caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ At-Talaaq الطلاق

12 ಆಯತ್‌ಗಳು · ಮದೀನಾ · ಅವತರಣ ಕ್ರಮ 99

بِسْمِ ٱللَّهِ ٱلرَّحْمَٰنِ ٱلرَّحِيمِ يَٰٓأَيُّهَا ٱلنَّبِىُّ إِذَا طَلَّقْتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحْصُوا۟ ٱلْعِدَّةَ وَٱتَّقُوا۟ ٱللَّهَ رَبَّكُمْ لَا تُخْرِجُوهُنَّ مِنۢ بُيُوتِهِنَّ وَلَا يَخْرُجْنَ إِلَّآ أَن يَأْتِينَ بِفَٰحِشَةٍ مُّبَيِّنَةٍ وَتِلْكَ حُدُودُ ٱللَّهِ وَمَن يَتَعَدَّ حُدُودَ ٱللَّهِ فَقَدْ ظَلَمَ نَفْسَهُۥ لَا تَدْرِى لَعَلَّ ٱللَّهَ يُحْدِثُ بَعْدَ ذَٰلِكَ أَمْرًا

Kannada Translation - Hamza Buturಓ ಪ್ರವಾದಿಯವರೇ! (ನಿಮ್ಮ ಅನುಯಾಯಿಗಳೊಡನೆ ಹೇಳಿರಿ): “ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ (ತಲಾಕ್) ನೀಡುವುದಾದರೆ, ಅವರ ಇದ್ದತ್‌ನ (ದೀಕ್ಷಾಕಾಲದ) ಆರಂಭವನ್ನು ಲೆಕ್ಕಹಾಕಿ ವಿಚ್ಛೇದಿಸಿರಿ[1] ಮತ್ತು ಇದ್ದತ್‌ನ ಲೆಕ್ಕವನ್ನು ಇಟ್ಟುಕೊಳ್ಳಿ. ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ. ಅವರನ್ನು ಅವರ ಮನೆಗಳಿಂದ ಹೊರಹಾಕಬೇಡಿ ಮತ್ತು ಅವರು ಕೂಡ (ಸ್ವತಃ) ಮನೆಯಿಂದ ಹೊರಹೋಗದಿರಲಿ. ಅವರು ಸ್ಪಷ್ಟ ನೀಚಕೃತ್ಯವನ್ನು ಮಾಡಿದರೆ ಹೊರತು. ಇವು ಅಲ್ಲಾಹನ ಎಲ್ಲೆಗಳಾಗಿವೆ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರುತ್ತಾನೋ ಅವನು ಸ್ವಯಂ ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹು ಇದರ ನಂತರ ಏನಾದರೂ ಹೊಸದನ್ನು ತರುವನೋ ಎಂದು ನಿಮಗೆ ತಿಳಿದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا بَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ فَارِقُوهُنَّ بِمَعْرُوفٍ وَأَشْهِدُوا۟ ذَوَىْ عَدْلٍ مِّنكُمْ وَأَقِيمُوا۟ ٱلشَّهَٰدَةَ لِلَّهِ ذَٰلِكُمْ يُوعَظُ بِهِۦ مَن كَانَ يُؤْمِنُ بِٱللَّهِ وَٱلْيَوْمِ ٱلْـَٔاخِرِ وَمَن يَتَّقِ ٱللَّهَ يَجْعَل لَّهُۥ مَخْرَجًا

Kannada Translation - Hamza Buturಅವರು (ವಿಚ್ಛೇದಿತೆಯರು) ತಮ್ಮ ಇದ್ದತ್‌ನ ಅವಧಿಯನ್ನು ಪೂರ್ತಿ ಮಾಡುವ ಹಂತಕ್ಕೆ ತಲುಪಿದರೆ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ನಿಮ್ಮ ಬಳಿ (ಪತ್ನಿಯಾಗಿ) ಇರಿಸಿಕೊಳ್ಳಿರಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಬಿಡುಗಡೆ ಮಾಡಿರಿ. ನಿಮ್ಮಲ್ಲಿನ ಇಬ್ಬರು ನ್ಯಾಯವಂತರನ್ನು ಸಾಕ್ಷಿ ನಿಲ್ಲಿಸಿರಿ. ಅಲ್ಲಾಹನ ಸಂಪ್ರೀತಿಗಾಗಿ ಸರಿಯಾದ ರೀತಿಯಲ್ಲಿ ಸಾಕ್ಷಿ ಹೇಳಿರಿ. ಇದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡಲಾಗುವ ಉಪದೇಶವಾಗಿದೆ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನಿಗೆ ಅಲ್ಲಾಹು ನಿರ್ಗಮನ ದ್ವಾರವನ್ನು ಮಾಡಿಕೊಡುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَرْزُقْهُ مِنْ حَيْثُ لَا يَحْتَسِبُ وَمَن يَتَوَكَّلْ عَلَى ٱللَّهِ فَهُوَ حَسْبُهُۥٓ إِنَّ ٱللَّهَ بَٰلِغُ أَمْرِهِۦ قَدْ جَعَلَ ٱللَّهُ لِكُلِّ شَىْءٍ قَدْرًا

