مَا كَانَ لِأَهْلِ ٱلْمَدِينَةِ وَمَنْ حَوْلَهُم مِّنَ ٱلْأَعْرَابِ أَن يَتَخَلَّفُوا۟ عَن رَّسُولِ ٱللَّهِ وَلَا يَرْغَبُوا۟ بِأَنفُسِهِمْ عَن نَّفْسِهِۦ ذَٰلِكَ بِأَنَّهُمْ لَا يُصِيبُهُمْ ظَمَأٌ وَلَا نَصَبٌ وَلَا مَخْمَصَةٌ فِى سَبِيلِ ٱللَّهِ وَلَا يَطَـُٔونَ مَوْطِئًا يَغِيظُ ٱلْكُفَّارَ وَلَا يَنَالُونَ مِنْ عَدُوٍّ نَّيْلًا إِلَّا كُتِبَ لَهُم بِهِۦ عَمَلٌ صَٰلِحٌ إِنَّ ٱللَّهَ لَا يُضِيعُ أَجْرَ ٱلْمُحْسِنِينَ
Kannada Translation - Hamza Buturಪ್ರವಾದಿಯವರನ್ನು ಬಿಟ್ಟು ಹಿಂದೆ ಉಳಿಯುವುದು (ಯುದ್ಧಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುವುದು) ಮತ್ತು ಅವರಿಗಿಂತಲೂ ಹೆಚ್ಚು ತಮ್ಮ ಕೆಲಸ-ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಮದೀನಾ ನಿವಾಸಿಗಳಿಗೆ ಮತ್ತು ಅದರ ಸುತ್ತಲಿರುವ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಿಗೆ ಭೂಷಣವಲ್ಲ. ಅದೇಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹ, ಆಯಾಸ ಅಥವಾ ಹಸಿವು ಸಂಭವಿಸಿದರೂ, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದೇ ಪ್ರದೇಶದಲ್ಲಿ ಅವರು ಕಾಲೂರಿದರೂ, ಅಥವಾ ವೈರಿಗಳಿಗೆ ಅವರು ಯಾವುದೇ ನಾಶ-ನಷ್ಟ ತಂದಿಟ್ಟರೂ, ಅವುಗಳಿಗೆ ಬದಲಿಯಾಗಿ ಅವರಿಗೆ ಒಂದು ಸತ್ಕರ್ಮವನ್ನು ದಾಖಲಿಸಲಾಗುವುದು. ಒಳಿತು ಮಾಡುವವರ ಕರ್ಮಗಳನ್ನು ಅಲ್ಲಾಹು ವ್ಯರ್ಥಗೊಳಿಸುವುದಿಲ್ಲ.