caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Nisaa, ಆಯತ್ 94

ಮದೀನಾ · ಅವತರಣ ಕ್ರಮ 92 · 4:94

يَٰٓأَيُّهَا ٱلَّذِينَ ءَامَنُوٓا۟ إِذَا ضَرَبْتُمْ فِى سَبِيلِ ٱللَّهِ فَتَبَيَّنُوا۟ وَلَا تَقُولُوا۟ لِمَنْ أَلْقَىٰٓ إِلَيْكُمُ ٱلسَّلَٰمَ لَسْتَ مُؤْمِنًا تَبْتَغُونَ عَرَضَ ٱلْحَيَوٰةِ ٱلدُّنْيَا فَعِندَ ٱللَّهِ مَغَانِمُ كَثِيرَةٌ كَذَٰلِكَ كُنتُم مِّن قَبْلُ فَمَنَّ ٱللَّهُ عَلَيْكُمْ فَتَبَيَّنُوٓا۟ إِنَّ ٱللَّهَ كَانَ بِمَا تَعْمَلُونَ خَبِيرًا

Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಗುರುತಿಸಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ಸತ್ಯವಿಶ್ವಾಸಿಯಲ್ಲ ಎಂದು ಹೇಳಬೇಡಿ. ನೀವು ಭೌತಿಕ ಲಾಭದ ಹುಡುಕಾಟದಲ್ಲಿದ್ದರೆ, ಅಲ್ಲಾಹನ ಬಳಿ ಯಥೇಷ್ಟ ಐಶ್ವರ್ಯವಿದೆ. ಈ ಹಿಂದೆ ನೀವೂ ಹೀಗೆಯೇ (ಸತ್ಯನಿಷೇಧದಲ್ಲಿ) ಇದ್ದಿರಿ.[1] ನಂತರ ಅಲ್ಲಾಹು ನಿಮಗೆ (ಸನ್ಮಾರ್ಗ ತೋರಿಸಿ) ಉಪಕಾರ ಮಾಡಿದನು. ಆದ್ದರಿಂದ ನೀವು ಸ್ಪಷ್ಟವಾಗಿ ಗುರುತಿಸಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Looking for a topic? Try the meaning search — your question is scanned across all 6,236 verses.
ಭಾಷೆ — 70