وَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا أَوْ قَالَ أُوحِىَ إِلَىَّ وَلَمْ يُوحَ إِلَيْهِ شَىْءٌ وَمَن قَالَ سَأُنزِلُ مِثْلَ مَآ أَنزَلَ ٱللَّهُ وَلَوْ تَرَىٰٓ إِذِ ٱلظَّٰلِمُونَ فِى غَمَرَٰتِ ٱلْمَوْتِ وَٱلْمَلَٰٓئِكَةُ بَاسِطُوٓا۟ أَيْدِيهِمْ أَخْرِجُوٓا۟ أَنفُسَكُمُ ٱلْيَوْمَ تُجْزَوْنَ عَذَابَ ٱلْهُونِ بِمَا كُنتُمْ تَقُولُونَ عَلَى ٱللَّهِ غَيْرَ ٱلْحَقِّ وَكُنتُمْ عَنْ ءَايَٰتِهِۦ تَسْتَكْبِرُونَ
Kannada Translation - Hamza Buturಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ತನಗೆ ದೇವವಾಣಿ ಅವತೀರ್ಣವಾಗದಿದ್ದರೂ ಅವತೀರ್ಣವಾಗಿದೆಯೆಂದು ಹೇಳುವವನಿಗಿಂತ, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ನಾನು ಕೂಡ ಅವತೀರ್ಣಗೊಳಿಸುತ್ತೇನೆ ಎಂದು ಹೇಳುವವನಿಗಿಂತ ದೊಡ್ಡ ಅಕ್ರಮಿ ಯಾರು? ಅಕ್ರಮಿಗಳು ಮರಣ ಯಾತನೆ ಅನುಭವಿಸುವ ಭಯಾನಕ ದೃಶ್ಯವನ್ನು ನೀವೇನಾದರೂ ನೋಡಿರುತ್ತಿದ್ದರೆ! ದೇವದೂತರುಗಳು ಅವರ ಬಳಿಗೆ ತಮ್ಮ ಕೈಗಳನ್ನು ಚಾಚುತ್ತಾ ಹೇಳುತ್ತಾರೆ: “ನಿಮ್ಮ ಆತ್ಮಗಳನ್ನು ಹೊರಹಾಕಿರಿ; ನೀವು ಅಲ್ಲಾಹನ ಮೇಲೆ ಸತ್ಯಕ್ಕೆ ದೂರವಾದುದನ್ನು ಹೇಳಿದ ಕಾರಣ ಮತ್ತು ಅಹಂಕಾರದಿಂದ ಅವನ ವಚನಗಳನ್ನು ನಿಷೇಧಿಸಿದ ಕಾರಣ ಇಂದು ನಿಮಗೆ ಹೀನಾಯ ಶಿಕ್ಷೆ ನೀಡಲಾಗುವುದು.”