Kannada Translation - Hamza Buturಅವನು ಊಹಿಸಿರದ ಕಡೆಯಿಂದ ಅವನಿಗೆ ಉಪಜೀವನವನ್ನು ಒದಗಿಸುತ್ತಾನೆ. ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾನೋ ಅವನಿಗೆ ಅಲ್ಲಾಹು ಸಾಕು. ಅಲ್ಲಾಹು ತನ್ನ ಕಾರ್ಯವನ್ನು ಖಂಡಿತ ಪೂರ್ಣಗೊಳಿಸುತ್ತಾನೆ. ಅಲ್ಲಾಹು ಪ್ರತಿಯೊಂದು ವಸ್ತುವಿಗೂ ಒಂದು ನಿಶ್ಚಿತ ನಿರ್ಣಯವನ್ನು ಮಾಡಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلَّٰٓـِٔى يَئِسْنَ مِنَ ٱلْمَحِيضِ مِن نِّسَآئِكُمْ إِنِ ٱرْتَبْتُمْ فَعِدَّتُهُنَّ ثَلَٰثَةُ أَشْهُرٍ وَٱلَّٰٓـِٔى لَمْ يَحِضْنَ وَأُو۟لَٰتُ ٱلْأَحْمَالِ أَجَلُهُنَّ أَن يَضَعْنَ حَمْلَهُنَّ وَمَن يَتَّقِ ٱللَّهَ يَجْعَل لَّهُۥ مِنْ أَمْرِهِۦ يُسْرًا

Kannada Translation - Hamza Buturನಿಮ್ಮ ಮಹಿಳೆಯರಲ್ಲಿ ಋತುಸ್ರಾವದ ಬಗ್ಗೆ ನಿರೀಕ್ಷೆ ಕಳಕೊಂಡವರು[1] ಯಾರೋ—ನಿಮಗೆ ಸಂದೇಹವಿದ್ದರೆ ಅವರ ಇದ್ದತ್ (ದೀಕ್ಷಾಕಾಲ) ಮೂರು ತಿಂಗಳುಗಳಾಗಿವೆ. ಅದೇ ರೀತಿ ಋತುಸ್ರಾವ ಪ್ರಾರಂಭವಾಗದಿರುವವರು ಕೂಡ.[2] ಗರ್ಭಿಣಿಯರ ಇದ್ದತ್ ಅವರು ಮಗುವಿಗೆ ಜನ್ಮ ನೀಡುವ ತನಕ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನಿಗೆ ಅಲ್ಲಾಹು ಅವನ ವಿಷಯವನ್ನು ಸುಲಭಗೊಳಿಸುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ذَٰلِكَ أَمْرُ ٱللَّهِ أَنزَلَهُۥٓ إِلَيْكُمْ وَمَن يَتَّقِ ٱللَّهَ يُكَفِّرْ عَنْهُ سَيِّـَٔاتِهِۦ وَيُعْظِمْ لَهُۥٓ أَجْرًا

Kannada Translation - Hamza Buturಇದು ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಅವನ ಆಜ್ಞೆಯಾಗಿದೆ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸುತ್ತಾನೆ ಮತ್ತು ಅವನಿಗೆ ಮಹಾ ಪ್ರತಿಫಲವನ್ನು ನೀಡುತ್ತಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَسْكِنُوهُنَّ مِنْ حَيْثُ سَكَنتُم مِّن وُجْدِكُمْ وَلَا تُضَآرُّوهُنَّ لِتُضَيِّقُوا۟ عَلَيْهِنَّ وَإِن كُنَّ أُو۟لَٰتِ حَمْلٍ فَأَنفِقُوا۟ عَلَيْهِنَّ حَتَّىٰ يَضَعْنَ حَمْلَهُنَّ فَإِنْ أَرْضَعْنَ لَكُمْ فَـَٔاتُوهُنَّ أُجُورَهُنَّ وَأْتَمِرُوا۟ بَيْنَكُم بِمَعْرُوفٍ وَإِن تَعَاسَرْتُمْ فَسَتُرْضِعُ لَهُۥٓ أُخْرَىٰ

Kannada Translation - Hamza Buturನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಎಲ್ಲಿ ವಾಸಿಸುತ್ತೀರೋ ಅಲ್ಲೇ ಅವರನ್ನು (ವಿಚ್ಛೇದಿತೆಯರನ್ನು) ವಾಸ ಮಾಡಿಸಿರಿ. ಅವರಿಗೆ ಇಕ್ಕಟ್ಟಾಗುವಂತೆ ಮಾಡುವುದಕ್ಕಾಗಿ ತೊಂದರೆ ಕೊಡಬೇಡಿ. ಅವರು ಗರ್ಭಿಣಿಯರಾಗಿದ್ದರೆ ಅವರು ಮಗುವಿಗೆ ಜನ್ಮ ನೀಡುವ ತನಕ ಅವರ ಖರ್ಚುವೆಚ್ಚಗಳನ್ನು ನೋಡಿಕೊಳ್ಳಿರಿ. ನಿಮ್ಮ ವಿನಂತಿಯ ಮೇರೆಗೆ ಅವರು ಮಗುವಿಗೆ ಸ್ತನಪಾನ ಮಾಡುವುದಾದರೆ ಅವರಿಗೆ ಅದರ ವೇತನವನ್ನು ನೀಡಿರಿ. ನೀವು ಪರಸ್ಪರ ಸೂಕ್ತ ರೀತಿಯಲ್ಲಿ ಸಮಾಲೋಚನೆ ಮಾಡಿರಿ. ನಿಮಗೆ ಪರಸ್ಪರ ತರ್ಕವಾದರೆ ಅವನ ವಿನಂತಿಯ ಮೇರೆಗೆ ಬೇರೊಬ್ಬಳು ಮಹಿಳೆ ಮಗುವಿಗೆ ಸ್ತನಪಾನ ಮಾಡಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِيُنفِقْ ذُو سَعَةٍ مِّن سَعَتِهِۦ وَمَن قُدِرَ عَلَيْهِ رِزْقُهُۥ فَلْيُنفِقْ مِمَّآ ءَاتَىٰهُ ٱللَّهُ لَا يُكَلِّفُ ٱللَّهُ نَفْسًا إِلَّا مَآ ءَاتَىٰهَا سَيَجْعَلُ ٱللَّهُ بَعْدَ عُسْرٍ يُسْرًا

Kannada Translation - Hamza Buturಅನುಕೂಲವಿರುವವನು ತನ್ನ ಅನುಕೂಲಕ್ಕೆ ತಕ್ಕಂತೆ ಖರ್ಚು ಮಾಡಲಿ. ಯಾರಿಗೆ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಲಾಗಿದೆಯೋ ಅವನಿಗೆ ಅಲ್ಲಾಹು ಏನು ನೀಡಿದ್ದಾನೋ ಅದರಿಂದ (ಅವನ ಸಾಮರ್ಥ್ಯಕ್ಕೆ ತಕ್ಕಂತೆ) ಖರ್ಚು ಮಾಡಲಿ. ಅಲ್ಲಾಹು ಯಾರ ಮೇಲೂ (ಖರ್ಚು ಮಾಡಲು) ಬಲವಂತಪಡಿಸುವುದಿಲ್ಲ. ಅವನಿಗೆ ಅಲ್ಲಾಹು ಎಷ್ಟು ನೀಡಿದ್ದಾನೋ ಅಷ್ಟನ್ನೇ ಹೊರತು. ಅಲ್ಲಾಹು ಇಕ್ಕಟ್ಟಿನ ನಂತರ ಅನುಕೂಲತೆಯನ್ನು ಮಾಡಿಕೊಡುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِۦ فَحَاسَبْنَٰهَا حِسَابًا شَدِيدًا وَعَذَّبْنَٰهَا عَذَابًا نُّكْرًا

Kannada Translation - Hamza Buturಎಷ್ಟೋ ಊರಿನವರು ಅವರ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸಿದ್ದರು. ನಾವು ಅವರನ್ನು ಕಠೋರವಾಗಿ ವಿಚಾರಣೆ ಮಾಡಿದೆವು ಮತ್ತು ಅವರನ್ನು ಅತ್ಯಂತ ಕ್ರೂರವಾಗಿ ಶಿಕ್ಷಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَاقَتْ وَبَالَ أَمْرِهَا وَكَانَ عَٰقِبَةُ أَمْرِهَا خُسْرًا

Kannada Translation - Hamza Buturಅವರು ಅವರ ದುಷ್ಕರ್ಮಗಳ ರುಚಿಯನ್ನು ನೋಡಿದರು. ಅವರ ದುಷ್ಕರ್ಮಗಳ ಅಂತಿಮ ಫಲಿತಾಂಶವು ನಷ್ಟವೇ ಆಗಿತ್ತು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَعَدَّ ٱللَّهُ لَهُمْ عَذَابًا شَدِيدًا فَٱتَّقُوا۟ ٱللَّهَ يَٰٓأُو۟لِى ٱلْأَلْبَٰبِ ٱلَّذِينَ ءَامَنُوا۟ قَدْ أَنزَلَ ٱللَّهُ إِلَيْكُمْ ذِكْرًا

Kannada Translation - Hamza Buturಅಲ್ಲಾಹು ಅವರಿಗೆ ಕಠೋರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ. ಆದ್ದರಿಂದ ಸತ್ಯವಿಶ್ವಾಸಿಗಳಾದ ಓ ಬುದ್ಧಿವಂತರೇ! ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಉಪದೇಶವನ್ನು ಅವತೀರ್ಣಗೊಳಿಸಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

رَّسُولًا يَتْلُوا۟ عَلَيْكُمْ ءَايَٰتِ ٱللَّهِ مُبَيِّنَٰتٍ لِّيُخْرِجَ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ مِنَ ٱلظُّلُمَٰتِ إِلَى ٱلنُّورِ وَمَن يُؤْمِنۢ بِٱللَّهِ وَيَعْمَلْ صَٰلِحًا يُدْخِلْهُ جَنَّٰتٍ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَآ أَبَدًا قَدْ أَحْسَنَ ٱللَّهُ لَهُۥ رِزْقًا

Kannada Translation - Hamza Buturಅಲ್ಲಾಹು ನಿಮಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದಾನೆ. ಅವರು ನಿಮಗೆ ಅಲ್ಲಾಹನ ಸ್ಪಷ್ಟ ವಚನಗಳನ್ನು ಓದಿಕೊಡುತ್ತಾರೆ. ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ಕತ್ತಲೆಗಳಿಂದ ಬೆಳಕಿಗೆ ತರುವುದಕ್ಕಾಗಿ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಮತ್ತು ಸತ್ಕರ್ಮವೆಸಗುತ್ತಾನೋ ಅಲ್ಲಾಹು ಅವನನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವನಿಗೆ ಅತ್ಯುತ್ತಮ ಉಪಜೀವನವನ್ನು ನೀಡಿದ್ದಾನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱللَّهُ ٱلَّذِى خَلَقَ سَبْعَ سَمَٰوَٰتٍ وَمِنَ ٱلْأَرْضِ مِثْلَهُنَّ يَتَنَزَّلُ ٱلْأَمْرُ بَيْنَهُنَّ لِتَعْلَمُوٓا۟ أَنَّ ٱللَّهَ عَلَىٰ كُلِّ شَىْءٍ قَدِيرٌ وَأَنَّ ٱللَّهَ قَدْ أَحَاطَ بِكُلِّ شَىْءٍ عِلْمًۢا

Kannada Translation - Hamza Buturಅಲ್ಲಾಹನೇ ಏಳು ಆಕಾಶಗಳನ್ನು ಮತ್ತು ಅಷ್ಟೇ ಸಂಖ್ಯೆಯ ಭೂಮಿಗಳನ್ನು ಸೃಷ್ಟಿಸಿದವನು. ಅವುಗಳ ಮಧ್ಯೆ ಅವನ ಆಜ್ಞೆಯು ಇಳಿಯುತ್ತದೆ. ಇದೇಕೆಂದರೆ, ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ ಮತ್ತು ಅವನು ಎಲ್ಲಾ ವಸ್ತುಗಳನ್ನೂ ತನ್ನ ಜ್ಞಾನದಿಂದ ಪೂರ್ಣವಾಗಿ ಆವರಿಸಿಕೊಂಡಿದ್ದಾನೆ ಎಂದು ನೀವು ತಿಳಿಯುವುದಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70