caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Aal-i-Imraan, ಆಯತ್ 154

ಮದೀನಾ · ಅವತರಣ ಕ್ರಮ 89 · 3:154

ثُمَّ أَنزَلَ عَلَيْكُم مِّنۢ بَعْدِ ٱلْغَمِّ أَمَنَةً نُّعَاسًا يَغْشَىٰ طَآئِفَةً مِّنكُمْ وَطَآئِفَةٌ قَدْ أَهَمَّتْهُمْ أَنفُسُهُمْ يَظُنُّونَ بِٱللَّهِ غَيْرَ ٱلْحَقِّ ظَنَّ ٱلْجَٰهِلِيَّةِ يَقُولُونَ هَل لَّنَا مِنَ ٱلْأَمْرِ مِن شَىْءٍ قُلْ إِنَّ ٱلْأَمْرَ كُلَّهُۥ لِلَّهِ يُخْفُونَ فِىٓ أَنفُسِهِم مَّا لَا يُبْدُونَ لَكَ يَقُولُونَ لَوْ كَانَ لَنَا مِنَ ٱلْأَمْرِ شَىْءٌ مَّا قُتِلْنَا هَٰهُنَا قُل لَّوْ كُنتُمْ فِى بُيُوتِكُمْ لَبَرَزَ ٱلَّذِينَ كُتِبَ عَلَيْهِمُ ٱلْقَتْلُ إِلَىٰ مَضَاجِعِهِمْ وَلِيَبْتَلِىَ ٱللَّهُ مَا فِى صُدُورِكُمْ وَلِيُمَحِّصَ مَا فِى قُلُوبِكُمْ وَٱللَّهُ عَلِيمٌۢ بِذَاتِ ٱلصُّدُورِ

Kannada Translation - Hamza Buturಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು.[1] ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ.
Looking for a topic? Try the meaning search — your question is scanned across all 6,236 verses.
ಭಾಷೆ — 70