caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-An'aam, ಆಯತ್ 151

ಮಕ್ಕಾ · ಅವತರಣ ಕ್ರಮ 55 · 6:151

قُلْ تَعَالَوْا۟ أَتْلُ مَا حَرَّمَ رَبُّكُمْ عَلَيْكُمْ أَلَّا تُشْرِكُوا۟ بِهِۦ شَيْـًٔا وَبِٱلْوَٰلِدَيْنِ إِحْسَٰنًا وَلَا تَقْتُلُوٓا۟ أَوْلَٰدَكُم مِّنْ إِمْلَٰقٍ نَّحْنُ نَرْزُقُكُمْ وَإِيَّاهُمْ وَلَا تَقْرَبُوا۟ ٱلْفَوَٰحِشَ مَا ظَهَرَ مِنْهَا وَمَا بَطَنَ وَلَا تَقْتُلُوا۟ ٱلنَّفْسَ ٱلَّتِى حَرَّمَ ٱللَّهُ إِلَّا بِٱلْحَقِّ ذَٰلِكُمْ وَصَّىٰكُم بِهِۦ لَعَلَّكُمْ تَعْقِلُونَ

Kannada Translation - Hamza Buturಹೇಳಿರಿ: “ಬನ್ನಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಏನು ನಿಷೇಧಿಸಿದ್ದಾನೆಂದು ನಾನು ನಿಮಗೆ ಓದಿಕೊಡುವೆನು. (ಅವು ಏನೆಂದರೆ) ನೀವು ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡಬೇಡಿ, ಮಾತಾಪಿತರಿಗೆ ಒಳಿತು ಮಾಡಿರಿ, ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ—ನಿಮಗೂ, ಅವರಿಗೂ ನಾವು ಆಹಾರ ನೀಡುತ್ತೇವೆ—ಬಹಿರಂಗವಾಗಿರುವ ಮತ್ತು ರಹಸ್ಯವಾಗಿರುವ ಯಾವುದೇ ಅಶ್ಲೀಲತೆಗಳ ಬಳಿಗೆ ಹೋಗಬೇಡಿ ಮತ್ತು ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.”
Looking for a topic? Try the meaning search — your question is scanned across all 6,236 verses.
ಭಾಷೆ — 70