Kannada Translation - Hamza Buturಅವರಿಗಿಂತ ಮೊದಲಿನವರನ್ನೂ ನಾವು ಪರೀಕ್ಷಿಸಿದ್ದೇವೆ. ಆಗ ಅವರಲ್ಲಿ ಸತ್ಯವಂತರು ಯಾರೆಂದು ಅಲ್ಲಾಹು ಖಂಡಿತ ತಿಳಿಯುವನು ಮತ್ತು ಸುಳ್ಳು ಹೇಳುವವರು ಯಾರೆಂದೂ ಅವನು ಖಂಡಿತ ತಿಳಿಯುವನು.
Kannada Translation - Hamza Buturಯಾರಿಗೆ ಅಲ್ಲಾಹನನ್ನು ಭೇಟಿಯಾಗುವ ನಿರೀಕ್ಷೆಯಿದೆಯೋ—ನಿಶ್ಚಯವಾಗಿಯೂ ಅಲ್ಲಾಹನ ನಿಶ್ಚಿತ ಅವಧಿಯು ಬಂದೇ ಬರುತ್ತದೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರ ಕೆಡುಕುಗಳನ್ನು ನಾವು ಅಳಿಸಿ ಬಿಡುವೆವು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
Kannada Translation - Hamza Buturತಂದೆ-ತಾಯಿಗಳಿಗೆ ಒಳಿತು ಮಾಡಬೇಕೆಂದು ನಾವು ಮನುಷ್ಯನಿಗೆ ಉಪದೇಶ ಮಾಡಿದ್ದೇವೆ. ಆದರೆ, ನಿನಗೆ ಯಾವುದೇ ತಿಳುವಳಿಕೆಯಿಲ್ಲದ ವಸ್ತುವನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ (ಶಿರ್ಕ್) ಮಾಡಲು ಅವರು (ತಂದೆ-ತಾಯಿ) ಪರಿಶ್ರಮಿಸಿದರೆ ಅವರ ಆಜ್ಞಾಪಾಲನೆ ಮಾಡಬೇಡ. ನೀವು ಮರಳಿ ಬರುವುದು ನನ್ನ ಬಳಿಗೇ ಆಗಿದೆ. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು.
Kannada Translation - Hamza Buturಜನರಲ್ಲಿ ಕೆಲವರಿದ್ದಾರೆ. ಅವರು ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ.” ಆದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗೆ ತೊಂದರೆಗಳು ಎದುರಾದರೆ, ಜನರು ನೀಡುವ ತೊಂದರೆಯನ್ನು ಅವರು ಅಲ್ಲಾಹನ ಶಿಕ್ಷೆಯಂತೆಯೇ ಪರಿಗಣಿಸುತ್ತಾರೆ. ಒಂದು ವೇಳೆ, ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಏನಾದರೂ ಸಹಾಯವು ಬಂದರೆ ಅವರು ಹೇಳುತ್ತಾರೆ: “ನಿಜವಾಗಿಯೂ ನಾವು ನಿಮ್ಮ ಜೊತೆಗಿದ್ದೆವು.” ಸರ್ವಲೋಕದವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿಲ್ಲವೇ?
Kannada Translation - Hamza Buturಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳಿದರು: “ನಮ್ಮ ಮಾರ್ಗವನ್ನು ಅನುಸರಿಸಿರಿ. ನಿಮ್ಮ ಪಾಪಗಳನ್ನು ನಾವು ಹೊರುತ್ತೇವೆ.” ಆದರೆ ಅವರು ಇವರ ಪಾಪಗಳಲ್ಲಿ ಏನನ್ನೂ ಹೊರುವುದಿಲ್ಲ. ಅವರು ಸುಳ್ಳು ಹೇಳುವವರೇ ಆಗಿದ್ದಾರೆ.
Kannada Translation - Hamza Buturಅವರು ಅವರದ್ದೇ ಪಾಪಭಾರಗಳನ್ನು ಹೊರುತ್ತಾರೆ. ಅವರ ಪಾಪಭಾರಗಳೊಂದಿಗೆ ಇತರರು ಮಾಡಿದ ಪಾಪಭಾರಗಳನ್ನೂ ಹೊರುತ್ತಾರೆ. ಅವರು ಆರೋಪಿಸುವ ಸುಳ್ಳುಗಳ ಬಗ್ಗೆ ಪುನರುತ್ಥಾನ ದಿನದಂದು ಅವರಲ್ಲಿ ಖಂಡಿತ ವಿಚಾರಿಸಲಾಗುವುದು.
Kannada Translation - Hamza Buturನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಒಂಬೈನೂರ ಐವತ್ತು ವರ್ಷಗಳ ಕಾಲ ಅವರ ನಡುವೆ ಬದುಕಿದರು. ನಂತರ ಅವರು ಅಕ್ರಮವೆಸಗಿದಾಗ ಚಂಡಮಾರುತವು ಅವರನ್ನು ಹಿಡಿದು ನಾಶ ಮಾಡಿತು.
Kannada Translation - Hamza Buturಇಬ್ರಾಹೀಮರನ್ನು ನೆನಪಿಸಿಕೊಳ್ಳಿ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಮಾತ್ರ ಭಯಪಡಿರಿ. ನಿಮಗೆ ತಿಳುವಳಿಕೆಯಿದ್ದರೆ ಅದೇ ನಿಮಗೆ ಉತ್ತಮವಾಗಿದೆ.
Kannada Translation - Hamza Buturನೀವು ಅಲ್ಲಾಹನನ್ನು ಬಿಟ್ಟು ಕೆಲವು ವಿಗ್ರಹಗಳನ್ನು ಆರಾಧಿಸುತ್ತಿದ್ದೀರಿ ಮತ್ತು ಸುಳ್ಳನ್ನು ಸೃಷ್ಟಿಸುತ್ತಿದ್ದೀರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಆರಾಧಿಸುತ್ತಿದ್ದೀರೋ ಅವರು ನಿಮ್ಮ ಉಪಜೀವನವನ್ನು ವಶದಲ್ಲಿಟ್ಟುಕೊಂಡಿಲ್ಲ. ಆದ್ದರಿಂದ ನೀವು ಅಲ್ಲಾಹನಲ್ಲಿ ಉಪಜೀವನವನ್ನು ಬೇಡಿರಿ. ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನಿಗೆ ಕೃತಜ್ಞರಾಗಿರಿ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.”
Kannada Translation - Hamza Buturನೀವು ನಿಷೇಧಿಸುವುದಾದರೆ (ಅದರಲ್ಲಿ ಆಶ್ಚರ್ಯವಿಲ್ಲ). ನಿಮಗಿಂತ ಮೊದಲು ಹಲವಾರು ಸಮುದಾಯಗಳ ಜನರು ನಿಷೇಧಿಸಿದ್ದಾರೆ. ಸಂದೇಶವಾಹಕರ ಕರ್ತವ್ಯವು ಸ್ಪಷ್ಟವಾದ ರೀತಿಯಲ್ಲಿ ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ.
Kannada Translation - Hamza Buturಅಲ್ಲಾಹು ಪ್ರಥಮ ಬಾರಿಗೆ ಹೇಗೆ ಸೃಷ್ಟಿಸಿದನೆಂದು ಅವರು ನೋಡಿಲ್ಲವೇ? ನಂತರ ಅವನು ಅದನ್ನು ಪುನರಾವರ್ತಿಸುವನು. ನಿಶ್ಚಯವಾಗಿಯೂ ಅದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ.
Kannada Translation - Hamza Buturಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಅವನು ಪ್ರಥಮ ಬಾರಿಗೆ ಹೇಗೆ ಸೃಷ್ಟಿಸಿದನೆಂದು ನೋಡಿರಿ. ನಂತರ ಅಲ್ಲಾಹು ಇನ್ನೊಮ್ಮೆ ಸೃಷ್ಟಿಸುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.”
