فَلَمَّا فَصَلَ طَالُوتُ بِٱلْجُنُودِ قَالَ إِنَّ ٱللَّهَ مُبْتَلِيكُم بِنَهَرٍ فَمَن شَرِبَ مِنْهُ فَلَيْسَ مِنِّى وَمَن لَّمْ يَطْعَمْهُ فَإِنَّهُۥ مِنِّىٓ إِلَّا مَنِ ٱغْتَرَفَ غُرْفَةًۢ بِيَدِهِۦ فَشَرِبُوا۟ مِنْهُ إِلَّا قَلِيلًا مِّنْهُمْ فَلَمَّا جَاوَزَهُۥ هُوَ وَٱلَّذِينَ ءَامَنُوا۟ مَعَهُۥ قَالُوا۟ لَا طَاقَةَ لَنَا ٱلْيَوْمَ بِجَالُوتَ وَجُنُودِهِۦ قَالَ ٱلَّذِينَ يَظُنُّونَ أَنَّهُم مُّلَٰقُوا۟ ٱللَّهِ كَم مِّن فِئَةٍ قَلِيلَةٍ غَلَبَتْ فِئَةً كَثِيرَةًۢ بِإِذْنِ ٱللَّهِ وَٱللَّهُ مَعَ ٱلصَّٰبِرِينَ
Kannada Translation - Hamza Buturನಂತರ ತಾಲೂತ್ (ಸೌಲ್) ಸೈನ್ಯದೊಂದಿಗೆ ಹೊರಟಾಗ ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಯಾರು ಅದರ ನೀರನ್ನು ಕುಡಿಯುತ್ತಾನೋ ಅವನು ನನ್ನವನಲ್ಲ. ಯಾರು ಅದರ ರುಚಿ ನೋಡುವುದಿಲ್ಲವೋ ಅವನು ನನ್ನವನು; ಆದರೆ ತನ್ನ ಕೈಯಿಂದ ಒಂದು ಬೊಗಸೆ ಮಾತ್ರ ತೆಗೆದುಕೊಂಡವನ ಹೊರತು." ಆದರೆ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಅದರ ನೀರನ್ನು ಕುಡಿದರು. ನಂತರ ತಾಲೂತ್ ಮತ್ತು ಅವರ ಜೊತೆಗಿರುವ ಸತ್ಯವಿಶ್ವಾಸಿಗಳು ಆ ನದಿಯನ್ನು ದಾಟಿದಾಗ ಅವರು ಹೇಳಿದರು: "ಇಂದು ನಮಗೆ ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯದೊಡನೆ ಹೋರಾಡುವ ಶಕ್ತಿಯಿಲ್ಲ." ಆದರೆ ನಾವು ಅಲ್ಲಾಹನನ್ನು ಭೇಟಿಯಾಗಲಿದ್ದೇವೆ ಎಂಬ ದೃಢವಿಶ್ವಾಸವಿದ್ದವರು ಹೇಳಿದರು: "ಎಷ್ಟೆಷ್ಟು ಚಿಕ್ಕ ಸೈನ್ಯಗಳು ಅಲ್ಲಾಹನ ಅಪ್ಪಣೆಯೊಂದಿಗೆ ಎಷ್ಟೆಷ್ಟು ದೊಡ್ಡ ಸೈನ್ಯಗಳನ್ನು ಸೋಲಿಸಿವೆ! ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ."