إِنَّ ٱلَّذِينَ تَوَلَّوْا۟ مِنكُمْ يَوْمَ ٱلْتَقَى ٱلْجَمْعَانِ إِنَّمَا ٱسْتَزَلَّهُمُ ٱلشَّيْطَٰنُ بِبَعْضِ مَا كَسَبُوا۟ وَلَقَدْ عَفَا ٱللَّهُ عَنْهُمْ إِنَّ ٱللَّهَ غَفُورٌ حَلِيمٌ
Kannada Translation - Hamza Butur(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮ್ಮ ಪೈಕಿ ಬೆನ್ನು ತೋರಿಸಿ ಓಡಿದವರು ಯಾರೋ—ಅವರು ಮಾಡಿದ ಕೆಲವು ದುಷ್ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ಜಾರಿಕೊಳ್ಳುವಂತೆ ಮಾಡಿದ್ದನು. ಅಲ್ಲಾಹು ಅವರನ್ನು ಕ್ಷಮಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.