Kannada Translation - Hamza Buturಅಲ್ಲಾಹನ ವಚನಗಳನ್ನು ಮತ್ತು ಅವನನ್ನು ಭೇಟಿಯಾಗುವುದನ್ನು ನಿಷೇಧಿಸಿದವರು ಯಾರೋ ಅವರು ನನ್ನ ದಯೆಯ ಬಗ್ಗೆ ನಿರಾಶರಾಗಿದ್ದಾರೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Kannada Translation - Hamza Buturಆಗ ಅವರ (ಇಬ್ರಾಹೀಮರ) ಜನರ ಉತ್ತರವು ಇದು ಮಾತ್ರವಾಗಿತ್ತು: “ನೀವು ಅವನನ್ನು ಕೊಲ್ಲಿರಿ ಅಥವಾ ಸುಟ್ಟು ಬಿಡಿ.” ಆಗ ಅಲ್ಲಾಹು ಅವರನ್ನು ಬೆಂಕಿಯಿಂದ ರಕ್ಷಿಸಿದನು. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
Kannada Translation - Hamza Buturಇಬ್ರಾಹೀಮ್ ಹೇಳಿದರು: “ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು (ದೇವರುಗಳಾಗಿ) ಸ್ವೀಕರಿಸಿರುವುದು ಇಹಲೋಕ ಜೀವನದಲ್ಲಿ ನೀವು ಪರಸ್ಪರ ಹೊಂದಿರುವ ಗೆಳೆತನದ ಆಧಾರದಲ್ಲಿ ಮಾತ್ರವಾಗಿದೆ. ಆದರೆ ಪುನರುತ್ಥಾನದ ದಿನದಂದು ನೀವು ಒಬ್ಬರನ್ನೊಬ್ಬರು ನಿಷೇಧಿಸುವಿರಿ ಮತ್ತು ಒಬ್ಬರನ್ನೊಬ್ಬರು ಶಪಿಸುವಿರಿ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಯಾವುದೇ ಸಹಾಯಕರು ಇರುವುದಿಲ್ಲ.”
Kannada Translation - Hamza Buturಆಗ ಲೂತ್ ಅವರಲ್ಲಿ ವಿಶ್ವಾಸವಿಟ್ಟರು. ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಲಸೆ (ಹಿಜ್ರ) ಮಾಡುತ್ತೇನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”[1]
Kannada Translation - Hamza Buturನಾವು ಅವರಿಗೆ ಇಸ್‍ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರ ಸಂತಾನದಲ್ಲೇ ಪ್ರವಾದಿತ್ವ ಮತ್ತು ಗ್ರಂಥವನ್ನು ನಿಶ್ಚಯಿಸಿದೆವು. ಇಹಲೋಕದಲ್ಲೂ ನಾವು ಅವರಿಗೆ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರುವರು.
Kannada Translation - Hamza Buturಲೂತ್‍ರನ್ನೂ ನೆನಪಿಸಿಕೊಳ್ಳಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಿ.
Kannada Translation - Hamza Buturನೀವು (ಲೈಂಗಿಕ ತೃಷೆಯನ್ನು ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಿ, ರಸ್ತೆಗಳಲ್ಲಿ ತಡೆಯೊಡ್ಡುತ್ತೀರಿ ಮತ್ತು ನಿಮ್ಮ ಸಭೆಗಳಲ್ಲೂ ಅಶ್ಲೀಲ ಕೃತ್ಯಗಳನ್ನು ಮಾಡುತ್ತೀರಿ.” ಆಗ ಅವರ ಜನರ ಉತ್ತರವು ಇದು ಮಾತ್ರವಾಗಿತ್ತು: “ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ತಂದು ತೋರಿಸು.”
