فَمَا لَكُمْ فِى ٱلْمُنَٰفِقِينَ فِئَتَيْنِ وَٱللَّهُ أَرْكَسَهُم بِمَا كَسَبُوٓا۟ أَتُرِيدُونَ أَن تَهْدُوا۟ مَنْ أَضَلَّ ٱللَّهُ وَمَن يُضْلِلِ ٱللَّهُ فَلَن تَجِدَ لَهُۥ سَبِيلًا
Kannada Translation - Hamza Buturನಿಮಗೇನಾಗಿದೆ? ಕಪಟವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗಿದ್ದೀರಿ? ಅವರು ಮಾಡಿದ (ದುಷ್ಕರ್ಮಗಳ) ಕಾರಣದಿಂದ ಅಲ್ಲಾಹು ಅವರನ್ನು ಹಿಂದಕ್ಕೆ ತಿರುಗಿಸಿದ್ದಾನೆ. ಅಲ್ಲಾಹು ದಾರಿತಪ್ಪಿಸಿದ ಜನರಿಗೆ ನೀವು ಸನ್ಮಾರ್ಗ ತೋರಿಸಲು ಬಯಸುತ್ತೀರಾ? ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ.