ مِنَ ٱلْقَوْلِ وَيَعْلَمُ مَا تَكْتُمُونَ

Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹು ಬಹಿರಂಗ ಮಾತುಗಳನ್ನು ತಿಳಿಯುತ್ತಾನೆ ಮತ್ತು ನೀವು ರಹಸ್ಯವಾಗಿಡುವುದನ್ನೂ ತಿಳಿಯುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنْ أَدْرِى لَعَلَّهُۥ فِتْنَةٌ لَّكُمْ وَمَتَٰعٌ إِلَىٰ حِينٍ

Kannada Translation - Hamza Buturನನಗೆ ಗೊತ್ತಿಲ್ಲ! ಬಹುಶಃ ಅದು ನಿಮಗೆ ಒಂದು ಪರೀಕ್ಷೆ ಮತ್ತು ನಿಶ್ಚಿತ ಕಾಲದವರೆಗಿನ ಆನಂದವಾಗಿರಬಹುದು.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

قَٰلَ رَبِّ ٱحْكُم بِٱلْحَقِّ وَرَبُّنَا ٱلرَّحْمَٰنُ ٱلْمُسْتَعَانُ عَلَىٰ مَا تَصِفُونَ

Kannada Translation - Hamza Buturಅವರು (ಪ್ರವಾದಿ) ಹೇಳಿದರು: “ನನ್ನ ಪರಿಪಾಲಕನೇ! ಸತ್ಯವಾಗಿ ತೀರ್ಪು ನೀಡು. ನಮ್ಮ ಪರಿಪಾಲಕನು (ಅಲ್ಲಾಹು) ಪರಮ ದಯಾಳುವಾಗಿದ್ದಾನೆ. ನೀವು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲಾ ವಿಷಯಗಳ ಬಗ್ಗೆ ಸಹಾಯ ಬೇಡಲಾಗುವವನು ಅವನೇ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70