Kannada Translation - Hamza Buturನಮ್ಮ ದೂತರು ಸುವಾರ್ತೆಯೊಂದಿಗೆ ಇಬ್ರಾಹೀಮರ ಬಳಿಗೆ ಬಂದ ಸಂದರ್ಭ. ಅವರು (ದೂತರು) ಹೇಳಿದರು: “ನಾವು ಈ ಊರಿನ ಜನರನ್ನು ಖಂಡಿತ ನಾಶ ಮಾಡುತ್ತೇವೆ. ಅದರ ನಿವಾಸಿಗಳು ಮಹಾ ದುಷ್ಟರಾಗಿದ್ದಾರೆ.”
Kannada Translation - Hamza Buturಇಬ್ರಾಹೀಮ್ ಹೇಳಿದರು: “ಆದರೆ ಅಲ್ಲಿ ಲೂತ್ ಇದ್ದಾರೆ!” ದೂತರು ಉತ್ತರಿಸಿದರು: “ಅಲ್ಲಿ ಯಾರೆಲ್ಲಾ ಇದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು.”
Kannada Translation - Hamza Buturನಮ್ಮ ದೂತರು ಲೂತರ ಬಳಿಗೆ ಬಂದ ಸಂದರ್ಭ. ಅವರನ್ನು ನೋಡಿ ಲೂತರಿಗೆ ಬಹಳ ಸಂಕಟವಾಯಿತು ಮತ್ತು ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಭಯಪಡಬೇಡಿ; ಸಂಕಟಪಡಬೇಡಿ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಖಂಡಿತ ರಕ್ಷಿಸುವೆವು. ನಿಮ್ಮ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು.
Kannada Translation - Hamza Buturನಾವು ಮದ್ಯನರ ಬಳಿಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು. ಅವರು ಹೇಳಿದರು: “ನನ್ನ ಜನರೇ! ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಅಂತ್ಯದಿನವನ್ನು ನಿರೀಕ್ಷಿಸಿರಿ. ನೀವು ಕಿಡಿಗೇಡಿತನ ಮಾಡುತ್ತಾ ಭೂಮಿಯಲ್ಲಿ ವಿಹರಿಸಬೇಡಿ.”
Kannada Translation - Hamza Buturನಾವು ಆದ್ ಮತ್ತು ಸಮೂದ್ ಗೋತ್ರಗಳನ್ನೂ ನಾಶ ಮಾಡಿದೆವು. ಅವರ ಕೆಲವು ವಾಸಸ್ಥಳಗಳು ನಿಮಗೆ ಸ್ಪಷ್ಟವಾಗಿ ಕಾಣುತ್ತಿವೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದನು ಮತ್ತು ಅವರನ್ನು ನೇರ ಮಾರ್ಗದಿಂದ ತಡೆದನು. (ವಾಸ್ತವವಾಗಿ) ಅವರು ನೋಡಿ ತಿಳಿಯುವ ಸಾಮರ್ಥ್ಯವುಳ್ಳವರಾಗಿದ್ದರು.
Kannada Translation - Hamza Buturನಾವು ಕಾರೂನ್, ಫರೋಹ ಮತ್ತು ಹಾಮಾನನನ್ನು ಕೂಡ ನಾಶ ಮಾಡಿದೆವು. ಮೂಸಾ ಅವರ ಬಳಿಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆಗ ಅವರು ಭೂಮಿಯಲ್ಲಿ ಅಹಂಕಾರದಿಂದ ಮೆರೆದರು. ಆದರೆ ಅವರಿಗೆ ನಮ್ಮನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ.
