وَأَنذِرِ ٱلنَّاسَ يَوْمَ يَأْتِيهِمُ ٱلْعَذَابُ فَيَقُولُ ٱلَّذِينَ ظَلَمُوا۟ رَبَّنَآ أَخِّرْنَآ إِلَىٰٓ أَجَلٍ قَرِيبٍ نُّجِبْ دَعْوَتَكَ وَنَتَّبِعِ ٱلرُّسُلَ أَوَلَمْ تَكُونُوٓا۟ أَقْسَمْتُم مِّن قَبْلُ مَا لَكُم مِّن زَوَالٍ
Kannada Translation - Hamza Buturಜನರಿಗೆ ಶಿಕ್ಷೆಯು ಬರುವ ದಿನದ ಬಗ್ಗೆ ಎಚ್ಚರಿಕೆ ನೀಡಿರಿ. ಆಗ ಅಕ್ರಮವೆಸಗಿದವರು ಹೇಳುವರು: “ಓ ನಮ್ಮ ಪರಿಪಾಲಕನೇ! ಸಮೀಪದ ಒಂದು ಅವಧಿಯವರೆಗೆ ನಮಗೆ ಕಾಲಾವಕಾಶ ನೀಡು. ನಾವು ನಿನ್ನ ಕರೆಗೆ ಉತ್ತರಿಸುತ್ತೇವೆ ಮತ್ತು ಸಂದೇಶವಾಹಕರುಗಳನ್ನು ಅನುಸರಿಸುತ್ತೇವೆ.” (ಆಗ ಅವರೊಡನೆ ಹೇಳಲಾಗುವುದು): “ನೀವು ಇಹಲೋಕದಿಂದ (ಪರಲೋಕಕ್ಕೆ) ತೆರಳುವುದೇ ಇಲ್ಲವೆಂದು ಇದಕ್ಕೆ ಮೊದಲು ನೀವು ಆಣೆ ಮಾಡಿ ಹೇಳುತ್ತಿದ್ದಿರಲ್ಲವೇ?”