caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Ahzaab, ಆಯತ್ 37

ಮದೀನಾ · ಅವತರಣ ಕ್ರಮ 90 · 33:37

وَإِذْ تَقُولُ لِلَّذِىٓ أَنْعَمَ ٱللَّهُ عَلَيْهِ وَأَنْعَمْتَ عَلَيْهِ أَمْسِكْ عَلَيْكَ زَوْجَكَ وَٱتَّقِ ٱللَّهَ وَتُخْفِى فِى نَفْسِكَ مَا ٱللَّهُ مُبْدِيهِ وَتَخْشَى ٱلنَّاسَ وَٱللَّهُ أَحَقُّ أَن تَخْشَىٰهُ فَلَمَّا قَضَىٰ زَيْدٌ مِّنْهَا وَطَرًا زَوَّجْنَٰكَهَا لِكَىْ لَا يَكُونَ عَلَى ٱلْمُؤْمِنِينَ حَرَجٌ فِىٓ أَزْوَٰجِ أَدْعِيَآئِهِمْ إِذَا قَضَوْا۟ مِنْهُنَّ وَطَرًا وَكَانَ أَمْرُ ٱللَّهِ مَفْعُولًا

Kannada Translation - Hamza Butur(ಪ್ರವಾದಿಯವರೇ) ಅಲ್ಲಾಹು ಅನುಗ್ರಹಗಳನ್ನು ನೀಡಿದ ಮತ್ತು ನೀವು ಕೂಡ ಅನುಗ್ರಹಗಳನ್ನು ನೀಡಿದ ವ್ಯಕ್ತಿಯೊಡನೆ, “ನಿನ್ನ ಪತ್ನಿಯನ್ನು ನಿನ್ನ ಬಳಿಯೇ ಇರಿಸು ಮತ್ತು ಅಲ್ಲಾಹನನ್ನು ಭಯಪಡು” ಎಂದು ನೀವು ಹೇಳಿದ ಸಂದರ್ಭ.[1] ಅಲ್ಲಾಹು ಬಹಿರಂಗಪಡಿಸಲಿದ್ದ ಒಂದು ವಿಷಯವನ್ನು ನೀವು ನಿಮ್ಮ ಹೃದಯದಲ್ಲಿ ಮುಚ್ಚಿಟ್ಟಿರಿ. ನೀವು ಜನರನ್ನು ಭಯಪಟ್ಟಿರಿ. ಆದರೆ ನೀವು ಭಯಪಡಲು ಅಲ್ಲಾಹು ಹೆಚ್ಚು ಅರ್ಹನಾಗಿದ್ದಾನೆ. ನಂತರ ಝೈದ್ (ಪ್ರವಾದಿಯ ದತ್ತುಪುತ್ರ) ಅವಳಿಂದ ತನ್ನ ಅಗತ್ಯವನ್ನು ಪೂರೈಸಿದಾಗ, ನಾವು ಅವಳನ್ನು ನಿಮಗೆ ವಿವಾಹ ಮಾಡಿಕೊಟ್ಟೆವು.[2] ಇದೇಕೆಂದರೆ, ಸತ್ಯವಿಶ್ವಾಸಿಗಳಿಗೆ ಅವರ ದತ್ತುಪುತ್ರರ ಪತ್ನಿಯರನ್ನು ವಿವಾಹವಾಗುವ ವಿಷಯದಲ್ಲಿ ಯಾವುದೇ ಸಂಕಟವಾಗದಿರುವುದಕ್ಕಾಗಿ—ಆ ದತ್ತುಪುತ್ರರು ಅವರಿಂದ ತಮ್ಮ ಅಗತ್ಯವನ್ನು ಪೂರೈಸಿದ ಬಳಿಕ. ಅಲ್ಲಾಹನ ಆಜ್ಞೆಯು ನೆರವೇರುವಂತದ್ದೇ ಆಗಿದೆ.
Looking for a topic? Try the meaning search — your question is scanned across all 6,236 verses.
ಭಾಷೆ — 70