Kannada Translation - Hamza Buturಹೀಗೆ ನಾವು ಪ್ರತಿಯೊಬ್ಬರನ್ನೂ ಅವರು ಮಾಡಿದ ಪಾಪಗಳಿಗಾಗಿ ಹಿಡಿದು ಶಿಕ್ಷಿಸಿದೆವು. ಅವರಲ್ಲಿ ಕೆಲವರ ವಿರುದ್ಧ ನಾವು ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು, ಅವರಲ್ಲಿ ಕೆಲವರನ್ನು ಚೀತ್ಕಾರವು ಹಿಡಿದು ಬಿಟ್ಟಿತು, ಅವರಲ್ಲಿ ಕೆಲವರನ್ನು ನಾವು ಭೂಮಿಯಲ್ಲಿ ಹುದುಗಿಸಿದೆವು ಮತ್ತು ಅವರಲ್ಲಿ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಸ್ವತಃ ಅವರೇ ಅವರೊಡನೆ ಅನ್ಯಾಯವೆಸಗಿದರು.
Kannada Translation - Hamza Buturಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದವರ ಉದಾಹರಣೆಯು ಒಂದು ಜೇಡದಂತೆ. ಅದು ಒಂದು ಮನೆಯನ್ನು ಕಟ್ಟಿತು. ಮನೆಗಳಲ್ಲೇ ಅತ್ಯಂತ ದುರ್ಬಲ ಮನೆಯು ಜೇಡನ ಮನೆಯಾಗಿದೆ. ಅವರು ತಿಳಿಯುವವರಾಗಿದ್ದರೆ!
Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಎಲ್ಲಾ ವಸ್ತುಗಳ ಬಗ್ಗೆಯೂ ಅಲ್ಲಾಹನಿಗೆ ಸ್ಪಷ್ಟ ಜ್ಞಾನವಿದೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturನಿಮಗೆ ದೇವವಾಣಿಯ ಮೂಲಕ ನೀಡಲಾದ ಗ್ರಂಥವನ್ನು ಪಠಿಸಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಕೃತ್ಯಗಳಿಂದ ಮತ್ತು ದುಷ್ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆಯು ಅತಿಶ್ರೇಷ್ಠವಾಗಿದೆ. ನೀವು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ತಿಳಿಯುತ್ತಾನೆ.
Kannada Translation - Hamza Buturನೀವು ಗ್ರಂಥದವರೊಂದಿಗೆ ಅತ್ಯುತ್ತಮ ರೀತಿಯಲ್ಲೇ ವಿನಾ ಸಂವಾದ ಮಾಡಬೇಡಿ; ಅವರಲ್ಲಿರುವ ಅಕ್ರಮಿಗಳ ಹೊರತು. ಹೇಳಿರಿ: “ನಮಗೆ ಅವತೀರ್ಣವಾಗಿರುವುದರಲ್ಲಿ ಮತ್ತು ನಿಮಗೆ ಅವತೀರ್ಣವಾಗಿರುವುದರಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ನಮ್ಮ ದೇವನು ಮತ್ತು ನಿಮ್ಮ ದೇವನು ಒಬ್ಬನೇ. ನಾವು ಅವನಿಗೆ ಶರಣಾಗಿದ್ದೇವೆ.”
Kannada Translation - Hamza Buturಈ ರೀತಿ ನಾವು ನಿಮಗೆ ನಮ್ಮ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ನಾವು (ಇದಕ್ಕೆ ಮೊದಲು) ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು ಇದರಲ್ಲಿ ವಿಶ್ವಾಸವಿಡುತ್ತಾರೆ. ಇವರಲ್ಲೂ (ಮಕ್ಕಾ ನಿವಾಸಿಗಳಲ್ಲೂ) ಕೂಡ ಕೆಲವರು ಅದರಲ್ಲಿ ವಿಶ್ವಾಸವಿಡುತ್ತಾರೆ. ಸತ್ಯನಿಷೇಧಿಗಳ ಹೊರತು ಇನ್ನಾರೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವುದಿಲ್ಲ.
