caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Yunus, ಆಯತ್ 71

ಮಕ್ಕಾ · ಅವತರಣ ಕ್ರಮ 51 · 10:71

وَٱتْلُ عَلَيْهِمْ نَبَأَ نُوحٍ إِذْ قَالَ لِقَوْمِهِۦ يَٰقَوْمِ إِن كَانَ كَبُرَ عَلَيْكُم مَّقَامِى وَتَذْكِيرِى بِـَٔايَٰتِ ٱللَّهِ فَعَلَى ٱللَّهِ تَوَكَّلْتُ فَأَجْمِعُوٓا۟ أَمْرَكُمْ وَشُرَكَآءَكُمْ ثُمَّ لَا يَكُنْ أَمْرُكُمْ عَلَيْكُمْ غُمَّةً ثُمَّ ٱقْضُوٓا۟ إِلَىَّ وَلَا تُنظِرُونِ

Kannada Translation - Hamza Buturಅವರಿಗೆ ನೂಹರ ಸಮಾಚಾರವನ್ನು ಓದಿಕೊಡಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ನಾನು ನಿಮ್ಮ ನಡುವೆಯಿರುವುದು ಮತ್ತು ನಾನು ಅಲ್ಲಾಹನ ವಚನಗಳನ್ನು ಪಠಿಸಿ ಉಪದೇಶ ನೀಡುವುದು ನಿಮಗೆ ದೊಡ್ಡ ಹೊರೆಯಂತೆ ಕಾಣುತ್ತಿದ್ದರೆ, ನಾನಂತೂ ಅಲ್ಲಾಹನಲ್ಲಿ ಭರವಸೆಯಿದ್ದೇನೆ; ನೀವು ನಿಮ್ಮೆಲ್ಲಾ ಷಡ್ಯಂತ್ರಗಳನ್ನು ಒಟ್ಟುಗೂಡಿಸಿ ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನಿಮ್ಮ ಷಡ್ಯಂತ್ರವು (ಫಲಿಸುತ್ತದೋ ಇಲ್ಲವೋ ಎಂಬ) ವಿಷಯದಲ್ಲಿ ನಿಮಗೆ ಯಾವುದೇ ಅಸ್ಪಷ್ಟತೆ ಇರದಂತೆ ನೋಡಿಕೊಳ್ಳಿ. ನಂತರ ನೀವು ಅದನ್ನು ನನ್ನ ಮೇಲೆ ಪ್ರಯೋಗಿಸಿರಿ. ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ.
Looking for a topic? Try the meaning search — your question is scanned across all 6,236 verses.
ಭಾಷೆ — 70