يَٰٓأَيُّهَا ٱلَّذِينَ ءَامَنُوا۟ مَن يَرْتَدَّ مِنكُمْ عَن دِينِهِۦ فَسَوْفَ يَأْتِى ٱللَّهُ بِقَوْمٍ يُحِبُّهُمْ وَيُحِبُّونَهُۥٓ أَذِلَّةٍ عَلَى ٱلْمُؤْمِنِينَ أَعِزَّةٍ عَلَى ٱلْكَٰفِرِينَ يُجَٰهِدُونَ فِى سَبِيلِ ٱللَّهِ وَلَا يَخَافُونَ لَوْمَةَ لَآئِمٍ ذَٰلِكَ فَضْلُ ٱللَّهِ يُؤْتِيهِ مَن يَشَآءُ وَٱللَّهُ وَٰسِعٌ عَلِيمٌ
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲಿ ಯಾರಾದರೂ ಧರ್ಮಪರಿತ್ಯಾಗ ಮಾಡಿದರೆ, ಸದ್ಯವೇ ಅಲ್ಲಾಹು (ನಿಮ್ಮ ಬದಲಿಗೆ) ಬೇರೆ ಜನರನ್ನು ತರುವನು. ಅವನು ಅವರನ್ನು ಪ್ರೀತಿಸುವನು ಮತ್ತು ಅವರು ಅವನನ್ನು ಪ್ರೀತಿಸುವರು. ಅವರು ಸತ್ಯವಿಶ್ವಾಸಿಗಳ ಮುಂದೆ ದೈನ್ಯತೆ ಮತ್ತು ಸತ್ಯನಿಷೇಧಿಗಳ ಮುಂದೆ ಪೌರುಷವನ್ನು ಪ್ರಕಟಿಸುವರು. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವರು ಮತ್ತು ಆಕ್ಷೇಪಿಸುವವನ ಯಾವುದೇ ಆಕ್ಷೇಪಕ್ಕೂ ಭಯಪಡಲಾರರು. ಅದು ಅಲ್ಲಾಹನ ಔದಾರ್ಯವಾಗಿದೆ. ಅವನು ಇಚ್ಛಿಸುವವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.[1]