Kannada Translation - Hamza Butur(ಪ್ರವಾದಿಯವರೇ) ಇದಕ್ಕೆ ಮೊದಲು ನೀವು ಯಾವುದೇ ಗ್ರಂಥವನ್ನು ಪಠಿಸಿರಲಿಲ್ಲ. ನಿಮ್ಮ ಬಲಗೈಯಿಂದ ಅದನ್ನು ಬರೆಯಲೂ ಇಲ್ಲ. ಹಾಗಿರುತ್ತಿದ್ದರೆ ಈ ಸತ್ಯನಿಷೇಧಿಗಳಿಗೆ ಸಂಶಯಪಡಬಹುದಾಗಿತ್ತು.
Kannada Translation - Hamza Buturಬದಲಿಗೆ, ಇದು (ಕುರ್‌ಆನ್) ಜ್ಞಾನ ನೀಡಲಾದವರ ಹೃದಯಗಳಲ್ಲಿ ಭದ್ರವಾಗಿ ನೆಲೆಯೂರಿರುವ ಸ್ಪಷ್ಟ ವಚನಗಳಾಗಿವೆ. ಅಕ್ರಮಿಗಳ ಹೊರತು ಇನ್ನಾರೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವುದಿಲ್ಲ.
Kannada Translation - Hamza Buturನಾವು ನಿಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ ಎಂಬುದು ಅವರಿಗೆ (ದೃಷ್ಟಾಂತವಾಗಿ) ಸಾಕಾಗುವುದಿಲ್ಲವೇ? ಅದನ್ನು ಅವರಿಗೆ ಓದಿಕೊಡಲಾಗುತ್ತಿದೆ. ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಾದ ಜನರಿಗೆ ದಯೆ ಮತ್ತು ಉಪದೇಶವಿದೆ.
Kannada Translation - Hamza Buturಹೇಳಿರಿ: “ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹು ಸಾಕು. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಮಿಥ್ಯದಲ್ಲಿ ವಿಶ್ವಾಸವಿಡುವವರು ಮತ್ತು ಅಲ್ಲಾಹನನ್ನು ನಿಷೇಧಿಸುವವರು ಯಾರೋ ಅವರೇ ನಷ್ಟ ಹೊಂದಿದವರು.”
Kannada Translation - Hamza Buturಅವರು ನಿಮ್ಮೊಡನೆ ಶಿಕ್ಷೆಗಾಗಿ ತ್ವರೆ ಮಾಡುತ್ತಾರೆ. ಒಂದು ನಿಶ್ಚಿತ ಅವಧಿಯು ಇಲ್ಲದಿರುತ್ತಿದ್ದರೆ ಶಿಕ್ಷೆಯು ಈಗಾಗಲೇ ಅವರ ಬಳಿಗೆ ಬಂದಿರುತ್ತಿತ್ತು. ಅದು ಅವರ ಬಳಿಗೆ ಹಠಾತ್ತನೆ ಬರುತ್ತದೆ. ಆಗ ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.
Kannada Translation - Hamza Buturಶಿಕ್ಷೆಯು ಅವರನ್ನು ಮೇಲ್ಭಾಗದಿಂದ ಮತ್ತು ಅವರ ಕಾಲುಗಳ ತಳಭಾಗದಿಂದ ಆವರಿಸಿಕೊಳ್ಳುವ ದಿನ! ಅಲ್ಲಾಹು ಹೇಳುವನು: “ನೀವು ಮಾಡಿದ ಕರ್ಮಗಳ ರುಚಿಯನ್ನು ನೋಡಿರಿ.”
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ನಾವು ಸ್ವರ್ಗದಲ್ಲಿ, ತಳಭಾಗದಿಂದ ನದಿಗಳು ಹರಿಯುವ ಉನ್ನತ ಮಹಲುಗಳಲ್ಲಿ ವಾಸ್ತವ್ಯವನ್ನು ಮಾಡಿಕೊಡುವೆವು. ಅದರಲ್ಲಿ ಅವರು ಶಾಶ್ವತವಾಗಿ ವಾಸಿಸುವರು. ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಎಷ್ಟು ಉತ್ತಮವಾಗಿದೆ!
