مِّنَ ٱلَّذِينَ هَادُوا۟ يُحَرِّفُونَ ٱلْكَلِمَ عَن مَّوَاضِعِهِۦ وَيَقُولُونَ سَمِعْنَا وَعَصَيْنَا وَٱسْمَعْ غَيْرَ مُسْمَعٍ وَرَٰعِنَا لَيًّۢا بِأَلْسِنَتِهِمْ وَطَعْنًا فِى ٱلدِّينِ وَلَوْ أَنَّهُمْ قَالُوا۟ سَمِعْنَا وَأَطَعْنَا وَٱسْمَعْ وَٱنظُرْنَا لَكَانَ خَيْرًا لَّهُمْ وَأَقْوَمَ وَلَٰكِن لَّعَنَهُمُ ٱللَّهُ بِكُفْرِهِمْ فَلَا يُؤْمِنُونَ إِلَّا قَلِيلًا
Kannada Translation - Hamza Buturಯಹೂದಿಗಳಲ್ಲಿ ಕೆಲವರಿದ್ದಾರೆ. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ. ಅವರು ಹೇಳುತ್ತಾರೆ: “ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ.” “ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ.” “ನಮ್ಮ ಕಡೆಗೆ ಗಮನಕೊಡು.” (ಹೀಗೆ ಹೇಳುವಾಗ) ಅವರು ತಮ್ಮ ನಾಲಗೆಗಳನ್ನು ತಿರುಚುತ್ತಾರೆ ಮತ್ತು ಧರ್ಮಕ್ಕೆ ಕಳಂಕ ಹಚ್ಚುತ್ತಾರೆ.[1] ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ; ಕೇಳಿರಿ; ಮತ್ತು ನಮ್ಮನ್ನು ನೋಡಿರಿ ಎಂದು ಅವರು ಹೇಳುತ್ತಿದ್ದರೆ ಅವರಿಗೆ ಅದು ಅತ್ಯುತ್ತಮ ಮತ್ತು ನೇರವಾಗಿರುತ್ತಿತ್ತು. ಆದರೆ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.