Kannada Translation - Hamza Buturಎಷ್ಟೋ ಜೀವಿಗಳಿವೆ. ಅವು ಅವುಗಳ ಆಹಾರವನ್ನು ಹೊತ್ತುಕೊಂಡು ಸಾಗುವುದಿಲ್ಲ. ಅವುಗಳಿಗೂ ನಿಮಗೂ ಅಲ್ಲಾಹು ಆಹಾರವನ್ನು ನೀಡುತ್ತಾನೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Butur“ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಯಾರು? ಸೂರ್ಯ-ಚಂದ್ರರನ್ನು ಅಧೀನಗೊಳಿಸಿದ್ದು ಯಾರು?” ಎಂದು ನೀವೇನಾದರೂ ಅವರೊಡನೆ (ಸತ್ಯನಿಷೇಧಿಗಳೊಡನೆ) ಕೇಳಿದರೆ ಅವರು ಖಂಡಿತ “ಅಲ್ಲಾಹು” ಎಂದೇ ಉತ್ತರಿಸುತ್ತಾರೆ. ಹಾಗಿದ್ದೂ ಅವರನ್ನು (ಸತ್ಯದಿಂದ) ತಪ್ಪಿಸಲಾಗುತ್ತಿರುವುದು ಹೇಗೆ?
Kannada Translation - Hamza Buturಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Kannada Translation - Hamza Butur“ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡುವುದು ಯಾರು?” ಎಂದು ನೀವು ಅವರೊಡನೆ ಕೇಳಿದರೆ ಅವರು ಖಂಡಿತ “ಅಲ್ಲಾಹು” ಎಂದೇ ಉತ್ತರಿಸುತ್ತಾರೆ. ಹೇಳಿರಿ: “ಅಲ್ಲಾಹನಿಗೆ ಸರ್ವಸ್ತುತಿ. ಆದರೆ ಅವರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.”
Kannada Translation - Hamza Buturಅವರು (ಬಹುದೇವಾರಾಧಕರು) ನಾವೆಯನ್ನು ಏರಿದರೆ ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. ನಂತರ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.
Kannada Translation - Hamza Buturನಾವು ನಿರ್ಭಯವಾದ ಒಂದು ಪವಿತ್ರ ಸ್ಥಳವನ್ನು (ಹರಂ) ನಿರ್ಮಿಸಿದ್ದನ್ನು ಅವರು ನೋಡಿಲ್ಲವೇ? ಅವರ ಸುತ್ತುಮುತ್ತಲಿಂದ ಜನರನ್ನು ಅಪಹರಿಸಲಾಗುತ್ತಿದೆ.[1] ಆದರೂ ಅವರು ಮಿಥ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಅನುಗ್ರಹವನ್ನು ನಿಷೇಧಿಸುತ್ತಿದ್ದಾರೆಯೇ?
Kannada Translation - Hamza Buturಅಲ್ಲಾಹನ ಹೆಸರಲ್ಲಿ ಸುಳ್ಳು ಆರೋಪಿಸುವವನು ಮತ್ತು ಸತ್ಯವು ಬಂದಾಗ ಅದನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಇಂತಹ ಸತ್ಯನಿಷೇಧಿಗಳಿಗೆ ನರಕದಲ್ಲಿ ವಾಸ್ತವ್ಯವಿಲ್ಲವೇ?
Kannada Translation - Hamza Buturನಮ್ಮ ಮಾರ್ಗದಲ್ಲಿ ಪರಿಶ್ರಮಪಡುವವರು ಯಾರೋ ಅವರಿಗೆ ನಾನು ನಮ್ಮ ಮಾರ್ಗಗಳನ್ನು ಖಂಡಿತ ತೋರಿಸುವೆವು. ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮಾಡುವವರ ಜೊತೆಯಲ್ಲಿದ್ದಾನೆ.